Connect with us

    DAKSHINA KANNADA

    Mangaluru: ಕಬ್ಬಿಣ ಸೆಂಟ್ರಿಂಗ್‌ ಶೀಟ್‌, ಕಾಲಂ ಬಾಕ್ಸ್‌ ಕಳವು- ಓರ್ವ ಬಂಧನ..!

    Published

    on

    ಕಬ್ಬಿಣದ ಸೆಂಟ್ರಿಂಗ್‌ ಶೀಟ್‌ ಮತ್ತು ಕಬ್ಬಿಣದ ಕಾಲಂ ಬಾಕ್ಸ್‌ ಗಳನ್ನು ಕದ್ದು ಸಾಗಿಸುತ್ತಿದ್ದ ಪ್ರಕರಣವನ್ನು ಉಳ್ಳಾಲ ಪೊಲೀಸರು ಭೇದಿಸಿದ್ದು, ಒಬ್ಬ ವ್ಯಕ್ತಿಯನ್ನು ಬಂಧಿಸಿ ಒಟ್ಟು 9,75,000 ರೂಪಾಯಿ ಮೌಲ್ಯದ ಸೊತ್ತುಗಳನ್ನು ವಶ ಪಡಿಸಿಕೊಂಡಿದ್ದಾರೆ.

    ಮಂಗಳೂರು: ಕಬ್ಬಿಣದ ಸೆಂಟ್ರಿಂಗ್‌ ಶೀಟ್‌ ಮತ್ತು ಕಬ್ಬಿಣದ ಕಾಲಂ ಬಾಕ್ಸ್‌ ಗಳನ್ನು ಕದ್ದು ಸಾಗಿಸುತ್ತಿದ್ದ ಪ್ರಕರಣವನ್ನು ಉಳ್ಳಾಲ ಪೊಲೀಸರು ಭೇದಿಸಿದ್ದು, ಒಬ್ಬ ವ್ಯಕ್ತಿಯನ್ನು ಬಂಧಿಸಿ ಒಟ್ಟು 9,75,000 ರೂಪಾಯಿ ಮೌಲ್ಯದ ಸೊತ್ತುಗಳನ್ನು ವಶ ಪಡಿಸಿಕೊಂಡಿದ್ದಾರೆ.

    ಮೂಡುಬಿದಿರೆಯ ತೋಡಾರ್‌ ನಿವಾಸಿ ಇಲಿಯಾಸ್‌ ಯಾನೆ ಮೊಹಮ್ಮದ್‌ ಇಲಿಯಾಸ್‌ (23) ಬಂಧಿತ ಆರೋಪಿ.

    ಉಳ್ಳಾಲ ಪೊಲೀಸ್‌ ಠಾಣೆಯ ಸಬ್‌ ಇನ್ಸ್ ಪೆಕ್ಟರ್‌ ಸಂತೋಷ್‌ ಕುಮಾರ್‌ ಡಿ. ಅವರು ಇಂದು ಬೆಳಗ್ಗೆ ರೌಂಡ್ಸ್‌ ಕರ್ತವ್ಯದಲ್ಲಿದ್ದ ವೇಳೆ ಪಿಲಿಕೂರು ಭಾಗದಿಂದ ಕೆ.ಸಿ. ರೋಡ್‌ ಕಡೆಗೆ ಹೋಗುತ್ತಿದ್ದ ರಿಟ್ಸ್‌ ಕಾರು ಮತ್ತು ಪಿಕಪ್‌ ವಾಹನವನ್ನು ತಡೆದು ನಿಲ್ಲಿಸಿದಾಗ ಈ ಕಳವು ಪ್ರಕರಣ ಬೆಳಕಿಗೆ ಬಂದಿದೆ.

    ಕಾರಿನಲ್ಲಿದ್ದ ಹಂಝ ಮತ್ತು ಮೊಹಮ್ಮದ್‌ ಶಾಹಿಲ್‌ ಓಡಿ ತಪ್ಪಿಸಿಕೊಂಡಿದ್ದಾರೆ.

    ಪಿಕಪ್‌ ವಾಹನದಲ್ಲಿ ಕಬ್ಬಿಣದ 120 ಸೆಂಟ್ರಿಂಗ್‌ ಶೀಟ್‌ ಮತ್ತು 3 ಸೆಟ್‌ ಕಬ್ಬಿಣದ ಕಾಲಂ ಬಾಕ್ಸ್‌ ಪತ್ತೆಯಾಗಿವೆ.

    ಸೆಂಟ್ರಿಂಗ್‌  ಶೀಟ್‌ ಗಳನ್ನು ಅಗಸ್ಟ್ 7 ರಂದು ರಾತ್ರಿ ಕೊಲ್ಯದ ನಿರ್ಮಾಣ ಹಂತದ ಕಟ್ಟಡದ ಎದುರಿನಿಂದ ಹಾಗೂ ಕಬ್ಬಿಣದ ಕಾಲಂ ಬಾಕ್ಸ್‌ ಗಳನ್ನು ಒಂದುವರೆ ತಿಂಗಳ ಹಿಂದೆ ಪಾನೀರು ಎಂಬಲ್ಲಿಂದ ಕಳವು ಮಾಡಲಾಗಿತ್ತು ಎಂದು ಪಿಕಪ್‌ ಚಾಲಕ ಇಲಿಯಾಸ್‌ ಯಾನೆ ಮೊಹಮ್ಮದ್‌ ಇಲಿಯಾಸ್‌ ಮಾಹಿತಿ ನೀಡಿದ್ದಾನೆ.

    ಕದ್ದ ಮಾಲುಗಳನ್ನು ತತ್‌ಕ್ಷಣ ಮಾರಾಟ ಮಾಡಿದರೆ ಪೊಲೀಸರಿಗೆ ಸಿಕ್ಕಿ ಬೀಳ ಬಹುದೆಂಬ ಭಯದಿಂದ ಅವುಗಳನ್ನು ಪಿಲಿಕೂರಿನ ನಿರ್ಜನ ಪ್ರದೇಶದಲ್ಲಿ ಬಚ್ಚಿಡಲಾಗಿತ್ತು.

    ಈಗ ಅದನ್ನು ಮಾರಾಟ ಮಾಡಲು ಕೊಂಡೊಯ್ಯುತ್ತಿರುವುದಾಗಿ ಆತ ತಿಳಿಸಿದ್ದಾನೆ.

    ಒಟ್ಟು 2,50,000 ರೂಪಾಯಿ ಮೌಲ್ಯದ ಸೆಂಟ್ರಂಗ್‌ ಶೀಟ್‌, 1,25,000 ರೂ. ಮೌಲ್ಯದ ಕಬ್ಬಿಣದ ಕಾಲಂ ಬಾಕ್ಸ್‌, ತಲಾ 3 ಲಕ್ಷ ರೂ. ಮೌಲ್ಯದ ಪಿಕಪ್‌ ವಾಹನ ಮತ್ತು ರಿಟ್ಸ್‌ ಕಾರನ್ನು ಪೊಲೀಸರು ವಶ ಪಡಿಸಿದ್ದಾರೆ.

    Click to comment

    Leave a Reply

    Your email address will not be published. Required fields are marked *

    DAKSHINA KANNADA

    ಉಳ್ಳಾಲ: ಚಲಿಸುತ್ತಿದ್ದ ರಿಕ್ಷಾ ಮರಕ್ಕೆ ಡಿ*ಕ್ಕಿ: ಓರ್ವ ಮೃ*ತ್ಯು, ಮೂವರಿಗೆ ಗಾ*ಯ

    Published

    on

    ಉಳ್ಳಾಲ: ಆಟೋ ರಿಕ್ಷಾವೊಂದು ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಓರ್ವ ವ್ಯಕ್ತಿ ಮೃ*ತಪಟ್ಟು ಮೂವರು ಗಾ*ಯಗೊಂಡಿರುವ ಘಟನೆ ಉಳ್ಳಾಲ ತಾಲೂಕಿನ ಕೊಣಾಜೆ ಸಮೀಪದ ಪುಳಿಂಚಾಡಿ ಎಂಬಲ್ಲಿ ಭಾನುವಾರ (ನ.24) ಸಂಜೆ ಸಂಭವಿಸಿದೆ.

    ಕಾಸರಗೋಡು ಜಿಲ್ಲೆಯ ಕುಂಬಳೆ ಮಂಜತ್ತಡ್ಕ ನಿವಾಸಿ ನಾರಾಯಣ ಗಟ್ಟಿ (50) ಮೃ*ತರು ಎಂದು ಗುರುತಿಸಲಾಗಿದೆ.

    ಸಂಬಂಧಿಕರೊಬ್ಬರ ಆರೋಗ್ಯ ವಿಚಾರಿಸಲೆಂದು ಕೊಣಾಜೆ ಪುಳಿಂಚಾಡಿಯ ಕಲ್ಕಾರ್ ಎಂಬಲ್ಲಿಗೆ ನಾರಾಯಣ ಗಟ್ಟಿ ಅವರು ರಿಕ್ಷಾದಲ್ಲಿ ತೆರಳಿದ್ದರು. ಅಲ್ಲಿ ಇಳಿಜಾರು ಪ್ರದೇಶದಲ್ಲಿ ರಿಕ್ಷಾ ಇಳಿಯುತ್ತಿದ್ದಂತೆ ಬ್ರೇಕ್ ವೈಫಲ್ಯಕ್ಕೀಡಾಗಿ ಮರವೊಂದಕ್ಕೆ ಡಿ*ಕ್ಕಿ ಹೊಡೆದಿದೆ.

    ಈ ಸಂದರ್ಭ ಗಂಭೀರ ಗಾಯಗೊಂಡ ನಾರಾಯಣ ಗಟ್ಟಿ ಅವರು ಮೃ*ತಪಟ್ಟಿದ್ದು, ಘಟನೆಯಲ್ಲಿ ರಿಕ್ಷಾದೊಳಗಿದ್ದ ಸಂಬಂಧಿ ಮಹಿಳೆ, ಅವರ ಪುತ್ರ ಹಾಗೂ ಇನ್ನೋರ್ವರಿಗೆ ಗಾ*ಯಗಳಾಗಿವೆ. ನಾರಾಯಣ ಗಟ್ಟಿ ಅವರು ಪತ್ನಿ ಹಾಗೂ ಇಬ್ಬರು ಪುತ್ರರನ್ನು ಅಗಲಿದ್ದಾರೆ. ಮಂಗಳೂರು ದಕ್ಷಿಣ ಟ್ರಾಫಿಕ್‌ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    Continue Reading

    DAKSHINA KANNADA

    ಅತ್ಯಂತ ಉದ್ದದ ಮಾನವ ಸರಪಳಿ: ದ.ಕ.ಜಿಲ್ಲೆಗೆ ದ್ವಿತೀಯ ಸ್ಥಾನ

    Published

    on

    ಮಂಗಳೂರು: ಅಂತಾರಾಷ್ಟ್ರೀಯ ಪ್ರಜಾ ಪ್ರಭುತ್ವ ದಿನಾಚರಣೆಯ ಅಂಗವಾಗಿ ಸೆ.15ರಂದು ಬೀದರ್‌ನಿಂದ ಚಾಮರಾಜ ನಗರದವರೆಗೆ ರಾಜ್ಯ ಸರ್ಕಾರ ಹಮ್ಮಿಕೊಂಡಿದ್ದ ಮಾನವ ಸರಪಳಿ ನಿರ್ಮಾಣ ಹಾಗೂ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ ಜಿಲ್ಲೆಗಳಿಗೆ ಒಟ್ಟು ಐದು ವಿಭಾಗಗಳಲ್ಲಿ ತಲಾ 3 ಪ್ರಶಸ್ತಿಗಳನ್ನು ನೀಡಲು ನಿರ್ಧರಿಸಲಾಗಿತ್ತು. ಈ ವಿಭಾಗಗಳ ಪೈಕಿ ದಕ್ಷಿಣ ಕನ್ನಡ ಜಿಲ್ಲೆಯು ಅತ್ಯಂತ ಉದ್ದದ ಮಾನವ ಸರಪಳಿ ವಿಭಾಗದಲ್ಲಿ ದ್ವಿತೀಯ ಸ್ಥಾನ ಪಡೆದಿದೆ.

    ನ.26ರಂದು ಬೆಳಗ್ಗೆ 11ಕ್ಕೆ ಬೆಂಗಳೂರಿನ ಡಾ. ಬಿ.ಆರ್.ಅಂಬೇಡ್ಕರ್ ಭವನದಲ್ಲಿ ನಡೆಯಲಿರುವ ಸಂವಿಧಾನ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಅವರಿಂದ ದ.ಕ.ಜಿಲ್ಲಾಧಿಕಾರಿ ಮುಲೈ ಮುಗಿಲನ್ ಪ್ರಶಸ್ತಿ ಸ್ವೀಕರಿಸಲಿದ್ದಾರೆ.

    Continue Reading

    BIG BOSS

    ಉಪಚುನಾವಣೆಯಲ್ಲಿ ಗೆಲುವು; ಪಟಾಕಿ ಸಿಡಿಸಿ ಕಾಂಗ್ರೆಸ್ ಕಾರ್ಯಕರ್ತರ ಸಂಭ್ರಮಾಚರಣೆ

    Published

    on

    ಮಂಗಳೂರು: ರಾಜ್ಯದ ಮೂರು ವಿಧಾನಸಭಾ ಕ್ಷೇತ್ರಗಳಿಗೆ ನಡೆದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಗೆಲುವು ಸಾಧಿಸಿದ ಬೆನ್ನಲ್ಲೇ ಕಾಂಗ್ರೆಸ್ ಕಾರ್ಯಕರ್ತರು, ಮಲ್ಲಿಕಟ್ಟೆಯಲ್ಲಿರುವ ಕಚೇರಿಯೆದುರು ಪಟಾಕಿ ಸಿಡಿಸಿ ಸಂಭ್ರಮಿಸಿದರು.

    ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಸಚಿವ ಜಮೀರ್ ಅಹಮದ್ ಖಾನ್ ಪರ ಘೋಷಣೆ ಕೂ

    ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಪದ್ಮರಾಜ್ ಪೂಜಾರಿ ಮಾತನಾಡಿ, ‘ರಾಜ್ಯದ ಮೂರು ಕ್ಷೇತ್ರಗಳ ಉಪ ಚುನಾವಣೆಯ ಫಲಿತಾಂಶವು ರಾಜ್ಯ ಸರ್ಕಾರದ ಜನಪರ ಕಾರ್ಯಕ್ರಮಗಳಿಗೆ ಹಿಡಿದ ಕನ್ನಡಿಯಾಗಿದೆ. ಕಾಂಗ್ರೆಸ್ ಕಾರ್ಯಕರ್ತರಿಗೆ ಗೆಲುವಿನ ನಿರೀಕ್ಷೆ ಇತ್ತು. ಆದರೆ, ಚುನಾವಣೋತ್ತರ ಸಮೀಕ್ಷೆಗಳು ಹೇಳಿದ್ದ ಫಲಿತಾಂಶ ತಲೆಕೆಳಗಾಗಿದೆ’ ಎಂದರು.

    ‘ಇಬ್ಬರು ಮಾಜಿ ಮುಖ್ಯಮಂತ್ರಿಗಳ ಪುತ್ರರು ಚುನಾವಣೆಯಲ್ಲಿ ಸೋತಿದ್ದಾರೆ‌. ಇದು ರಾಜ್ಯದ ಜನರು ಕಾಂಗ್ರೆಸ್ ಮೇಲೆ ಇಟ್ಟಿರುವ ವಿಶ್ವಾಸ ಮತ್ತು ಬಿಜೆಪಿ ಮೈತ್ರಿಕೂಟದ ಬಗೆಗಿರುವ ಅಪನಂಬಿಕೆಗೆ ಸಾಕ್ಷಿಯಾಗಿದೆ. ಇನ್ನಾದರೂ ಬಿಜೆಪಿ ಜಾತಿ, ಧರ್ಮಗಳ ನಡುವೆ ದ್ವೇಷ ಬಿತ್ತುವ ಕೆಲಸ ಬಿಟ್ಟು, ಅಭಿವೃದ್ಧಿ ಬಗ್ಗೆ ಯೋಚಿಸಲಿ’ ಎಂದು ಹೇಳಿದರು

    Continue Reading

    LATEST NEWS

    Trending