Connect with us

    ಇಂದಿನಿಂದ ಲಾಕ್‍ಡೌನ್ ಸಡಿಲಿಕೆ, ಏನಿರುತ್ತೆ..? ಏನಿರಲ್ಲ..?

    Published

    on

    ಇಂದಿನಿಂದ ಲಾಕ್‍ಡೌನ್ ಸಡಿಲಿಕೆ, ಏನಿರುತ್ತೆ..? ಏನಿರಲ್ಲ..?

    ನವದೆಹಲಿ: ಕೊರೊನಾ ತಡೆಗಟ್ಟಲು ಕಳೆದ ಒಂದು ತಿಂಗಳಿಂದ ಹೇರಲಾಗಿರುವ ಲಾಕ್ ಡೌನ್ ನಿಂದ ಜನ-ಜೀವನ ಸ್ತಬ್ಧವಾಗಿರುವ ಹಿನ್ನಲೆಯಲ್ಲಿ ಕೇಂದ್ರ ಸರ್ಕಾರ ಮತ್ತೆ ಕೆಲ ವಿನಾಯಿತಿಗಳನ್ನು ನೀಡುವ ಮೂಲಕ ಕೊಂಚ ರಿಲೀಫ್ ನೀಡಿದೆ.

    ನಗರಸಭೆ ಹಾಗೂ ಪುರಸಭೆ ವ್ಯಾಪ್ತಿಗಳ ವಸತಿ ಸಮುಚ್ಚಯಗಳಲ್ಲಿರುವ ನೆರೆಹೊರೆಯ ಅಂಗಡಿಗಳನ್ನು ತೆರೆಯಲು ಅವಕಾಶ ನೀಡಿದೆ.

    ಆದರೆ ಸೋಂಕು ಹರಡದಂತೆ ನೀಡಿರುವ ಮಾರ್ಗ ಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಕೇಂದ್ರ ಸೂಚಿಸಿದೆ.

    ಕೇಂದ್ರ ಗೃಹ ಸಚಿವಾಲಯದ ವಕ್ತಾರರ ಟ್ವಿಟ್ಟರ್ ನಲ್ಲಿ ಈ ಸಂಬಂಧ ಆದೇಶದ ಪ್ರತಿಯನ್ನು ಪ್ರಕಟಿಸಲಾಗಿದೆ.

    ಟ್ವಿಟ್ಟರ್ ನಲ್ಲಿ ಲಾಕ್ ಡೌನ್ ನಿಂದ ವಿನಾಯಿತಿ ನೀಡಲಾಗಿದೆ ಎಂದು ತಿಳಿಸಲಾಗಿದ್ದು, ಆದೇಶಕ್ಕೆ ಗೃಹ ಸಚಿವಾಲಯದ ಕಾರ್ಯದರ್ಶಿ ಅಭಯ ಭಲ್ಲಾ ಅವರು ಸಹಿ ಹಾಕಿದ್ದಾರೆ.

    ಈ ಆದೇಶದ ಪ್ರಕಾರ, ನಗರಸಭೆ ಹಾಗೂ ಪುರಸಭೆಗಳ ವ್ಯಾಪ್ತಿಯ ವಸತಿ ಸಮುಚ್ಚಯಗಳ ಅಂಗಡಿಗಳನ್ನು ತೆರೆಯಲು ಅವಕಾಶ ನೀಡಲಾಗಿದೆ.

    ಅಲ್ಲದೆ, ಮಾಸ್ಕ್ ಹಾಗೂ ಅಂತರ ಕಾಯ್ದುಕೊಳ್ಳುವಿಕೆ, ಅಂಗಡಿಯಲ್ಲಿ ಕೆಲಸ ಮಾಡುವವರು ಶೇ.50ರಷ್ಟು ಮಂದಿ ಮಾತ್ರ ಕರ್ತವ್ಯ ನಿರ್ವಹಿಸಬೇಕು.

    ಕೆಲಸಗಾರರು ಕಡ್ಡಾಯವಾಗಿ ಮಾಸ್ಕ್ ಧರಿಸಿರಬೇಕು, ಅಂತರ ಕಾಯ್ದುಕೊಳ್ಳುವಿಕೆಯನ್ನು ಇವರೂ ಕಡ್ಡಾಯವಾಗಿ ಪಾಲಿಸಬೇಕು ಎಂದು ತಿಳಿಸಿದೆ.

    ಆದರೆ ನಗರಸಭೆ ಹಾಗೂ ಪುರಸಭೆ ಪ್ರದೇಶಗಳಲ್ಲಿರುವ ಮಾರುಕಟ್ಟೆ ಸ್ಥಳಗಳು, ಮಲ್ಟಿ ಬ್ರಾಂಡ್ ಮತ್ತು ಸಿಂಗಲ್ ಬ್ರಾಂಡ್ ಮಾಲ್ ಗಳು ಎಂದಿನಂತೆ ಮೇ 3ರ ವರೆಗೆ ತೆರೆಯಲು ಅವಕಾಶವಿಲ್ಲ ಎಂದು ಆದೇಶದಲ್ಲಿ ತಿಳಿಸಲಾಗಿದೆ.

    ಈ ವಿನಾಯಿತಿ ಕೊರೊನಾ ಹಾಟ್ ಸ್ಪಾಟ್ ಹಾಗೂ ಕಂಟೈನ್ಮೆಂಟ್ ಜೋನ್ ಗಳಿಗೆ ಅನ್ವಯಿಸುವುದಿಲ್ಲ ಎಂಬುದನ್ನು ಸ್ಪಷ್ಟಪಡಿಸಿದೆ.

    ಯಾವೆಲ್ಲ ಅಂಗಡಿಗಳು ಓಪನ್.?

     * ನಗರ ಸಭೆ ಮತ್ತು ಪುರಸಭೆ ವ್ಯಾಪ್ತಿಗಳ ವಸತಿ ಪ್ರದೇಶಗಳಲ್ಲಿರುವ ನೆರೆ ಹೊರೆಯ ಅಂಗಡಿಗಳನ್ನು ತೆರೆಯಬಹುದು.

    * ಸಲೂನ್, ಬ್ಯೂಟಿ ಪಾರ್ಲರ್ ಗೆ ಬೇಕಾಗುವ ಸಾಮಾಗ್ರಿಗಳುಳ್ಳ ಅಂಗಡಿ ಓಪನ್ ಮಾಡಬಹುದು.

    * ಗ್ರಾಮೀಣ ಪ್ರದೇಶದಲ್ಲಿ ಎಲ್ಲಾ ಅಂಗಡಿಗಳನ್ನು ತೆರೆಯಲು ಅವಕಾಶ ನೀಡಲಾಗಿದೆ.

    * ಈ-ಕಾಮರ್ಸ್ ಮೂಲಕ ಅಗತ್ಯ ವಸ್ತುಗಳನ್ನು ಮಾರಾಟ ಮಾಡಲು ಮಾತ್ರ ಅವಕಾಶ ಕೊಡಲಾಗಿದೆ.

     ಯಾವೆಲ್ಲ ಅಂಗಡಿಗಳು ಬಂದ್.?

     * ಮಲ್ಟಿ ಬ್ರ್ಯಾಂಡ್ ಮತ್ತು ಸಿಂಗಲ್ ಬ್ರ್ಯಾಂಡ್ ಮಾಲ್ ಗಳು ಬಂದ್.

    * ಮಾರ್ಕೆಟ್ ಕಾಂಪ್ಲೆಕ್ಸ್ ತೆರೆಯುವಂತಿಲ್ಲ.

    * ಸಿನಿಮಾ ಹಾಲ್, ಮಾಲ್, ಶಾಪಿಂಗ್ ಕಾಂಪ್ಲೆಕ್ಸ್, ಜಿಮ್, ಸ್ಪೋರ್ಟ್ಸ್ ಕಾಂಪ್ಲೆಕ್ಸ್, ಸ್ವಿಮ್ಮಿಂಗ್ ಪೂಲ್, ಮನರಂಜನಾ ಪಾರ್ಕ್, ಬಾರ್ ತೆಗೆಯುವ ಹಾಗಿಲ್ಲ.

    * ದೊಡ್ಡ ದೊಡ್ಡ ಅಂಗಡಿಗಳು, ಮಾರುಕಟ್ಟೆ ಪ್ರದೇಶಗಳು ಓಪನ್ ಮಾಡುವ ಹಾಗಿಲ್ಲ.

    ಯಾವೆಲ್ಲ ನಿಯಮಗಳನ್ನು ಪಾಲಿಸಬೇಕು.?

     * ಅಂಗಡಿಗಳು 50% ಕೆಲಸಗಾರರೊಂದಿಗೆ ಮಾತ್ರ ಕಾರ್ಯ ನಿರ್ವಹಿಸಬೇಕು.

    * ಎಲ್ಲಾ ಕೆಲಸಗಾರರು ಮಾಸ್ಕ್ ಧರಿಸಬೇಕು.

    * ಕಡ್ಡಾಯವಾಗಿ ಎಲ್ಲರೂ ಸಾಮಾಜಿಕ ಅಂತರ ಪಾಲಿಸಬೇಕು.

    Click to comment

    Leave a Reply

    Your email address will not be published. Required fields are marked *

    DAKSHINA KANNADA

    ಹಳ್ಳ ಹಿಡಿದ ಸ್ಮಾರ್ಟ್‌ ಸಿಟಿಯ ಕಾಮಗಾರಿ; ಕುಂಟುತ್ತಾ ಸಾಗಿದ ಮಹಾಕಾಳಿ ಪಡ್ಪು ಅಂಡರ್ ಪಾಸ್

    Published

    on

    ಮಂಗಳೂರು: ಮಂಗಳೂರು ಸ್ಮಾರ್ಟ್‌ ಸಿಟಿ ಯೋಜನೆಯಲ್ಲಿ ಕೈಗೆತ್ತಿಕೊಂಡಿರುವ ಮಹಾಕಾಳಿ ಪಡ್ಪುವಿನ ರೈಲ್ವೇ ಅಂಡರ್‌ ಪಾಸ್‌ ಕಾಮಗಾರಿ ಸದ್ಯಕ್ಕಂತು ಮುಗಿಯುವ ಲಕ್ಷಣ ಕಾಣಿಸುತ್ತಿಲ್ಲ. ಈ ಕಾಮಗಾರಿ ಕೈಗೆತ್ತಿಕೊಂಡು ವರ್ಷಗಳೇ ಕಳೆದರೂ ಕಾಮಗಾರಿ ಮುಗಿಸಬೇಕು ಅನ್ನೋ ಇಚ್ಚೆ ಸ್ಮಾರ್ಟ್‌ ಸಿಟಿ ಯೋಜನೆಯವರಿಗೂ ಇದ್ದಂತಿಲ್ಲ.

    ಕೆಲ ತಿಂಗಳ ಹಿಂದೆ ಕಳಪೆ ಕಾಮಗಾರಿಯಿಂದಾಗಿ ಇಲ್ಲಿ ಕಾಮಗಾರಿ ಕುಸಿತ ಕೂಡಾ ಉಂಟಾಗಿತ್ತು. ಇದೀಗ ಕೆಲ ದಿನಗಳಿಂದ ಯಾವುದೇ ಕಾಮಗಾರಿ ನಡೆಸದೆ ಕಾರ್ಮಿಕರು ಕೂಡಾ ಕೆಲಸ ಇಲ್ಲದೆ ಸುಮ್ಮನೆ ಕುಳಿತಿರುವ ದೃಶ್ಯ ಇಲ್ಲಿ ಮಾಮೂಲಾಗಿದೆ. ಮಾರ್ಗನ್‌ ಗೇಟ್ ಮೂಲಕವಾಗಿ ಜೆಪ್ಪಿನ ಮೊಗೆರು ಹೈವೆ ಸಂಪರ್ಕಿಸುವ ಈ ರಸ್ತೆಯಲ್ಲಿ ನಿತ್ಯ ಸಾವಿರಾರು ವಾಹನಗಳು ಓಡಾಡುತ್ತಿದೆ. ಸದ್ಯ ಈ ಕಾಮಗಾರಿ ಆರಂಭವಾದ ಬಳಿಕ ಇಲ್ಲಿ ದ್ವಿಚಕ್ರ ವಾಹನಕ್ಕಷ್ಟೇ ಓಡಾಡಲು ವ್ಯವಸ್ಥೆ ಮಾಡಲಾಗಿದೆ.

    ಉಪ್ಪಳದಲ್ಲಿ 3.5 ಕೋಟಿ ರೂಪಾಯಿ ಮೌಲ್ಯದ ಡ್ರಗ್ಸ್‌ ವಶ; ಓರ್ವ ಬಂಧನ

    ಹೀಗಾಗಿ ಈ ರಸ್ತೆಯ ಮೂಲಕ ಪ್ರಯಾಣಿಸುತ್ತಿದ್ದ ಪ್ರಯಾಣಿಕರು ಕಾಮಗಾರಿ ಯಾವಾಗ ಮುಗಿಸ್ತೀರಿ ಅಂತ ಪ್ರಶ್ನೆ ಮಾಡುತ್ತಿದ್ದಾರೆ. ಆದರೆ ಇಲ್ಲಿ ನಡಿಯುತ್ತಿರುವ ಕಾಮಗಾರಿಯ ವೇಗ ನೋಡಿದರೆ ಇದು 2024 ರಲ್ಲಿ ಪೂರ್ಣಗೊಳ್ಳುವ ಯಾವುದೇ ಲಕ್ಷಣ ಇಲ್ಲ ಅನ್ನೋದು ಸ್ಪಷ್ಟವಾಗುತ್ತಿದೆ. ಹೀಗಾಗಿ ತಕ್ಷಣ ಅಂಡರ್ ಪಾಸ್ ಕೆಲಸ ಮಗಿಸಿ ಅಂತ ಜನ ಒತ್ತಾಯಿಸಿದ್ದಾರೆ.

    Continue Reading

    LATEST NEWS

    11 ವರ್ಷದ ಬಾಲಕ ಹೃದಯಘಾ*ತಕ್ಕೆ ಬ*ಲಿ

    Published

    on

    ಹಾಸನ : ಹೃದಯಾಘಾ*ತ ಎಂಬುದು ಇತ್ತೀಚೆಗೆ ಸಾಮಾನ್ಯವಾಗಿದೆ. ಚಿಕ್ಕ ಮಕ್ಕಳಿಂದ ಹಿಡಿದು ವಯಸ್ಸಾದವರೂ ಹೃದಯಾ*ಘಾತಕ್ಕೆ ಒಳಗಾಗುತ್ತಿದ್ದಾರೆ. ರಾಜ್ಯದಲ್ಲಿ ಮತ್ತೊಂದು ಕಳವಳಕಾರಿ ಘಟನೆ ನಡೆದಿದ್ದು, 11 ವರ್ಷದ ಬಾಲಕ ಹೃದಯಾ*ಘಾತಕ್ಕೆ ಬ*ಲಿಯಾಗಿದ್ದಾನೆ. ಈ  ಘಟನೆ ಹಾಸನ ಜಿಲ್ಲೆಯ ಆಲೂರು ತಾಲ್ಲೂಕಿನ ಚನ್ನಾಪುರ ಗ್ರಾಮದಲ್ಲಿ ನಡೆದಿದೆ. ಸಚಿನ್ ಮೃ*ತ ಬಾಲಕ.

    ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಎಂಟನೇ ತರಗತಿ ಓದುತ್ತಿದ್ದ ಸಚಿನ್, ಮನೆಯಲ್ಲಿ ಟಿವಿ ನೋಡುತ್ತಿದ್ದ ವೇಳೆ ಹೃದಯಾ*ಘಾತವಾಗಿದೆ.

    ಇದನ್ನೂ ಓದಿ : ಮನೆಯಲ್ಲಿ ಹಲ್ಲಿ ಕಾಟವೇ? ಈ ಸಿಂಪಲ್​ ಮನೆಮದ್ದು ಟ್ರೈ ಮಾಡಿ

    ಟಿವಿ ನೋಡುತ್ತಲೇ ಕುಸಿ*ದು ಬಿದ್ದ ಮಗನನ್ನು ಮಾತನಾಡಿಸಲು ಮನೆಯವರು ಪ್ರಯತ್ನಿಸಿದ್ದು, ಏನು ಮಾತನಾಡದೆ ಇರೋದನ್ನು ಗಮನಿಸಿ ಪೋಷಕರು ಕೂಡಲೇ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ, ಆಲೂಕು ಸರ್ಕಾರಿ ಆಸ್ಪತ್ರೆಗೆ ಕರೆತರುವ ಮುನ್ನವೇ ಬಾಲಕ ಸಾ*ವನ್ನಪ್ಪಿದ್ದ ಎಂದು ವೈದ್ಯರು ಘೋಷಿಸಿದ್ದಾರೆ ಎಂದು ತಿಳಿದು ಬಂದಿದೆ.

    Continue Reading

    FILM

    ಕನ್ನಡದ ಸೀರಿಯಲ್‌ನಲ್ಲಿ ಮಿಂಚುತ್ತಿರುವ ಉಡುಪಿಯ ಬೆಡಗಿ

    Published

    on

    ಬೆಂಗಳೂರು/ಮಂಗಳೂರು: ಸಿನೆಮಾದಲ್ಲಿ ನಟಿಸಬೇಕು ಅನ್ನೋದು ಎಲ್ಲರ ಕನಸು. ಆದರೆ ಇಲ್ಲೊಬ್ಬಾಕೆ ನಟಿಗೆ ಸೀರಿಯಲ್‌ನಲ್ಲಿ ನಟಿಸಬೇಕು ಎಂಬ ಆಸೆ. ಆದರೆ ಆಕೆಗೆ ಮಾತ್ರ ಮೊದಲು ಒಲಿದು  ಬಂದಿದ್ದು ಸಿನೆಮಾದಲ್ಲಿ ನಟಿಸುವ ಅವಕಾಶ. ಇದೀಗ ಆ ನಟಿ ಸುರ್ವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ‘ಅವನು ಮತ್ತು ಶ್ರಾವಣಿ’ ಧಾರವಾಹಿಯಲ್ಲಿ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಹೌದು, ಈ ಧಾರಾವಾಹಿಯಲ್ಲಿ ಶ್ರಾವಣಿಯಾಗಿ ಕಾಣಿಸಿಕೊಂಡಿರುವ ಇಶಿಕಾ ಶೆಟ್ಟಿಗಾರ್ ಮೂಲತಃ ಉಡುಪಿಯವರಾಗಿದ್ದಾರೆ.

    ಶ್ರಾವಣಿ ಪಾತ್ರದ ಇಶಿಕಾ ಶೆಟ್ಟಿಗಾರ್ ಮೂಲತಃ  ಉಡುಪಿಯವರಾಗಿದ್ದು ಸದ್ಯ ಬೆಂಗಳೂರಿನಲ್ಲಿ ವಾಸವಾಗಿದ್ದಾರೆ. ಈಕೆ 9 ನೇ ತರಗತಿಯಲ್ಲಿದ್ದಅಗಲೇ ಸಿನೆಮಾ ನಟನೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಊರ್ವಿ, ಗರುಡ, ಮನದ ಮರೆಯಲಿ ಸೇರಿದಂತೆ ನಾಳ್ಕೈದು ಸಿನೆಮಾಗಳಲ್ಲಿ ನಟಿಸಿದ್ದಾರೆ. ಬಳಿಕ ಕಾನೂನು ಪದವಿ ಮುಗಿಸಿರುವ ಇವರು ಸೀರಿಯಲ್‌ ನಲ್ಲಿ ಆಭಿನಯಿಸುವತ್ತ ಒಲವು ಮಾಡಿದ್ದಾರೆ. ಹೀಗಾಗಿ ಲುಕ್‌ ಟೆಸ್ಟ್ ಕೂಡಾ ಕೊಟ್ಟಿದ್ದಾರೆ.

    ಜಾನಿ ಮಾಸ್ಟರ್ ಪತ್ನಿಗೂ ಬಂತು ಕಂಟಕ..! ಅತ್ಯಾಚಾರ ಪ್ರಕರಣಕ್ಕೆ ಟ್ವಿಸ್ಟ್..!!

    ಇದೇ ವೇಳೆ ‘ಅವನು ಮತ್ತು ಶ್ರಾವಣಿ’ ಧಾರಾವಾಹಿಗೆ ರಿಪ್ಲೇಸ್‌ಮೆಂಟ್‌ ಪಾತ್ರಕ್ಕೆ ಕರೆ ಬರುತ್ತದೆ. ರಿಪ್ಲೇಸ್‌ಮೆಂಟ್‌ ಪಾತ್ರ ಆಗಿದ್ದರಿಂದ ಜನರಿಗೆ ಇಷ್ಟ ಆಗ್ಬೋದಾ ಅನ್ನುವ ಮೈಂಡ್‌ ಸೆಟ್ ನಲ್ಲಿ ಇವರು ಕೊನೆಗೂ ಪಾತ್ರಕ್ಕೆ ಸೈ ಎಂದು ಹೇಳಿದ್ದಾರೆ. ಇದೀಗ ಧಾರಾವಾಹಿ ಮೂಲಕ ಕನ್ನಡಿಗರ ಮನಗೆದ್ದಿದ್ದಾರೆ. ಈ ಧಾರಾವಾಹಿಯಲ್ಲಿ ನಟನೆ ಆರಂಭಿಸಿದ ಮೇಲೆ ಆಫರ್‌ಗಳು ಬರುತ್ತಿದೆ ಎಂದು ಇಶಿಕಾ ಶೆಟ್ಟಿಗಾರ್ ಹೇಳಿದ್ದಾರೆ.

    Continue Reading

    LATEST NEWS

    Trending