Wednesday, June 29, 2022

ವಾಕಿಂಗ್ ಸ್ಟಿಕ್‌ನಿಂದ ಚಿರತೆಯನ್ನು ಹಿಮ್ಮೆಟ್ಟಿಸಿ ಜೇವ ಉಳಿಸಿಕೊಂಡ ವೃದ್ಧೆ

ಮುಂಬೈ: ವೃದ್ಧೆಯೊಬ್ಬರು ತನ್ನ ವಾಕಿಂಗ್ ಸ್ಟಿಕ್‌ನಿಂದ ಚಿರತೆಯೊಂದಿಗೆ ಹೋರಾಟ ನಡೆಸಿ ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ಬುಧವಾರ ಸಂಜೆ ಮುಂಬೈನ ಆರೆ ಡೈರಿ ಪ್ರದೇಶದಲ್ಲಿ ನಡೆದಿದೆ.

ಇಡೀ ಘಟನೆಯು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಈ ಪ್ರದೇಶದಲ್ಲಿ ಮೂರು ದಿನಗಳಲ್ಲಿ ಎರಡನೇ ಬಾರಿ ಚಿರತೆ ದಾಳಿ ನಡೆದಿದೆ.

ಆರೆ ಡೈರಿ ಪ್ರದೇಶದ ಬಳಿ ಚಿರತೆ ನಡೆಯುತ್ತಿರುವ ದೃಶ್ಯಗಳು ಸಿಸಿಟಿವಿಯಲ್ಲಿ ಕಂಡುಬಂದಿದ್ದು, ಒಂದು ನಿಮಿಷದ ನಂತರ, ಮಹಿಳೆಯೊಬ್ಬರು ನಿಧಾನವಾಗಿ ತನ್ನ ವಾಕಿಂಗ್ ಸ್ಟಿಕ್ ಸಹಾಯದಿಂದ ಅಲ್ಲಿಗೆ ಪ್ರವೇಶಿಸುತ್ತಾರೆ.

ನಿರ್ಮಲಾ ದೇವಿ ಸಿಂಗ್ (55) ಎಂದು ಗುರುತಿಸಲ್ಪಟ್ಟ ಮಹಿಳೆ ನಂತರ ಸ್ವಲ್ಪ ಎತ್ತರದ ಕಟ್ಟೆಯ ಮೇಲೆ ಕುಳಿತುಕೊಳ್ಳಲು ಮುಂದಾದಾಗ ಚಿರತೆ ಮಹಿಳೆಯ ಕಡೆಗೆ ತಿರುಗುತ್ತದೆ.

ಮಹಿಳೆಯು ಚಿರತೆಯನ್ನು ಕಂಡ ತಕ್ಷಣ ಅದನ್ನು ಕೋಲಿನಿಂದ ತಳ್ಳಲು ಪ್ಯತ್ನಿಸುತ್ತಾರೆ.ಮುಂದಿನ ಕೆಲವು ಸೆಕೆಂಡ್‌ಗಳಲ್ಲಿ ಚಿರತೆ ಮಹಿಳೆಯ ಮೇಲೆ ಎರಗಲು ಮುಂದಾಗಿದ್ದು ಮಹಿಳೆ ಹಿಂದೆ ಬೀಳುತ್ತಾರೆ.

ಸ್ವಲ್ಪ ಸಮಯದ ನಂತರ ಚಿರತೆ ಹಿಮ್ಮೆಟ್ಟಿದೆ.ಘಟನೆಯಲ್ಲಿ ಮಹಿಳೆ ಸಣ್ಣಪುಟ್ಟ ಗಾಯಗಳಾಗಿದ್ದು ಮಹಿಳೆಯು ಬೊಬ್ಬೆ ಹಾಕಿದ ತಕ್ಷಣ ಜನರು ಧಾವಿಸಿದ್ದಾರೆ.ಗಾಯಗೊಂಡ ಮಹಿಳೆಗೆ ಚಿಕಿತ್ಸೆ ನೀಡಲಾಗುತ್ತಿದೆ.

 

LEAVE A REPLY

Please enter your comment!
Please enter your name here

Hot Topics

ಮಂಗಳೂರಿನಲ್ಲಿ ಇಂದು ಮತ್ತು ನಾಳೆ ಮೂಡುಬಿದ್ರೆ, ಸುರತ್ಕಲ್ ಸೇರಿದಂತೆ ಹಲವೆಡೆ ವಿದ್ಯುತ್ ವ್ಯತ್ಯಯ

ಮಂಗಳೂರು: ಕುದ್ರೋಳಿ ಉಪಕೇಂದ್ರದಿಂದ ಹೊರಡುವ 11ಕೆವಿ ಕಾರ್‌ಸ್ಟ್ರೀಟ್ ಫೀಡರ್‍ನಲ್ಲಿ ಜಂಪರ್ ಬದಲಾವಣೆ ಹಾಗೂ ಜಿ.ಓ.ಎಸ್ ದುರಸ್ತಿ ಕಾಮಗಾರಿ ಕೈಗೊಳ್ಳಲಾಗಿದೆ.ಆದ ಕಾರಣ ಇಂದು ಬೆಳಿಗ್ಗೆ 10 ರಿಂದ 5ರವರೆಗೆ ನ್ಯೂಫೀಲ್ಡ್ ಸ್ಟ್ರೀಟ್, ಕಾರ್‍ಸ್ಟ್ರೀಟ್, ದಯಾನಂದ...

ಕಾಸರಗೋಡು: ವಿದೇಶದಲ್ಲಿದ್ದ ಯುವಕನನ್ನು ಕರೆಸಿ ಅಪಹರಿಸಿ ಹತ್ಯೆ ಪ್ರಕರಣ-ಮೂವರ ಬಂಧನ

ಕಾಸರಗೋಡು: ವಿದೇಶದಲ್ಲಿದ್ದ ಯುವಕನನ್ನು ಕರೆಸಿ ತಂಡವೊಂದು ಅಪಹರಿಸಿ ಕಾಸರಗೋಡಿನಲ್ಲಿ  ಕೊಲೆಗೈದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರನ್ನು ಬಂಧಿಸಲಾಗಿದೆ.ಕುಂಬಳೆ ದಿ| ಅಬ್ದುಲ್‌ ರಹ್ಮಾನ್‌ ಎಂಬವರ ಪುತ್ರ ವಿದೇಶದಲ್ಲಿದ್ದ ಅಬೂಬಕ್ಕರ್‌ ಸಿದ್ಧಿಖ್‌ ನನ್ನು ಕರೆಯಿಸಿ ಕಿಡ್ನಾಪ್ ಮಾಡಿ...

ವಿಟ್ಲ ಬದನಾಜೆಯ ಬಸ್ ನಿಲ್ದಾಣದಲ್ಲಿ ರಕ್ತ – ತಲೆಯ ಒಳಭಾಗದ ತುಂಡುಗಳ ಪತ್ತೆ : ಆತಂಕದಲ್ಲಿ ಜನತೆ..!

ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ದ ವಿಟ್ಲ ಬದನಾಜೆಯ ಸಾರ್ವಜನಿಕ ಬಸ್ ನಿಲ್ದಾಣದಲ್ಲಿ ರಕ್ತ ಮತ್ತು ತಲೆಯ ಒಳಭಾಗದ ತುಣುಕುಗಳು ಪತ್ತೆಯಾಗಿವೆ,ಬಂಟ್ವಾಳ : ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ದ ವಿಟ್ಲ ಬದನಾಜೆಯ...