Connect with us

    DAKSHINA KANNADA

    ಮಳಲಿ ವಿವಾದ: ಮಸೀದಿ ಕಮಿಟಿಯ ಪ್ರಮುಖರ ಭೇಟಿಗೆ ಸಿದ್ಧತೆ ನಡೆಸುತ್ತಿರುವ ವಿಹಿಂಪ

    Published

    on

    ಮಂಗಳೂರು: ಮಳಲಿ ವಿವಾದಿತ ಮಸೀದಿ ಜಾಗದ ಕುರಿತು ಎರಡು ದಿನಗಳ ಹಿಂದೆ ಹಿಂದೂ ಸಂಘಟನೆಗಳ ನೇತೃತ್ವದಲ್ಲಿ ನಡೆದ ತಾಂಬೂಲ ಪ್ರಶ್ನೆಯಲ್ಲಿ ಮಳಲಿ ಮಸೀದಿಯಲ್ಲಿ ಶೈವ ಸಾನ್ನಿಧ್ಯ ಗೋಚರಿಸಿದೆ. ಈ ವಿಚಾರದಲ್ಲಿ ಸೌಹಾರ್ದತೆ ಕಾಯ್ದುಕೊಳ್ಳಲು ವಿಶ್ವಹಿಂದೂ ಪರಿಷತ್ ಎಚ್ಚರಿಕೆ ಹೆಜ್ಜೆ ಇರಿಸಲು ತೀರ್ಮಾನಿಸಿದೆ.

    ಮಸೀದಿಯಲ್ಲಿ ದೇವ ಸಾನಿಧ್ಯ ಬಗ್ಗೆ ಹೆಚ್ಚಿನ ಶೋಧನೆ ನಡೆಸಲು ಅಷ್ಟಮಂಗಲ ಪ್ರಶ್ನೆಗೆ ನಿರ್ಧರಿಸಿರುವ ವಿಶ್ವಹಿಂದೂ ಪರಿಷತ್, ಅದಕ್ಕೂ ಮೊದಲು ಮಸೀದಿ ಪ್ರಮುಖರ ಭೇಟಿಗೆ ಮುಂದಾಗಿದೆ.


    ಸೌಹಾರ್ದತೆ ಹೆಜ್ಜೆಯ ಮೊದಲ ಭಾಗವಾಗಿ ಹೋರಾಟಕ್ಕೆ ಸ್ಥಳೀಯರು, ಹಿ೦ದೂ ಸ೦ತರು, ಮುಖಂಡರನ್ನು ಒಳಗೊಂಡ ಪ್ರತ್ಯೇಕ ಸಮಿತಿ ರಚಿಸಿ ಬಳಿಕ ಮಸೀದಿ ಪ್ರಮುಖರ ಭೇಟಿಗೆ ಚಿಂತನೆ ನಡೆಸಿದೆ.

    ಮಸೀದಿ ಪ್ರಮುಖರನ್ನು ಭೇಟಿ ಮಾಡಿ ಅವರಿಗೆ ತಾಂಬೂಲ ಪ್ರಶ್ನೆಯಲ್ಲಿ ಕ೦ಡುಬಂದಂತೆ ಮಸೀದಿಯಲ್ಲಿ ಗುರು ಮಠದ ಗೋಚರದ ಬಗ್ಗೆ ಮನವರಿಕೆ ಮಾಡಿ ಮಸೀದಿಯನ್ನು ಹಿಂದೂಗಳಿಗೆ ಬಿಟ್ಟುಕೊಡುವಂತೆ ಕೋರಿಕೆ ಸಲ್ಲಿಸಲು ತೀರ್ಮಾನಿಸಿದೆ.


    ವಿಹಿಂಪ ಮಸೀದಿ ಸ್ವಾಧೀನ ಹೋರಾಟದಿಂದ ಅಶಾಂತಿಗೆ ಕಾರಣವಾಗಬಾರದು. ಹಾಗಾಗಿ ಈ ವಿಚಾರದಲ್ಲಿ ಅಗತ್ಯ ದಾಖಲೆ ಸಹಿತ ಸೂಕ್ಷ್ಮ ಹೆಜ್ಜೆ ಇರಿಸಬೇಕಾಗುತ್ತದೆ.

    ಹೀಗಾಗಿ ಅವಕಾಶಗಳನ್ನು ಮುಕ್ತವಾಗಿ ಇರಿಸಿಕೊಳ್ಳಲು ತೀರ್ಮಾನಿಸಿದೆ. ಆದರೆ ಯಾವುದೇ ಕಾರಣಕ್ಕೂ ಮಸೀದಿಯಲ್ಲಿರುವ ದೇವ ಸಾನ್ನಿಧ್ಯ ಕೈ ತಪ್ಪಬಾರದು ಎಂದು ಯೋಜನೆ ರೂಪಿಸಲಾಗುತ್ತಿದೆ.

    ಇದೇ ವೇಳೆ ತಾಂಬೂಲ ಪ್ರಶ್ನೆಯಲ್ಲಿ ಮಳಲಿ ಮಸೀದಿಯಲ್ಲಿ ದೈವ ಸಾನಿಧ್ಯ ಪತ್ತೆಯಾದ ಬೆನ್ನಲ್ಲೇ ಸಮೀಪದ ಗುರುಪುರ ಜಂಗಮ ಮಠಕ್ಕೆ ವಿಶ್ವಹಿಂದೂ ಪರಿಷತ್ ನಿಯೋಗ ಭೇಟಿ ನೀಡಿದೆ. ಗುರುಪುರ ಜಂಗಮ ಮಠದ ರುದ್ರಮುನಿ ಸ್ವಾಮೀಜಿಯನ್ನು ಭೇಟಿಯಾಗಿ ಮಾತುಕತೆ ನಡೆಸಿದರು.

    ಈ ವೇಳೆ ಜಂಗಮ ಮಠದ ಐತಿಹಾಸಿಕ ಹಿನ್ನೆಲೆ ಬಗ್ಗೆ ಮಾಹಿತಿ ಸಂಗ್ರಹಿಸಿದರು. ಅಲ್ಲದೆ ಮುಂದಿನ ಹೋರಾಟಗಳ ಬಗ್ಗೆ ಸ್ವಾಮೀಜಿ ಜತೆ ಸುದೀರ್ಘ ಚರ್ಚೆ ನಡೆಸಿದರು. ಇದೇ ವೇಳೆ ಮಸೀದಿ ಸಂಬಂಧ ವಿಹಿಂಪ ನಡೆಸುವ ಹೋರಾಟಕ್ಕೆ ಮಠದ ಬೆಂಬಲ ಕೋರಲಾಯಿತು.


    ಮಳಲಿ ಮಸೀದಿಯಲ್ಲಿ ದೈವ ಸಾನಿಧ್ಯ ಇದ್ದ ಬಗ್ಗೆ ತಾಂಬೂಲ ಪ್ರಶ್ನೆಯಲ್ಲಿ ಕಂಡುಬಂದಿದೆ. ಇದೇ ವೇಳೆ ಟಿಪ್ಪು ಸುಲ್ತಾನ್ ಸಹಚರನ ದಾಳಿಯಿಂದ ಮಳಲಿ ಮಠ ನಾಶವಾದ ಬಗ್ಗೆ ಜಂಗಮ ಮಠದ ಪುಸ್ತಕದಲ್ಲಿ ಸ್ಫೋಟಕ ಅಂಶವೊಂದು ಇದೆ ಎನ್ನಲಾಗುತ್ತಿದ್ದು,

    2000ನೇ ಇಸವಿಯಲ್ಲಿ ಪ್ರಕಟಗೊಂಡ ನೀಲಕಂಠ ವೈಭವ ಪುಸ್ತಕದಲ್ಲಿ ಟಿಪ್ಪು ಸಹಚರನ ದಾಳಿಯ ಬಗ್ಗೆ ಉಲ್ಲೇಖವಾಗಿದೆ. ಮಳಲಿ ಮಸೀದಿ ಜಾಗದಲ್ಲಿದ್ದ ಶೈವ ಸಂಪ್ರದಾಯದ ಮಠಕ್ಕೆ ಟಿಪ್ಪು ಸಹಚರ ಶೇಖ್ ಆಲಿ ನವಾಬ ದಾಳಿ ನಡೆಸಿದ್ದ. ಮಂಗಳೂರಿನಲ್ಲಿ 64 ಲಿಂಗಾಯತ ಮಠಗಳ ಪೈಕಿ 21 ಮಠಗಳು ನಾಶವಾಗಿವೆ.

    ಇದೇ ದಾಳಿಗೆ ತುತ್ತಾಗಿ ಮಸೀದಿ ಜಾಗದ ಲಿಂಗಾಯತ ಮಠವೂ ನಾಶವಾದ ಶಂಕೆಯನ್ನು ವ್ಯಕ್ತಪಡಿಸಲಾಗುತ್ತಿದೆ. ಜೊತೆಗೆ ಮಳಲಿ ಮಸೀದಿ ವಾಸ್ತುಶಿಲ್ಪ ಮತ್ತು ಗುರುಪುರ ಲಿಂಗಾಯತ ಜಂಗಮ ಮಠದ ವಾಸ್ತುಶಿಲ್ಪಕ್ಕೂ ಸಾಮ್ಯತೆ ಕಂಡುಬಂದಿದೆ.

    ಮೇಲ್ಛಾವಣಿ, ಬಾಗಿಲುಗಳ ಶಿಲ್ಪಕಲೆಗಳಲ್ಲಿ ಭಾರೀ ಸಾಮ್ಯತೆ ಇದ್ದು, ಮಳಲಿಯ ಶೈವ ಮಠಕ್ಕೆ ದಾಳಿ ನಡೆಸಿ ಟಿಪ್ಪು ಮಸೀದಿ ಕಟ್ಟಿಸಿರುವ ಶಂಕೆಯನ್ನು ರುದ್ರಮುನಿ ಸ್ವಾಮೀಜಿ ವ್ಯಕ್ತಪಡಿಸುತ್ತಾರೆ.

    BIG BOSS

    ಮಂಗಳೂರು: ಮುಂಜಾನೆಯೇ ಸರಣಿ ಅ*ಪಘಾತ; ವಿದ್ಯಾರ್ಥಿಗಳಿದ್ದ ಬಸ್ ಪ*ಲ್ಟಿ

    Published

    on

    ಮಂಗಳೂರು: ಬೆಂಗಳೂರು – ಮಂಗಳೂರು ರಾಷ್ಟ್ರೀಯ ಹೆದ್ದಾರಿಯ ಗುಂಡ್ಯ ಸಮೀಪರದ ಅಡ್ಡಹೊಳೆ ಎಂಬಲ್ಲಿ ಬೆಳ್ಳಂಬೆಳಗ್ಗೆ ಸರಣಿ ಅ*ಪಘಾತ ಸಂಭವಿಸಿದೆ. ಕುಂದಾಪುರ ಪ್ರವಾಸಕ್ಕೆ ತೆರಳಿ ಹಿಂದಿರುಗುತ್ತಿದ್ದ ಬೆಂಗಳೂರು ಕಾಲೇಜು ವಿದ್ಯಾರ್ಥಿಗಳಿದ್ದ ಖಾಸಗಿ ಟೂರಿಸ್ಟ್ ಬಸ್ ಉರುಳಿ ಬಿದ್ದಿದೆ.

    ಇಂದು (ನ.23) ಬೆಳಗಿನ ಜಾವ ಕಾರೊಂದು ಹಿಂದಿನಿಂದ ಬಂದು ಕೆಎಸ್‌ಆರ್‌ಟಿಸಿ ಬಸ್‌ಗೆ ಡಿ*ಕ್ಕಿ ಹೊಡೆದಿದೆ. ನಂತರ, ಬೆಂಗಳೂರು ಕಾಲೇಜು ವಿದ್ಯಾರ್ಥಿಗಳಿದ್ದ ಖಾಸಗಿ ಬಸ್ ಚಾಲಕನ ನಿಯಂತ್ರಣ ಕೆಎಸ್‌ಆರ್‌ಟಿಸಿ ಬಸ್‌ಗೆ ಗು*ದ್ದಿದೆ.

    ಟೂರಿಸ್ಟ್ ಬಸ್ ರಸ್ತೆಗೆ ಉರುಳಿದ್ದು, ವಿದ್ಯಾರ್ಥಿಗಳು ಗಾ*ಯಗೊಂಡಿದ್ದಾರೆ. ಗಾ*ಯಾಳುಗಳನ್ನು ನೆಲ್ಯಾಡಿ ಮತ್ತು ಕಡಬದ ಖಾಸಗಿ ಆಸ್ಪತ್ರೆಗಳಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಲಾಗುತ್ತಿದೆ. ಉಪ್ಪಿನಂಗಡಿ ಪೋಲಿಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

    Continue Reading

    DAKSHINA KANNADA

    ಮಂಗಳೂರು: ಟ್ರಾಯ್‌ನಿಂದ ಕರೆ; 1.71 ಕೋ.ರೂ ವಂಚನೆ

    Published

    on

    ಮಂಗಳೂರು: ಭಾರತೀಯ ದೂರ ಸಂಪರ್ಕ ನಿಯಂತ್ರಣ ಪ್ರಾಧಿಕಾರದಿಂದ ಕರೆ ಮಾಡುವುದಾಗಿ ತಿಳಿಸಿ, ಮೊಬೈಲ್‌ ಸಿಮ್‌ ಖರೀದಿಸಿ ಕಾನೂನು ಬಾಹಿರ ಚಟುವಟಿಕೆ ಕುರಿತು ಆರೋಪಿಸಿ 1.71 ಕೋ.ರೂ ವಂಚಿಸಿರುವ ಕುರಿತು ಸೆನ್‌ ಠಾಣೆಯಲ್ಲಿ ಪ್ರಕರಣ ದಾಖಲಾಗದೆ.

    ನ.11 ರಂದು ಅಪರಿಚಿತ ವ್ಯಕ್ತಿಯೋರ್ವರು ಟ್ರಾಯ್‌ ಪ್ರತಿನಿಧಿ ಎಂದು ಕರೆ ಮಾಡಿದ್ದು, ‘ನಿಮ್ಮ ಹೆಸರಿನಲ್ಲಿ ಇನ್ನೊಂದು ಮೊಬೈಲ್‌ ನಂಬರ್‌ ರಿಜಿಸ್ಟರ್‌ ಆಗಿದೆ, ಮುಂಬೈನ ಅಂಧೇರಿ ಯ ಮೂಲಕ ಕಾನೂನು ಬಾಹಿರ ಚಟುವಟಿಕೆ ನಡೆದಿದೆ . ಮಾರ್ಕೆಟಿಂಗ್‌ ನೆಪದಲ್ಲಿ ಈ ನಂಬರ್‌ ಮೂಲಕ ಕರೆ ಮಾಡಿ ಕಿರುಕುಳ ನೀಡುತ್ತಿರುವ ಕುರಿತು ಎಫ್‌ಐಆರ್‌ ದಾಖಲಾಗಿದೆ. ಈಗಲೇ ನೀವು ಅಂಧೇರಿ ಠಾಣೆಯನ್ನು ಸಂಪರ್ಕ ಮಾಡಬೇಕು. ಇಲ್ಲದಿದ್ದರೆ ನಿಮ್ಮ ಎರಡು ಮೊಬೈಲ್‌ ಸೇವೆಯನ್ನು ಕೊನೆಗಳಿಸಲಾಗುವುದು’ ಎಂದು ಹೇಳಿದ್ದಾರೆ.

    ಅನಂತರ ವಾಟ್ಸಪ್‌ ಮೂಲಕ ವೀಡಿಯೋ ಕರೆ ಮಾಡಿದ್ದು, ನ.13 ರಿಂದ 19 ರ ನಡುವೆ 53 ಲಕ್ಷ, 74 ಲಕ್ಷ ರೂ, 44 ಲಕ್ಷ ರೂ, ಹೀಗೆ ಒಟ್ಟು 1.71 ಕೋ.ರೂ ವರ್ಗಾಯಿಸಿಕೊಂಡು ಮೋಸ ಮಾಡಿದ್ದಾನೆ. ದೂರುದಾರರು ಅಮೆರಿಕಾದ ಐಟಿ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದು, ವಾಪಾಸಾದ ಬಳಿಕ ಮಂಗಳೂರಿನಲ್ಲಿ ಫ್ಲ್ಯಾಟ್‌ ಒಂದನ್ನು ಖರೀದಿ ಮಾಡಿದ್ದರು. ಅವರು ಅವಿವಾಹಿತರಾಗಿದ್ದು, ಒಬ್ಬರೇ ವಾಸ ಮಾಡುತ್ತಿದ್ದರು. ಉದ್ಯೋಗದ ಮೂಲಕ ಉಳಿತಾಯ ಮಾಡಿದ ಸಂಪಾದನೆಯನ್ನು ಈ ಮೂಲಕ ಕಳೆದುಕೊಂಡಿದ್ದಾರೆ.

    Continue Reading

    DAKSHINA KANNADA

    ಆಶ್ರಮದ ಸ್ವಾಮಿಜಿಗೆ ಮೆಣಸಿನ ಪುಡಿಯಿಂದ ಅಭಿಷೇಕ; ಏನಿದು ಸುದ್ಧಿ !?

    Published

    on

    ಮಂಗಳೂರು/ಆಂಧ್ರಪ್ರದೇಶ: ಭಕ್ತರು ದೇವರಿಗೆ ಹಾಲಿನ ಅಭಿಷೇಕ, ಹೂವಿನ ಅಭಿಷೇಕ ನೀರು, ಚಂದನ ಅಥವಾ ಗಂಧದ ಅಭಿಷೇಕ ಮುಂತಾದವುಗಳನ್ನು ಅರ್ಪಿಸುವುದು ಸಾಮಾನ್ಯವಾಗಿದೆ. ಆದರೆ, ಆಂಧ್ರಪ್ರದೇಶದ ಏಲೂರು ಜಿಲ್ಲೆಯ ಶ್ರೀ ಶಿವದತ್ತ ಸ್ವಾಮಿಜಿ ಭಕ್ತರಿಂದ ಮೆಣಸಿನ ಪುಡಿ ಅಭಿಷೇಕ ಮಾಡಿಸಿಕೊಂಡಿರುವ ಸುದ್ಧಿ ಫುಲ್ ವೈರಲ್ ಆಗುತ್ತಿದೆ.


    ಆಂಧ್ರಪ್ರದೇಶದ ಪ್ರತ್ಯಂಗಿರ ಆಶ್ರಮದಲ್ಲಿ ಈ ವಿಶಿಷ್ಟವಾದ ಅಭಿಷೇಕ ನಡೆದಿದ್ದು, ಸುಮಾರು 100 ಕೆಜಿ ಮೆನಸಿನಕಾಯಿಯನ್ನು ಬಳಸಲಾಗಿದ್ದು, ಇದನ್ನು ಮಾಡುವುದರಿಂದ ಭಕ್ತರ ಕಷ್ಟಗಳು ದೂವಾಗುತ್ತದೆ ಎಂಬ ನಂಬಿಕೆ ಇದೆ. ಪ್ರತ್ಯಂಗಿರಿ ದೇವಿಗೆ ಮೆಣಸಿನಕಾಯಿ ಎಂದರೆ ತುಂಬಾ ಇಷ್ಟ. ದೇವಿಯ ಕೊರಳಿಗೆ ಕೆಂಪು ಮೆಣಸಿನಕಾಯಿ ಮಾಲೆ ಹಾಕಿ ಪೂಜಿಸಲಾಗಿದ್ದು, ಇದನ್ನು ‘ಕರಂ ಅಭಿಷೇಕ’ ಎಂದು ಕೂಡ ಕರೆಯಲಾಗುತ್ತದೆ.

    ಇದನ್ನು ಓದಿ:ಯೂಟ್ಯೂಬ್​ನಲ್ಲಿ ಸಿನಿಮಾ ವಿಮರ್ಶೆ ಮಾಡುವುದರ ಮೇಲೆ ಬಿತ್ತು ನಿಷೇಧ

    ಕಳೆದ 14 ವರ್ಷಗಳಿಂದ ಪ್ರತ್ಯಂಗಿರ ಆಶ್ರಮದಲ್ಲಿ ಮೆಣಸಿನಕಾಯಿಯಿಂದ ಅಭಿಷೇಕ ನಡೆಸಿಕೊಂಡು ಬರುತ್ತಿದೆ. ಪ್ರತೀ ವರ್ಷ ಈ ಅಭಿಷೇಕದಲ್ಲಿ ಸಾವಿರಾರು ಭಕ್ತರು ಪಾಲ್ಗೊಂಡು ಮೆಣಸಿನ ಪುಡಿ ಸಮರ್ಪಿಸುತ್ತಾರೆ. ಈ ಕ್ರಮ ಭಕ್ತರ ನಂಬಿಕೆಯೋ, ದೇವರ ಪವಾಡವೋ ಗೋತ್ತಿಲ್ಲ, ಆದರೆ ಇಂತಹ ಆಚರಣೆ ಆಧುನಿಕ ಯುಗದಲ್ಲಿ ಎಷ್ಟು ಸರಿ ಎಂಬುವುದು ಚಿಂತಾದಾಯಕ ವಿಷಯವಾಗಿದೆ.

    Continue Reading

    LATEST NEWS

    Trending