Connect with us

    ಗುಡ್ ನ್ಯೂಸ್: ಇನ್ನು ಮಣಿಪಾಲ ಕೆಎಂಸಿಯಲ್ಲೂ ಕೋವಿಡ್ ಟೆಸ್ಟಿಂಗ್ ನಡೆಯುತ್ತೆ.!!

    Published

    on

    ಗುಡ್ ನ್ಯೂಸ್: ಇನ್ನು ಮಣಿಪಾಲ ಕೆಎಂಸಿಯಲ್ಲೂ ಕೋವಿಡ್ ಟೆಸ್ಟಿಂಗ್ ನಡೆಯುತ್ತೆ.!!

    ಉಡುಪಿ: ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಕೊರೊನಾ ಸೋಂಕಿನಿಂದ ಕಂಗೆಟ್ಟಿರುವ ಕೃಷ್ಣನಗರಿ ಉಡುಪಿ ಜನತೆಗೆ ಒಂದು ಸಿಹಿ ಸುದ್ದಿ ಸಿಕ್ಕಿದೆ.

    ಹೌದು ಸತತ ಒತ್ತಡಗಳ ನಂತರ ಉಡುಪಿ ಜಿಲ್ಲೆಯ ಮಣಿಪಾಲ ಕೆಎಂಸಿಯಲ್ಲಿ ಕೋವಿಡ್ ಟೆಸ್ಟಿಂಗ್ ಲ್ಯಾಬ್ ಆರಂಭವಾಗಿದೆ.

    ಕೊರೊನಾ ಪ್ರಕರಣ ಪತ್ತೆ ನಂತರ ಉಡುಪಿ ಜಿಲ್ಲೆ ತನ್ನ ಕೊರೊನಾ ಪರೀಕ್ಷೆಗಳಿಗೆ ಹಾಸನ ಮತ್ತು ಶಿವಮೊಗ್ಗ ಜಿಲ್ಲೆಗಳಿಗೆ ಅವಲಂಭಿತವಾಗಿತ್ತು.

    ಹಾಗಾಗಿ ಈ ನಡುವೆ ಜಿಲ್ಲೆಯಲ್ಲಿ ಕೊರೊನಾ ಟೆಸ್ಟಿಂಗ್ ಲ್ಯಾಬ್ ಆರಂಭಕ್ಕೆ ಭಾರಿ ಒತ್ತಡ ಬಂದಿತ್ತು.

    ದೇಶದಲ್ಲೇ ಅತ್ಯಾಧುನಿಕ ವೈದ್ಯಕೀಯ ಸೌಲಭ್ಯ ಹೊಂದಿರುವ ಮಣಿಪಾಲದ ಕೆಎಂಸಿ ಆಸ್ಪತ್ರೆ ಕೊರೊನಾ ಟೆಸ್ಟಿಂಗ್ ಲ್ಯಾಬ್ ತೆರೆಯಲು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯಿಂದ ಅನುಮತಿ ಕೇಳಿತ್ತು.

    ಆದರೆ ಎರಡು ತಿಂಗಳ ಒತ್ತಡದ ನಂತರ ಕೆಎಂಸಿಗೆ ಕೊನೆಗೂ ಈಗ ಅನುಮೋದನೆ ದೊರೆತಿದೆ.

    ಇನ್ನು ಕೆಎಂಸಿ ಲ್ಯಾಬ್ ನಲ್ಲಿ ಇಂದಿನಿಂದ ಕೋವಿಡ್ ಪರೀಕ್ಷೆ ಪ್ರಾರಂಭಗೊಳ್ಳಲಿದ್ದು, ಇದು ಉಡುಪಿ – ಉತ್ತರ ಕನ್ನಡ ಜಿಲ್ಲೆಗಳಿಗೆ ಪ್ರಯೋಜನಕಾರಿಯಾಗಲಿದೆ.

    ಕೆಎಂಸಿಯಲ್ಲಿ ಅತ್ಯಾಧುನಿಕ ವೈದ್ಯಕೀಯ ಸೌಲಭ್ಯಗಳಿದ್ದು, ಇಂದಿನಿಂದ ತ್ವರಿತ ಫಲಿತಾಂಶ ವೈದ್ಯರ, ಜಿಲ್ಲಾಡಳಿತದ ಕೈಸೇರಲಿದೆ.

    ಅಲ್ಲದೆ ಕೆಎಂಸಿ ಪ್ರಯೋಗಾಲಯದಲ್ಲಿ ಅತ್ಯಾಧುನಿಕ ತಂತ್ರಜ್ಞಾನ, ಉಪಕರಣಗಳು ಇದೆ ಎಂದು ಕೆಎಂಸಿ ವೈದ್ಯಕೀಯ ಅಧೀಕ್ಷಕ ಡಾ. ಅವಿನಾಶ್ ಶೆಟ್ಟಿ ತಿಳಿಸಿದ್ದಾರೆ.

    Click to comment

    Leave a Reply

    Your email address will not be published. Required fields are marked *

    LATEST NEWS

    ಇನ್ಮುಂದೆ ಅನ್ನಪೂರ್ಣೇಶ್ವರಿ ದರ್ಶನಕ್ಕೆ ಸಾಂಪ್ರದಾಯಿಕ ಉಡುಗೆ ಕಡ್ಡಾಯ…!

    Published

    on

    ಚಿಕ್ಕಮಗಳೂರು: ಚಿಕ್ಕಮಗಳೂರು ಜಿಲ್ಲೆ ಕಳಸ ತಾಲೂಕಿನ ಹೊರನಾಡಿನಲ್ಲಿ ನೆಲೆಸಿರುವ ಅನ್ನಪೂರ್ಣೇಶ್ವರಿ ದರ್ಶನಕ್ಕೆ ಸಾಂಪ್ರದಾಯಿಕ ಉಡುಗೆಯನ್ನು ಕಡ್ಡಾಯ ಮಾಡಿದ್ದು, ಭಕ್ತರು ಈ ನಿಯಮವನ್ನು ಕಡ್ಡಾಯವಾಗಿ ಪಾಲನೆ ಮಾಡುವಂತೆ ಅಡಳಿತ ಮಂಡಳಿ ಮನವಿ ಮಾಡಿಕೊಂಡಿದೆ.

    ಗಂಡಸರು ಶಲ್ಯ, ಪ್ಯಾಂಟ್, ಪಂಚೆ ಧರಿಸಬೇಕು. ಹೆಣ್ಣು ಮಕ್ಕಳು ಸೀರೆ ಹಾಗೂ ಚೂಡಿದಾರ ಧರಿಸುವಂತೆ ದೇವಾಲಯದ ಆಡಳಿತ ಮಂಡಳಿ ಆದೇಶ ಹೊರಡಿಸಿದೆ. ಸಾಂಪ್ರದಾಯಿಕ ಉಡುಗೆಯಲ್ಲಿ ಬರದಿದ್ದರೆ ದೇವಸ್ಥಾನದ ಒಳಗೆ ಪ್ರವೇಶವಿಲ್ಲ ಅಂತ ಅಡಳಿತ ಮಂಡಳಿ ತಿಳಿಸಿದೆ.

    Continue Reading

    LATEST NEWS

    ಎಂಟು ಕಾಲುಗಳೊಂದಿಗೆ ಜನಿಸಿದ ಕರು..! ಈ ವಿಚಿತ್ರ ನೋಡಲು ಮುಗಿಬಿದ್ದ ಜನ..!!

    Published

    on

    ಉತ್ತರಪ್ರದೇಶ/ಮಂಗಳೂರು: ಇಲ್ಲಿನ ಗ್ರಾಮದ ರೈತರೊಬ್ಬರ ಮನೆಯಲ್ಲಿ ಎಮ್ಮೆಯೊಂದು ಎಂಟು ಕಾಲುಗಳಿರುವ ಕರುವಿಗೆ ಜನ್ಮ ನೀಡುವ ಮೂಲಕ ವಿಸ್ಮಯವನ್ನುಂಟುಮಾಡಿದೆ. ಅಲ್ಲದೇ ಈ ವಿಚಿತ್ರ ಕರುವನ್ನು ನೋಡಲು ಊರವರೆಲ್ಲಾ ಮನೆಗೆ ದೌಡಾಯಿಸಿದ್ದಾರೆ.

    ಎರಡು ಬೆನ್ನು ಹಾಗೂ ಎಂಟು ಕಾಲು ಹಾಗೂ ಒಂದು ತಲೆಯೊಂದಿಗೆ ಜನಿಸಿದ ಈ ಕರುವನ್ನು ನೋಡಿ ಎಲ್ಲರೂ ಬೆಚ್ಚಿ ಬಿದ್ದಿದ್ದಾರೆ.  ಕರುವನ್ನು ಪರೀಕ್ಷಿಸಿದ ವೈದ್ಯರು ಆನುವಂಶಿಕ ದೋಷದಿಂದ ಇಂತಹ ಕರುಗಳು ಜನಿಸುತ್ತವೆ ಎಂದು ಹೇಳಿದ್ದಾರೆ. ಈ ಘಟನೆ ಸ್ಥಳೀಯರು ಹಾಗೂ ನೆಟ್ಟಿಗರ ಗಮನ ಸೆಳೆದಿದೆ.

    ಕರುವಿನ ವಿಡಿಯೋ ಮತ್ತು ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.

    Continue Reading

    FILM

    ‘ಬಿಗ್ ಬಾಸ್’ ಟೀಮ್ ಜೊತೆ ಅಪ್‌ಡೇಟ್ ಹೊತ್ತು ತರುತ್ತಿದ್ದಾರೆ ಸುದೀಪ್- ಏನದು?

    Published

    on

    ‘ಬಿಗ್ ಬಾಸ್ ಕನ್ನಡ 11’ಕ್ಕೆ ಕೌಂಟ್ ಡೌನ್ ಶುರುವಾಗಿದೆ. ಇದೇ ಸೆ.29ಕ್ಕೆ ಶೋ ಅದ್ಧೂರಿಯಾಗಿ ಆಗಿ ಲಾಂಚ್ ಆಗಲಿದೆ. ಶೋ ಚಾಲನೆಗೂ ಮುನ್ನ ಬಿಗ್ ಬಾಸ್ ತಂಡದ ಜೊತೆ ಬಿಗ್ ಅಪ್‌ಡೇಟ್‌ವೊಂದನ್ನು ಸುದೀಪ್ ಹೊತ್ತು ತರುತ್ತಿದ್ದಾರೆ.

    ಹೊಸ ಸೀಸನ್ ಪ್ರಾರಂಭಕ್ಕೆ ಬಿಗ್ ಬಾಸ್ ತಂಡ ತೆರೆಮರೆಯಲ್ಲಿ ಎಲ್ಲ ರೀತಿಯಲ್ಲೂ ತಯಾರಿ ಮಾಡಿಕೊಳ್ಳುತ್ತಿದೆ. ಈಗ ಬಿಗ್ ಬಾಸ್ ತಂಡದಿಂದ ಸುದ್ದಿಗೋಷ್ಠಿ ಆಯೋಜಿಸಲಾಗಿದೆ. ಇಂದು 3 ಗಂಟೆ ಸುಮಾರಿಗೆ ಬಿಗ್ ಬಾಸ್ ಸೀಸನ್ 11ರ ಬಗ್ಗೆ ಅಧಿಕೃತ ಚಾಲನೆ ಸಿಗಲಿದೆ. ಈ ಸುದ್ದಿಗೋಷ್ಠಿಯಲ್ಲಿ ಸುದೀಪ್ ಕೂಡ ಭಾಗಿಯಾಗಲಿದ್ದಾರೆ. ಹಲವು ವಿಚಾರಗಳ ಕುರಿತು ನಟ ಮಾತನಾಡಲಿದ್ದಾರೆ.

    ಮೊದಲ ಸೀಸನ್‌ನಿಂದ ಹಿಡಿದು ಹತ್ತು ಸೀಸನ್‌ಗಳು ಯಶಸ್ವಿಯಾಗಿ ಪ್ರಸಾರ ಕಂಡಿದೆ. ಇದೀಗ ಬಿಗ್ ಬಾಸ್ ಶೋ 11ನೇ ಸೀಸನ್‌ಗೆ ಕಾಲಿಟ್ಟಿದೆ. ಈಗಾಗಲೇ ಪ್ರೋಮೋಗಳ ಮೂಲಕ ಬಿಗ್ ಬಾಸ್ ಸೀಸನ್ 11ರ ಮೇಲೆ ಫ್ಯಾನ್ಸ್‌ಗೆ ಸಾಕಷ್ಟು ನಿರೀಕ್ಷೆಯಿದೆ. ಜೊತೆಗೆ ಈ ಬಾರಿ ಸುದೀಪ್ ಕಾರ್ಯಕ್ರಮ ನಿರೂಪಣೆ ಮಾಡ್ತಿಲ್ಲ ಅನ್ನೋ ಸುದ್ದಿಯೂ ಹರಿದಾಡಿತ್ತು. ಆ ನಂತರ ಪ್ರೋಮೋದಲ್ಲಿ ನಟನ ಆಗಮನದ ಮೂಲಕ ವದಂತಿಗಳಿಗೆ ಬ್ರೇಕ್‌ ಬಿದ್ದಿತ್ತು.

    ಅಂದಹಾಗೆ, ಬಿಗ್ ಬಾಸ್‌ಗೆ ಬರಲಿರುವ ಕೆಲ ಸ್ಪರ್ಧಿಗಳ ಹೆಸರು ಸದ್ದು ಮಾಡುತ್ತಿದೆ. ಮೋಕ್ಷಿತಾ ಪೈ, ಹುಲಿ ಕಾರ್ತಿಕ್, ಸುಕೃತಾ ನಾಗ್, ಕಿರುತೆರೆ ನಟಿ ಅಮೂಲ್ಯ, ಭವ್ಯಾ ಗೌಡ, ವರ್ಷಾ ಕಾವೇರಿ ಸೇರಿದಂತೆ ಅನೇಕರು ಹೆಸರು ಚಾಲ್ತಿಯಲ್ಲಿದೆ. ಯಾರೆಲ್ಲಾ ದೊಡ್ಮನೆ ಬರುತ್ತಾರೆ ಎಂಬುದನ್ನು ಕಾದುನೋಡಬೇಕಿದೆ. ಶೋ ಶುರುವಾದ್ಮೇಲೆ ಎಲ್ಲದ್ದಕ್ಕೂ ಉತ್ತರ ಸಿಗಲಿದೆ.

    Continue Reading

    LATEST NEWS

    Trending