Connect with us

    LATEST NEWS

    ಉಡುಪಿ: ನಿಯಂತ್ರಣ ತಪ್ಪಿ ಕಂಬಕ್ಕೆ ಲಾರಿ ಢಿಕ್ಕಿ- ಓರ್ವ ಸಾವು, ಮತ್ತೋರ್ವ ಗಂಭೀರ

    Published

    on

    ಉಡುಪಿ: ಮೀನಿನ ಲಾರಿಯೊಂದು ಚಾಲಕನ ನಿಯಂತ್ರಣ ತಪ್ಪಿ ಸೂಚನಾ ಫಲಕದ ಕಂಬಕ್ಕೆ ಢಿಕ್ಕಿ ಹೊಡೆದ ಪರಿಣಾಮ ಚಾಲಕ ಮೃತಪಟ್ಟು, ಮತ್ತೋರ್ವ ಗಂಭೀರ ಗಾಯಗೊಂಡ ಘಟನೆ ಉಡುಪಿಯ ಸಂತೆಕಟ್ಟೆ ಬಳಿಯ ಇಂದು ನಸುಕಿನ ವೇಳೆ ನಡೆದಿದೆ.


    ಮುಹಮ್ಮದ್ ತೌಫೀಕ್(29) ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಲಾರಿಯಲ್ಲಿದ್ದ ಇನೋರ್ವ ಚಾಲಕ ಭಟ್ಕಳ ಹೆಬ್ಬಾಳ ಗ್ರಾಮದ ಮೆಕ್ಕಾ ಕಾಲನಿಯ ನಝ್ರುಲ್ಲಾ(32) ಎಂಬವರು ಗಾಯಗೊಂಡಿದ್ದಾರೆ.

    ಕೇರಳದ ಚಾವಕಾಡದಿಂದ ಭಟ್ಕಳಕ್ಕೆ ಬರುತ್ತಿದ್ದ ಲಾರಿಯು ತಡರಾತ್ರಿ ಒಂದು ಗಂಟೆ ಸುಮಾರಿಗೆ ಸಂತೆಕಟ್ಟೆ ಬಳಿ ಚಾಲಕನ ನಿಯಂತ್ರಣ ತಪ್ಪಿ, ಡಿವೈಡರ್ ಮೇಲೆ ಹತ್ತಿ, ಸೂಚನಾ ಫಲಕದ ಕಂಬಕ್ಕೆ ಢಿಕ್ಕಿ ಹೊಡೆದಿದೆ ಎನ್ನಲಾಗಿದೆ.

    ಇದರಿಂದ ಲಾರಿಯ ಮುಂಭಾಗ ಸಂಪೂರ್ಣ ಜಖಂಗೊಂಡಿತು. ಗಂಭೀರವಾಗಿ ಗಾಯಗೊಂಡಿದ್ದ ಚಾಲಕ ಮುಹಮ್ಮದ್ ತೌಫೀಕ್ ಅವರನ್ನು ಉಡುಪಿ ಜಿಲ್ಲಾ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.

    ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಅವರನ್ನು ಮಣಿಪಾಲ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ದಾರಿಮಧ್ಯೆ ಮೃತಪಟ್ಟಿದ್ದಾರೆ. ಈ ಬಗ್ಗೆ ಉಡುಪಿ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    LATEST NEWS

    ಚಲಿಸುತ್ತಿರುವ ಬಸ್ಸಿನಲ್ಲಿ ನೇಣು ಬಿಗಿದುಕೊಂಡು ಪ್ರಾಣ ಬಿಟ್ಟ ಯುವಕ

    Published

    on

    ಆಂಧ್ರಪ್ರದೇಶ: ಚಲಿಸುತ್ತಿರುವ ಆರ್‌ಟಿಸಿ ಬಸ್‌ನಲ್ಲಿ ಅಪರಿಚಿತ ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡು ಆತಂಕ ಮೂಡಿಸಿದ್ದಾನೆ. ಆಂಧ್ರಪ್ರದೇಶದ ಶ್ರೀಕಾಳಹಸ್ತಿಯಲ್ಲಿ ಈ ಆಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದೆ.

    ಎರ್ಪೇಡು ಮಂಡಲದ ಅಂಜಿಮೇಡು ಬಳಿ ಯುವಕ ಬೆಳಿಗ್ಗೆ 5:30 ಕ್ಕೆ ಬಸ್ ಹತ್ತಿದ್ದಾನೆ. ಬೆಳಗಿನ ಬಸ್ ಆಗಿರುವುದರಿಂದ ಹೆಚ್ಚಿನ ಪ್ರಯಾಣಿಕರು ಇರಲಿಲ್ಲ. ಕೇವಲ ನಾಲ್ವರು ಪ್ರಯಾಣಿಕರಿದ್ದರು. ಆ ವೇಳೆ ಹಾಸಿಗೆಯಂತಹ ಹಗ್ಗದಿಂದ ಬಸ್‌ನ ಮೇಲ್ಬಾಗಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಯುವಕ ನೇತಾಡುತ್ತಿರುವುದನ್ನು ಕಂಡು ಸಹ ಪ್ರಯಾಣಿಕರು ಕೂಡಲೇ ಕಂಡಕ್ಟರ್‌ಗೆ ಹೇಳಿದ್ದಾರೆ.

    ಚಾಲಕ ಬಸ್‌ ನಿಲ್ಲಿಸಿ ರೇಣಿಗುಂಟ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಸ್ಥಳಕ್ಕಾಗಮಿಸಿ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಲಾಗಿದೆ.

    Continue Reading

    International news

    ನಿದ್ದೆಯಲ್ಲಿ ಭಾರತಕ್ಕೆ ಎಷ್ಟನೇ ಸ್ಥಾನ: ನಿಮಗೆ ಗೊತ್ತಾ!

    Published

    on

    ಮಂಗಳೂರು: ‘ಚಿಂತೆ ಇಲ್ಲದವನಿಗೆ ಸಂತೆಯಲ್ಲೂ ನಿದ್ದೆ’ ಎಂಬ ಮಾತು ಕೇಳಿರಬಹುದು. ಮನುಷ್ಯ ಸರಿಯಾಗಿ ನಿದ್ದೆ ಮಾಡಿದರೆ ಉತ್ತಮ ಆರೋಗ್ಯ ಮತ್ತು ದಿನ ಪೂರ್ತಿ ಲವಲವಿಕೆಯಲ್ಲಿ ಇರುವಂತೆ ಮಾಡುತ್ತದೆ. ಇತ್ತೀಚಿನ ದಿನಗಳಲ್ಲಿ ಜನರು ನಿದ್ದೆ ಮಾಡುವ ಸಮಯ ಕಡಿಮೆಯಾಗುತ್ತಿದ್ದು, ಇದರ ಬದಲು ಮೊಬೈಲ್ ನೋಡುವ ಮೂಲಕ ಸಮಯ ಜಾಸ್ತಿಯಾಗುತ್ತಿದೆ.


    ಗ್ಲೋಬಲ್ ಸ್ಲೀಪ್ ಸಮೀಕ್ಷೆಯ ಪ್ರಕಾರ, ನೆದರ್ಲ್ಯಾಂಡ್ ಹೆಚ್ಚು ನಿದ್ರಿಸುವ ಜನರಲ್ಲಿ ಮೊದಲ ಸ್ಥಾನದಲ್ಲಿದೆ. ನೆದರ್ಲ್ಯಾಂಡ್ ಜನರು ಸರಾಸರಿ 8 ಗಂಟೆಗಳ ಕಾಲ ನಿದ್ರಿಸುತ್ತಾರೆ. ಎರಡನೇ ಸ್ಥಾನದಲ್ಲಿ ಫಿನ್ಲ್ಯಾಂಡ್ ಸ್ಥಾನ ಪಡೆದಿದೆ. ಅಲ್ಲಿನ ಜನರು ದಿನಕ್ಕೆ 8 ಗಂಟೆಗಳ ಕಾಲ ನಿದ್ರಿಸುತ್ತಾರೆ. 7 ಗಂಟೆಗಳ ಕಾಲ ನಿದ್ರಿಸುವ ಮೂಲಕ, ಮೂರನೇ ಸ್ಥಾನವನ್ನು ಆಸ್ಟ್ರೇಲಿಯಾ ಮತ್ತು ಫ್ರಾನ್ಸ್ ದೇಶಗಳು ಪಡೆದಿವೆ.

    ಇದನ್ನೂ ಓದಿ: ಬಿಪಿಎಲ್ ಕಾರ್ಡ್ ಸಮಸ್ಯೆ ಪರಿಹಾರಕ್ಕೆ ನ.25 ಡೆಡ್‌ಲೈನ್
    ಇನ್ನೂ ನಾಲ್ಕನೇ ಸ್ಥಾನದಲ್ಲಿ ನ್ಯೂಜಿಲೆಂಡ್ ಮತ್ತು ಯುನೈಟೆಡ್ ಕಿಂಗ್ ಡಮ್ ಸ್ಥಾನ ಪಡೆದಿವೆ. ಈ ಎರಡು ದೇಶಗಳ ಜನರು 7 ಗಂಟೆಗಳ ಕಾಲ ನಿದ್ರಿಸುತ್ತಾರೆ. ಐದನೇ ಸ್ಥಾನವನ್ನು ಕೆನಡಾ ಮತ್ತು ಡೆನ್ಮಾರ್ಕ್ ದೇಶಗಳು ಪಡೆದುಕೊಂಡಿದೆ. ಅಲ್ಲಿನ ಜನರು ಸರಾಸರಿ 7 ಗಂಟೆಗಳ ಕಾಲ ನಿದ್ರಿಸುತ್ತಾರೆ. ಆರನೇ ಸ್ಥಾನದಲ್ಲಿ ಅಮೇರಿಕಾ ಪಡೆದಿದೆ. ಇಲ್ಲಿನ ಜನರು 7 ಗಂಟೆಗಳ ಕಾಲ ನಿದ್ರಿಸುತ್ತಾರೆ. ಇಟಲಿ ಮತ್ತು ಬೆಲ್ಜಿಯಂ ಏಳನೇ ಸ್ಥಾನ ಪಡೆದಿದೆ. ಇಲ್ಲಿನ ಜನರು ಸರಾಸರಿ 7.5 ಗಂಟೆಗಳ ಕಾಲ ನಿದ್ರಿಸುತ್ತಾರೆ ಎಂದು ಗ್ಲೋಬಲ್ ಸ್ಲೀಪ್ ಸಮೀಕ್ಷೆ ವರದಿ ನೀಡಿದೆ.
    ಭಾರತಕ್ಕೆ ಎಷ್ಟನೇ ಸ್ಥಾನ?
    ಭಾರತಕ್ಕೆ ಎಲ್ಲಾ ವಿಭಾಗದಲ್ಲಿಯೂ ಪ್ರತಿಸ್ಪರ್ಧಿ ದೇಶವೆಂದರೆ ಅದುವೇ ಚೀನಾ. ನಿದ್ದೆ ಮಾಡುವ ವಿಷಯದಲ್ಲೂ ಎರಡು ದೇಶಗಳ ಜನರು ಸರಾಸರಿಯಾಗಿ 7 ಗಂಟೆಗಳ ಕಾಲ ನಿದ್ರಿಸುತ್ತಾರೆ. ಹೀಗಾಗಿ, ಭಾರತ ಮತ್ತು ಚೀನಾ 11ನೇ ಸ್ಥಾನ ಪಡೆದಿದೆ. ವಯಸ್ಕರಿಗಿಂತ ಮಕ್ಕಳಿಗೆ ನಿದ್ದೆ ಅವಶ್ಯಕ. ವಯಸ್ಕರು ಕೂಡ ಕನಿಷ್ಠ 8 ತಾಸು ನಿದ್ದೆ ಮಾಡಬೇಕು ಎಂದು ಆಧ್ಯಯನ ಹೇಳುತ್ತದೆ.

    Continue Reading

    DAKSHINA KANNADA

    ಅತ್ಯಂತ ಉದ್ದದ ಮಾನವ ಸರಪಳಿ: ದ.ಕ.ಜಿಲ್ಲೆಗೆ ದ್ವಿತೀಯ ಸ್ಥಾನ

    Published

    on

    ಮಂಗಳೂರು: ಅಂತಾರಾಷ್ಟ್ರೀಯ ಪ್ರಜಾ ಪ್ರಭುತ್ವ ದಿನಾಚರಣೆಯ ಅಂಗವಾಗಿ ಸೆ.15ರಂದು ಬೀದರ್‌ನಿಂದ ಚಾಮರಾಜ ನಗರದವರೆಗೆ ರಾಜ್ಯ ಸರ್ಕಾರ ಹಮ್ಮಿಕೊಂಡಿದ್ದ ಮಾನವ ಸರಪಳಿ ನಿರ್ಮಾಣ ಹಾಗೂ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ ಜಿಲ್ಲೆಗಳಿಗೆ ಒಟ್ಟು ಐದು ವಿಭಾಗಗಳಲ್ಲಿ ತಲಾ 3 ಪ್ರಶಸ್ತಿಗಳನ್ನು ನೀಡಲು ನಿರ್ಧರಿಸಲಾಗಿತ್ತು. ಈ ವಿಭಾಗಗಳ ಪೈಕಿ ದಕ್ಷಿಣ ಕನ್ನಡ ಜಿಲ್ಲೆಯು ಅತ್ಯಂತ ಉದ್ದದ ಮಾನವ ಸರಪಳಿ ವಿಭಾಗದಲ್ಲಿ ದ್ವಿತೀಯ ಸ್ಥಾನ ಪಡೆದಿದೆ.

    ನ.26ರಂದು ಬೆಳಗ್ಗೆ 11ಕ್ಕೆ ಬೆಂಗಳೂರಿನ ಡಾ. ಬಿ.ಆರ್.ಅಂಬೇಡ್ಕರ್ ಭವನದಲ್ಲಿ ನಡೆಯಲಿರುವ ಸಂವಿಧಾನ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಅವರಿಂದ ದ.ಕ.ಜಿಲ್ಲಾಧಿಕಾರಿ ಮುಲೈ ಮುಗಿಲನ್ ಪ್ರಶಸ್ತಿ ಸ್ವೀಕರಿಸಲಿದ್ದಾರೆ.

    Continue Reading

    LATEST NEWS

    Trending