Connect with us

    DAKSHINA KANNADA

    ಕುದ್ರೋಳಿ ಕ್ಷೇತ್ರಕ್ಕೆ ಜನಾರ್ದನ ಪೂಜಾರಿ ಭೇಟಿ; ದಸರಾ ಸಿದ್ಧತೆ ವೀಕ್ಷಣೆ

    Published

    on

    ಮಂಗಳೂರು: ಕುದ್ರೋಳಿ ಶ್ರೀ ಗೋರ್ಣನಾಥೇಶ್ವರ ಕ್ಷೇತ್ರದಲ್ಲಿ ಅಕ್ಟೋಬರ್ 3 ರಿಂದ 14 ರವೆಗೆ ಮಂಗಳೂರು ದಸರಾ ನಡೆಯಲಿದ್ದು, ಸಕಲ ಸಿದ್ಧತೆಗಳು ಭರದಿಂದ ಸಾಗಿದೆ. ಈ ಮೂಲಕ ದೇವಸ್ಥಾನದ ವಿದ್ಯುತ್ ದೀಪಗಳ ಅಲಂಕಾರ ಸೇರಿದಂತೆ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ವೈಭವದ ದಸರಾಗೆ ಕುದ್ರೋಳಿ ಸಿದ್ದವಾಗುತ್ತಿದೆ.

    ಈ ಸಿದ್ಧತೆಯನ್ನು ಕುದ್ರೋಳಿ ಕ್ಷೇತ್ರದ ನವೀಕರಣದ ರೂವಾರಿಯಾಗಿರುವ ಮಾಜಿ ಕೇಂದ್ರ ಸಚಿವ ಬಿ.ಜನಾರ್ದನ ಪೂಜಾರಿ ಅವರು ವೀಕ್ಷಣೆ ಮಾಡಿದ್ದಾರೆ. ಕ್ಷೇತ್ರದ ಆಡಳಿತ ಸಮಿತಿಯ ಸದಸ್ಯರುಗಳ ಜೊತೆ ಕ್ಷೇತ್ರದಲ್ಲಿ ನಡೆಯುತ್ತಿರುವ ದಸರಾ ಸಿದ್ಧತೆಯ ಬಗ್ಗೆ ಜನಾರ್ದನ ಪೂಜಾರಿ ಮಾಹಿತಿ ಪಡೆದುಕೊಂಡಿದ್ದಾರೆ.

    ಗೋಕರ್ಣನಾಥೇಶ್ವರನ ಪೂಜೆ ವೀಕ್ಷಿಸಿದ ಅವರು ಬಳಿಕ ಕ್ಷೇತ್ರದಲ್ಲಿನ ಆಂಜನೇಯ, ಸಾಯಿಬಾಬ ಮಂದಿರದಲ್ಲಿ ಪೂಜೆ ಸಲ್ಲಿಸಿದ್ದಾರೆ. ಜನಾರ್ದನ ಪೂಜಾರಿಯವರು ಆಗಮಿಸಿದ ವೇಳೆ ಕ್ಷೇತ್ರದ ಆಡಳಿತ ಸಮಿತಿಯ ಪ್ರಧಾನ ಕಾರ್ಯದರ್ಶಿ ಮಾಧವ ಸುವರ್ಣ, ಕೋಶಾಧಿಕಾರಿ ಪದ್ಮರಾಜ್ ಆರ್. ಅಭಿವೃದ್ದಿ ಸಮಿತಿ ಉಪಾಧ್ಯಕ್ಷ ಬಿ.ಜಿ.ಸುವರ್ಣ ಹಾಗೂ ಶ್ರೀ ಗೋಕರ್ಣಥಾ ಸೇವಾದಳದ ಸದಸ್ಯರು ಹಾಜರಿದ್ದರು.

    Click to comment

    Leave a Reply

    Your email address will not be published. Required fields are marked *

    DAKSHINA KANNADA

    ಐಶ್ವರ್ಯಾ ರೈಗೆ ಆರೋಗ್ಯ ಸಮಸ್ಯೆ..! ಪೋಸ್ಟ್‌ ವೈರಲ್‌..!

    Published

    on

    ಮಂಗಳೂರು :  ದಾಂಪತ್ಯ ಜೀವನದಲ್ಲಿ ಬಿರುಕು ಮೂಡಿದ ವಿಚಾರವಾಗಿ ಇತ್ತೀಚೆಗೆ ಮಾಜಿ ವಿಶ್ವ ಸುಂದರಿ ಐಶ್ವರ್ಯಾ ರೈ ಬಚ್ಚನ್‌ ಸಾಕಷ್ಟು ಸುದ್ದಿಯಾಗಿದ್ದರು. ಐಶ್ವರ್ಯಾ ರೈ ಹಾಗೂ ಅಭಿಶೇಖ್ ಬಚ್ಚನ್‌ ಡಿವೋರ್ಸ್‌ ವಿಚಾರವಾಗಿ ದಿನಕ್ಕೊಂದು ಸುದ್ದಿ ಹರಡುತ್ತಿತ್ತು. ಈ ನಡುವೆ ತನ್ನ ಸೌಂದರ್ಯದ ಕಡೆ ಗಮನ ಕೊಡುತ್ತಿದ್ದ ಐಶ್ವರ್ಯಾ ರೈ ಇದೀಗ ತೂಕ ಏರಿಸಿಕೊಂಡ ವಿಚಾರವಾಗಿ ಸುದ್ದಿಯಾಗಿದ್ದಾರೆ.

    ಐಷಾರಾಮಿ ಬ್ರಾಂಡ್ ಲೋರಿಯಲ್‌ನ ಜಾಗತಿಕ ರಾಯಭಾರಿಯಾಗಿರುವ ಐಶ್ವರ್ಯಾ ಇತ್ತೀಚೆಗೆ 2024 ರ ಫ್ಯಾಶನ್ ವೀಕ್‌ನಲ್ಲೂ ಕಾಣಿಸಿಕೊಂಡಿದ್ದರು. ಈ ವೇಳೆ ಅವರು ಧರಿಸಿದ್ದ ಕೆಂಪು ಬಣ್ಣದ ಉಡುಗೆ ಸಾಕಷ್ಟು ಚರ್ಚೆಯನ್ನು ಹುಟ್ಟು ಹಾಕಿದೆ. ಸೋಶಿಯಲ್ ಮೀಡಿಯಾದಲ್ಲಿ ಬಾಡಿ ಶೆಮಿಂಗ್ ರೀತಿಯಲ್ಲಿ ನಟಿ ಟ್ರೋಲ್ ಆಗುತ್ತಿದ್ದಾರೆ. ಪೋಸ್ಟ್ ಒಂದರಲ್ಲಿ “ನಾನು ಐಶ್ವರ್ಯ ಅವರನ್ನು ಸಾಕಷ್ಟು ವರ್ಷಗಳಿಂದ ನೋಡುತ್ತಿದ್ದೇನೆ. ಐಶ್ವರ್ಯಾ ಹಲವು ವರ್ಷಗಳಿಂದ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದು, ಇದರಿಂದಾಗಿ ಡಯೆಟ್​ಗೆ ಮಾಡುತ್ತಿಲ್ಲ, ಜೊತೆಗೆ ತೂಕ ಇಳಿಸಿಕೊಳ್ಳುವ ಯಾವುದೇ ಔಷಧಿಗಳನ್ನು ಆಕೆ ತೆಗೆದುಕೊಳ್ಳುತ್ತಿಲ್ಲ. ಆದರೆ ನಾನು ಅವರ ಆರೋಗ್ಯ ಸಮಸ್ಯೆಯ ಬಗ್ಗೆ ಬಹಿರಂಗಪಡಿಸುವುದಿಲ್ಲ” ಎಂದು ಬರೆಯಲಾಗಿದೆ. ಆದ್ರೆ ಈ ಪೋಸ್ಟ್‌ ವೈರಲ್‌ ಆಗುತ್ತಿದ್ದಂತೆ ಡಿಲೀಟ್ ಕೂಡಾ ಮಾಡಲಾಗಿದೆ.


    ಐಶ್ವರ್ಯಾ ರೈ ಕುರಿತಾದ ಇಂತಹ ವಿಚಾರಗಳು ಸುದ್ದಿಯಾಗುತ್ತಿರುವುದು ಇದೇನು ಹೊಸದಲ್ಲವಾದ್ರೂ, ಐಶ್ವರ್ಯ ತೂಕ ಹೆಚ್ಚಿಸಿಕೊಂಡಿದ್ದಾರೆ ಅನ್ನೋದು ಕೂಡಾ ಸುಳ್ಳಲ್ಲ. ಇತ್ತೀಚೆಗೆ ಅವರು ಸಾರ್ವಜನಿಕ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡಾಗ ಅವರು ದಪ್ಪವಾಗಿ ಕಾಣಿಸಿಕೊಂಡಿದ್ದು ಈ ಎಲ್ಲಾ ಚರ್ಚೆಗಳಿಗೆ ಕಾರಣವಾಗಿದೆ.

    Continue Reading

    DAKSHINA KANNADA

    ಮೊಬೈಲ್ ವಿಚಾರಕ್ಕೆ ಗಲಾಟೆ ಕೊ*ಲೆಯಲ್ಲಿ ಅಂತ್ಯ : ಆ*ರೋಪಿ ಅರೆಸ್ಟ್‌..!

    Published

    on

    ಮಂಗಳೂರು :  ತೋಟಾಬೆಂಗ್ರೆಯ ಬೊಬ್ಬರ್ಯ ದೈವಸ್ಥಾನದ ಸಮೀಪ ಸೆಪ್ಟಂಬರ್ 21 ರಂದು ನಡೆದಿದ್ದ ಕೊ*ಲೆ ಪ್ರಕರಣವನ್ನು ಭೇದಿಸುವಲ್ಲಿ ಪಣಂಬೂರು ಪೊಲೀಸರು ಯಶಸ್ವಿಯಾಗಿದ್ದಾರೆ. ಬೊಬ್ಬರ್ಯ ದೈವಸ್ಥಾನದ ಹಿಂಬದಿಯ ಸಮುದ್ರ ಕಿನಾರೆಯ ಬಳಿ ಭಾಗಲಕೋಟೆ ಮೂಲಕ 39 ವರ್ಷದ ಬಸವರಾಜ ವಡ್ಡರ್ ಅಲಿಯಾಸ್ ಮುದುಕಪ್ಪ ಎಂಬಾತನ ಕೊ*ಲೆ ನಡೆದಿತ್ತು. ಈ ಬಗ್ಗೆ ದೂರು ದಾಖಲಿಸಿಕೊಂಡಿದ್ದ ಪೊಲೀಸರು ತನಿಖೆ ನಡೆಸಿ ತೋಟಾ ಬೆಂಗ್ರೆಯ ನಿವಾಸಿಯಾಗಿರುವ ಧರ್ಮರಾಜ್ ಸುವರ್ಣ ಎಂಬಾತನನ್ನು ಬಂಧಿಸಿದ್ದಾರೆ.

    ಕೊ*ಲೆ ನಡೆಸಿ ಪರಾರಿಯಾಗಿ ಕೇರಳದ ಕೊಝಿಕೋಡ್‌ ಜಿಲ್ಲೆಯ ಚೊಂಪಾಳ ಎಂಬಲ್ಲಿ ಆ*ರೋಪಿ ಅಡಗಿಕೊಂಡಿದ್ದ. ಆ*ರೋಪಿಯ ಜಾಡು ಹಿಡಿದು ಹೋದ ಪೊಲೀಸರು ಸೆಪ್ಟಂಬರ್ 26 ನಸುಕಿನ ಜಾವ 3 ಘಂಟೆಗೆ ಆ*ರೋಪಿಯನ್ನು ಬಂಧಿಸಿದ್ದಾರೆ.  ಆ*ರೋಪಿ ಹಾಗೂ ಕೊ*ಲೆಯಾದ ಬಸವರಾಜ್ ವಡ್ಡರ್‌ ಕೆಲ ಸಮಯದಿಂದ ಸ್ನೇಹಿತರಾಗಿದ್ದರು. ಇತ್ತೀಚೆಗೆ ಧರ್ಮರಾಜ್ ಹೊಸ ಮೊಬೈಲ್ ಒಂದನ್ನು ಖರೀದಿ ಮಾಡಿದ್ದು, ಅದನ್ನು ಬಸವರಾಜ್‌ ವಡ್ಡರ್ ಉಪಯೋಗಕ್ಕೆ ಪಡೆದುಕೊಂಡಿದ್ದ. ಆದ್ರೆ ಮೊಬೈಲ್ ಹಿಂತಿರುಗಿಸದೆ ಸತಾಯಿಸಿದ್ದು, ಮೊಬೈಲ್ ಹಾಳು ಮಾಡಿದ್ದ ಎಂಬುವುದು ಧರ್ಮರಾಜ್ ಕೋಪಕ್ಕೆ ಕಾರಣವಾಗಿತ್ತು. ಈ ವಿಚಾರವಾಗಿ ಇಬ್ಬರ ನಡುವೆ ಜಗಳ ನಡೆದಿದ್ದು,  ಧರ್ಮರಾಜ್ ಕೋಪದಿಂದ ಮರದ ಸಲಾಕೆಯಿಂದ ಬಸವರಾಜ್ ವಡ್ಡರ್ ಮೇಲೆ ಹ*ಲ್ಲೆ ನಡೆಸಿದ್ದ. ಈ ವೇಳೆ ಗಂಭೀರ ಗಾಯಗೊಂಡಿದ್ದ ಬಸವರಾಜ್ ವಡ್ಡರ್ ರ*ಕ್ತಸ್ರಾವದಿಂದ ಮೃ*ತ ಪಟ್ಟಿದ್ದಾಗಿ ಪೊಲೀಸರ ತನಿಖೆಯಿಂದ ಗೊತ್ತಾಗಿದೆ. ಇದೀಗ ಧರ್ಮರಾಜ್‌ನನ್ನು  ಬಂಧಿಸಿರುವ ಪೊಲೀಸರು ಹೆಚ್ಚಿನ ವಿಚಾರಣೆಯನ್ನು ಮುಂದುವರೆಸಿದ್ದಾರೆ.

    Continue Reading

    DAKSHINA KANNADA

    ಮೂಡುಬಿದಿರೆ: ಕಾರು ಢಿಕ್ಕಿ ಹೊಡೆದು ವಿದ್ಯಾರ್ಥಿ ಸಾ*ವು

    Published

    on

    ಮೂಡುಬಿದಿರೆ: ಪರೀಕ್ಷೆ ಮುಗಿಸಿ ಮನೆಗೆ ತೆರಳುತ್ತಿದ್ದ ವಿದ್ಯಾರ್ಥಿಗೆ ಕಾರೊಂದು ಢಿಕ್ಕಿ ಹೊಡೆದು ವಿದ್ಯಾರ್ಥಿ ಮೃ*ತಪಟ್ಟ ಘಟನೆ ನಡೆದಿದೆ.


    ಪಡುಮಾರ್ನಾಡು ಗ್ರಾಪಂ ವ್ಯಾಪ್ತಿಯ ಅಚ್ಚರಕಟ್ಟೆ ನಿವಾಸಿ ರವಿ ಅವರ ಪುತ್ರ, ಮೂಡುಬಿದಿರೆ ಜೈನ ಪ್ರೌಢಶಾಲೆಯ 9ನೇ ತರಗತಿ ವಿದ್ಯಾರ್ಥಿ ಆದಿತ್ಯ ಮೃ*ತಪಟ್ಟ ವಿದ್ಯಾರ್ಥಿ.

    ಆದಿತ್ಯ ಪರೀಕ್ಷೆ ಮುಗಿಸಿ ತನ್ನ ಗೆಳೆಯರೊಡನೆ ಮನೆಗೆ ಹೊರಟಿದ್ದು ಬನ್ನಡ್ಕದಲ್ಲಿ ಬಸ್ಸಿನಿಂದಿಳಿದು ರಸ್ತೆ ದಾಟುವ ಸಂದರ್ಭದಲ್ಲಿ ವೇಗವಾಗಿ ಬರುತ್ತಿದ್ದ ಕಾರು ಢಿಕ್ಕಿ ಹೊಡೆದಿದೆ. ಢಿಕ್ಕಿ ಹೊಡೆದ ರಭಸಕ್ಕೆ ಆದಿತ್ಯ ಹೆದ್ದಾರಿಯಿಂದ ಚರಂಡಿಗೆ ಎಸೆಯಲ್ಪಟ್ಟಿದ್ದು ಈ ಸಂದರ್ಭ ಕಾರಿನವರೇ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಆದರೆ ಅಧಿಕ ರಕ್ತಸ್ರಾವವಾಗಿ ವಿದ್ಯಾರ್ಥಿ ಮೃ*ತಪಟ್ಟಿದ್ದಾನೆ. ಮೂಡುಬಿದಿರೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

    Continue Reading

    LATEST NEWS

    Trending