International news
ಭಾರತದ ಆಟೋ ಚಾಲಕಿಗೆ ಲಂಡನ್ ನ ಪ್ರತಿಷ್ಠಿತ ಪ್ರಶಸ್ತಿ
ಮಂಗಳೂರು / ಲಂಡನ್ : ಉತ್ತರ ಪ್ರದೇಶದ ಬಹ್ರೈಚ್ ಜಿಲ್ಲೆಯ ಹಳ್ಳಿಯೊಂದರ 18 ವರ್ಷದ ರಿಕ್ಷಾ ಚಾಲಕಿ ಆರತಿ ಬ್ರಿಟನ್ನ ಪ್ರತಿಷ್ಠಿತ ಮಹಿಳಾ ಸಬಲೀಕರಣ ಪ್ರಶಸ್ತಿ ಪಡೆದಿದ್ದಾರೆ. ಪ್ರಿನ್ಸ್ ಟ್ರಸ್ಟ್ ಅವಾರ್ಡ್ಸ್ನಲ್ಲಿ ವಿಶ್ವಪ್ರಸಿದ್ಧ ಮಾನವ ಹಕ್ಕುಗಳ ನ್ಯಾಯವಾದಿಯ ಹೆಸರಿನಲ್ಲಿ ಅಮಲ್ ಕ್ಲೂನಿ ಮಹಿಳಾ ಸಬಲೀಕರಣ ಪ್ರಶಸ್ತಿಯನ್ನು ನೀಡಲಾಗುತ್ತದೆ. ಪ್ರಶಸ್ತಿ ಪಡೆದ ಆರತಿ ಬ್ರಿಟನ್ ರಾಜ ಕುಟುಂಬದ ಅರಮನೆ ಬಕಿಂಗ್ ಹ್ಯಾಮ್ ಪ್ಯಾಲೇಸ್ನಲ್ಲಿ ಕಿಂಗ್ ಚಾರ್ಲ್ಸ್ III ಅವರನ್ನು ಭೇಟಿಯಾದರು.
ಸರ್ಕಾರದ ಪಿಂಕ್ ಇ-ರಿಕ್ಷಾ ಚಾಲನೆ ಮಾಡುವ ಮೂಲಕ ಇತರ ಯುವತಿಯರಿಗೆ ಮಾದರಿ ಮತ್ತು ಮಹಿಳಾ ಸಬಲೀಕರಣಕ್ಕೆ ಆರತಿ ಸ್ಪೂರ್ತಿಯಾಗಿದ್ದಾರೆ.
“ಇದೇ ರೀತಿಯ ಸವಾಲುಗಳನ್ನು ಎದುರಿಸುವ ಇತರ ಹುಡುಗಿಯರನ್ನು ಪ್ರೇರೇಪಿಸಲು ನಾನು ಹೆಮ್ಮೆಪಡುತ್ತೇನೆ. ಸರ್ಕಾರ ಈ ಪಿಂಕ್ ರಿಕ್ಷಾ ಯೋಜನೆ ಜಗತ್ತನ್ನು ವಿಭಿನ್ನ ಬೆಳಕಿನಲ್ಲಿ ನೋಡಲು ನನಗೆ ಸಹಾಯ ಮಾಡಿದೆ. ಈಗ ನಾನು ನನ್ನ ಸ್ವಂತ ಕನಸುಗಳನ್ನು ಮಾತ್ರವಲ್ಲದೆ ನನ್ನ ಮಗಳ ಕನಸುಗಳನ್ನೂ ಈಡೇರಿಸಬಲ್ಲೆ. ಇ ರಿಕ್ಷಾ ಡಿಸೇಲ್ ಪೆಟ್ರೋಲ್ನಂತೆ ಪರಿಸರ ಮಾಲಿನ್ಯ ಮಾಡುವುದಿಲ್ಲ, ಇ ರಿಕ್ಷಾಗೆ ನಾನು ಮನೆಯಲ್ಲಿ ದಿನವೂ ರಾತ್ರಿ ಚಾರ್ಜ್ ಮಾಡುತ್ತೇನೆ ” ಎಂದು ಆರತಿ ಹೇಳಿಕೆ ನೀಡಿರುವ ಬಗ್ಗೆ ಸುದ್ದಿ ಸಂಸ್ಥೆ ಉಲ್ಲೇಖಿಸಿದೆ.
ಪ್ರಶಸ್ತಿಯ ವಿಶೇಷತೆ ಏನು?
ಪ್ರಿನ್ಸ್ ಆಫ್ ವೇಲ್ಸ್ ಎಂದು ಕಿಂಗ್ ಚಾರ್ಲ್ಸ್ ಸ್ಥಾಪಿಸಿದ ಪ್ರಿನ್ಸ್ ಟ್ರಸ್ಟ್ ಇಂಟರ್ನ್ಯಾಷನಲ್ ಅನ್ನು ಈಗ ಕಿಂಗ್ಸ್ ಟ್ರಸ್ಟ್ ಇಂಟರ್ನ್ಯಾಷನಲ್ ಎಂದು ಕರೆಯಲಾಗುತ್ತದೆ.
ಇದನ್ನೂ ಓದಿ : 2 ಸಾವಿರ ರೂಪಾಯಿಗಾಗಿ ಯುವತಿಯ ಹ*ತ್ಯೆ ಮಾಡಿದ್ದ ಅಪ್ರಾಪ್ತ ಅರೆಸ್ಟ್!
ಕೆಂದರೆ ಇದು ಉದ್ಯೋಗ, ಶಿಕ್ಷಣ ಮತ್ತು ಉದ್ಯಮ ಕಾರ್ಯಕ್ರಮಗಳ ಮೂಲಕ 20 ದೇಶಗಳಲ್ಲಿನ ಯುವಜನರಿಗೆ ಬೆಂಬಲ ನೀಡುತ್ತಿದೆ. ಪ್ರಿನ್ಸ್ ಟ್ರಸ್ಟ್ ಮಹಿಳಾ ಸಬಲೀಕರಣ ಪ್ರಶಸ್ತಿಯು ಸ್ವಾಭಿಮಾನಿ ಮಹಿಳೆಯರು ಮತ್ತು ಅವರ ಸಾಧನೆಗಳನ್ನು ಗುರುತಿಸಿ ಗೌರವಿಸುವ ಪ್ರಶಸ್ತಿಯಾಗಿದೆ.
International news
ಕುವೈತ್ ಅ*ಗ್ನಿ ದುರಂ*ತ: 40 ಭಾರತೀಯರ ಸಾ*ವು; ಪ್ರಧಾನಿ ಮೋದಿ ಸಂತಾಪ
ಮಂಗಳೂರು/ಕುವೈತ್ : ಕುವೈತ್ನ ವಸತಿ ಕಾರ್ಮಿಕರ ಕಟ್ಟಡದಲ್ಲಿ ಬುಧವಾರ ಸಂಭವಿಸಿದ ಭಾರೀ ಅ*ಗ್ನಿ ಅವಘ*ಡದಲ್ಲಿ 43ಕ್ಕೂ ಅಧಿಕ ಮಂದಿ ಸಾ*ವನ್ನಪ್ಪಿದ್ದಾರೆ. ಇವರಲ್ಲಿ 40 ಜನ ಭಾರತೀಯರು ಕೂಡ ಸೇರಿದ್ದಾರೆ. ಮಲಯಾಳಿ ಉದ್ಯಮಿಯೊಬ್ಬರಿಗೆ ಸೇರಿದ ಕುವೈತ್ನ ದಕ್ಷಿಣ ಅಹ್ಮದಿ ಗವರ್ನರೇಟ್ನಲ್ಲಿರುವ ಮಂಗಾಫ್ ಪ್ರದೇಶದಲ್ಲಿರುವ ಕಟ್ಟಡದಲ್ಲಿ 160ಕ್ಕೂ ಹೆಚ್ಚು ಕಾರ್ಮಿಕರು ನೆಲೆಸಿದ್ದರು. ಬುಧವಾರ 6 ಅಂತಸ್ತಿನ ಕಟ್ಟಡದ ಅಡುಗೆ ಕೋಣೆಯಲ್ಲಿ ಬೆಂ*ಕಿ ಕಾಣಿಸಿಕೊಂಡಿದೆ.
ಕುವೈತ್ ಉಪಪ್ರಧಾನ ಮಂತ್ರಿ ಶೇಖ್ ಫಹಾದ್ ಯೂಸುಫ್ ಸೌದ್ ಅಲ್-ಸಬಾಹ್ ಈ ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಘಟನೆಯಿಂದ 43 ಕಾರ್ಮಿಕರು ಸಾ*ವನ್ನಪ್ಪಿದ್ದಾರೆ ಎಂದು ಖಚಿತಪಡಿಸಿದ್ದಾರೆ.
ಪ್ರಧಾನಿ ಮೋದಿ ಸಂತಾಪ :
ಈ ಘಟನೆಯ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ. ಕುವೈತ್ ನಗರದಲ್ಲಿ ಸಂಭವಿಸಿದ ಅ*ಗ್ನಿ ದುರಂ*ತವು ದುಃಖಕರವಾಗಿದೆ. ನನ್ನ ಆಲೋಚನೆಗಳು ತಮ್ಮ ಹತ್ತಿರದ ಮತ್ತು ಆತ್ಮೀಯರನ್ನು ಕಳೆದುಕೊಂಡಿರುವ ಎಲ್ಲರೊಂದಿಗೆ ನಾವಿದ್ದೇವೆ. ಗಾಯಾಳುಗಳು ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ನಾನು ಪ್ರಾರ್ಥಿಸುತ್ತೇನೆ. ಕುವೈತ್ನಲ್ಲಿರುವ ಭಾರತೀಯ ರಾಯಭಾರ ಕಚೇರಿಯು ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದೆ ಮತ್ತು ಅಧಿಕಾರಿಗಳೊಂದಿಗೆ ಕೆಲಸ ಮಾಡುತ್ತಿದೆ. ಸಂತ್ರಸ್ತರಿಗೆ ಸಹಾಯ ಮಾಡಲು ನಮ್ಮ ದೇಶದವರು ಅಲ್ಲಿದ್ದಾರೆ ಎಂದು ಎಕ್ಸ್ನಲ್ಲಿ ಬರೆದಿದ್ದಾರೆ.
ಇದನ್ನೂ ಓದಿ : ಪುರಿ ಜಗನ್ನಾಥ ದೇವಾಲಯದ ಎಲ್ಲಾ ನಾಲ್ಕು ದ್ವಾರಗಳು ಭಕ್ತರ ಪ್ರವೇಶಕ್ಕೆ ಮುಕ್ತ
ಭಾರತೀಯ ರಾಯಭಾರಿ ಘಟನೆ ನಡೆದ ಸ್ಥಳಕ್ಕೆ ತೆರಳಿದ್ದಾರೆ ಎಂದು ವಿದೇಶಾಂಗ ಸಚಿವ ಎಸ್ ಜೈಶಂಕರ್ ಹೇಳಿದ್ದಾರೆ. ಕುವೈತ್ ನಗರದಲ್ಲಿ ನಡೆದ ಅ*ಗ್ನಿ ದುರಂ*ತದ ಸುದ್ದಿಯಿಂದ ತೀವ್ರ ಆಘಾತವಾಗಿದೆ. 40ಕ್ಕೂ ಹೆಚ್ಚು ಸಾ*ವುಗಳು ಸಂಭವಿಸಿದ್ದು, 50ಕ್ಕೂ ಹೆಚ್ಚು ಜನರು ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ವರದಿಯಾಗಿದೆ. ನಮ್ಮ ರಾಯಭಾರಿ ಘಟನಾ ಸ್ಥಳಕ್ಕೆ ಹೋಗಿದ್ದು ನಾವು ಹೆಚ್ಚಿನ ಮಾಹಿತಿಗಾಗಿ ಕಾಯುತ್ತಿದ್ದೇವೆ, ಎಂದು ವಿದೇಶಾಂಗ ಸಚಿವ ಎಸ್ ಜೈಶಂಕರ್ ಮಾಹಿತಿ ನೀಡಿದ್ದಾರೆ.
DAKSHINA KANNADA
ಸೌದಿ ಅರೇಬಿಯಾದ ದಮಾಮ್ನಲ್ಲಿ ಅ*ಗ್ನಿ ದುರಂತ; ಮೂಡುಬಿದಿರೆಯ ಮಗು ಸಾ*ವು
ಮೂಡುಬಿದಿರೆ : ಸೌದಿ ಅರೇಬಿಯಾದ ದಮಾಮ್ನಲ್ಲಿ ಶನಿವಾರ(ಮೇ 25) ನಡೆದ ಅ*ಗ್ನಿ ಅವಘಡದಲ್ಲಿ ಕರಾವಳಿ ಮೂಲದ ಮಗುವೊಂದು ಇಹಲೋಕ ತ್ಯಜಿಸಿದೆ. ಅನಿವಾಸಿ ಭಾರತೀಯ ಕುಟುಂಬವೊಂದು ವಾಸಿಸುತ್ತಿದ್ದ ಕಟ್ಟಡದಲ್ಲಿ ಅಗ್ನಿ ಅವಘಡ ಸಂಭವಿಸಿದೆ. ಪರಿಣಾಮ ಮೂರು ವರ್ಷದ ಮಗುವೊಂದರ ಜೀವಾಂತ್ಯವಾಗಿದ್ದರೆ, ಮೂವರು ತೀವ್ರ ಅಸ್ವಸ್ಥರಾಗಿದ್ದಾರೆ.
ದಮಾಮ್ನ ಅದಮಾ ಎಂಬಲ್ಲಿಯ ಲುಲು ಮಾಲ್ ಹಿಂಭಾಗದಲ್ಲಿರುವ ಅಲ್ ಹುಸೇನಿ ಕಂಪೌಂಡ್ನಲ್ಲಿ ಮೂಡುಬಿದಿರೆಯ ಕೋಟೆಬಾಗಿಲು ಖೀಲಾ ಸುನ್ನಿ ಜಾಮಿಯಾ ಮಸೀದಿ ಎದುರಿನ ಮನೆಯ ಶೇಖ್ ಫಹಾದ್ ಮತ್ತು ಅವರ ಕುಟುಂಬ ವಾಸವಾಗಿದೆ. ಇವರು ರಾತ್ರಿ ಮಲಗಿದ್ದ ವೇಳೆ ಅ*ಗ್ನಿ ಅವಘಡ ಸಂಭವಿಸಿದೆ. ಈ ವೇಳೆ ಫಹದ್ ಅವರ ಮಗು ಸಾಯಿಕ್ ಶೇಖ್ (2) ಉಸಿರುಗಟ್ಟಿ ಮೃ*ತಪಟ್ಟಿದೆ.
ಇದನ್ನೂ ಓದಿ : WATCH : ಚಲಿಸುತ್ತಿದ್ದ ಟ್ರಕ್ ನಲ್ಲಿ ಕಳ್ಳರ ಕರಾಮತ್ತು; ಸಿನಿಮೀಯ ರೀತಿಯಲ್ಲಿ ಸರಕು ಕದ್ದ ಖದೀಮರು! ನಿಬ್ಬೆರಗಾದ ನೆಟ್ಟಿಗರು!
ಫಹದ್, ಅವರ ಪತ್ನಿ ಸಲ್ಮಾ ಕಾಝಿ ಮತ್ತು ಪುತ್ರ ಶಾಹಿದ್ ಶೇಖ್(6) ಹೊಗೆಯಿಂದ ಉಸಿರುಗಟ್ಟಿ ತೀವ್ರವಾಗಿ ಅಸ್ವಸ್ಥರಾಗಿದ್ದಾರೆ. ಅವರನ್ನು ಸಮೀಪದ ನಿವಾಸಿಗಳು ಆಸ್ಪತ್ರೆಗೆ ದಾಖಲಿಸಿದ್ದು, ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಮನೆಯೊಳಗಿದ್ದ ರೆಫ್ರಿಜರೇಟರ್ನಿಂದ ಶನಿವಾರ ರಾತ್ರಿ ಅನಿಲ ಸೋರಿಕೆ ಉಂಟಾಗಿ ಈ ದುರಂ*ತ ಸಂಭವಿಸಿದೆ ಎಂದು ತಿಳಿದು ಬಂದಿದೆ. ಫಹಾದ್ ಕುಟುಂಬವು ಕಳೆದ ಆರು ತಿಂಗಳಿನಿಂದ ಈ ಕಟ್ಟಡದಲ್ಲಿ ವಾಸವಾಗಿದೆ.
International news
ಮದುವೆ ಗೌನ್ ನಲ್ಲಿ ಮಿಂಚಬೇಕಿದ್ದ ಯುವತಿ ಗ್ಯಾಸ್ಟ್ರಿಕ್ ಬಲೂನ್ ಸರ್ಜರಿಯಿಂದ ಸಾ*ವು!
ಮಂಗಳೂರು/ ಬ್ರೆಜಿಲ್ : ಮದುವೆ ಅನ್ನೋದು ಬದುಕಿನ ಅತ್ಯಮೂಲ್ಯ ಕ್ಷಣಗಳಲ್ಲಿ ಒಂದು. ಅನೇಕರು ಮದುವೆ ಬಗ್ಗೆ ಹಲವಾರು ಕನಸುಗಳನ್ನು ಹೊಂದಿರುತ್ತಾರೆ. ಸುಂದರವಾಗಿ ಕಾಣೋದು ಕೂಡ ಹಲವರ ಬಯಕೆ. ಇತ್ತೀಚೆಗೆ ಸೌಂದರ್ಯಕ್ಕಾಗಿ ಹಲವರು ಸರ್ಕಸ್ ಮಾಡುತ್ತಿರುತ್ತಾರೆ. ಈ ಆಸೆಗೆ ಜೀವವೇ ಬಲಿಯಾಗುತ್ತೆ ಅನ್ನೋದಕ್ಕೆ ಸಾಕ್ಷಿಯಾಗಿದೆ ಬ್ರೆಜಿಲ್ ನ ಈ ಘಟನೆ.
ಬ್ರೆಜಿಲ್ ನ ಯುವತಿಯೊಬ್ಬಳು ತನ್ನ ಮದುವೆ ದಿನದಂದು ಗೌನ್ ನಲ್ಲಿ ಗೊಂಬೆಯಂತೆ ಕಾಣುವ ಸಲುವಾಗಿ ತೂಕ ಇಳಿಸಿಕೊಳ್ಳಲು ಮುಂದಾಗಿದ್ದಾಳೆ. ಆದರೆ, ಮದುವೆಯ ಹಸೆಮಣೆ ಏರಬೇಕಾದವಳು ಮಸಣ ಸೇರಿದ್ದಾಳೆ.
ಜೀವಕ್ಕೆ ಕುತ್ತಾದ ‘ಗ್ಯಾಸ್ಟ್ರಿಕ್ ಬಲೂನ್’ ಸರ್ಜರಿ :
ಲಾರಾ ಫೆರ್ನಾಂಡಿಸ್ ಕೋಸ್ಟಾ(31) ಸೌಂದರ್ಯದ ಬೆಂಬತ್ತಿ ಪ್ರಾ*ಣ ಕಳೆದುಕೊಂಡ ಯುವತಿ. ಬಹುಕಾಲದ ಪ್ರಿಯಕರ ಮ್ಯಾಥ್ಯೂಸ್ ನೊಂದಿಗೆ ಲಾರಾ ವಿವಾಹ ನಿಶ್ಚಯವಾಗಿತ್ತು. ಸೆಪ್ಟೆಂಬರ್ 7ರಂದು ದಿನ ನಿಗದಿಯಾಗಿತ್ತು. ಇನ್ನೇನು ಮದುವೆಗೆ ತಿಂಗಳುಗಳು ಬಾಕಿ ಇರುವಾಗ ತೂಕ ಇಳಿಸಿಕೊಳ್ಳಲು ಬಯಸಿದ್ದಾಳೆ.
ಸುಮಾರು 8 ಕೆಜಿ ತೂಕ ಕಳೆದುಕೊಳ್ಳಲು ಆಕೆ ಬಯಸಿದ್ದಳು. ಇದಕ್ಕಾಗಿ ಏಪ್ರಿಲ್ 26 ರಂದು ಬ್ರೆಜಿಲ್ನ ಬೆಲೊ ಹಾರಿಜಾಂಟೆಯ ಕ್ಲಿನಿಕ್ನಲ್ಲಿ ಹೊಟ್ಟೆಯೊಳಗೆ ‘ಗ್ಯಾಸ್ಟ್ರಿಕ್ ಬಲೂನ್’ ಸರ್ಜರಿ ಮಾಡಿಸಿಕೊಂಡಿದ್ದಾಳೆ. ಆದರೆ ಸರ್ಜರಿಯಾದ ಕೆಲ ದಿನಗಳ ಬಳಿಕ ಆರೋಗ್ಯದಲ್ಲಿ ಏರುಪೇರಾಗಿದೆ. ಪರಿಣಾಮ ಮೇ 1 ರಂದು ಯುವತಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಆಕೆಯನ್ನು ಪರೀಕ್ಷಿಸಿದ ವೈದ್ಯರು, ಆಕೆಯ ಹೊಟ್ಟೆಯೊಳಗಿದ್ದ ಗ್ಯಾಸ್ಟ್ರಿಕ್ ಬಲೂನ್ ಹೊರ ತೆಗೆದಿದ್ದಾರೆ. ಬಳಿಕ ಆಕೆಯ ಹೊಟ್ಟೆಯಲ್ಲಿ ರಂಧ್ರ ಉಂಟಾಗಿದ್ದು, ಅದು ಹೊಟ್ಟೆಯ ಸುತ್ತಲೂ ಸೋಂಕನ್ನು ಉಂಟುಮಾಡಿದೆ ಎಂದು ವೈದ್ಯರು ತಿಳಿಸಿದ್ದಾರೆ. ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಯುವತಿ ಮೇ 7 ರಂದು ಇಹಲೋಕ ತ್ಯಜಿಸಿದ್ದಾಳೆ ಎಂದು ವರದಿಯಾಗಿದೆ.
ಇದನ್ನೂ ಓದಿ : ಪ್ರೀತಿಸಿದ ಹುಡುಗ ಬೇಡ; ಯಾವ ಹೀರೋಗೂ ಕಮ್ಮಿ ಇರದವನು ಸಿಗಲಿ; ಬನಶಂಕರಿ ದೇವಿಗೆ ಬಂದಿವೆ ವಿಚಿತ್ರ ಬೇಡಿಕೆಯ ಪತ್ರಗಳು!
ಗ್ಯಾಸ್ಟ್ರಿಕ್ ಬಲೂನ್ ಸರ್ಜರಿ ಬಗ್ಗೆ …
ಗ್ಯಾಸ್ಟ್ರಿಕ್ ಬಲೂನ್ ಸರ್ಜರಿ ಎಂದರೆ ಇಂಟ್ರಾಗ್ಯಾಸ್ಟ್ರಿಕ್ ಬಲೂನ್ ( IGB ) ಅಥವಾ ಹೊಟ್ಟೆಯ ಬಲೂನ್ ಎಂದು ಹೇಳಲಾಗುತ್ತದೆ. ಹೊಟ್ಟೆಯಲ್ಲಿ ಎಂಡೋಸ್ಕೋಪಿಕ್ ಮೂಲಕ ಬಾಯಿಯ ಮೂಲಕ ಸ್ಥಾಪಿಸಲಾಗುತ್ತದೆ. ಗಾಳಿ ತುಂಬಿದ ಬಲೂನ್ ಅನ್ನು ಟ್ಯೂಬ್ ಮೂಲಕ ಮೌಖಿಕವಾಗಿ ಹೊಟ್ಟೆಯೊಳಗೆ ಇರಿಸಲಾಗುತ್ತದೆ. ಸಿಲಿಕಾನ್ ಚೀಲವು ಬರಡಾದ ಲವಣಯುಕ್ತ ದ್ರಾವಣದಿಂದ ತುಂಬಿರುತ್ತದೆ. ಇದು ಹೊಟ್ಟೆಯೊಳಗೆ ಪೂರ್ಣತೆಯ ಭಾವನೆಯನ್ನು ಉಂಟುಮಾಡುತ್ತದೆ. ಹೀಗಾಗಿ ಹೆಚ್ಚು ತಿನ್ನುವುದನ್ನು ತಡೆಯುತ್ತದೆ. ಇದು ವೇಗವಾಗಿ ತೂಕ ಕಳೆದುಕೊಳ್ಳಲು ಸಹಾಯ ಮಾಡುತ್ತದೆ ಎಂದು ಹೇಳಲಾಗುತ್ತದೆ.
Pingback: ಮೇ.26: ಹಿರಿಯ ಪತ್ರಕರ್ತ, ಸಾಹಿತಿ ಚಿದಂಬರ ಬೈಕಂಪಾಡಿಯವರಿಗೆ ಯಕ್ಷಧ್ರುವ ಕಲಾ ಗೌರವ ಪುರಸ್ಕಾರ - NAMMAKUDLA NEWS - ನಮ್ಮಕುಡ್