Connect with us

    DAKSHINA KANNADA

    ಮಂಗಳೂರು : ಇಂಜಿನಿಯರಿಂಗ್ ವಿದ್ಯಾರ್ಥಿ ಸಮುದ್ರಪಾಲು

    Published

    on

    ಮಂಗಳೂರು : ಇಂಜಿನಿಯರಿಂಗ್ ವಿದ್ಯಾರ್ಥಿ ನೀರುಪಾಲಾದ ಘಟನೆ ಮಂಗಳೂರಿನಲ್ಲಿ ನಡೆದಿದೆ.  ತಿಲಕ್(21) ಮೃ*ತ ವಿದ್ಯಾರ್ಥಿ. ತಿಲಕ್ ಮುಕ್ಕದ ಖಾಸಗಿ ಕಾಲೇಜಿನಲ್ಲಿ ಓದುತ್ತಿದ್ದರು. ಶಿವಮೊಗ್ಗ ಮೂಲದವರಾದ ತಿಲಕ್ ಇಡ್ಯಾದಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು.

    ಇತರ ವಿದ್ಯಾರ್ಥಿಗಳ ಜೊತೆ ಸಮುದ್ರದಲ್ಲಿ ಈಜುತ್ತಿದ್ದಾಗ ಈ  ದುರಂ*ತ ಸಂಭವಿಸಿದೆ. ತಿಲಕ್ ಅಲೆಗಳ ಹೊಡೆತಕ್ಕೆ ಸಿಲುಕಿ ಕೊಚ್ಚಿ ಹೋಗಿದ್ದು,  ಸ್ಥಳೀಯರ ನೆರವಿನಿಂದ ಮೃ*ತದೇಹ ಮೇಲಕ್ಕೆತ್ತಲಾಯಿತು. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.

    DAKSHINA KANNADA

    ಕಡಬ: ಅಲಂಕಾರಿನಲ್ಲಿ ಹುಲಿ ಹೆಜ್ಜೆ

    Published

    on

    ಕಡಬ : ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಆಲಂಕಾರು ಪರಿಸರದಲ್ಲಿ ಮಂಗಳವಾರ (ಅ.22) ಬೆಳಗ್ಗೆ ಹುಲಿಯೊಂದು ಕಂಡುಬಂದಿದ್ದು, ಸ್ಥಳೀಯರು ಭಯಭೀತರಾಗಿದ್ದಾರೆ.

    ಅಲಂಕಾರು ಗ್ರಾಮದ ನೆಕ್ಕಿಲಾಡಿ ಬೈಲು ನೈಯಲ್ಗ ನಿವಾಸಿ ಜನಾರ್ದನ ಬಂಗೇರ ಎಂಬವರ ಮನೆಯ ಸಮೀಪ ಹುಲಿ ಕಂಡುಬಂದಿದೆ ಎನ್ನಲಾಗಿದೆ.

    ಕೂಡಲೇ ಅವರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಉಪ ವಲಯ ಅರಣ್ಯಾಧಿಕಾರಿ ಜಯಕುಮಾರ್, ಗಸ್ತು ಅರಣ್ಯ ಪಾಲಕ ರವಿಕುಮಾರ್ ಭೇಟಿ ನೀಡಿ ಪರಿಶೀಲಿಸಿದ್ದಾರೆ.

    ಸ್ಥಳ ಪರಿಶೀಲನೆ ವೇಳೆ ಸ್ಥಳದಲ್ಲಿ ಕಾಡುಪ್ರಾಣಿಯ ಹೆಜ್ಜೆ ಗುರುತು ಕಂಡುಬಂದಿದ್ದು ಅದು ಚಿರತೆಯದ್ದೋ ಅಥವಾ ಹುಲಿಯದ್ದೋ ಅನ್ನುವುದು ಪರಿಶೀಲನೆಯ ಬಳಿಕ ತಿಳಿದು ಬರಬೇಕಿದೆ ಎಂದು ಅರಣ್ಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

    Continue Reading

    DAKSHINA KANNADA

    ಪಟ್ಲ ಯಕ್ಷಾಶ್ರಯ ಯೋಜನೆ : ಫಲಾನುಭವಿಗಳಿಗೆ ಚೆಕ್ ವಿತರಣೆ

    Published

    on

    ಮಂಗಳೂರು : ಪಟ್ಲ ಸತೀಶ್ ಶೆಟ್ಟಿ ಅವರು ‘ಪಟ್ಲ ಯಕ್ಷಾಶ್ರಯ’ ಯೋಜನೆಯ ಅಡಿಯಲ್ಲಿ ಆಯ್ಕೆ ಮಾಡಿದ ಯಕ್ಷಗಾನ ಕಲಾವಿದರು ಹಾಗೂ ದೈವಾರಾಧನೆ ಕ್ಷೇತ್ರದ ದೈವ ನರ್ತಕರಿಗಾಗಿ ಗೃಹ ನಿರ್ಮಾಣ  ಕಾರ್ಯವನ್ನು ಈಗಾಗಲೇ ಮಾಡುತ್ತಿದ್ದಾರೆ.

    ಈ ನಿರ್ಮಾಣಕ್ಕಾಗಿ ಫೌಂಡೇಶನ್ ನ ಕೇಂದ್ರೀಯ ಸಮಿತಿಯ ಪದಾಧಿಕಾರಿಗಳು, ದಾನಿಗಳು ನೀಡಿದ ಸುಮಾರು 15 ಲಕ್ಷ ಮೊತ್ತವನ್ನು ಫಲಾನುಭವಿಗಳಿಗೆ ಸೋಮವಾರ(ಅ.21) ಸಂಜೆ ಫೌಂಡೇಶನ್ ನ ಆಫೀಸಿನಲ್ಲಿ ವಿತರಿಸಲಾಯಿತು.

    Continue Reading

    BANTWAL

    ಬಂಟ್ವಾಳ: ಜಯರಾಮ ಆಚಾರ್ಯರ ಅಂತಿಮ ದರ್ಶನ

    Published

    on

    ಬಂಟ್ವಾಳ:  ಹೃದಯಾಘಾತದಿಂದ ಇಹಲೋಕ ತ್ಯಜಿಸಿದ ಯಕ್ಷಗಾನದ ಖ್ಯಾತ ಹಿರಿಯ ಹಾಸ್ಯ ಕಲಾವಿದ ಜಯರಾಮ ಆಚಾರ್ಯ ಅವರ ಪಾರ್ಥಿವ ಶರೀರ ಬಂಟ್ವಾಳದ ನಿವಾಸಕ್ಕೆ ತರಲಾಗಿದೆ.

    ಅಕ್ಟೋಬರ್ 21 ರಿಂದ ಬೆಂಗಳೂರಿನಲ್ಲಿ ನಡೆಯಲಿದ್ದ ಯಕ್ಷಗಾನ ಕಾರ್ಯಕ್ರಮಕ್ಕೆ ಬೆಂಗಳೂರಿಗೆ ತೆರಳಿದ್ದ ಅವರಿಗೆ ಹೃದಯಾಘಾತವಾಗಿತ್ತು.

    67 ವರ್ಷದ ಜಯರಾಮ ಆಚಾರ್ಯ ತೆಂಕುತಿಟ್ಟಿನ ಪ್ರಸಿದ್ಧ ಹಾಸ್ಯ ಕಲಾವಿದರಾಗಿ ವಿವಿಧ ಮೇಳಗಳಲ್ಲೂ ಸೇವೆ ಸಲ್ಲಿಸಿದ್ದರು. ಅವರ ಪಾರ್ಥಿವ ಶರೀರ ಬಂಟ್ವಾಳ ನಿವಾಸಕ್ಕೆ ಆಗಮಿಸಿದ ವೇಳೆ ನೂರಾರು ಅಭಿಮಾನಿಗಳು ಆಗಮಿಸಿ ಅಂತಿಮ ದರ್ಶನ ಪಡೆದುಕೊಂಡಿದ್ದಾರೆ.

    ಯಕ್ಷಗಾನ ಕಲಾವಿದರು, ಯಕ್ಷಗಾನ ಅಭಿಮಾನಿಗಳು ಹಾಗೂ ಊರ ಗಣ್ಯರು ಆಗಮಿಸಿ ಮೃತರಿಗೆ ಸಂತಾಪ ಸೂಚಿಸಿ ಕುಟುಂಬಸ್ಥರಿಗೆ ಸಾಂತ್ವಾನ ತಿಳಿಸಿದ್ದಾರೆ. ನಮ್ಮಕುಡ್ಲ ವಾಹಿನಿ ಯಕ್ಷ ತೆಲಿಕೆ ತಂಡದ ದಿನೇಶ್ ಕೊಡಪದವು ತಂಡ ಕೂಡಾ ಜಯರಾಮ ಆಚಾರ್ಯ ಅವರ ನಿವಾಸಕ್ಕೆ ತೆರಳಿ ಅಂತಿಮ ದರ್ಶನ ಪಡದುಕೊಂಡಿದ್ದಾರೆ. ಒಬ್ಬ ಮೇರು ಮಟ್ಟದ ಯಕ್ಷಗಾನದ ಕಲಾವಿದನನ್ನು ಕಳೆದುಕೊಂಡಿರುವುದಕ್ಕೆ ದಿನೇಶ್ ಕೊಡಪದವು ಅವರು ಸಂತಾಪ ಸೂಚಿಸಿದ್ದಾರೆ

    Continue Reading

    LATEST NEWS

    Trending