Connect with us

    NATIONAL

    ಲಿವರ್ ದಾನ ಮಾಡಿ ಪತಿಗೆ ಮರುಜನ್ಮ; ಅರ್ಧಾಂಗಿ ಪದಕ್ಕೆ ನಿಜವಾದ ಅರ್ಥ ನೀಡಿದ ಪತ್ನಿ

    Published

    on

    ಮಂಗಳೂರು/ತೆಲಂಗಾಣ: ವೈವಾಹಿಕ ಜವನಕ್ಕೆ ಕಾಲಿಟ್ಟ ಪತಿ-ಪತ್ನಿಯನ್ನು ಪುರಾದಲ್ಲಿ ‘ಅರ್ಧಾಂಗಿ’ ಎಂದು ಶಿವ ಪಾರ್ವತಿಯರಿಗೆ ಹೋಲಿಕೆ ಮಾಡುತ್ತಾರೆ. ಆದರೆ ಸಣ್ಣ ಪುಟ್ಟ ಕಾರಣಗಳಿಟ್ಟುಕೊಂಡು ದಂಪತಿಯು ದೂರವಾಗುತ್ತಿರುವ ಈ ಕಾಲದಲ್ಲಿ ತೆಲಂಗಾಣ ಮೂಲದ ಮಹಿಳೆಯೊಬ್ಬಳು ತನ್ನ ಪತಿಗೆ ಲಿವರ್ ದಾನ ಮಾಡಿ ಮರುಜನ್ಮ ನೀಡುವ ಮೂಲಕ ಪ್ರಸ್ತುತ ಜನಾಂಗಕ್ಕೆ ಆದರ್ಶಪ್ರಾಯವಾಗಿದ್ದಾಳೆ.

     

    ಇಂದಿನ ಯುವ ಪೀಳಿಗೆ ಮದುವೆ ಎಂಬುವುದು ದೊಡ್ಡ ಸಮಸ್ಯೆ ಎಂಬುವುದಾಗಿ ಭಾವಿಸುತ್ತಿದ್ದಾರೆ. ಕಷ್ಟ-ಸುಖ, ನೋವು-ನಲಿವು ಹಾಗೂ ದೇಹ ಎಲ್ಲವನ್ನೂ ಹಂಚಿಕೊಳ್ಳುವ ಗಂಡ-ಹೆಂಡತಿ ನಡುವಿನ ಸಂಬಂಧ ಶ್ರೇಷ್ಠವಾದದ್ದು ಎಂಬುದನ್ನು ಯಾವತ್ತೂ ಮರೆಯಬಾರದು. ಮದುವೆ ಎಂಬುದು ಜೀವನದ ಒಂದು ಸುಮಧುರ ಕ್ಷಣ. ಹೆಂಡತಿಯಾದವಳು ಜೀವನಕ್ಕೆ ಸಂಗಾತಿ ಮಾತ್ರವಲ್ಲದೆ ಅದೃಷ್ಟವನ್ನು ಬದಲಿಸುವ ದೇವತೆಯಾಗುವಳು. ಏಕೆಂದರೆ, ಹುಟ್ಟಿದ ಮನೆಯನ್ನು ತೊರೆದು ಗಂಡನನ್ನು ನಂಬಿ ಆತನಿಗಾಗಿ ಪ್ರೀತಿ ಹಾಗೂ ವಾತ್ಸಲ್ಯವನ್ನು ಧಾರೆ ಎರೆಯುವ ಮೂಲಕ ಗಂಡನ ಜೀವನವನ್ನು ಸಾರ್ಥಕವಾಗಿಸುತ್ತಾಳೆ.

    ಹೆಂಡತಿ ಎಂದರೆ ಜೀವನದ ಒಂದು ಪಾತ್ರ ಮಾತ್ರವಲ್ಲ ಗಂಡನ ಸುಖದ ಮೂಲ. ಅವನ ನೋವುಗಳನ್ನು ನಿವಾರಿಸುತ್ತಾ ಸಾಂತ್ವನ ನೀಡುವ ಪತ್ನಿ, ಪತಿಯ ಪ್ರತಿ ಯಶಸ್ಸಿನ ಹಿಂದೆ ನಿಲ್ಲುವ ವ್ಯಕ್ತಿಯಾಗಿರಬೇಕು. ಕಷ್ಟಕಾಲದಲ್ಲಿ ಧೈರ್ಯ ತುಂಬುವ ಸ್ನೇಹಿತೆಯಾಗಿ, ಮಾರ್ಗದರ್ಶಕಿಯಾಗಿ ತೋರಿಸುವ ಪ್ರೀತಿ, ವಿಶ್ವಾಸ, ಕೊಡುವ ಬೆಂಬಲ ಪತಿಯ ಜೀವನದಲ್ಲಿ ನಡೆಯುವ ದಾರಿಯನ್ನು ತೋರಿಸುತ್ತದೆ. ಒಂದು ಪದದಲ್ಲಿ ಹೇಳಬೇಕೆಂದರೆ ‘ಅರ್ಧಾಂಗಿ’ ಎನಿಸಿಕೊಳ್ಳುವ ಹೆಂಡತಿಯು ಜೀವನದ ಹೃದಯ ಬಡಿತ ಇದ್ದಂತೆ. ಈ ಮಾತಗಳನ್ನು ‘ಲಾವಣ್ಯ’ ಎಂಬ ಮಹಿಳೆ ಸಾಬೀತು ಮಾಡಿದ್ದಾಳೆ.

    ತೆಲಂಗಾಣದ ಖಮ್ಮಮ್ ಜಿಲ್ಲೆಯ ರಘುನಾಥಪಾಲೆಂ ಮಂಡಲದ ಪೆದ್ದ ಎರ್ಲಪುಡಿ ಗ್ರಾಮದ ಶ್ರೀನಿವಾಸ್ ಎಂಬ ವ್ಯಕ್ತಿ ಖಮ್ಮಮ್ನ ಎಪಿಜಿವಿಬಿ ಬ್ಯಾಂಕ್‌ನಲ್ಲಿ ಕೆಲಸ ಮಾಡುತ್ತಿದ್ದು, ಅವರ ಪತ್ನಿ ಲಾವಣ್ಯ ಎಲ್‌ಎಲ್‌ಬಿ ಅಂತಿಮ ವರ್ಷ ಓದುತ್ತಿದ್ದಾರೆ. ದಂಪತಿಗೆ ಇಬ್ಬರು ಹೆಣ್ಣು ಮಕ್ಕಳಿದ್ದು, ಯಾವುದೇ ತೊಂದರೆಗಳಿಲ್ಲದೆ ನೆಮ್ಮದಿಯಿಂದ ಸಾಗುತ್ತಿದ್ದ ಸಮಯದಲ್ಲಿ ಅನಿರೀಕ್ಷಿತ ಅತಿಥಿಯಂತೆ ಆರೋಗ್ಯ ಸಮಸ್ಯೆಯೊಂದು ಎದುರಾಯಿತು.

    ಕೆಲ ಸಮಯದ ಹಿಂದೆ ಶ್ರೀನಿವಾಸ್, ಅನಾರೋಗ್ಯದ ನಿಮಿತ್ತ ಆಸ್ಪತ್ರೆಗೆ ದಾಖಲಾಗಿದ್ದರು. ಈ ವೇಳೆ ಜಾಂಡೀಸ್ನಿಂದಾಗಿ ಲಿವರ್ ಸಮಸ್ಯೆ ಇದೆ ಎಂದು ವೈದ್ಯರು ತಿಳಿಸಿದ್ದರು. ಇದರಿಂದ ಏನು ಮಾಡಬೇಕೆಂದು ತೋಚದೆ ದಂಪತಿ ತಬ್ಬಿಬ್ಬಾಗಿದ್ದರು. ಚಿಕಿತ್ಸೆಗಾಗಿ ಅನೇಕ ಆಸ್ಪತ್ರೆಗಳಿಗೆ ಭೇಟಿ ನೀಡಿ, ಲಕ್ಷ ಲಕ್ಷ ಹಣ ಖರ್ಚು ಮಾಡಿದರೂ ಪ್ರಯೋಜನವಾಗಿರಲಿಲ್ಲ. ಹಲವು ಪರೀಕ್ಷೆಗಳ ನಂತರ ಲಿವರ್ ಕಸಿ ಮಾಡಿದರೆ ಶ್ರೀನಿವಾಸ್ ಬದುಕುವ ಅವಕಾಶವಿದೆ ಎಂದು ವೈದ್ಯರು ತೀರ್ಮಾನಿಸಿದರು. ಬಳಿಕ ಲಿವರ್ ದಾನಕ್ಕಾಗಿ ಸಂಬಂಧಿಕರು ಮತ್ತು ಪರಿಚಯಸ್ಥರನ್ನು ಸಂಪರ್ಕಿಸಿದರು. ಆದರೆ, ಯಾರೊಬ್ಬರು ಸಹಾಯಕ್ಕಾಗಿ ಮುಂದೆ ಬಾರದಿದ್ದಾಗ ದಂಪತಿ ಪೂರ್ತಿ ಹತಾಶರಾಗಿದ್ದರು.

    ಕೊನೆಗೆ ಪತ್ನಿ ಲಾವಣ್ಯ ತಮ್ಮ ಪತಿಯನ್ನು ರಕ್ಷಿಸಲು ತಮ್ಮ ಲಿವರ್ ಭಾಗವನ್ನು ದಾನ ಮಾಡುವುದಾಗಿ ಹೇಳಿದರು. ವೈದ್ಯರು ಒಂದಷ್ಟು ಪರೀಕ್ಷೆ ಮಾಡಿ ಲಿವರ್ ಅಳವಡಿಸಬಹುದು ಎಂದು ದೃಢಪಡಿಸಿದರು. ಬಳಿಕ ಲಾವಣ್ಯ ಅವರ ಯಕೃತ್ತಿನ 65 ಪ್ರತಿಶತ ಭಾಗವನ್ನು ತೆಗೆದು ಶ್ರೀನಿವಾಸ್‌ಗೆ ಹಾಕಲಾಯಿತು. ಸದ್ಯ, ಶಸ್ತ್ರಚಿಕಿತ್ಸೆ ಯಶಸ್ವಿಯಾಗಿದ್ದು, ದಂಪತಿ ಆರೋಗ್ಯವಾಗಿದ್ದಾರೆ.

    ಶ್ರೀನಿವಾಸ್ ಮತ್ತು ಲಾವಣ್ಯ ಇಬ್ಬರೂ ಚೇತರಿಸಿಕೊಂಡಿದ್ದಾರೆ. ಈ ಅಪರೂಪದ ಘಟನೆಯಲ್ಲಿ ಲಾವಣ್ಯ ತನ್ನ ಪತಿಗೆ ಪುನರ್ಜನ್ಮ ನೀಡಿ ಅರ್ಧಾಂಗಿ ಪದಕ್ಕೆ ನಿಜವಾದ ಅರ್ಥವನ್ನು ನೀಡಿದ್ದಾರೆ. ಲಾವಣ್ಯಳ ಧೈರ್ಯ ಮತ್ತು ತ್ಯಾಗ ಎಲ್ಲರಿಗೂ ಸ್ಫೂರ್ತಿಯಾಗಿದ್ದು, ಇದೀಗ ಲಾವಣ್ಯಗೆ ಅಭಿನಂದನೆ, ಹಾರೈಕೆಯ ಮಹಾಪೂರವೇ ಹರಿದುಬರುತ್ತಿದೆ.

    NATIONAL

    ಐಸಿಇಆರ್‌ಟಿ ಎಚ್ಚರಿಕೆ : ನೀವು ಗೂಗಲ್‌ ಕ್ರೋಮ್‌ ನಿತ್ಯ ಬಳಸುತ್ತೀರಾ ?? ಹುಷಾರ್ !!

    Published

    on

    ಮಂಗಳೂರು/ನವದೆಹಲಿ : ಗೂಗಲ್‌ ಕ್ರೋಮ್‌ ಬಳಕೆದಾರರು ಜಾಗರೂಕರಾಗಿರಬೇಕು ಎಂದು ಐಸಿಇಆರ್‌ಟಿ ಇಂಡಿಯಾ (Indian Computer Emergency Response team) ಎಚ್ಚರಿಕೆ ನೀಡಿದೆ. ಗೂಗಲ್‌ ಕ್ರೋಮ್‌ ಎಲ್ಲಾ ಬಳಕೆದಾರರಲ್ಲೂ ಸಹ ಉಪಯುಕ್ತ ಮಾಹಿತಿಗಳು ನಾಶವಾಗಬಹುದು ಅಥವಾ ಕಳುವಾಗಬಹುದು ಎಂದು ಸಿಇಆರ್‌ಟಿ ಮುನ್ಸೂಚನೆ ನೀಡಿದೆ.

    ಈಗ ಬಳಕೆಯಲ್ಲಿರುವ 131.0.6778.69/70 ಡೆಸ್ಕ್‌ ಟಾಪ್‌ ವರ್ಷನ್‌ ಹಾಗೂ ವಿಂಡೋಸ್‌ ಮತ್ತು ಮ್ಯಾಕ್‌ ಹಾಗೂ ಈ ಮುನ್ನ ಬಳಕೆಯಲ್ಲಿದ್ದ ಲಿನಕ್ಸ್‌ 131.6.6778.69 ವರ್ಷನ್‌ ಗಳಲ್ಲಿ ಈ ಸಮಸ್ಯೆ ಕಾಣಿಸಿಕೊಳ್ಳಲಿದೆ.

     

    ಇದನ್ನೂ ಓದಿ : ಸಜ್ಜಾಗುತ್ತಿದೆ OPEN AI; ಹಾಗಾದ್ರೆ ಬ್ರೌಸರ್, ಗೂಗಲ್ ಕ್ರೋಮ್ ಕಥೆ ಏನಾಗ್ಬೋದು ?

     

    ಒಂದು ಸಂಶೋಧನೆಯ ಪ್ರಕಾರ, ಪ್ರಸ್ತುತ ಸಾಮಾಜಿಕ ಜಾಲತಾಣ ಹೇಗಿದೆಯೆಂದರೆ, ಕೇವಲ ಒಂದು ವಿಷಯದ ಕುರಿತಾಗಿ ನಾವು ಒಮ್ಮೆ ಮಾಹಿತಿಯನ್ನು ಪಡೆದುಕೊಂಡರೆ ಸಾಕು ನಂತರದಲ್ಲಿ ಅದರದ್ದೇ ಕುರಿತಾದ ಮತ್ತೂ ಕುತೂಹಲಕಾರಿ ಮಾಹಿತಿಗಳು ದೊರಕುತ್ತಿರುತ್ತವೆ. ನಾವು ಏನು ನೋಡುತ್ತೇವೆ, ಏನು ಮಾಡುತ್ತೇವೆ ಎಂಬ ಎಲ್ಲಾ ಮಾಹಿತಿಯಯೂ ಸ್ಟೋರ್ ಆಗಿರುತ್ತವೆ. ಹಾಗಾಗಿ ಬಹಳಷ್ಟು ಎಚ್ಚರಿಕೆಯಿಂದ ಇರುವುದು ಮುಖ್ಯ.

    ಗೂಗಲ್‌ ಕ್ರೋಮ್‌ ಮೇಲೆ ದಾಳಿ ಮಾಡುವವರು ಮೊದಲು ವೈರಸ್‌ ಗಳನ್ನು ಹರಿಬಿಟ್ಟು ಸೆಕ್ಯುರಿಟಿ ಕಂಟ್ರೋಲ್‌ ಗಳನ್ನು ಬೇಧಿಸಿ ಬಳಿಕ ಸೂಕ್ಷ್ಮ ಮಾಹಿತಿಗಳಿಗೆ ಕೈಹಾಕುವ ಸಾಧ್ಯತೆ ಇದೆಯೆಂದು ಸಿಇಆರ್‌ಟಿ ಹೇಳಿದೆ. ಈ ಮೂಲಕ ಹೆಚ್ಚಾಗಿ ಕ್ರೋಮ್ ಬಳಸುವ ಜನರಿಗೆ ಮನ್ನೆಚ್ಚರಿಕೆ ಕ್ರಮವಾಗಿ ಈ ಎಚ್ಚರಿಕೆ ನೀಡಿದೆ.

     

    Continue Reading

    NATIONAL

    ತಮಾಷೆಗಾಗಿ ಕ*ಪಾಳಮೋಕ್ಷ; ಸೋದರ ಮಾವನಿಂದ 3 ವರ್ಷದ ಮಗುವಿನ ಜೀ*ವಾಂತ್ಯ

    Published

    on

    ಮಂಗಳೂರು/ಥಾಣೆ: ಮೂರು ವರ್ಷದ ಸೋದರ ಸೊಸೆಯನ್ನು ಕೊಂ*ದು ಶ*ವವನ್ನು ವಿಲೇವಾರಿ ಮಾಡಿದ ಆರೋಪದ ಮೇಲೆ ವ್ಯಕ್ತಿಯೊಬ್ಬನನ್ನ ಗುರುವಾರ (ನ.21) ಬಂಧಿಸಿದ ಘಟನೆ ಮಹಾರಾಷ್ಟ್ರದ ಥಾಣೆ ಜಿಲ್ಲೆಯಲ್ಲಿ ನಡೆದಿದೆ.

    ಕೆಲವೊಮ್ಮೆ ನಾವು ಜೀವನದಲ್ಲಿ ತಾಮಷೆಗಾಗಿ ಮಾಡುವ ಅದೆಷ್ಟೋ ಚೇಷ್ಟೆಗಳು ಗಂಭೀರ ಪರಿಣಾಮ ಭೀರುವುದನ್ನು ಕಾಣುತ್ತೇವೆ. ಏನೋ ಮಾಡಲು ಹೋಗಿ ಅದು ಮತ್ತೇನೋ ಊಹಿಸಲಾಗದ ಸಮಸ್ಯೆಯನ್ನು ತೊಂದೊಡ್ಡುತ್ತದೆ. ಇದೀಗ ಮಹರಾಷ್ಟ್ರದಲ್ಲಿ ನಡೆದ ಘಟನೆಯೂ ಅದಕ್ಕೆ ಹೊರತಾಗಿಲ್ಲ.

    ಥಾಣೆಯ ಪ್ರೇಮ್ ನಗರದಲ್ಲಿರುವ ತನ್ನ ಮನೆಯಿಂದ ಮಗು ನವೆಂಬರ್ 18ರಂದು ಕಾಣೆಯಾಗಿತ್ತು. ಮಗು ಕಾಣೆಯಾದ ನಂತರ, ತಾಯಿಯ ದೂರಿನ ಮೇರೆಗೆ ಅಪಹರಣ ಪ್ರಕರಣ ದಾಖಲಿಸಲಾಗಿತ್ತು. ಹಿಲ್ ಲೈನ್ ಪೊಲೀಸ್ ಠಾಣೆಯಿಂದ ಸ್ವಲ್ಪ ದೂರದಲ್ಲಿ ಮಗುವಿನ ಶ*ವ ಪತ್ತೆಯಾಗಿದೆ. ಮ*ರಣೋತ್ತರ ಪರೀಕ್ಷೆಯ ವರದಿ ಬಂದ ನಂತರ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಉಪ ಪೊಲೀಸ್ ಆಯುಕ್ತ (ವಲಯ 4) ಸಚಿನ್ ಗೋರೆ ತಿಳಿಸಿದ್ದರು.

    ತೀವ್ರ ತನಿಖೆಯ ಬಳಿಕ, ಮಗುವಿನ ಸೋದರ ಮಾವ 30ರ ಹರೆಯದ ಆರೋಪಿ ಅ*ಪರಾಧವನ್ನ ಒಪ್ಪಿಕೊಂಡಿದ್ದಾನೆ ಆದರೆ ತಾನು ಮಗುವನ್ನ ಉದ್ದೇಶಪೂರ್ವಕವಾಗಿ ಕೊಂ*ದಿಲ್ಲವೆಂಬುವುದಾಗಿ ಸಂತಾಪ ಸೂಚಿಸಿದ್ದಾನೆ. “ಅವಳೊಂದಿಗೆ ಆಟವಾಡುತ್ತಿದ್ದಾಗ ತಮಾಷೆಯಾಗಿ ಕಪಾಳಕ್ಕೆ ಹೊಡೆದಿದ್ದು, ಮಗು ಅಡುಗೆಮನೆಯ ಸ್ಲ್ಯಾಬ್ಗೆ ಡಿ*ಕ್ಕಿ ಹೊಡೆದು ಸಾ*ವನ್ನಪ್ಪಿದೆ” ಎಂದು ಹೇಳಿದ್ದಾನೆ.

    ಬಳಿಕ, ಹೆದರಿ ಮಗುವಿನ ಶ*ವವನ್ನ ಮುಂಬೈನ ಉಲ್ಹಾಸ್ ನಗರದ ಬಳಿಯ ಪೊದೆಗಳಲ್ಲಿ ಎಸೆದಿದ್ದಾನೆ. ಸಧ್ಯ ಪೊಲೀಸರು ಆರೋಪಿಯನ್ನು ವಶಪಡಿಸಿಕೊಂಡು, ಶವವನ್ನ ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ.

    Continue Reading

    NATIONAL

    ಕೂಚ್ ಬೇಹರ್ ಟ್ರೋಫಿ: ದ್ವಿಶತಕ ಸಿಡಿಸಿದ ಮರಿ ಸೆಹ್ವಾಗ್

    Published

    on

    ಮಂಗಳೂರು/ದೆಹಲಿ: ಭಾರತೀಯ ಕ್ರಿಕೆಟ್ ತಂಡದ ಮಾಜಿ ಆರಂಭಿಕ ಆಟಗಾರ ವೀರೇಂದ್ರ ಸೆಹ್ವಾಗ್, ತಮ್ಮ ಆಟದ ಮೂಲಕವೇ ಇಡೀ ವಿಶ್ವದ ಗಮನ ಸೆಳೆದಿದ್ದ ದಾಂಡಿಗ. ಈಗ ಅವರ ಮಗ, ಆರ್ಯವೀರ್ ಸೆಹ್ವಾಗ್ ಕೂಚ್ ಬೆಹರ್ ಟ್ರೋಫಿಯಲ್ಲಿ ಮೇಘಾಲಯ ವಿರುದ್ಧ ಅದ್ಬುತ ದ್ವಿಶತಕ ಸಿಡಿಸಿದ್ದಾರೆ.

    ಭಾರತೀಯ ಕ್ರಿಕೆಟ್ ಕಂಡಂತಹ ಅದ್ಬುತ ಕ್ರಿಕೆಟಿಗ ಸೆಹ್ವಾಗ್, ಭಾರತದ ಪರ ಎಲ್ಲಾ ಮೂರು ಸ್ವರೂಪಗಳ ಕ್ರಿಕೆಟ್ ಆಡಿದ್ದರು. ಇದಲ್ಲದೆ ಟಿ20 ವಿಶ್ವಕಪ್ ಮತ್ತು ಏಕದಿನ ವಿಶ್ವಕಪ್ ಗೆದ್ದ ಭಾರತ ತಂಡದ ಸದಸ್ಯರಾಗಿದ್ದರು. ಈಗ ಅವರ ಮಗನ ಸರದಿ.

    ಇದನ್ನೂ ಓದಿ:ನೀರಸ ಪ್ರದರ್ಶನ ಮುಂದುವರಿಸಿದ ಭಾರತ: ವಿವದಾತ್ಮಕ ತೀರ್ಪಿಗೆ ರಾಹುಲ್ ಬಲಿ !
    ಆರ್ಯವೀರ್ ಸೆಹ್ವಾಗ್:
    ಆರ್ಯವೀರ್ ಅವರು ಕಳೆದ ತಿಂಗಳು ದೆಹಲಿ ಅಂಡರ್-19 ಕ್ರಿಕೆಟ್ ತಂಡಕ್ಕೆ ಸ್ಥಾನ ಪಡೆದಿದ್ದರು. ಈಗ ಕೂಚ್ ಬೆಹರ್ ಟ್ರೋಫಿಯಲ್ಲಿ ಮೇಘಾಲಯ ವಿರುದ್ಧ ದೆಹಲಿ ಪರ ಸ್ಮರಣೀಯ ಇನ್ನಿಂಗ್ಸ್ ಆಡಿ 229 ಎಸೆತಗಳಲ್ಲಿ 200 ರನ್ ಸಿಡಿಸಿ ತಂದೆಗೆ ತಕ್ಕ ಮಗ ಎಂದು ನಿರೂಪಿಸಿದ್ದಾರೆ.
    ಮೇಘಾಲಯ ತಂಡ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿತು. ಆದರೆ ಇನ್ನಿಂಗ್ಸ್ ಕಟ್ಟುವಲ್ಲಿ ವಿಫಲವಾಯಿತು. ಕೇವಲ 104.3 ಓವರ್ ಗಳಲ್ಲಿ 260 ರನ್ ಗಳಿಸುವಷ್ಟರಲ್ಲಿ ಆಲೌಟ್ ಆಯಿತು.
    ಇದಾದ ಬಳಿಕ ಇನ್ನಿಂಗ್ಸ್ ಆರಂಭಿಸಿದ ಡೆಲ್ಲಿ ತಂಡಕ್ಕೆ ಆರಂಭಿಕರಾದ ಆರ್ಯವೀರ್ ಸೆಹ್ವಾಗ್ ಮತ್ತು ಅರ್ನವ್ ಬುಗ್ಗಾ ಭರ್ಜರಿ ಆಟವಾಡಿದರು. ಮೊದಲ ವಿಕೆಟ್ ಗೆ 180 ರನ್ ಗಳ ಜೊತೆಯಾಟವಾಡಿ, ಅರ್ನವ್ ಬುಗ್ಗಾ ಕೂಡ ಶತಕ ಗಳಿಸಿ 114 ರನ್ ಗೆ ಔಟಾದರು. ಡೆಲ್ಲಿ ಎರಡನೇ ದಿನದಾಟದ ಅಂತ್ಯಕ್ಕೆ 2 ವಿಕೆಟ್ ಕಳೆದುಕೊಂಡು 468 ರನ್ ಗಳಿಸಿದೆ.
    ಅಪ್ಪನ ಹಾದಿಯನ್ನೇ ಹಿಡಿದ ಆರ್ಯವೀರ್ ಸೆಹ್ವಾಗ್ ಮುಂದಿನ ದಿನಗಳಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ಪಾದರ್ಪಣೆ ಮಾಡಬಹುದು ಎಂಬ ನಿರೀಕ್ಷೆ ಮೂಡಿದೆ.

    Continue Reading

    LATEST NEWS

    Trending