DAKSHINA KANNADA
Mangaluru: ಗೈಲ್ ಕಂಪೆನಿಯ ಅಸ್ತವ್ಯಸ್ತ ಕಾಮಗಾರಿ- ಸ್ಥಳೀಯರಿಂದ ರಸ್ತೆ ದುರಸ್ತಿ
ಮಂಗಳೂರು: ಮಂಗಳೂರು ನಗರದ ಕಾವೂರು ಬೊಲ್ಪುಗುಡ್ಡೆ ರಸ್ತೆಯಲ್ಲಿ ಗೈಲ್ ಕಂಪೆನಿ ಪೈಪ್ಲೈನ್ ಕಾಮಗಾರಿ ನಡೆಸಿದ ಭಾಗದಲ್ಲಿ ದುರಸ್ತಿ ಮಾಡದೆ ಬಿಟ್ಟು ಹೋಗಿದ್ದ ತಾಣದಲ್ಲಿ ನಿರ್ಮಾಣವಾಗಿದ್ದ ಹೊಂಡವನ್ನು ಸ್ಥಳೀಯ ಜನರು ನವಚೇತನ ಫ್ರೆಂಡ್ಸ್ ಸರ್ಕಲ್ ಸಹಕಾರದಲ್ಲಿ ದುರಸ್ತಿ ಮಾಡಿದರು.
ಪದವಿನಂಗಡಿ ಬಳಿಯ ನವಚೇತನ ಫ್ರೆಂಡ್ಸ್ ಸರ್ಕಲ್ ಕಟ್ಟೆ ಬಳಿಯಿಂದ ಸುಮಾರು ಅರ್ಧ ಕಿಲೋ ಮೀಟರ್ ವರೆಗಿನ ರಸ್ತೆ ಹೊಂಡವನ್ನು ಕಾಂಕ್ರಿಟ್ ಮಿಕ್ಸ್ ಬಳಸಿ ಮುಚ್ಚಿ ಸಂಚಾರ ಯೋಗ್ಯ ರಸ್ತೆಯನ್ನಾಗಿಸಿದರು.
ಈ ಬಗ್ಗೆ ಸ್ಥಳೀಯರು ಮಾಹಿತಿ ನೀಡಿ, ಗ್ಯಾಸ್ ಪೈಪ್ಲೈನ್ ಅಳವಡಿಸಲು ರಸ್ತೆ ಅಗೆದ ತಾಣದಲ್ಲಿ ನಿರ್ಮಾಣವಾಗಿದ್ದ ಹೊಂಡ ದುರಸ್ತಿ ಮಾಡುವಂತೆ ಸಂಬಂಧಪಟ್ಟ ಪಾಲಿಕೆ ಜನಪ್ರತಿನಿಧಿಗಳು, ಅಧಿಕಾರಿಗಳು ಮತ್ತು ಗೈಲ್ ಕಂಪೆನಿಯ ಅಧಿಕಾರಿಗಳಿಗೆ ಮನವಿ ಸಲ್ಲಿಸಿ ಹಲವು ತಿಂಗಳು ಕಳೆದರೂ ಹೊಂಡ ಮುಚ್ಚಲು ಯಾವುದೇ ಕ್ರಮ ಕೈಗೊಂಡಿರಲಿಲ್ಲ.
ದ್ವಿಚಕ್ರ ಸವಾರರು, ಅದರಲ್ಲೂ ಮುಖ್ಯವಾಗಿ ಮಹಿಳೆಯರು ವಾಹನ ಚಲಾಯಿಸುವ ಸಂದರ್ಭ ಹೊಂಡ ತಪ್ಪಿಸಲು ಹೋಗಿ ಸ್ಕಿಡ್ ಆಗಿ ಬಿದ್ದ ಅನೇಕ ಪ್ರಕರಣ ನಡೆದಿವೆ.
ಸಂಬಂಧ ಪಟ್ಟವರ ನಿರ್ಲಕ್ಷ್ಯಕ್ಕೆ ಜನರು ರೋಸಿ ಹೋಗಿದ್ದರು.
ಹಾಗಾಗಿ ಇನ್ನಷ್ಟು ವಿಳಂಬ ಮಾಡಿದರೆ ಅಪಾಯ ಸಂಭವಿಸಬಹುದು ಎಂಬ ನಿಟ್ಟಿನಲ್ಲಿ ಮಾಜಿ ಪಾಲಿಕೆ ಸದಸ್ಯ ದೀಪಕ್ ಪೂಜಾರಿ ಅವರ ಸಹಕಾರದಲ್ಲಿ ನಾವೇ ದುರಸ್ತಿ ಮಾಡಲು ಇಳಿದೆವು ಎಂದು ತಿಳಿಸಿದರು.
ಸ್ಥಳೀಯ ನಿವಾಸಿಗಳು ಭವಾನಿ ಶಂಕರ್,ನಿತಿನ್ ಶೆಟ್ಟಿ, ಜೀವನ್, ಜಯಪಾಲ್ ಶೆಟ್ಟಿ,ಸೋಮಶೇಖರ್, ಸಂದೀಪ್ ಕುಲಾಲ್ ಮತ್ತಿತರರು ಉಪಸ್ಥಿತರಿದ್ದರು.
DAKSHINA KANNADA
ದೇವರಿಗೆ ಇಟ್ಟ ಹೂವುಗಳನ್ನು ಒಣಗಿದ ನಂತರ ಹೀಗೆ ಮಾಡಿ..!
ಮಂಗಳೂರು: ಹೂವುಗಳ ಅಲಂಕಾರದಿಂದ ದೇವರ ಕೋಣೆ ಸುಂದರವಾಗಿ ಕಾಣಿಸುತ್ತದೆ. ಅಲ್ಲದೇ ದೇವರ ಪೂಜೆ ಪೂರ್ಣವೆನಿಸುತ್ತದೆ. ಹೂವುಗಳು ಮನೆಯ ಶಕ್ತಿಯನ್ನು ಬದಲಾಯಿಸುತ್ತದೆ. ಆದರೆ ಅದೇ ಹೂಗಳು ನಿಮ್ಮ ಮನೆಯಲ್ಲಿ ದೋಷಗಳನ್ನು ಸೃಷ್ಟಿಸಲು ಪ್ರಾರಂಭಿಸುತ್ತದೆ.
ಒಣಗಿದ ಹೂವುಗಳನ್ನು ನಿಮ್ಮ ಮನೆಯಲ್ಲಿ ಇರಿಸಿದರೆ ಅಥವಾ ಅದನ್ನು ತೆಗೆಯದೇ ಹಾಗೇ ಬಿಟ್ಟರೆ, ಅದು ನಿಮ್ಮ ಮನೆಯ ಶಕ್ತಿಯನ್ನು ಹಾಳು ಮಾಡುತ್ತದೆ. ಹಾಗಾಗಿ ಒಣಗಿದ ಅಥವಾ ಬಾಡಿದ ಹೂವುಗಳನ್ನು ಮನೆಯಲ್ಲಿ ಇಡಬಾರದು. ದೇವರಿಗೆ ಆಗಿರಬಹುದು ಅಥವಾ ಮನೆಯಲ್ಲೇ ಆಗಿರಬಹುದು ಯಾವಾಗಲೂ ಪರಿಮಳಯಕ್ತ ಹೂವುಗಳನ್ನು ಮಾತ್ರ ಇಟ್ಟುಕೊಳ್ಳಬೇಕು.
ತಾಜಾ ಹೂವುಗಳಿಗೆ ಅದ್ಭುತವಾದ ಧನಾತ್ಮಕ ಶಕ್ತಿಯನ್ನು ಸೃಷ್ಟಿಸುವ ಸಾಮರ್ಥ್ಯವಿರುತ್ತದೆ. ಅವುಗಳಿಂದ ಉತ್ಪತ್ತಿಯಾಗುವ ಶಕ್ತಿಯು ಧನಾತ್ಮಕವಾಗಿ ನಮ್ಮ ಸುತ್ತಮುತ್ತಲಿನ ಸ್ಥಳವನ್ನು ಬದಲಾಯಿಸುತ್ತದೆ. ತಾಜಾ ಹೂವುಗಳು ಇರುವಲ್ಲೆಲ್ಲಾ ತಮ್ಮ ಸುತ್ತಲಿನ ಜೀವಿಗಳನ್ನು ಸಕಾರಾತ್ಮಕವಾಗಿರಿಸುತ್ತದೆ. ಅದೇ ಹೂವುಗಳು ಒಣಗಲು ಪ್ರಾರಂಭವಾದಾಕ್ಷಣ ಅದರಿಂದ ನಕಾರಾತ್ಮಕ ಕಂಪನಗಳು ಹರಡಲು ಪ್ರಾರಂಭವಾಗುತ್ತದೆ.
ಪೂಜೆಯಲ್ಲಿ ಒಣಗಿದ ಹೂವುಗಳನ್ನು ಬಳಸುವುದರಿಂದ ಆ ಪೂಜೆಯಿಂದ ಯಾವುದೇ ರೀತಿಯ ಫಲವನ್ನು ನಮಗೆ ಅನುಭವಿಸಲು ಸಾಧ್ಯವಾಗುವುದಿಲ್ಲ. ಮತ್ತೊಂದೆಡೆ ಪೂಜೆಯು ಯಾವುದೇ ಶುಭ ಫಲವನ್ನು ಪಡೆಯುವುದಿಲ್ಲ. ಬದಲಾಗಿ ಅಶುಭ ಫಲಗಳನ್ನು ಅನುಭವಿಸುವಂತಾಗುತ್ತದೆ.
ಅದಕ್ಕಾಗಿಯೇ ಹೂವುಗಳನ್ನು ಒಣಗುತ್ತಿದ್ದಂತೆ ಅವುಗಳನ್ನು ತಕ್ಷಣವೇ ಅಲ್ಲಿಂದ ಬದಲಾಯಿಸಬೇಕು. ಒಂದು ವೇಳೆ ಒಣಗಿದ ಹೂವುಗಳು ಇದ್ದರೆ ಅದು ಆರೋಗ್ಯದ ಮೇಲೆಯೂ ಮತ್ತಷ್ಟು ಕೆಟ್ಟ ಪರಿಣಾಮ ಬೀರಬಹುದು.
DAKSHINA KANNADA
ಎಸ್ ಎಸ್ ಎಲ್ ಸಿ ಫಲಿತಾಂಶ: ಜಿಯಾ ಸ್ವೀಡಲ್ ಲಸ್ರಡೊಗೆ 599 ಅಂಕ
ಪುತ್ತೂರು : ಸುದಾನ ರೆಸಿಡೆನ್ಶಿಯಲ್ ಸ್ಕೂಲ್, ನೆಹರು ನಗರ, ಮಂಜಲ್ಪಡ್ಪು ಇಲ್ಲಿನ ಎಸ್ ಎಸ್ ಎಲ್ ಸಿ ವಿದ್ಯಾರ್ಥಿನಿ
ಜಿಯಾ ಸ್ವೀಡಲ್ ಲಸ್ರಡೊ 599 ಅಂಕ ಗಳಿಸಿ ಉನ್ನತ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದಾರೆ.
ಇವರು ಕೆದಿಲ ಗ್ರಾಮದ ಕಲ್ಲಾಜೆ ನಿವಾಸಿ ಪಾಟ್ರಿಕ್ ಲಸ್ರಡೊ, ಅಮಿತಾ ಲಸ್ರಡೊ ದಂಪತಿ ಪುತ್ರಿ.
DAKSHINA KANNADA
ಕುಟುಂಬ ಸದಸ್ಯರ ಮಾರಣ ಹೋಮ..! ಆರು ಜೀವಗಳು ಬಲಿ..!
ಮಂಗಳೂರು ( ಉತ್ತರ ಪ್ರದೇಶ ) : ಮದರ್ ಡೇ ದಿನವೇ ತಾಯಿಯನ್ನು ಗುಂಡಿಕ್ಕಿ ಹತ್ಯೆ ಮಾಡಿದ ಪಾಪಿ ಮಗ ತನ್ನ ಇಡೀ ಕುಟುಂಬದವರನ್ನು ಸಾಯಿಸಿದ್ದಾನೆ. ತಾಯಿ, ಪತ್ನಿ ಹಾಗೂ ಮೂವರು ಮಕ್ಕಳನ್ನು ಬರ್ಭರವಾಗಿ ಹ*ತ್ಯೆಮಾಡಿದ ಆರೋಪಿ ಬಳಿಕ ತಾನೂ ಕೂಡಾ ಗುಂಡು ಹಾರಿಸಿ ಜೀವಾಂತ್ಯಗೊಳಿಸಿದ್ದಾನೆ.
ಈ ಘಟನೆ ಉತ್ತರ ಪ್ರದೇಶದ ಸೀತಾಪುರದಲ್ಲಿ ನಡೆದಿದೆ. ಆರೋಪಿ ಅನುರಾಗ್ ಸಿಂಗ್ ಎಂಬಾತ ತನ್ನ ಪತ್ನಿಯ ತಲೆಗೆ ಹ್ಯಾಮರ್ನಿಂದ ಹೊಡೆದಿದ್ದು, ತಾಯಿಗೆ ಗುಂಡು ಹೊಡೆದು ಸಾ*ಯಿಸಿದ್ದಾನೆ. ಬಳಿಕ ತನ್ನ ಮೂವರು ಮಕ್ಕಳನನ್ನು ಮಹಡಿಯಿಂದ ಕೆಳಕ್ಕೆ ಎಸೆದಿದ್ದಾನೆ. ಅನುರಾಗ್ ಸಿಂಗ್ ಮಾನಸಿಕ ಕಾಯಿಲೆಯಿಂದ ಬಳಲುತ್ತಿದ್ದ ಎಂಬುದಾಗಿ ಮಾಹಿತಿ ಲಭ್ಯವಾಗಿದೆ. ಆದ್ರೆ ವಿಪರೀತವಾಗಿ ಮದ್ಯ ಸೇವನೆಯ ಚಟ ಹೊಂದಿದ್ದ ಅಂತಾನೂ ಪೊಲೀಸರು ತಿಳಿಸಿದ್ದಾರೆ. ಇದೇ ಕಾರಣದಿಂದ ತಾಯಿ , ಪತ್ನಿ, ಹಾಗೂ ಮೂವರು ಮಕ್ಕಳು ಹ*ತ್ಯೆ ಮಾಡಿದ್ದಾನೆ ಎನ್ನಲಾಗಿದೆ.
62 ವರ್ಷ ಪ್ರಾಯದ ಸಾವಿತ್ರಿ ಸಿಂಗ್, 40 ವರ್ಷ ಪ್ರಾಯದ ಪ್ರಿಯಾಂಕ, ಮಕ್ಕಳಾದ 12 ವರ್ಷದ ಅಸ್ವಿ, 8 ವರ್ಷದ ಅರ್ನಾ, ಹಾಗೂ 4 ವರ್ಷದ ಅದ್ವಿಕ್ ಅನುರಾಗ್ ಸಿಂಗ್ ಕೈನಿಂದ ಹತರಾದವರಾಗಿದ್ದಾರೆ. ಬಳಿಕ ಆರೋಪಿ ಕೂಡಾ ಗುಂಡು ಹಾರಿಸಿ ಸ್ವಯಂ ಹ*ತ್ಯೆ ಮಾಡಿಕೊಂಡಿದ್ದಾನೆ.
- LATEST NEWS6 days ago
ಐವರು ಮೆಡಿಕಲ್ ವಿದ್ಯಾರ್ಥಿಗಳು ನೀರುಪಾಲು…!
- DAKSHINA KANNADA6 days ago
ಆಸ್ಪತ್ರೆ ಸೆಲ್ ನಲ್ಲಿ ಕುಣಿಕೆಗೆ ಕೊರೊಳೊಡ್ಡಿದ ಖೈದಿ..!
- LATEST NEWS6 days ago
ಪ್ರಜ್ವಲ್ ರೇವಣ್ಣ ಪೆನ್ ಡ್ರೈವ್ ಪ್ರಕರಣ; ದೇವೇಗೌಡ, ಕುಮಾರಸ್ವಾಮಿ ಹೆಸರು ಬಳಸದಂತೆ ನಿರ್ಬಂಧ..!
- LATEST NEWS6 days ago
SSLC ಫಲಿತಾಂಶ ಪ್ರಕಟಿಸಲು ದಿನಾಂಕ ನಿಗದಿ; ಯಾವಾಗ?