Monday, August 15, 2022

   ಖಾಸಗಿ ಕ್ಷೇತ್ರದಲ್ಲೂ ಮೀಸಲಾತಿ ಅನಿವಾರ್ಯ;ಪತ್ರಕರ್ತ ದಿನೇಶ್ ಅಮೀನ್ ಮಟ್ಟು..!   

ಖಾಸಗಿ ಕ್ಷೇತ್ರದಲ್ಲೂ ಮೀಸಲಾತಿ ಅನಿವಾರ್ಯ;ಪತ್ರಕರ್ತ ದಿನೇಶ್ ಅಮೀನ್ ಮಟ್ಟು..!   

ಮಂಗಳೂರು: ಸರಕಾರವೇ ಉದ್ಯೋಗ ನೀಡುವ ಬದಲು ಹೊರಗುತ್ತಿಗೆಯ ಆಧಾರದ ಮೇಲೆ ಉದ್ಯೋಗಿಗಳನ್ನು ನೇಮಿಸಿಕೊಳ್ಳುತ್ತಿವೆ. ಜೊತೆಗೆ ಪ್ರತಿಯೊಂದು ಕ್ಷೇತ್ರವನ್ನು ಖಾಸಗೀಕರಣಗೊಳಿಸುತ್ತಿವೆ.

ಹಾಗಾಗಿ ಮೀಸಲಾತಿಯ ಪ್ರಯೋಜನ ಅರ್ಹ ಎಲ್ಲರಿಗೂ ಲಭಿಸಬೇಕಿದ್ದರೆ ಖಾಸಗಿ ಕ್ಷೇತ್ರದಲ್ಲಿ ಮೀಸಲಾತಿ ಕಲ್ಪಿಸಬೇಕಿದೆ ಎಂದು ಪತ್ರಕರ್ತ ದಿನೇಶ್ ಅಮೀನ್ ಮಟ್ಟು ನುಡಿದರು.

ಅವರು ಮಂಗಳೂರಿನ ವಿಕಾಸ ಬಳಗವು ಸೋಮವಾರ ನಗರದ ವಿಕಾಸ ಕಚೇರಿಯಲ್ಲಿ ಏರ್ಪಡಿಸಿದ ‘ಮೀಸಲಾತಿ ಹೋರಾಟ : ಆತಂಕಗಳು, ಸಾಧ್ಯತೆಗಳು’ ಎಂಬ ವಿಷಯದಲ್ಲಿ ನಡೆದ ಸಂವಾದಗೋಷ್ಠಿಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.ಮೀಸಲಾತಿಗಾಗಿ ಪಂಚಮಸಾಲಿಗಳು ನಡೆಸುವ ಹೋರಾಟಕ್ಕೆ ಸೂಕ್ತ ನೆಲೆಗಟ್ಟಿಲ್ಲ. ಪ್ರಾಯೋಗಿಕವೂ ಅಲ್ಲ. ಅವರ ಹೋರಾಟವು ಮುಖ್ಯಮಂತ್ರಿ ಯಡಿಯೂರಪ್ಪರಿಗೆ ವಿರುದ್ಧ ಎಂಬಂತಹ ದಿಕ್ಕಿನಲ್ಲಿ ಸಾಗುತ್ತಿವೆ.

ಹಿಂದುಳಿದ ವರ್ಗಗಳ ಸುಮಾರು 101 ಜಾತಿಗಳ ಜನರು ಇದೀಗ ಅನಾಥ ಮಗುವಿನಂತಾಗಿದ್ದಾರೆ. ಪ್ರಬಲ ಜಾತಿಯ ಮಧ್ಯೆ ಒಡಕು ಸೃಷ್ಟಿಸುವ ಪ್ರಯತ್ನ ಸಕ್ರಿಯವಾಗಿದೆ.

ಒಳಮೀಸಲಾತಿಯ ಅನಿವಾರ್ಯತೆಯನ್ನು ಬಿಜೆಪಿ ರಾಜಕೀಯ ದಾಳವಾಗಿ ಬಳಸಿಕೊಳ್ಳುತ್ತಿವೆ. ಮುಸ್ಲಿಮರ ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ನೀಡಿಲ್ಲ.

ಹಾಗಾಗಿ ಮೀಸಲಾತಿಯಿಂದ ವಂಚಿತರಾದವರಿಗೆ ಸ್ಥಾನಮಾನ, ಉದ್ಯೋಗ ಭದ್ರತೆ, ಪ್ರಾತಿನಿಧ್ಯ ನೀಡುವ ಸಲುವಾಗಿ ಮೀಸಲಾತಿಯ ಪ್ರಮಾಣವನ್ನು ಹೆಚ್ಚಿಸಬೇಕು ಎಂದು ಮಟ್ಟು ಅಭಿಪ್ರಾಯಪಟ್ಟರು.

ಡಿವೈಎಫ್‌ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ, ದ.ಕ.ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಲುಕ್ಮಾನ್ ಬಂಟ್ವಾಳ, ಮಾಜಿ ಉಪಮೇಯರ್ ಮುಹಮ್ಮದ್ ಕುಂಜತ್ತಬೈಲ್, ರೈತ ಸಂಘದ ಯಾದವ ಶೆಟ್ಟಿ, ವಿಚಾರವಾದಿ ನರೇಂದ್ರ ನಾಯಕ್, ನ್ಯಾಯವಾದಿ ಯಶವಂತ ಮರೋಳಿ, ಸಮುದಾಯ ಸಂಘಟನೆಯ ಮುಖಂಡ ವಾಸುದೇವ ಉಚ್ಚಿಲ್, ನಿವೃತ್ತ ಪ್ರಾಂಶುಪಾಲ ಡಾ. ಇಸ್ಮಾಯಿಲ್ ಎನ್.ಮತ್ತಿತರರು ಸಂವಾದದಲ್ಲಿ ಪಾಲ್ಗೊಂಡಿದ್ದರು.

LEAVE A REPLY

Please enter your comment!
Please enter your name here

Hot Topics

ಶಿರಾಡಿ ಘಾಟ್ ಹೆದ್ದಾರಿಗೆ ಶಾಶ್ವತ ಯೋಜನೆ ರೂಪಿಸುವಂತೆ ಗಡ್ಕರಿಗೆ ಮನವಿ ಮಾಡಿದ ಸಂಸದ ಡಾ. ಹೆಗ್ಗಡೆ

ಮಂಗಳೂರು: ರಾಜಧಾನಿ ಬೆಂಗಳೂರು ಮತ್ತು ಕರಾವಳಿಯನ್ನು ಬೆಸೆಯುವ ಶಿರಾಡಿ ಘಾಟ್ ಹಾದುಹೋಗುವ ಹೆದ್ದಾರಿ ಬಗ್ಗೆ ಶಾಶ್ವತ ಯೋಜನೆ ರೂಪಿಸುವ ನಿಟ್ಟಿನಲ್ಲಿ ಕೇಂದ್ರ ಭೂಸಾರಿಗೆ ಸಚಿವ ನಿತಿನ್ ಗಡ್ಕರಿ ಜೊತೆ ಕಳೆದ ಶನಿವಾರ ದೆಹಲಿಯಲ್ಲಿ...

ಉಡುಪಿ: ಬ್ರಿಡ್ಜ್‌ ಬಳಿ ಬೈಕ್ ಇಟ್ಟು ನಾಪತ್ತೆಯಾಗಿದ್ದ ವ್ಯಕ್ತಿ ಮೃತದೇಹ ಪತ್ತೆ

ಉಡುಪಿ: ಬ್ರಹ್ಮಾವರ ತಾಲೂಕು ವ್ಯಾಪ್ತಿಯ ಮಾಬುಕಳ ಬ್ರಿಡ್ಜ್ ಬಳಿ ಬೈಕ್ ಇಟ್ಟು ನಾಪತ್ತೆಯಾಗಿದ್ದ ವ್ಯಕ್ತಿ ಮೃತದೇಹ ಪತ್ತೆಯಾಗಿದೆ.ಕೊಡಂಕೂರು ನಿವಾಸಿ ಅಶೋಕ್ ಸುವರ್ಣ(46) ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ.ಶುಕ್ರವಾರ ಮಧ್ಯಾಹ್ನದ ವೇಳೆ ಬ್ರಿಡ್ಜ್...

ಬಂಟ್ವಾಳ ಡಿವೈಎಸ್‌ಪಿ ಪ್ರತಾಪ್ ಥೋರಾಟ್‌ಗೆ 2022ರ ರಾಷ್ಟ್ರಪತಿ ಪದಕ ಘೋಷಣೆ

ಬಂಟ್ವಾಳ: ಪೊಲೀಸ್ ಇಲಾಖೆಯಲ್ಲಿನ ಉತ್ತಮ ಸೇವೆಗಾಗಿ 2022 ರ ರಾಷ್ಟ್ರಪತಿ ಪದಕವನ್ನು ಬಂಟ್ವಾಳ ಡಿವೈಎಸ್‌ಪಿ ಪ್ರತಾಪ್ ಥೋರಾಟ್ ಅವರಿಗೆ ನೀಡಲಾಗಿದೆ.ಸೆಂಟ್ರಲ್ ಕ್ರೈಂ ಬ್ರಾಂಚ್ ನ ಸಂಘಟಿತ ಅಪರಾಧ ದಳ ಬೆಂಗಳೂರಿನಲ್ಲಿ ಸುಮಾರು 6...