Connect with us

    DAKSHINA KANNADA

    ಮಂಗಳೂರು : ಖಾಸಗಿ ಬಸ್ಸಿಗೆ ‘ಇಸ್ರೇಲ್‌’ ಹೆಸರು; ತೀವ್ರ ಆಕ್ಷೇಪದ ಬಳಿಕ ‘ಜೆರುಸಲೇಂ’ ಎಂದು ಬದಲಾಯಿಸಿದ ಮಾಲಕ

    Published

    on

    ಮಂಗಳೂರು: ‘ಇಸ್ರೇಲ್ ಟ್ರಾವೆಲ್ಸ್’ ಎಂಬ ಹೆಸರು ಮುಲ್ಕಿ-ಮೂಡುಬಿದಿರೆ ಸಂಚರಿಸುವ ಖಾಸಗಿ ಬಸ್ಸಿಗೆ ಇಟ್ಟಿದಕ್ಕೆ ಅಕ್ಷೇಪ ವ್ಯಕ್ತವಾದ ಹಿನ್ನಲೆಯಲ್ಲಿ ಆ ಹೆಸರನ್ನೇ ಬದಲಾಯಿಸಲಾಗಿದೆ.


    ಇಸ್ರೇಲ್‌ನಲ್ಲಿ ಸುಮಾರು 12 ವರ್ಷಗಳಿಂದ ಉದ್ಯೋಗದಲ್ಲಿರುವ ಮೂಲತಃ ಕಟೀಲಿನವರಾದ ಲೆಸ್ಟರ್ ಕಟೀಲು ಅವರು ಮಂಗಳೂರಿನಲ್ಲಿ ಬಸ್ ಖರೀದಿಸಿ ಅದಕ್ಕೆ ‘ಇಸ್ರೇಲ್ ಟ್ರಾವೆಲ್ಸ್’ ಎಂದು ಹೆಸರಿಟ್ಟಿದ್ದರು. ಇತ್ತೀಚಿಗೆ ಇಸ್ರೇಲ್ ಮತ್ತು ಪ್ಯಾಲೆಸ್ತೀನ್ ನಡುವಿನ ಸಂಘರ್ಷ ಉಂಟಾಗಿದ್ದ ಹಿನ್ನಲೆಯಲ್ಲಿ ಕೆಲವರು ‘ಇಸ್ರೇಲ್ ಟ್ರಾವೆಲ್ಸ್’ ಹೆಸರಿಗೆ ವಿರೋಧ ವ್ಯಕ್ತಪಡಿಸಿ ಸಾಮಾಜಿಕ ಜಾಲತಾಣಗಳಲ್ಲಿ ಟೀಕಿಸಿದ್ದರು.
    ಈ ಬಗ್ಗೆ ಪ್ರತಿಕ್ರಿಯಿಸಿದ ಲೆಸ್ಟರ್ “ಇಸ್ರೇಲ್ನಲ್ಲಿ ಕೆಲಸ ಮಾಡಿದ ಹಾಗೂ ಆ ದೇಶದ ವ್ಯವಸ್ಥೆಯನ್ನು ನೋಡಿ ಅಭಿಮಾನದಿಂದ ಬಸ್ಸಿಗೆ ಇಸ್ರೇಲ್ ಹೆಸರಿಟ್ಟಿದ್ದೆ. ಇದಕ್ಕೆ ಆಕ್ಷೇಪ ವ್ಯಕ್ತವಾದುದರಿಂದ ಬೇಸರವಾಗಿ ಬಸ್ ಹೆಸರು ಬದಲಿಸಿದ್ದೇನೆ. ಜೇರುಸಲೆಂ ಪವಿತ್ರ ಭೂಮಿ. ಅದು ಇಸ್ರೇಲ್‌ನಲ್ಲಿ ಇದೆ” ಎಂದರು.
    ‘ಇಸ್ರೇಲ್ ಟ್ರಾವೆಲ್ಸ್’ ಹೆಸರಿಗೆ ವಿರೋಧ ವ್ಯಕ್ತವಾಗಿರುವುದು, ಪೊಲೀಸರ ಗಮನಕ್ಕೆ ಬಂದಿದ್ದು, ಮುಂದೆ ದ್ವೇಷ ಹೊರಡುವುದು ಬೇಡವೆಂಬ ಕಾರಣಕ್ಕೆ ಪೊಲೀಸರು ಬಸ್‌ನ ಮಾಲಿಕನಿಗೆ ಹೆಸರು ಬದಾಲಾಯಿಸಲು ಸೂಚನೆ ನೀಡಿದ್ದರು. ಹಾಗಾಗಿ ಲೆಸ್ಟರು ‘ಜೇರುಸಲೆಂ ಟ್ರಾವೆಲ್ಸ್’ ಎಂದು ಹೆಸರಿಟ್ಟಿದ್ದಾರೆ.

    DAKSHINA KANNADA

    ಉಪನ್ಯಾಸಕನಿಂದ ದ್ವೇಷದ ಉಪನ್ಯಾಸ.!? ಅರುಣ್ ಉಳ್ಳಾಲ ವಿರುದ್ದ ಕೇಸ್.!

    Published

    on

    ಮಂಗಳೂರು : ಆಗ್ನೆಸ್ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕರಾಗಿ ದುಡಿಯುತ್ತಿರುವ ಉಪನ್ಯಾಸಕ ಅರುಣ್ ಉಳ್ಳಾಲ ವಿರುದ್ದ ಮಂಗಳೂರು ಸೆನ್‌ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಾಗಿದೆ. ಉಳ್ಳಾಲದ ಕಾಪಿಕಾಡು ಉಮಾಮಹೇಶ್ವರಿ ದೇವಸ್ಥಾನದ ನವರಾತ್ರಿ ಉತ್ಸವದಲ್ಲಿ ಮಾಡಿದ ದ್ವೇಷದ ಭಾಷಣಕ್ಕೆ ಸಂಬಂಧಿಸಿ ಈ ದೂರು ದಾಖಲಾಗಿದೆ.

    ಕಾರ್ಯಕ್ರಮದಲ್ಲಿ ಹಿಂದೂ ಧಾರ್ಮಿಕ ಉಪನ್ಯಾಸ ನೀಡುತ್ತಿದ್ದ ಅರುಣ್ ಉಳ್ಳಾಲ ಅವರು ಕ್ರೈಸ್ತರು ಹಾಗೂ ಮುಸ್ಲಿಂರ ವಿರುದ್ಧ ದ್ವೇಷ ಭಾಷಣ ಮಾಡಿದ್ದರು. ಹಿಂದೂಗಳು ಹಿಂದೂಗಳಿಗೆ ಸೇರಿದ ಶಾಲೆಗೆ ಮಕ್ಕಳನ್ನು ಸೇರಿಸಬೇಕು. ಹಿಂದೂಗಳಿಗೆ ಸೇರಿದ ಹಾಲ್‌ಗಳಲ್ಲೇ ಮದುವೆ ಆಗಬೇಕು ಎಂಬಿತ್ಯಾದಿ ರೀತಿಯ ಮಾತುಗಳನ್ನು ಆಡಿದ್ದರು.

    ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ್ದು, ಸಾರ್ವಜನಿಕವಾಗಿ ತೀವ್ರ ಟೀಕೆಗೆ ಗುರಿಯಾಗಿತ್ತು. ಕ್ರಿಶ್ಚಿಯನ್ ಸಂಸ್ಥೆಯಲ್ಲೇ ವಿದ್ಯಾಭ್ಯಾಸ ಮಾಡಿ, ಕ್ರಿಶ್ಚಿಯನ್ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿರುವ ಅರುಣ್ ಉಳ್ಳಾಲ ಅವರ ಈ ಹೇಳಿಕೆ ಎಷ್ಟು ಸರಿ? ಎಂದು ಜನರು ಪ್ರಶ್ನೆ ಮಾಡಿದ್ದರು.  ಅರುಣ್ ಉಳ್ಳಾಲ ಅವರು ಕೆಲಸ ಮಾಡುತ್ತಿರುವ ಆಗ್ನೆಸ್ ಕಾಲೇಜು ಆಡಳಿತ ಮಂಡಳಿ ಇವರನ್ನು ಕೆಲಸದಿಂದ ವಜಾ ಮಾಡಬೇಕೆಂಬ ಒತ್ತಾಯ ಕೂಡ ಮಾಡಲಾಗಿದೆ.  ಇದೀಗ ಅರುಣ್ ಉಳ್ಳಾಲರ ಭಾಷಣ ವಿವಾದವಾಗುತ್ತಿದ್ದಂತೆ ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

    ಇದನ್ನೂ ಓದಿ : ಸಂಸದ ಕೋಟ ಹೆಸರಿನಲ್ಲಿ ನಕಲಿ ಖಾತೆ; ಹಣಕ್ಕೆ ಬೇಡಿಕೆ ಇಟ್ಟ ಕಿಡಿಗೇಡಿಗಳು

    ಅರುಣ್ ಉಳ್ಳಾಲ ಅವರ ವಿರುದ್ಧ ಸೆನ್‌ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗುತ್ತಿದ್ದಂತೆ ವಿಹೆಚ್‌ಪಿ ಮುಖಂಡ ಶರಣ್ ಪಂಪ್‌ವೆಲ್‌ ಅರುಣ್ ಗೆ  ಬೆಂಬಲ ಸೂಚಿಸಿದ್ದಾರೆ. ನಾವು ನಿಮ್ಮ ಜೊತೆಗೆ ಇದ್ದೇವೆ ಎಂಬ ಸಂದೇಶವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

    Continue Reading

    DAKSHINA KANNADA

    ಪುತ್ತೂರು: ಪಿಕಪ್ ಗುದ್ದಿ ರಿಕ್ಷಾ ಪಲ್ಟಿ – ಹಲವರಿಗೆ ಗಾಯ

    Published

    on

    ಪುತ್ತೂರು: ನಿಧಾನವಾಗಿ ಚಲಿಸುತ್ತಿದ್ದ ರಿಕ್ಷಾಕ್ಕೆ ಹಿಂದಿನಿಂದ ಪಿಕಪ್ ಡಿಕ್ಕಿಯಾಗಿ ಹಲವರಿಗೆ ಗಾಯವಾದ ಘಟನೆ ಪುತ್ತೂರು ಉಪ್ಪಿನಂಗಡಿ ರಸ್ತೆಯ ಪಡೀಲ್ ಜಂಕ್ಷನ್‌ನಲ್ಲಿ ನಡೆದಿರುವುದು ತಿಳಿದು ಬಂದಿದೆ.

     

    ಇದನ್ನೂ ಓದಿ; ಉಳ್ಳಾಲ: ನಾಪತ್ತೆಯಾದ ವ್ಯಕ್ತಿ ಪಾಳು ಬಿದ್ದ ಬಾವಿಯಲ್ಲಿ ಶವವಾಗಿ ಪತ್ತೆ…!

    ಉಪ್ಪಿನಂಗಡಿ ಕಡೆಗೆ ಹೋಗುತ್ತಿದ್ದ ಪಿಕಪ್ ಎದುರಿನ ರಿಕ್ಷಾಕ್ಕೆ ಡಿಕ್ಕಿಯಾಗಿದೆ. ಡಿಕ್ಕಿಯ ರಭಸಕ್ಕೆ ರಿಕ್ಷಾ ಪಲ್ಟಿಯಾಗಿದ್ದು, ಗಾಯಾಳುಗಳನ್ನು ಸ್ಥಳೀಯರು ಆಸ್ಪತ್ರೆಗೆ ಸೇರಿಸಿದ್ದಾರೆ. ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    Continue Reading

    DAKSHINA KANNADA

    ಉಳ್ಳಾಲ: ನಾಪತ್ತೆಯಾದ ವ್ಯಕ್ತಿ ಪಾಳು ಬಿದ್ದ ಬಾವಿಯಲ್ಲಿ ಶವವಾಗಿ ಪತ್ತೆ…!

    Published

    on

    ಉಳ್ಳಾಲ: ನಾಪತ್ತೆಯಾಗಿದ್ದ ಅವಿವಾಹಿತ ವ್ಯಕ್ತಿಯ ಮೃತದೇಹ ಇಂದು (ಅ.6) ಪಾಳು ಬಿದ್ದ ಬಾವಿಯೊಂದರಲ್ಲಿ ಪತ್ತೆಯಾದ ಘಟನೆ ಕೊಲ್ಯ, ಕುಜುಮಗದ್ದೆಯಲ್ಲಿ ನಡೆದಿದೆ.


    ಪ್ರಸಾದ್ (44) ಮೃತ ದುರ್ದೈವಿ. ಪೈಂಟರ್ ವೃತ್ತಿ ನಡೆಸುತ್ತಿದ್ದ ಪ್ರಸಾದ್ ಕೆಲ ದಿನಗಳಿಂದ ಖಿನ್ನತೆಗೊಳಗಾಗಿದ್ದರೆಂದು ಹೇಳಲಾಗಿದೆ. ಮನೆಯಲ್ಲಿ ಮೊಬೈಲ್ ಫೋನ್ ಬಿಟ್ಟು ಹೋದ ಪ್ರಸಾದ್ ಮತ್ತೆ ಸಂಪರ್ಕಕ್ಕೆ ಸಿಗದೆ ನಿನ್ನೆ ಮಧ್ಯಾಹ್ನ ನಾಪತ್ತೆಯಾಗಿದ್ದರು.
    ಇಂದು ಬೆಳಿಗ್ಗೆ ಮನೆ ಹತ್ತಿರದ ಪಾಳು ಬಿದ್ದ ಬಾವಿಯ ಬಳಿ ಪಾದರಕ್ಷೆ ದೊರೆತಿದ್ದು ಈ ಹಿನ್ನೆಲೆಯಲ್ಲಿ ಇಣುಕಿ ನೋಡಿದಾಗ ಪ್ರಸಾದ್ ಬಾವಿಯೊಳಗೆ ಶವವಾಗಿ ಪತ್ತೆಯಾಗಿದ್ದಾರೆ. ಘಟನಾ ಸ್ಥಳಕ್ಕೆ ಬಂದ ಅಗ್ನಿ ಶಾಮಕ ದಳದ ಸಿಬ್ಬಂದಿ ಮೃತದೇಹವನ್ನು ಮೇಲಕ್ಕೆತ್ತಿದ್ದಾರೆ. ಪ್ರಸಾದ್, ತಾಯಿ, ತಂದೆ, ಇಬ್ಬರು ಸಹೋದರರು ಮತ್ತು ಓರ್ವ ಸಹೋದರಿಯನ್ನು ಅಗಲಿದ್ದಾರೆ.
    ಪ್ರಸಾದ್ ಆತ್ಮಹತ್ಯೆ ಮಾಡಿಕೊಂಡಿರಬೇಕು ಎಂದು ಶಂಕಿಸಲಾಗಿದ್ದು, ಉಳ್ಳಾಲ ಪೊಲೀಸರು ಮೃತದೇಹವನ್ನ ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.

    Continue Reading

    LATEST NEWS

    Trending