Connect with us

LATEST NEWS

ಮಹಿಳೆಗೆ ಅಶ್ಲೀಲ ವಿಡಿಯೋ ಕಳುಹಿಸಿ ‘ಒಂದು ಸಲ ನೀನೇ ಬಾ’ ಎಂದಿದ್ದ ಮಾರುತಿಯನ್ನೇ ಠಾಣೆಗೆ ಒಯ್ದ ಪೊಲೀಸರು 

Published

on

ಬೆಂಗಳೂರು :  ದಿನಸಿ ಅಂಗಡಿಯೊಂದರ ಮಹಿಳೆಗೆ ಆಶ್ಲೀಲ ವಿಡಿಯೋ ಕಳುಹಿಸಿ, ಆಕ್ಷೇಪಾರ್ಹ ಸಂದೇಶ ಮಾಡಿದ್ದ ಆರೋಪಿಯನ್ನು ಬಾಗಲಗುಂಟೆ ಪೊಲೀಸರು ಬಂಧಿಸಿದ್ದಾರೆ.

ಮಂಜುನಾಥ ನಗರದಲ್ಲಿರುವ ಪ್ರಾವಿಷನ್ ಸ್ಟೋರ್ ಮಾಲೀಕೆ ನೀಡಿದ ದೂರಿನ ಮೇರೆಗೆ ಆರೋಪಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ದಿನಸಿ ಹಾಗೂ ತರಕಾರಿ ಖರೀದಿಸಲು ಆರೋಪಿಯು ಆಗಾಗ್ಗೆ ಪ್ರಾವಿಷನ್ಸ್ ಸ್ಟೋರ್​​ಗೆ ಬರುತ್ತಿದ್ದ. ಗ್ರಾಹಕನಾಗಿದ್ದರಿಂದ ಸಹಜವಾಗಿ ಮಹಿಳೆ ಸಲುಗೆ ಬೆಳೆಸಿಕೊಂಡಿದ್ದರು. ಈಕೆಯ ಮೊಬೈಲ್ ನಂಬರ್ ಪಡೆದ ಆರೋಪಿಯು ದಿನಸಿ ಖರೀದಿಗಾಗಿ ವಿಚಾರಿಸುತ್ತಿದ್ದ. ಆರಂಭದಲ್ಲಿ ವಾಟ್ಸಾಪ್​ನಲ್ಲಿ ಫಾರ್ವಡ್ ಮೆಸ್ಸೇಜ್, ಫನ್ನಿ ವಿಶ್ಯೂಯಲ್ ಕಳುಹಿಸುತ್ತಿದ್ದ.

ಇದೇ ತಿಂಗಳು 6 ರಂದು ರಾತ್ರಿ ಮಹಿಳೆಯ ಮೊಬೈಲ್​​ಗೆ ಲೈಂಗಿಕತೆಗೆ ಸಂಬಂಧಿಸಿದ ವಿಡಿಯೊ ಕಳುಹಿಸಿದ್ದಾನೆ. ಅಲ್ಲಾ ‘ಅಕ್ಕ ಒಂದು ಸಲ ನೀನೆ ಬಾ’ … ಎಂದು ಸಂದೇಶ ಸಹ ಮಾಡಿದ್ದಾನೆ.

ಇದರಿಂದ ಗಾಬರಿಗೊಂಡ ಮಹಿಳೆ ಮನೆಯವರಿಗೆ ತಿಳಿಸಿ ಬಾಗಲಗುಂಟೆ ಪೊಲೀಸರಿಗೆ ದೂರು ನೀಡಿದ್ದರು‌.‌ ಈ ಸಂಬಂಧ ಆರೋಪಿ ಮಾರುತಿಯನ್ನು ಬಂಧಿಸಿ ಜೈಲಿಗಟ್ಟಿದ್ದಾರೆ.

LATEST NEWS

ಹೆಚ್.ಡಿ.ರೇವಣ್ಣಗೆ ಬಿಗ್ ಶಾಕ್; 7 ದಿನಗಳ ನ್ಯಾಯಾಂಗ ಬಂಧನ ವಿಧಿಸಿದ ಕೋರ್ಟ್

Published

on

ಬೆಂಗಳೂರು : ಸದ್ಯ ಪ್ರಜ್ವಲ್ ರೇವಣ್ಣ, ರೇವಣ್ಣ ಕೇಸ್ ಭಾರೀ ಸದ್ದು ಮಾಡುತ್ತಿದೆ. ಅತ್ತ ಲೈಂ*ಗಿಕ ದೌರ್ಜ*ನ್ಯ ನಡೆಸಿದ ವೀಡಿಯೋ ವೈರಲ್ ಆಗುತ್ತಿದ್ದಂತೆ ದೇಶದಿಂದ ಪ್ರಜ್ವಲ್ ರೇವಣ್ಣ ಎಸ್ಕೇಪ್ ಆಗಿದ್ದರೆ, ಇತ್ತ ಮಾಜಿ ಸಚಿವ ಹೆಚ್.ಡಿ.ರೇವಣ್ಣ ಸಂತ್ರಸ್ತ ಮಹಿಳೆಯೊಬ್ಬರನ್ನು ಅಪಹರಿಸಿದ ಹಿನ್ನೆಲೆಯಲ್ಲಿ ರೇವಣ್ಣ ಅವರನ್ನು ಎಸ್ ಐ ಟಿ ಅಧಿಕಾರಿಗಳು ಬಂಧಿಸಿದ್ದರು. ಇದೀಗ ಕೋರ್ಟ್ 7 ದಿನಗಳ ನ್ಯಾಯಾಂಗ ಬಂಧನ ವಿಧಿಸಿ ಆದೇಶಿಸಿದೆ.

ಸಂಸದ ಪ್ರಜ್ವಲ್ ರೇವಣ್ಣ ಅಶ್ಲೀಲ ವೀಡಿಯೋ ಪ್ರಕರಣದ ಸಂತ್ರಸ್ತ ಮಹಿಳೆಯನ್ನು ಕಿಡ್ನ್ಯಾಪ್ ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ರೇವಣ್ಣ ಬಂಧನವಾಗಿತ್ತು. ಬಂಧಿಸಿದ ಎಸ್ ಐಟಿ ಅಧಿಕಾರಿಗಳು ಅವರನ್ನು ತಮ್ಮ ವಶಕ್ಕೂ ಪಡೆದಿದ್ದರು.

ಮೇ. 8 ರ ವರೆಗೆ ಎಸ್ ಐ ಟಿ ವಶಕ್ಕೆ ಕೋರ್ಟ್ ನೀಡಿತ್ತು. ಇಂದು ರೇವಣ್ಣ ಎಸ್ ಐ ಟಿ ವಶದ ಅವಧಿ ಮುಗಿದ ಹಿನ್ನೆಲೆಯಲ್ಲಿ ಬೆಂಗಳೂರಿನ ಜನಪ್ರತಿನಿಧಿಗಳ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು.

ಇದನ್ನೂ ಓದಿ  : ಖಾಸಗಿ ಕಾಲೇಜಿನ ಮಹಿಳಾ ಟಾಯ್ಲೆಟ್ ನಲ್ಲಿ ಮೊಬೈಲ್ ಪತ್ತೆ; ಆರೋಪಿ ಬಂಧನ

ವಿಚಾರಣೆ ನಡೆಸಿದ ಕೋರ್ಟ್ 7 ದಿನಗಳ ನ್ಯಾಯಾಂಗ ಬಂಧನ ವಿಧಿಸಿ ಆದೇಶಿಸಿದೆ. ಅವರ ಜಾಮೀನು ಅರ್ಜಿಯ ವಿಚಾರಣೆಯನ್ನು ನಾಳೆಗೆ ಮುಂದೂಡಲಾಗಿದೆ.

Continue Reading

LATEST NEWS

ನಾವು ಬಳಸುವ ಮಸಾಲೆ ಪದಾರ್ಥಗಳು ಅಸಲಿಯೋ..ನಕಲಿಯೋ..ತಿಳಿಯೋದು ಹೇಗೆ? ಇಲ್ಲಿದೆ ಸಿಂಪಲ್ ಟಿಪ್ಸ್

Published

on

ಮಂಗಳೂರು : ನಾವು ಅಡುಗೆಮನೆಯಲ್ಲಿ ಹಲವಾರು ರೀತಿಯ ಮಸಾಲೆಗಳನ್ನು ಬಳಸುತ್ತೇವೆ. ಆದರೆ ಅವುಗಳನ್ನು ಮಾರುಕಟ್ಟೆಯಿಂದ ತರುವಾಗ, ನಿಜವಾದ ಮತ್ತು ನಕಲಿ ಮಸಾಲೆಗಳನ್ನು ಗುರುತಿಸುವಲ್ಲಿ ನಾವು ಗೊಂದಲಕ್ಕೊಳಗಾಗುತ್ತೇವೆ. ಅಂತಹ ಪರಿಸ್ಥಿತಿಯಲ್ಲಿ ನಾವು ಏನು ಮಾಡಬಹುದು ಅನ್ನೋ ಸಣ್ಣ ಟಿಪ್ಸ್ ಇಲ್ಲಿದೆ.


ಇತ್ತೀಚೆಗೆ ದೆಹಲಿಯಲ್ಲಿ ನಕಲಿ ಸಾಂಬಾರ ಪದಾರ್ಥಗಳನ್ನು ತಯಾರಿಸುತ್ತಿದ್ದ ಕೆಲವರನ್ನು ಬಂಧಿಸಲಾಗಿದೆ. ಈ ಜನರು ಕೊಳೆತ ಅಕ್ಕಿ, ತೆಂಗಿನಕಾಯಿ ಮತ್ತು ಆ್ಯಸಿಡ್‌ನಿಂದ ಹೆಚ್ಚಿನ ಪ್ರಮಾಣದಲ್ಲಿ ನಕಲಿ ಮಸಾಲೆ ತಯಾರಿಸುತ್ತಿದ್ದರು. ಇವರಿಂದ ಸುಮಾರು 15 ಟನ್ ನಕಲಿ ಸಾಂಬಾರ ಪದಾರ್ಥಗಳು ಮತ್ತು ತಯಾರಿಕಾ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಇನ್ನು ಪ್ರತಿಷ್ಠಿತ ಕಂಪೆನಿಗಳು ಕೂಡಾ ಈ ರೀತಿಯಾದ ನಕಲಿ ಸಾಂಬಾರು ಪುಡಿ ಮಾರಾಟ ಮಾಡುತ್ತಿದ್ದ ವಿಚಾರ ಇತ್ತೀಚೆಗೆ ಬೆಳಕಿಗೆ ಬಂದಿದೆ.

ನೋಡಲು ಹಾಗೂ ಪರಿಮಳದಲ್ಲಿ ಅಸಲಿಯಂತೆ ಕಾಣುವ ಈ ನಕಲಿ ಮಸಾಲೆ ಪುಡಿಗಳನ್ನು ಗುರುತಿಸುವುದೇ ಕಷ್ಟ. ಆದ್ರೆ, ಕೆಲವೊಂದು ನಿತ್ಯ ಬಳಸುವ ಪದಾರ್ಥಗಳನ್ನು ಈ ರೀತಿಯಾಗಿ ಗುರುತಿಸಬಹುದಾಗಿದೆ.

ನಿಜವಾದ ಮತ್ತು ನಕಲಿ ಮಸಾಲೆಗಳನ್ನು ಗುರುತಿಸುವುದು ಹೇಗೆ?

ಕೆಂಪು ಮೆಣಸಿನಕಾಯಿ

ಅಡುಗೆಯಲ್ಲಿ ಕೆಂಪು ಮೆಣಸಿನಕಾಯಿ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಮೆಣಸಿನಪುಡಿ ಚೆನ್ನಾಗಿಲ್ಲಾ ಅಂದ್ರೆ ಅದು ಪದಾರ್ಥದ ರುಚಿಯನ್ನೇ ಕೆಡಿಸಿ ಬಿಡುತ್ತದೆ. ಇತ್ತೀಚಿನ ದಿನಗಳಲ್ಲಿ ಪ್ಯಾಕೇಟ್‌ಗಳಲ್ಲಿ ಬರೋ ಮೆಣಸಿನ ಪುಡಿ ಕೂಡಾ ನಕಲಿಯಾಗಿದೆ. ಕೆಂಪು ಇಟ್ಟಿಗೆಯ ಪುಡಿಗೆ ಬಟ್ಟೆಗೆ ಬಳಸುವ ಕೆಂಪು ಬಣ್ಣದ ಮಿಶ್ರಣ ಮಾಡಿ ಮಾರುಕಟ್ಟೆಯಲ್ಲಿ ಮಾರಾಟ ಮಾಡಲಾಗುತ್ತಿದೆ. ಈ ಮೆಣಸಿನ ಪುಡಿಯನ್ನು ಪರೀಕ್ಷೆ ಮಾಡಲು ಸ್ವಲ್ಪ ನೀರಿನಲ್ಲಿ ಹಾಕಿ ನೋಡಬೇಕು. ಪುಡಿ ತೇಲುತ್ತಿದ್ದರೆ ಅದು ಅಸಲಿಯಾಗಿದ್ದು, ಪುಡಿ ನೀರಿನಲ್ಲಿ ಮುಳುಗಿದ್ರೆ ಅದು ನಕಲಿ ಅಥವಾ ಕಲಬೆರಕೆಯಾಗಿದೆ ಎಂದು ತಿಳಿಯಬಹುದು.

ಕೊತ್ತಂಬರಿ ಪುಡಿ

ಯಾವುದೇ ಅಡುಗೆಯಲ್ಲಿ ಖಾದ್ಯದ ರುಚಿಯನ್ನು ಹೆಚ್ಚಿಸಲು ಕೊತ್ತಂಬರಿ ಬೇಕೇಬೇಕು. ಆದ್ರೆ, ಈ ಕೊತ್ತಂಬರಿ ಪುಡಿಯನ್ನು ಕೂಡಾ ನಕಲಿ ಮಾಡಲಾಗುತ್ತಿದೆ. ಪ್ರಾಣಿಗಳ ಮಲ, ಹುಳು ಮತ್ತು ಕಳೆಗಳನ್ನು ನುಣ್ಣಗೆ ರುಬ್ಬಿ ಅದಕ್ಕೆ ಕೊತ್ತಂಬರಿ ಪ್ಲೇವರ್ ಹಾಕುವ ಮೂಲಕ ಕೊತ್ತಂಬರಿ ಪುಡಿ ತಯಾರಿಸಲಾಗುತ್ತಿದೆ. ಇನ್ನು ಹಿಟ್ಟಿನ ಹುಡಿಗೆ ಹಸಿರು ಬಣ್ಣ ಸೇರಿಸಿ ಕೊತ್ತಂಬರಿ ಪುಡಿ ಎಂದು ಮಾರಾಟ ಮಾಡಲಾಗುತ್ತಿದೆ. ಇಡಿ ಕೊತ್ತಂಬರಿಯನ್ನು ಕೈಲಿಟ್ಟು ಸ್ವಲ್ಪ ಜೋರಾಗಿ ತಿಕ್ಕಿದಾಗ ಅದರಿಂದ ಸುವಾಸನೆ ಹೊರಡುತ್ತದೆ. ಮಾರುಕಟ್ಟೆಯಿಂದ ತಂದಿರೋ ಪುಡಿಯನ್ನು ಈ ಸುವಾಸನೆ ಜೊತೆ ಹೋಲಿಸಿ ನೋಡಿ. ಆ ಸುವಾಸನೆ ಬಾರದೆ ಯಾವುದೋ ಸಸ್ಯಗಳ ಪರಿಮಳ ಬಂದ್ರೆ ಅದು ಕಲಬೆರಕೆಯಾಗಿದೆ ಎಂದು ಅಂದಾಜಿಸಬಹುದಾಗಿದೆ.

ದಾಲ್ಜಿನಿ

ತೊಗಟೆಯಾಗಿ ಮಾರುಕಟ್ಟೆಯಲ್ಲಿ ಸಿಗುವ ದಾಲ್ಚಿನಿ ಬಹುತೇಕ ನಕಲಿಯಾಗಿರುತ್ತದೆ. ಅಮರಕ ಎಂಬ ಮರದ ತೊಗಟೆಯನ್ನು ಕತ್ತರಿಸಿ ದಾಲ್ಚಿನಿ ಎಂದು ಮಾರಾಟ ಮಾಡಲಾಗುತ್ತಿದೆ. ಇದರ ಅಸಲಿಯತ್ತು ಗುರುತಿಸುವುದು ಬಹಳ ಸುಲಭವಾಗಿದೆ. ದಾಲ್ಚಿನಿಯ ತೊಗಟೆಯನ್ನು ಕೈಲಿ ತೆಗೆದುಕೊಂಡು ನಿಮ್ಮ ಕೈಗಳಿಗೆ ಜೋರಾಗಿ ಉಜ್ಜಿಕೊಳ್ಳಿ. ಕೈನಲ್ಲಿ ಕೆಂಪು ಅಥವಾ ಕಂದು ಬಣ್ಣ ಮೂಡಿದ್ರೆ ಅದು ಅಸಲಿಯಾಗಿದ್ದು, ಬಣ್ಣ ಬಾರದೇ ಇದ್ರೆ ಅದು ನಕಲಿ ಎಂದು ಅರ್ಥ.

ಕರಿ ಮೆಣಸು

ಕರಿಮೆಣಸು ಇಲ್ಲದೆ ಮಾಂಸಾಹಾರಿ ಪದಾರ್ಥವೇ ಇಲ್ಲ ಅನ್ನಬಹುದು. ಇನ್ನು ತರಕಾರಿ ಅಡುಗೆಯಲ್ಲೂ ಇದನ್ನು ಯಥೇಚ್ಛವಾಗಿ ಬಳಕೆ ಮಾಡಲಾಗುತ್ತದೆ. ಆದ್ರೆ, ಪಪ್ಪಾಯಿ ಕಾಳುಗಳನ್ನು ಕರಿಮೆಣಸಿನ ಜೊತೆ ಸೇರಿಸಿ ಮಾರುಕಟ್ಟೆಯಲ್ಲಿ ಮಾರಾಟ ಮಾಡಲಾಗುತ್ತಿದೆ. ಇದರ ಅಸಲಿಯತ್ತು ಪರೀಕ್ಷೆ ಮಾಡಲು ನೀರಿನಲ್ಲಿ ಹಾಕಬೇಕು. ಅಸಲಿ ಕರಿಮೆಣಸುಗಳು ನೀರಿನಲ್ಲಿ ಮುಳುಗಿದರೆ ಪಪ್ಪಾಯಿ ಬೀಜಗಳು ನೀರಿನಲ್ಲಿ ತೇಲುತ್ತದೆ.

ಇದನ್ನೂ ಓದಿ : KARKALA : ಸಿಡಿದ ಸುಡುಮದ್ದು ತಯಾರಿಕಾ ಘಟಕ; ಮಹಿಳೆಯರಿಗೆ ಗಂಭೀರ ಗಾಯ

ಜೀರಿಗೆ

ಜೀರಿಗೆ ಯಾವುದೇ ಭಕ್ಷ್ಯಕ್ಕೆ ಪರಿಮಳವನ್ನು ಸೇರಿಸುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ಇದು ನಿಜವೋ ಅಲ್ಲವೋ ಎಂದು ಗುರುತಿಸುವುದು ತುಂಬಾ ಸುಲಭ. ಇದಕ್ಕಾಗಿ ನೀವು ಎರಡು ಬೆರಳುಗಳ ನಡುವೆ ಜೀರಿಗೆಯನ್ನು ಉಜ್ಜಬೇಕು. ಜೀರಿಗೆಯಲ್ಲಿ ಕಲಬೆರಕೆ ಇದ್ದರೆ ನಿಮ್ಮ ಬೆರಳುಗಳು ಕಪ್ಪಾಗುತ್ತವೆ. ಅದು ನಿಜವಾಗಿದ್ದರೆ, ಅದು ನಿಮ್ಮ ಬೆರಳುಗಳನ್ನು ಕಪ್ಪಾಗಿಸುವುದಿಲ್ಲ.

ಕಲಬೆರಕೆ ಆಹಾರ ಸೇವನೆಯಿಂದ ದೇಹದ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಹೀಗಾಗಿ ಆದಷ್ಟು ಕಲಬೆರೆಕೆ ವಸ್ತುಗಳ ಬಗ್ಗೆ ಜನರು ಜಾಗೃತರಾಗಬೇಕಾಗಿದೆ. ಪ್ರತಿಯೊಂದು ವಸ್ತುವನ್ನು ಪರೀಕ್ಷೆ ಮಾಡಿ ತೆಗೆದುಕೊಳ್ಳುವುದು ಕಷ್ಟ. ಆದ್ರೆ, ಅದನ್ನು ಬಳಸುವ ಮೊದಲು ಈ ಸಿಂಪಲ್ ಟೆಸ್ಟ್‌ ಮಾಡಿದ್ರೆ ಆರೋಗ್ಯ ಕಾಪಾಡಿಕೊಳ್ಳಬಹುದು.

Continue Reading

DAKSHINA KANNADA

ಮೇ 9 ರಂದು SSLC ಫಲಿತಾಂಶ ಪ್ರಕಟ…!

Published

on

ಮಂಗಳೂರು : 2023-24 ರ SSLC ಪರೀಕ್ಷೆಯ ಫಲಿತಾಂಶ ಮೇ 9 ರ ಬೆಳಗ್ಗೆ 10.30ಕ್ಕೆ ಪ್ರಕಟಿಸಲಾಗುವುದು ಎಂದು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಪ್ರಕಟಣೆಯಲ್ಲಿ ತಿಳಿಸಿದೆ. ಮಾರ್ಚ್‌ 25 ರಿಂದ ಎಪ್ರಿಲ್ 6 ರ ವರೆಗೆ ಪರೀಕ್ಷೆ ನಡೆಸಲಾಗಿದ್ದು, ಉತ್ತರ ಪತ್ರಿಕೆಗಳ ಮೌಲ್ಯಮಾಪನ ಪೂರ್ಣಗೊಂಡಿದೆ. ಲೋಕಸಭಾ ಚುನಾವಣೆಯ ಹಿನ್ನಲೆಯಲ್ಲಿ ಈ ಬಾರಿ ಫಲಿತಾಂಶ ಬಿಡುಗಡೆಗೆ ವಿಳಂಭವಾಗಿದೆ ಎಂದು ಹೇಳಿದೆ


2023- 24ರ SSLC ಪರೀಕ್ಷೆಯಲ್ಲಿ ಈ ಬಾರಿ 8.69 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆಗೆ ನೊಂದಣಿ ಮಾಡಿಕೊಂಡಿದ್ದರು. ಸಾಮಾನ್ಯ ವಿದ್ಯಾರ್ಥಿಗಳ ಜೊತೆಯಲ್ಲಿ 18,225 ಖಾಸಗಿ ವಿದ್ಯಾರ್ಥಿಗಳು ಮತ್ತು 41,375 ವಿದ್ಯಾರ್ಥಿಗಳು ರೀ ಎಕ್ಸಾಂ ಬರೆದಿದ್ದಾರೆ. ಇದರಲ್ಲಿ 4.41 ಲಕ್ಷ ಬಾಲಕರು ಮತ್ತು 4.28 ಲಕ್ಷ ಬಾಲಕಿಯರು ಇದ್ದಾರೆ.

ಫಲಿತಾಂಶವನ್ನು ನೋಡಲು ಈ ವೆಬ್‌ಸೈಟ್ ಬಳಸಿ..!

ಪರೀಕ್ಷಾ ಪ್ರವೇಶ ಪತ್ರದಲ್ಲಿ ನೀಡಿರುವ ರಿಜಿಸ್ಟರ್ ನಂಬರ್ ಮತ್ತು ಜನ್ಮ ದಿನಾಂಕ ನಮೂದಿಸುವ ಮೂಲಕ ವೆಬ್‌ಸೈಟ್‌ನಲ್ಲಿ ಫಲಿತಾಂಶ ವೀಕ್ಷಿಸಬಹುದು. kseab.karnataka.gov.in ಹಾಗೂ karresults.nic.in ವೆಬ್‌ಸೈಟ್‌ನಲ್ಲೂ ಫಲಿತಾಂಶ ವೀಕ್ಷಿಸಬಹುದಾಗಿದೆ.

Continue Reading

LATEST NEWS

Trending