Connect with us

    LATEST NEWS

    ಹಿರಿಯ ನಾಗರಿಕರ ಮನೆಗೆ ಭೇಟಿ ನೀಡಿ ಧೈರ್ಯ ತುಂಬಿದ ಮಂಗಳೂರು ನಗರ ಪೊಲೀಸ್‌

    Published

    on

    ಮಂಗಳೂರು : ಹಿರಿಯ ನಾಗರಿಕರ ಮನೋಸ್ಥೈರ್ಯ ಹೆಚ್ಚಿಸುವ ನಿಟ್ಟಿನಲ್ಲಿ ಮಂಗಳೂರು ನಗರ ಪೊಲೀಸ್‌ ಸಿಬಂದಿ ರವಿವಾರ ಹಲವಾರು ಮನೆಗಳಿಗೆ ಭೇಟಿ ನೀಡಿ ಹಿರಿಯ ನಾಗರೀಕರ ಜತೆ ಮಾತುಕತೆ ನಡೆಸಿ ಅವರ ಯೋಗಕ್ಷೇಮ ವಿಚಾರಿಸಿದರು.


    ಮಂಗಳೂರು ನಗರ ಪೊಲೀಸ್‌ ಕಮಿಷನರೆಟ್‌ ವ್ಯಾಪ್ತಿಯ ಎಲ್ಲ ಠಾಣೆಗಳಿಗೆ ಸಂಬಂಧಿಸಿದಂತೆ 438 ಮನೆಗಳಿಗೆ ಪೊಲೀಸ್‌ ಸಿಬಂದಿ ಭೇಟಿ ನೀಡಿದ್ದಾರೆ.
    ಉರ್ವ ಪೊಲೀಸ್‌ ಠಾಣೆಯೊಂದರ ಸಿಬಂದಿ 100ಕ್ಕೂ ಅಧಿಕ ಹಿರಿಯ ನಾಗರಿಕರನ್ನು ಭೇಟಿ ಮಾಡಿ ಮಾತನಾಡಿದ್ದಾರೆ ಎಂದು ಪೊಲೀಸ್‌ ಕಮಿಷನರ್‌ ಕುಲದೀಪ್‌ ಕುಮಾರ್‌ ಆರ್‌. ಜೈನ್‌ ಅವರು ತಿಳಿಸಿದ್ದಾರೆ. ಶನಿವಾರ ನಡೆದ ಪೊಲೀಸ್‌ ಫೋನ್‌ ಇನ್‌ ಕಾರ್ಯಕ್ರಮದಲ್ಲಿ ವಾಮಂಜೂರಿನ ಓರ್ವರು ಕರೆ ಮಾಡಿ, ಮನೆಯಲ್ಲಿ ಒಂಟಿಯಾಗಿ ವಾಸವಾಗಿರುವ ಹಿರಿಯ ನಾಗರಿಕರು ಮಾನಸಿಕವಾಗಿ ಕುಗ್ಗಿ ಗೊಂದಲದಲ್ಲಿದ್ದಾರೆ ಎಂದು ತಿಳಿಸಿದ್ದರು.


    ಇದಕ್ಕೆ ಪ್ರತಿಕ್ರಿಯಿಸಿದ ಕಮಿಷನರ್‌ ಪೊಲೀಸ್‌ ಇಲಾಖೆಯಿಂದ ಹಿರಿಯ ನಾಗರಿಕರ ಕೌನ್ಸೆಲಿಂಗ್‌ ನಡೆಸಲಾಗುವುದು ಎಂದು ತಿಳಿಸಿದ್ದರು. ಆದರಂತೆ ರವಿವಾರ ಪೊಲೀಸ್‌ ಸಿಬಂದಿ ವಿವಿಧ ಮನೆಗಳಿಗೆ ಭೇಟಿ ನೀಡಿ ಮಾತುಕತೆ ನಡೆಸಿದರು.

    Click to comment

    Leave a Reply

    Your email address will not be published. Required fields are marked *

    LATEST NEWS

    ವರ್ಕ್‌ ಫ್ರಮ್‌ ಹೋಮ್‌ ಲಿಂಕ್‌ ಒತ್ತಿ 67ಸಾವಿರ ರೂ ಕಳೆದುಕೊಂಡ ಮಹಿಳೆ..! ದೂರು ದಾಖಲು

    Published

    on

    ಕೋಟ: ಇನ್ಸ್ಟಾಗ್ರಾಂ ಖಾತೆಯಲ್ಲಿ ಬಂದ ಜಾಹೀರಾತನ್ನು ನಂಬಿ ಯುವತಿಯೊಬ್ಬಳು 60 ಸಾವಿರ ರೂ. ಹಣವನ್ನು ಕಳೆದುಕೊಂಡಿರುವ ಕುರಿತು ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಮನೆಯಲ್ಲೇ ಕುಳಿತು ಮೊಬೈಲ್‌ನಲ್ಲಿ ಕೆಲಸ ಮಾಡುವ ವಿಚಾರಕ್ಕೆ ಸಂಬಂಧಿಸಿ ಇನ್ಸ್ಟಾಗ್ರಾಂ ಖಾತೆಯಲ್ಲಿ ಬಂದ ಜಾಹೀರಾತನ್ನು ನೋಡಿ ಯುವತಿಯೊಬ್ಬಳು 60 ಸಾವಿರ ರೂಪಾಯಿ ಹಣವನ್ನು ಕಳೆದುಕೊಂಡಿದ್ದಾಳೆ. ಇನ್ಸ್ಟಾಗ್ರಾಮ್‌ನಲ್ಲಿ ಬಂದ ಲಿಂಕನ್ನು ಅಕ್ಷತಾ(26 ವ) ಸ್ವೀಕರಿಸಿದ್ದಾರೆ. ಅದರಂತೆ ಲಿಂಕ್‌ಅನ್ನು ಒತ್ತಿದ ಕೂಡಲೇ ಅದು ವ್ಯಾಟ್ಸಾಪ್‌ ನಂಬರ್‌ಗೆ ಸಂಪರ್ಕಗೊಂಡಿದೆ. ಅದರಲ್ಲಿ ಮೊಬೈಲ್‌ನಲ್ಲಿ ಮಾಡುವ ಕೆಲಸದ ಬಗ್ಗೆ ಮಾಹಿತಿಯನ್ನು ನೀಡಿದ್ದರು.

    ಆರಂಭದಲ್ಲಿ ನೋಂದಣಿ ಶುಲ್ಕ ಎಂದು ಅಕ್ಷತಾ 200 ರೂಪಾಯಿ ಹಣವನ್ನು ಫೋನ್‌ ಪೇ ಮೂಲಕ ವರ್ಗಾವಣೆ ಮಾಡಿದ್ದಾರೆ. ನಂತರ ಬೋನಸ್‌ ಎಂದು ಹೇಳಿ ಅಕ್ಷತಾ ರವರಿಗೆ 60 ರೂಪಾಯಿ ಹಣವನ್ನು ನೀಡಲಾಗಿದೆ. ಹೀಗೆ ಒಂದೇ ದಿನ 1,615 ರೂಪಾಯಿ ಅವರು ಪಾವತಿ ಮಾಡಿದ್ದರು ಎಂದು ದೂರಿನಲ್ಲಿ ತಿಳಿಸಿದ್ದಾರೆ.

    ವೈದ್ಯರಿಗೆ ಕೋಟ್ಯಾಂತರ ರೂಪಾಯಿ ಆನ್ಲೈನ್ ವಂಚನೆ..! ಆರೋಪಿಗಳಿಂದ 13,95,000 ನಗದು ವಶ..!!

    ಜಾಹಿರಾತುದಾರರು 1/09/2024ರಂದು ಒಂಭತ್ತು ಆರ್ಡರ್‌ಗಳನ್ನು ಮುಗಿಸುವಂತೆ ತಿಳಿಸಿದ್ದು ಮೊದಲಿಗೆ 500ರೂ. ಪಾವತಿಸಿ ಅಕ್ಷತಾ ಕೆಲಸವನ್ನು ಆರಂಭಿಸಿದ್ದಾರೆ. ಪ್ರತಿಯೊಂದು ಆರ್ಡರ್‌ಗೆ ಹಣ ಪಾವತಿಸಲು ಅವರು ತಿಳಿಸಿದ್ದು ಅದರಂತೆ ಅಕ್ಷತಾ ಒಟ್ಟು 67,330 ರೂಪಾಯಿ ಹಣ ಪಡೆದು ತನಗೆ ಹಣ ವಂಚನೆ ಮಾಡಿರುವುದಾಗಿ ಕೋಟ ಪೊಲೀಸ್ ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

    Continue Reading

    LATEST NEWS

    ಮಣಿಪುರದಲ್ಲಿ ನಿಯಂತ್ರಣಕ್ಕೆ ಬಾರದ ಹಿಂಸಾಚಾರ: 3 ಜಿಲ್ಲೆಗಳಲ್ಲಿ ಕರ್ಫ್ಯೂ ಜಾರಿ

    Published

    on

    ಇಂಫಾಲ್: ಮಣಿಪುರದಲ್ಲಿ ಹಿಂಸಾಚಾರ ನಿಯಂತ್ರಣಕ್ಕೆ ಬಾರದ ಹಿನ್ನೆಲೆ ಇಂಫಾಲ್ ಪೂರ್ವ, ಇಂಫಾಲ್ ಪಶ್ಚಿಮ ಮತ್ತು ತೌಬಲ್ ಜಿಲ್ಲೆಗಳಲ್ಲಿ ಕರ್ಫ್ಯೂ ಜಾರಿ ಮಾಡಲಾಗಿದೆ.

    ಹಿಂದಿನ ಆದೇಶದಲ್ಲಿ, ಇಂಫಾಲ್ ಪೂರ್ವ ಮತ್ತು ಇಂಫಾಲ್ ಪಶ್ಚಿಮದ ಜಿಲ್ಲಾ ಮ್ಯಾಜಿಸ್ಟ್ರೇಟ್‌ಗಳು ಆಯಾ ಜಿಲ್ಲೆಗಳಲ್ಲಿ ಮಂಗಳವಾರ ಬೆಳಿಗ್ಗೆ 5 ರಿಂದ 10 ರವರೆಗೆ ಕರ್ಫ್ಯೂ ಸಡಿಲಿಸುವುದಾಗಿ ಘೋಷಿಸಲಾಗಿತ್ತು. ಆದರೆ ಜಿಲ್ಲೆಗಳಲ್ಲಿ ಕಾನೂನು ಮತ್ತು ಸುವ್ಯವಸ್ಥೆ ನಿಯಂತ್ರಣಕ್ಕೆ ಬಾರದ ಹಿನ್ನೆಲೆ ಸಡಿಲಿಕೆ ಆದೇಶವನ್ನು ರದ್ದುಗೊಳಿಸಲಾಗಿದೆ. ಜೊತೆಗೆ ಎರಡೂ ಜಿಲ್ಲೆಗಳಲ್ಲಿ ಕರ್ಫ್ಯೂ ಮರು ಹೇರಲಾಗಿದೆ ಎಂದು ಜಿಲ್ಲಾಧಿಕಾರಿಗಳು ಹೇಳಿದ್ದಾರೆ.

    ಗಸ್ತು ತಿರುಗಲು ಮತ್ತು ವೈಮಾನಿಕ ಸಮೀಕ್ಷೆ ನಡೆಸಲು ಮಿಲಿಟರಿ ಹೆಲಿಕಾಪ್ಟರ್ ಅನ್ನು ನಿಯೋಜಿಸಲಾಗಿದ್ದು, ಕೂಂಬಿಂಗ್ ಕಾರ್ಯಾಚರಣೆಯೂ ನಡೆಯುತ್ತಿದೆ. ಪರಿಸ್ಥಿತಿ ನಿಯಂತ್ರಣಕ್ಕೆ ಬಂದಿದೆ ಎಂದು ಗುಪ್ತಚರ ವಿಭಾಗದ ಪೊಲೀಸ್ ಮಹಾನಿರೀಕ್ಷಕರು ತಿಳಿಸಿದ್ದಾರೆ.

    Continue Reading

    LATEST NEWS

    ಹಳಿಗಳ ಮೇಲೆ ಸಿಮೆಂಟ್ ಬ್ಲಾಕ್ ಗಳನ್ನು ಇಟ್ಟ ಕಿಡಿಗೇಡಿಗಳು: ತಪ್ಪಿದ ರೈಲು ದುರಂತ

    Published

    on

    ಅಜ್ಮೀರ್: ರಾಜಸ್ಥಾನದ ಅಜ್ಮೀರ್ ಜಿಲ್ಲೆಯಲ್ಲಿ ಸರಕು ಸಾಗಣೆ ಕಾರಿಡಾರ್ ನ ಹಳಿಗಳ ಮೇಲೆ ಎರಡು ಸಿಮೆಂಟ್ ಬ್ಲಾಕ್ ಗಳನ್ನು ಇಡುವ ಮೂಲಕ ಸರಕು ರೈಲನ್ನು ಹಳಿ ತಪ್ಪಿಸುವ ಘಟನೆ ನಡೆದಿದೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.

    ತಲಾ 70 ಕೆ.ಜಿ ತೂಕದ ಸಿಮೆಂಟ್ ಬ್ಲಾಕ್ ಗಳಿಗೆ ಗೂಡ್ಸ್ ರೈಲು ಡಿಕ್ಕಿ ಹೊಡೆದಿದೆ. ಆದರೆ, ಯಾವುದೇ ಅಹಿತಕರ ಘಟನೆ ಸಂಭವಿಸಿಲ್ಲ ಎಂದು ಅವರು ಹೇಳಿದ್ದಾರೆ. ‘ಭಾನುವಾರ ಕೆಲವು ದುರ್ಷ್ಕಮಿಗಳು ಸರಕು ಸಾಗಣೆ ಕಾರಿಡಾರ್ನ ಹಳಿಗಳ ಮೇಲೆ ಎರಡು ಸಿಮೆಂಟ್ ಬ್ಲಾಕ್ ಗಳನ್ನು ಇಟ್ಟಿದ್ದಾರೆ. ಗೂಡ್ಸ್ ರೈಲು ಅದಕ್ಕೆ ಡಿಕ್ಕಿ ಹೊಡೆದಿದೆ’ ಎಂದು ವಾಯುವ್ಯ ರೈಲ್ವೆ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

    ಕಾನ್ಪುರದಲ್ಲಿ ಭಾನುವಾರ ಕಾಳಿಂದಿ ಎಕ್ಸ್ ಪ್ರೆಸ್ ರೈಲನ್ನು ಹಳಿ ತಪ್ಪಿಸುವ ಯತ್ನವನ್ನು ಕಿಡಿಗೇಡಿಗಳು ನಡೆಸಿದ್ದರು. ಹಳಿ ಮೇಲೆ ಸಿಲಿಂಡರ್, ಪೆಟ್ರೋಲ್ ತುಂಬಿದ ಬಾಟಲಿಗಳು, ಗನ್ ಪೌಡರ್ ಸೇರಿದಂತೆ ಅಪಾಯಕಾರಿ ವಸ್ತುಗಳನ್ನು ಇರಿ ರೈಲು ಸಿಲಿಂಡರ್ ಗೆ ಡಿಕ್ಕಿ ಹೊಡೆದ ಪರಿಣಾಮ ಅದು ಸ್ಫೋಟಗೊಂಡಿತ್ತು. ಆದರೆ ರೈಲಿಗಾಗಲಿ ಅಥವಾ ಪ್ರಯಾಣಿಕರಿಗಾಗಲಿ ಯಾವುದೇ ರೀತಿಯ ಸಮಸ್ಯೆಯಾಗಿರಲಿಲ್ಲ.

    ಲೊಕೊ ಪೈಲಟ್ ತುರ್ತು ಬ್ರೇಕ್ ಹಾಕಿದ್ದರಿಂದ ರೈಲು ಹಳಿಯಲ್ಲಿ ಅಡಚಣೆ ಉಂಟಾದ ಕಾರಣ ತಕ್ಷಣ ರೈಲ್ವೆ ಸಂರಕ್ಷಣಾ ಪಡೆಗೆ ಎಚ್ಚರಿಕೆ ನೀಡಿ ಸಂಪೂರ್ಣ ತಪಾಸಣೆ ನಡೆಸಿದ ನಂತರ ದೊಡ್ಡ ರೈಲು ಅಪಘಾತವನ್ನು ತಪ್ಪಿಸಲಾಯಿತು.

    Continue Reading

    LATEST NEWS

    Trending