Connect with us

    LATEST NEWS

    ಈ 5 ಮನೆಕೆಲಸಗಳನ್ನು ಮಾಡಿ ತೂಕ ಕಡಿಮೆ ಮಾಡಿಕೊಳ್ಳಿ

    Published

    on

    ಮಂಗಳೂರು: ದೇಹದ ತೂಕವನ್ನು ಕಡಿಮೆ ಮಾಡಿಕೊಳ್ಳಲು ವಿವಿಧ ರೀತಿಯ ವ್ಯಾಯಾಮ, ಕಸರತ್ತುಗಳನ್ನು ಮಾಡುತ್ತಾರೆ. ಕೆಲವರು ಊಟವನ್ನು ಕೂಡ ತ್ಯಜಿಸುತ್ತಾರೆ. ಆದರೆ ಇಷ್ಟೆಲ್ಲಾ ಕಷ್ಟ ಪಡುವ ಬದಲು ಸುಲಭವಾಗಿ ದೇಹದ ಕೊಬ್ಬನ್ನು ಕರಗಿಸಬಹುದು. ಅದು ಕೂಡ ಮನೆಯ ಕೆಲಸಗಳನ್ನು ಸರಿಯಾಗಿ ಮಾಡುವ ಮೂಲಕ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು.

    ದೇಹದ ಹೆಚ್ಚುವರಿ ತೂಕವನ್ನು ಕಡಿಮೆ ಮಾಡಿಕೊಳ್ಳುವ ಕೊಳ್ಳುವ ವಿಷಯಕ್ಕೆ ಬಂದಾಗ, ಜಿಮ್ ಗೆ ಹೋಗುವುದು ಅಥವಾ ವಾಕಿಂಗ್ ಗೆ ಹೋಗುವುದು ಮನಸ್ಸಿಗೆ ಬರುವ ಮೊದಲು ವಿಷಯಗಳಾಗಿವೆ. ಆದರೆ ದೈನಂದಿನ ಮನೆಕೆಲಸಗಳನ್ನು ಮಾಡುತ್ತಾ ಹೆಚ್ಚುವರಿ ಕ್ಯಾಲೊರಿಗಳನ್ನು ಕಡಿಮೆ ಮಾಡಿಕೊಳ್ಳಬಹುದು ಜೊತೆಗೆ ಕೊಬ್ಬನ್ನು ಕರಗಿಸಬಹುದು ಎಂದು ನಿಮಗೆ ತಿಳಿದಿದೆಯೇ? ಇದು ನಿಮಗೆ ಆಶ್ಚರ್ಯ ಎನಿಸಬಹುದು ಆದರೆ ಸತ್ಯ. ನಿಮ್ಮ ತೂಕ ಇಳಿಸಲು ಸಹಾಯ ಮಾಡುವ ಐದು ಮನೆಕೆಲಸಗಳು ಇಲ್ಲಿವೆ.

    ಗುಡಿಸುವುದು

    ಮನೆ ಗುಡಿಸುವುದರಿಂದ ನಿಮ್ಮ ದೇಹಕ್ಕೆ ಉತ್ತಮ ವ್ಯಾಯಾಮ ಸಿಗುತ್ತದೆ. ನಿಮಗೆ ಗುಡಿಸಲು ಕಷ್ಟವಾಗುವುದಾದರೆ ವ್ಯಾಕ್ಯೂಮ್ ಕ್ಲೀನರ್ ಬಳಸಬಹುದು. ಇದನ್ನು ತಳ್ಳುವುದು ಮತ್ತು ಎಳೆಯುವುದು ನಿಮ್ಮ ತೋಳು, ಭುಜ ಮತ್ತು ಕಾಲುಗಳಿಗೆ ವ್ಯಾಯಾಮ ಸಿಗುತ್ತದೆ. ಕಸವನ್ನು ಬಗ್ಗಿ ಗುಡಿಸುವುದರಿಂದ ಬೊಜ್ಜು ಕರಗುವುದಲ್ಲದೆ ದೇಹ ನಿರಾಳವಾಗುತ್ತದೆ.

    ನೆಲ ಒರೆಸುವುದು

    ನಿಮ್ಮ ಮನೆಯ ಪ್ರತಿಯೊಂದು ಮೂಲೆ ಮೂಲೆಯನ್ನು ಸ್ವಚ್ಛವಾಗಿ ಒರೆಸಿ. ಅಥವಾ ಮಾಪಿಂಗ್ ಕೂಡ ಮಾಡಬಹುದು. ಇದರಿಂದ ನಿಮ್ಮ ತೋಳು, ತೊಡೆ ಭಾಗ, ಸೊಂಟದ ಭಾಗಕ್ಕೆ ವ್ಯಾಯಾಮ ದೊರೆಯುತ್ತದೆ. ಇದರಿಂದ ಹೆಚ್ಚುವರಿ ಕ್ಯಾಲೊರಿಗಳನ್ನು ಕಡಿಮೆ ಮಾಡಿಕೊಳ್ಳಬಹುದು.

    ತೋಟಗಾರಿಕೆ

    ನಿಮ್ಮ ತೋಟವನ್ನು ನೋಡಿಕೊಳ್ಳುವುದು ಅಥವಾ ಕೈತೋಟವನ್ನು ಸುಂದರಗೊಳಿಸುವುದು ಹೆಚ್ಚುವರಿ ಕ್ಯಾಲೊರಿಗಳನ್ನುಕಡಿಮೆ ಮಾಡುತ್ತದೆ. ಮಣ್ಣನ್ನು ಅಗೆಯುವುದು, ನೆಡುವುದು, ಕಳೆ ತೆಗೆಯುವುದು ಮತ್ತು ನೀರು ಹಾಕುವುದು ಎಲ್ಲವೂ ದೈಹಿಕ ಚಲನೆಯನ್ನು ಒಳಗೊಂಡಿರುತ್ತದೆ, ಅದು ನಿಮ್ಮ ದೇಹದ ಸ್ನಾಯುಗಳನ್ನು ಬಲಪಡಿಸುತ್ತದೆ.

    ಬಟ್ಟೆ ಒಗೆಯುವುದು

    ಬಟ್ಟೆ ತೊಳೆಯುವುದು ಅದರಲ್ಲಿಯೂ ಕೈಯಲ್ಲಿ ತೊಳೆದರೆ ಬಹಳ ಉತ್ತಮ. ಇವು ನಿಮ್ಮ ಕ್ಯಾಲೊರಿ ಕಡಿಮೆ ಮಾಡಿಕೊಳ್ಳುವ ಪ್ರಯತ್ನಗಳಿಗೆ ಕೊಡುಗೆ ನೀಡುತ್ತದೆ. ಬಟ್ಟೆ ತೊಳೆಯುವುದು, ಅದನ್ನು ಎತ್ತುವುದು, ಒಣಗಿಸುವುದು ಇತ್ಯಾದಿ ಚಟುವಟಿಕೆಗಳು ತೂಕ ಕಡಿಮೆ ಮಾಡಿಕೊಳ್ಳಲು ಸಹಾಯ ಮಾಡುತ್ತದೆ.

    ಕಿಟಕಿಗಳನ್ನು ಸ್ವಚ್ಛಗೊಳಿಸುವುದು

    ಮೆಟ್ಟಿಲು ಹತ್ತಿ ಕಿಟಕಿಗಳಲ್ಲಿರುವ ದೂಳು, ಕೊಳೆಯನ್ನು ಉಜ್ಜುವುದರಿಂದ ನಿಮ್ಮ ತೋಳು, ಭುಜ ಮತ್ತು ಪ್ರಮುಖ ಸ್ನಾಯುಗಳಿಗೆ ವ್ಯಾಯಮ ಸಿಕ್ಕಂತಾಗುತ್ತದೆ. ನೀವು ಒಂದು ಅರ್ಧ ಗಂಟೆ ಕೆಲಸ ಮಾಡಿದರೂ ಸಾಕಾಗುತ್ತದೆ.

    ಈ ಮನೆಕೆಲಸಗಳನ್ನು ನಿಮ್ಮ ದೈನಂದಿನ ದಿನಚರಿಯಲ್ಲಿ ಅಳವಡಿಸಿಕೊಳ್ಳುವುದರಿಂದ ಮನೆಯೂ ಸ್ವಚ್ಛವಾಗಿರುತ್ತದೆ ಜೊತೆಗೆ ತೂಕ ಇಳಿಕೆಗೂ ಸಹಾಯ ಮಾಡುತ್ತದೆ. ಇದು ನೀವು ಫಿಟ್ ಆಗಿರಲು ಅಳವಡಿಸಿಕೊಳ್ಳಬಹುದಾದ ಉತ್ತಮ ವಿಧಾನವಾಗಿದೆ.

    Click to comment

    Leave a Reply

    Your email address will not be published. Required fields are marked *

    DAKSHINA KANNADA

    ಅಡುಗೆ ಮಾಡುವಾಗ ಕೈ ಸುಟ್ಟುಕೊಂಡರೆ ಮನೆಯಲ್ಲಿ ಹೀಗೆ ಮಾಡಿ..!

    Published

    on

    ಮಂಗಳೂರು: ಅಡುಗೆ ಮಾಡುವಾಗ ಗಡಿ ಬಿಡಿಯಲ್ಲಿ ಮಹಿಳೆಯರು ಗಾಯಗಳನ್ನು ಮಾಡಿಕೊಳ್ಳುತ್ತಾರೆ. ಕೆಲವೊಮ್ಮೆ ಸಣ್ಣ ಪುಟ್ಟ ತಪ್ಪುಗಳಿಂದ ಬಿಸಿ ಎಣ್ಣೆ, ಬಿಸಿ ನೀರೋ ಕೈ ಅಥವಾ ಮೈ ಮೇಲೆ ಚೆಲ್ಲುತ್ತದೆ. ಇಲ್ಲದಿದ್ದರೆ ಬಿಸಿ ಪಾತ್ರೆಯನ್ನು ಮುಟ್ಟುವುದರಿಂದ ಕೈ ಚರ್ಮ ಸುಡುತ್ತದೆ. ಇದರಿಂದ ಉಂಟಾಗುವ ಉರಿ ಹಾಗೂ ನೋವು ತೀವ್ರವಾಗಿರುತ್ತದೆ. ಹೀಗಾಗಿ ಗ್ಯಾಸ್ ಅಥವಾ ಒಲೆಯ ಮುಂದೆ ಎಷ್ಟು ಎಚ್ಚರಿಕೆ ವಹಿಸಿದರೂ ಸಾಲುವುದಿಲ್ಲ.

    ಹೆಚ್ಚಿನವರು ಬಿಸಿ ತಾಗಿದ ತಕ್ಷಣವೇ ಕೈಯನ್ನು ನೀರಿನಲ್ಲಿ ಅದ್ದಿ ಬಿಡುತ್ತಾರೆ, ಹೀಗೆ ಮಾಡಿದ್ದಲ್ಲಿ ಸುಟ್ಟ ಗಾಯವು ಗುಣಮುಖವಾಗಲು ಸಮಯ ತೆಗೆದುಕೊಳ್ಳುತ್ತದೆ. ಸಣ್ಣಪುಟ್ಟ ಗಾಯಗಳಾದರೆ ತೊಂದರೆಯಿಲ್ಲ, ಆದರೆ ತೀವ್ರವಾಗಿದ್ದರೆ ವೈದ್ಯರನ್ನು ಸಂಪರ್ಕಿಸಿ ಚಿಕಿತ್ಸೆ ಪಡೆಯುವುದು ಒಳ್ಳೆಯದು.

    1. ಗಾಯವು ಚಿಕ್ಕದಾಗಿರಲಿ ಅಥವಾ ದೊಡ್ಡದಾಗಿರಲಿ, ಐಸ್ ಅನ್ನು ಅನ್ವಯಿಸುವುದರಿಂದ ಉರಿಯೂತ ಕಡಿಮೆಯಾಗುತ್ತದೆ. ಗುಳ್ಳೆಗಳೂ ಬರುವುದಿಲ್ಲ. ಇದು ಚರ್ಮದ ಮೇಲೆ ಕಪ್ಪು ಕಲೆಗಳು ಬರದಂತೆ ತಡೆಯುತ್ತದೆ.

    2. ಸುಟ್ಟ ಜಾಗಕ್ಕೆ ಸಾಸಿವೆ ಎಣ್ಣೆ ಮತ್ತು ಉಪ್ಪನ್ನು ಹಚ್ಚುವುದು ಪರಿಣಾಮಕಾರಿಯಾಗಿದೆ. ಪ್ರಾರಂಭದಲ್ಲಿ ಸ್ವಲ್ಪ ಉರಿ ಉಂಟಾದರೂ ನಂತರದಲ್ಲಿ ಕಡಿಮೆಯಾಗುತ್ತದೆ, ಗುಳ್ಳೆಗಳು ಬರುವುದಿಲ್ಲ.

    3. ಅಲೋವೆರಾ ಸಹ ಸುಟ್ಟಗಾಯವನ್ನು ಗುಣಪಡಿಸುವಲ್ಲಿ ಪರಿಣಾಮಕಾರಿಯಾಗಿದೆ. ಗಾಯದ ಮೇಲೆ ತಕ್ಷಣವೇ ಅಲೋವೆರಾವನ್ನು ಹಚ್ಚಿದರೆ ಉರಿಯೂತವು ಕಡಿಮೆಯಾಗಿ, ಯಾವುದೇ ಗುಳ್ಳೆಗಳು ಕಾಣಿಸಿಕೊಳ್ಳುವುದಿಲ್ಲ.

    4. ಜೇನುತುಪ್ಪವು ಆಂಟಿ-ಸೆಪ್ಟಿಕ್ ಮತ್ತು ಬ್ಯಾಕ್ಟೀರಿಯಾ ವಿರೋಧಿ ಗುಣಗಳನ್ನು ಹೊಂದಿದೆ. ಸುಟ್ಟ ಗಾಯದ ಮೇಲೆ ತಕ್ಷಣ ಜೇನುತುಪ್ಪವನ್ನು ಹಚ್ಚುವುದರಿಂದ ಉರಿಯೂತ ಶಮನವಾಗಿ, ಗುಳ್ಳೆಗಳು ಮೂಡದಂತೆ ತಡೆಯುತ್ತದೆ. ಜೇನು ತುಪ್ಪ ಹಚ್ಚಿ ಸ್ವಲ್ಪ ಹೊತ್ತು ಹಾಗೆಯೇ ಬಿಡುವುದರಿಂದ ಸುಟ್ಟಗಾಯಗಳು ತ್ವರಿತವಾಗಿ ಗುಣವಾಗುತ್ತವೆ.

    Continue Reading

    LATEST NEWS

    ಸಹೋದರರ ಅರ್ಜಿ ವಿಚಾರಣೆ ನಡೆಸಿದ ಕೋರ್ಟ್; ಸೂರಜ್‌ ಸಿಐಡಿ ಕಸ್ಟಡಿಗೆ, ಪ್ರಜ್ವಲ್‌ ನ್ಯಾಯಾಂಗ ಬಂಧನಕ್ಕೆ!

    Published

    on

    ಮಂಗಳೂರು/ಬೆಂಗಳೂರು : ಇದೊಂದು ಅಪರೂಪದ ಘಟನೆ. ಅದೇನೂಂದ್ರೆ ಇಂದು (ಜೂನ್ 24) ಬೆಂಗಳೂರಿನ 42ನೇ ಎಸಿಎಂಎಂ ಕೋರ್ಟ್​ನಲ್ಲಿ ಮಾಜಿ ಸಚಿವ ಎಚ್​ಡಿ ರೇವಣ್ಣ ಪುತ್ರರ ಅರ್ಜಿ ವಿಚಾರಣೆ ನಡೆದಿದೆ.


    ಸಲಿಂಗ ಕಾಮ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿದ್ದ ಜೆಡಿಎಸ್​ ವಿಧಾನಪರಿಷತ್ ಸದಸ್ಯ ಸೂರಜ್‌ ರೇವಣ್ಣನನ್ನು ನ್ಯಾಯಾಲಯ 8 ದಿನ ಸಿಐಡಿ ಕಸ್ಟಡಿಗೆ ನೀಡಿದೆ. ಅತ್ಯಾಚಾರ ಪ್ರಕರಣದ ಆರೋಪಿಯಾಗಿರುವ ತಮ್ಮ ಪ್ರಜ್ವಲ್​ ರೇವಣ್ಣಗೆ ಸಿಐಡಿ ಕಸ್ಟಡಿಯಿಂದ ನ್ಯಾಯಾಂಗ ಬಂಧನ ವಿಧಿಸಲಾಗಿದೆ.

    ಈ ಎರಡು ಪ್ರಕರಣಗಳ ಪ್ರತ್ಯೇಕವಾಗಿ ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಧೀಶ ಕೆ.ಎನ್‌.ಶಿವಕುಮಾರ್‌ ಅವರು ಸೂರಜ್‌ ಅವರನ್ನು ಜುಲೈ 1 ರವರೆಗೆ ಸಿಐಡಿ ಕಸ್ಟಡಿಗೆ ನೀಡಿ ಆದೇಶ ನೀಡಿದ್ದರೆ, ಪ್ರಜ್ವಲ್​ಗೆ ಜುಲೈ 8 ರ ವರೆಗೆ ನ್ಯಾಯಾಂಗ ಬಂಧನ ನೀಡಿ ಆದೇಶ ಹೊರಡಿಸಿದ್ದಾರೆ.

    ಇದನ್ನೂ ಓದಿ : WATCH : ಅಭಿಮಾನಿಯನ್ನು ತಳ್ಳಿ ಬೀಳಿಸಿದ ನಾಗಾರ್ಜುನ ಬಾಡಿಗಾರ್ಡ್; ವೀಡಿಯೋ ವೈರಲ್ ಆಗುತ್ತಿದ್ದಂತೆ ಏನಂದ್ರು ನಟ?

    ಮತ್ತೊಂದೆಡೆ ಪ್ರಜ್ವಲ್ ರೇವಣ್ಣ ಜಾಮೀನು ಅರ್ಜಿ ವಿಚಾರಣೆ ನಡೆಸಿದ ಕೋರ್ಟ್​ ಆದೇಶ ಕಾಯ್ದಿರಿಸಿದೆ. ಜೂನ್ 26ಕ್ಕೆ ಜಾಮೀನು ಅರ್ಜಿ ಬಗ್ಗೆ ಆದೇಶ ನೀಡುವ ಸಾಧ್ಯತೆ ಇದೆ.

    Continue Reading

    FILM

    WATCH : ಅಭಿಮಾನಿಯನ್ನು ತಳ್ಳಿ ಬೀಳಿಸಿದ ನಾಗಾರ್ಜುನ ಬಾಡಿಗಾರ್ಡ್; ವೀಡಿಯೋ ವೈರಲ್ ಆಗುತ್ತಿದ್ದಂತೆ ಏನಂದ್ರು ನಟ?

    Published

    on

    ಮಂಗಳೂರು : ಸಿನಿಮಾ ನಟರು ಅಂದಾಕ್ಷಣ ಅಭಿಮಾನಿಗಳು ಮುಗಿಬೀಳೋದು ಸಹಜ. ಅವರ ಜೊತೆ ಫೋಟೋ ಕ್ಲಿಕ್ಕಿಸಿಕೊಳ್ಳಬೇಕು, ಸೆಲ್ಫಿ ಗಿಟ್ಟಿಸಿಕೋಬೇಕು ಅನ್ನೋ ಹೆಬ್ಬಯಕೆ ಸಹಜ. ಆದ್ರೆ, ಈ ರೀತಿ ಹೋದ ಅಭಿಮಾನಿಯೊಬ್ಬನನ್ನು ತಳ್ಳಿರೋ ಘಟನೆ ನಡೆದಿದೆ. ಘಟನೆಯ ವೀಡಿಯೋ ಸದ್ಯ ವೈರಲ್ ಆಗಿದೆ.


    ವೈರಲ್ ಆಗಿರೋ ವೀಡಿಯೋ ನಟ ನಾಗಾರ್ಜುನ ಅವರದು. ವಿಮಾನ ನಿಲ್ದಾಣದಿಂದ ಹೊರಬರುತ್ತಿರುವ ಅವರ ಜೊತೆ ಫೋಟೋ ತೆಗೆಸಿಕೊಳ್ಳಲು ಅಭಿಮಾನಿಯೊಬ್ಬರು ಓಡೋಡಿ ಬಂದಿದ್ದಾರೆ. ಆದರೆ ಅವರನ್ನು ನಾಗಾರ್ಜುನ ಬಾಡಿಗಾರ್ಡ್​ ತಳ್ಳಿ ಬೀಳಿಸಿದ್ದಾರೆ. ಸೋಶಿಯಲ್​ ಮೀಡಿಯಾದಲ್ಲಿ ಈ ವಿಡಿಯೋ ವೈರಲ್​ ಆಗಿದ್ದು, ನೆಟ್ಟಿಗರು ಗರಂ ಆಗಿದ್ದಾರೆ.

    ‘ನಿಮ್ಮ ಮಾನವೀಯತೆ ಎಲ್ಲಿ ಹೋಯಿತು ನಾಗಾರ್ಜುನ ಅವರೇ?’ ಎಂಬ ಕ್ಯಾಪ್ಷನ್​ನೊಂದಿಗೆ ಸೋಶಿಯಲ್​ ಮೀಡಿಯಾದಲ್ಲಿ ಈ ವಿಡಿಯೋವನ್ನು ಶೇರ್​ ಮಾಡಿಕೊಳ್ಳಲಾಗಿದೆ.

    ಇನ್ನು ವೀಡಿಯೋ ವೈರಲ್​ ಆಗುತ್ತಿದ್ದಂತೆ ಸ್ವತಃ ನಾಗಾರ್ಜುನ ಅವರು ಕ್ಷಮೆ ಕೇಳಿದ್ದಾರೆ. ‘ಇದು ಈಗ ತಾನೇ ನನ್ನ ಗಮನಕ್ಕೆ ಬಂತು. ಈ ರೀತಿ ಆಗಬಾರದಿತ್ತು. ಆ ವ್ಯಕ್ತಿಯಲ್ಲಿ ನಾನು ಕ್ಷಮೆ ಕೇಳುತ್ತೇನೆ. ಇನ್ಮುಂದೆ ಎಚ್ಚರಿಕೆ ವಹಿಸುತ್ತೇನೆ. ಈ ರೀತಿ ಇನ್ನೆಂದೂ ಆಗುವುದಿಲ್ಲ’ ಎಂದಿದ್ದಾರೆ.

    ಇದನ್ನೂ ಓದಿ: ದರ್ಶನ್ ಹಾಕಿ ಚಿತ್ರ ಮಾಡೋರು ಇನ್ಮೇಲೆ ಇದನ್ನ ಗಮನಿಸಲೇಬೇಕು

    ಅಂದಹಾಗೆ ಈ ಘಟನೆ ನಡೆದಾಗ ನಾಗಾರ್ಜುನ ಜೊತೆ ಕಾಲಿವುಡ್​ ನಟ ಧನುಷ್​ ಕೂಡ ಇದ್ದರು. ಸಿನಿಮಾ ನಟರನ್ನು ಕಂಡಾಗ ಸಿನಿಪ್ರಿಯರು ಹತ್ತಿರ ಬರೋದು ಸಹಜ. ಈ ವೇಳೆ ಬಾಡಿಗಾರ್ಡ್ ಗಳು ನಟರ ಬಳಿ ಬರಲು ಬಿಡುವುದಿಲ್ಲ. ಇಲ್ಲೂ ಹಾಗೇ ಆಗಿದೆ.

    Continue Reading

    LATEST NEWS

    Trending