Saturday, October 1, 2022

ವಿಶ್ವದಲ್ಲೇ ಮೊದಲ ಬಾರಿ: ವಿಮಾನದಲ್ಲಿ ಆಫ್ರಿಕನ್ ಚೀತಾ ಭಾರತಕ್ಕೆ ಎಂಟ್ರಿ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ಹುಟ್ಟುಹಬ್ಬದ ಪ್ರಯುಕ್ತ ವಿಶ್ವದಲ್ಲೇ ಮೊದಲ ಬಾರಿಗೆ ಒಂದು ಖಂಡದಿಂದ ಮತ್ತೊಂದು ಖಂಡಕ್ಕೆ ವಿಮಾನದ ಮೂಲಕ ಆಫ್ರಿಕಾದ ನಮೀಬಿಯಾದಿಂದ ತಂದಿರುವ 8 ಚೀತಾಗಳನ್ನು ಮಧ್ಯಪ್ರದೇಶದ ಕುನೊ ರಾಷ್ಟ್ರೀಯ ಉದ್ಯಾನವನಕ್ಕೆ ಇಂದು ಬಿಡುಗಡೆ ಮಾಡಿದ್ದಾರೆ. ಇದು ವಿಶ್ವದ ಅತಿ ವೇಗದ ಚೀತಾಗಳಾಗಿವೆ.


ಬರೋಬ್ಬರಿ 70 ವರ್ಷಗಳ ಬಳಿಕ 8 ಚೀತಾಗಳು ಆಫ್ರಿಕಾದಿಂದ ಭಾರತಕ್ಕೆ ಬಂದಿಳಿದಿವೆ. 8 ಚೀತಾಗಳನ್ನು ಹೊತ್ತೊಯ್ಯುವ ವಿಶೇಷ ಸರಕು ವಿಮಾನವು ನಮೀಬಿಯಾದ ರಾಜಧಾನಿಯಿಂದ ಸುಮಾರು 10 ಗಂಟೆಗಳ ಪ್ರಯಾಣದ ಸಮಯದಲ್ಲಿ ವಿಶೇಷ ಮರದ ಪೆಟ್ಟಿಗೆಗಳನ್ನು ಬೋಯಿಂಗ್ ವಿಮಾನದಲ್ಲಿಟ್ಟು ಚೀತಾಗಳನ್ನು ಸಾಗಿಸಲಾಗಿದೆ.


8 ಚೀತಾಗಳಿಗೆ 6 ಆವರಣಗಳನ್ನು ನಿರ್ಮಿಸಲಾಗಿದೆ. ಭಾರತವು ಈ ವರ್ಷ 20 ಆಫ್ರಿಕನ್ ಚೀತಾಗಳನ್ನು ಸ್ವೀಕರಿಸಬೇಕಿತ್ತು. ಅವುಗಳಲ್ಲಿ 8 ಚೀತಾಗಳು ನಮೀಬಿಯಾದಿಂದ ಆಗಮಿಸಿದ್ದು, ಇನ್ನೂ 12 ಚೀತಾಗಳು ದಕ್ಷಿಣ ಆಫ್ರಿಕಾದಿಂದ ಆಗಮಿಸಬೇಕಾಗಿದೆ.


ಪರಿಸರ ಸಚಿವಾಲಯದ ಅಧಿಕಾರಿಗಳು ದಕ್ಷಿಣ ಆಫ್ರಿಕಾದ ಚೀತಾಗಳನ್ನು ತರಲು ಭಾರತದ ಕಡೆಯಿಂದ ಎಲ್ಲಾ ಪ್ರೋಟೋಕಾಲ್‌ಗಳನ್ನು ಪೂರ್ಣಗೊಳಿಸಿದ್ದಾರೆ. ಆದರೆ ದಕ್ಷಿಣ ಆಫ್ರಿಕಾದಿಂದ ಒಪ್ಪಿಗೆಗಾಗಿ ಸರ್ಕಾರ ಇನ್ನೂ ಕಾಯುತ್ತಿದೆ.

ನಮೀಬಿಯಾದಿಂದ 8 ಆಫ್ರಿಕನ್ ಚೀತಾಗಳು ಮಧ್ಯಪ್ರದೇಶಕ್ಕೆ ಬಂದಿಳಿದಿವೆ. ಅಲ್ಲಿಂದ ಕುನೋ ನ್ಯಾಷನಲ್ ಪಾರ್ಕ್‌ಗೆ ಚೀತಾಗಳನ್ನು ಸಾಗಿಸಲಾಗಿದೆ. 4ರಿಂದ 6 ವರ್ಷ ವಯಸ್ಸಿನ 5 ಹೆಣ್ಣು ಮತ್ತು 3 ಗಂಡು ಚೀತಾಗಳನ್ನು ವಿಶೇಷ ವಿಮಾನದ ಮೂಲಕ ಕರೆತರಲಾಗಿದೆ.


ವರ್ಷದ ನರೇಂದ್ರ ಮೋದಿ ಅವರು ನವದೆಹಲಿಯಿಂದ ಗ್ವಾಲಿಯರ್ ವಿಮಾನ ನಿಲ್ದಾಣಕ್ಕೆ ಬೆಳಿಗ್ಗೆ 9.20ರ ಸುಮಾರಿಗೆ ಆಗಮಿಸಿದ್ದಾರೆ. ಅಲ್ಲಿಂದ ಸುಮಾರು 165 ಕಿಮೀ ದೂರದಲ್ಲಿರುವ ಶಿಯೋಪುರ್ ಜಿಲ್ಲೆಯ ಕುನೋ ರಾಷ್ಟ್ರೀಯ ಉದ್ಯಾನವನಕ್ಕೆ ಆಗಮಿಸಿದ್ದು, 8 ಚೀತಾಗಳನ್ನು ಕ್ವಾರಂಟೈನ್ ಆವರಣಗಳಿಗೆ ಬಿಟ್ಟಿದ್ದಾರೆ.

LEAVE A REPLY

Please enter your comment!
Please enter your name here

Hot Topics

ಗಂಗೊಳ್ಳಿ ಮೀನುಗಾರಿಕಾ ಜೆಟ್ಟಿ ಕುಸಿತ ಪ್ರದೇಶಕ್ಕೆ ಸಚಿವ ಅಂಗಾರ ಭೇಟಿ

ಬೈಂದೂರು: ಉಡುಪಿ ಜಿಲ್ಲೆ ಗಂಗೊಳ್ಳಿ ಮೀನುಗಾರಿಕಾ ಬಂದರಿನ ನಿರ್ಮಾಣ ಹಂತದ ಜೆಟ್ಟಿ ಕುಸಿತವಾದ ಪ್ರದೇಶಕ್ಕೆ ಮೀನುಗಾರಿಕಾ ಸಚಿವ ಎಸ್. ಅಂಗಾರ ಅವರು ಭೇಟಿ ನೀಡಿ ಪರಿಶೀಲಿಸಿದರು.ನಂತರ ಮಾತನಾಡಿದ ಅವರು 'ಜೆಟ್ಟಿಯ 150 ಮೀಟರಿಗೂ...

ಮಂಗಳೂರು ತಹಶೀಲ್ದಾರ್ ಕಚೇರಿಯಲ್ಲಿ ಲೋಕಾಯುಕ್ತ ರೈಡ್ : ಪಕ್ಕದ RTO ಆಫಿಸ್ ಫುಲ್ ಖಾಲಿ..!  

ಮಂಗಳೂರು : ಮಂಗಳೂರಿನಲ್ಲಿ ಇಂದು ಲೋಕಾಯುಕ್ತ ಪೊಲೀಸರು ದಾಳಿ ನಡೆಸಿ ಅಧಿಕಾರಿಯ ಸಹಾಯಕನನ್ನು ರೆಡ್ ಹ್ಯಾಂಡಾಗಿ ಹಿಡಿದಿದ್ದಾರೆ.   ಇತ್ತ ತಹಶೀಲ್ದಾರ್ ಕಚೇರಿಯಲ್ಲಿ ಲೋಕಾಯುಕ್ತ ರೈಡ್ ಆಗಿ ಸಹಾಯಕ ಶಿವಾನಂದ ರೆಡ್ ಹ್ಯಾಂಡಾಗಿ ಸಿಕ್ಕಿ...

ಕಡಬದಲ್ಲಿ 14 ವರ್ಷದ ಬಾಲಕಿಯ ಮೇಲೆ ಪೈಶಾಚಿಕ ಕೃತ್ಯ ಮಹಿಳೆ ಸೇರಿ 14 ಮಂದಿ ವಿರುದ್ಧ FIR

ಕಡಬ : ದಕ್ಷಿಣ ಕನ್ನಡ ಜಿಲ್ಲೆಯ ಕಡಬದ ಸುಬ್ರಹ್ಮಣ್ಯದಲ್ಲಿ ಅಪ್ರಾಪ್ತೆಯ ಮೇಲೆ ಸಾಮೂಹಿಕ ಅತ್ಯಾಚಾರದ ಪೈಶಾಚಿಕ ಕೃತ್ಯ ನಡೆದಿದೆ. ಈ ಬಗ್ಗೆ ಸುಬ್ರಹ್ಮಣ್ಯ ಪೊಲೀಸ್ ಠಾಣೆಯಲ್ಲಿ ಮಹಿಳೆ ಸೇರಿ 14 ಮಂದಿಯ ವಿರುದ್ಧ...