Connect with us

    DAKSHINA KANNADA

    ಮಂಗಳೂರು: ಈ ವರ್ಷ ಮೀನು ರಫ್ತು ಪ್ರಮಾಣ ಕುಸಿತ-ಲಾಭಂಶನೂ ಕಡಿಮೆ – ಮೀನುಗಾರರ ಅಳಲು..!

    Published

    on

    ಮತ್ಸ್ಯೋದ್ಯಮ ಕರಾವಳಿಯ ಪ್ರಮುಖ ಉದ್ಯಮಗಳಲ್ಲಿ ಒಂದಾಗಿದ್ದು, ಲಕ್ಷಾಂತರ ಜನರಿಗೆ ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಉದ್ಯೋಗಾವಕಾಶ ಕಲ್ಪಿಸುವ ಉದ್ಯಮ ಇದಾಗಿದೆ.

    ಮಂಗಳೂರು: ಮತ್ಸ್ಯೋದ್ಯಮ ಕರಾವಳಿಯ ಪ್ರಮುಖ ಉದ್ಯಮಗಳಲ್ಲಿ ಒಂದಾಗಿದ್ದು, ಲಕ್ಷಾಂತರ ಜನರಿಗೆ ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಉದ್ಯೋಗಾವಕಾಶ ಕಲ್ಪಿಸುವ ಉದ್ಯಮ ಇದಾಗಿದೆ.

    ಜತೆಗೆ ದೇಶ ವಿದೇಶಗಳ ಮಂದಿಗೆ ಪೌಷ್ಠಿಕ ಆಹಾರವಾದ ಮೀನನ್ನು ಒದಗಿಸುವ ಉದ್ಯಮ. ಹಾಗಾಗಿ ರಾಜ್ಯ ಮತ್ತು ಕೇಂದ್ರ ಸರಕಾರಗಳು ಕೂಡಾ ಈ ಉದ್ಯಮಕ್ಕೆ ಹೆಚ್ಚಿನ ಪ್ರೋತ್ಸಾಹವನ್ನು ಕೊಡುತ್ತಿವೆ.

    2022- 23 ನೇ ಸಾಲಿನ ಮೀನುಗಾರಿಕಾ ಋತು ಇದೇ ಮೇ. 31 ರಂದು ಮುಕ್ತಾಯಗೊಳ್ಳುತ್ತದೆ.

    ಮುಂದಿನ ಜೂನ್‌- ಜುಲೈ ತಿಂಗಳು ಅಂದರೆ ಒಟ್ಟು 61 ದಿನ ಮೀನುಗಾರಿಕೆಗೆ ರಜೆ.

    ಇದೀಗ ಮುಕ್ತಾಯಗೊಂಡ ಮೀನುಗಾರಿಕಾ ಋತುವಿನಲ್ಲಿ ಅಂದರೆ 2022 ಆಗಸ್ಟ್‌ನಿಂದ ಇದುವರೆಗಿನ 10 ತಿಂಗಳ ಅವದಿಯಲ್ಲಿ ಮೀನುಗಾರಿಕೆ ಉತ್ತಮವಾಗಿತ್ತು.

    ಮೀನುಗಾರಿಕೆ ಇಲಾಖೆಯ ಅಂಕಿ ಅಂಶಗಳ ಪ್ರಕಾರ ಈ ವರ್ಷ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 5,45,618.05 ಮೆಟ್ರಿಕ್‌ ಟನ್‌ ಮೀನುಗಾರಿಕೆ ನಡೆದಿದೆ.

    ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 3,33,537.05 ಮೆಟ್ರಿಕ್‌ ಟನ್‌ ಮೀನು ಲಭ್ಯವಾಗಿದೆ.

    ಇದು ಕಳೆದ ವರ್ಷಕ್ಕಿಂತ ಜಾಸ್ತಿ. 2021-22ರಲ್ಲಿ 91,812.00 ಮೆಟ್ರಿಕ್‌ ಟನ್‌, 2020-21ರಲ್ಲಿ 1,39,714.04 ಮೆಟ್ರಿಕ್‌ ಟನ್‌ ಮೀನುಗಾರಿಕೆ ನಡೆದಿದೆ.

    ಉಡುಪಿ ಜಿಲ್ಲೆಯಲ್ಲಿ 2022-23ರಲ್ಲಿ 2,12,081.00 ಮೆಟ್ರಿಕ್‌ ಟನ್‌, 2021-22 ರಲ್ಲಿ 1,80,035.00 ಮೆಟ್ರಿಕ್‌ ಟನ್‌ ಹಾಗೂ 2020-21ರಲ್ಲಿ 1,04,453.00 ಮೆಟ್ರಿಕ್‌ ಟನ್‌ ಮೀನುಗಾರಿಕೆ ನಡೆದಿತ್ತು.

    ಈ ವರ್ಷ ದಾರಾಳ ಮೀನು ಲಭಿಸಿದ್ದರೂ ಹಿಡಿದ ಮೀನಿಗೆ ನಿರೀಕ್ಷಿತ ಪ್ರಮಾಣದಲ್ಲಿ ದರ ಸಿಕ್ಕಿಲ್ಲ ಎನ್ನುವುದು ಮೀನುಗಾರರ ಅಳಲು.

    ‘ಆದರಲ್ಲೂ ವಿಶೇಷವಾಗಿ ಬಂಗುಡೆ, ಬೂತಾಯಿ, ರಾಣಿ ಮೀನು ಮತ್ತು ಚಲ್ಟ್‌ ಮೀನಿಗೆ ಹಾಗೂ ರಫ್ತು ಆಗುವ ಮೀನುಗಳಿಗೆ ದೊಡ್ಡ ಹೊಡೆತ ಬಿದ್ದಿದೆ.

    ಇದರಿಂದ ಶೇ. 30- 40 ರಷ್ಟು ಲಾಭಾಂಶ ಕಡಿಮೆಯಾಗಿದೆ’ ಎನ್ನತ್ತಾರೆ ಪರ್ಸಿನ್‌ ಮೀನುಗಾರರ ಸಂಘದ ಮಾಜಿ ಅದ್ಯಕ್ಷ ಮೋಹನ್‌ ಬೆಂಗ್ರೆ.

    ‘ಈ ವರ್ಷ ಮೀನು ರಫ್ತು ಪ್ರಮಾಣ ಕುಸಿದಿದೆ. ಹಾಗಾಗಿ ಬೆಲೆ ಕಡಿಮೆಯಾಗಿದೆ. ರಫ್ತು ಕಡಿಮೆಯಾಗಲು ನಿರ್ದಿಷ್ಠ ಕಾರಣವೇನೆಂದು ತಿಳಿದು ಬಂದಿಲ್ಲ.

    ಉಳ್ಳಾಲದಲ್ಲಿ 13 ಫಿಶ್‌ ಮಿಲ್‌ ಗಳಿದ್ದು ಅವುಗಳು ಕೂಡಾ ವರ್ಷ ಪೂರ್ತಿ ಕಾರ್ಯಾಚರಿಸಿಲ್ಲ.

    ಇದೆಲ್ಲವೂ ಮೀನಿನ ಬೆಲೆ ಕಡಿಮೆ ಆಗಲು ಕಾರಣ ಆಗಿರಬಹುದು’ ಎನ್ನುವುದು ಮೀನು ವ್ಯಾಪಾರಿ ಲೀಲಾಧರ ಕರ್ಕೇರ ಅವರ ಅಭಿಪ್ರಾಯ.

    ಇದೀಗ ಮೀನುಗಾರಿಕೆಗೆ ರಜೆಯಾಗಿದ್ದು, ಮುಂದಿನ 2023- 24 ನೇ ವರ್ಷದ ಋತುವಿನಲ್ಲಿ ದಾರಾಳ ಮೀನುಗಾರಿಕೆ ಹಾಗೂ ಉತ್ತಮ ದರ ಸಿಗ ಬಹುದೆಂಬ ಆಶಾವಾದ ಮೀನುಗಾರರದು.

    DAKSHINA KANNADA

    ಕಟಪಾಡಿಯಲ್ಲಿ ವಾಹನಗಳ ಸರಣಿ ಅಪಘಾತ; ವಾಹನಗಳು ಜಖಂ

    Published

    on

    ಕಟಪಾಡಿ: ಉಡುಪಿ ರಾಷ್ಟ್ರೀಯ ಹೆದ್ದಾರಿ 66ರ ಕಟಪಾಡಿ ಜಂಕ್ಷನ್‌ನಲ್ಲಿ ಅ.17 ರ ಗುರುವಾರ ಸರಣಿ ಅಪಘಾತ ಸಂಭವಿಸಿದೆ.


    ತಾಂತ್ರಿಕ ತೊಂದರೆಯಿಂದ ಟ್ಯಾಂಕ್‌ವೊಂದು ಕಾರು, ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಅಪಘಾತದ ಪರಿಣಾಮ ಕಟಪಾಡಿ ಜಂಕ್ಷನ್‌ನ ಸಿಸಿ ಕ್ಯಾಮರಾ ಸಹಿತ ವಾಹನಗಳು ಜಖಂಗೊಂಡಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.

    ವಾಹನಗಳು ಉಡುಪಿಯತ್ತ ತೆರಳುತ್ತಿದ್ದವು ಎಂದು ತಿಳಿದು ಬಂದಿದೆ. ಪವಾಡ ಸದೃಶವಾಗಿ ಕಾರಿನಲ್ಲಿದ್ದರೂ, ದ್ವಿಚಕ್ರ ವಾಹನ ಸವಾರ ಅಪಾಯದಿಂದ ಪಾರಾಗಿದ್ದಾರೆ. ಕಾರು ಜಖಂಗೊಂಡಿದ್ದು, ಟ್ಯಾಂಕರ್ ಸುಮಾರು ದೂರ ಚಲಿಸಿ ಮತ್ತೆ ನಿಂತಿದೆ.


    ಕಾಪು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಕೆಲಕಾಲ ವಾಹನ ಸಂಚಾರ ಅಸ್ತವ್ಯಸ್ತಗೊಂಡಿತ್ತು.

    Continue Reading

    BELTHANGADY

    ಅಪ್ರಾಪ್ತ ಬಾಲಕಿಗೆ ಕಿರುಕುಳ; ಆರೋಪಿ ಅರೇಸ್ಟ್

    Published

    on

    ಬೆಳ್ತಂಗಡಿ: ಶಾಲಾ ವಿದ್ಯಾರ್ಥಿನಿಯನ್ನು ಹಿಂಬಾಲಿಸಿ ಕೊಂಡು ಬಂದು ಮೊಬೈಲ್ ನಂಬರ್ ಕೇಳುವ ಮೂಲಕ ಆಕೆಗೆ ಕಿರುಕುಳ ನೀಡುತ್ತಿದ್ದ ಆರೋಪಿಯ ವಿರುದ್ಧ ಪೋಕ್ಸೋ ಪ್ರಕರಣ ದಾಖಲಾಗಿದೆ.

    ಬೆಳ್ತಂಗಡಿ ತಾಲೂಕಿನ ಕುಕ್ಕೇಡಿ ಗ್ರಾಮದ ಪುಲ್ಲಾಯಿ ಎನ್ನುವಲ್ಲಿ ಈ ಘಟನೆ ನಡೆದಿದೆ.

    ಬಂಟ್ವಾಳ ತಾಲೂಕಿನ ಸಜೀಪನಡು ಗ್ರಾಮದ ನಿವಾಸಿ, ಹುಲ್ಲು ಕಟಾವು ಯಂತ್ರದ ಮೆಕ್ಯಾನಿಕ್‌ ಆಗಿರುವ ಜುಮಾರ್‌ (24) ಬಂಧಿತ ಆರೋಪಿ. ಸಂಬಂಧಿ ಹಾಗೂ ನೆರೆಯ ವಿದ್ಯಾರ್ಥಿನಿಯೊಂದಿಗೆ ಬಾಲಕಿ ಕಾಲೇಜಿಗೆ ಹೋಗುತ್ತಿರುವ ವೇಳೆ ಕಳೆದ ಐದು ದಿನಗಳಿಂದ ಆರೋಪಿಯು ಬೈಕಿನಲ್ಲಿ ಹಿಂಬಾಲಿಸಿಕೊಂಡು ಹೋಗುತ್ತಿದ್ದ.

    ಬೈಕ್‌ನಲ್ಲಿ ಜೊತೆಯಾಗಿ ಬರುವಂತೆ ಒತ್ತಾಯಿಸಿದ್ದು ಮಾತ್ರವಲ್ಲದೆ, ಮೊಬೈಲ್‌ ನಂಬರ್ ಕೊಡುವಂತೆ ಕೇಳಿಕೊಳ್ಳುತ್ತಿದ್ದ.

    ಅಂತೆಯೇ ಅ. 15ರಂದು ಬೆಳಗ್ಗೆ 7.45 ಗಂಟೆಗೆ ಎಂದಿನಂತೆ ಕಾಲೇಜಿಗೆ ಹೋಗುತ್ತಿದ್ದ ವೇಳೆ ಅತ ಬೈಕ್‌ ಅನ್ನು ಚಲಾಯಿಸಿಕೊಂಡು ಮುಂದಕ್ಕೆ ಹೋಗಿ ವಾಪಸು ಹಿಂದಕ್ಕೆ ತಿರುಗಿಸಿಕೊಂಡು ಬಂದು ತೊಂದರೆ ನೀಡಿದ್ದಾಗಿ ಆರೋಪಿಸಲಾಗಿದೆ.

    ಪೋಕ್ಸೋ ಪ್ರಕರಣ ದಾಖಲಿಸಿಕೊಂಡಿರುವ ವೇಣೂರು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

    Continue Reading

    DAKSHINA KANNADA

    ವಿಧಾನ ಪರಿಷತ್‌ ಉಪ ಚುನಾವಣೆ: ದ.ಕ. ಜಿಲ್ಲಾದ್ಯಂತ ಮದ್ಯ ನಿಷೇಧ

    Published

    on

    ಮಂಗಳೂರು: ಕರ್ನಾಟಕ ವಿಧಾನ ಪರಿಷತ್‌ಗೆ ದಕ್ಷಿಣ ಕನ್ನಡ ಸ್ಥಳೀಯ ಪ್ರಾಧಿಕಾರದ ಉಪಚುನಾವಣೆಯ ಹಿನ್ನೆಲೆಯಲ್ಲಿ ದ.ಕ. ಜಿಲ್ಲೆಯಲ್ಲಿ ಅ.19ರಂದು ಸಂಜೆ 4ರಿಂದ ಅ.21ರ ಸಂಜೆ 4ರವರೆಗೆ ಹಾಗೂ ಮತ ಎಣಿಕೆಯ ದಿನವಾದ ಅ.24ರಂದು ಬೆಳಗ್ಗೆ 6ರಿಂದ ಸಂಜೆ 6 ರವರೆಗೆ ಮದ್ಯ ಮಾರಾಟವನ್ನು ನಿಷೇಧಿಸಿ ದ.ಕ. ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ಮುಲ್ಲೈ ಮುಗಿಲನ್ ಆದೇಶ ಹೊರಡಿಸಿದ್ದಾರೆ.

    Continue Reading

    LATEST NEWS

    Trending