Connect with us

  FILM

  ತಮಿಳು ನಟ ಸೂರ್ಯ ವಿರುದ್ಧ ನ್ಯಾಯಾಂಗ ನಿಂದನೆ ತನಿಖೆ ನಡೆಸಲು ಮದ್ರಾಸ್ ಹೈಕೋರ್ಟ್ ಜಡ್ಜ್ ಒತ್ತಾಯ

  Published

  on

  ಚೆನ್ನೈ: ಕೊರೊನಾ ನಡುವೆ ನೀಟ್ ಪರೀಕ್ಷೆ ನಡೆಸುವ ಕೇಂದ್ರ ಸರಕಾರ ಆದೇಶವನ್ನು ಎತ್ತಿ ಹಿಡಿದ ಸುಪ್ರೀಂಕೋರ್ಟ್ ವಿರುದ್ದ ಹೇಳಿಕೆ ನೀಡಿದ ತಮಿಳಿನ ಖ್ಯಾತ ನಟ ಸೂರ್ಯ ವಿರುದ್ದ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸಬೇಕೆಂದು ಮದ್ರಾಸ್ ಹೈಕೋರ್ಟ್ ನ ಮುಖ್ಯ ನ್ಯಾಯಮೂರ್ತಿ ಅಮ್ರೇಶ್ವರ್ ಪ್ರತಾಪ್ ಸಹಿ ಅವರಿಗೆ ನ್ಯಾಯಾಧೀಶರಾದ ಎಸ್ ಎಂ ಸುಬ್ರಹ್ಮಣ್ಯಂ ಪತ್ರದ ಮೂಲಕ ಒತ್ತಾಯಿಸಿದ್ದಾರೆ.


  ನಿನ್ನೆ ನಟ ಸೂರ್ಯ ಹೇಳಿಕೆಯೊಂದನ್ನು ನೀಡಿ, ತಮಿಳು ನಾಡಿನಲ್ಲಿ ಮೂವರು ವಿದ್ಯಾರ್ಥಿಗಳು ನೀಟ್ ಪರೀಕ್ಷೆ ಭಯದಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬಡ ಕುಟುಂಬಗಳ ವಿದ್ಯಾರ್ಥಿಗಳ ಕನಸುಗಳನ್ನು ಕಿತ್ತು ಹಾಕುತ್ತಿರುವ ನೀಟ್ ಪರೀಕ್ಷೆಯನ್ನು ಶಾಶ್ವತವಾಗಿ ರದ್ದುಗೊಳಿಸಿ ಎಂದು ಸರ್ಕಾರವನ್ನು ಒತ್ತಾಯಪಡಿಸಿದ್ದರು. ನೀಟ್ ಪರೀಕ್ಷೆಯನ್ನು ತೆಗೆದುಹಾಕುವ ಸಂಬಂಧ ಇದಕ್ಕೆ ಸಂಬಂಧಪಟ್ಟವರೆಲ್ಲರೂ ಧ್ವನಿಯೆತ್ತಬೇಕು ಎಂದು ನಟ ಒತ್ತಾಯಿಸಿದ್ದರು.


  ಈ ಹೇಳಿಕೆ ವೇಳೆ ನಟ ಸೂರ್ಯ, ನ್ಯಾಯಾಲಯದ ಕಾರ್ಯವೈಖರಿ ಬಗ್ಗೆ ಕೂಡ ಮಾತನಾಡಿದ್ದು, ಕೋವಿಡ್-19 ಸಾಂಕ್ರಾಮಿಕ ರೋಗದ ಭಯದಲ್ಲಿ ನ್ಯಾಯಾಲಯಗಳು ವರ್ಚುವಲ್ ವಿಚಾರಣೆ ಮೂಲಕ ನ್ಯಾಯ ವಿಲೇವಾರಿ ಮಾಡುತ್ತಿವೆ, ಆದರೆ ವಿದ್ಯಾರ್ಥಿಗಳಿಗೆ ಮಾತ್ರ ಯಾವುದೇ ಭಯವಿಲ್ಲದೆ ನೀಟ್ ಪರೀಕ್ಷೆಯನ್ನು ಪರೀಕ್ಷಾ ಕೇಂದ್ರಗಳಿಗೆ ಹೋಗಿ ಬರೆಯಿರಿ ಎಂದು ಹೇಳುತ್ತಿರುವುದು ಎಷ್ಟು ಸರಿ ಎಂದು ಪ್ರಶ್ನಿಸಿದ್ದಾರೆ.

  ಈ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿರುವ ನ್ಯಾಯಾಧೀಶ ಎಸ್ ಎಂ ಸುಬ್ರಹ್ಮಣ್ಯಮ್, ನಟ ಸೂರ್ಯ ಅವರ ಹೇಳಿಕೆಯನ್ನು ನೋಡಿದರೆ, ನ್ಯಾಯಾಧೀಶರು ತಮ್ಮ ಸ್ವಂತ ಜೀವದ ಭಯದಿಂದ ವಿಡಿಯೊ ಕಾನ್ಫರೆನ್ಸ್ ಮೂಲಕ ನ್ಯಾಯದಾನ ಮಾಡುತ್ತಾರೆ,ವಿದ್ಯಾರ್ಥಿಗಳಿಗೆ ಯಾವುದೇ ಭಯವಿಲ್ಲದೆ ನೀಟ್ ಪರೀಕ್ಷೆ ಬರೆಯಿರಿ ಎಂದು ಆದೇಶ ನೀಡುವ ಮೂಲಕ ಮಾನವೀಯತೆ, ನೈತಿಕತೆ ತೋರಿಸುತ್ತಿಲ್ಲ ಎಂಬ ಮನೋಭಾವ ಹೊಂದಿದ್ದಾರೆ ಎಂಬರ್ಥ ನೀಡುತ್ತದೆ. ಇದು ನನ್ನ ಅಭಿಪ್ರಾಯದಲ್ಲಿ ನ್ಯಾಯಾಂಗ ನಿಂದನೆಯಾಗಿದ್ದು, ಈ ದೇಶದ ನ್ಯಾಯಾಂಗ ವ್ಯವಸ್ಥೆ ಮತ್ತು ನ್ಯಾಯಾಧೀಶರ ಮೇಲೆ ನಂಬಿಕೆ, ಗೌರವ ನಟ ಸೂರ್ಯ ಅವರಿಗಿಲ್ಲ ಎಂಬುದನ್ನು ತೋರಿಸುತ್ತದೆ. ಇದರಿಂದ ಸಾರ್ವಜನಿಕರಿಗೆ ನ್ಯಾಯಾಂಗ ವ್ಯವಸ್ಥೆ ಮೇಲೆ ನಂಬಿಕೆ, ವಿಶ್ವಾಸ, ಗೌರವ ಹೊರಟುಹೋಗುತ್ತದೆ ಎಂದು ನ್ಯಾಯಾಧೀಶ ಸುಬ್ರಹ್ಮಣ್ಯಂ ಆರೋಪಿಸಿದ್ದಾರೆ.

  FILM

  ಸರಳವಾಗಿ ಮದುವೆಯಾದ ನಟಿ, ‘ಬಿಗ್ ಬಾಸ್ ಕನ್ನಡ 10’ ಸ್ಪರ್ಧಿ ಸಿರಿ

  Published

  on

  ಬೆಂಗಳೂರು/ ಮಂಗಳೂರು : ಖ್ಯಾತ ಕಿರುತೆರೆ ನಟಿ ಹಾಗೂ ಬಿಗ್ ಬಾಸ್ ಸೀಸನ್ 10 ರ ಸ್ಪರ್ಧಿ ಸಿರಿ ವೈವಾಹಿಕ ಜೀವನಕ್ಕೆ ಪದಾರ್ಪಣೆ ಮಾಡಿದ್ದಾರೆ. ಜೂನ್ 13 ರಂದು ಉದ್ಯಮಿ ಮತ್ತು ನಟ ಪ್ರಭಾಕರ್ ಬೋರೇಗೌಡ ಜೊತೆಗೆ ಸರಳವಾಗಿ ವಿವಾಹವಾಗಿದ್ದಾರೆ.
  ಸಿರಿ ಪತಿ ಪ್ರಭಾಕರ್ ಮಂಡ್ಯ ಮೂಲದವರಾಗಿದ್ದು, ಬೆಂಗಳೂರಿನಲ್ಲಿದ್ದಾರೆ. ಚಿಕ್ಕಬಳ್ಳಾಪುರದ ನಂದಿ ಗ್ರಾಮದಲ್ಲಿ ಮದುವೆ ನಡೆದಿದೆ. ಆಪ್ತರು ಮತ್ತು ಗುರುಹಿರಿಯರ ಸಮ್ಮುಖದಲ್ಲಿ ಸರಳವಾಗಿ ವಿವಾಹ ನಡೆದಿದೆ.


  ಫೋಟೋ, ವೀಡಿಯೋ ವೈರಲ್ :

  ಎರಡು ದಿನಗಳ ಹಿಂದೆ ಸಿರಿ ಅವರ ಅರಿಶಿಣ ಶಾಸ್ತ್ರದ ವಿಡಿಯೋಗಳು ವೈರಲ್ ಆಗಿದ್ದವು. ಅದು ಸೀರಿಯಲ್ ಅಥವಾ ಸಿನಿಮಾಗಾಗಿ ಇರಬಹುದು ಎಂದು ಹೇಳಲಾಗುತ್ತಿತ್ತು. ಆದರೆ, ಇದು ನಿಜವಾದ ಮದುವೆಯಾಗಿದ್ದು, ಮದುವೆಯ ಫೋಟೋಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿವೆ.


  ಸಿರಿ ಹಲವು ಸಿನಿಮಾ, ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ತಮ್ಮ ಸೌಂದರ್ಯ, ಸಹಜ ನಟನೆಯಿಂದ ಗಮನ ಸೆಳೆದಿದ್ದಾರೆ. ಬಿಗ್ ಬಾಸ್ ಸೀಸನ್ 10 ನಲ್ಲೂ ಸ್ಪರ್ಧಿಯಾಗಿ ಗಮನ ಸೆಳೆದಿದ್ದರು. ಅವರಿಗೆ ಮದುವೆಯ ಬಗ್ಗೆ ಯಾವಗಲೂ ಪ್ರಶ್ನಿಸಲಾಗುತ್ತಿತ್ತು. ”ಇಷ್ಟುದಿನಗಳ ಕಾಲ ಯೋಗ್ಯ ಹುಡುಗ ಸಿಕ್ಕಿಲ್ಲ, ಮದುವೆ ಅವಶ್ಯಕತೆ ಇದೆಯಾ ಎಂಬ ಪ್ರಶ್ನೆ ಎದುರಾಗಿತ್ತು. ಹೀಗಾಗಿ ಮದುವೆ ಆಗಿಲ್ಲ” ಎಂದೇ ಅವರು ಹೇಳುತ್ತಿದ್ದರು.

  ಇದನ್ನೂ ಓದಿ : ತಂದೆಯ ಬಂಧನದ ಬಗ್ಗೆ ವಿನೀಶ್ ಭಾವುಕ ಪೋಸ್ಟ್; ನಿಂದಿಸಿದವರಿಗೆ ಧನ್ಯವಾದ ಎಂದ ದರ್ಶನ್ ಪುತ್ರ

  ಅಭಿಮಾನಿಗಳಿಂದ ಶುಭಾಶಯ

  ಸಿರಿ ದೇವಸ್ಥಾನದಲ್ಲಿ ಸರಳವಾಗಿ ಮದುವೆ ಮಾಡಿಕೊಂಡು ಶಾಕ್ ಕೊಟ್ಟಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಮದುವೆ ವಿಡಿಯೋ ವೈರಲ್ ಆಗ್ತಿದೆ. ಜೊತೆಗೆ ಸಿರಿ ಅವರ ಅಭಿಮಾನಿಗಳು ಶುಭ ಹಾರೈಸಿದ್ದಾರೆ.

  Continue Reading

  FILM

  ತಂದೆಯ ಬಂಧನದ ಬಗ್ಗೆ ವಿನೀಶ್ ಭಾವುಕ ಪೋಸ್ಟ್; ನಿಂದಿಸಿದವರಿಗೆ ಧನ್ಯವಾದ ಎಂದ ದರ್ಶನ್ ಪುತ್ರ

  Published

  on

  ಮಂಗಳೂರು/ ಬೆಂಗಳೂರು : ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್ ಬಂಧಿತರಾಗಿದ್ದಾರೆ. ಈ ಘಟನೆಯಿಂದ ಅವರ ಕುಟುಂಬ ನೋವಿನಲ್ಲಿದೆ. ದರ್ಶನ್ ಬಂಧನದ ಬೆನ್ನಲ್ಲೇ ಪತ್ನಿ ವಿಜಯಲಕ್ಷ್ಮೀ ಸೋಶಿಯಲ್ ಮೀಡಿಯಾದಲ್ಲಿ ತಮ್ಮ ಪ್ರೊಫೈಲ್ ಫೋಟೋ ಡಿಲೀಟ್ ಮಾಡಿಕೊಂಡಿದ್ದರು. ಅಲ್ಲದೇ, ತಾವು ಫಾಲೋ ಮಾಡುತ್ತಿದ್ದವರನ್ನೆಲ್ಲಾ ಅನ್ ಫಾಲೋ ಕೂಡಾ ಮಾಡಿದ್ದರು. ಬಳಿಕ, ತಮ್ಮ ಸೋಶಿಯಲ್ ಮೀಡಿಯಾ ಅಕೌಂಟ್ ಗಳನ್ನೇ ಡಿಲೀಟ್ ಮಾಡಿಬಿಟ್ಟಿದ್ದರು.

  ದರ್ಶನ್ ಪ್ರಕರಣದ ಬಗ್ಗೆ ಪತ್ನಿ ವಿಜಯಲಕ್ಷ್ಮಿ ಮೌನಕ್ಕೆ ಶರಣಾಗಿದ್ದಾರೆ. ಆದರೆ, ಈಗ ಮಗ ವಿನೀಶ್ ತಂದೆಯ ಬಂಧನದ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ಈ ಬಗ್ಗೆ ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಭಾವುಕ ಪೋಸ್ಟ್ ಕೂಡ ಮಾಡಿದ್ದಾರೆ.

  ಧನ್ಯವಾದ ಎಂದ ವಿನೀಶ್ :

  ಇನ್‌ಸ್ಟಾಗ್ರಾಂನಲ್ಲಿ ಸ್ಟೋರಿ ಭಾವುಕ ಪೋಸ್ಟ್ ವೊಂದನ್ನು ವಿನೀಶ್ ಹಂಚಿಕೊಂಡಿದ್ದಾರೆ. ತಂದೆಯನ್ನು ನಿಂದಿಸಿದವರಿಗೆ ಧನ್ಯವಾದ ಎಂದು ಅವರು ಬರೆದುಕೊಂಡಿದ್ದಾರೆ.


  “ನನ್ನ ತಂದೆ ಬಗ್ಗೆ ಕೆಟ್ಟ ಕಾಮೆಂಟ್ಸ್ ಹಾಗೂ ಅಸಭ್ಯ ಭಾಷೆಯಲ್ಲಿ ನಿಂದಿಸುತ್ತಿರುವವರಿಗೆ ಧನ್ಯವಾದ. ನನಗೀಗ 15 ವರ್ಷ. ನನಗೂ ಭಾವನೆಗಳಿವೆ ಎಂಬುದನ್ನು ನೀವು ಪರಿಗಣಿಸಲೇ ಇಲ್ಲ.  ಈ ಕಷ್ಟದ ಸಮಯದಲ್ಲಿ ನನ್ನ ತಾಯಿ ಮತ್ತು ತಂದೆಗೆ ನಿಮ್ಮ ಬೆಂಬಲ ಬೇಕಾಗಿದೆ. ನನಗೆ ಶಾಪ ಹಾಕುವುದರಿಂದ ಯಾವ ಪ್ರಯೋಜನವಿಲ್ಲ” ಎಂದು ಬರೆದುಕೊಂಡಿದ್ದಾರೆ. ಸದ್ಯ ಈ ಪೋಸ್ಟ್​ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.

  ಇದನ್ನೂ ಓದಿ : ದುನಿಯಾ ವಿಜಯ್ ಡಿವೋರ್ಸ್ ಅರ್ಜಿ ವಜಾ..!

  ಸದ್ಯ ದರ್ಶನ್, ಪವಿತ್ರಾ ಗೌಡ ಸೇರಿ ಬಂಧಿತರನ್ನು 6 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಲಾಗಿದೆ. ಪೊಲೀಸರು ಪ್ರಕರಣದ ತನಿಖೆಯನ್ನು ಚುರುಕುಗೊಳಿಸಿದ್ದಾರೆ.

  Continue Reading

  FILM

  ದುನಿಯಾ ವಿಜಯ್ ಡಿವೋರ್ಸ್ ಅರ್ಜಿ ವಜಾ..!

  Published

  on

  ಬೆಂಗಳೂರು/ಮಂಗಳೂರು: ಕನ್ನಡದ ಖ್ಯಾತ ನಟ ದುನಿಯಾ ವಿಜಯ್ ಹಾಗೂ ನಾಗರತ್ನಿ ದಂಪತಿ ಮಧ್ಯೆ ಬಿರುಕು ಕಂಡಿದ್ದು, ವರ್ಷಗಳ ಹಿಂದೆಯೇ ವಿಚ್ಛೇದನಕ್ಕಾಗಿ ಕೋರ್ಟ್ ಮೊರೆ ಹೋಗಿದ್ದರು. 2018ರಲ್ಲಿ ಡಿವೋರ್ಸ್‌ಗಾಗಿ ಅರ್ಜಿ ಸಲ್ಲಿಸಿದ್ದು ಇದೀಗ ಫ್ಯಾಮಿಲಿ ಕೋರ್ಟ್ ಅರ್ಜಿ ವಜಾಗೊಂಡಿದೆ.

  ನಟ ದುನಿಯಾ ವಿಜಯ್‌ಗೆ ನಾಗರತ್ನರವರೊಂದಿಗೆ ಬಾಳ್ವೆ ಮಾಡಲು ಇಷ್ಟವಿಲ್ಲದೇ ಇದ್ದು ವಿಚ್ಚೇದನಕ್ಕಾಗಿ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಆದರೆ ಪತ್ನಿ ನಾಗರತ್ನ ಮಾತ್ರ ನನಗೆ ಗಂಡ ಬೇಕು ಎಂದು ಪಟ್ಟು ಹಿಡಿದ್ದಿದ್ದರು.  ನಾಗರತ್ನ ಮತ್ತು ದುನಿಯಾ ವಿಜಯ್ ಅವರ ಸಂಸಾರದಲ್ಲಿ ಹಲವು ವರ್ಷಗಳ ಹಿಂದೆಯೇ ಬಿರುಕು ಮೂಡಿತ್ತು. ಹಾಗಾಗಿ 2018ರಲ್ಲಿ ವಿಜಯ್ ಅವರು ಡಿವೋರ್ಸ್​ ಸಲುವಾಗಿ ಅರ್ಜಿ ಸಲ್ಲಿಸಿದ್ದರು. ಮಕ್ಕಳ ಜವಾಬ್ದಾರಿಯನ್ನು ವಹಿಸುವುದಾಗಿ ಹೇಳಿದ್ದರು. ಅಲ್ಲದೇ ಪತ್ನಿಗೆ ಜೀವನಾಂಶವನ್ನು ನೀಡುವುದಾಗಿಯೂ ಹೇಳಿದ್ದರು. ಆದರೆ ಪತ್ನಿ ನಾಗರತ್ನಿ ಪತಿಯನ್ನು ಬಿಡಲು ಸಿದ್ಧರಿರಲಿಲ್ಲ. ಹಾಗಾಗಿ ಪ್ರಕರಣ ಮುಂದೂಡುತ್ತಾ ಬಂದಿದೆ.

  Read More..; ‘ಮಂಜುಮ್ಮೇಲ್ ಬಾಯ್ಸ್‌’ ಸಿನೆಮಾ ನಿರ್ಮಾಪಕರಿಂದ ಹಗರಣ..! ನೋಟೀಸ್ ಜಾರಿ..!!

  ಜೂ.13ರಂದು ದುನಿಯಾ ವಿಜಯ್​ ಮತ್ತು ನಾಗರತ್ನ ಅವರು ವಿಚ್ಛೇನದ ಅಂತಿಮ ತೀರ್ಪು ಹೊರಬರಲಿದೆ ಎಂಬ ಕಾರಣಕ್ಕೆ ಎಲ್ಲರಲ್ಲೂ ಕುತೂಹಲ ಮೂಡಿತ್ತು. ಕೌಟುಂಬಿಕ ನ್ಯಾಯಾಲಯವು ವಿಜಯ್​ಗೆ ವಿಚ್ಛೇನದ ನೀಡಿಲ್ಲ. ನಟನಾಗಿ, ನಿರ್ದೇಶಕನಾಗಿ ದುನಿಯಾ ವಿಜಯ್​ ಅವರು ಕನ್ನಡ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾರೆ. ಟಾಲಿವುಡ್​ನಲ್ಲೂ ಅವರಿಗೆ ಬೇಡಿಕೆ ಇದೆ.

  Continue Reading

  LATEST NEWS

  Trending