Connect with us

    LATEST NEWS

    ‘ಬಿರುವ ಜವನೆರ್ ಮಸ್ಕತ್’ ಉಪಸ್ಥಿತಿಯಲ್ಲಿ ಕೆ.ಪಿ.ಎಲ್ 2k24.. !

    Published

    on

    ಮಂಗಳೂರು: ಸಮಾಜಸೇವೆ, ಕ್ರೀಡೆ, ಸಾಂಸ್ಕೃತಿಕ, ಧಾರ್ಮಿಕ ಎಲ್ಲಾ ಕ್ಷೇತ್ರಗಳಲ್ಲಿಯೂ ಸಕ್ರೀಯವಾಗಿರುವ ‘ಬಿರುವ ಜವನೆರ್ ಮಸ್ಕತ್’ ಹಾಗೂ ‘ಇನ್‌ಸ್ಪಿರೇಶನ್ ಡಿಸೈನ್ ಇವೆಂಟ್ ಮ್ಯಾನೆಜ್‌ಮೆಂಟ್’ ನ ನೇತೃತ್ವದಲ್ಲಿ ಕರ್ನಾಟಕ ಪ್ರೀಮಿಯರ್ ಲೀಗ್ (ಕೆ.ಪಿ.ಎಲ್) 2024 ಟೂರ್ನಮೆಂಟ್ ನವೆಂಬರ್ 22 ಶುಕ್ರವಾರ ಬೆಳಿಗ್ಗೆ 7 ಗಂಟೆಯಿಂದ ರಾತ್ರಿ 9 ಗಂಟೆಯವರೆಗೆ ಆಲ್ ಹಯಲ್ ಕ್ರಿಕೆಟ್ ಗ್ರೌಂಡ್ ಮಾಬೆಲ್ಲದಲ್ಲಿ ಜರುಗಲಿವೆ.

    ಮಹಿಳೆಯರಿಗೆ ತ್ರೋಬಾಲ್ ಪಮದ್ಯಾಟ, ಮಕ್ಕಳಿಗೆ ಆಟೋಟ ಸ್ಪರ್ಧೆಗಳನ್ನು ಏರ್ಪಡಿಸಲಾಗಿದೆ. ಊಟದ ವ್ಯವಸ್ತೆಯ ಜೊತೆಗೆ ಮನೋರಂಜನಾ ಕಾರ್ಯಕ್ರಮಗಳು ನಡೆಯಲಿವೆ ಎಂದು ‘ಬಿರುವ ಜವನೆರ್ ಮಸ್ಕತ್’ ಹಾಗೂ ‘ಇನ್‌ಸ್ಪಿರೇಶನ್ ಡಿಸೈನ್ ಇವೆಂಟ್ ಮ್ಯಾನೆಜ್‌ಮೆಂಟ್’ ತಿಳಿಸಿದೆ.

    ‘ಪುದರ್ ದೀತಿಜಿ’ ನಾಟಕ ಪೋಸ್ಟರ್ ಬಿಡುಗಡೆ:

    ನವೆಂಬರ್ 22 ರಂದು ಕೆ.ಪಿ.ಎಲ್. 2024 ರ ಜೊತೆಗೆ ‘ತೆಲಿಕೆದ ಬೊಳ್ಳಿ’ ದೇವ್‌ದಾಸ್ ಕಾಪಿಕಾಡ್ ನೇತೃತ್ವದ ‘ಬಲೆ ಚಾ ಪರ್ಕ’ ತಂಡದ ಕಲಾವಿದರು ಜನವರಿ 10 ರಂದು ಮಸ್ಕತ್‌ನಲ್ಲಿ ಪ್ರದರ್ಶಿಸಲಿರುವ ‘ಪುದರ್ ದಿತಿಜಿ’ ನಾಟಕದ ಪೋಸ್ಟರ್ ಬಿಡುಗಡೆಗಾಗಿ ನಾಟಕ ತಂಡದ ಕಲಾವಿದರೆಲ್ಲರೂ ಅತಿಥಿಗಳಾಗಿ ಆಗಮಿಸಲಿದ್ದಾರೆ.

    kerala

    ಎಕ್ಸ್ಪ್ರೆಸ್ ರೈಲು ಡಿ*ಕ್ಕಿ; ವಿದ್ಯಾರ್ಥಿನಿಯ ದು*ರಂತ ಅಂ*ತ್ಯ

    Published

    on

    ಮಂಗಳೂರು/ಕೇರಳ : ರೈಲು ಹಳಿ ದಾಟುವಾಗ ವಿದ್ಯಾರ್ಥಿನಿಯೊಬ್ಬಳಿಗೆ ರೈಲು ಡಿ*ಕ್ಕಿಯಾಗಿ ಮೃ*ತಪಟ್ಟ ದಾರುಣ ಘಟನೆ ಮಯನಾಡು ರೈಲು ನಿಲ್ದಾಣದಲ್ಲಿ ನಡೆದಿದೆ.

    ಮೃ*ತಪಟ್ಟ ವಿದ್ಯಾರ್ಥಿನಿ ದೇವಾನಂದ (17) ಎಂದು ಗುರುತಿಸಲಾಗಿದೆ.

    ಮಯನಾಡು ಹೈಯರ್ ಸೆಕೆಂಡರಿ ಶಾಲೆಯ ದ್ವಿತಿಯ ಪಿಯುಸಿ ವಿದ್ಯಾರ್ಥಿನಿ ದೇವಾನಂದ ಮಾಯನಾಡು ರೈಲು ನಿಲ್ದಾಣದಲ್ಲಿ ಹಳಿ ದಾಟಿ ಪ್ಲಾಟ್‌ಫಾರ್ಮ್ಗೆ ಹತ್ತಲು ಯತ್ನಿಸುತ್ತಿದ್ದಾಗ ಈ ದು*ರ್ಘಟನೆ ನಡೆದಿದೆ.

    ಮಯನಾಡು ನಿಲ್ದಾಣದ ಮೊದಲ ಪ್ಲಾಟ್‌ಫಾರ್ಮ್ನಲ್ಲಿ ನಿಲುಗಡೆಗೊಂಡಿದ್ದ ನಾಗರ್‌ಕೋಯಿಲ್-ಕೊಟ್ಟಾಯಂ ಪ್ಯಾಸೆಂಜರ್ ರೈಲು ಅದರ ಮುಂಭಾಗದ ಹಳಿಯನ್ನು ದಾಟಿ ಎರಡನೇ ಪ್ಲಾಟ್‌ಫಾರ್ಮ್ಗೆ ಪ್ರವೇಶಿಸಿದಾಗ ನೇತ್ರಾವತಿ ಎಕ್ಸ್ಪ್ರೆಸ್ ಬಂದಿದೆ.

    ದೇವಾನಂದ ತನ್ನ ಸಹಪಾಠಿಗಳೊಂದಿಗೆ ರೈಲ್ವೇ ಪ್ರವೇಶಿಸಿ ಜೊತೆಯಲ್ಲಿದ್ದ ಇತರ ವಿದ್ಯಾರ್ಥಿಗಳು ಪ್ಲಾಟ್‌ಫಾರ್ಮ್ಗೆ ಎಳೆದೊಯ್ದರು, ಆದರೆ ದೇವಾನಂದ ರೈಲಿಗೆ ಡಿ*ಕ್ಕಿ ಹೊಡೆದು ಜೀ*ವ ಕಳೆದುಕೊಂಡಿದ್ದಾರೆ. ಮಕ್ಕಳು ರೈಲಿನ ಮುಂದೆ ಇರುವುದನ್ನು ತಿಳಿದ ರೈಲಿನ ಲೊಕೊ ಪೈಲಟ್ ನಿಲ್ಲಿಸದೆ ಹಾರ್ನ್ ಮಾಡಿದರೂ ಪ್ರಯೋಜನವಾಗಲಿಲ್ಲ ಎಂದು ತಿಳಿದುಬಂದಿದೆ.

    Continue Reading

    Baindooru

    ಕೊಲ್ಲೂರು ಕ್ಷೇತ್ರಕ್ಕೆ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್‌ ಭೇಟಿ

    Published

    on

    ಮಂಗಳೂರು/ಉಡುಪಿ: ರಾಜ್ಯದ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಇಂದು ಬೆಳಿಗ್ಗೆ ಉಡುಪಿ ಜಿಲ್ಲೆಗೆ ಆಗಮಿಸಿದ್ದಾರೆ. ಬೈಂದೂರು ಸಮೀಪದ ಅರೆ ಶಿರೂರಿನ ಹೆಲಿಪ್ಯಾಡ್ ನಲ್ಲಿ ಇಳಿದ ಅವರು, ನಂತರ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನಕ್ಕೆ ಭೇಟಿ ನೀಡಿದರು.

    ಬೆಂಗಳೂರಿನಿಂದ ಹೆಲಿಕಾಪ್ಟರ್ ಮೂಲಕ ಉಡುಪಿ ಜಿಲ್ಲೆಗೆ ಆಗಮಿಸಿದ ಉಪಮಖ್ಯಮಂತ್ರಿ ಡಿಕೆ ಶಿವಕುಮಾರ್‌ಗೆ , ಬಂದರು ಮತ್ತು ಮೀನುಗಾರಿಕೆ ಸಚಿವ ಮಾಂಕಾಳು ವೈದ್ಯ, ಶಾಸಕ ಗೋಪಾಲ ಪೂಜಾರಿ ಹಾಗೂ ಜಿಲ್ಲಾಧಿಕಾರಿ ಕೆ. ವಿದ್ಯಾಕುಮಾರಿ ಸ್ವಾಗತಿಸಿದರು.

     

    ಇದನ್ನು ಓದಿ: ಪ್ರಧಾನಿ ಮೋದಿಗೆ ಗಯಾನಾ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ

     

    ಇತ್ತೀಚೆಗೆ ಭಾರಿ ಮಹತ್ವ ಪಡೆದುಕೊಂಡಿರುವ ರಾಜ್ಯದ ಮೂರು ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಗಳ ಗೆಲುವು ರಾಜ್ಯ ಸರ್ಕಾರಕ್ಕೆ ಮುಖ್ಯವಾಗಿರುವ ಹಿನ್ನಲೆಯಲ್ಲಿ ಉಪಮುಖ್ಯಮಂತ್ರಿ ಡಿಕೆ. ಶಿವಕುಮಾರ್ ಕೊಲ್ಲೂರು ಮೂಕಾಂಬಿಕಾ ಭೇಟಿ ಮಹತ್ವ ಪಡೆದುಕೊಂಡಿದ್ದು, ಅವರು ಮೂರು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಪಕ್ಷದ ವಿಜಯಕ್ಕಾಗಿ ಪ್ರಾರ್ಥನೆ ಮಾಡಲಿದ್ದಾರೆ ಎಂದು ತಿಳಿದು ಬಂದಿದೆ.

    Continue Reading

    LATEST NEWS

    ಅತ್ತೆ- ಸೊಸೆ ಜಗಳ; ಆ*ತ್ಮಹತ್ಯೆಗೆ ಶರಣಾದ ಮಗ !!

    Published

    on

    ಮಂಗಳೂರು/ಹಾಸನ: ಮನೆಯಲ್ಲಿ ಅತ್ತೆ ಸೊಸೆ ಜಗಳದಿಂದ ಮನನೊಂದ ಮನೆಮಗ ಬಂದೂಕಿನಿಂದ ಗುಂ*ಡು ಹಾ*ರಿಸಿಕೊಂಡು ಆ*ತ್ಮಹತ್ಯೆಗೆ ಶರಣಾಗಿರುವ ಘಟನೆ ಹಾಸನ ಜಿಲ್ಲೆಯ ಸಕಲೇಶಪುರ ತಾಲ್ಲೂಕಿನ, ಬಾಚೀಹಳ್ಳಿ ಗ್ರಾಮದಲ್ಲಿ ಇಂದು (ನ.21) ಬೆಳಿಗ್ಗೆ ನಡೆದಿದೆ.

    ಕರುಣಾಕರ (40)  ಆ*ತ್ಮಹತ್ಯೆಗೆ ಶರಣಾದ ವ್ಯಕ್ತಿ ಎಂದು ಗುರುತಿಸಲಾಗಿದೆ.

    ಕಾಫಿ ಬೆಳೆಗಾರನಾಗಿದ್ದ ಮೃತ ವ್ಯಕ್ತಿಯ ಮನೆಯಲ್ಲಿ ಹೆಂಡತಿ ಹಾಗೂ ತಾಯಿಯ ನಡುವೆ ಹೊಂದಾಣಿಕೆ ಇಲ್ಲದೆ ಯಾವಾಗಲೂ ಗಲಾಟೆ ಮಾಡುತ್ತಿದ್ದರು. ತಾಯಿ ಬೇರೆ ಮನೆಯಲ್ಲಿ ವಾಸವಿದ್ದರೂ ಗಲಾಟೆ ಮುಂದುವರೆಯುತ್ತಿತ್ತು. ಇದರಿಂದ ಮನನೊಂದ ಕರುಣಾಕರ್ ಬಂದೂಕಿನಿಂದ ಗುಂ*ಡು ಹಾ*ರಿಸಿಕೊಂಡು ಆ*ತ್ಮಹತ್ಯೆ ಮಾಡಿಕೊಂಡಿದ್ದಾನೆ.

    ಮೃ*ತ ಕರುಣಾಕನಿಗೆ ಒಂದು ಗಂಡು ಒಂದು ಹೆಣ್ಣು ಮಗುವಿದೆ. ಘಟನಾ ಸ್ಥಳಕ್ಕೆ ಎಳಸೂರು ಠಾಣೆ ಪೋಲಿಸರು ಭೇಟಿ ನೀಡಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

    Continue Reading

    LATEST NEWS

    Trending