Wednesday, September 30, 2020

ಬಡವರ ಹಸಿವು ನೀಗಿಸುವುದು ಮಹತ್ಕಾರ್ಯ :ಎಂಫ್ರೆಂಡ್ಸ್‌ನ ಕಾರುಣ್ಯ ಸಾವಿರ ದಿನಗಳು ಕಾರ್ಯಕ್ರಮದಲ್ಲಿ ಡಿ ಸಿ ಡಾ.ರಾಜೇಂದ್ರ

ಕೇಂದ್ರ ಸರಕಾರದಿಂದ ಅನ್ಲಾಕ್ 5.0 ಮಾರ್ಗಸೂಚಿ ಬಿಡುಗಡೆ…!!

ಹೊಸದಿಲ್ಲಿ: ಕೊರೊನಾ ಸೊಂಕು ಏರಿಕೆಯಲ್ಲಿರುವಂತೆಯೇ ಮಹತ್ವದ ಬೆಳವಣಿಗೆಯೊಂದರಲ್ಲಿ ಕೇಂದ್ರ ಸರ್ಕಾರ ಅನ್‌ಲಾಕ್ 5.0 ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದ್ದು, ಸಿನಿಮಾ ಹಾಲ್, ಕ್ರೀಡಾಪಟುಗಳಿಗಾಗಿ ಈಜುಕೊಳ, ಕ್ರೀಡಾ ತರಬೇತಿ ಹಾಗೂ ಮನೋರಂಜನಾ ಪಾರ್ಕ್‌ಗಳನ್ನು ತೆರೆಯಲು ಅನುಮತಿ...

ಮುಡಿಪು ಅಕ್ರಮ ಮಣ್ಣು ಗಣಿಗಾರಿಕೆ ಪ್ರದೇಶಕ್ಕೆ ಸಹಾಯಕ ಆಯುಕ್ತರ ನೇತೃತ್ವದ ತಂಡ ದಾಳಿ

ಮಂಗಳೂರು : ಅಕ್ರಮ ಮಣ್ಣು ಗಣಿಗಾರಿಕೆ ಪ್ರದೇಶಕ್ಕೆ ಸಹಾಯಕ ಆಯುಕ್ತರ ನೇತೃತ್ವದ ತಂಡ ದಾಳಿ ನಡೆಸಿ 28 ಲಾರಿ , 6 ಜೆಸಿಬಿ ಹಾಗೂ ಮೂರು ಹಿಟಾಚಿಯನ್ನು ವಶಕ್ಕೆ ತೆಗೆದುಕೊಂಡಿದೆ. ಸಹಾಯಕ ಆಯುಕ್ತ ಮದನ್...

ಕೌಡೂರಿನಲ್ಲಿ ನಾಗರಿಕರೊಂದಿಗೆ ಶಾಸಕ ಡಾ.ಭರತ್ ಶೆಟ್ಟಿ ಸಮಾಲೋಚನೆ, ಮೂಲಹಕ್ಕುಪತ್ರ ನೀಡಲು ಶೀಘ್ರ ಕ್ರಮ

ಮಂಗಳೂರು: ಹಕ್ಕುಪತ್ರ ಸಿಗದೆ ಭಾರಿ ಸಮಸ್ಯೆಯ ಉಂಟಾಗಿರುವ ಕಂದಾವರ ಗ್ರಾಮ ಪಂಚಾಯತ್ ಕೌಡೂರು ಪ್ರದೇಶಕ್ಕೆ ಮಂಗಳೂರು ನಗರ ಉತ್ತರ ಶಾಸಕ ಡಾ.ವೈ ಭರತ್ ಶೆಟ್ಟಿ ಭೇಟಿ ನೀಡಿ ಸ್ಥಳೀಯರೊಂದಿಗೆ ಸಮಾಲೋಚನೆ ನಡೆಸಿದರು. ನಂತರ ಸ್ಥಳೀಯ...

ಬಾಬರಿ ಮಸೀದಿ ಧ್ವಂಸ ಪ್ರಕರಣದ ತೀರ್ಪು ವಿರೋಧಿಸಿ ಎಸ್ ಡಿಪಿಐ ಪ್ರತಿಭಟನೆ

ಮಂಗಳೂರು : ಬಾಬರಿ ಮಸೀದಿ ಧ್ವಂಸ ಪ್ರಕರಣದಲ್ಲಿ 32 ಆರೋಪಿಗಳಿಗೆ ಖುಲಾಸೆಗೊಳಿಸಿ ಕ್ಲೀನ್ ಚಿಟ್ ನೀಡಿರುವ ಲಕ್ನೋ ಸಿಬಿಐ ಕೋರ್ಟಿನ ತೀರ್ಪನ್ನು ಖಂಡಿಸಿ ಎಸ್ ಡಿಪಿಐ ದಕ್ಷಿಣಕನ್ನಡ ಜಿಲ್ಲಾ ಸಮಿತಿಯಿಂದ ಪ್ರತಿಭಟನೆ ನಡೆಸಲಾಯಿತು. ಬಾಬರಿ...

ಸತ್ಯಮೇವ ಜಯತೆ ಎಂಬ ಮಾತು ನಿಜವಾಗಿದೆ – ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ

ಉಡುಪಿ : ಬಾಬ್ರಿ ಮಸೀದಿ ಧ್ವಂಸ ಪ್ರಕರಣದಲ್ಲಿ ಬಿಜೆಪಿ ಹಿರಿಯ ನಾಯಕ ಎಲ್ ಕೆ ಅಡ್ವಾಣಿ ಸೇರಿದಂತೆ ಎಲ್ಲಾ ನಾಯಕರುಗಳನ್ನು ದೋಷಮುಕ್ತ ಗೊಳಿಸಿದ ತೀರ್ಪನ್ನು ಪೇಜಾವರ ಮಠಾಧೀಶ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಸ್ವಾಗತಿಸಿದ್ದಾರೆ. ಸಿಪಿಐ...

ಬಡವರ ಹಸಿವು ನೀಗಿಸುವುದು ಮಹತ್ಕಾರ್ಯ :ಎಂಫ್ರೆಂಡ್ಸ್‌ನ ಕಾರುಣ್ಯ ಸಾವಿರ ದಿನಗಳು ಕಾರ್ಯಕ್ರಮದಲ್ಲಿ ಡಿ ಸಿ ಡಾ.ರಾಜೇಂದ್ರ

ಮಂಗಳೂರು: ಜನರು ಕಾಯಿಲೆ ಬಂದು ಆಸ್ಪತ್ರೆಗೆ ಹೋದರೆ, ನೋವು ತಿನ್ನುವ ಜತೆಗೆ ಸಾಕಷ್ಟು ಆರ್ಥಿಕ ಸಂಕಷ್ಟ ಎದುರಿಸುತ್ತಾರೆ. ಅದರಲ್ಲೂ ಬಡವರಿಗೆ ಕಾಯಿಲೆ ಬಂದರೆ ಅವರ ಪರಿಸ್ಥಿತಿ ಶೋಚನೀಯ ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ.ಕೆ.ವಿ. ರಾಜೇಂದ್ರ ಹೇಳಿದರು.

ನಗರದ ಐಎಂಎ ಸಭಾಂಗಣದಲ್ಲಿ ಸೋಮವಾರ ಎಂ.ಫ್ರೆಂಡ್ಸ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ವೆನ್ಲಾಕ್ ಆಸ್ಪತ್ರೆಯ ಒಳರೋಗಿಗಳ ಜತೆಗಾರರಿಗೆ ರಾತ್ರಿಯ ಉಚಿತ ಭೋಜನ ನೀಡುವ ಕಾರುಣ್ಯ ಯೋಜನೆಯ ಸಾವಿರ ದಿನಗಳು ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಸರಕಾರಿ ಆಸ್ಪತ್ರೆಗಳಲ್ಲಿ ದಾಖಲಾಗುವ ಬಡ ರೋಗಿಗಳ ಜತೆಗಾರರು ಹಲವು ಬಾರಿ ಸೇವಿಸಲು ಆಹಾರವಿಲ್ಲದೆ ಒದ್ದಾಡುತ್ತಿರುತ್ತಾರೆ. ರೋಗಿಯ ಊಟವನ್ನೇ ಇಬ್ಬರು ಹಂಚಿ ತಿನ್ನುವ ಅನಿವಾರ್ಯತೆ ಇರುತ್ತದೆ. ಬಡ ರೋಗಿಗಳ ಜತೆಗಾರರ ಹಸಿವು ನೀಗಿಸುವ ಕಾಯಕವನ್ನು ಎಂ.ಫ್ರೆಂಡ್ಸ್ ತಂಡ ನಿಷ್ಠೆಯಿಂದ ಮಾಡಿಕೊಂಡು ಬರುತ್ತಿರುವುದು ಶ್ಲಾಘನೀಯ ಎಂದು ಡಿಸಿ ಹೇಳಿದರು.

ಎಂ.ಫ್ರೆಂಡ್ಸ್ ಅಧ್ಯಕ್ಷ ಮೊಹಮ್ಮದ್ ಹನೀಫ್ ಗೋಳ್ತಮಜಲು ಅಧ್ಯಕ್ಷತೆ ವಹಿಸಿದ್ದರು. ವೆನ್ಲಾಕ್ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ.ಸದಾಶಿವ ಶಾನುಭೋಗ್, ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ, ಸೌದಿ ಅರೇಬಿಯಾದ ಉದ್ಯಮಿ ಶರೀಫ್ ವೈಟ್‍ಸ್ಟೋನ್, ಐಎಂಎ ಅಧ್ಯಕ್ಷ ಡಾ.ಸಿ.ಪಿ.ಹಬೀಬ್ ರಹ್ಮಾನ್ ಉಪಸ್ಥಿತರಿದ್ದರು.

ಸಾವಿರ ದಿನಗಳಲ್ಲಿ ಯಾವುದೇ ರಜೆ ತೆಗೆದುಕೊಳ್ಳದೆ ಪ್ರತಿದಿನ ಕಾರುಣ್ಯ ಕಾರ್ಯಕ್ರಮದಲ್ಲಿ ತೊಡಗಿಸಿಕೊಂಡ ಎಂಫ್ರೆಂಡ್ಸ್ ಸಿಬ್ಬಂದಿ ಅಶ್ಫಾಕ್ ಮತ್ತು ಕ್ಯಾಟರಿಂಗ್ ಮಾಲೀಕ ಸೌಹಾನ್ ಎಸ್.ಕೆ. ಅವರನ್ನು ಅಭಿನಂದಿಸಲಾಯಿತು.

ಎಂ.ಫ್ರೆಂಡ್ಸ್ ಪ್ರಧಾನ ಕಾರ್ಯದರ್ಶಿ ರಶೀದ್ ವಿಟ್ಲ ಸ್ವಾಗತಿಸಿದರು. ಕಾರ್ಯದರ್ಶಿ ಮೊಹಮ್ಮದ್ ಆರಿಫ್ ಪಡುಬಿದ್ರಿ ಕಾರ್ಯಕ್ರಮ ನಿರೂಪಿಸಿದರು. ಕೋಶಾಧಿಕಾರಿ ಅಬೂಬಕರ್ ವಂದಿಸಿದರು.

Hot Topics

ಕಾಪುವಿನಲ್ಲಿ ಕಾರು ಅಪಘಾತ ಗಂಭೀರವಾಗಿ ಗಾಯಗೊಂಡಿದ್ದ ಯುವತಿ ಸಾವು..!

ಕಾಪುವಿನಲ್ಲಿ ಕಾರು ಅಪಘಾತ ಗಂಭೀರವಾಗಿ ಗಾಯಗೊಂಡಿದ್ದ ಯುವತಿ ಸಾವು..! ಉಡುಪಿ : ಉಡುಪಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಭಾರಿ ಮಳೆಯ ನಡುವೆ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಚಾಲಕನ ನಿಯಂತ್ರಣ ತಪ್ಪಿದ ಕಾರೊಂದು ಕಾಪು ಬಳಿ...

ಹಿರಿಯಡಕದಲ್ಲಿ ಹಾಡುಹಗಲೇ ರುಂಡ ಕತ್ತರಿಸಿ ಕೊಲೆ..!

ಹಿರಿಯಡಕದಲ್ಲಿ ಹಾಡುಹಗಲೇ ರುಂಡ ಕತ್ತರಿಸಿ ಕೊಲೆ..! ಉಡುಪಿ : ಉಡುಪಿಯ ಹಿರಿಯಡಕದಲ್ಲಿ ಹಾಡುಹಗಲೇ ಕಗ್ಗೊಲೆ ನಡೆದಿದ್ದು, ನಗರದ ಹೃದಯ ಭಾಗದಲ್ಲಿ ದುಷ್ಕರ್ಮಿಗಳ ತಂಡವೊಂದು ವ್ಯಕ್ತಿಯೊಬ್ಬನ ಕತ್ತು ಕತ್ತರಿಸಿ ಕೊಲೆ ಮಾಡಿದೆ. ಕೊಲೆಯಾದ ವ್ಯಕ್ತಿಯನ್ನು ಕಿಶನ್ ಶೆಟ್ಟಿ...

ಮಂಗಳೂರಿನ ಡ್ರಗ್ಸ್ ಪಾರ್ಟಿಯಲ್ಲಿದ್ದ ಪ್ರಖ್ಯಾತ ಆ್ಯಂಕರ್ ಕಂ ನಟಿ ಯಾರು….?

ಮಂಗಳೂರು : ಸ್ಯಾಂಡಲ್ ವುಡ್ ಡ್ರಗ್ಸ್ ಪ್ರಕರಣ ಈಗ ಮಂಗಳೂರಿಗೆ ಬಂದು ತಲುಪಿದ್ದು, ಇಂದು ಮಂಗಳೂರಿನಲ್ಲಿ ಕುಳಾಯಿ ನಿವಾಸಿ ಬಾಲಿವುಡ್ ನಟ, ಡ್ಯಾನ್ಸರ್ ಕಿಶೋರ್ ಅಮನ್ ಶೆಟ್ಟಿ ಸಹಿತ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು...
Copy Protected by Chetans WP-Copyprotect.