Connect with us

    LATEST NEWS

    ಬೈಂದೂರು: ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾಗಿ ಬಾಬು ಶೆಟ್ಟಿ ಆಯ್ಕೆ

    Published

    on

    ಬೈಂದೂರು: ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾಗಿ ಬಾಬು ಶೆಟ್ಟಿ ಅವರು ಶುಕ್ರವಾರ ಆಯ್ಕೆಯಾಗಿದ್ದಾರೆ.

    ಇತ್ತೀಚೆಗೆ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ರಚನೆಯಾಗಿದ್ದು ಅಧ್ಯಕ್ಷರ ಆಯ್ಕೆ ಪ್ರಕ್ರಿಯೆಯು ಇಂದು ದೇವಸ್ಥಾನದಲ್ಲಿ ನಡೆಯಿತು. ಈ ಸಂದರ್ಭದಲ್ಲಿ ದೇವಸ್ಥಾನದ ಆಡಳಿತಾಧಿಕಾರಿ, ಸಹಾಯಕ ಆಯುಕ್ತರಾದ ಮಹೇಶ್ಚಂದ್ರ, ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ಪ್ರಶಾಂತ್ ಕುಮಾರ್ ಶೆಟ್ಟಿ ಉಪಸ್ಥಿತರಿದ್ದರು. ವ್ಯವಸ್ಥಾಪನ ಸಮಿತಿ ಸದಸ್ಯರಾದ ಪ್ರಧಾನ ಅರ್ಚಕರಾದ ನಿತ್ಯಾನಂದ ಅಡಿಗ, ಮಹಾಲಿಂಗ ವೆಂಕನಾಯ್ಕ್, ಶ್ರೀಮತಿ ಧನಾಕ್ಷಿ, ಶ್ರೀಮತಿ ಸುಧಾ ಕೆ, ಕೆ. ಸುರೇಂದ್ರ ಶೆಟ್ಟಿ, ಅಭಿಲಾಷ್ ಪಿ. ವಿ, ಯು. ರಾಜೇಶ್ ಕಾರಂತ್, ರಘುರಾಮ ದೇವಾಡಿಗ ಉಪಸ್ಥಿತರಿದ್ದರು.

    ಕಳೆದ ಒಂದು ವರ್ಷದಿಂದ ಆಡಳಿತ ಸಮಿತಿ ನೇಮಕವಾಗದೆ ಅತಂತ್ರವಾಗಿತ್ತು. ಕೊನೆಗೂ ವ್ಯವಸ್ಥಾಪನಾ ಸಮಿತಿ ರಚನೆಗೊಂಡಿತ್ತು. ಇದಕ್ಕೂ ಸಾಕಷ್ಟು ಅಪಸ್ವರಗಳು ಕೇಳಿ ಬಂದಿದ್ದವು.

    LATEST NEWS

    ವಿಧಾನಸಭೆಯ 3ನೇ ಮಹಡಿಯಿಂದ ಹಾರಿದ ಡೆಪ್ಯುಟಿ ಸ್ಪೀಕರ್..!

    Published

    on

    ಮಹಾರಾಷ್ಟ್ರ : ಮಹಾರಾಷ್ಟ್ರ ಮಂತ್ರಾಲಯ (ಸಚಿವಾಲಯ)ದ ಡೆಪ್ಯೂಟಿ ಸ್ಪೀಕರ್ ನರಹರಿ ಜಿರ್ವಾಲ್‌ ವಿಧಾನಸಭೆಯ ಛಾವಣಿಯಿಂದ ಜಿಗಿದಿದ್ದಾರೆ. ಆದರೆ ಕೆಳಗೆ ಸುರಕ್ಷತಾ ನೆಟ್‌ ಅಳವಡಿಸಿದ್ದ ಕಾರಣದಿಂದ ಜೀವ ಉಳಿಸಿಕೊಂಡಿದ್ದಾರೆ. ಮಹಾರಾಷ್ಟ್ರ ಉಪ ಮುಖ್ಯಮಂತ್ರಿ ಅಜಿತ್ ಪವಾರ್ ಬಣದಲ್ಲಿ ನರಹರಿ ಜಿರ್ವಾಲ್ ಶಾಸಕರಾಗಿ ಆಯ್ಕೆಯಾಗಿದ್ದರು. ನ್ಯಾಶನಲಿಸ್ಟ್ ಕಾಂಗ್ರೆಸ್ ಪಕ್ಷದ ಶಾಸಕರಾಗಿದ್ದ ಇವರು ವಿಧಾನಸಭೆಯ ಉಪ ಸ್ಪೀಕರ್ ಆಗಿ ನೇಮಕವಾಗಿದ್ದರು.

    ಧಂಗರ್ ಸಮೂದಾಯವನ್ನು ಎಸ್ಸಿಗೆ ಸೇರಿಸಬೇಕು ಎಂದು ನರಹರಿ ಜಿರ್ವಾಲ್‌ ಒತ್ತಾಯಿಸಿದ್ದರು. ಕಳೆದ ಎರಡು ದಿನಗಳ ಹಿಂದೆ ಮುಖ್ಯಮಂತ್ರಿ ಏಕನಾಥ ಶಿಂಧೆ ಭೇಟಿಗೆ ಬಂದಿದ್ದರೂ ಅವರ ಭೇಟಿ ಸಾಧ್ಯವಾಗಿರಲಿಲ್ಲ. ನಮ್ಮ ಬೇಡಿಕೆಯ ಕುರಿತು ಪರಿಶೀಲಿಸದೇ ಇದ್ದರೆ ಕೇವಲ ಹೋರಾಟ ಅಲ್ಲದೆ ನನ್ನಲ್ಲಿ  ಪ್ಲ್ಯಾನ್ ಬಿ ಕೂಡ ಇದೆ ಎಂದು ಇತ್ತೀಚೆಗೆ ಸಿಎಂ ಗೆ ಕಡಕ್ ವಾರ್ನಿಂಗ್  ಕೂಡಾ ನೀಡಿದ್ದರು. ಇಂದು ಮತ್ತೆ ಸಿಎಂ ಭೇಟಿಗೆ ಯತ್ನಿಸಿದ್ದು ಸಿಎಂ ಸಿಗದ ಕಾರಣಕ್ಕೆ ಮಂತ್ರಾಲಯದ ಮೂರನೇ ಮಹಡಿಯಿಂದ ಹಾರಿದ್ದಾರೆ ಎನ್ನಲಾಗಿದೆ.


    ನರಹರಿ ಜಿರ್ವಾಲ್‌ ಅವರು ಹಾರಿದ ತಕ್ಷಣ ಅವರ ಜೊತೆ ಇನ್ನಿಬ್ಬರು ಜೀರ್ವಾಲ್ ಬೆಂಬಲಿಗ ಶಾಸಕರೂ ಕೂಡಾ ಕೆಳಗೆ ಹಾರಿದ್ದಾರೆ. ಈ ಘಟನೆಯ ದೃಶ್ಯ ಲಭ್ಯವಾಗಿದ್ದು, ಮೂವರನ್ನೂ ಪೊಲೀಸರು ರಕ್ಷಣೆ ಮಾಡಿ ಮೇಲಕ್ಕೆ ಎತ್ತಿದ್ದಾರೆ.
    ಒಬಿಸಿ ವರ್ಗದ ಅಡಿಯಲ್ಲಿ ಮೀಸಲಾತಿ ಹೊಂದಿರುವ ಮಹಾರಾಷ್ಟ್ರದ ಧಂಗರ್ ಸಮುದಾಯವು ಪರಿಶಿಷ್ಟ ಪಂಗಡದ ಮೀಸಲಾತಿಗೆ ಒತ್ತಾಯಿಸಿ ಆಂದೋಲನ ನಡೆಸುತ್ತಿದೆ.

    Continue Reading

    LATEST NEWS

    ಡಿಜಿಟಲ್ ಅರೆಸ್ಟ್‌ಗೆ ಶಿಕ್ಷಕಿಗೆ ಹೃದಯಾಘಾತ : ಫೇಕ್ ಕಾಲ್‌ ಬಗ್ಗೆ ಇರಲಿ ಎಚ್ಚರ..!

    Published

    on

    ಮಂಗಳೂರು ( ಆಗ್ರಾ ) : “ನಿಮ್ಮ ಮಗಳು ಸೆಕ್ಸ್‌ ಜಾಲದಲ್ಲಿ ಭಾಗಿಯಾಗಿ ಸಿಕ್ಕಿಬಿದ್ದಿದ್ದಾಳೆ. ಆಕೆಯನ್ನು ಉಳಿಸಲು ರೂ.1 ಲಕ್ಷ ನೀಡಿ” ಇಂತಹ ಕರೆಯೊಂದನ್ನು ಸ್ವೀಕರಿಸಿದ ಮಹಿಳೆ ಹೃದಯಾಘಾತದಿಂದ ಮೃತ ಪಟ್ಟಿದ್ದಾರೆ. ಸರ್ಕಾರಿ ಬಾಲಕಿಯ ಜ್ಯೂನಿಯರ್ ಹೈಸ್ಕೂಲ್‌ನಲ್ಲಿ ಶಿಕ್ಷಕಿಯೂ ಆಗಿದ್ದ ಮಹಿಳೆ ಮಗಳ ಕುರಿತಾದ ಈ ಕರೆಯಿಂದ ಇಹಲೋಕ ತ್ಯಜಿಸಿದ್ದಾರೆ.

    ಸೆಪ್ಟಂಬರ್ 30 ರಂದು ಈ ಘಟನೆ ಆಗ್ರಾದಲ್ಲಿ ನಡೆದಿದ್ದು, 58 ವರ್ಷದ ಮಾಲ್ತಿ ವರ್ಮಾ ಎಂಬವರು ನಕಲಿ ಕರೆಯನ್ನೇ ಸತ್ಯವೆಂದು ನಂಬಿ ಹೃದಯಾಘಾತಕ್ಕೆ ಒಳಗಾಗಿದ್ದಾರೆ. ಮಾಲ್ತಿ ವರ್ಮಾ ಅವರನ್ನು ಡಿಜಿಟಲ್ ಅರೆಸ್ಟ್ ಮಾಡಿದ್ದ ನಕಲಿ ಪೊಲೀಸ್ ಅಧಿಕಾರಿ, ಆಕೆಗೆ ನಿರಂತರ ಕರೆ ಮಾಡಿದ್ದಾನೆ. ಮಗಳ ಕುರಿತಾಗಿ ಆತ ಹೇಳಿದ ವಿಚಾರವನ್ನು ಸತ್ಯ ಎಂದು ನಂಬಿದ ಆಕೆ ತೀವ್ರ ಆಘಾತಕ್ಕೆ ಒಳಗಾಗಿದ್ದಾರೆ.

    ಮಗನಿಗೆ ಕರೆ ಮಾಡಿ ಮಗಳು ಈ ರೀತಿಯಾಗಿ ಸಿಕ್ಕಿಬಿದ್ದಿದ್ದು, ಆಕೆಯ ಬಿಡುಗಡೆಗೆ ಹಣ ಬೇಕು ತಕ್ಷಣ ಹಣ ಹಾಕು ಅಂದಿದ್ದಾರೆ. ಆದ್ರೆ ಕಾಲ್ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದ ಮಗ ಇದೊಂದು ನಕಲಿ ಕಾಲ್ ಎಂಬುದಾಗಿ ತಾಯಿಗೆ ಮನವರಿಕೆ ಮಾಡಿದ್ದಾನೆ. ಆದ್ರೆ ವ್ಯಾಟ್ಸಾಪ್‌ ಡಿಪಿಯಲ್ಲಿ ಪೊಲೀಸ್ ಅಧಿಕಾರಿ ಫೋಟೋ ಹಾಕಿದ್ದ ವ್ಯಕ್ತಿ ಶಿಕ್ಷಕಿ ಮಾಲ್ತಿ ವರ್ಮಾ ಅವರಿಗೆ ಸತತ ನಾಲ್ಕು ಘಂಟೆಗಳ ಕಾಲ ಟಾರ್ಚರ್ ನೀಡಿದ್ದಾನೆ.

     

    ಮಾಲ್ತಿ ವರ್ಮಾ ಅವರಿಗೆ ಕರೆ ಮಾಡಿದ್ದ ನಂಬರ್ ಪಾಕಿಸ್ತಾನದ ಕೋಡ್ ಹೊಂದಿದ್ದು ಈ ಕರೆ ನಕಲಿ ಎಂದು ಮಾಲ್ತಿ ವರ್ಮಾ ಅವರಿಗೆ ಮನವರಿಕೆ ಮಾಡಲಾಗಿತ್ತು. ಆದ್ರೆ ಮಗಳ ಬಗ್ಗೆ ಬಂದ ಕೆಟ್ಟ ವಾರ್ತೆ ಕೇಳಿದ್ದ ತಾಯಿ ಮಾಲ್ತಿ ವರ್ಮಾ ಅವರಿಗೆ ಆಘಾತ ಆಗಿತ್ತು. ಜೊತೆಗೆ ಆರೋಪಿ ನಿರಂತರ ನಾಲ್ಕು ಘಂಟೆಗಳ ಕಾಲ ಕರೆ ಮಾಡಿ ಹಣಕ್ಕಾಗಿ ಬೇಡಿಕೆ ಇಟ್ಟಿದ್ದು ಕೂಡಾ ಇವರಿಗೆ ಘಾಸಿಯಾಗಿದೆ. ಈ ಡಿಜಿಟಲ್‌ ಅರೆಸ್ಟ್‌ನಿಂದ ಭಯ ಹಾಗೂ ಮಾನಸಿಕ ಒತ್ತಡಕ್ಕೆ ಒಳಗಾದ ಮಾಲ್ತಿ ವರ್ಮಾ ಅವರಿಗೆ ಮನೆಗೆ ಬಂದ ಬಳಿಕ ಹೃದಯಾಘಾತವಾಗಿದೆ. ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲಿಸಿದ್ರೂ ಚಿಕಿತ್ಸೆ ಫಲಕಾರಿ ಆಗದೆ ಇಹಲೋಕ ತ್ಯಜಿಸಿದ್ದಾರೆ. ಈ ಕುರಿತು ಸಮಗ್ರ ತನಿಖೆ ನಡೆಸಲಾಗುವುದು ಎಂದು ಆಗ್ರಾದ ಎಸಿಪಿ ಮಯಾಂಕ್ ತಿವಾರಿ ತಿಳಿಸಿದ್ದಾರೆ..

    Continue Reading

    LATEST NEWS

    3 ಸಾವಿರ ಹಣಕ್ಕೆ ಬಿತ್ತು 2 ಹೆ*ಣ; ಗೆಳೆಯರನ್ನೇ ಕೊಡಲಿಯಿಂದ ಕೊಚ್ಚಿ ಕೊಂ*ದ ಪಾಪಿ!

    Published

    on

    ಮಂಗಳೂರು/ಕೊಡಗು : ಕುಶಾಲನಗರ ತಾಲೂಕಿನ ಕೂಡು ಮಂಗಳೂರು ಗ್ರಾಮದ ಬಸವೇಶ್ವರ ಬಡಾವಣೆ ಕಳೆದ ರಾತ್ರಿ ರ*ಕ್ತಸಿಕ್ತವಾಗಿದೆ. ಕೊಡಲಿಯಿಂದ ಕೊಚ್ಚಿ ಇಬ್ಬರನ್ನು ಕೊ*ಲೆ ಮಾಡಲಾಗಿದೆ. ಓರ್ವ ಸ್ಥಳದಲ್ಲೇ ಮೃ*ತಪಟ್ಟಿದ್ದು, ಮತ್ತೋರ್ವನ ತಲೆಯ ಮೇಲೆ ಕೊಡಲಿ ತೂರಿತ್ತು. ಕೊಡಲಿ ಸಮೇತ ಆತನನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ತಲೆಯಿಂದ ಕೊಡಲಿ ತೆಗೆಯುತ್ತಿದ್ದಂತೆ ಆತ ಇಹಲೋಕ ತ್ಯಜಿಸಿದ್ದಾನೆ.

    ಗೆಳೆತನಕ್ಕೆ ಬೆಂಕಿ ಇಟ್ಟ ಹಣಕಾಸು ವ್ಯವಹಾರ:

    ಬಸವೇಶ್ವರ ಬಡವಾಣೆಯ ಜೋಸೆಫ್, ಅವನ ಪಕ್ಕದ ಮನೆಯ ಗಿರೀಶ್​ ಮತ್ತು ಸುಂದರ ನಗರದ ವಸಂತ್ ಮೂವರು ಸ್ನೇಹಿತರು. ಇವರ ಸ್ನೇಹ ನೆನ್ನೆ ಮೊನ್ನೆಯದಲ್ಲ. ಕಳೆದ 15-20 ವರ್ಷಗಳಿಂದ ಎಲ್ಲರೂ ಒಟ್ಟಿಗೇ ಕೆಲಸ ಮಾಡ್ತಾ ಇದ್ದವರು. ಮನೆ ಮನೆಗೆ ತೆರಳಿ ವೆಲ್ಡಿಂಗ್ ಮಾಡಿಕೊಡುವುದು, ಬಂದ ಹಣವನ್ನು ಹಂಚಿಕೊಳ್ಳುವುದು ಮಾಡುತ್ತಿದ್ದರು.

    ಕೆಲಸಕ್ಕೆ ಓಡಾಡಲೆಂದೇ ಜೋಸೆಫ್ ಆಟೋ ತೆಗೆದುಕೊಂಡಿದ್ದ. ಅದೇ ಆಟೋದಲ್ಲಿ ಎಲ್ಲರೂ ಒಟ್ಟಿಗೆ ಕೆಲಸಕ್ಕೆ ಹೋಗ್ತಾ ಇದ್ರು. ಆದ್ರೆ ಇತ್ತೀಚೆಗೆ ಕೆಲ ತಿಂಗಳಿನಿಂದ ಜೋಸೆಫ್ ಮತ್ತು ಗಿರೀಶನ ಮಧ್ಯೆ ಹಣಕಾಸು ವ್ಯವಹಾರಕ್ಕೆ ಸಂಬಂಧಪಟ್ಟಂತೆ ಭಿನ್ನಾಭಿಪ್ರಾಯ ತಲೆದೋರಿತ್ತು.

    ಗಿರೀಶ್​, ಜೋಸೆಫ್​ಗೆ 3 ಸಾವಿರ ರೂ ಕೊಡಬೇಕಿತ್ತು. ಹಲವು ಬಾರಿ ಹಣ ಕೇಳಿದ್ರೂ ಕೊಟ್ಟಿರಲಿಲ್ಲ. ಇದೇ ವಿಚಾರದಲ್ಲಿ ಜಗಳವಾಗಿ 15 ದಿನಗಳಿಂದ ಗಿರೀಶ, ಜೋಸೆಫ್​ ನ ಜೊತೆ ಕೆಲಸಕ್ಕೆ ಹೋಗುವುದನ್ನ ನಿಲ್ಲಿಸಿದ್ದ ಎನ್ನಲಾಗಿದೆ.

    ರಣಭೀ*ಕರ ಘಟನೆ :

    ನಿನ್ನೆ(ಅ.3) ಮಧ್ಯಾಹ್ನ ಕೂಡ ಜೋಸೆಫ್, ಗಿರೀಶನ ಬಳಿ ಹಣ ಕೊಡವಂತೆ ಕೇಳಿದ್ದ. ಕೊಡ್ತೀನಿ ಅಂತ ಸಮಾಧಾನದಿಂದಲೇ ಹೇಳಿದ್ದ. ಆದ್ರೆ ನಿನ್ನೆ ಸಂಜೆ 7.30ರ ಸುಮಾರಿಗೆ ಜೋಸೆಫ್​, ವಸಂತ್ ಮತ್ತು ಸಂಜು ಕೆಲಸ ಮುಗಿಸಿ ಆಟೋದಲ್ಲಿ ಮನೆಯ ಬಳಿ ಬಂದಿದ್ದಾರೆ. ಈ ಸಂದರ್ಭ ಅಲ್ಲೇ ಅಂಗಡಿ ಸಮೀಪ ನಿಂತಿದ್ದ ಮೋಹನ್ ಎಂಬಾತನ ಜೊತೆ ಮಾತನಾಡುವ ಸಲುವಾಗಿ ಜೋಸೆಫ್ ಆಟೋ ನಿಲ್ಲಿಸಿದ್ದಾನೆ.

    ಇದೇ ವೇಳೆ ಅಲ್ಲೇ ಇದ್ದ ಗಿರೀಶ್, ಪ್ಯಾಂಟ್ ಬಿಚ್ಚಿ ಜೋಸೆಫ್​ನತ್ತ ಅಸಹ್ಯವಾಗಿ ಸನ್ನೆ ಮಾಡಿದ್ದನಂತೆ. ಇದರಿಂದ ಕೋಪಗೊಂಡ ಜೋಸೆಫ್​ ಹೋಗಿ ಗಿರೀಶನಿಗೆ ಒದ್ದಿದ್ದಾನೆ. ಒದೆ ತಿಂದ ಗಿರೀಶ್ ಸೈಲೆಂಟಾಗಿ ಸೈಡ್​ಗೆ ಹೋಗಿದ್ದಾನೆ. ಅದಾದ ಬಳಿಕ ಜೋಸೆಫ್​, ವಸಂತ, ಸಂಜು ಆಟೋದಲ್ಲಿ ಅಲ್ಲಿಂದ 50 ಮೀಟರ್ ದೂರದಲ್ಲಿದ್ದ ತನ್ನ ಮನೆಯ ಬಳಿ ಬಂದು ಗಾಡಿ ನಿಲ್ಲಿಸಿದ್ದಾನೆ. ಇದೇ ಸಂದರ್ಭ ಕೊಡಲಿ ಹಿಡಿದು ಗಿರೀಶ್ ಆಟೋ ರಿಕ್ಷಾ ಹಿಂದೆ ಬಂದಿದ್ದು ಇವರಿಗೆ ಗೊತ್ತೇ ಆಗಲಿಲ್ಲ. ಜೋಸೆಫ್ ಆಟೋದಿಂದ ಇಳಿದು ಶರ್ಟ್​ ಬಿಚ್ಚಿ ಆಟೋ ಒಳಗೆ ಹಾಕುತ್ತಿದ್ದಂತೆ ಹಿಂಬದಿಯಿಂದ ಗಿರೀಶ್ ಕೊಡಲಿ ಬೀಸಿಯೇ ಬಿಟ್ಟಿದ್ದಾನೆ.

    ಇದನ್ನೂ ಓದಿ : BBK11: ಬಿಗ್​ಬಾಸ್​ ಮನೆಯಲ್ಲಿರೋ ಮಹಿಳಾ ಸ್ಪರ್ಧಿಗಳ ಖಾಸಗಿತನಕ್ಕೆ ಧಕ್ಕೆ; ಶೋ ವಿರುದ್ಧ ದೂರು ದಾಖಲು

    ಕುತ್ತಿಗೆ ಹಿಂಬದಿಗೆ ಬಲವಾದ ಪೆಟ್ಟುಬಿದ್ದು ಜೋಸೆಫ್ ಕುಸಿದಿದ್ದಾನೆ. ಅಲ್ಲೂ ಬಿಡದೆ ಬಿದ್ದಲ್ಲೆಗೆ ಮತ್ತೆ ಮೂರು ಬಾರಿ ಕೊ*ಚ್ಚಿದ್ದಾನೆ. ಇದೇ ಸಂದರ್ಭ ಆಟೋದಲ್ಲಿದ್ದ ವಸಂತ ಅಲಿಯಾಸ್ ಪುಟ್ಟ ಗಿರೀಶನನ್ನು ತಡೆಯಲು ಹೋಗಿದ್ದಾನೆ. ಆದ್ರೆ ಹುಚ್ಚನಂತಾಗಿದ್ದ ಗಿರೀಶ್​, ವಸಂತನ ತಲೆಗೆ ಒಂದೇ ಏಟಿಗೆ ಕೊಡಲಿ ಬೀಸಿದ್ದಾನೆ. ಕೊಡಲಿ ನೇರವಾಗಿ ವಸಂತನ ತಲೆಯೊಳಗೆ ಹೂತು ಹೋಗಿದೆ. ಅಷ್ಟರಲ್ಲಿ ಎಲ್ಲರೂ ಬಂದು ಗಿರೀಶನನ್ನ ಎಳೆದು ಹಾಕಿದ್ದಾರೆ.

    ಎಲ್ಲರೂ ಸೇರಿ ವಸಂತನನ್ನ ಮಡಿಕೇರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆಸ್ಪತ್ರೆಯಲ್ಲಿ ಕೊಡಲಿ ತೆಗೆಯುತ್ತಿದ್ದಂತೆ ವಸಂತ ಕೂಡ ಉಸಿರು ಚೆಲ್ಲಿದ್ದಾನೆ. ಘಟನೆ ಬಳಿಕ ಗಿರೀಶನನ್ನ ಕುಶಾಲನಗರ ಗ್ರಾಮಾಂತರ ಪೊಲೀಸರು ಬಂಧಿಸಿದ್ದಾರೆ. ಹಂತಕ ಗಿರೀಶನ ಗಾಂ*ಜಾ ವ್ಯಸನಿ. ಈಗಾಗಲೇ ಆತನ ವಿರುದ್ಧ ಹಲವು ಕೇಸ್​ ಕೂಡ ದಾಖಲಾಗಿದೆಯಂತೆ. ಸದ್ಯ ಕುಶಾಲನಗರ ಗ್ರಾಮಾಂತರ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ. ಈ ಭೀಭತ್ಸ ಕೃ*ತ್ಯಕ್ಕೆ ಕುಶಾಲನಗರ ಬೆಚ್ಚಿ ಬಿದ್ದಿದೆ.

    Continue Reading

    LATEST NEWS

    Trending