DAKSHINA KANNADA
ಮಂಗಳೂರು: ನೇತ್ರಾವತಿ ಸೇತುವೆ ಬಳಿ ಭೀಕರ ಅ*ಪಘಾತ; ಓರ್ವ ಮೃ*ತ್ಯು, ಮತ್ತೋರ್ವ ಗಂಭೀರ
ಮಂಗಳೂರು: ಅತಿವೇಗವಾಗಿ ಬೈಕ್ ಚಲಾಯಿಸಿದ ಪರಿಣಾಮ ಬೈಕ್ ಸ್ಕಿಡ್ ಆಗಿ ಭೀ*ಕರ ಅ*ಪಘಾತ ಉಂಟಾದ ಘಟನೆ ಮಹಾಕಾಳಿ ಪಡ್ಪು ಸ್ಕಿಡ್ ಆಗಿ ನೇತ್ರಾವತಿ ಸೇತುವೆ ಬಳಿ ಶುಕ್ರವಾರ(ನ.1) ಸಂಜೆ ಸಂಭವಿಸಿದೆ.
ನಿರ್ಲಕ್ಷ್ಯತನದಿಂದ ಬೈಕ್ ಚಲಾಯಿಸಿದ ಪರಿಣಾಮ ಬೈಕ್ ಸವಾರನೋರ್ವ ಸ್ಥಳದಲ್ಲೇ ಮೃ*ತಪಟ್ಟು ಸಹಸವಾರ ಗಂಭೀರ ಗಾ*ಯಗೊಂಡಿದ್ದಾನೆ.
ಬಂಟ್ವಾಳ ತಾಲೂಕಿನ ಲೊರೆಟ್ಟೊಪದವು ಟಿಪ್ಪುನಗರ ನಿವಾಸಿ ಸಲ್ಮಾನ್ ಫಾರಿಶ್ ಮೃ*ತ ದು*ರ್ದೈವಿಯಾಗಿದ್ದು, ಸಹ ಸವಾರ ಮೊಹಮ್ಮದ್ ಶಕೀರ್ ಗಂಭೀರ ಗಾಯಗೊಂಡಿದ್ದು ಆತನನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಶುಕ್ರವಾರ ಸಂಜೆ ಸಲ್ಮಾನ್ ಫಾರಿಶ್ ಹಾಗೂ ಮೊಹಮ್ಮದ್ ಶಕೀರ್ ತೊಕ್ಕೊಟ್ಟು ಕಡೆಯಿಂದ ಮಂಗಳೂರು ಕಡೆಗೆ ಬರುತ್ತಿರುವಾಗ ನೇತ್ರಾವತಿ ಸೇತುವೆಗೆ ಅಳವಡಿಸಿದ ಕಬ್ಬಿಣದ ತಗಡು ಶೀಟ್ ಗೆ ಡಿ*ಕ್ಕಿಯಾದ ಪರಿಣಾಮ ಅ*ವಘಡ ಸಂಭವಿಸಿದೆ.
ಸ್ಥಳೀಯ ಪಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
DAKSHINA KANNADA
ಮಂಗಳೂರು : ಹೊಸ ವಾಟರ್ ವೆುಟ್ರೋ ಕಲ್ಪನೆಗೆ ಮುಂದಾದ ಕೆಎಂಬಿ
ಮಂಗಳೂರು: ಕೊಚ್ಚಿನ್ ಮಾದರಿಯಲ್ಲಿ ವಾಟರ್ ಮೆಟ್ರೋ ವ್ಯವಸ್ಥೆ (ಎಂಡಬ್ಲ್ಯುಎಂಪಿ) ಮಂಗಳುರಿನಲ್ಲಿಯೂ ಕಲ್ಪಿಸುವುದಾಗಿ ಕರ್ನಾಟಕ ಮೆರಿಟೈಂ ಮಂಡಳಿ (ಕೆಎಂಬಿ)ಯು ಮುಂದಾಗಿದೆ.
ಈ ಕುರಿತು ವಿಸ್ತೃತ ಯೋಜನಾ ವರದಿ ಸಿದ್ಧ ಪಡಿಸಲು ಮಂಡಳಿ ಸಿದ್ಧತೆ ಮಾಡಿಕೊಂಡಿದೆ. ನೇತ್ರಾವತಿ, ಫಲ್ಗುಣಿ ನದಿಗಳನ್ನು ಬೆಸೆದು ಬಜಾಲ್ನಿಂದ ಮರವೂರಿನವರೆಗೆ ಈ ವಾಟರ್ ಮೆಟ್ರೋ ಜಾಲವನ್ನು ರೂಪಿಸುವುದು ಯೋಜನೆಯ ಸಾರ.
ಹಂತಹಂತವಾಗಿ ಯೋಜನೆಯನ್ನು ಕೈಗೆತ್ತಿಕೊಳ್ಳಲಾಗುವುದು. ಆರಂಭದಲ್ಲಿ ನೇತ್ರಾವತಿ, ಫಲ್ಗುಣಿ ನದಿಗಳ ಹಿನ್ನೀರನ್ನು ಬಳಸಿ ಸುಮಾರು 30 ಕಿ.ಮೀ. ವ್ಯಾಪ್ತಿಯಲ್ಲಿ ಈ ಜಾಲವನ್ನು ರೂಪಿಸಲಾಗುತ್ತದೆ. ಇದರಲ್ಲಿ 17ರಷ್ಟು ಮೆಟ್ರೋ ಸ್ಟೇಷನ್ಗಳು ಇರುತ್ತವೆ.
2024-25ರ ಬಜೆಟ್ನಲ್ಲಿ ಸಿಎಂ ಸಿದ್ದರಾಮಯ್ಯ ಈ ಯೋಜನೆಯನ್ನು ಪ್ರಕಟಿಸಿದ್ದರು. ವಿಸ್ತೃತ ಯೋಜನಾ ವರದಿ (ಡಿಪಿಆರ್)ನಲ್ಲಿ ಮೆಟ್ರೋ ಸ್ಟೇಷನ್ಗಳ ಬೇಡಿಕೆಯ ತಾಣಗಳು, ಭೂಮಿಯ ಲಭ್ಯತೆ, ಸಂಪರ್ಕ ಜಾಲ ಇತ್ಯಾದಿಗಳನ್ನು ಅಧ್ಯಯನ ಮಾಡಲಾಗುವುದು. ಮಂಗಳೂರಿನ ಹಳೆ ಬಂದರು ಪ್ರದೇಶದಲ್ಲಿ ಇರುವ ದಟ್ಟಣೆಯನ್ನು ಹಗುರಗೊಳಿಸುವುದಕ್ಕೆ ರೋಲ್ ಆನ್-ರೋಲ್ ಆಫ್ ಮಾದರಿಯಲ್ಲಿ ವಾಹನಗಳ ಸಾಗಾಟದ ಬಗ್ಗೆಯೂ ಇದರಲ್ಲಿ ಸಾಧ್ಯತೆಯ ಅಧ್ಯಯನ ಇರಲಿದೆ.
ದೇಶದ ಮೊದಲ ವಾಟರ್ ಮಟ್ರೋ ಆಗಿ ಕೊಚ್ಚಿನ್ ವಾಟರ್ ಮೆಟ್ರೋ ಕಳೆದ ವರ್ಷವಷ್ಟೇ ಉದ್ಘಾಟನೆಗೊಂಡಿತ್ತು. 78 ದೋಣಿಗಳು, 38 ಜೆಟ್ಟಿಗಳನ್ನು ಒಳಗೊಂಡು 10 ದ್ವೀಪಗಳನ್ನು ಸಂಪರ್ಕಿಸುವ ವ್ಯವಸ್ಥೆ ಇದಾಗಿದೆ. ಹವಾನಿಯಂತ್ರಿತ ದೋಣಿಗಳು ಜನರಿಗೆ ಕಡಿಮೆ ಖರ್ಚಿನ ಸುರಕ್ಷಿತ ಸಾರಿಗೆ ವ್ಯವಸ್ಥೆಯಾಗಿ ಮೆಚ್ಚುಗೆ ಪಡೆದಿವೆ.
DAKSHINA KANNADA
ಮಂಗಳೂರು : ಕೂಟ ಮಹಾ ಜಗತ್ತಿನಿಂದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ವೇತನ ವಿತರಣೆ
ಮಂಗಳೂರು : ಕೂಟ ಮಹಾ ಜಗತ್ತು ಮಂಗಳೂರು ಅಂಗ ಸಂಸ್ಥೆಯ ವತಿಯಿಂದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನವನ್ನು ವಿತರಣಾ ಕಾರ್ಯಕ್ರಮವು ಜರುಗಿತು.
ಶ್ರೀನಿವಾಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ವ್ಯಾಸಾಂಗ ಮಾಡುತ್ತಿರುವ ವಿಘ್ನೇಶ್ ಕಾರಂತ್, ಮೈಟ್ನ ಬಿ.ಇ ಹಾಗೂ ಸಂಜನಾ ಹೇರ್ಳೆ ಕೆ. ಅವರಿಗೆ ತಲಾ ೨೫ ಸಾವಿರ ಸ್ಕಾಲರ್ಶಿಪ್ ನೀಡಲಾಯಿತು.
“ಭವಿಷ್ಯದ ದಿನಗಳಲ್ಲಿ ಮತ್ತೂ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಗುರುತಿಸಿ ಅವರಿಗೆ ಪ್ರೋತ್ಸಾಹ ನೀಡಲಾಗುವುದು. ಈ ನಿಟ್ಟಿನಲ್ಲಿ ಪ್ರತಿಭೆಗಳಿಗೆ ಪ್ರೋತ್ಸಾಹ ನೀಡಲಾಗುವುದು” ಎಂದು ಕೂಟ ಜಗತ್ತು ಮಂಗಳೂರು ಅಂಗ ಸಂಸ್ಥೆಯ ಅಧ್ಯಕ್ಷ ಶ್ರೀಧರ ಹೊಳ್ಳ ಹೇಳಿದರು.
“ಕೂಟ ಜಗತ್ತು ಮಂಗಳೂರು ಅಂಗ ಸಂಸ್ಥೆಯನ್ನು ಬಲಪಡಿಸುವ ದೃಷ್ಟಿಯಿಂದ ಸದಸ್ಯತ್ವ ಅಭಿಮಾನ ಆಗಬೇಕಿದೆ. ವ್ಯಾಪ್ತಿಯ ಎಲ್ಲರೂ ಸದಸ್ಯರಾಗುವ ಮೂಲಕ ಸಂಘಟನೆಯನ್ನು ಬಲಪಡಿಸುವ ಕೆಲಸ ಆಗಬೇಕು” ಎಂದು ಕಾರ್ಯದರ್ಶಿ ಗೋಪಾಲಕೃಷ್ಣ ಮಯ್ಯ ಹೇಳಿದರು.
ಸಂಘಟನಾ ಕಾರ್ಯದರ್ಶಿ ಕೃಷ್ಣಮಯ್ಯ, ಶಿವರಾಮಯ್ಯ, ಪದ್ಮನಾಭ ಮಯ್ಯ, ಮಹಿಳಾ ವೇದಿಕೆಯ ಪ್ರಭಾರಾವ್, ಲಲಿತಾ ಆರ್.ಉಪಾಧ್ಯಾಯ, ಶಶಿಪ್ರಭಾ ಐತಾಳ್, ಸುಮತಿ ಕೋರಿಯಾ, ಅನುರಾಧ, ಅನುಪಮಾ ಮೊದಲಾದವರು ಉಪಸ್ಥಿತರಿದ್ದರು.
DAKSHINA KANNADA
ಮಂಗಳೂರು : ಶ್ರೀ ದೇವಕಿಕೃಷ್ಣ ರವಳನಾಥ ಮಂದಿರದಲ್ಲಿ ಲಕ್ಷಾಂತರ ರೂ ಮೌಲ್ಯದ ಚಿನ್ನಾಭರಣ ಕಳವು
ಮಂಗಳೂರು: ದೇವಾಲಯದ ಬಾಗಿಲಿನ ಚಿಲಕ ಮುರಿದು ಒಳ ಪ್ರವೇಶಿಸಿದ ಕಳ್ಳರ ದಂಡು, ನೂರಾರು ವರ್ಷಗಳ ಇತಿಹಾಸವಿದ್ದ ದೇವರಿಗೆ ಸಂಬಂಧಿಸಿದ ಲಕ್ಷಾಂತರ ರೂ ಮೌಲ್ಯ ಬೆಲೆಬಾಳುವ ಚಿನ್ನ ಹಾಗೂ ಬೆಳ್ಳಿಯ ವಸ್ತುಗಳನ್ನು ದೋಚಿಕೊಂಡು ಹೋದ ಘಟನೆ ಶ್ರೀ ದೇವಕಿಕೃಷ್ಣ ರವಳನಾಥ ಮಂದಿರದಲ್ಲಿ ಸೋಮವಾರ (ನ.04) ಮುಂಜಾನೆ ನಡೆದಿದೆ.
ದೇವಳಕ್ಕೆ ಸಂಬಂಧಿಸಿದಂತೆ ಅನಾದಿ ಕಾಲದ ನೂರಾರು ವರ್ಷಗಳ ಹಳೆಯದಾದ ಹಿರಿಯರು ಮಾಡಿಸಿದಂತ ಸುಮಾರು ಒಂದುವರೆ ಕೆ.ಜಿ ತೂಕದ ಬೆಳ್ಳಿಯ ದೇವರ ಪೀಠ ಹಾಗೂ ಬಂಗಾರದ ದೇವರ ಮೂಗುತಿ ದೇವರ ಕೊಡೆ ಸೇರಿದಂತೆ ಒಟ್ಟು 2 ಕೆ.ಜಿ.ಯಷ್ಟು ಬೆಳ್ಳಿ ಹಾಗೂ 3 ಪವನ್ ಚಿನ್ನ ಕಳವಾಗಿದೆ. ಇದರ ಜೊತೆಗೆ ಕಾಣಿಕೆ ಹುಂಡಿಯಲ್ಲಿರುವ ನಗದನ್ನು ಕೊಂಡುಹೋಗಿದ್ದಾರೆ.
ಆದಿತ್ಯವಾರ ಮಂದಿರದಲ್ಲಿ ವಿಶೇಷವಾದ ಪೂಜಾ ಕಾರ್ಯಕ್ರಮವಿದ್ದ ಕಾರಣ ಕಾಣಿಕೆ ಹುಂಡಿಯಲ್ಲಿ ಸುಮಾರು ಹತ್ತು ಸಾವಿರಕ್ಕೂ ಅಧಿಕ ಹಣವಿರಬಹುದು ಎಂದು ಹೇಳಲಾಗುತ್ತಿದೆ.
ಸಿ.ಸಿ.ಕ್ಯಾಮರಾದಲ್ಲಿ ದೃಶ್ಯ ಸೆರೆ :
ಸುಮಾರು 5 ಜನರ ತಂಡ ಈ ಕಳ್ಳತನದಲ್ಲಿ ಭಾಗಿಯಾಗಿರುವುದು ಸಿ.ಸಿ.ಕ್ಯಾಮರಾದಲ್ಲಿ ಸೆರೆಯಾಗಿದೆ. ವಾಹನದ ಮೂಲಕ ಬಂದ ಕಳ್ಳರ ತಂಡ ಸುಮಾರು 3.30 ರ ಸಮಯದಲ್ಲಿ ದೇವಸ್ಥಾನದ ಹಿಂಬದಿಯ ಬಾಗಿಲಿನ ಚಿಲಕ ಮುರಿದು ಒಳಪ್ರವೇಶ ಮಾಡಿದ್ದಾರೆ. ಬಳಿಕ ದೇವಸ್ಥಾನದ ಸುತ್ತಲೂ ತಿರುಗಾಡಿ ಮಾಹಿತಿ ಪಡೆದುಕೊಂಡು, ಗರ್ಭಗುಡಿಯ ಒಳಗೆ ಪ್ರವೇಶ ಮಾಡಿದ್ದಾರೆ. ಅಲ್ಲಿ ಬೆಳ್ಳಿಯ ದೇವರ ಪೀಠ ಹಾಗೂ ಬಂಗಾರದ ವಸ್ತುಗಳನ್ನು ಗೋಣಿಯಲ್ಲಿ ತುಂಬಿಸಿಕೊಂಡು ದೇವಳದ ಗೋಪುರಕ್ಕೆ ಬಂದು, ಕಳ್ಳತನ ಮಾಡಿದ ಎಲ್ಲಾ ಬೆಳೆಬಾಳುವ ವಸ್ತುಗಳನ್ನು ಒಂದೇ ಚೀಲದಲ್ಲಿ ಭದ್ರಗೊಳಿಸಿ ವಾಪಸು ಹೋಗುವ ದೃಶ್ಯ ಕಂಡು ಬಂದಿದೆ.
ನಾಯಿ ನೀಡಿದ ಸುಳಿವು :
ದೇವಸ್ಥಾನದ ಕಂಪೌಂಡ್ ನ ಒಳಗಡೆಯೇ ಅರ್ಚಕರ ಮನೆಯಿದೆ. ಆದರೂ ಕಳ್ಳರು ಕಳ್ಳತನ ಧೈರ್ಯದಿಂದ ಕಳ್ಳತನ ಮಾಡಿದ್ದಾರೆ. ಕಳ್ಳರು ದೇವಸ್ಥಾನದ ಒಳಗೆ ಪ್ರವೇಶ ಮಾಡುವುದನ್ನು ಇವರ ಸಾಕು ನಾಯಿ ಗಮನಿಸಿ ಜೋರಾಗಿ ಬೊಗಳಲು ಆರಂಭಿಸಿದೆ. ನಾಯಿ ಬೊಗಳಿದ್ದರಿಂದ ಅರ್ಚಕರಿಗೆ ಎಚ್ಚರವಾಗಿದೆ. ನಾಯಿ ಯಾಕೆ ಬೊಗಳುತ್ತಿದೆ ಎಂದು ಸಿ.ಸಿ.ಕ್ಯಾಮರಾವನ್ನು ನೋಡಿದಾಗ ದೇವಸ್ಥಾನದ ಒಳಗೆ ಮೂವರು ಕಂಡುಬಂದಿದ್ದಾರೆ. ಕೂಡಲೇ ಅರ್ಚಕರು ದೇವಸ್ಥಾನದ ಮ್ಯಾನೇಜರ್ ಅವರಿಗೆ ವಿಚಾರ ತಿಳಿಸಿದ್ದಾರೆ. ಕೈಯಲ್ಲಿ ಮಾರಕಾಸ್ತ್ರಗಳನ್ನು ಹಿಡಿದುಕೊಂಡು ಮೂವರು ದೇವಸ್ಥಾನದ ಒಳಗೆ ಇದ್ದು, ನನಗೆ ಒಬ್ಬನಿಗೆ ಹೋಗಲು ಹೆದರಿಕೆ ಆಗುತ್ತಿದ್ದು ಅವರನ್ನು ಬರುವಂತೆ ತಿಳಿಸಿದ್ದಾರೆ. ಕೂಡಲೇ ಅವರು ಇಲ್ಲಿಗೆ ಬಂದರಾದರೂ ಅದಾಗಲೇ ಕಳ್ಳರು ಅಲ್ಲಿಂದ ಕಾಲ್ಕಿತ್ತಿದ್ದಾರೆ.
ಪ್ರಕರಣ ದಾಕಲು :
ಸಿ.ಸಿ.ಕ್ಯಾಮರಾ ಪರಿಶೀಲಿಸಿದಾಗ ಕಳ್ಳರು ಚಪ್ಪಲಿ ಧರಿಸದೆ ಗರ್ಭಗುಡಿಯೊಳಗೆ ಪ್ರವೇಶ ಮಾಡಿ, ಅಲ್ಲಿಂದ ಚಿನ್ನಾಭರಣಗಳನ್ನು ಕಳವು ಮಾಡುವ ದೃಶ್ಯ ಕಂಡು ಬಂತು. ಇದನ್ನು ಖಚಿತಪಡಿಸಿಕೊಂಡ ಬಳಿಕ ಗ್ರಾಮಾಂತರ ಪೊಲೀಸರಿಗೆ ದೂರು ನೀಡಲಾಗಿದೆ.
ಘಟನಾ ಸ್ಥಳಕ್ಕೆ ಬಂಟ್ವಾಳ ಪೋಲೀಸ್ ಇನ್ಸ್ ಪೆಕ್ಟರ್ ಶಿವಕುಮಾರ್, ಎಸ್.ಐ.ಗಳಾದ ಹರೀಶ್ ಮತ್ತು ಮೂರ್ತಿ ಭೇಟಿ ನೀಡಿದ್ದಾರೆ. ಜೊತೆಗೆ ಶ್ವಾನದಳ ಮತ್ತು ಬೆರಳಚ್ಚುತಜ್ಞರ ತಂಡ ಆಗಮಿಸಿ ಪರಿಶೀಲನೆ ನಡೆಸುತ್ತಿದ್ದಾರೆ.
- LATEST NEWS6 days ago
ಪಡಿತರ ಚೀಟಿದಾರರಿಗೆ ಗುಡ್ ನ್ಯೂಸ್ : ಇನ್ಮುಂದೆ ಅಕ್ಕಿಯ ಜೊತೆಗೆ ಉಚಿತವಾಗಿ ಸಿಗಲಿವೆ ಈ 9 ವಸ್ತುಗಳು.!
- kerala6 days ago
ಕಾಸರಗೋಡು : ‘ಮಗು’ ವನ್ನು ರಕ್ಷಿಸಿದ ‘ದೈವ’ನರ್ತಕ ; ವಿರೋಚಿತ ಕಥೆ !!
- LATEST NEWS7 days ago
ಮಹಿಳೆಯರೇ.. ನೀವು ಈ ಪಾನೀಯ ಕುಡಿದ್ರೆ 10 ವರ್ಷ ಸಣ್ಣ ಕಾಣೋದು ಗ್ಯಾರಂಟಿ.. !!
- LATEST NEWS7 days ago
ಎಸ್ಬಿಐನಲ್ಲಿನ 13 ಕೋಟಿ ಮೌಲ್ಯದ ಚಿನ್ನ ಕಳುವು, ಬ್ಯಾಂಕ್ ತುಂಬ ಖಾರದ ಪುಡಿ