Connect with us

    DAKSHINA KANNADA

    Mangaluru: ಮಾರ್ನಮಿಕಟ್ಟೆ ಶ್ರೀ ದೇವಿ ಪ್ರತ್ಯಂಗಿರಾ ಕ್ಷೇತ್ರದಲ್ಲಿ ದುರ್ಗಾ ನಮಸ್ಕಾರ ಪೂಜೆ

    Published

    on

    ಮಂಗಳೂರು: ನಗರದ ಮಾರ್ನಮಿ ಕಟ್ಟೆ ಶ್ರೀ ದೇವಿ ಪ್ರತ್ಯಂಗಿರಾ ವಿಪರೀತ ಮಹಾಭದ್ರಕಾಳ್ಯೈ ಅಮ್ಮನವರ ಉಪಾಸಕರಾದ ಖ್ಯಾತ ಅಷ್ಟಮಂಗಲ ಜ್ಯೋತಿಷಿ ಹಾಗೂ ಸಮಾಜ ಸೇವಕ ಜ್ಯೋತಿಷ್ಯ ವಿದ್ವಾನ್ ದೈವಜ್ಞ ಶ್ರೀ ಕರಣ್ ಜ್ಯೋತಿಷಿಯವರ ನಿವಾಸದಲ್ಲಿ ಪ್ರತೀ ವರ್ಷದಂತೆ ಈ ಬಾರಿಯೂ ಕೂಡ ನವರಾತ್ರಿಯ ನವದಿನವೂ ದುರ್ಗಾ ನಮಸ್ಕಾರ ಪೂಜೆ ನಡೆಯುತ್ತಿದ್ದು, ವಿವಿಧ ವೈದಿಕ ಕಾರ್ಯಕ್ರಮಗಳೊಂದಿಗೆ ಸಾರ್ವಜನಿಕ ದುರ್ಗಾ ನಮಸ್ಕಾರ ಪೂಜೆ ನಡೆಯಿತು.

    ಸಾರ್ವಜನಿಕ ದುರ್ಗಾ ಸಹಸ್ರ ನಾಮಾರ್ಚನೆ, ಭಜನೆ ಹಾಗೂ ಹರಕೆಯ ನೃತ್ಯ ಸೇವೆ, ಅನ್ನದಾನಗಳೊಂದಿಗೆ ನಡೆಯಿತು. ಪೂಜೆಯ ಅಂಗವಾಗಿ ಸುಪರ್ಣ ಗರುಡ ಪುಷ್ಪಾಂಜಲಿ ಸೇವೆ ನಡೆಯಿತು.


    ಪೂಜೆಯಲ್ಲಿ ಮಂಗಳೂರು ದಕ್ಷಿಣ ಕ್ಷೇತ್ರ ಶಾಸಕ ವೇದವ್ಯಾಸ್ ಕಾಮತ್, ಮಂಗಳೂರು ಮೇಯರ್ ಸುದೀರ್ ಶೆಟ್ಟಿ ಕಣ್ಣೂರ್, ಪಾಲಿಕೆ ಸದಸ್ಯರಾದ ಸಂದೀಪ್ ಗರೊಡಿ, ಭರತ್ ಕುಮಾರ್, ವೀಣಾ ಮಂಗಳ ಜಪ್ಪಿನಮೊಗರು, ಗಣ್ಯರು, ಊರ, ಪರವೂರ ಭಕ್ತರು ಪೂಜೆಯಲ್ಲಿ ಪಾಲ್ಗೊಂಡು ಶ್ರೀ ದುರ್ಗಾ ದೇವಿ ಕೃಪೆಗೆ ಪಾತ್ರರಾದರು.

    DAKSHINA KANNADA

    ಮಂಗಳೂರು – ಕಟೀಲಮ್ಮನ ಮಡಿಲಲ್ಲಿ ಹಲವಾರು ಬಣ್ಣದ ವೇಷಗಳ ವೈಭವ

    Published

    on

    ಮಂಗಳೂರು: ನಂದಿನಿ ನದಿಯ ಮಧ್ಯದಲ್ಲಿ ರಾರಾಜಿಸುತ್ತಿರುವ ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಾಲಯದಲ್ಲಿ ಅದ್ದೂರಿಯಾಗಿ ನಡೆಯುವ ಶರನ್ನವರಾತ್ರಿ ಉತ್ಸವದ ವೈಭವ ಒಂದು ಕಡೆಯಾದರೆ ಹುಲಿ, ಸಿಂಹ ಸೇರಿದಂತೆ ಸಾವಿರಾರು ಬಣ್ಣದ ವೇಷಗಳು ಸೇವೆ ಸಲ್ಲಿಸುವ ಸೊಬಗು ಇನ್ನೊಂದು ಕಡೆ.


    ಹಲವಾರು ತಂಡಗಳು ಹುಲಿ ವೇಷ ಹಾಕಿ ತಿರುಗಾಟ ನಡೆಸಿ ಅಂತಿಮವಾಗಿ ಕಟೀಲಿಗೆ ಬಂದು ದೇವಾಲಯದ ಆವರಣದಲ್ಲಿ ನರ್ತಿಸಿ ವೇಷ ಕಳಚಿ ನಂದಿನಿ ನೀರಿನಲ್ಲಿ ಮಿಂದು ಹೋಗುವುದು ರೂಢಿ. ವೇಷ ಹಾಕುವಾಗಲೇ ಕಟೀಲಿನಲ್ಲಿ ವೇಷ ಬಿಚ್ಚುತ್ತೇವೆ ಎಂದು ಹರಕೆ ಹೊತ್ತವರು ಒಂದೆಡೆಯಾದರೆ, ಕಟೀಲು ಕ್ಷೇತ್ರದಲ್ಲೇ ಸೇವೆ ಸಲ್ಲಿಸಿ ಮರಳಿ ಅಲ್ಲೇ ವೇಷ ಬಿಚ್ಚುತ್ತೇವೆ ಎನ್ನುವವರು ಇನ್ನೊಂದೆಡೆ ಇದ್ದಾರೆ. ಇದು ತಲತಲಾಂತರಗಳಿಂದ ಪಾಲಿಸಿಕೊಂಡು ಬರುತ್ತಿರುವ ಸಂಪ್ರದಾಯವಾಗಿದೆ.


    ಶರನ್ನವರಾತ್ರಿ ಸಮಯದಲ್ಲಿ ಕಟೀಲು ದೇವಾಲಯದ ಆವರಣದಲ್ಲಿ ನಿತ್ಯವೂ ಹತ್ತಾರು ತಂಡಗಳ ಹುಲಿ ವೇಷ ನರ್ತನ ಇರುತ್ತದೆ. ಒಟ್ಟಾರೆಯಾಗಿ 2000 ಕ್ಕೂ ಅಧಿಕ ವೇಷಗಳು , 70 ರಿಂದ 80 ತಂಡಗಳು ಕಟೀಲು ಸನ್ನಿಧಿಗೆ ಬಂದು ಸೇವೆ ಸಲ್ಲಿಸುತ್ತವೆ ಎಂದು ಹೇಳಬಹುದು.

    Continue Reading

    DAKSHINA KANNADA

    ಮುಂದಿನ ಐದು ದಿನ ಉತ್ತರ ಒಳನಾಡು, ಕರಾವಳಿಯಲ್ಲಿ ಭಾರೀ ಮಳೆ ಸಾಧ್ಯತೆ

    Published

    on

    ಬೆಂಗಳೂರು: ಈ ಬಾರಿಯ ದಸರಾ ಸಂಭ್ರಮಕ್ಕೆ ಮಳೆ ಅಡ್ಡಿಯಾಗುವ ಸಾಧ್ಯತೆಯಿದೆ. ಮುಂದಿನ ಐದು ದಿನಗಳಲ್ಲಿ ಉತ್ತರ ಒಳನಾಡು ಮತ್ತು ಕರಾವಳಿ ಜಿಲ್ಲೆಗಳಲ್ಲಿ ಭಾರೀ ಮಳೆಯಾಗಲಿದೆ.

    ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದಿಂದಾಗಿ ರಾಜ್ಯದಲ್ಲಿ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಮಳೆಯಾಗಲಿದೆ. ಬೆಂಗಳೂರಿನಲ್ಲಿ ಹಗುರದಿಂದ ಸಾಧಾರಣ ಮಳೆಯಾಗಲಿದೆ ಎಂದು ಐಎಂಡಿ ಹೇಳಿದೆ.

    ಉತ್ತರ ಕರ್ನಾಟಕ ಮತ್ತು ಮಧ್ಯ ಕರ್ನಾಟಕದಲ್ಲಿ ಕಳೆದ ಮೂರು ದಿನಗಳಿಂದ ಮಳೆಯಾಗುತ್ತಿದೆ. ಕರಾವಳಿ ಭಾಗದಲ್ಲಿ ಕಳೆದ ಎರಡು ದಿನಗಳಿಂದ ಭಾರೀ ಮಳೆ ಸುರಿಯುತ್ತಿದೆ. ಚಾರ್ಮಾಡಿ ಘಾಟ್‌ನಲ್ಲಿ ರಸ್ತೆಯಲ್ಲಿ ನೀರು ರಭಸದಿಂದ ಹರಿದು ಹೋಗುತ್ತಿರುವ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ.

    Continue Reading

    DAKSHINA KANNADA

    ಮಂಗಳೂರು – ರೌಡಿಗಳಂತೆ ಫೈಟ್ ಮಾಡಿಕೊಂಡ ಬಸ್ ಸಿಬ್ಬಂದಿ; ವಿಡಿಯೋ ವೈರಲ್

    Published

    on

    ಮಂಗಳೂರು: ವಿಟ್ಲ-ಮಂಗಳೂರು ಹಾಗೂ ಪುತ್ತೂರು-ಮಂಗಳೂರು ಮಧ್ಯೆ ಸಂಚರಿಸುವ ಖಾಸಗಿ ಬಸ್ಸಿನ ಸಿಬ್ಬಂದಿ ಪ್ರಯಾಣಿಕರ ಕಣ್ಮುಂದೆಯೇ ಪರಸ್ಪರ ಬಡಿದಾಡುತ್ತಾ ಭೀತಿಯ ವಾತಾವರಣ ಸೃಷ್ಟಿಸಿದ ಘಟನೆ ಬೆಳಕಿಗೆ ಬಂದಿದೆ.

    ಒಂದು ಬಸ್ ಚಾಲಕ ಉಗುಳುವಾಗ ಇನ್ನೊಂದು ಬಸ್ ಚಾಲಕನ ಮೈಗೆ ಬಿತ್ತೆಂಬ ನೆಪದಲ್ಲಿ ಪರಸ್ಪರ ಹೊಡೆದಾಡಿಕೊಂಡಿದ್ದಾರೆ ಎಂದು ಪ್ರತ್ಯಕ್ಷದರ್ಶಿ ಪ್ರಯಾಣಿಕರು ತಿಳಿಸಿದ್ದಾರೆ.
    ಇತ್ತೀಚಿನ ದಿನಗಳಲ್ಲಿ ಪ್ರತಿನಿತ್ಯ ಖಾಸಗಿ ಬಸ್‌ಗಳ ಸಿಬ್ಬಂದಿಯ ಅಟ್ಟಹಾಸ ಮಿತಿಮೀರಿದ್ದು ಸಭ್ಯ ಪ್ರಯಾಣಿಕರು ಓಡಾಡಲು ಹಿಂಜರಿಯುತ್ತಿದ್ದಾರೆ. ಪೊಲೀಸರು, ಆರ್‌ಟಿಒ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿಯೇ ಖಾಸಗಿ ಬನ್ ಸಿಬ್ಬಂದಿಗಳು ಅನಾಗರಿಕರಾಗಿದ್ದಾರೆಂಬ ಆರೋಪ ಸಾರ್ವಜನಿಕರಿಂದ ವ್ಯಕ್ತವಾಗಿದೆ.
    ಬಸ್ ವ್ಯವಸ್ಥೆ ಸಾರ್ವಜನಿಕ ಸೇವೆಯೆಂಬುದು ಇಂದಿನವರಿಗೆ ತಿಳಿದಿಲ್ಲವಾಗಿದೆ. ತಮ್ಮದೇ ಸಾಮ್ರಾಜ್ಯ, ತಾವು ಮಾಡಿದ್ದೇ ಆಟ, ನಾವು ನಡೆದಿದ್ದೇ ದಾರಿ ಎಂಬುದನ್ನು ತಿಳಿದಿರುವ ಇಂತಹ ಸಿಬ್ಬಂದಿಯ ಸಮಾಜ ಕಂಟಕ ವರ್ತನೆ ಸಾರ್ವಜನಿಕರ ಆತಂಕಕ್ಕೆ ಕಾರಣವಾಗಿದೆ.


    ‘ಇಂತಹ ಅನಾಗರಿಕ ವರ್ತನೆಯಿಂದ ಮಹಿಳೆಯರು , ಪುಟ್ಟ ಮಕ್ಕಳು ಬಸ್ಸಿನಲ್ಲಿ ಹೋಗಲು ಹಿಂದೇಟು ಹಾಕುವಂತಾಗಿದೆ. ಅಲ್ಲದೆ ಬಸ್ಸಿನ ಸಿಬ್ಬಂದಿಗಳನ್ನು ಅರ್ಧದಾರಿಯಲ್ಲೇ ಇಳಿಸಿ ಅವರನ್ನು ಅತಂತ್ರರನ್ನಾಗಿಸುವ ಕ್ರಮ ಸರಿಯಲ್ಲ. ಬೇರೆ ಬಸ್ಸು ಇಲ್ಲದೇ ಅವರು ಕಂಗೆಡುವ ಪರಿಸ್ಥಿತಿ ಕೂಡಾ ಇರುವ ಕಾರಣ ಇಂತಹ ಬಸ್ಸು ಸಿಬ್ಬಂದಿಗಳ ವಿರುದ್ದ ಕ್ರಮ ಕೈಗೊಳ್ಳಬೇಕು’ ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
    ಈ ಕುರಿತ ವಿಡಿಯೋ ಫುಲ್ ವೈರಲ್ ಆಗುತ್ತಿದ್ದು, ಸಾರ್ವಜನಿಕರು ಸಿಬ್ಬಂದಿ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಆಕ್ರೋಶಿಸುತ್ತಿದ್ದಾರೆ.

     

    ವಿಡಿಯೋ ನೋಡಿ :

     

     

    Continue Reading

    LATEST NEWS

    Trending