Connect with us

  LATEST NEWS

  ಕಲಬುರಗಿ ನೂತನ ಜಿಲ್ಲಾಧಿಕಾರಿಯಾಗಿ ಫೌಝಿಯಾ ತರನ್ನುಮ್ ನೇಮಕ..!

  Published

  on

  ಕಲಬುರಗಿ ನೂತನ ಜಿಲ್ಲಾಧಿಕಾರಿ 2015 ನೇ ಬ್ಯಾಚಿನ ಐಎಎಸ್ ಅಧಿಕಾರಿ ಫೌಝಿಯಾ ತರನ್ನುಮ್ ಅವರನ್ನು ವರ್ಗಾವಣೆ ಮಾಡಿ ಸರಕಾರ ಆದೇಶ ಹೋರಡಿಸಿದೆ.

  ಕಲಬುರಗಿ: ಕಲಬುರಗಿ ನೂತನ ಜಿಲ್ಲಾಧಿಕಾರಿ 2015 ನೇ ಬ್ಯಾಚಿನ ಐಎಎಸ್ ಅಧಿಕಾರಿ ಫೌಝಿಯಾ ತರನ್ನುಮ್ ಅವರನ್ನು ವರ್ಗಾವಣೆ ಮಾಡಿ ಸರಕಾರ ಆದೇಶ ಹೋರಡಿಸಿದೆ.

  ಈ ಹಿಂದೆ ಕಲಬುರಗಿ ಮಹಾನಗರ ಪಾಲಿಕೆಯ ಆಯುಕ್ತರಾಗಿ ಸೇವೆ ಸಲ್ಲಿಸಿದ ಫೌಝಿಯಾ ತರನ್ನುಮ್ ಇದೀಗ ಕಲಬುರಗಿ ಜಿಲ್ಲಾಧಿಕಾರಿಯಾಗಿ ನಿಯುಕ್ತಿಗೊಂಡಿದ್ದಾರೆ.

  ಫೌಜಿಯಾ ಅವರು 2019ರಲ್ಲಿ ಕಲಬುರಗಿ ಮಹಾನಗರ ಪಾಲಿಕೆ ಆಯುಕ್ತರಾಗಿ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸಿದ್ದರು.

  ನಂತರ ಚಿಕ್ಕಬಳ್ಳಾಪುರ ಹಾಗೂ ಕೊಪ್ಪಳ ಜಿಲ್ಲಾ ಪಂಚಾಯಿತಿಗಳ ಸಿಇಒ ಆಗಿ ಕಾರ್ಯನಿರ್ವಹಿಸಿದ್ದರು.

  ಇದೀಗ ಕರ್ನಾಟಕ ಲೋಕಸೇವಾ ಆಯೋಗದ ಪರೀಕ್ಷಾ ನಿಯಂತ್ರಕರಾಗಿದ್ದರು.

  ಜಿಲ್ಲಾ ಪಂಚಾಯಿತಿ ಸಿಇಒ ಡಾ. ಗಿರೀಶ್ ಡಿ. ಬದೋಲೆ ಅವರನ್ನು ಕರ್ನಾಟಕ ಲೋಕಸೇವಾ ಆಯೋಗದ ಪರೀಕ್ಷಾ ನಿಯಂತ್ರಕರ ಹುದ್ದೆಗೆ ವರ್ಗಾಯಿಸಲಾಗಿದೆ.

  Click to comment

  Leave a Reply

  Your email address will not be published. Required fields are marked *

  International news

  ನಾಪತ್ತೆಯಾಗಿದ್ದ ಬಾಂಗ್ಲಾದೇಶದ ಸಂಸದ ಕೋಲ್ಕತ್ತಾದಲ್ಲಿ ಶ*ವವಾಗಿ ಪತ್ತೆ!

  Published

  on

  ಕೋಲ್ಕತ್ತಾ : ವೈದ್ಯಕೀಯ ಚಿಕಿತ್ಸೆಗಾಗಿ ಭಾರತಕ್ಕೆ ಆಗಮಿಸಿದ್ದ ಬಾಂಗ್ಲಾದೇಶದ ಸಂಸದ ಅನ್ವರುಲ್ ಅಝೀಂ ಅನಾರ್ ಶ*ವವಾಗಿ ಪತ್ತೆಯಾಗಿದ್ದಾರೆ. ಬಾಂಗ್ಲಾದೇಶದ ಪ್ರಧಾನಿ ಶೇಖ್​ ಹಸೀನಾ ಅವರ ಪಕ್ಷದ ಸದಸ್ಯರಾಗಿದ್ದ ಅನಾರ್ ಮೇ 12ರಂದು ಕೋಲ್ಕತ್ತಾಗೆ ಬಂದಿದ್ದರು. ಬಳಿಕ ಕೆಲವು ದಿನಗಳಿಂದ ನಾಪತ್ತೆಯಾಗಿದ್ದರು. ಅವರ ಪತ್ತೆಗೆ ಪೊಲೀಸರು ಶೋಧ ಕಾರ್ಯ ಆರಂಭಿಸಿದ್ದರು. ಬುಧವಾರ(ಮೇ 22) ಬೆಳಿಗ್ಗೆ ಕೋಲ್ಕತ್ತಾದ ನ್ಯೂಟೌನ್ ನಲ್ಲಿ ಅವರ ಶ*ವ ಪತ್ತೆಯಾಗಿದೆ.

  ಸಂಸದರು ಚಿನ್ನದ ಆಮದು ಹಾಗೂ ರಫ್ತು ವ್ಯವಹಾರವನ್ನು ಹೊಂದಿದ್ದರು.  ಕೋಲ್ಕತ್ತಾದ ನ್ಯೂಟೌನ್ ನಲ್ಲಿನ ಸಂಜೀವ ಗಾರ್ಡನ್ ಪ್ಲ್ಯಾಟ್ ನಲ್ಲಿ ಅವರ ಶ*ವ ಸಿಕ್ಕಿದ್ದು, ಕೊ*ಲೆ ಶಂಕೆ ವ್ಯಕ್ತವಾಗಿದೆ.  ಈಗಾಗಲೇ ಪ್ರಕರಣದ ಆರೋಪಿಗಳನ್ನು ಬಂಧಿಸಿರುವ ಬಗ್ಗೆ ವರದಿಯಾಗಿದೆ.

  ಇದನ್ನೂ ಓದಿ : ಮಲಗಿದ್ದಲ್ಲೇ ಸಾವು ಕಂಡ ಕುಮಾರಸ್ವಾಮಿ ಮತ್ತು ಕುಟುಂಬ..! ಅನಿಲ ಸೋರಿಕೆ ಶಂಕೆ

  ನಾಪತ್ತೆಯಾಗಿದ್ದ ಸಂಸದ :

  ಚಿಕಿತ್ಸೆಗಾಗಿ ಕೋಲ್ಕತ್ತಾಕ್ಕೆ ಅನ್ವರುಲ್ ಆಗಮಿಸಿದ್ದು, ಬಾರಾನಗರದಲ್ಲಿರುವ ಸ್ನೇಹಿತ ಗೋಪಾಲ್​ ಬಿಸ್ವಾಸ್ ಅವರ ಮನೆಯಲ್ಲಿ ಉಳಿದುಕೊಂಡಿದ್ದರು. ಮೇ 13 ರಂದು ಯಾರನ್ನೋ ಭೇಟಿಯಾಗಲು ಹೋಗುತ್ತಿದ್ದೇನೆಂದು ಹೊರಟವರು ಹಿಂದಿರುಗಿ ಬಂದಿರಲಿಲ್ಲ ಎಂದು ಹೇಳಲಾಗಿದೆ.
  ಮೇ 13 ರ ಮಧ್ಯಾಹ್ನ 1.40 ರ ಸುಮಾರಿಗೆ ವೈದ್ಯರ ಭೇಟಿಗಾಗಿ ಅನ್ವರುಲ್, ಗೋಪಾಲ್ ಮನೆಯಿಂದ ತೆರಳಿದ್ದರು. ಸಂಜೆ ವಾಪಾಸಾಗುವುದಾಗಿಯೂ ತಿಳಿಸಿದ್ದರು ಎನ್ನಲಾಗಿದೆ. ಆದರೆ, ಆ ಬಳಿಕ ಅವರು ವಾಪಾಸಾಗದೆ ನಾಪತ್ತೆಯಾಗಿದ್ದು, ಇದೀಗ ಶ*ವವಾಗಿ ಪತ್ತೆಯಾಗಿದ್ದಾರೆ.

  Continue Reading

  LATEST NEWS

  ಆರ್‌ಸಿಬಿ ಅಭ್ಯಾಸ ಪಂದ್ಯ ರದ್ದು..! ನಾಲ್ವರು ಉಗ್ರರ ಅರೆಸ್ಟ್

  Published

  on

  ಬೆಂಗಳೂರು: ಇಂದು(ಮೇ.22) ರಾಜಸ್ಥಾನ್ ರಾಯಲ್ಸ್ ಹಾಗೂ ಬೆಂಗಳೂರು ಚಾಲೆಂಜರ್ಸ್ ನಡುವೆ ಇಂದು ಎಲಿಮಿನೇಟೆಡ್ ಪಂದ್ಯ ನಡೆಯಲಿದೆ. ಹಾಗಾಗಿ ನಿನ್ನೆ ಆರ್‌ಸಿಬಿ ಅಭ್ಯಾಸ ಪಂದ್ಯವನ್ನು ಆಡಬೇಕಿತ್ತು. ಆದರೆ ಅದು ರದ್ದಾಗಿದ್ದು ಇದಕ್ಕೆ ಮೂಲ ಕಾರಣ ಈಗ ಹೊರ ಬಿದ್ದಿದೆ.

  virat kohli

  ಆರ್​ಸಿಬಿ ಸುದ್ದಿಗೋಷ್ಠಿಯನ್ನ ರದ್ದುಗೊಳಿಸಿದೆ ಎಂಬ ಮಾತುಗಳು ಕೇಳಿಬಂದಿದೆ. ಜೊತೆಗೆ ಆರ್​ಸಿಬಿ ಅಭ್ಯಾಸವನ್ನು ರದ್ದು ಗೊಳಿಸಿದೆ ಎನ್ನಲಾಗುತ್ತಿದೆ. ಮಂಗಳವಾರ ಆರ್‌ಸಿಬಿ ಗುಜರಾಜ್ ಮೈದಾನದಲ್ಲಿ ಅಭ್ಯಾಸ ನಡೆಸಬೇಕಿತ್ತು. ಆದರೆ ಯಾವುದೇ ಕಾರಣವನ್ನು ಬಿಚ್ಚಿಡದೆ ಆರ್​ಸಿಬಿ ಅಭ್ಯಾಸವನ್ನು ರದ್ದುಗೊಳಿಸಿತು. ಇನ್ನು ರಾಜಸ್ಥಾನ್​ ತಂಡ ಅಭ್ಯಾಸವನ್ನು ನಡೆಸಿದೆ. ಇದಕ್ಕೆ ಮೂಲ ಕಾರಣ ವಿರಾಟ್​ ಕೊಹ್ಲಿಗೆ ಬಂದಿದ್ದ ಭದ್ರತಾ ಬೆದರಿಕೆ. ವಿರಾಟ್‌ ಕೊಹ್ಲಿಗೆ ಭದ್ರತಾ ಬೆದರಿಕೆ ಇರುವ ಕಾರಣ ಆರ್​ಸಿಬಿ ಸುದ್ದಿಗೋಷ್ಟಿ ನಡೆಸಿಲ್ಲ ಎಂಬ ಮಾತುಗಳು ಕೇಳಿಬಂದಿವೆ.

  ನಾಲ್ವರು ಉಗ್ರರ ಬಂಧನ..!

  ಗುಜರಾತ್​ ಪೊಲೀಸರು ಸೋಮವಾರದಂದು ಭಯೋತ್ಪಾದಕರು ಎಂಬ ಶಂಕೆ ಮೇಲೆ ನಾಲ್ವರನ್ನು ಅರೆಸ್ಟ್​ ಮಾಡಿದ್ದರು. ಗುಜರಾತ್​​ ವಿಮಾನ ನಿಲ್ದಾಣದಲ್ಲಿ ಅವರನ್ನು ಬಂಧಿಸಿದರು. ವಿಚಾರಣೆ ನಡೆಸಿದ ಬಳಿಕ ಬಂಧಿತರ ಅಡುಗು ತಾಣವನ್ನು ಪತ್ತೆಹಚ್ಚಿದ್ದಾರೆ. ಈ ವೇಳೆ ವಿಡಿಯೋಗಳು, ಪಠ್ಯ ಸಂದೇಶಗಳು ಹಾಗೂ ಶಸ್ತ್ರಾಸ್ತ್ರ ವಶಕ್ಕೆ ಪಡೆದುಕೊಂಡಿದ್ದಾರೆ.

  Read More..; ಪೆನ್ ಡ್ರೈವ್ ಪ್ರಕರಣ : ಪುತ್ರ ಪ್ರಜ್ವಲ್ ಬಗ್ಗೆ ಹಾಸನದಲ್ಲಿ ರೇವಣ್ಣ ಪ್ರತಿಕ್ರಿಯೆ

  ಈ ವಿಚಾರವನ್ನು ರಾಜಸ್ಥಾನ ರಾಯಲ್ಸ್‌ ಮತ್ತು ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡಕ್ಕೆ ತಿಳಿಸಲಾಗಿತ್ತು. ಅಹಮದಾಬಾದ್‌ಗೆ ವಿರಾಟ್‌ ಕೊಹ್ಲಿ ಬಂದ ನಂತರ ಈ ವಿಚಾರವನ್ನು ತಿಳಿಸಲಾಗಿದೆ. ವಿರಾಟ್‌ ಕೊಹ್ಲಿ ದೇಶದ ಸಂಪತ್ತು ಮತ್ತು ಅವರ ಭದ್ರತೆ ನಮ್ಮ ಅತ್ಯಂತ ಆದ್ಯತೆಯಾಗಿದೆ ಎಂದು ಪೊಲೀಸ್ ಅಧಿಕಾರಿ ವಿಜಯ್ ಸಿಂಗ್ ಜ್ವಾಲಾ ಹೇಳಿದರು.

  Continue Reading

  DAKSHINA KANNADA

  ಮನೆಯಲ್ಲಿ ಸೊಳ್ಳೆ ಕಾಟವೇ? ಈ ಗಿಡಗಳನ್ನು ನೆಟ್ಟರೆ ಸೊಳ್ಳೆ ನಿಮ್ಮ ಹತ್ತಿರ ಸುಳಿಯುವುದಿಲ್ಲ

  Published

  on

  ಮಂಗಳೂರು: ಮಳೆಗಾಲದಲ್ಲಿ ಸೊಳ್ಳೆಗಳ ಕಾಟ ವಿಪರೀತವಾಗಿರುತ್ತದೆ. ರಾತ್ರಿಯಾದರೆ ಸಾಕು, ಕಿವಿ ಬಳಿ ಗುಯಿಂಗುಟ್ಟುತ್ತ ನಿದ್ದೆ ಮಾಡಲು ಕೂಡ ಬಿಡುವುದಿಲ್ಲ. ಸೊಳ್ಳೆಗಳ ಸಂತತಿಯು ವಿಪರೀತವಾದರೆ ಇನ್ನಿತ್ತರ ಆರೋಗ್ಯ ಸಮಸ್ಯೆಗಳಿಗೂ ದಾರಿ ಮಾಡಿಕೊಡುತ್ತವೆ. ಸೊಳ್ಳೆ ಕಚ್ಚಿದರೆ ಡೆಂಗ್ಯೂ ಮಲೇರಿಯಾ, ಚಿಕನ್‌ ಗುನ್ಯಾದಂಥಹ ಕಾಯಿಲೆಗಳು ಬರುತ್ತವೆ.

  ಸೊಳ್ಳೆ ಏನಾದರೂ ಕಚ್ಚಿ ಬಿಟ್ಟರೆ ಆ ಜಾಗವು ಊದಿಕೊಂಡು ತುರಿಕೆ ಆರಂಭವಾಗಿ ಚರ್ಮದ ಗಂಭೀರ ಸಮಸ್ಯೆಗೆ ಕಾರಣವಾಗಬಹುದು. ಹೆಚ್ಚಿನವರು ಸೊಳ್ಳೆ ಪರದೆ, ಕಾಯಿಲ್, ಕ್ರೀಮ್ ಹೀಗೆ ನಾನಾ ರೀತಿಯಲ್ಲಿ ತಮ್ಮನ್ನು ರಕ್ಷಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ ಮನೆಯ ಸುತ್ತ ಮುತ್ತ ಈ ಗಿಡಗಳನ್ನು ನೆಟ್ಟರೆ ಸೊಳ್ಳೆಗಳು ನಿಮ್ಮ ಹತ್ತಿರವೇ ಸುಳಿಯುವುದಿಲ್ಲ.

  ಸೊಳ್ಳೆಗಳಿಂದ ರಕ್ಷಿಸಲು ಹೀಗೆ ಮಾಡಿ:

  • ಸೊಳ್ಳೆಗಳನ್ನು ಓಡಿಸಲು ಸುಲಭ ಉಪಾಯವೆಂದರೆ ಮನೆಯ ಸುತ್ತ ಮುತ್ತ ತುಳಸಿ ಮತ್ತು ಪುದೀನ ಸಸ್ಯವನ್ನು ನೆಡುವುದು. ಈ ಸಸ್ಯದ ಎಲೆಯಲ್ಲಿರುವ ಪರಿಮಳದಿಂದ ಸೊಳ್ಳೆಗಳು ಮತ್ತು ಕೀಟಗಳು ಮನೆಯೊಳಗೆ ಬರುವುದಿಲ್ಲ.
  • ರೋಸರಿ ಸಸ್ಯವನ್ನು ಮನೆಯ ಹಾಸುಮಾಸಿನಲ್ಲಿ ನೆಡುವುದರಿಂದ ಸೊಳ್ಳೆಗಳು ಬರುವುದಿಲ್ಲ. ಇದರ ಪರಿಮಳಯುಕ್ತವಾದ ಸುವಾಸನೆಗೆ ಈ ಸೊಳ್ಳೆಗಳು ಹಾಗೂ ಕೀಟಗಳು ದೂರ ಓಡುತ್ತವೆ.
  • ಲ್ಯಾವೆಂಡರ್ ಸಸ್ಯವು ಕೂಡ ಸೊಳ್ಳೆಗಳ ಕಾಟಕ್ಕೆ ಪ್ರಯೋಜನಕಾರಿಯಾಗಿದೆ. ಈ ಎಲೆಗಳಲ್ಲಿ ಕಂಡುಬರುವ ಎಸೆನ್ಶಿಯಲ್ ಆಯಿಲ್ ಪರಿಮಳದಿಂದ ಸೊಳ್ಳೆಗಳಿಂದ ಸುಲಭವಾಗಿ ಮುಕ್ತಿ ಪಡೆಯಬಹುದಾಗಿದೆ.
  • ಮನೆಯ ಮುಂದೆ ಚೆಂಡು ಹೂವಿನ ಸಸ್ಯವನ್ನು ನೆಡುವುದರಿಂದ ನೋಡುವುದಕ್ಕೆ ಸುಂದರವಾಗಿ ಕಾಣುವುದಲ್ಲದೇ ಸೊಳ್ಳೆಗಳನ್ನು ಸುಲಭವಾಗಿ ಓಡಿಸಬಹುದು. ಈ ಹೂವಿನ ಸುವಾಸನೆಯು ಸೊಳ್ಳೆಗಳಿಗೆ ತೊಂದರೆ ಉಂಟುಮಾಡಿ ಅವುಗಳನ್ನು ಓಡಿಸುತ್ತವೆ.
  Continue Reading

  LATEST NEWS

  Trending