Friday, August 12, 2022

ಕೊಂದ ಶವ ಸಾಗಿಸಲು ಕಷ್ಟವೆಂದು ಸೊಂಟದಿಂದ ಕತ್ತರಿಸಿ ನಾಲೆಗೆ ಎಸೆದ್ರು..!: ಡಬಲ್‌ ಮರ್ಡರ್‌ ಕೇಸ್‌ ಬೇಧಿಸಿದ ಪೊಲೀಸ್‌

ಮಂಡ್ಯ: ಇಬ್ಬರು ಮಹಿಳೆಯರನ್ನು ಬರ್ಬರವಾಗಿ ಕೊಂದು, ಹೆಣ ಬೈಕ್‌ನಲ್ಲಿ ತೆಗೆದುಕೊಂಡು ಹೋಗಲು ಕಷ್ಟವಾಗುತ್ತದೆ ಎಂದು ದೇಹವನ್ನು ಎರಡು ತುಂಡರಿಸಿ ಸೊಂಟದ ಭಾಗವನ್ನು ಮಾತ್ರ ನಾಲೆಗೆ ಎಸೆದ ಪ್ರಕರಣ ಸಂಬಂಧ ಇಬ್ಬರು ಆರೋಪಿಗಳನ್ನು ಮಂಡ್ಯ ಪೊಲೀಸರು ಬಂಧಿಸಿದ್ದಾರೆ.


ಪ್ರಕರಣ ಸಂಬಂಧ ರಾಮನಗರ ಜಿಲ್ಲೆಯ ಮಾಗಡಿ ತಾಲೂಕಿನ ಕುದೂರು ಹೋಬಳಿಯ ಕೋಡಿಹಳ್ಳಿ ಕಾಲೋನಿ ನಿವಾಸಿ ಹಾಗೂ ಪಾಂಡವಪುರ ತಾಲೂಕಿನ ಹರವು ಗ್ರಾಮದ ಮಹಿಳೆಯನ್ನು ಬಂಧಿಸಲಾಗಿದೆ.

ತನಿಖೆಯ ವೇಳೆ ಇವರಿಬ್ಬರು ಒಟ್ಟು ಮೂರು ಕೊಲೆಗಳನ್ನು ಮಾಡಿದ್ದು, ಮತ್ತೆ 5 ಕೊಲೆಗಳಿಗೆ ಸಂಚು ರೂಪಿಸಿದ್ದರು ಎಂಬ ಭಯಾನಕ ಅಂಶ ಬಯಲಿಗೆ ಬಂದಿದೆ.
ಚಿತ್ರದುರ್ಗ ಜಿಲ್ಲೆಯ ಹೊಸದುರ್ಗದ ಪಾರ್ವತಿ, ಚಾಮರಾಜ ನಗರದ ಗೀತಾ ಅಲಿಯಾಸ್ ಪುಟ್ಟಿ ಕೊಲೆಯಾದವರು.
ಘಟನೆ ವಿವರ
ಪ್ರಕರಣ ಸಂಬಂಧ ದಕ್ಷಿಣ ವಲಯ ಪೊಲೀಸ್‌ ಮಹಾನಿರೀಕ್ಷಕ ಪ್ರವೀಣ್ ಪವಾರ್‌ ಮಾಹಿತಿ ನೀಡಿ, ಜೂ.7ರಂದು ಪಾಂಡವಪುರ ತಾಲೂಕಿನ ಬೇಬಿ ಗ್ರಾಮದ ಕೆರೆಕೋಡಿ ಕಟ್ಟೆ ಕೆಳಗೆ ಹರಿಯುವ ನೀರಿನಲ್ಲಿ 30-32 ವರ್ಷ ವಯಸ್ಸಿನ ಅಪರಿಚಿತ ಮಹಿಳೆ ಹಾಗೂ ಶ್ರೀರಂಗಪಟ್ಟಣ ತಾಲೂಕಿನ ಅರಕೆರೆ ಗ್ರಾಮದ ಮಾಡರಹಳ್ಳಿ ರಸ್ತೆ ಬಳಿ ಸಿಡಿಎಸ್‌ ನಾಲೆಗೆ ಸಂಪರ್ಕಿಸುವ ಸಾಲೋಡು ಹಳ್ಳದ ಪಕ್ಕದ ಕೈಲ ಭತ್ತದ ಗದ್ದೆಯಲ್ಲಿ 40-45 ವರ್ಷ ವಯಸ್ಸಿನ ಮತ್ತೊಬ್ಬ ಅಪರಿಚಿತ ಮಹಿಳೆಯ ಶವ ಪತ್ತೆಯಾಗಿದ್ದವು.

ಎರಡೂ ಮೃತದೇಹಗಳಲ್ಲಿ ಸೊಂಟದ ಕೆಳಭಾಗ ಮಾತ್ರ ಇತ್ತು. ಈ ಎರಡೂ ಮೃತದೇಹವನ್ನು ಗುರುತು ಪತ್ತೆ ಹಚ್ಚುವುದೇ ಪೊಲೀಸರಿಗೆ ಸವಾಲಾಗಿತ್ತು ಎಂದರು.

ಗೀತಾ ಹಾಗೂ ಪಾರ್ವತಿಗೆ ಗಾರ್ಮೆಂಟ್ಸ್ ಮತ್ತು ಹೋಂ ನರ್ಸಿಂಗ್‌ ಕೆಲಸ ಕೊಡಿಸುವುದಾಗಿ ನಂಬಿಸಿ ಇಬ್ಬರನ್ನೂ ಮೇಟಗಳ್ಳಿಯ ಬಾಡಿಗೆ ಮನೆಗೆ ಕರೆಸಿಕೊಂಡು ಇಬ್ಬರನ್ನೂ ಕೊಲೆ ಮಾಡಲಾಗಿತ್ತು.
ಗೀತಾ ಕಾಣೆಯಾಗಿದ್ದ ಪ್ರಕರಣ ಜು.7ರಂದು ಚಾಮರಾಜ ನಗರ ಪೊಲೀಸ್‌ ಠಾಣೆಯಲ್ಲಿ ದಾಖಲಾಗಿತ್ತು.

ದೇಹವನ್ನು ಎರಡು ತುಂಡರಿಸಿ ಬೇರೆ ಬೇರೆ ಕಡೆ ಬಿಸಾಡಿದ್ದರು..!
ಪಾರ್ವತಿಯನ್ನು ಮೇ. 30ರಂದು, ಗೀತಾಳನ್ನು ಜೂ. 3ರಂದು ಕೊಲೆ ಮಾಡಲಾಗಿತ್ತು. ಶವಗಳನ್ನು ಬೈಕ್‌ಗಳಲ್ಲಿ ಸಾಗಿಸುವುದು ಕಷ್ಟವೆಂಬ ಕಾರಣಕ್ಕೆ ದೇಹಗಳನ್ನು ಅರ್ಧಕ್ಕೆ ತುಂಡರಿಸಿ ಬೇರೆ ಬೇರೆ ಕಡೆ ಬಿಸಾಡಿಸಿದ್ದರು.

9 ತನಿಖಾ ತಂಡ, 1,116ಕ್ಕೂ ಕಾಣೆಯಾದ ಮಹಿಳೆಯರ ಪ್ರಕರಣ ಪರಿಶೀಲನೆ
ಪ್ರಕರಣಕ್ಕೆ ಸಂಬಂಧಿಸಿದಂತೆ ಸಾವಿರಕ್ಕೂ ಹೆಚ್ಚು ಕರ ಪತ್ರಗಳನ್ನು ಅಕ್ಕಪಕ್ಕದ ಜಿಲ್ಲೆಗಳಲ್ಲಿ ಹಂಚಿಕೆ ಮಾಡಿ ಮೃತರ ಗುರುತು ಪತ್ತೆಗಾಗಿ ಜನರು ಹಾಗೂ ಪೊಲೀಸರ ಸಹಕಾರ ಕೋರಲಾಗಿತ್ತು.

ಜೊತೆಗೆ 9 ತನಿಖಾ ತಂಡಗಳನ್ನು ರಚಿಸಿ, ತಾಂತ್ರಿಕ ಮಾಹಿತಿ ಕಲೆ ಹಾಕಲು 2 ತಾಂತ್ರಿಕ ಪರಿಣಿತ ತಂಡಗಳನ್ನು ರಚಿಸಲಾಗಿತ್ತು. ರಾಜ್ಯ ಮತ್ತು ಹೊರ ರಾಜ್ಯಗಳಲ್ಲಿ 1,116ಕ್ಕೂ ಹೆಚ್ಚಿನ ಮಹಿಳೆಯರು ಕಾಣೆಯಾದ ಪ್ರಕರಣಗಳನ್ನು ಪರಿಶೀಲಿಸಲಾಗಿತ್ತು.

LEAVE A REPLY

Please enter your comment!
Please enter your name here

Hot Topics

ಉಡುಪಿ: ಮನೆಯ ಹಿಂಬಾಗಿಲು ಒಡೆದು ಚಿನ್ನಾಭರಣ ಕಳವು-ಆರೋಪಿ ಅಂದರ್

ಉಡುಪಿ: ಮನೆಯ ಹಿಂಬಾಗಿಲು ಒಡೆದು ಚಿನ್ನಾಭರಣ ಮತ್ತು ನಗದನ್ನು ಕಳವು ಮಾಡಿದ ಆರೋಪಿಯನ್ನು ಕುಂದಾಪುರ ಪೊಲೀಸರು ಬಂಧಿಸಿದ್ದಾರೆ.ಕುಂಬಾಸಿ ವಿನಾಯಕ ನಗರ ನಿವಾಸಿ ಸುಭಾಷ್ ಚಂದ್ರ ಆಚಾರ್ಯ (40) ಬಂಧಿತ ಆರೋಪಿ. ಇವರು ಮೂಲತಃ ಮರವಂತೆಯ...

‘ಕಾಡು ಕುದುರೆ ಓಡಿ ಬಂದಿತ್ತಾ’ ಖ್ಯಾತಿಯ ಸುಬ್ಬಣ್ಣ ಇನ್ನಿಲ್ಲ

ಬೆಂಗಳೂರು: ಖ್ಯಾತ ಹಾಡುಗಾರ, ವಕೀಲ ಶಿವಮೊಗ್ಗದ ಸುಬ್ಬಣ್ಣ ಅವರು ಅನಾರೋಗ್ಯದಿಂದ ನಿನ್ನೆ ರಾತ್ರಿ ಬೆಂಗಳೂರಿನಲ್ಲಿ ನಿಧನರಾಗಿದ್ದಾರೆ.ಅವರಿಗೆ 83 ವರ್ಷ ವಯಸ್ಸಾಗಿತ್ತು. 'ಕಾಡುಕುದುರೆ' ಚಿತ್ರದ ಹಾಡಿಗೆ ರಾಷ್ಟ್ರಪ್ರಶಸ್ತಿಯನ್ನೂ ಪಡೆದುಕೊಂಡಿದ್ದ ಅವರು, ವಕೀಲೆ ವೃತ್ತಿಯನ್ನೂ ಮಾಡುತ್ತಿದ್ದರು....

“ಸ್ವಾತಂತ್ರ್ಯ ಬಂದು 75 ವರ್ಷವಾದರೂ ಲೋಕಾಯುಕ್ತ ಬೆಂಬಲಿಸುವ ರಾಜಕೀಯ ಪಕ್ಷ ಹೊಂದಿಲ್ಲದಿರುವುದು ದುರದೃಷ್ಟಕರ”

ಬೆಂಗಳೂರು: “ಸ್ವಾತಂತ್ರ್ಯ ಬಂದು 75 ವರ್ಷಗಳಾದರೂ ಲೋಕಾಯುಕ್ತದಂಥ ಸ್ವತಂತ್ರ ಸಂಸ್ಥೆಯು ಪಾರದರ್ಶಕವಾಗಿ ಕೆಲಸ ಮಾಡಲು ಬೆಂಬಲಿಸುವ ಇಚ್ಛೆಯನ್ನು ಯಾವುದೇ ರಾಜಕೀಯ ಪಕ್ಷ ಹೊಂದಿಲ್ಲದಿರುವುದು ದುರದೃಷ್ಟಕರ” ಎಂದು ಕರ್ನಾಟಕ ಹೈಕೋರ್ಟ್‌ ಬೇಸರ ವ್ಯಕ್ತಪಡಿಸಿದೆ.ಬೆಂಗಳೂರು ವಕೀಲರ...