LATEST NEWS
Karkala: ಪರಶುರಾಮ ಥೀಮ್ ಪಾರ್ಕ್ ನಲ್ಲಿ ಅವ್ಯವಹಾರ ಶಂಕೆ- ಸಮಾನ ಮನಸ್ಕ ಸಂಘಟನೆಯಿಂದ ಉಪವಾಸ ಸತ್ಯಾಗ್ರಹ
ಕಾರ್ಕಳದ ಬೈಲೂರಿನಲ್ಲಿ ಅಭಿವೃದ್ಧಿ ಪಡಿಸಲಾಗಿರುವ ಶ್ರೀ ಪರಶುರಾಮ ಥೀಮ್ ಪಾರ್ಕ್ ನ ಅವ್ಯವಹಾರದ ಕುರಿತು ಜಿಲ್ಲಾಡಳಿತ ಕೂಡಲೇ ತನಿಖೆ ನಡೆಸಿ ಸತ್ಯಾಸತ್ಯತೆಯನ್ನು ಜನರ ಮುಂದಿಡ ಬೇಕೆಂದು ಒತ್ತಾಯಿಸಿ ಸಮಾನ ಮನಸ್ಕ ಸಂಘಟನೆಯ ಕಾರ್ಯಕರ್ತರು ಅನಿರ್ಧಿಷ್ಠಾವಧಿ ಉಪವಾಸ ಸತ್ಯಾಗ್ರಹವನ್ನು ಆರಂಭಿಸಿದ್ದಾರೆ.
ಕಾರ್ಕಳ: ಕಾರ್ಕಳದ ಬೈಲೂರಿನಲ್ಲಿ ಅಭಿವೃದ್ಧಿ ಪಡಿಸಲಾಗಿರುವ ಶ್ರೀ ಪರಶುರಾಮ ಥೀಮ್ ಪಾರ್ಕ್ ಮತ್ತು ಅದರಲ್ಲಿ ಸ್ಥಾಪಿಸಿರುವ ಪರಶುರಾಮ ಪ್ರತಿಮೆಯ ಬಗ್ಗೆ ಕಳೆದ ಮೂರ್ನಾಲ್ಕು ತಿಂಗಳುಗಳಿಂದ ಅನೇಕ ವದಂತಿಗಳು ಹರಡುತ್ತಿದ್ದು, ಹಾಗಾಗಿ ಈ ಕುರಿತಂತೆ ಜಿಲ್ಲಾಡಳಿತ ಕೂಡಲೇ ತನಿಖೆ ನಡೆಸಿ ಸತ್ಯಾಸತ್ಯತೆಯನ್ನು ಜನರ ಮುಂದಿಡ ಬೇಕೆಂದು ಒತ್ತಾಯಿಸಿ ಸಮಾನ ಮನಸ್ಕ ಸಂಘಟನೆಯ ಕಾರ್ಯಕರ್ತರು ಅನಿರ್ಧಿಷ್ಠಾವಧಿ ಉಪವಾಸ ಸತ್ಯಾಗ್ರಹವನ್ನು ಆರಂಭಿಸಿದ್ದಾರೆ.
ಪಾರ್ಕ್ ಅನ್ನು ಕೆಲವು ತಿಂಗಳುಗಳಿಂದ ಮುಚ್ಚಿದ್ದು, ಅಲ್ಲಿ ಸ್ಥಾಪಿಸಿರುವ ಪರಶುರಾಮ ಪ್ರತಿಮೆಯು ಕಂಚಿನದ್ದಲ್ಲ ಎಂಬ ಆರೋಪಗಳು ಇರುವುದರಿಂದ ಪರಿಶೀಲನೆ ನಡೆಸಿ ನೈಜತೆಯನ್ನು ತಿಳಿಸ ಬೇಕೆನ್ನುವುದು ಸತ್ಯಾಗ್ರಹಿಗಳ ಪ್ರಮುಖ ಬೇಡಿಕೆಯಾಗಿದೆ.
ಪಾರ್ಕ್ ನಿರ್ಮಾಣ ಮತ್ತು ಉದ್ಘಾಟನೆಯ ವೇಳೆ ಭ್ರಷ್ಟಾಚಾರ ನಡೆದಿದೆ.
ಗೋಮಾಳ ಭೂಮಿಯಲ್ಲಿ ಪಾರ್ಕ್ ನಿರ್ಮಿಸಿದ್ದು, ಕಂದಾಯ ಇಲಾಖೆಯಿಂದ ಭೂ ಮಂಜೂರಾತಿ ಆಗದೆ ಮತ್ತು ವಿವಿಧ ಇಲಾಖೆಗಳಿಂದ ಎನ್‌ಒಸಿ ಇಲ್ಲದೆ ಯೋಜನೆ ರೂಪಿಸಲಾಗಿದೆ.
ಪ್ರತಿಮೆಯ ವೀಕ್ಷಣೆಗೆ ನಿರ್ಮಿಸಲಾದ ರಸ್ತೆಯ ಭಾಗವು ಖಾಸಗಿ ಆಸ್ತಿಯಲ್ಲಿದೆ.
ಪರವಾನಗಿ ಇಲ್ಲದೆ ಕಳೆದ 6 ತಿಂಗಳಿಂದ ಹೊಟೇಲ್ ನಡೆಯುತ್ತಿದೆ ಇತ್ಯಾದಿ ಅಪಾದನೆಗಳು ಕೇಳಿ ಬಂದಿವೆ.
ಇವೆಲ್ಲವುಗಳ ಬಗ್ಗೆ ತನಿಖೆ ನಡೆಸಿ ಎಲ್ಲಾ ವದಂತಿಗಳಿಗೆ ಪೂರ್ಣ ವಿರಾಮ ಹಾಕ ಬೇಕೆಂದು ಅಗ್ರಹಿಸಿದ್ದಾರೆ.
ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದ ತಾಣಕ್ಕೆ ತಹಸೀಲ್ದಾರ್ ಅನಂತ ಶಂಕರ ಬಿ. ಮತ್ತು ಪೊಲೀಸರು ಭೇಟಿ ನೀಡಿ ಇದು ನಿಷೇಧಿತ ಪ್ರದೇಶ ಆಗಿರುವುದರಿಂದ ಇಲ್ಲಿ ಪ್ರತಿಭಟನೆ ನಡೆಸುವಂತಿಲ್ಲ ಎಂದು ತಿಳಿಸಿದಾಗ ತಹಸೀಲ್ದಾರ್ ಮತ್ತು ಹೋರಾಟಗಾರರ ನಡುವೆ ಮಾತಿನ ಚಕಮಕಿ ನಡೆಯಿತು.
LATEST NEWS
ಉಪ್ಪಿನಂಗಡಿ| ಪ್ರಪಾತಕ್ಕೆ ಉರುಳಿದ ಖಾಸಗಿ ಬಸ್: ಚಾಲಕ ಮೃ*ತ್ಯು
ಉಪ್ಪಿನಂಗಡಿ: ಖಾಸಗಿ ಬಸ್ಸೊಂದು ಚಾಲಕನ ನಿಯಂತ್ರಣ ತಪ್ಪಿ ಪ್ರಪಾತಕ್ಕೆ ಉರುಳಿಬಿದ್ದ ಘಟನೆ ಉದನೆ ಸಮೀಪದ ಎಂಜಿರ ಎಂಬಲ್ಲಿ ಇಂದು ನಸುಕಿನ ವೇಳೆ ಸಂಭವಿಸಿದೆ. ಘಟನೆಯಲ್ಲಿ ಬಸ್ ಚಾಲಕ ಸ್ಥಳದಲ್ಲೇ ಮೃ*ತಪಟ್ಟಿದ್ದಾನೆ.
ಮೃ*ತ ಬಸ್ ಚಾಲಕರನ್ನು ಭರತ್ ಎಂದು ಗುರುತಿಸಲಾಗಿದೆ. ಘಟನೆಯಲ್ಲಿ ಬಸ್ ನಿರ್ವಾಹಕ ಸಣ್ಣಪುಟ್ಟ ಗಾಯಗಳೊಂದಿಗೆ ಅಪಾಯದಿಂದ ಪಾರಾಗಿದ್ದಾರೆ.
ಅಪಘಾತದ ವೇಳೆ ಬಸ್ಸಿನಲ್ಲಿ ಚಾಲಕ ಮತ್ತು ನಿರ್ವಾಹಕ ಮಾತ್ರ ಇದ್ದರೆನ್ನಲಾಗಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿದುಬರಬೇಕಿದೆ.
LATEST NEWS
ಲಾಟರಿ ಟಿಕೆಟ್ ವ್ಯವಹಾರ; ಓಣಂ ಬಂಪರ್ 2 ನೇ ಬಹುಮಾನ
ತಲಪಾಡಿ: ಕರ್ನಾಟಕ- ಕೇರಳ ಗಡಿಯ ತಲಪಾಡಿಯ ಕೆ.ಆರ್ ಕನಕದಾಸ್ ಅವರಿಗೆ ಸೇರಿದ ಸ್ತ್ರೀಶಕ್ತಿ ಲಾಟರಿ ಏಜೆನ್ಸಿಯಿಂದ ಮಾರಾಟವಾದ ಟಿಕೆಟಿಗೆ ಓಣಂ ಬಂಪರ್ ಡ್ರಾ ಇದರ ಎರಡನೇ ಬಹುಮಾನ 1 ಕೋಟಿ ರೂಪಾಯಿ ಒಲಿದಿದೆ.
ಲಾಟರಿ ಒಂಟಿ ಮಹಿಳೆಗೆ ಒಲಿದಿರುವುದರಿಂದ ಹೆಸರು ಮತ್ತು ಊರು ಹೇಳಲು ಇಚ್ಛಿಸಿಲ್ಲ ಎಂದು ಲಾಟರಿ ಅಂಗಡಿ ಮಾಲೀಕ ಕನಕದಾಸ್ ತಿಳಿಸಿದ್ದಾರೆ. ಇದು ಕನಕದಾಸ್ ಅವರ ಅಂಗಡಿಯಿಂದ ಮಾರಾಟವಾದ ಲಾಟರಿ ಟಿಕೆಟ್ ಗೆ ಲಭಿಸಿದ 6 ನೇ ಬಂಪರ್ ಬಹುಮಾನವಾಗಿದೆ.
ಕಳೆದ 30 ವರ್ಷಗಳಲ್ಲಿ ಕನಕದಾಸ್ ಅವರ ಅಂಗಡಿಯಿಂದ ಕೇರಳ ಲಾಟರಿ ಟಿಕೆಟ್ ಖರೀದಿಸಿದ 6 ಮಂದಿಗೆ ದೊಡ್ಡ ಮೊತ್ತದ ಬಹುಮಾನ ಬಂದಿದ್ದು, 4 ಮಂದಿಗೆ ತಲಾ 1 ಕೋಟಿ ರೂಪಾಯಿ ಒಲಿದಿದೆ. 75 ಲಕ್ಷ ರೂಪಾಯಿ ಮತ್ತು 80 ಲಕ್ಷ ರೂಪಾಯಿ ಬಹುಮಾನ ಇಬ್ಬರಿಗೆ ಲಭಿಸಿದೆ.
ಓಣಂ ಬಂಪರ್ 2 ನೇ ಬಹುಮಾನ ವಿಜೇತ ಮಹಿಳೆ ಸ್ತ್ರೀ ಶಕ್ತಿ ಲಾಟರಿ ಅಂಗಡಿಯ ಸಿಬಂದಿ ಗಾಯತ್ರಿ ಎಂಬವರಿಂದ ಟಿಕೆಟ್ ಖರೀದಿಸಿದ್ದರು. ಲಾಟರಿ ಹೊಡೆದ ಮಹಿಳೆ ಅಂಗಡಿಯ ಸಿಬಂದಿ ಗಾಯತ್ರಿ ಅವರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ. ಹಲವು ವರ್ಷಗಳ ಹಿಂದೆ ಒಂದು ಲುಂಗಿಯೊಂದಿಗೆ ಬಂದು ಒಂದು ಅಂಗಡಿ ತೆರೆದ ವ್ಯಕ್ತಿ ಇಂದು ಮೂರು ಅಂಗಡಿಗಳನ್ನು ಹೊಂದಿದ್ದು, 7 ಮಂದಿಗೆ ಕೆಲಸವನ್ನು ನೀಡಿದ್ದಾರೆ. ತಲಪಾಡಿಯ ಸರ್ವಧರ್ಮಗಳ ಜನರ ಬೆಂಬಲ ಮತ್ತು ಸಹಕಾರದಿಂದ ಸುಗಮ ವ್ಯವಹಾರ ನಡೆಸಿ ಯಶಸ್ವೀ ಉದ್ಯಮ ಸ್ಥಾಪಿಸಲು ಸಾಧ್ಯವಾಗಿದೆ. ಅದಕ್ಕೆ ತಕ್ಕಂತೆ ಇಲ್ಲಿಂದ ಲಾಟರಿ ಟಿಕೆಟ್ ಖರೀದಿಸಿದ ಬಹುತೇಕ ಮಂದಿ ಹೆಮ್ಮೆಯ ಮಾತುಗಳನ್ನು ಆಡಿ ಶುಭ ಹಾರೈಸಿದ್ದಾರೆ.
ಲಾಟರಿ ಬಹುಮಾನ ಪಡೆದ ಪ್ರತಿಯೊಬ್ಬರಿಗೂ ಮಂಜೇಶ್ವರ ಸರ್ವಿಸ್ ಕೋ- ಆಪರೇಟಿವ್ ಬ್ಯಾಂಕ್ ಮುಖೇನ ಹಣ ಪಡೆಯಲು ಅವಕಾಶವನ್ನು ಕಲ್ಪಿಸಲಾಗುತ್ತಿದೆ. ಇದಕ್ಕೆ ಸಹಕರಿಸಿದ ಬ್ಯಾಂಕಿನ ಎಲ್ಲಾ ಸಿಬಂದಿಗೆ ಅಂಗಡಿ ಮಾಲೀಕ ಕನಕದಾಸ್ ಕೃತಜ್ಞತೆ ಸಲ್ಲಿಸಿದ್ದಾರೆ. ಈ ಹಿಂದೆ ಇತರ ಅಂಗಡಿ, ಹೊಟೇಲುಗಳಲ್ಲಿ ಕ್ಯಾಷರ್ ಆಗಿ ಕರ್ತವ್ಯ ನಿರ್ವಹಿಸಿದ್ದೆ. ಆದರೆ ಇದೀಗ ಹಲವು ವರ್ಷಗಳಿಂದ ಕನಕದಾಸ್ ಅವರ ಬಳಿಯಿದ್ದೇನೆ ಎಂದು ಗಾಯತ್ರಿ ಅವರು ಹೇಳುತ್ತಾರೆ. ಈ ಹಿಂದೆ ರಸ್ತೆಯಲ್ಲಿಯೇ ಟಿಕೆಟ್ ಮಾರುತ್ತಿದ್ದರು. ಎರಡು ಬಾರಿ ಕೋಟಿ ಬಹುಮಾನ ಬಂದಾಗ ಎರಡು ಅಂಗಡಿಗಳನ್ನು ಹಾಕಿದರು. ಇದರಿಂದಾಗಿ ಸ್ಥಳೀಯ ಹಲವರಿಗೆ ಉದ್ಯೋಗವೂ ದೊರೆತಿರುವುದು ಸಂತೋಷ ತಂದಿದೆ.
LATEST NEWS
ಸಾಫ್ಟ್‌ವೇರ್ ಇಂಜಿನಿಯರ್‌ಗೆ ಹೃದಯಾಘಾತ ; 29ರ ಹರೆಯದ ಆದಿತ್ಯ ಭಟ್ ವಿಧಿವಶ
ಉಜಿರೆ: ಅತ್ತಾಜೆಯ ರಮೇಶ್ ಭಟ್ ಮತ್ತು ಶಾರದಾ ದಂಪತಿ ಪುತ್ರ 29ರ ಹರೆಯದ ಆದಿತ್ಯ ಭಟ್ ಎಂಬವರು ಹೃದಯಾಘಾತದಿಂದ ನಿಧನರಾಗಿದ್ದಾರೆ.
ಅಕ್ಟೋಬರ್ 11ರಂದು ಮನೆಯಲ್ಲಿ ನಡೆಯ ಆಯುಧ ಪೂಜೆಯ ಸಂಭ್ರಮದಲ್ಲಿ ಸಂಪೂರ್ಣ ತನ್ನನ್ನು ತಾನು ತೊಡಗಿಸಿಕೊಂಡಿದ್ದ ಆದಿತ್ಯಗೆ ಎದೆನೋವು ಕಾಣಿಸಿಕೊಂಡ ನಂತರ ಹೃದಯಾಘಾತವಾಗಿದೆ.
ಇದನ್ನೂ ಓದಿ : ಸುರತ್ಕಲ್: ರಸ್ತೆ ಕಾಮಗಾರಿಗೆ ಅಗೆದಿದ್ದ ಹೊಂಡಕ್ಕೆ ಬಿದ್ದ ಸವಾರ !!!
ಪ್ರತಿಭಾನ್ವಿತರಾಗಿದ್ದ ಅದಿತ್ಯ ರವರು ಸಾಫ್ಟ್ ವೇರ್ ಇಂಜಿನಿಯರ್ ಆಗಿದ್ದು ಜರ್ಮನಿಯಲ್ಲಿ ತನ್ನದೇ ಸ್ಪಾರ್ಟ್ ಅಪ್ ಕಂಪೆನಿ ಮುನ್ನಡೆಸುತ್ತಿದ್ದರು. ಇವರು ತಂದೆ ರಮೇಶ್ ಭಟ್, ತಾಯಿ ಶಾರದಾ ಹಾಗೂ ಸಹೋದರಿ ಹಾಗೂ ಕುಟುಂಬ ವರ್ಗವನ್ನು ಅಗಲಿದ್ದಾರೆ.
- LATEST NEWS6 days ago
ಶಿಕ್ಷಕಿಯ ಅ*ಶ್ಲೀಲ ವಿಡಿಯೋ ಹಂಚಿಕೆ; ನಾಲ್ವರು ವಿದ್ಯಾರ್ಥಿಗಳ ಬಂಧನ
- FILM4 days ago
ಎರಡನೇ ಮದುವೆಯಾಗುತ್ತಿರುವ ಬಿಗ್ಬಾಸ್ ಕಂಟೆಸ್ಟೆಂಟ್
- BIG BOSS7 days ago
ಮಹಿಳೆಯರ ಒಳ ಉಡುಪಿನ ಬಗ್ಗೆ ಲಾಯರ್ ಜಗದೀಶ್ ಮಾತು.. ಏನಿದು ವಿವಾದ?
- DAKSHINA KANNADA5 days ago
ಮಂಗಳೂರು : ರಾತ್ರಿ ಹೊತ್ತಲ್ಲಿ ಯುವಕನ ಬೆತ್ತಲೆ ಓಡಾಟ; ಭಯದಲ್ಲಿ ಹಾಸ್ಟೆಲ್ ವಿದ್ಯಾರ್ಥಿನಿಯರು