Connect with us

    DAKSHINA KANNADA

    ಈ ಕನಸುಗಳು ಕೇವಲ ಅದೃಷ್ಟವಂತರಿಗೆ ಮಾತ್ರ ಬೀಳುತ್ತೆ.!

    Published

    on

    ಮಂಗಳೂರು: ಕನಸನ್ನು ಕಾಣುವುದು ಎಂದರೆ ಅದೊಂದು ಸಾಮಾನ್ಯ ವಿಷಯ. ಪ್ರತಿಯೊಬ್ಬ ವ್ಯಕ್ತಿಯು ಮಲಗುವ ಸಮಯದಲ್ಲಿ ಕನಸನ್ನು ಕಾಣುತ್ತಾನೆ. ಅದೆಷ್ಟೋ ಬಾರಿ ನಾವು ಎದ್ದಾಕ್ಷಣ ರಾತ್ರಿ ಕನಸಿನಲ್ಲಿ ಕಂಡ ವಿಷಯಗಳನ್ನು ಮರೆತುಬಿಡುತ್ತೇವೆ. ಇನ್ನು ಕೆಲವೊಮ್ಮೆ ಅದು ಅಚ್ಚಳಿಯದಂತೆ ನಮ್ಮ ಮನಸ್ಸಿನಲ್ಲಿ ಉಳಿದುಕೊಳ್ಳುತ್ತದೆ. ಕೆಲವು ಕನಸುಗಳು ನಮಗೆ ಸಾಕಷ್ಟು ಸಂತೋಷವನ್ನು, ನೆಮ್ಮದಿಯನ್ನು ನೀಡಿದರೆ, ಕೆಲವು ಕನಸುಗಳು ನಮ್ಮ ತಲೆಯನ್ನು ಕೆಡಿಸುತ್ತದೆ.

    ಕನಸುಗಳನ್ನು ನಾವು ಶುಭ ಕನಸುಗಳು ಮತ್ತು ಅಶುಭ ಕನಸುಗಳೆಂದು ವಿಭಜಿಸುತ್ತೇವೆ. ಆದರೆ, ಒಂದಿಷ್ಟು ಕನಸುಗಳಿವೆ ಅವುಗಳು ಕೇವಲ ಅದೃಷ್ಟವಂತರಿಗೆ ಮಾತ್ರ ಬೀಳುತ್ತದೆ. ನೀವು ಅದೃಷ್ಟವಂತರಾದರೆ ಈ ಕನಸುಗಳು ನಿಮಗೂ ಬಿದ್ದಿರುತ್ತೆ.

    1. ಬಿಳಿ ಆನೆಯ ಕನಸು:

    ನಾವು ಕನಸಿನಲ್ಲಿ ಬಿಳಿ ಬಣ್ಣದ ಆನೆಯನ್ನು ನೋಡಿದರೆ ಅದನ್ನು ಅತ್ಯಂತ ಮಂಗಳಕರವಾದ ಕನಸೆಂದು ಪರಿಗಣಿಸಲಾಗುತ್ತದೆ. ಬಿಳಿ ಬಣ್ಣದ ಆನೆ ಕಾಣಿಸಿಕೊಳ್ಳುವುದು ಎಂದರೆ ನೀವು ಇಂದ್ರ ದೇವನ ಆಶೀರ್ವಾದವನ್ನು ಪಡೆದುಕೊಂಡಿದ್ದೀರಿ ಎಂಬುದಾಗಿದೆ. ಯಾಕೆಂದರೆ ಬಿಳಿ ಬಣ್ಣದ ಆನೆಯು ದೇವರಾಜ ಇಂದ್ರ ದೇವನ ವಾಹನವಾಗಿದೆ. ಮತ್ತು ಯಾವ ವ್ಯಕ್ತಿ ತನ್ನ ಕನಸಿನಲ್ಲಿ ಬಿಳಿ ಬಣ್ಣದ ಆನೆಯನ್ನು ನೋಡುತ್ತಾನೋ ಅವನಿಗೆ ಸದ್ಯದಲ್ಲೇ ರಾಜಯೋಗವು ಪ್ರಾರಂಭವಾಗಲಿದೆ ಎಂಬುದಾಗಿದೆ.

    2. ಬಿಳಿ ಬಣ್ಣದ ನವಿಲು:

    ಯಾವುದೇ ಓರ್ವ ವ್ಯಕ್ತಿಯು ತನ್ನ ಕನಸಿನಲ್ಲಿ ಬಿಳಿ ಬಣ್ಣದ ನವಿಲನ್ನು ನೋಡಿದರೆ ಅದನ್ನು ಶುಭ ಸಂಕೇತವೆಂದು ಪರಿಗಣಿಸಲಾಗುತ್ತದೆ. ಇಂತಹ ಕನಸುಗಳು ಅದೃಷ್ಟದ ಸಂಕೇತವಾಗಿರುತ್ತದೆ. ಇಂತಹ ಕನಸುಗಳು ಬಿದ್ದರೆ ನಿಮ್ಮ ಜೀವನದಲ್ಲಿ ಉತ್ತಮವಾದ ದೊಡ್ಡ ಬದಲಾವಣೆಯೊಂದು ನಡೆಯಲಿದೆ. ಮತ್ತು ನೀವು ಏನಾದರೂ ದೊಡ್ಡ ಸಾಧನೆಯನ್ನು ಮಾಡುತ್ತೀರಿ ಎಂಬುದಾಗಿದೆ. ನಿಮ್ಮ ಕನಸಿನಲ್ಲಿ ಬಿಳಿ ನವಿಲು ಕಾಣುವುದು ಎಂದರೆ ನಿಮ್ಮ ಕಠಿಣ ಪರಿಶ್ರಮದ ಫಲವನ್ನು ನೀವು ಶೀಘ್ರದಲ್ಲೇ ಪಡೆಯುತ್ತೀರಿ.

    3. ಬಿಳಿ ಸಿಂಹದ ಕನಸು:

    ಈಗಾಗಲೇ ಹಳದಿ ಬಣ್ಣದ ಸಿಂಹವನ್ನು ನೋಡಿರಬಹುದು. ಆದರೆ, ಬಿಳಿ ಬಣ್ಣದ ಸಿಂಹವೂ ಇದೆ ಎಂದು ಹೆಚ್ಚಿನವರಿಗೆ ತಿಳಿದಿರಲಿಕ್ಕಿಲ್ಲ. ಇದನ್ನು ಎಲ್ಲರೂ ನೋಡಿರಲು ಸಾಧ್ಯವಿಲ್ಲ. ಕೆಲವೊಮ್ಮೆ ಇವುಗಳು ನಮ್ಮ ಕನಸಿನಲ್ಲಿ ಕಾಣಿಸಿಕೊಳ್ಳುವ ಮೂಲಕ ಅವುಗಳ ಅಸ್ತಿತ್ವವು ಇದೆ ಎಂಬುದನ್ನು ನಮಗೆ ನೆನಪಿಸುತ್ತದೆ. ಬಿಳಿ ಬಣ್ಣದ ಸಿಂಹವನ್ನು ನಾವು ನಮ್ಮ ಕನಸಿನಲ್ಲಿ ನೋಡುವುದು ಅತ್ಯಂತ ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಬಿಳಿ ಸಿಂಹದ ಕನಸು ಬಿದ್ದರೆ ನೀವು ನಿಮ್ಮ ಉದ್ಯೋಗ ಕ್ಷೇತ್ರದಲ್ಲಿ ಪ್ರಗತಿಯನ್ನು ಹೊಂದಲಿದ್ದೀರಿ ಎಂದರ್ಥ.

    4. ಬಿಳಿ ಹಾವಿನ ಕನಸು:

    ನೀವು ನಿಮ್ಮ ಕನಸಿನಲ್ಲಿ ಬಿಳಿ ಬಣ್ಣದ ಹಾವುಗಳನ್ನು ನೋಡಿದರೆ ಅದನ್ನು ಅತ್ಯಂತ ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಇಂತಹ ಕನಸುಗಳು ಬಿದ್ದರೆ ನಿಮ್ಮ ಅದೃಷ್ಟ ಶೀಘ್ರದಲ್ಲೇ ಬದಲಾಗಲಿದೆ ಎಂಬುದನ್ನು ಸಂಕೇತಿಸುತ್ತದೆ. ಶಿವನ ವಿಶೇಷ ಆಶೀರ್ವಾದವನ್ನು ಹೊಂದಿರುವವರು ಮಾತ್ರ ತಮ್ಮ ಕನಸಿನಲ್ಲಿ ಬಿಳಿ ಬಣ್ಣದ ಹಾವುಗಳನ್ನು ನೋಡುತ್ತಾರೆ

    ಹಾಗಾಗಿ, ನೀವು ನಿಮ್ಮ ಕನಸಿನಲ್ಲಿ ಈ ಮೇಲಿನ ನಾಲ್ಕು ಬಿಳಿ ಜೀವಿಗಳನ್ನು ನೀಡಿದರೆ ನೀವು ಅದೃಷ್ಟವಂತರು ಎಂದರ್ಥ. ಈ ಕನಸುಗಳು ಬಿದ್ದಾಗ ನೀವು ಚಿಂತಿತರಾಗುವ ಬದಲು ಸಂತೋಷವನ್ನು ಅನುಭವಿಸಿ.

    DAKSHINA KANNADA

    ಜಿಲ್ಲೆಯಲ್ಲಿ ರೆಡ್ ಅಲರ್ಟ್‌..! ಜೂನ್ 27 ಶಾಲೆಗೆ ರಜೆ ಘೋಷಣೆ..!

    Published

    on

    ಮಂಗಳೂರು :  ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವ್ಯಾಪಕ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಜೂನ್ 27 ರ ಗುರುವಾರದಂದು ದಕ್ಷಿಣ ಕನ್ನಡ ಜಿಲ್ಲೆಯ ಶಾಲೆಗಳಿಗೆ ರಜೆ ಘೋಷಣೆ ಮಾಡಲಾಗಿದೆ. ಸರ್ಕಾರಿ, ಖಾಸಗಿ, ಅನುದಾನಿತ ಶಾಲೆಗಳು, ಅಂಗನವಾಡಿ , ಹಾಗೂ ಪ್ರೌಡಶಾಲೆಗಳಿಗೆ ರಜೆ ಘೋಷಣೆ ಮಾಡಲಾಗಿದೆ. ಜೂನ್ 27 ರಂದು ವ್ಯಾಪಕ ಮಳೆಯಾಗುವ ಬಗ್ಗೆ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದ್ದು, ರೆಡ್ ಅಲರ್ಟ್ ಘೋಷಣೆ ಮಾಡಿದೆ.

    ಈ ಕುರಿತಾಗಿ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷರೂ ಆಗಿರುವ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಮುಲೈ ಮುಯಿಲನ್ ಅವರು ಈ ಆದೇಶ ಹೊರಡಿಸಿದ್ದಾರೆ. ಇಷ್ಟೇ ಅಲ್ಲದೆ ತೀವೃ ಮಳೆಯ ಸಂದರ್ಭದಲ್ಲಿ ಕೈಗೊಳ್ಳಬೇಕಾದ ಸೂಕ್ತ ಕ್ರಮಗಳ ಬಗ್ಗೆಯೂ ಎಚ್ಚರಿಕೆ ನೀಡಿದ್ದಾರೆ. ಮೀನುಗಾರು ಸಮುದ್ರಕ್ಕೆ ಇಳಿಯದಂತೆ ಆದೇಶದಲ್ಲಿ ಸೂಚಿಸಿದ್ದಾರೆ. ನೀರು ಇರುವ ತಗ್ಗು ಪ್ರದೇಶಗಳಿಗೆ ಜನರು ತೆರಳದೇ ಇರುವುದು, ಹಾಗೂ ಮಳೆ ನೀರಿನಿಂದ ನೆರೆಯ ಆತಂಕ ಇರುವ ಜನರು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಗೊಳ್ಳುವಂತೆಯೂ ಸೂಚನೆ ನೀಡಿದ್ದಾರೆ.

    ಯಾವುದೇ ತುರ್ತು ಪರಿಸ್ಥಿತಿಯ ಸಮಯದಲ್ಲಿ ಜಿಲ್ಲಾಡಳಿತದ 1077 ಅಥವಾ  0824-2442590 ನಂಬರ್ ಕರೆ ಮಾಡುವಂತೆ ಸೂಚಿನೆ ನೀಡಲಾಗಿದೆ.

    Continue Reading

    DAKSHINA KANNADA

    ಜಪ್ಪಿನಮೊಗರು ದೊಂಪದಬಲಿ ಗದ್ದೆ ಸಮೀಪ ಮನೆಗಳು ಜಲಾವೃತ

    Published

    on

    ಮಂಗಳೂರು ಹೊರವಲಯದ ಜಪ್ಪಿನಮೊಗೆರು ಪ್ರದೇಶದಲ್ಲಿ ಮಳೆಯಿಂದಾಗಿ ಹಲವು ರಸ್ತೆಗಳು ಹಾಗೂ ಮನೆಗಳು ಜಲಾವೃತಗೊಂಡಿದೆ. ಇಲ್ಲಿನ ದೊಂಪದಬಲಿ ಎಂಬಲ್ಲಿನ ರಾಜಾಕಾಲುವೆ ಬ್ಲಾಕ್ ಆಗಿ ನೀರು ನದಿ ಸೇರದೆ ಈ ಕೃತಕ ನೆರೆ ಉಂಟಾಗಿದೆ.

    ಹಲವಾರು ವರ್ಷಗಳಿಂದ ಇಲ್ಲಿ ರಸ್ತೆ ಸಮಸ್ಯೆ ಇದ್ದು, ಇತ್ತೀಚೆಗೆ ನೂತನ ಕಾಂಕ್ರೀಟ್ ರಸ್ತೆ ನಿರ್ಮಾಣ ಮಾಡಲಾಗಿದೆ. ಆದ್ರೆ ಕಾಂಕ್ರೀಟ್ ರಸ್ತೆಯ ಇಕ್ಕೆಲೆಗಳಲ್ಲಿ ನಿರ್ಮಿಸಬೇಕಾದ ಚರಂಡಿಯನ್ನು ನಿರ್ಮಾಣ ಮಾಡದೆ ಇರುವುದು ಇದಕ್ಕೆ ಕಾರಣ ಎಂದು ಸ್ಥಳಿಯರು ದೂರಿದ್ದಾರೆ. ಮೊದಲೇ ತಗ್ಗು ಪ್ರದೇಶದಲ್ಲಿ ಇರುವ ದೊಂಪದ ಬಲಿ ಪ್ರದೇಶ ರಸ್ತೆಗಿಂತ ಕೆಳಗೆ ಇರುವ ಕಾರಣ ರಸ್ತೆಯಲ್ಲಿ ಹರಿಯುವ ನೀರು ನೇರ ಜನವಸತಿ ಪ್ರದೇಶಕ್ಕೆ ನುಗ್ಗುತ್ತಿದೆ. ಚರಂಡಿ ನಿರ್ಮಾಣ ಮಾಡಿದ್ದೇ ಆಗಿದ್ದಲ್ಲಿ ಈ ರೀತಿಯ ಸಮಸ್ಯೆ ಆಗುತ್ತಿರಲಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ.

    ಸ್ಥಳಕ್ಕೆ ಭೇಟಿ ನೀಡಿ ಕಾರ್ಪೋರೇಟರ್ ವೀಣಾಮಂಗಳ ಸ್ಥಳೀಯ ನಿವಾಸಿಗಳು ತ್ಯಾಜ್ಯ ವಿಲೇವಾರಿಯಲ್ಲಿ ಸಹಕರಿಸದೇ ಇರುವುದು ಈ ಸಮಸ್ಯೆಗೆ ಮೂಲಕ ಕಾರಣ ಎಂದು ಹೇಳಿದ್ದಾರೆ. ಎಲ್ಲಾ ತ್ಯಾಜ್ಯಗಳನ್ನು ಇಲ್ಲಿನ ಚರಂಡಿಗೆ ಎಸೆಯುವ ಕಾರಣ ರಾಜಾಕಾಲುವೆಯಲ್ಲಿ ಶೇಖರಣೆಯಾಗಿ ಈ ರೀತಿ ಅವಾಂತರ ಸೃಷ್ಟಿಯಾಗಿದೆ ಎಂದು ಹೇಳಿದ್ದಾರೆ.

    ಇಷ್ಟೇ ಅಲ್ಲದೆ ನೀರು ಸರಾಗವಾಗಿ ಹರಿದು ರಾಜಕಾಲುವ ಸೇರಲು ಚರಂಡಿ ನಿರ್ಮಾಣದ ವೇಳೆ ಕೆಲವರು ಅನಗತ್ಯವಾಗಿ ಸ್ಟೇ ತಂದು ಕಾಮಾಗಾರಿ ತಡೆ ಹಿಡಿದಿದ್ದಾರೆ ಎಂದು ಸ್ಥಳಿಯರ ಅಸಹಕಾರದಿಂದ ಈ ರೀತಿ ಆಗಿದೆ ಎಂದು ಹೇಳಿದ್ದಾರೆ.

    Continue Reading

    DAKSHINA KANNADA

    ಅತ್ತಾವರ: ಮಳೆಗೆ ಧರೆಗುರುಳಿದ ಬೃಹತ್ ಮರ

    Published

    on

    ಮಂಗಳೂರು: ಭಾರೀ ಮಳೆಯ ಹಿನ್ನೆಲೆಯಲ್ಲಿ ಅತ್ತಾವರ ಕಾಪ್ರಿಗುಡ್ಡದ ಬ್ರಿಟ್ಟೋಲೇನ್ ಬಳಿ ವಾಣಿಜ್ಯ ಸಂಕೀರ್ಣದ ತಳಪಾಯದ ಕಾಮಗಾರಿ ನಡೆಯುತ್ತಿದ್ದ ಜಾಗಕ್ಕೆ ಮೇಲ್ಭಾಗದಲ್ಲಿದ್ದ ಬೃಹತ್ ಮರವೊಂದು ಬುಡ ಸಹಿತ ಉರುಳಿ ಬಿದ್ದಿದೆ.

    ಮಳೆಯ ಹಿನ್ನೆಲೆಯಲ್ಲಿ ಕಳೆದೆರಡು ದಿನಗಳಿಂದ ಕಾಮಗಾರಿ ನಿಲ್ಲಿಸಲಾಗಿದ್ದ ಕಾರಣ ಕಾರ್ಮಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎನ್ನಲಾಗಿದೆ. ಸ್ಥಳೀಯ ಕಾರ್ಪೊರೇಟರ್ ಅಬ್ದುಲ್ ಲತೀಫ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.

    Continue Reading

    LATEST NEWS

    Trending