Connect with us

LATEST NEWS

ಹಿಂದಿನಿಂದಲೂ ಕರಾವಳಿ ಸೂಕ್ಷ್ಮ ಪ್ರದೇಶ: ಎಲ್ಲವನ್ನೂ ಸಮರ್ಥವಾಗಿ ನಿಭಾಯಿಸುತ್ತೇವೆ ಎಂದ ಎಡಿಜಿಪಿ ಅಲೋಕ್‌ ಕುಮಾರ್‌

Published

on

ಉಡುಪಿ: ಹಿಂದಿನಿಂದಲೂ ಕರಾವಳಿ ಸೂಕ್ಷ್ಮ ಪ್ರದೇಶ. ಕಾಲ ಕಾಲಕ್ಕೆ ಬೇರೆ ಬೇರೆ ಸ್ವರೂಪದಲ್ಲಿ ಬದಲಾಗುತ್ತಿರುತ್ತದೆ. ಹಿಂದೆ ಅಂಡರ್ ವಲ್ಡ್ ಇತ್ತು.

ಅದು ಈಗ ಬದಲಾಗಿದೆ. ಆದರೆ ಪೋಲಿಸರು ಯಾವುದೇ ಸಮಸ್ಯೆ ಎದುರಿಸಲು ಸಮರ್ಥರಾಗಿದ್ದಾರೆ ಎಂದು ಹೆಚ್ಚುವರಿ ಪೊಲೀಸ್‌ ಮಹಾನಿರ್ದೇಶಕ ಅಲೋಕ್‌ ಕುಮಾರ್‌ ಹೇಳಿದ್ದಾರೆ.


ಡಿಜಿಪಿಯಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಮೊದಲು ಮಂಗಳೂರಿಗೆ ಭೇಟಿ ನೀಡಿ ಸಭೆ ನಡೆಸಿ ನಂತರ ಉಡುಪಿಗೆ ಭೇಟಿ ನೀಡಿ ಜಿಲ್ಲಾಮಟ್ಟದ ಪೊಲೀಸ್ ಅಧಿಕಾರಿಗಳ ಸಭೆ ನಡೆಸಿದರು.

ನಂತರ ಮಾಧ್ಯಮಗಳೊಂದಿಗೆ ಮಾತನಾಡಿ,ಹಿಜಾಬ್ ಪ್ರಕರಣದಿಂದ ಕರಾವಳಿ ಸೂಕ್ಷ್ಮ ಪ್ರದೇಶವಾಗಿದ್ದಲ್ಲ.

ಕಾಲ ಕಾಲಕ್ಕೆ ಬೇರೆ ಬೇರೆ ಸ್ವರೂಪದಲ್ಲಿ ಪರಿಸ್ಥಿತಿ ಬದಲಾಗುತ್ತಿರುತ್ತದೆ. ಮುಂದೆ ಕೂಡ ಯಾವುದೇ ಸಮಸ್ಯೆ ಬಂದರೂ ಪೊಲೀಸರು ಅದನ್ನು ಎದುರಿಸಲು ಸಮರ್ಥರಿದ್ದಾರೆ ಎಂದರು.

ಉಡುಪಿಯಲ್ಲಿ ಹೆಚ್ಚುತ್ತಿರುವ ಆತ್ಮಹತ್ಯೆ ಪ್ರಕರಣ ವಿಚಾರಕ್ಕೆ ಸಂಬಂಧಿಸಿ ಪ್ರತಿಕ್ರಿಯಿಸಿದ ಅವರು, ಆತ್ಮಹತ್ಯೆ ಮಾಡಲು ಉಡುಪಿ ಯಾಕೆ ಆಯ್ಕೆ ಮಾಡಿ ಕೊಳ್ಳುತ್ತಿದ್ದಾರೆ ಗೊತ್ತಿಲ್ಲ. ಅದರ ಕಾರಣಗಳ ಬಗ್ಗೆ ವಿಶ್ಲೇಷಣೆ ಮಾಡುತ್ತಿದ್ದೇವೆ.

ಈ ರೀತಿಯ ಘಟನೆಗೆ ಕಡಿವಾಣ ಹಾಕುತ್ತೇವೆ. ಗೋ ಸಾಗಾಟಕ್ಕೆ ಕಡಿವಾಣಕ್ಕೆ ಕಾನೂನಿನ ಇತಿ ಮಿತಿಯಲ್ಲಿ ಕ್ರಮ ಕೈಗೊಳ್ಳಲು ನಾವು ಸಿದ್ದರಿದ್ದೇವೆ. ಆದರೆ ಯಾರು ಕಾನೂನನ್ನು ಕೈಗೆತ್ತಿಕೊಳ್ಳಬಾರದು.

ಪೋಲಿಸ್ ಇಲಾಖೆಗೆ ಮಾಹಿತಿ ನೀಡಿ, ಪೋಲಿಸರು ಕ್ರಮ ಕೈಗೊಳ್ಳುತ್ತಾರೆ. ಕಿರಿಯ ಅಧಿಕಾರಿಗಳು ಕ್ರಮ ಕೈಗೊಳ್ಳದಿದ್ದರೆ ಎಸ್‌ಪಿ, ಐಜಿ ಇದ್ದಾರೆ. ಅವರಿಗೆ ಮಾಹಿತಿ ನೀಡಿದರೆ ಸೂಕ್ತ ಕ್ರಮ ಕೈಗೊಳ್ಳುತ್ತೇವೆ.

ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣಕ್ಕೆ ಪ್ರತಿಕ್ರಿಯಿಸಿ, ತನಿಖೆ ನಡೆಯುತ್ತಿದೆ. ತಾಂತ್ರಿಕ ವಿಚಾರಗಳು, ಎಫ್‌ಎಸ್‌ಎಲ್‌ ನೆಲೆಯಲ್ಲೂ ತನಿಖೆ ನಡೆಯುತ್ತಿದೆ. ಅದಕ್ಕೆ ಇನ್ನೂ ಸ್ವಲ್ಪ ಕಾಲಾವಕಾಶ ಬೇಕು ಎಂದರು.

ಮಂಗಳೂರಿನಲ್ಲಿ ಮತ್ತೆ ಮರುಕಳಿಸಿದ ಹಿಜಾಬ್‌ ಪ್ರಕರಣಕ್ಕೆ ಪ್ರತಿಕ್ರಿಯಿಸಿ, ಸಮಸ್ಯೆಗಳು ಇದ್ದೆ ಇರುತ್ತದೆ. ಕಾನೂನು ಸುವ್ಯವಸ್ಥೆ ಭಂಗ ಆಗಲು ಬಿಡುವುದಿಲ್ಲ.

ಸ್ಥಳೀಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಅಹಿತಕರ ಘಟನೆಗೆ ಅವಕಾಶ ನೀಡಿಲ್ಲ ಎಂದು ಪ್ರತಿಕ್ರಿಯಿಸಿದರು.
ಈ ವೇಳೆ ಎಸ್ಪಿ ವಿಷ್ಣುವರ್ಧನ್‌ ಸೇರಿ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

LATEST NEWS

ಈಜಲು ಹೋದ ಅಣ್ಣ ನೀರು*ಪಾಲು.! ತಂಗಿಯ ವೀಡಿಯೋದಲ್ಲಿ ಸೆರೆಯಾಯ್ತು ಅಣ್ಣನ ಸಾ*ವಿನ ಕೊನೆ ಕ್ಷಣ..!

Published

on

ಕೋಲಾರ: ಕೃಷಿ ಹೊಂಡದಲ್ಲಿ ಈಜುತ್ತಿರುವುದನ್ನು ತಂಗಿ ವೀಡಿಯೋ ಮಾಡುತ್ತಿದ್ದಾಗಲೇ ಸಹೋದರ ನೀರಲ್ಲಿ ಮುಳುಗಿ ಮೃತಪಟ್ಟ ಘಟನೆಯೊಂದು ಕೋಲಾರದಲ್ಲಿ ನಡೆದಿದೆ. ಕೋಲಾರ ತಾಲೂಕಿನ ನಾಗವಾಳ ಗ್ರಾಮದಲ್ಲಿಈ ಘಟನೆ ನಡೆದಿದೆ.

swim death

ಮುಂದೆ ಓದಿ..; ಈ ಸರ್ವಾಧಿಕಾರಿಗೆ ಬೇಕಂತೆ ವರ್ಷಕ್ಕೆ 25 ಕನ್ಯೆಯರು..!! ಏನಿದು ಕಾಮಕಾಂಡ?

ಮೈಸೂರಿನ ರಾಘವೇಂದ್ರ ನಗರ ನಿವಾಸಿ ಗೌತಮ್(26 ವ) ಮೃತ ದುರ್ದೈವಿ. ಗೌತಮ್ ತನ್ನ ತಂದೆಯ ಊರು ವೇಮಗಲ್ ಸಮೀಪದ ನಾಗಾವಾಳಕ್ಕೆ ಬಂದಿದ್ದರು. ಈ ವೇಳೆ ಕುಟುಂಬ ಸದಸ್ಯರು ಹಾಗೂ ತಂಗಿಯ ಜೊತೆ ಕೃಷಿ ಹೊಂಡದ ಬಳಿ ಹೋಗಿದ್ದಾರೆ.  ಅಲ್ಲಿ ತಂಗಿಯ ಬಳಿ ವೀಡಿಯೋ ಮಾಡಲು ಮೊಬೈಲ್ ಕೊಟ್ಟು ಹೊಂಡಕ್ಕೆ ಈಜಲು ಧುಮುಕಿದ್ದಾರೆ. ಸರಿಯಾಗಿ ಈಜಲು ಗೊತ್ತಿರದ ಗೌತಮ್ ನೀರಿಗೆ ಧುಮುಕಿದ್ದು, ಇತ್ತ ತಂಗಿ ಈಚೆ ಬಾ ಎಂದು ಕೂಗುವುದು ವೀಡಿಯೋದಲ್ಲಿ ರೆಕಾರ್ಡ್‌ ಆಗಿದೆ. ನೋಡು ನೋಡುತ್ತಿದ್ದಂತೆ ಗೌತಮ್ ನೀರಲ್ಲಿ ಮುಳುಗಿ ಉಸಿರು ಚೆಲ್ಲಿದ್ದಾರೆ. ಇನ್ನು ಈ ವೀಡಿಯೋದಲ್ಲಿ ಗೌತಮ್ ನೀರಿನಲ್ಲಿ ಮುಳುಗುವ ದೃಶ್ಯ ಸೆರಯಾಗಿದೆ. ಈ ಕುರಿತಾಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

Continue Reading

FILM

ಉಡುಪಿಯ ಕಲ್ಪನಾ ಚಿತ್ರಮಂದಿರದಲ್ಲಿ ‘ಗಬ್ಬರ್ ಸಿಂಗ್’ ತುಳು ಚಲನಚಿತ್ರ ಬಿಡುಗಡೆ

Published

on

ಉಡುಪಿ : ಬಹು ನಿರೀಕ್ಷಿತ ತುಳು ಚಿತ್ರ “ಗಬ್ಬರ್ ಸಿಂಗ್” ಕರಾವಳಿ ಕರ್ನಾಟಕದ ಉಡುಪಿ ಮತ್ತು ದಕ್ಷಿಣ ಕನ್ನಡದ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದೆ. ಉಡುಪಿಯ ಕಲ್ಪನಾ ಚಿತ್ರಮಂದಿರದಲ್ಲಿ ಬಿಡುಗಡೆ ಸಮಾರಂಭವೂ ನಡೆಯಿತು.

ತೊಟ್ಟಂ ಚರ್ಚ್ ನ ಧರ್ಮಗುರು ಫಾದರ್ ಡೆನಿಸ್ ಡೆಸಾ, ಶಂಕರಪುರದ ಸಾಯಿ ಈಶ್ವರ ಗುರೂಜಿ, ಮಿಯಾರ್ ಮಸೀದಿಯ ಮೌಲ್ವಿ  ಅಬುಲ್ ಹಸನ್, ರಾಜಕೀಯ ಮುಖಂಡರಾದ ಗೀತಾಂಜಲಿ ಸುವರ್ಣ, ಬೈಕಾಡಿ ಸುಪ್ರಸಾದ್ ಶೆಟ್ಟಿ, ಉಡುಪಿ ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಹರೀಶ್ ಕಿಣಿ, ಸರಳಾ ಕಾಂಚನ್, ಶಿಲ್ಪಾ ಭಟ್, ಉಡುಪಿ ಬಿಜೆಪಿ ಮಾಜಿ ಅಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್, ಕೃಷ್ಣಮೂರ್ತಿ ಆಚಾರ್ಯ, ಉಡುಪಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಮೇಶ್ ಕಾಂಚನ್, ಚಿತ್ರದ ಕಲಾವಿದರಾದ ವೀಣಾ ಎಸ್ ಶೆಟ್ಟಿ, ಸಂದೀಪ್ ಭಕ್ತ, ಆದ್ಯ, ಚಂದ್ರಹಾಸ್ ಕಪ್ಪೆಟ್ಟು, ಕಿಶೂ ಎಂಟರ್‌ಪ್ರೈಸಸ್ ವ್ಯವಸ್ಥಾಪಕ ನಿರ್ದೇಶಕರಾದ ಕಿಶೋರ್ ಗೊನ್ಸಾಲ್ವಿಸ್ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗಿಯಾದರು.

ಇದನ್ನೂ ಓದಿ : ಕೋಸ್ಟಲ್ ವುಡ್ ಅಂಗಳದಲ್ಲಿ ‘ಗಬ್ಬರ್ ಸಿಂಗ್’ ಹವಾ ಶುರು

‘ಗಬ್ಬರ್ ಸಿಂಗ್’ ಚಿತ್ರವು ಕೌಟುಂಬಿಕ ಅಂಶಗಳನ್ನು ಒಳಗೊಂಡಿರುವ ಆಕ್ಷನ್ ಥ್ರಿಲ್ಲರ್ ಆಗಿದೆ. ಕಥೆ ಮತ್ತು ಚಿತ್ರಕಥೆಯನ್ನು ಸತೀಶ್ ಪೂಜಾರಿ ಬಾರ್ಕೂರು ರಚಿಸಿದ್ದು, ಪ್ರದೀಪ್ ನಿರ್ದೇಶನವಿದೆ. ತುಳು ಚಿತ್ರರಂಗದ ಹೆಸರಾಂತ ನಟರುಗಳು ಈ ಚಿತ್ರದಲ್ಲಿ ಪಾತ್ರವಾಗಿದ್ದಾರೆ.

Continue Reading

LATEST NEWS

ಆಭರಣ ಮಳಿಗೆಯಲ್ಲಿ ಎಸಿ ಸ್ಫೋಟ; ಮೂವರಿಗೆ ಗಂ*ಭೀರ ಗಾಯ

Published

on

ಬಳ್ಳಾರಿ :ಎಸಿ ಸ್ಫೋ*ಟಗೊಂಡ ಪರಿಣಾಮ ಮೂವರು ಗಂ*ಭೀರವಾಗಿ ಗಾ*ಯಗೊಂಡಿರುವ ಘಟನೆ ಬಳ್ಳಾರಿಯ ಕಲ್ಯಾಣ್ ಜ್ಯುವೆಲರ್ಸ್‍ನಲ್ಲಿ ನಡೆದಿದೆ. ಗಾಯಾಳುಗಳನ್ನು ವಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಗಾಯಾಳುಗಳಲ್ಲಿ ಓರ್ವನ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದು ಬಂದಿದೆ.

ಬಳ್ಳಾರಿ ಬೆಂಗಳೂರು ರಸ್ತೆಯಲ್ಲಿರುವ ಮಳಿಗೆಯಲ್ಲಿ ಈ ಅವಘ*ಡ ಸಂಭವಿಸಿದೆ. ಏಕಾಏಕಿ ಎಸಿ ಬ್ಲಾ*ಸ್ಟ್ ಆದ ಪರಿಣಾಮ ಮಳಿಗೆಯಲ್ಲಿದ್ದ ವಸ್ತುಗಳು ಚೆಲ್ಲಾಪಿಲ್ಲಿಯಾಗಿವೆ.

ಇದನ್ನೂ ಓದಿ : ಏನಾಶ್ಚರ್ಯ! ರೋಬೋಟ್ ಜೊತೆ ಮದುವೆಯಾಗುತ್ತಿದ್ದಾನೆ ಈ ಯುವಕ!

ಸ್ಫೋ*ಟದ ತೀವ್ರತೆಗೆ ಕಿಟಕಿ ಗಾಜುಗಳು ಒಡೆದು ಹೋಗಿವೆ. ಘಟನೆಯಿಂದಾಗಿ ಮಳಿಗೆಯಲ್ಲಿ ದಟ್ಟ ಹೊಗೆ ಆವರಿಸಿತ್ತು. ಶಾರ್ಟ್ ಸರ್ಕ್ಯೂಟ್‌ನಿಂದ ಸ್ಫೋ*ಟ ಸಂಭವಿಸಿದೆ ಎಂದು ತಿಳಿದು ಬಂದಿದೆ.

Continue Reading

LATEST NEWS

Trending