DAKSHINA KANNADA
Mangalore: ವಿಶ್ವ ರಕ್ತದಾನಿಗಳ ದಿನಾಚರಣೆ – ರಕ್ತದಾನ ಪುಣ್ಯದಾನದ ಕೆಲಸ : ಕೃಷ್ಣ ಪಾಲೇಮಾರ್
ಇಂಡಿಯನ್ ರೆಡ್ ಕ್ರಾಸ್ ಸೊಸೈಟಿ ದಕ್ಷಿಣ ಕನ್ನಡ ಜಿಲ್ಲೆಯ ಘಟಕದ ವತಿಯಿಂದ ವಿಶ್ವ ರಕ್ತದಾನಿಗಳ ದಿನಾಚರಣೆ, ಅತೀ ಹೆಚ್ಚು ರಕ್ತದಾನ ಮಾಡಿದ ರಕ್ತದಾನಿಗಳಿಗೆ ಸನ್ಮಾನ ಕಾರ್ಯಕ್ರಮ ಮಂಗಳೂರಿನ ಎಸ್‌ಡಿಎಂ ಕಾಲೇಜಿನಲ್ಲಿ ಜರುಗಿತು.
ಮಂಗಳೂರು: ಇಂಡಿಯನ್ ರೆಡ್ ಕ್ರಾಸ್ ಸೊಸೈಟಿ ದಕ್ಷಿಣ ಕನ್ನಡ ಜಿಲ್ಲೆಯ ಘಟಕದ ವತಿಯಿಂದ ವಿಶ್ವ ರಕ್ತದಾನಿಗಳ ದಿನಾಚರಣೆ, ಅತೀ ಹೆಚ್ಚು ರಕ್ತದಾನ ಮಾಡಿದ ರಕ್ತದಾನಿಗಳಿಗೆ ಸನ್ಮಾನ ಕಾರ್ಯಕ್ರಮ ಮಂಗಳೂರಿನ ಎಸ್‌ಡಿಎಂ ಕಾಲೇಜಿನಲ್ಲಿ ಜರುಗಿತು.
ರೆಡ್‌ಕ್ರಾಸ್ ಸಂಸ್ಥೆ ಅಧ್ಯಕ್ಷ ಡಾ ಶಾಂತರಾಮ್ ಶೆಟ್ಟಿ ಅಧ್ಯಕ್ಷತೆಯನ್ನು ವಹಿಸಿದ್ದರು.
ಕಾರ್ಯಕ್ರಮವನ್ನು ಉದ್ಘಾಟಿಸಿದ ನಿಟ್ಟೆ ಯೂನಿವರ್ಸಿಟಿಯ ಉಪಕುಲಪತಿ ಡಾ ಎಂ ಶಾಂತಾರಾಮ ಶೆಟ್ಟಿ ಮಾತನಾಡಿ, ಇಂದು ಸಮಾಜದಲ್ಲಿ ರೆಡ್‌ಕ್ರಾಸ್ ಅತ್ಯುತ್ತಮವಾಗಿ ಕೆಲಸ ಮಾಡುತ್ತಿದ್ದು, ಇದೇ ಕಾರಣಕ್ಕೆ ಹಲವು ಪ್ರಶಸ್ತಿಗಳು ಅರಸಿಕೊಂಡು ಬಂದಿದೆ.
ಇಂದು ಕೇವಲ ದೇಶ ಮಾತ್ರವಲ್ಲ ವಿಶ್ವಮಟ್ಟಕ್ಕೂ ರೆಡ್‌ಕ್ರಾಸ್‌ನ ಸೇವೆ ವಿಸ್ತರಣೆಯಾಗಿದೆ. ಇದು ಅಭಿನಂದನೀಯವಾದ ಕೆಲಸವಾಗಿದೆ.
ದಿನನಿತ್ಯ ಉಂಟಾಗುವ ಸಾವಿರಾರು ಅಪಘಾತಗಳಿಂದ ಜೀವ ಕಳೆದುಕೊಳ್ಳುತ್ತಿರುವ ಯುವಜನತೆಗೆ ರಕ್ತದಾನ ನೀಡುವ ಕೆಲಸ ಮಾಡಬೇಕಾಗಿದೆ ಎಂದರು.
ಮಾಜಿ ಸಚಿವ ಕೃಷ್ಣ ಜೆ ಪಾಲೇಮಾರ್ ಮುಖ್ಯ ಅತಿಥಿಯಾಗಿದ್ದು, ಅತೀ ಹೆಚ್ಚು ಬಾರಿ ರಕ್ತದಾನ ಮಾಡಿದವರಿಗೆ ಸನ್ಮಾನ ಕಾರ್ಯಕ್ರಮ ನೆರವೇರಿಸಿದರು.
ರಕ್ತದಾನ ಪುಣ್ಯದಾನದ ಕೆಲಸವಾಗಿದೆ. ಈ ಮೂಲಕ ರೆಡ್ ಕ್ರಾಸ್ ಹೆಚ್ಚು ಜನಪ್ರಿಯವಾಗಿದೆ ಎಂದರು.
ಕಾರ್ಯಕ್ರಮದಲ್ಲಿ ರೆಡ್ ಕ್ರಾಸ್ ಸಂಸ್ಥೆ ಸದಸ್ಯ,ದ್ವಿತೀಯ ಬಾರಿಗೆ ಮಂಗಳೂರು ದಕ್ಷಿಣ ವಿಧಾನ ಸಭಾ ಕ್ಷೇತ್ರದ ಶಾಸಕರಾಗಿ ಆಯ್ಕೆಗೊಂಡ ವೇದವ್ಯಾಸ ಕಾಮತ್ ಅವರನ್ನು ಸನ್ಮಾನಿಸಲಾಯಿತು.
ಎಸ್‌ಡಿಎಂ ಬಿಬಿಎಂ ಕಾಲೇಜಿನ ಉಪಪ್ರಾಂಶುಪಾಲ ದಿವ್ಯಾ ಉಚ್ಚಿಲ್, ಮಂಗಳೂರು ಪತ್ರಿಕಾ ಭವನ ಟ್ರಸ್ಟ್ ಅಧ್ಯಕ್ಷ ರಾಮಕೃಷ್ಣ ಆರ್ ಮೊದಲಾದವರಿದ್ದರು.
ರೆಡ್‌ಕ್ರಾಸ್ ಸೊಸೈಟಿ ಕಾರ್ಯದರ್ಶಿ ಸಂಜಯ್ ಶೆಟ್ಟಿ ಸೇರಿದಮತೆ ರೆಡ್‌ಕ್ರಾಸ್ ಸಂಸ್ಥೆಯ ಪದಾಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
DAKSHINA KANNADA
ಮಂಗಳೂರು – ಕಟೀಲಮ್ಮನ ಮಡಿಲಲ್ಲಿ ಹಲವಾರು ಬಣ್ಣದ ವೇಷಗಳ ವೈಭವ
ಮಂಗಳೂರು: ನಂದಿನಿ ನದಿಯ ಮಧ್ಯದಲ್ಲಿ ರಾರಾಜಿಸುತ್ತಿರುವ ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಾಲಯದಲ್ಲಿ ಅದ್ದೂರಿಯಾಗಿ ನಡೆಯುವ ಶರನ್ನವರಾತ್ರಿ ಉತ್ಸವದ ವೈಭವ ಒಂದು ಕಡೆಯಾದರೆ ಹುಲಿ, ಸಿಂಹ ಸೇರಿದಂತೆ ಸಾವಿರಾರು ಬಣ್ಣದ ವೇಷಗಳು ಸೇವೆ ಸಲ್ಲಿಸುವ ಸೊಬಗು ಇನ್ನೊಂದು ಕಡೆ.
ಹಲವಾರು ತಂಡಗಳು ಹುಲಿ ವೇಷ ಹಾಕಿ ತಿರುಗಾಟ ನಡೆಸಿ ಅಂತಿಮವಾಗಿ ಕಟೀಲಿಗೆ ಬಂದು ದೇವಾಲಯದ ಆವರಣದಲ್ಲಿ ನರ್ತಿಸಿ ವೇಷ ಕಳಚಿ ನಂದಿನಿ ನೀರಿನಲ್ಲಿ ಮಿಂದು ಹೋಗುವುದು ರೂಢಿ. ವೇಷ ಹಾಕುವಾಗಲೇ ಕಟೀಲಿನಲ್ಲಿ ವೇಷ ಬಿಚ್ಚುತ್ತೇವೆ ಎಂದು ಹರಕೆ ಹೊತ್ತವರು ಒಂದೆಡೆಯಾದರೆ, ಕಟೀಲು ಕ್ಷೇತ್ರದಲ್ಲೇ ಸೇವೆ ಸಲ್ಲಿಸಿ ಮರಳಿ ಅಲ್ಲೇ ವೇಷ ಬಿಚ್ಚುತ್ತೇವೆ ಎನ್ನುವವರು ಇನ್ನೊಂದೆಡೆ ಇದ್ದಾರೆ. ಇದು ತಲತಲಾಂತರಗಳಿಂದ ಪಾಲಿಸಿಕೊಂಡು ಬರುತ್ತಿರುವ ಸಂಪ್ರದಾಯವಾಗಿದೆ.
ಶರನ್ನವರಾತ್ರಿ ಸಮಯದಲ್ಲಿ ಕಟೀಲು ದೇವಾಲಯದ ಆವರಣದಲ್ಲಿ ನಿತ್ಯವೂ ಹತ್ತಾರು ತಂಡಗಳ ಹುಲಿ ವೇಷ ನರ್ತನ ಇರುತ್ತದೆ. ಒಟ್ಟಾರೆಯಾಗಿ 2000 ಕ್ಕೂ ಅಧಿಕ ವೇಷಗಳು , 70 ರಿಂದ 80 ತಂಡಗಳು ಕಟೀಲು ಸನ್ನಿಧಿಗೆ ಬಂದು ಸೇವೆ ಸಲ್ಲಿಸುತ್ತವೆ ಎಂದು ಹೇಳಬಹುದು.
DAKSHINA KANNADA
ಮುಂದಿನ ಐದು ದಿನ ಉತ್ತರ ಒಳನಾಡು, ಕರಾವಳಿಯಲ್ಲಿ ಭಾರೀ ಮಳೆ ಸಾಧ್ಯತೆ
ಬೆಂಗಳೂರು: ಈ ಬಾರಿಯ ದಸರಾ ಸಂಭ್ರಮಕ್ಕೆ ಮಳೆ ಅಡ್ಡಿಯಾಗುವ ಸಾಧ್ಯತೆಯಿದೆ. ಮುಂದಿನ ಐದು ದಿನಗಳಲ್ಲಿ ಉತ್ತರ ಒಳನಾಡು ಮತ್ತು ಕರಾವಳಿ ಜಿಲ್ಲೆಗಳಲ್ಲಿ ಭಾರೀ ಮಳೆಯಾಗಲಿದೆ.
ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದಿಂದಾಗಿ ರಾಜ್ಯದಲ್ಲಿ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಮಳೆಯಾಗಲಿದೆ. ಬೆಂಗಳೂರಿನಲ್ಲಿ ಹಗುರದಿಂದ ಸಾಧಾರಣ ಮಳೆಯಾಗಲಿದೆ ಎಂದು ಐಎಂಡಿ ಹೇಳಿದೆ.
ಉತ್ತರ ಕರ್ನಾಟಕ ಮತ್ತು ಮಧ್ಯ ಕರ್ನಾಟಕದಲ್ಲಿ ಕಳೆದ ಮೂರು ದಿನಗಳಿಂದ ಮಳೆಯಾಗುತ್ತಿದೆ. ಕರಾವಳಿ ಭಾಗದಲ್ಲಿ ಕಳೆದ ಎರಡು ದಿನಗಳಿಂದ ಭಾರೀ ಮಳೆ ಸುರಿಯುತ್ತಿದೆ. ಚಾರ್ಮಾಡಿ ಘಾಟ್‌ನಲ್ಲಿ ರಸ್ತೆಯಲ್ಲಿ ನೀರು ರಭಸದಿಂದ ಹರಿದು ಹೋಗುತ್ತಿರುವ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
DAKSHINA KANNADA
ಮಂಗಳೂರು – ರೌಡಿಗಳಂತೆ ಫೈಟ್ ಮಾಡಿಕೊಂಡ ಬಸ್ ಸಿಬ್ಬಂದಿ; ವಿಡಿಯೋ ವೈರಲ್
ಮಂಗಳೂರು: ವಿಟ್ಲ-ಮಂಗಳೂರು ಹಾಗೂ ಪುತ್ತೂರು-ಮಂಗಳೂರು ಮಧ್ಯೆ ಸಂಚರಿಸುವ ಖಾಸಗಿ ಬಸ್ಸಿನ ಸಿಬ್ಬಂದಿ ಪ್ರಯಾಣಿಕರ ಕಣ್ಮುಂದೆಯೇ ಪರಸ್ಪರ ಬಡಿದಾಡುತ್ತಾ ಭೀತಿಯ ವಾತಾವರಣ ಸೃಷ್ಟಿಸಿದ ಘಟನೆ ಬೆಳಕಿಗೆ ಬಂದಿದೆ.
ಒಂದು ಬಸ್ ಚಾಲಕ ಉಗುಳುವಾಗ ಇನ್ನೊಂದು ಬಸ್ ಚಾಲಕನ ಮೈಗೆ ಬಿತ್ತೆಂಬ ನೆಪದಲ್ಲಿ ಪರಸ್ಪರ ಹೊಡೆದಾಡಿಕೊಂಡಿದ್ದಾರೆ ಎಂದು ಪ್ರತ್ಯಕ್ಷದರ್ಶಿ ಪ್ರಯಾಣಿಕರು ತಿಳಿಸಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಪ್ರತಿನಿತ್ಯ ಖಾಸಗಿ ಬಸ್‌ಗಳ ಸಿಬ್ಬಂದಿಯ ಅಟ್ಟಹಾಸ ಮಿತಿಮೀರಿದ್ದು ಸಭ್ಯ ಪ್ರಯಾಣಿಕರು ಓಡಾಡಲು ಹಿಂಜರಿಯುತ್ತಿದ್ದಾರೆ. ಪೊಲೀಸರು, ಆರ್‌ಟಿಒ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿಯೇ ಖಾಸಗಿ ಬನ್ ಸಿಬ್ಬಂದಿಗಳು ಅನಾಗರಿಕರಾಗಿದ್ದಾರೆಂಬ ಆರೋಪ ಸಾರ್ವಜನಿಕರಿಂದ ವ್ಯಕ್ತವಾಗಿದೆ.
ಬಸ್ ವ್ಯವಸ್ಥೆ ಸಾರ್ವಜನಿಕ ಸೇವೆಯೆಂಬುದು ಇಂದಿನವರಿಗೆ ತಿಳಿದಿಲ್ಲವಾಗಿದೆ. ತಮ್ಮದೇ ಸಾಮ್ರಾಜ್ಯ, ತಾವು ಮಾಡಿದ್ದೇ ಆಟ, ನಾವು ನಡೆದಿದ್ದೇ ದಾರಿ ಎಂಬುದನ್ನು ತಿಳಿದಿರುವ ಇಂತಹ ಸಿಬ್ಬಂದಿಯ ಸಮಾಜ ಕಂಟಕ ವರ್ತನೆ ಸಾರ್ವಜನಿಕರ ಆತಂಕಕ್ಕೆ ಕಾರಣವಾಗಿದೆ.
‘ಇಂತಹ ಅನಾಗರಿಕ ವರ್ತನೆಯಿಂದ ಮಹಿಳೆಯರು , ಪುಟ್ಟ ಮಕ್ಕಳು ಬಸ್ಸಿನಲ್ಲಿ ಹೋಗಲು ಹಿಂದೇಟು ಹಾಕುವಂತಾಗಿದೆ. ಅಲ್ಲದೆ ಬಸ್ಸಿನ ಸಿಬ್ಬಂದಿಗಳನ್ನು ಅರ್ಧದಾರಿಯಲ್ಲೇ ಇಳಿಸಿ ಅವರನ್ನು ಅತಂತ್ರರನ್ನಾಗಿಸುವ ಕ್ರಮ ಸರಿಯಲ್ಲ. ಬೇರೆ ಬಸ್ಸು ಇಲ್ಲದೇ ಅವರು ಕಂಗೆಡುವ ಪರಿಸ್ಥಿತಿ ಕೂಡಾ ಇರುವ ಕಾರಣ ಇಂತಹ ಬಸ್ಸು ಸಿಬ್ಬಂದಿಗಳ ವಿರುದ್ದ ಕ್ರಮ ಕೈಗೊಳ್ಳಬೇಕು’ ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ಈ ಕುರಿತ ವಿಡಿಯೋ ಫುಲ್ ವೈರಲ್ ಆಗುತ್ತಿದ್ದು, ಸಾರ್ವಜನಿಕರು ಸಿಬ್ಬಂದಿ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಆಕ್ರೋಶಿಸುತ್ತಿದ್ದಾರೆ.
ವಿಡಿಯೋ ನೋಡಿ :
- LATEST NEWS6 days ago
ಶಿಕ್ಷಕಿಯ ಅ*ಶ್ಲೀಲ ವಿಡಿಯೋ ಹಂಚಿಕೆ; ನಾಲ್ವರು ವಿದ್ಯಾರ್ಥಿಗಳ ಬಂಧನ
- FILM3 days ago
ಎರಡನೇ ಮದುವೆಯಾಗುತ್ತಿರುವ ಬಿಗ್ಬಾಸ್ ಕಂಟೆಸ್ಟೆಂಟ್
- BIG BOSS7 days ago
ಮಹಿಳೆಯರ ಒಳ ಉಡುಪಿನ ಬಗ್ಗೆ ಲಾಯರ್ ಜಗದೀಶ್ ಮಾತು.. ಏನಿದು ವಿವಾದ?
- DAKSHINA KANNADA5 days ago
ಮಂಗಳೂರು : ರಾತ್ರಿ ಹೊತ್ತಲ್ಲಿ ಯುವಕನ ಬೆತ್ತಲೆ ಓಡಾಟ; ಭಯದಲ್ಲಿ ಹಾಸ್ಟೆಲ್ ವಿದ್ಯಾರ್ಥಿನಿಯರು