Connect with us

LATEST NEWS

 ಶಿರಾಳಕೊಪ್ಪದಲ್ಲಿ ಕೆ.ಎಸ್. ಆರ್.ಟಿ.ಸಿ ಬಸ್ ಕಂಡಕ್ಟರ್ ದರ್ಪ: ಕಂಗೆಟ್ಟ ಪ್ರಯಾಣಿಕ..!

Published

on

 ಶಿರಾಳಕೊಪ್ಪದಲ್ಲಿ ಕೆ.ಎಸ್. ಆರ್.ಟಿ.ಸಿ ಬಸ್ ಕಂಡಕ್ಟರ್ ದರ್ಪ: ಕಂಗೆಟ್ಟ ಪ್ರಯಾಣಿಕ..!

KSRTC bus conductor Head weight in Shiralakoppa.

ಚಿಕ್ಕಮಗಳೂರು: ಎರಡು ದಿನಗಳ ಧರ್ಮಸ್ಥಳ-ಸುಬ್ರಹ್ಮಣ್ಯ ಪ್ರವಾಸ ಮುಗಿಸಿ ಮರಳಿ ಮನೆ ಕಡೆಗೆ ಬರುತ್ತಿದ್ದಾಗ ಸರಕಾರಿ ಬಸ್ಸು ಸಿಬ್ಬಂದಿಗಳು ಮಾನವೀಯತೆ ಮರೆತು ದರ್ಪ ಮೆರೆದಿದ್ದಾರೆ ಎಂದು ಶಿರಾಳಕೊಪ್ಪ ಭಾಸ್ಕರ ಭಂಡಾರಿ ಆರೋಪಿಸಿದ್ದಾರೆ. ಆದರೆ ಕಂಡಕ್ಟರ್ “ಇಲ್ಲ ಇಲ್ಲ… ಹಾಗೆಲ್ಲ ಸ್ಟಾಪ್ ಕೊಡೋಕೆ ಬರಲ್ಲ. ಶಿರಾಳಕೊಪ್ಪಕ್ಕೆ ಒಂದೇ ಸ್ಟಾಪ್ ಇರೋದು.ಇಲ್ಲೇ ಇಳೀರಿ” ಎಂದ. ಸಾರ್…ಗಂಟೆ ನಾಲ್ಕೂವರೆ ಅಷ್ಟೇ ಆಗಿರೋದು.ಹೆಂಗಸರು, ಮಕ್ಕಳು ಈ ಚಳಿಯಲ್ಲಿ ಒಂದು ಫರ್ಲಾಂಗ್ ದೂರ ನಡಕೊಂಡು ಹೋಗೋದು ಕಷ್ಟ.

ಕುಟುಂಬ ಸಮೇತ ಭಾಸ್ಕರ ಭಂಡಾರಿ ಅವರು ಧರ್ಮಸ್ಥಳ ದೇಗುಲ ದರ್ಶನಕ್ಕೆ ಬಂದಿದ್ದರು. ಧರ್ಮಸ್ಥಳದಿಂದ ಬಳ್ಳಾರಿಗೆ ಹೋಗುವ ಕರ್ನಾಟಕ ರಸ್ತೆ ಸಾರಿಗೆಯ ಬಸ್ ನಲ್ಲಿ ಪ್ರಯಾಣಿಸಿ,

ಗುರುವಾರ ಬೆಳಗಿನ ಜಾವ 2 ಗಂಟೆಗೆ ಶಿವಮೊಗ್ಗ ಬಸ್ ನಿಲ್ದಾಣ ತಲುಪಿದ್ದರು. ಮೈ ಕೊರೆಯುವ ಚಳಿಯಲ್ಲಿ ಮಕ್ಕಳೊಂದಿಗೆ ಅರ್ಧ ಗಂಟೆ ಕಳೆಯುವುದು ಕಷ್ಠವಾಗಿತ್ತು.ಗುರುವಾರ ಬೆಳಗಿನ ಜಾವ 2 ಗಂಟೆಗೆ ಶಿವಮೊಗ್ಗ ಬಸ್ ನಿಲ್ದಾಣ ತಲುಪಿದ್ದರು. ಮೈ ಕೊರೆಯುವ ಚಳಿಯಲ್ಲಿ ಮಕ್ಕಳೊಂದಿಗೆ ಅರ್ಧ ಗಂಟೆ ಕಳೆಯುವುದು ಕಷ್ಠವಾಗಿತ್ತು.

ಗುರುವಾರ ಬೆಳಗಿನ ಜಾವ 2 ಗಂಟೆಗೆ ಶಿವಮೊಗ್ಗ ಬಸ್ ನಿಲ್ದಾಣ ತಲುಪಿದ್ದರು. ಮೈ ಕೊರೆಯುವ ಚಳಿಯಲ್ಲಿ ಮಕ್ಕಳೊಂದಿಗೆ ಅರ್ಧ ಗಂಟೆ ಕಳೆಯುವುದು ಕಷ್ಠವಾಗಿತ್ತು.

ಎರಡೂವರೆ ಗಂಟೆಗೆ ಮೈಸೂರಿನಿಂದ ಶಿರಸಿಗೆ ತೆರಳುವ #ವಾಯುವ್ಯ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಗೆ ಸೇರಿದ ರಾಜಹಂಸ ಬಸ್ಸಿನಲ್ಲಿ ಪ್ರಯಾಣ ಮಾಡಿ ಶಿರಾಳಕೊಪ್ಪ ಬಸ್ ನಿಲ್ದಾಣವನ್ನು ತಲುಪಿದಾಗ ಬೆಳಗಿನ ಜಾವ 4:30 ಗಂಟೆ ಆಗಿತ್ತು.

ಇವರ ಮನೆ ಶಿರಾಳಕೊಪ್ಪದ ಸೊರಬ ರಸ್ತೆಯಲ್ಲಿರುವ ಸರ್ಕಾರಿ ಜೂನಿಯರ್ ಕಾಲೇಜ್ ಬಳಿ ಇರುವ ಕಾರಣ ಶಿರಸಿಗೆ ಹೋಗುವ ಬಸ್ಸು ಅದೇ ರಸ್ತೆಯಲ್ಲಿ ಮುಂದೆ ಸಾಗುತ್ತಿದ್ದ ಕಾರಣ ಬಸ್ಸನ್ನು ಜೂನಿಯರ್ ಕಾಲೇಜ್ ಬಳಿ ನಿಲ್ಲಿಸಿ ಎಂದು ವಿನಂತಿಸಿದ್ದರು.

ಇಷ್ಟೊತ್ತಲ್ಲಿ ಆಟೋನೂ ಸಿಗಲ್ಲ.ದಯವಿಟ್ಟು ಕಾಲೇಜ್ ಹತ್ತಿರ ಒಂದು ಸ್ಟಾಪ್ ಕೊಡಿ” ಎಂದು ವಿನಂತಿಸಿದರೂ ಕೇಳದೇ “ರೀ ಹೇಳಿದ್ದು ಕೇಳ್ಸಲ್ವಾ? ನಡಕೊಂಡು ಹೋಗಿ,ಇಲ್ಲಾ ಅಂದ್ರೇ ಸೊರಬಕ್ಕೆ ಟಿಕೇಟ್ ಮಾಡ್ಸಿ.ಇಳೀರಿ…ಇಳೀರಿ” ಎಂದು ಜಬರ್ದಸ್ತ್ ಮಾಡಿ, ದರ್ಪದಿಂದ ಮಾತಾಡಿ, ಹೆಂಗಸು, ಮಕ್ಕಳು ಇದ್ದಾರೆ ಎಂಬುದನ್ನೂ ನೋಡದೇ ನಿರ್ದಾಕ್ಷಿಣ್ಯವಾಗಿ ನಮ್ಮನ್ನು ಕೆಳಗಿಳಿಸಿ ಹೊರಟುಹೋಗಿದ್ದಾನೆ ಎಂದು ಭಂಡಾರಿ ದೂರಿದ್ದಾರೆ.

ಇಂತಹ ಕಂಡೆಕ್ಟರ್‌, ಚಾಲಕರು ಕನಷ್ಠ ಮಾನವೀಯತೆಯನ್ನೂ ಮೆರೆತಿರುವುದು ವಿಷಾದನೀಯ ಎಂದಿರುವ ಅವರು ಕಂಡೆಕ್ಟರ್‌ಗಳ ಅನುಚಿತ ವರ್ತನೆಗೆ ಇಲಾಖೆ ಏನೂ ಕ್ರಮ ಕೈಗೊಳ್ಳುವುದಿಲ್ಲವೇ ಎಂದು ಪ್ರಶ್ನಿಸಿದ್ದಾರೆ.

Click to comment

Leave a Reply

Your email address will not be published. Required fields are marked *

LATEST NEWS

ಮೊಸಳೆ ಇದ್ದ ನಾಲೆಗೆ ಕಂದಮ್ಮನನ್ನು ಎಸೆದ ಹೆತ್ತ ತಾಯಿ..! ಗಂಡ-ಹೆಡತಿ ಜಗಳದಲ್ಲಿ ಮೊಸಳೆ ಪಾಲಾದ ಮಗು..!

Published

on

ಉತ್ತರ ಕನ್ನಡ/ಮಂಗಳೂರು: ತಾಯಿಯೊಬ್ಬಳು ಕೋಪದಲ್ಲಿ ತನ್ನ ಮಗುವನ್ನೇ ಕಾಲುವೆಗೆ (Murder case ) ಎಸೆದಿದ್ದಾಳೆ. ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿಯ ಹಾಲಮಡ್ಡಿಯಲ್ಲಿ ಘಟನೆ ನಡೆದಿದೆ. ಸಾವಿತ್ರಿ ಎಂಬಾಕೆ ತನ್ನ ಆರು ವರ್ಷದ ಮಗನನ್ನು ನಾಲೆಗೆ ಎಸೆದಿದ್ದಾಳೆ. ವಿನೋದ್ (6) ಮೃತ ದುರ್ದೈವಿ.

child death

ಮಗುವು ಮೂಕನಾಗಿದ್ದರಿಂದ ಸಾವಿತ್ರಿ ಹಾಗೂ ರವಿಕುಮಾರ್ ದಂಪತಿ ನಡುವೆ ಗಲಾಟೆ ನಡೆಯುತ್ತಿತ್ತು. ರವಿಕುಮಾರ್‌ ಕುಡಿದು ಬಂದು ಗಲಾಟೆ ಮಾಡುತ್ತಿದ್ದ. ಪ್ರತೀ ಬಾರಿ ಗಲಾಟೆಯಾದಾಗಲೂ ಮಗು ಸಾಯಲಿ ಎಂದು ಸಾವಿತ್ರಿಗೆ ಬೈಯ್ಯುತ್ತಿದ್ದ.

ನಿನ್ನೆ ಶನಿವಾ(ಏ.5) ರಾತ್ರಿಯೂ ಸಹ ಸಾವಿತ್ರಿ ಹಾಗೂ ಪತಿ ರವಿಕುಮಾರ್‌ ಜತೆಗೆ ಜಗಳ ನಡೆದಿದೆ. ಪತಿ ಜತೆಗೆ ಗಲಾಟೆ ಆದಾಗ ಸಾವಿತ್ರಿ ಕೋಪದಲ್ಲಿ ಮಗುವನ್ನು ಎತ್ತಿಕೊಂಡು ಹೋಗಿ ನಾಲೆಗೆ ಎಸೆದಿದ್ದಾಳೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳೀಯರು ಮಗುವನ್ನು ಹುಡುಕಾಡಲು ಮುಂದಾಗಿದ್ದಾರೆ.

ಮುಂದೆ ಓದಿ..; ನಡುರಸ್ತೆಯಲ್ಲಿ ಗರ್ಭಿಣಿಯನ್ನು ಉಸಿರುಗಟ್ಟಿಸಿ ಹತ್ಯೆಗೈದ ದುಷ್ಕರ್ಮಿಗಳು..!

ಆದರೆ ಮಗು ಸಿಗದಿದ್ದಾಗ ದಾಂಡೇಲಿ ಗ್ರಾಮೀಣ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ. ಹಾಲಮಡ್ಡಿಯಲ್ಲಿ ನಡೆದ ಶೋಧ ಕಾರ್ಯಾಚರಣೆ ವೇಳೆ ಮೃತದೇಹವು ಪತ್ತೆಯಾಗಿದೆ. ನಾಲೆಗೆ ಎಸೆಯಲ್ಪಟ್ಟಾಗ ಮೊಸಳೆಯೊಂದು ಮಗುವಿನ ಬಲಗೈ ಕಚ್ಚಿ ಎಳೆದು ಹೋಗಿತ್ತು. ಆರು ವರ್ಷದ ಗಂಡು ಮಗುವಿಗಾಗಿ ನಿನ್ನೆ ಶನಿವಾರ ರಾತ್ರಿಯಿಂದ ಶೋಧ ಕಾರ್ಯಾಚರಣೆ ಮುಂದುವರಿದಿತ್ತು.

ಭಾನುವಾರ ಬೆಳಗ್ಗೆ ಕಾರ್ಯಾಚರಣೆ ವೇಳೆ ಮಗುವಿನ ಜತೆ ಆಗಾಗ ಮೊಸಳೆಯು ಕಾಣಿಸಿಕೊಂಡಿತ್ತು. ದಾಂಡೇಲಿಯ ಗ್ರಾಮೀಣ ಠಾಣಾ ಪೊಲೀಸರು, ಅಗ್ನಿಶಾಮಕ ದಳ ಹಾಗೂ ಸ್ಥಳೀಯ ಮುಳುಗು ತಜ್ಞರ ಸಹಕಾರದಲ್ಲಿ ಮಗುವಿನ ಮೃತದೇಹ ಪತ್ತೆ ಮಾಡಲಾಗಿದೆ. ಮುಳುಗು ತಜ್ಞರು ಮೊಸಳೆಯ ಬಾಯಿಯಿಂದ ಮಗುವಿನ ಮೃತದೇಹ ಬಿಡಿಸಿಕೊಂಡು ಬಂದಿದ್ದಾರೆ.

ಇನ್ನೂ ಆರೋಪಿಗಳಾದ ರವಿ ಕುಮಾರ್ ಹಾಗೂ ಸಾವಿತ್ರಿ ದಂಪತಿಯನ್ನು ದಾಂಡೇಲಿ ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳ ವಿರುದ್ಧ ದಾಂಡೇಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆಯನ್ನು ನಡೆಸುತ್ತಿದ್ದಾರೆ. ಅಪ್ಪ-ಅಮ್ಮನ ಜಗಳದಲ್ಲಿ ಏನು ತಿಳಿಯದ ಮಗುವೊಂದು ಪ್ರಾಣವನ್ನೇ ಕಳೆದುಕೊಂಡಿದೆ.

Continue Reading

LATEST NEWS

ನಡುರಸ್ತೆಯಲ್ಲಿ ಗರ್ಭಿಣಿಯನ್ನು ಉಸಿರುಗಟ್ಟಿಸಿ ಹತ್ಯೆಗೈದ ದುಷ್ಕರ್ಮಿಗಳು..!

Published

on

ಮಧ್ಯಪ್ರದೇಶ: ದರೋಡೆ ಮಾಡಲು ಬಂದವರು ನಡುರಸ್ತೆಯಲ್ಲಿ ಸೀರೆಯಿಂದ ಕತ್ತು ಹಿಸುಕಿ ಗರ್ಭಿಣಿಯ ಹತ್ಯೆ ಮಾಡಿರುವ ಘಟನೆ ಮಧ್ಯಪ್ರದೇಶದ ಜಬಲ್​ಪುರದಲ್ಲಿ ನಡೆದಿದೆ.

pregnant death

ಮೊದಲು ಕಾರಿನ ಮೇಲೆ ಕಲ್ಲಿನಿಂದ ದಾಳಿ ನಡೆಸಿದ್ದಾರೆ, ಬಳಿಕ ಗರ್ಭಿಣಿಯನ್ನು ಆಕೆಯ ಸೀರೆಯಿಂದಲೇ ಉಸಿರುಗಟ್ಟಿಸಿ ಹತ್ಯೆ ಮಾಡಿದ್ದಾರೆ. ಧೋಟಾಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಶನಿವಾರ ತಡರಾತ್ರಿ ಈ ಘಟನೆ ನಡೆದಿದೆ. ಕಾಜರವಾರದ ನಿವಾಸಿ ಶುಭಂ ಚೌಧರಿ ಅವರು ಪತ್ನಿ ರೇಷ್ಮಾ ಹಾಗೂ ಒಂದೂವರೆ ವರ್ಷದ ಪುತ್ರನೊಂದಿಗೆ ವಾಕಿಂಗ್‌ಗೆ ತೆರಳಿದ್ದರು.

ಪಟ್ಬಾಬಾದಿಂದ ಹಿಂದಿರುಗಿದ ನಂತರ, ಮದರ್ ತೆರೆಸಾ ನಗರದಲ್ಲಿರುವ ತನ್ನ ಅತ್ತೆಯ ಮನೆಗೆ ಹೋಗಲು ಬೊಲೆರೋ ಕಾರಿನಲ್ಲಿ ಹೊರಟಿದ್ದಾಗ, ದಾರಿಯಲ್ಲಿ 3-4 ದುಷ್ಕರ್ಮಿಗಳು ಅಡ್ಡಗಟ್ಟಿದ್ದರು. ಆಗ ಪ್ರತಿಭಟಿಸಲು ಮುಂದಾದ ಮಹಿಳೆಯನ್ನು ಹತ್ಯೆ ಮಾಡಿ ಬಳಿಕ ಆಕೆಯ ಪತಿಯನ್ನೂ ಥಳಿಸಿದ್ದಾರೆ. ಶುಭಂ ಸ್ಥಿತಿ ಚಿಂತಾಜನಕವಾಗಿದೆ ಎಂದು ಹೇಳಲಾಗಿದೆ. ಇನ್ನು ಶೂಭಂ ತಲೆಗೆ ಇಟ್ಟಿಗೆಯಿಂದ ಹಲ್ಲೆ ನಡೆಸಿದ್ದಾರೆ. ಪತ್ನಿಯ ಮಂಗಳಸೂತ್ರವನ್ನು ದೋಚಿ ಅಲ್ಲಿಂದ ಎಸ್ಕೇಪ್ ಆಗಿದ್ದಾರೆ ಎನ್ನಲಾಗಿದೆ. ಮಾಹಿತಿ ತಿಳಿದ ಕೂಡಲೇ ಸ್ಥಳಕ್ಕೆ ಧಾವಿಸಿದ ಮಾಧೋಳ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ಮುಂದೆ ಓದಿ..; ನಾಲ್ಕು ತಿಂಗಳ ಮಗುವಿಗೆ ಹಾಲಿನಲ್ಲಿ ಆಲ್ಕೋಹಾಲ್ ಬೆರೆಸಿದ ಅಜ್ಜಿ..! ಅಜ್ಜಿ ಮಾಡಿದ ಎಡವಟ್ಟಿಗೆ ಕೋಮಾಗೆ ಜಾರಿದ ಮಗು !!

ಶುಭಂ ಅವರ ಬೊಲೆರೋ ದುಷ್ಕರ್ಮಿಗಳಿಗೆ ಡಿಕ್ಕಿ ಹೊಡೆದಿದೆ. ಈ ಹಿನ್ನೆಲೆಯಲ್ಲಿ ಇಬ್ಬರ ನಡುವೆ ವಿವಾದಗಳುಂಟಾಗಿ ಪರಿಸ್ಥಿತಿ ವಿಕೋಪಕ್ಕೆ ತಿರುಗಿ ಈ ದುರಂತ ನಡೆದಿರಬಹುದೆಂದು ಮೇಲ್ನೋಟಕ್ಕೆ ಕಂಡು ಬರುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ. ಇನ್ನು ಈ ಕುರಿತು ಪೊಲೀಸರು ಎಲ್ಲಾ ಆಯಾಮಗಳಲ್ಲಿಯೂ ತನಿಖೆ ನಡೆಸುತ್ತಿದ್ದಾರೆ. ರೇಷ್ಮಾ ಸಾವಿನ ಮರಣೋತ್ತರ ಪರೀಕ್ಷಾ ವರದಿ ಬಳಿಕ ಸಾವಿಗೆ ಕಾರಣ ತಿಳದು ಬರಬೇಕಿದೆ ಎಂದು ಮಧೋಳ ಠಾಣೆ ಪ್ರಭಾರಿ ವಿಪಿನ್ ತಾಮ್ರಕರ ಹೇಳಿದ್ದಾರೆ.

 

Continue Reading

LATEST NEWS

ಮತ್ತೆ ಬಂತು ಅಕ್ಷಯ ತೃತೀಯ; ಆಚರಣೆಯ ಮಹತ್ವವೇನು?

Published

on

ಮಂಗಳೂರು : ಭಾರತೀಯ ಹಿಂದೂ ಸಂಪ್ರದಾಯದಲ್ಲಿ ‘ಅಕ್ಷಯ ತೃತೀಯ’ಕ್ಕೆ ವಿಶೇಷ ಸ್ಥಾನವಿದೆ. ಪ್ರತಿ ವರ್ಷ ವೈಶಾಖ ಮಾಸದ ಶುಕ್ಲ ಪಕ್ಷ ತೃತೀಯ ತಿಥಿಯಂದು ಆಚರಿಸಲಾಗುತ್ತದೆ. ಈ ವರ್ಷ ಮೇ 10 ರಂದು ಅಕ್ಷಯ ತೃತೀಯ ಆಚರಿಸಲಾಗುತ್ತಿದೆ. ಸಂಪತ್ತಿನ ಅಧಿದೇವತೆ ಲಕ್ಷ್ಮೀ ಆರಾಧನೆ ಈ ದಿನ ನಡೆಯುತ್ತದೆ.


ಪೌರಾಣಿಕ ಹಿನ್ನೆಲೆ :

ಅಕ್ಷಯ ತೃತೀಯ ಆಚರಣೆಯ ಹಿಂದೆ ಹಲವು ಪೌರಾಣಿಕ ಹಿನ್ನೆಲೆ ಇದೆ. ಭಗವಾನ್ ವಿಷ್ಣುವಿನ ಪರಶುರಾಮ ಅವತಾರ ಈ ದಿನವೇ ಆಗಿದ್ದು ಎಂಬ ನಂಬಿಕೆಯಿದೆ.
ಕೃಷ್ಣ ಯುಧಿಷ್ಠಿರನಿಗೆ ಅಕ್ಷಯ ಪಾತ್ರೆ ನೀಡಿದ್ದು ಇದೇ ದಿನ ಎಂಬ ನಂಬಿಕೆ ಇದೆ. ಈ ಅಕ್ಷಯ ಪಾತ್ರೆಯಲ್ಲಿ ಆಹಾರ ಖಾಲಿಯಾಗದು ಎಂಬ ಕಥೆಯೂ ಇದೆ. ಹಾಗಾಗಿ ಅಕ್ಷಯ ತೃತೀಯದಂದೂ ದಾನ ಧರ್ಮಕ್ಕೆ, ದಾನಕ್ಕೆ ವಿಶೇಷ ಪ್ರಾಶಸ್ತ್ಯವಿದೆ. ತಾಯಿ ಅನ್ನಪೂರ್ಣೆಯ ಜನ್ಮದಿನವೂ ಅಕ್ಷಯ ತೃತೀಯಾದಂದೇ ಆಗಿದೆ ಎಂದು ಹೇಳಲಾಗಿದೆ.


ಇನ್ನು ಅಕ್ಷಯ ತೃತೀಯದಂದು ತ್ರೇತಾಯುಗ ಆರಂಭವಾಯಿತು ಎಂದೂ ಹೇಳಲಾಗಿದೆ. ಗಂಗೆಯೂ ಭೂಮಿಗಿಳಿದ ದಿನ ಎಂಬುದಾಗಿಯೂ ಹೇಳಲಾಗಿದೆ. ಭಗೀರಥ ರಾಜನು ಗಂಗಾಮಾತೆಯನ್ನು ಭೂಮಿಗೆ ಇಳಿಸಲು ಸಾವಿರಾರು ವರ್ಷಗಳ ಕಾಲ ತಪಸ್ಸು ಮಾಡಿದ್ದನು. ಹಾಗಾಗಿ ಅಕ್ಷಯ ತೃತೀಯದಂದು ಗಂಗಾ ಸ್ನಾನ ಮಾಡುವುದರಿಂದ ಎಲ್ಲಾ ಪಾಪಗಳು ನಾಶವಾಗುತ್ತವೆ ಎಂಬ ನಂಬಿಕೆಯಿದೆ.

ಇದನ್ನೂ ಓದಿ : ಜೀವಾಂತ್ಯವಾದ ಕಾಂತಾಬಾರೆ-ಬೂದಬಾರೆ ಜನ್ಮಕ್ಷೇತ್ರದ ಮರ..! ಇತಿಹಾಸದ ಜೀವಂತ ಸಾಕ್ಷಿಯ ಅಂತ್ಯ..!

ಮಹತ್ವವೇನು?

ಅಕ್ಷಯ ತೃತೀಯಕ್ಕೆ ವಿಶೇಷ ಮಹತ್ವವಿದೆ. ಈ ದಿನದಂದು ಉತ್ತಮ ಕೆಲಸಗಳನ್ನು ಮಾಡುವುದರಿಂದು ಜೀವನದಲ್ಲಿ ಏಳಿಗೆ ಕಾಣಬಹುದು ಎಂಬ ನಂಬಿಕೆಯಿದೆ. ಈ ದಿನ ದಾನ ಧರ್ಮ ಮಾಡಿದರೆ ಉತ್ತಮ ಎನ್ನಲಾಗುತ್ತದೆ. ಹಾಗಾಗಿಯೇ ಹಲವರು ದಾನ ಧರ್ಮದಲ್ಲಿ ತೊಡಗಿಕೊಳ್ಳುತ್ತಾರೆ.

ಈ ದಿನ ಹೊಸ ವಸ್ತುಗಳನ್ನು ಖರೀದಿಸುವಲ್ಲಿ ಜನ ಮುಗಿ ಬೀಳುತ್ತಾರೆ. ಅದರಲ್ಲೂ ಚಿನ್ನಕ್ಕೆ ಬಲು ಬೇಡಿಕೆಯಿದೆ. ಆಭರಣ ಮಳಿಗೆಗಳು ತುಂಬಿ ತುಳುಕುತ್ತವೆ. ಈ ದಿನ ಆಭರಣ ಖರೀದಿ ಮಾಡಿದಲ್ಲಿ ‘ಅಕ್ಷಯ’ವಾಗಲಿದೆ ಎಂಬ ನಂಬಿಕೆ ಜನರದು. ಲಕ್ಷ್ಮೀಯನ್ನು ಆರಾಧಿಸಲಾಗುತ್ತದೆ. ಆಕೆ ಒಲಿದರೆ ಸಂಪತ್ತು ವೃದ್ಧಿಯಾಗುತ್ತದೆ. ಹಾಗಾಗಿ ವಿಶೇಷ ಪೂಜೆ, ಪ್ರಾರ್ಥನೆ ಸಲ್ಲಿಸಲಾಗುತ್ತದೆ.

ಈ ಬಾರಿಯ ಅಕ್ಷಯ ತೃತೀಯ ಸಮಯ :


ಅಕ್ಷಯ ತೃತೀಯ ಶುಕ್ರವಾರ, ಮೇ 10 ರಂದು ಬೆಳಗ್ಗೆ 4:17 ಕ್ಕೆ ಪ್ರಾರಂಭವಾಗುತ್ತದೆ ಮತ್ತು ಮೇ 11 ರಂದು 2:50 AM ಕ್ಕೆ ಕೊನೆಗೊಳ್ಳುತ್ತದೆ. ಅಕ್ಷಯ ತೃತೀಯದ ಶುಭ ಸಮಯವು ಮೇ 10 ರಂದು ಬೆಳಗ್ಗೆ 5:49 ರಿಂದ ಮಧ್ಯಾಹ್ನ 12:23 ರ ನಡುವೆ ಇರುತ್ತದೆ. ಅಕ್ಷಯ ತೃತೀಯದ ಶುಭ ಸಮಯದಲ್ಲಿ ಮಾಡುವ ಪ್ರತಿಯೊಂದು ಕೆಲಸವೂ ಯಶಸ್ವಿಯಾಗುತ್ತದೆ ಎನ್ನುವ ನಂಬಿಕೆ ಇದೆ.

Continue Reading

LATEST NEWS

Trending