Connect with us

    DAKSHINA KANNADA

    ದ. ಕ. ಜಿಲ್ಲೆಯಲ್ಲಿ‌ ಲಾಕ್‌ಡೌನ್ ಮತ್ತೊಂದು ವಾರಕ್ಕೆ ವಿಸ್ತರಣೆ: ಸಚಿವ ಕೋಟ

    Published

    on

    ಮಂಗಳೂರು: ಕೋವಿಡ್ ಹೆಚ್ಚಳ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮತ್ತೆ ಒಂದು ವಾರ ಲಾಕ್‌ಡೌನ್  ಮುಂದುವರಿಸಲು ತೀರ್ಮಾನ ಮಾಡಲಾಗಿದೆ. ಈ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿಕೆ ನೀಡಿದ್ದಾರೆ.

    ಜಿಲ್ಲೆಯಲ್ಲಿ ಕೈಗಾರಿಕೆ ಹೊರತುಪಡಿಸಿ ಜಿಲ್ಲೆಯಲ್ಲಿ ಒಂದು ವಾರ ಲಾಕ್‌ಡೌನ್‌ ಮುಂದುವರೆಸಲು ಮುಖ್ಯಮಂತ್ರಿಗೆ ಮನವಿ ಮಾಡಿದ್ದೆವು.

    ಇದಕ್ಕೆ ಸಭೆಯಲ್ಲಿ ಮುಖ್ಯಮಂತ್ರಿಗಳು ಒಪ್ಪಿಗೆ ಸೂಚಿಸಿದ್ದಾರೆ. ಹೀಗಾಗಿ ಮತ್ತೆ ಒಂದು ವಾರ ದಕ್ಷಿಣ ಕನ್ನಡ ಜಿಲ್ಲೆ ಲಾಕ್‌ಡೌನ್ ಮುಂದುವರಿಯಲಿದೆ ಎಂದರು.

    ಕೆಲ ವಿಷಯಗಳಿಗೆ ರಿಯಾಯಿತಿ ನೀಡುವ ಸಂಬಂಧ ನಾಳೆ ಶುಕ್ರವಾರ ಸಂಸದರು, ಶಾಸಕರ ಸಭೆ ನಡೆಸಲಾಗುವುದು.

    ಕೂಲಿ ಮಾಡುವವರು ಮತ್ತು ಕೈಗಾರಿಕಾ ಕಾರ್ಮಿಕರಿಗೆ‌ ನೆರವಾಗುವ ನಿಟ್ಟಿನಲ್ಲಿ ಕೆಲವೊಂದು ಸಡಿಲಿಕೆ ಮಾಡಲಾಗುವುದು.

    ಆ ಬಗ್ಗೆ ‌ಶುಕ್ರವಾರದ ಸಭೆಯಲ್ಲಿ‌ ಚರ್ಚಿಸಿದ ಬಳಿಕ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

    ಜನಸಾಮಾನ್ಯರ ಅಸಮಾಧಾನ : ಇನ್ನು ಜಿಲ್ಲೆಯಲ್ಲಿ ಲಾಕ್ ಡೌನ್ ವಿಸ್ತರಿಸಿದ್ದ ಬಗ್ಗೆ ಜನ ಸಾಮಾನ್ಯರು ಜಿಲ್ಲಾಡಳಿತ  ಮತ್ತು ಸರ್ಕಾರದ ನಿಲುವಿನ ಬಗ್ಗೆ ಅಸಮಾಧಾನ ಕೂಡ ವ್ಯಕ್ತಪಡಿಸಿದ್ದಾರೆ. ಈಗಾಗಲೇ ಒಂದು ತಿಂಗಳ ಮೇಲಾಗಿದೆ.

    ನಿರಂತರ ಲಾಕ್ ಡೌನ್ ನಿಂದ  ಮಧ್ಯಮ ವರ್ಗ ಮತ್ತು ಜನಸಾಮಾನ್ಯ ಇತ್ತ ತಿನ್ನಲೂ ಇಲ್ಲ ಅತ್ತ  ಕೆಲಸವೂ ಇಲ್ಲದೆ ಕಂಗಾಲಾಗಿದ್ದಾನೆ. ಈ ಮಧ್ಯೆ ಮತ್ತೆ ಜಿಲ್ಲೆಯಲ್ಲಿ ಲಾಕ್ ವಿಸ್ತರಣೆ ಮಾಡುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

    ಜಿಲ್ಲೆಯಲ್ಲಿ ಕೊರೊನಾ ಸೋಂಕು ಹೆಚ್ಚಾಗಲು ಮತ್ತು ಸೋಂಕು ನಿಗ್ರಹಣೆ ವಿಫಲಕ್ಕೆ ಕಾರಣ ಯಾರು ಎಂದು ಪ್ರಶ್ನಿಸಿದ್ದಾರೆ..?

    Click to comment

    Leave a Reply

    Your email address will not be published. Required fields are marked *

    DAKSHINA KANNADA

    ಕಿನ್ನಿಗೋಳಿ: ರೈತನ ಮೇಲೆ ಚಿರತೆ ದಾಳಿ.!

    Published

    on

    ಕಿನ್ನಿಗೋಳಿ: ದನಗಳಿಗೆ ಮೇವು ತರಲು ಹೋದ ರೈತರೊಬ್ಬರ ಮೇಲೆ ಚಿರತೆ ದಾಳಿ ಮಾಡಿದ ಘಟನೆ ಕಿನ್ನಿಗೋಳಿ ಸಮೀಪದ ಎಳತ್ತೂರಿನಲ್ಲಿ ನಡೆದಿದೆ. ಚಿರತೆ ದಾಳಿಯಿಂದ ಗಾಯಗೊಂಡ ರೈತನನ್ನು ಎಳತ್ತೂರು ದೇವಸ್ಥಾನದ ಬಳಿಯ ನಿವಾಸಿ ಲಿಗೋರಿ ಪಿರೇರಾ ಎಂದು ಗುರುತಿಸಲಾಗಿದೆ.

    ಭಾನುವಾರ ಬೆಳಿಗ್ಗೆ 9.30ರ ಸಂದರ್ಭ ಮನೆಯ ಹತ್ತಿರ ದನಗಳಿಗೆ ಹುಲ್ಲು ಕೊಯ್ಯುತ್ತಿದ್ದ ಸಂದರ್ಭ ಚಿರತೆಯೊಂದು ಲಿಗೋರಿಯವರ ಮೇಲೆ ಏಕಾಏಕಿ ದಾಳಿ ಮಾಡಿದ್ದು, ಈ ಸಂದರ್ಭ ಲಿಗೋರಿಯವರು ಸಮೀಪದಲ್ಲೇ ಇದ್ದ ಕೋಲನ್ನು ಚಿರತೆಯತ್ತ ಬೀಸಿದ್ದು ಚಿರತೆ ಕಾಡಿನತ್ತ ಓಡಿದೆ ಎನ್ನಲಾಗುತ್ತಿದೆ.

    ಲಿಗೋರಿಯವರ ಮುಖಕ್ಕೆ ಮತ್ತು ಬೆನ್ನಿಗೆ ಚಿರತೆ ಉಗುರು ತಾಗಿ ಗಾಯಗಳಾಗಿವೆ ಎಂದು ಲಿಗೋರಿ ಮಗ ಜೈಸನ್ ತಿಳಿಸಿದ್ದಾರೆ. ವಾರದ ಹಿಂದೆ ಜೈಸನ್ ಅವರು ಬೈಕಿನಲ್ಲಿ ಹೋಗುವಾಗ ತಾಳಿಪಾಡಿ ಬೀಡು ಬಳಿ ಚಿರತೆ ಸಿಕ್ಕಿತ್ತು ಎಂದು ಕೂಡ ಅವರು ತಿಳಿಸಿದ್ದಾರೆ. ಕಟೀಲು ದುರ್ಗಾಸಂಜೀವನಿ ಆಸ್ಪತ್ರೆಯಲ್ಲಿ ಲಿಗೋರಿ ಪಿರೇರ ಅವರು ಚಿಕಿತ್ಸೆ ಪಡೇಯುತ್ತಿದ್ದಾರೆ.

    ಕಳೆದ ಒಂದು ವಾರದಿಂದ ಈ ಭಾಗದಲ್ಲಿ ಚಿರತೆ ಓಡಾಟದ ಬಗ್ಗೆ ಜನರು ಅಲರ್ಟ್ ಆಗಿದ್ದು, ಎಳತ್ತೂರು ಭಾಗದಲ್ಲಿ ಅಪಾರ ಸಂಖ್ಯೆಯಲ್ಲಿ ಕೃಷಿಕರು ನೆಲೆಸಿದ್ದು ಇಂದು (ನ.೦೩) ನಡೆದ ಚಿರತೆ ದಾಳಿ ಗ್ರಾಮಸ್ಥರನ್ನ ಭಯಭೀತರನ್ನಾಗಿಸಿದೆ. ಚಿರತೆಯನ್ನು ಸೆರೆ ಹಿಡಿಯುವಂತೆ ಸ್ಥಳೀಯರು ಅರಣ್ಯ ಇಲಾಖೆಗೆ ಒತ್ತಾಯಿಸಿದ್ದಾರೆ.

    Continue Reading

    DAKSHINA KANNADA

    ಸುಬ್ರಹ್ಮಣ್ಯ: ಅನ್ಯಕೋಮಿನ ಯುವಕನಿಂದ ಮೆಸೇಜ್; ಯುವಕರಿಂದ ಹಲ್ಲೆ

    Published

    on

    ಸುಬ್ರಹ್ಮಣ್ಯ: ಅನ್ಯಕೋಮಿನ ಯುವಕನೋರ್ವ ವಿದ್ಯಾರ್ಥಿನಿಗೆ ಮೆಸೇಜ್ ಮಾಡಿದ್ದಾನೆ ಎಂದು ಆರೋಪಿಸಿ ತಂಡವೊಂದು ಹಲ್ಲೆ ಮಾಡಿದ ಘಟನೆ ಸುಬ್ರಹ್ಮಣ್ಯದ ಗುತ್ತಿಗರುವಿನಲ್ಲಿ ನಡೆದಿದೆ.

    ಥಳಿತಕ್ಕೊಳಗಾದ ಯುವಕ ಆಸ್ಪತ್ರೆಗೆ ದಾಖಲಾಗಿ‌ ಚಿಕಿತ್ಸೆ ಪಡೆಯುತ್ತಿದ್ದಾನೆ.

    ನಿಯಾಝ್ ಎಂಬಾತ ಹಲ್ಲೆಗೊಳಗಾದ ಯುವಕ.

    ಸ್ಥಳೀಯ ಯುವತಿಯೋರ್ವಳಿಗೆ ನಿಯಾಝ್ ಮೆಸೇಜ್ ಮಾಡುತ್ತಿರುವುದಾಗಿ ತಿಳಿದು ಬಂದ ಬಳಿಕ, ಅವನನ್ನು ಕರೆಸಿಕೊಂಡ ಯುವಕರ ತಂಡವೊಂದು ಹಲ್ಲೆ ನಡೆಸಿದ್ದಾರೆ.

    ಈ ಪ್ರಕರಣದ ಕುರಿತು, ಸುಬ್ರಹ್ಮಣ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    Continue Reading

    DAKSHINA KANNADA

    ತಾರಾನಾಥ ಮುಗೇರ ನಿಗೂಢ ಸಾ*ವು ಪ್ರಕರಣಕ್ಕೆ ಟ್ವಿಸ್ಟ್; ಅಕ್ಕನಿಂದಲೇ ಹ*ತ್ಯೆ!

    Published

    on

    ಮಂಗಳೂರು : ಅನುಮಾನಾಸ್ಪದ ರೀತಿಯಲ್ಲಿ ಸಾ*ವಿಗೀಡಾಗಿದ್ದ ಕಟೀಲು ಗಿಡಿಗೆರೆ ನಿವಾಸಿಯ ಸಾ*ವು ಆತ್ಮಹ*ತ್ಯೆಯಲ್ಲ ಕೊ*ಲೆ ಎಂಬುದನ್ನು ಬಜಪೆ ಪೊಲೀಸರು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ.

    ಕಟೀಲು ಗಿಡಿಗೆರೆ ನಿವಾಸಿ ತಾರಾನಾಥ ಮುಗೇರ (40) ಎಂಬವರ ಶ*ವ ಅವರ ಮನೆಯಿಂದ ಸುಮಾರು 100ಮೀ. ದೂರದಲ್ಲಿ ಭಾನುವಾರ ಅ.27ರಂದು  ಪತ್ತೆಯಾಗಿತ್ತು. ಪ್ರಕರಣದ ಸಂಶಯದ ಸುಳಿವುಗಳ ಜಾಡು ಹಿಡಿದು ತನಿಖೆ ಮುಂದುವರಿಸಿದ ಬಜಪೆ ಪೊಲೀಸರು ತಾರಾನಾಥರ ದೊಡ್ಡಪ್ಪನ ಮಗಳನ್ನು ಬಂಧಿಸಿದ್ದಾರೆ.

    ದೇವಕಿ (42) ಬಂಧಿತ ಆರೋಪಿ. ದೇವಕಿ ಅವಿವಾಹಿತೆಯಾಗಿದ್ದು,  ವಿಚಾರಣೆಯ ವೇಳೆ ಆಕೆಯ ಮೇಲೆ ಸಂಶಯ ದೃಢಪಟ್ಟ ಹಿನ್ನೆಲೆ ಆಕೆಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.

     ಕೊ*ಲೆಯಾಗಿದ್ದು ಹೇಗೆ ?

    ತಾರಾನಾಥರಿಗೆ ಕುಡಿತದ ಚಟವಿತ್ತು. ಆತ ಮನೆಯವರಿಗೂ ಹಾಗೂ ಆರೋಪಿ ದೇವಕಿಗೂ ಕಿರುಕು*ಳ ನೀಡುತ್ತಿದ್ದ ಎನ್ನಲಾಗಿದೆ. ಹೆದರಿಸುವ ಸಲುವಾಗಿ ತಾರಾನಾಥ ತನ್ನ ಮನೆಯ ಪಕ್ಕವೇ ಇರುವ ದೊಡ್ಡಪ್ಪನ ಮನೆಯ ಬಟ್ಟೆ ಒಣಗಿಸಲು ಕಟ್ಟಿದ್ದ ಕೇಬಲನ್ನು ತಂದು ಕುತ್ತಿಗೆಗೆ ಬಿಗಿದುಕೊಂಡಿದ್ದ ವೇಳೆ ದೇವಕಿ ಅದನ್ನು ಜೋರಾಗಿ ಬಿಗಿದಾಗ ಆತ ಮೃ*ತಪಟ್ಟಿದ್ದರು ಎನ್ನಲಾಗಿದೆ.

    ಇದನ್ನೂ ಓದಿ : ಕಡಬ : ಶಸ್ತ್ರಚಿಕಿತ್ಸೆ ನಡೆಯುತ್ತಿರುವಾಗಲೇ ಹೃ*ದಯಾಘಾತದಿಂದ ವ್ಯಕ್ತಿ ಸಾ*ವು

    ಶನಿವಾರ ರಾತ್ರಿ 7 ಗಂಟೆಯ ಬಳಿಕ ಈ ಘಟನೆ ನಡೆದಿದ್ದು, ಸ್ಥಳದಲ್ಲಿ ಜೋಡಿಸಿ ಇಟ್ಟಿದ್ದ ಚಪ್ಪಲಿ, ಸ್ಥಳ ಮಹಜರು ವೇಳೆ ಧೃಡಪಟ್ಟ ಅಂಶಗಳಿಂದ ಪ್ರಕರಣದ ಸುಳಿವು ಸಿಕ್ಕಿತ್ತೆನ್ನಲಾಗಿದೆ. ಪ್ರಕರಣದಲ್ಲಿ ತಾರಾನಾಥನ ಸಹೋದರನನ್ನು ಕೂಡ ವಶಕ್ಕೆ ಪಡೆದು ಪೊಲೀಸರು ವಿಚಾರಣೆ ನಡೆಸಿದ್ದರು.

    Continue Reading

    LATEST NEWS

    Trending