Connect with us

  DAKSHINA KANNADA

  ಹಳ್ಳ ಹಿಡಿಯುತ್ತಿದೆಯೇ ಮಂಗಳೂರು ಐಷಾರಾಮಿ ಕಾರು ಮಾರಾಟ ಪ್ರಕರಣ..!  ?

  Published

  on

   

  ಹಳ್ಳ ಹಿಡಿಯುತ್ತಿದೆಯೇ ಮಂಗಳೂರು ಐಷಾರಾಮಿ ಕಾರು ಮಾರಾಟ ಪ್ರಕರಣ..!  ?

  ಮಂಗಳೂರು: ಸಿಟಿ ಕ್ರೈಂ ಬ್ರಾಂಚ್‌ನಲ್ಲಿ ನಡೆದಿದೆ ಎನ್ನಲಾದ ಕಾರು ಮಾರಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಮತ್ತಿಬ್ಬರು ಅಧಿಕಾರಿಗಳನ್ನು ರಾಜ್ಯ ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್‌ ಅಮಾನತು ಮಾಡಿದ್ದಾರೆ.

  ಸಿಸಿಬಿಯಲ್ಲಿದ್ದ ಅಶಿತ್‌ ಡಿ ಸೋಜಾ ಮತ್ತು ರಾಜಾರನ್ನು ಅಮಾನತು ಮಾಡಲಾಗಿದೆ. ಎರಡು ದಿನಗಳ ಹಿಂದೆಯಷ್ಟೇ ಸಿಸಿಬಿಯಲ್ಲಿ ಎಸ್ಐ ಆಗಿದ್ದ ಕಬ್ಬಾಳ್ ರಾಜ್ ಹಾಗೂ ಎಕನಾಮಿಕ್, ನಾರ್ಕೊಟಿಕ್ ಹಾಗೂ ಅಪರಾಧ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ರಾಮಕೃಷ್ಣ ಅವರನ್ನು ಅಮಾನತು ಮಾಡಲಾಗಿತ್ತು. ಒಟ್ಟು ನಾಲ್ವರನ್ನು ಅಮಾನತು ಮಾಡಿದಂತಾಗಿದೆಇದೀಗ ಕಾರು ಮಾರಾಟ ಪ್ರಕರಣ ಹೊಸ ತಿರುವು ಪಡೆದುಕೊಳ್ಳುತ್ತಿದೆ. ಅಮಾನತಿಗೆ ಒಳಗಾಗಿರುವ ಅಶಿತ್‌ ಡಿ ಸೋಜಾ ವಿನಾ ಕಾರಣ ತನ್ನನ್ನು ಅಮಾನತು ಮಾಡಿದ್ದಾರೆ  ತಾನು ಹೈಕೋರ್ಟ್ ಮೆಟ್ಟಿಲು ಹತ್ತುವುದಾಗಿ ಹೇಳಿದ್ದಲ್ಲದೆ  ತಾನು ಕಾರು ಮಾರಾಟ ಪ್ರಕರಣ ಸಂದರ್ಭ  ಅಕ್ಟೋಬರ್ ತಿಂಗಳಿನಲ್ಲಿ ಕೊರೊನಾ ಪೀಡಿತರಾಗಿ ಆಸ್ಪತ್ರೆಯಲ್ಲಿ ಮಲಗಿದ್ದೆ.ಅಕ್ಟೋಬರ್ 6ರಂದು ಅಥೆನಾ ಆಸ್ಪತ್ರೆಗೆ ದಾಖಲಾಗಿದ್ದ ತನ್ನನ್ನು ಹೆಚ್ಚಿನ ಚಿಕಿತ್ಸೆಗಾಗಿ ಎಜೆ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆಸ್ಪತ್ರೆಯಿಂದ ಬಿಡುಗಡೆಯಾದ ಬಳಿಕ 14 ದಿನ ಕ್ವಾರಂಟೈನ್‌ಗಾಗಿ ಮನೆಯಲ್ಲೇ ಇದ್ದೆ.

  ಅಕ್ಟೋಬರ್ 6ರಿಂದ ನವೆಂಬರ್ 6ರವರೆಗೆ ಸಿಸಿಬಿ ಕೆಲಸಕ್ಕೆ ರಜೆ ಹಾಕಿದ್ದೆ. ಬಳಿಕ ಕರ್ತವ್ಯಕ್ಕೆ ಹಾಜರಾಗಿದ್ದು ನವೆಂಬರ್‌ 6ಕ್ಕೆ, ಈ ನಡುವೆ ಆರೋಪಿಗಳನ್ನು ವಶಕ್ಕೆ ಪಡೆದು ಬಂಧಿಸಿ, ಅವರಲ್ಲಿದ್ದ ಕಾರುಗಳನ್ನು ಸೀಝ್‌ ಮಾಡಲಾಗಿತ್ತು. ಜಾಗ್ವರ್‌ ಕಾರನ್ನು ಮಾರಾಟ ಮಾಡಲಾಗಿತ್ತು. ಆದರೆ ತಾನು ಈ ಪ್ರಕರಣದಲ್ಲಿ ಶಾಮೀಲಾಗಿಲ್ಲ ಎಂದವರು ಸ್ಪಷ್ಟನೆ ನೀಡಿದ್ದಾರೆ.

  ಈ ಘಟನೆ ನಡೆಯುವ ಹೊತ್ತಿನಲ್ಲಿ ನಾನು ಸಿಸಿಬಿಯಲ್ಲಿ ಇರಲಿಲ್ಲ. ನನ್ನನ್ನು ಪ್ರಕರಣದಲ್ಲಿ ಸಿಲುಕಿಸಿದ್ದಾರೆ. ಯಾರದೋ ಒತ್ತಡಕ್ಕೆ ಒಳಗಾಗಿ ಮೇಲಧಿಕಾರಿಗಳು ಕೆಲಸ ಮಾಡಿದ್ದಾರೆ.

  ಒಂದು ತಿಂಗಳು ನಾನು ಸಿಸಿಬಿಯಲ್ಲಿ ಕರ್ತವ್ಯದಲ್ಲಿ ಇರದೇ ಇರುವುದಕ್ಕೆ ನನ್ನ ಬಳಿ ದಾಖಲೆ ಇದೆ. ಈ ಬಗ್ಗೆ ನಾನು ನ್ಯಾಯಾಲಯದಲ್ಲಿ ಹೋರಾಟ ಮಾಡುತ್ತೇನೆ.

  ಮೇಲಧಿಕಾರಿಗಳ ಗಮನಕ್ಕೂ ಈ ವಿಚಾರವನ್ನು ತಂದಿದ್ದೇನೆ ಎಂದು ಆಶಿತ್‌ ಡಿ ಸೋಜಾ ಹೇಳಿದ್ದಾರೆ. ಇದೀಗ ಪೊಲೀಸ್ ಇಲಾಖೆಯ ಒಳಗಿನ ಗುಟ್ಟು ಮೇಲಧಿಕಾರಿಗಳ ವಿಚಾರಣೆ ತನಕ ಹೋಗುವುದಾ ಅಥವಾ ವಿಷಯ ಎಲ್ಲಿಗೆ ತಲುಪಲಿದೆ ಅನ್ನೋದು  ನಗರದ ಜನತೆ ಕಾತರದಲ್ಲಿದ್ದಾರೆ..

  DAKSHINA KANNADA

  ತುಳುನಾಡನ್ನು ಹಾಡಿ ಹೊಗಳಿದ ಸುನಿಲ್ ಶೆಟ್ಟಿ.. ಮಾವನ ಪೋಸ್ಟನ್ನು ರಿ ಪೋಸ್ಟ್‌ ಮಾಡಿ ಗಮನ ಸೆಳೆದ ಕೆ.ಎಲ್ ರಾಹುಲ್

  Published

  on

  ಮಂಗಳೂರು: ಬಾಲಿವುಡ್ ನಟ ಸುನಿಲ್ ಶೆಟ್ಟಿ ತುಳುನಾಡನ್ನು ಹಾಡಿ ಹೊಗಳಿದ್ದಾರೆ.  ಇನ್ಸ್ಟಾಗ್ರಾಮ್ ಖಾತೆಯಲ್ಲಿ ತುಳುನಾಡು ಎಷ್ಟು ಸುಂದರ ಅನ್ನೋ ರೀತಿಯಲ್ಲಿ ಬರೆದು ಪೋಸ್ಟ್ ಮಾಡಿದ್ದರು. ಇದೀಗ ಆ ಪೋಸ್ಟ್ ಅನ್ನು ಅಳಿಯ ಕೆ.ಎಲ್ ರಾಹುಲ್ ರಿ ಪೋಸ್ಟ್ ಮಾಡಿದ್ದು ಎಲ್ಲರ ಗಮನ ಸೆಳೆದಿದ್ದಾರೆ.

  sunil shetty, rahul

  ಸುನಿಲ್ ಶೆಟ್ಟಿ ಕರಾವಳಿ ಮೂಲದವರಾಗಿದ್ದು ಇಲ್ಲಿನ ಆಚಾರ, ವಿಚಾರಗಳನ್ನು ಗೌರವಿಸುತ್ತಾರೆ. ಯಾವುದೇ ಭೂತಕೋಲ, ಧಾರ್ಮಿಕ ಕಾರ್ಯಕ್ರಮಗಳನ್ನು ತಪ್ಪಿಸಿಕೊಳ್ಳದೆ ತಪ್ಪದೆ ಹಾಜರಿರುತ್ತಾರೆ. ಇತ್ತೀಚೆಗೆ ಬಪ್ಪನಾಡಿನಲ್ಲಿ ನಡೆದ ಜಾತ್ರಾ ಮಹೋತ್ಸವಕ್ಕೆ ಸುನಿಲ್ ಶೆಟ್ಟಿ ಭಾಗವಹಿಸಿದ್ದರು. ಮುಂಬೈನಲ್ಲಿ ನೆಲೆಕಂಡಿದ್ದರೂ ಸುನಿಲ್ ಶೆಟ್ಟಿ ಕರಾವಳಿ ಬಗ್ಗೆ ಹೆಚ್ಚು ಅಭಿಮಾನ, ಪ್ರೀತಿ ಇಟ್ಟುಕೊಂಡಿದ್ದಾರೆ.

  ಮಗಳು ಆಥಿಯಾ ಶೆಟ್ಟಿಯನ್ನು ಕನ್ನಡದ ಹುಡುಗ ಕೆ.ಎಲ್ ರಾಹುಲ್‌ ಗೆ ಕೊಟ್ಟು ವಿವಾಹ ಮಾಡಿಕೊಡುವುದರೊಂದಿಗೆ ಕರುನಾಡಿನ ಬಾಂಧವ್ಯವನ್ನು ಮುಂದುವರಿಸಿದ್ದಾರೆ. ಇನ್ನು ಕೆ.ಎಲ್ ರಾಹುಲ್ ಕೂಡಾ ದೈವ ಭಕ್ತರಾಗಿದ್ದು, ಆಗಾಗ ಕರಾವಳಿ ಭಾಗದ ದೇವಸ್ಥಾನಗಳಿಗೆ  ಭೇಟಿ ಕೊಡುತ್ತಾರೆ.

  Read More..; ಖ್ಯಾತ ಬಾಲಿವುಡ್ ನಟ ಸುನಿಲ್ ಶೆಟ್ಟಿ ಮುಲ್ಕಿಯ ಜನಾರ್ಧನ ದೇವಸ್ಥಾನಕ್ಕೆ ಭೇಟಿ

  ಇದೀಗ ಸುನಿಲ್ ಶೆಟ್ಟಿ ಇನ್ಸ್ಟಾಗ್ರಾಮ್ ನಲ್ಲಿ ತುಳುನಾಡಿನ ಕುರಿತು ಬರೆದು ಹಾಕಿದ್ದಾರೆ. ತುಳುನಾಡು ಬಹಳ ಸುಂದರವಾಗಿದೆ. ‘ನಾನು ಹೋಟೆಲ್‌ಗೆ ಹೋಗಿದ್ದಾಗ.. ವೈಟರ್‌ಅನ್ನು ಧಣಿ ಎಂದು ಕರೆದೆ.. ಆ ವೇಳೆ ನನ್ನ ಬಳಿ ಬಂದು ಹೇಳಿ ಧಣಿ ಎಂದು ಕೇಳಿದ್ರು..ಈಗ ನಾವಿಬ್ಬರೂ ಕೂಡಾ ಶ್ರೀಮಂತರಲ್ಲ. ಒಂದು ಅಂಗಡಿ ಹೋದೆ..ಅಂಗಡಿಯವರನ್ನು ಅಣ್ಣಾ ಎಂದು ಕರೆದೆ..ಅವರು ಮರುತ್ತರಿಸಿ ಹೇಳಿ ಅಣ್ಣಾ ಎಂದು ಹೇಳಿದ್ರು. ಅಸಲಿಗೆ ನಾವು ಸಹೋದರರಲ್ಲ. ಮೀನಿನ ಮಾರ್ಕೆಟ್‌ ಗೆ ಹೋದಾಗ ಅವರನ್ನು ಅಮ್ಮಾ ಎಂದು ಕರೆದರೆ ಅವರು ಹೇಳಿ ಮಗು ಎಂದು ಹೇಳುತ್ತಾರೆ. ಅಸಲಿಗೆ ಅವರು ನನ್ನ ತಾಯಿ ಅಲ್ಲ. ಎಲ್ಲದಕ್ಕಿಂತಲೂ ಹೆಚ್ಚಾಗಿ ಇದು ನಮ್ಮ ತುಳುನಾಡಿನ ಶ್ರೀಮಂತ  ಸಂಸ್ಕೃತಿಯಾಗಿದೆ’ ಎಂದು ಬರೆದುಕೊಂಡಿದ್ದಾರೆ.

  Continue Reading

  DAKSHINA KANNADA

  ಹರೀಶ್ ಪೂಂಜಾ ಪ್ರಕರಣ : ಶಾಸಕ ಅಂತ ಸುಮ್ಮನೆ ಬಿಡಲು ಆಗುತ್ತದೆಯಾ? : ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯೆ

  Published

  on

  ಮಂಗಳೂರು : ದ.ಕ ಜಿಲ್ಲೆಗೆ ಆಗಮಿಸಿರುವ ಸಿಎಂ ಸಿದ್ಧರಾಮಯ್ಯ ವಿಮಾನ ನಿಲ್ದಾಣದಲ್ಲಿ ಹರೀಶ್ ಪೂಂಜಾ ಪ್ರಕರಣದ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ.
  ಪ್ರಕರಣದಲ್ಲಿ ಕಾಂಗ್ರೆಸ್‌ ಒತ್ತಡ ಅಂದ್ರೆ ಏನು? ಎಂದು ಪ್ರಶ್ನೆ ಮಾಡಿದ ಸಿಎಂ ಕಾನೂನು ಎಲ್ಲರಿಗೂ ಒಂದೇ ಆಗಿದ್ದು, ಹರೀಶ್ ಪೂಂಜಾ ವಿರುದ್ಧ 353 ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಇದು ಏಳು ವರ್ಷ ಜೈಲುವಾಸದ ಶಿಕ್ಷೆ ಸಿಗಬಹುದಾದ ಕೇಸ್ ಆಗಿದ್ದು, ಬೇಲೇಬಲ್‌ ಪ್ರಕರಣ ಅಲ್ಲ ಎಂದಿದ್ದಾರೆ.


  ಶಾಸಕ ಅಂತ ಸುಮ್ಮನೆ ಬಿಡಲು ಆಗುತ್ತದೆಯಾ? ಶಾಸಕ ಅಂದ ಮಾತ್ರಕ್ಕೆ ಪೊಲೀಸರ ಮೇಲೆ ಗಲಾಟೆ ಮಾಡಬಹುದಾ? ಎಂದು ಸಿಎಂ ಪ್ರಶ್ನೆ ಮಾಡಿದ್ದಾರೆ. ಶಾಸಕರು ಯಾರ ಪರವಾಗಿ ಗಲಾಟೆ ಮಾಡಿದ್ದಾರೆ ಅನ್ನೋದು ಇಂಪಾರ್ಟೆಂಟ್. ಹಾಗಾಗಿ ಅವರ ಮೇಲೆ ಎರಡು ಎಫ್‌ಐಆರ್ ದಾಖಲಾಗಿದೆ ಎಂದು ಹೇಳಿದ್ದಾರೆ.

  Continue Reading

  DAKSHINA KANNADA

  ಮಂಗಳೂರಿನಲ್ಲಿ ಮೊದಲ ಮಳೆಗೆ ಜೀವ ಬ*ಲಿ; ಆಟೋರಿಕ್ಷಾ ತೋಡಿಗೆ ಬಿದ್ದು ಚಾಲಕ ಸಾ*ವು

  Published

  on

  ಮಂಗಳೂರು : ಮಂಗಳೂರಿನಲ್ಲಿ ಆರಂಭಿಕ ಮಳೆಗೆ ಜೀವವೊಂದು ಬ*ಲಿಯಾಗಿದೆ. ಶುಕ್ರವಾರ ರಾತ್ರಿ ಧಾರಾಕಾರ ಮಳೆ ಸುರಿದ ಪರಿಣಾಮ ಮಂಗಳೂರಿನ ಕೊಟ್ಟಾರ ಅಬ್ಬಕ್ಕ ನಗರದಲ್ಲಿನ ತೋಡಿನಲ್ಲಿ ಭರ್ತಿ ನೀರು ತುಂಬಿ ಹರಿದಿದೆ. ರಸ್ತೆಯನ್ನೂ ಮೀರಿ ನೀರು ಹರಿಯುತ್ತಿದ್ದ ಪರಿಣಾಮ ಅದೇ ರಸ್ತೆಯಲ್ಲಿ ಸಂಚರಿಸುತ್ತಿದ್ದ ರಿಕ್ಷಾ ಉರುಳಿ ತೋಡಿಗೆ ಬಿದ್ದಿದೆ.


  ತೋಡು ಭರ್ತಿ ನೀರಿದ್ದ ಪರಿಣಾಮ ಆಟೋಚಾಲಕ ಸ್ಥಳೀಯ ನಿವಾಸಿ ದೀಪಕ್ (೪೦) ನೀರಿನಲ್ಲಿ ಮುಳುಗಿ ಮೃ*ತಪಟ್ಟಿದ್ದಾರೆ. ರಿಕ್ಷಾ ತೋಡಿನೊಳಗೆ ಮಗುಚಿ ಬಿದ್ದ ಪರಿಣಾಮ ಆಟೋ ಚಾಲಕ ದೀಪಕ್ ನೀರಿನಿಂದ ಮೇಲೆ ಬರಲಾಗದೆ ಮೃ*ತಪಟ್ಟಿರಬಹುದು.

  ಇದನ್ನೂ ಓದಿ : ಪುತ್ತೂರು : ರಸ್ತೆ ಅಪಘಾ*ತದಲ್ಲಿ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದ ವಿದ್ಯಾರ್ಥಿನಿ ಮೃ*ತ್ಯು

  ಈ ತೋಡಿಗೆ ಸರಿಯಾಗಿ ತಡೆಗೋಡೆ ನಿರ್ಮಿಸದ ಕಾರಣ ಭಾರೀ ಅನಾಹುತ ಸಂಭವಿಸಿದೆ. ಮಂಗಳೂರು ಮಹಾನಗರ ಪಾಲಿಕೆ ನಿರ್ಲಕ್ಷ್ಯವೇ ಇದಕ್ಕೆ ಕಾರಣ ಎಂದು ಸ್ಥಳೀಯರು ಆರೋಪಿಸುತ್ತಿದ್ದಾರೆ. ಇನ್ನಾದರೂ ಎಚ್ಚೆತ್ತಲ್ಲಿ ಇನ್ನಷ್ಟು ಜೀವ ಬ*ಲಿಯಾಗೋದು ತಪ್ಪಲಿದೆ.

  Continue Reading

  LATEST NEWS

  Trending