Saturday, October 1, 2022

ಜಾನ್ಸನ್ ಬೇಬಿ ಪೌಡರ್ ಕಂಪನಿಗೆ ಬಿಗ್ ಶಾಕ್-ಲೈಸೆನ್ಸ್ ಕ್ಯಾನ್ಸಲ್ ಮಾಡಿದ ಮಹಾರಾಷ್ಟ್ರ

ಮುಂಬೈ: ಸಾರ್ವಜನಿಕರ ಆರೋಗ್ಯದ ಕಾಳಜಿಯಿಂದ ಜಾನ್ಸನ್ ಅಂಡ್ ಜಾನ್ಸನ್ ಪ್ರೈವೇಟ್ ಲಿಮಿಟೆಡ್‌ನ ಬೇಬಿ ಪೌಡರ್ ಉತ್ಪಾದನಾ ಲೈಸೆನ್ಸ್‌ನ್ನು ಮಹಾರಾಷ್ಟ್ರದ ಆಹಾರ ಮತ್ತು ಔಷಧಗಳ ಆಡಳಿತ ರದ್ದುಗೊಳಿಸಿದೆ.


ಪ್ರಯೋಗಾಲಯದ ಪರೀಕ್ಷೆಯ ಸಮಯದಲ್ಲಿ ಇದರ ಪುಡಿಯ ಮಾದರಿ ಮಕ್ಕಳ ಚರ್ಮದ ಪಿಹೆಚ್ ಮೌಲ್ಯಕ್ಕೆ ಅನುಗುಣವಾಗಿಲ್ಲ ಎಂದು ದೃಢಪಟ್ಟ ಹಿನ್ನೆಲೆ ಮಹಾರಾಷ್ಟ್ರ ಎಫ್‌ಡಿಎ ಜಾನ್ಸನ್ ಕಂಪೆನಿ ಪರವಾನಗಿಯನ್ನು ರದ್ದುಗೊಳಿಸಿದೆ.

ಉತ್ಪನ್ನದ ಗುಣಮಟ್ಟದ ತಪಾಸಣೆಯ ಉದ್ದೇಶಕ್ಕಾಗಿ ಪುಣೆ ಹಾಗೂ ನಾಸಿಕ್‌ನಿಂದ ಎಫ್‌ಡಿಎ ಜಾನ್ಸನ್ ಬೇಬಿ ಪೌಡರ್‌ನ ಮಾದರಿಗಳನ್ನು ಪಡೆದುಕೊಂಡಿದೆ.

ಗುಣಮಟ್ಟದ ಪರೀಕ್ಷೆ ವೇಳೆ ಅದು ಐಎಸ್ 5339:2004 ರಷ್ಟು ನಿರ್ದಿಷ್ಟತೆಯನ್ನು ಪಡೆದುಕೊಂಡಿರದ ಕಾರಣ ಅದು ಮಕ್ಕಳ ತ್ವಚೆಗೆ ಯೋಗ್ಯವಾಗಿಲ್ಲ ಎಂದು ಘೋಷಿಸಲಾಗಿದೆ.

ಇದೀಗ ಎಫ್‌ಡಿಎ ಡ್ರಗ್ಸ್ ಕಾಸ್ಮೆಟಿಕ್ಸ್ ಆಕ್ಟ್ 1940 ಹಾಗೂ ನಿಯಮಗಳ ಅಡಿಯಲ್ಲಿ ಕಂಪನಿಗೆ ಶೋಕಾಸ್ ನೋಟಿಸ್ ನೀಡಿದೆ.

ಮಾತ್ರವಲ್ಲದೇ ಮಾರುಕಟ್ಟೆಯಲ್ಲಿರುವ ಉತ್ಪನ್ನಗಳ ಸ್ಟಾಕ್ ಅನ್ನು ಹಿಂಪಡೆಯುವಂತೆ ಸೂಚನೆ ನೀಡಿದೆ

LEAVE A REPLY

Please enter your comment!
Please enter your name here

Hot Topics

ಬಂಟ್ವಾಳ: ಬಸ್ & ಸ್ಕೂಟರ್ ಢಿಕ್ಕಿ-ಸವಾರನಿಗೆ ಗಂಭೀರ ಗಾಯ

ಬಂಟ್ವಾಳ: ಬಸ್ಸು ಮತ್ತು ಸ್ಕೂಟರ್ ನಡುವೆ ಭೀಕರ ಅಪಘಾತ ಸಂಭವಿಸಿ ಗಂಭೀರ ಗಾಯಗೊಂಡ ಬೈಕ್ ಸವಾರ ಆಸ್ಪತ್ರೆಗೆ ದಾಖಲಾದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಜಕ್ರಿಬೆಟ್ಟು ಎಂಬಲ್ಲಿ ನಡೆದಿದೆ.ಅಪಘಾತದಲ್ಲಿ ಬೈಕ್...

ಬಂಟ್ವಾಳ: ನಿರ್ಲಕ್ಷ್ಯ ವಹಿಸಿ ಕಾರ್ ಡ್ರೈವಿಂಗ್-ಢಿಕ್ಕಿ ಹೊಡೆದ ರಭಸಕ್ಕೆ ಎರಡು ಕಾರುಗಳು ಜಖಂ

ಬಂಟ್ವಾಳ: ನಿರ್ಲಕ್ಷ್ಯತನದಲ್ಲಿ ಕಾರು ಚಲಾಯಿಸಿ ರಸ್ತೆ ಬದಿ ನಿಲ್ಲಿಸಲಾಗಿದ್ದ ಎರಡು ಕಾರುಗಳಿಗೆ ಢಿಕ್ಕಿ ಹೊಡೆದು ಕಾರು ಜಖಂಗೊಂಡಿರುವ ಘಟನೆ ಬಂಟ್ವಾಳ ತಾಲೂಕಿನ ಪರಂಗಿಪೇಟೆ ಎಂಬಲ್ಲಿ ಇಂದು ನಡೆದಿದೆ.ಆಸೀಫ್ ಮಹಮ್ಮದ್ ಎಂಬಾತ ಬಂಟ್ವಾಳ ಕಡೆಯಿಂದ...

ಮಂಗಳೂರು: ಪೋಸ್ಟ್‌ಮ್ಯಾನ್ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪಿಗೆ ಜೈಲು ಶಿಕ್ಷೆ

ಮಂಗಳೂರು: ಎರಡು ವರ್ಷಗಳ ಹಿಂದೆ ಮಂಗಳೂರಿನ ಅಶೋಕ ನಗರದ ಅಂಚೆ ಕಚೇರಿಯ ಪೋಸ್ಟ್ ಮ್ಯಾನ್ ದಿನೇಶ್ ಅವರ ಕರ್ತವ್ಯಕ್ಕೆ ಅಡ್ಡಿ ಪಡಿಸಿದ ಪ್ರಕರಣದ ಆರೋಪಿ ಮಂಗಳೂರು ನಗರದ ಬೋಳೂರು ಮಠದಕಣಿ ನಿವಾಸಿ ಮನೀಶ್...