Connect with us

    BANTWAL

    ಯುಎಇ ಗೋಲ್ಡನ್ ವೀಸಾ ಪಡೆದು ಹೊಸ ದಾಖಲೆ ಬರೆದ ಮಂಗಳೂರಿನ ಉದ್ಯಮಿ

    Published

    on

    ಮಂಗಳೂರು: ವಿಶೇಷ ಸ್ಥಾನಮಾನವಿರುವ ವ್ಯಕ್ತಿಗಳಿಗೆ ಮಾತ್ರ ಲಭ್ಯವಾಗುವ ಯುಎಇನ ಗೋಲ್ಡನ್​ ವೀಸಾ ಇದೀಗ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ನರಿಂಗಾನ ಗ್ರಾಮದ ಉದ್ಯಮಿಯೋರ್ವ ಪಡೆದುಕೊಂಡಿದ್ದಾರೆ.


    ಯುನೈಟೆಡ್ ಅರಬ್ ಎಮಿರೇಟ್ಸ್‌ (ಯುಎಇ)ನ ಗೋಲ್ಡನ್ ವೀಸಾ ಪಡೆದವರ ಪಟ್ಟಿಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ನರಿಂಗಾನ ಗ್ರಾಮದ ಬಂಟ್ವಾಳ ತಾಲೂಕಿನ ನರಿಂಗಾನ ಗ್ರಾಮದ ಉದ್ಯಮಿ ಮಹಮ್ಮದ್ ಇಸಾಕ್ ಕುಂಞ (40) ವ್ಯಕ್ತಿ ಸೇರ್ಪಡೆಯಾಗುವ ಮೂಲಕ ಹೊಸ ದಾಖಲೆಯನ್ನು ಬರೆದಿದ್ದಾರೆ.

    ಇವರು ಕಳೆದ ಕೆಲವು ವರ್ಷಗಳಿಂದ ದುಬೈನಲ್ಲಿದ್ದು, 2022 ಜನವರಿ 25 ರಂದು ಗೋಲ್ಡನ್ ವೀಸಾ ಪಡೆದಿದ್ದಾರೆ. ಈ ವೀಸಾ 2032 ಜನವರಿ 24ಕ್ಕೆ ಮತ್ತೆ ರಿನ್ಯುವಲ್ ಆಗಲಿದೆ.

    ಇವರು ಯುಎಇಯಲ್ಲಿ ಉದ್ಯಮ ನಡೆಸಿಕೊಂಡು ಬಂದಿದ್ದ ಇವರು ಯುಎಇ ಸರ್ಕಾರದ ಗಮನ ಸೆಳೆದಿದ್ದರು. ಇವರು ಕೇವಲ 10 ವರ್ಷದಲ್ಲಿ ಯುಎಇಯಿಂದ ಗೋಲ್ಡನ್ ವೀಸಾ ಪಡೆದುಕೊಂಡಿದ್ದಾರೆ.

    ಮಹಮ್ಮದ್​ ಇಸಾಕ್​ 2006 ರಲ್ಲಿ ಪದವಿ ಪೂರೈಸಿ ದುಬೈಗೆ ತೆರಳಿ ಅಲ್ಲಿ 6 ವರ್ಷ ಅರೇಬಿಯನ್ ಪ್ರಿಂಟಿಂಗ್ ಸಂಸ್ಥೆಯೊಂದರಲ್ಲಿ ಎಕ್ಸಿಕ್ಯೂಟಿವ್ ಆಗಿ ದುಡಿದಿದ್ದರು.

    ಪ್ರಿಂಟಿಂಗ್ ಕುರಿತಾಗಿ ಹೆಚ್ಚಿನ ಜ್ಞಾನವನ್ನು ಸಂಪಾದಿಸಿ 2012 ರಲ್ಲಿ ಸಹರಾ ಪ್ರಿಂಟಿಂಗ್ ಪಬ್ಲಿಷಿಂಗ್ ಆ್ಯಂಡ್ ಡಿಸ್ಟ್ಎಲ್ಎಲ್ಸಿ ಸ್ಥಾಪಿಸಿ, ಹಂತಹಂತವಾಗಿ ಬೆಳೆದು ಬಳಿಕ ನಾಲ್ಕು ಕಂಪನಿಗಳನ್ನು ಆರಂಭಿಸಿದರು.

    ಇದೀಗ ಗೋಲ್ಡನ್ ವೀಸಾ ಪಡೆದಿರುವ ಇವರಿಗೆ ಇನ್ನೊಬ್ಬರು ಪ್ರಾಯೋಜಕರ ಅಗತ್ಯವಿಲ್ಲದೆ ಇರುವುದರಿಂದ ಉದ್ಯಮದಲ್ಲಿ ಶೇ.100 ಮಾಲೀಕತ್ವ ಅವರದ್ದಾಗಲಿದೆ.

    BANTWAL

    ಕಲ್ಲಡ್ಕದಲ್ಲಿ ಸರ್ವೀಸ್ ರಸ್ತೆಗೆ ಡಾಮರು

    Published

    on

    ಬಂಟ್ವಾಳ: ಹೆದ್ದಾರಿ ಕಾಮಗಾರಿ ಅವ್ಯವಸ್ಥೆಯಿಂದ ಟೀಕೆಗೆ ಗುರಿಯಾಗಿದ್ದ ಕಲ್ಲಡ್ಕದಲ್ಲಿ ಇದೀಗ ಸರ್ವೀಸ್ ರಸ್ತೆಗೆ ಡಾಮರು ಹಾಕುವ ಕಾರ್ಯ ಆರಂಭಗೊಂಡಿದೆ.

    ಮಳೆ ದೂರವಾದ ಹಿನ್ನೆಲೆಯಲ್ಲಿ ಕಲ್ಲಡ್ಕದ ಪೂರ್ಲಿಪ್ಪಾಡಿ ಭಾಗದಿಂದ ಒಂದು ಬದಿಯಲ್ಲಿ ಡಾಮರು ಹಾಕಲಾಗುತ್ತಿದೆ.

    ಕಳೆದ 2-3 ವರ್ಷಗಳಿಂದ ಹೆದ್ದಾರಿ ಪ್ರಯಾಣಿಕರು ಸಾಕಷ್ಟು ತೊಂದರೆ ಅನುಭವಿಸಿದ್ದು, ಈ ಬಾರಿಯ ಮಳೆಗಾಲದಲ್ಲಿ ಕಲ್ಲಡ್ಕ ಪೇಟೆಯನ್ನು ಎಲ್ಲ ರೀತಿಯಿಂದಲೂ ಹಿಂಡಿ ಹಿಪ್ಪೆ ಮಾಡಲಾಗಿತ್ತು. ಮಳೆ ಬಂದರೆ ಕೆಸರು, ಬಿಸಿಲಾದರೆ ಧೂಳು ಎಂಬ ಸ್ಥಿತಿ ಇತ್ತು. ಹೆದ್ದಾರಿ ತುಂಬಾ ಕೆಸರು ತುಂಬಿ ನಡೆದಾಡುವುದು ಕಷ್ಟವಾಗಿರುವ ಜತೆಗೆ ಹೊಂಡಗಳು ಸೃಷ್ಟಿಯಾಗಿ ವಾಹನ ಸಾಗುವುದು ತೀರಾ ತ್ರಾಸದಾಯಕವಾಗಿತ್ತು. ಇದೀಗ ಸರ್ವೀಸ್ ರಸ್ತೆಗೆ ಡಾಮರು ಹಾಕುವ ಕಾರ್ಯ ಆರಂಭಗೊಂಡಿದೆ.

    Continue Reading

    BANTWAL

    ಮಂಗಳೂರು: ಯುವತಿ ವಿಚಾರದಲ್ಲಿ ಯುವಕನಿಗೆ ಥಳಿತ; ಆರೋಪಿಗಳು ಅರೆಸ್ಟ್

    Published

    on

    ಮಂಗಳೂರು: ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿ ಉಳ್ಳಾಲ ತಾಲೂಕಿನ ಸಜೀಪನಡು ಗ್ರಾಮದ ಕಂಚಿನಡ್ಕಪದವು ಎಂಬಲ್ಲಿ ಮಹಮ್ಮದ್ ಮುಸ್ತಾಫ(21) ಎಂಬಾತನನ್ನು ಕಂಬಕ್ಕೆ ಕಟ್ಟಿ ಹಾಕಿದ ಥಳಿಸಿದ ಆರು ಮಂದಿ ಆರೋಪಿಗಳನ್ನು ಬಂಟ್ವಾಳ ಠಾಣಾ ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

    ಹಲ್ಲೆ ಮಾಡಿ, ಕೊಲೆ ಬೆದರಿಕೆಯೊಡ್ಡಿದ ಆರೋಪಿಗಳಾದ ಕಂಚಿನಡ್ಕದ ನಿವಾಸಿಗಳಾಗಿರುವ ಮಹಮ್ಮದ್‌ ಸಪ್ವಾನ್( 25), ಮಹಮ್ಮದ್‌ ರಿಜ್ವಾನ್‌ (25), ಇರ್ಪಾನ್‍(27), ಅನೀಸ್‍ ಅಹಮ್ಮದ್‍ (19), ನಾಸೀರ್‍ (27), ಇಬ್ರಾಹಿಂ, ಶಾಕೀರ್‍ (18)ನನ್ನು ಬಂಧಿಸಲಾಗಿದೆ.

    ಎಲ್ಲರನ್ನೂ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು ನ್ಯಾಯಾಂಗ ಬಂಧನ ವಿಧಿಸಲಾಗಿದೆ. ನವೆಂಬರ್ 7ರಂದು ರಾತ್ರಿ 10 ಗಂಟೆ ಸುಮಾರಿಗೆ ಕಂಚಿನಡ್ಕ ಪದವು ನಿವಾಸಿಯಾಗಿರುವ ಯುವತಿಯೊಬ್ಬಳು ಮಹಮ್ಮದ್ ಮುಸ್ತಾಫಾನನ್ನು ಮನೆಗೆ ಬರಲು ಹೇಳಿದ್ದು, ಆಕೆ ಸೂಚನೆಯಂತೆ ಮಹಮ್ಮದ್ ಮುಸ್ತಾಫಾ ಅಲ್ಲಿಗೆ ಹೋಗಿದ್ದ. ಈ ವೇಳೆ ಅಲ್ಲಿದ್ದ ಆರೋಪಿಗಳು ಮಹಮ್ಮದ್‍ ಮುಸ್ತಾಫ್‍ ನ ಬಗ್ಗೆ ಸಂಶಯ ವ್ಯಕ್ತಪಡಿಸಿ ಗುಂಪು ಸೇರಿಕೊಂಡು ಆತನನ್ನು ಹಿಡಿದು ರಕ್ತ ಒಸರುವಂತೆ ಥಳಿಸಿದ್ದಲ್ಲದೇ ಕಂಬಕ್ಕೆ ಕಟ್ಟಿ ಹಾಕಿ ಹೊಡೆದಿದ್ದಾರೆ. ಕೊಲೆ ಬೆದರಿಕೆಯನ್ನೂ ಹಾಕಿದ್ದಾರೆ.

     

    ಇದನ್ನೂ ಓದಿ : ಬಂಟ್ವಾಳ : ಮನೆಗೆ ಬಂದಿದ್ದ ಪ್ರಿಯಕರನ್ನು ಅ*ರೆಬೆತ್ತಲು ಮಾಡಿ ಹ*ಲ್ಲೆ

     

    ಮಹಮ್ಮದ್‍ ಮುಸ್ತಾಫ್‍ ನೀಡಿದ ದೂರಿನಂತೆ ಬಂಟ್ವಾಳ ಗ್ರಾಮಾಂತರ ಪೊಲೀಸ್‍ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹಲ್ಲೆಗೊಳಗಾದ ಬಳಿಕ ಹೈಲ್ಯಾಂಡ್ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಒಳಗಾಗಿದ್ದ ಸಂದರ್ಭದಲ್ಲಿ ಪೊಲೀಸರು ವಿಚಾರಣೆ ಮಾಡಲು ತೆರಳಿದಾದ ಮಹಮ್ಮದ್‍ ಮುಸ್ತಾಫ್‍ ಆರೋಪಿಗಳು ತನ್ನನ್ನು ಕೊಲೆ ನಡೆಸುವ ಉದ್ದೇಶದಿಂದ ಗುಂಪು ಸೇರಿ ಕಂಬಕ್ಕೆ ಕಟ್ಟಿ ಹಾಕಿ ಕೊಲೆಯತ್ನ ನಡೆಸಿದ್ದಾನೆ ಎಂದು ದೂರು ನೀಡಿದ ಹಿನ್ನೆಲೆಯಲ್ಲಿ ಕೊಲೆ ಯತ್ನ ಪ್ರಕರಣವನ್ನು ದಾಖಲಿಸಲಾಗಿದೆ.

    Continue Reading

    BANTWAL

    ಬಂಟ್ವಾಳ: ವಿಷಪದಾರ್ಥ ಸೇವಿಸಿ ಯುವಕ ಆತ್ಮಹ*ತ್ಯೆ

    Published

    on

    ಬಂಟ್ವಾಳ: ವಿಷಪದಾರ್ಥ ಸೇವಿಸಿ ಯುವಕನೋರ್ವ ಆತ್ಮಹ*ತ್ಯೆ ಮಾಡಿಕೊಂಡ ಘಟನೆ ಕಡೇಶಿವಾಲಯದಲ್ಲಿ ನಡೆದಿದೆ.

    ಬಂಟ್ವಾಳ ತಾಲೂಕಿನ ಕಡೇಶಿವಾಲಯದ ಕಂಡಿಗ ನಿವಾಸಿ ಗಣೇಶ್(25) ಆತ್ಮಹ*ತ್ಯೆ ಮಾಡಿಕೊಂಡ ಯುವಕ. ಗಣೇಶ್ ಅವರು ಸೋಮವಾರ ಮನೆಯಲ್ಲಿಯೇ ಸಂಜೆ ಹುಲ್ಲಿಗೆ ಬಿಡುವ ವಿಷವನ್ನು ಸೇವಿಸಿದ್ದರು.

    ತಕ್ಷಣ ಅವರನ್ನು ಚಿಕಿತ್ಸೆಗಾಗಿ ಮಂಗಳೂರಿನ ಫಾದರ್ ಮುಲ್ಲರ್ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಮೃ*ತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.

    Continue Reading

    LATEST NEWS

    Trending