Connect with us

  DAKSHINA KANNADA

  ಇಂದಿನಿಂದ 3ದಿನಗಳ ಕಾಲ ಸಹ್ಯಾದ್ರಿ ಕ್ರೀಡಾಂಗಣದಲ್ಲಿ ಜಿಪಿಲ್‌ ಜಾಲಿ ರೈಡ್…

  Published

  on

  ಮಂಗಳೂರು: ಕೊಡಿಯಾಲ್ ಸ್ಪೋರ್ಟ್ಸ್ ಅಸೋಸಿಯೇಶನ್ ಫುಜ್ಲಾನಾ ಜಿಪಿಎಲ್ ಉತ್ಸವ-2022 ಕಾರ್ಯಕ್ರಮವನ್ನು ಇಂದು ನೇತ್ರಾವತಿ ನದಿ ತೀರದ ಸಹ್ಯಾದ್ರಿ ಕ್ರೀಡಾಂಗಣದಲ್ಲಿ ಆಯೋಜಿಸಿದೆ.

  ಕ್ರಿಕೆಟ್ ಪಂದ್ಯಾಟಗಳಿಗೆ ಗಣ್ಯರು ಚಾಲನೆ ನೀಡಲಿದ್ದಾರೆ.
  ಈ ಬಾರಿಯ ಟೂರ್ನಿಯಲ್ಲಿ ‘ಹೆಲಿ ಟೂರಿಸಂ’ ವಿಶೇಷ ಆಕರ್ಷಣೆಯಾಗಿದೆ.

  ಜಿಪಿಎಲ್ ಉತ್ಸವದಲ್ಲಿ 25 ಸಾವಿರದಷ್ಟು ಜಿಎಸ್‌ಬಿ ಸಮುದಾಯದವರು ಭಾಗವಹಿಸುವ ನಿರೀಕ್ಷೆಯಿದೆ.


  ಇಂದಿನಿಂದ ಫೆ. 27ರವರೆಗೆ ಈ ಟೂರ್ನಿ ನಡೆಯಲಿದ್ದು, ಕರ್ನಾಟಕ, ಮಹಾರಾಷ್ಟ್ರ, ಕೇರಳ, ತೆಲಂಗಾಣದ ಸೇರಿ ಕರಾವಳಿ ಕರ್ನಾಟಕವನ್ನು ಒಳಗೊಂಡ 16 ತಂಡಗಳು ಈ ಟೂರ್ನಿಯಲ್ಲಿ ಭಾಗವಹಿಸಲಿವೆ.


  ಜಿಪಿಎಲ್ ಉತ್ಸವದಲ್ಲಿ ಹೊನಲು ಬೆಳಕಿನ ಕ್ರಿಕೆಟ್ ಪಂದ್ಯಾಟ ಒಂದು ಭಾಗವಾದರೆ, ಇಡೀ ಉತ್ಸವ ವೈವಿಧ್ಯತೆ ಮೂಲಕ ಗಮನ ಸೆಳೆಯಲಿದೆ.


  ಹೆಲಿ ಟೂರಿಸಂ ವೈಶಿಷ್ಟ್ಯತೆ: ಶುಕ್ರವಾರದಿಂದ ಭಾನುವಾರದವರೆಗೆ ಹೆಲಿ ಟೂರಿಸಂ ಅವಕಾಶವನ್ನು ನೀಡಲಾಗಿದೆ. ಮಂಗಳೂರು ವಿಮಾನ ನಿಲ್ದಾಣದಲ್ಲಿರುವ ಎಟಿಸಿ (ಏರ್‌ಟ್ರಾಫಿಕ್ ಕಂಟ್ರೋಲ್) ನಿಯಂತ್ರಣದಲ್ಲಿ ಈ ಹೆಲಿಕಾಪ್ಟರ್ ಪ್ರಯಾಣಿಸಲಿದ್ದು,

  ಒಬ್ಬರಿಗೆ 10 ನಿಮಿಷಕ್ಕೆ 4 ಸಾವಿರ ರೂ. ದರ ವಿಧಿಸಲಾಗಿದೆ. ಏಕಕಾಲಕ್ಕೆ 6 ಮಂದಿಗೆ ಸಂಚರಿಸಬಹುದಾಗಿದೆ.

  ಫುಜ್ಲಾನಾ ಜಿಪಿಎಲ್ ಟೂರ್ನಿಯ ಮುಖ್ಯಸ್ಥರಾದ ನರೇಶ್ ಶೆಣೈ ಹೇಳುವಂತೆ ‘ಅಡ್ಯಾರ್ ಸಹ್ಯಾದ್ರಿ ಕ್ಯಾಂಪಸ್‌ನಿಂದ ಹೊರಟ ಈ ಹೆಲಿಕಾಪ್ಟರ್ ಉಳ್ಳಾಲ ಸೇತುವೆ, ಧಕ್ಕೆ, ಬೆಂಗರೆ, ಮಂಗಳೂರು ನಗರದಾದ್ಯಂತ ಸುತ್ತಾಡಿ ಮತ್ತೆ ಸಹ್ಯಾದ್ರಿ ಕ್ಯಾಂಪಸ್‌ನಲ್ಲೇ ಭೂಸ್ಪರ್ಶ ಆಗಲಿದೆ.

  ಸಾರ್ವಜನಿಕರ ಸ್ಪಂದನೆಯನ್ನು ಗಮನಿಸಿ ಸೋಮವಾರದವರೆಗೆ ಮುಂದುವರಿಸುವ ಬಗ್ಗೆ ಚಿಂತನೆ ನಡೆಸಲಾಗಿದೆ’.


  120ಕ್ಕೂ ಅಧಿಕ ಮಂದಿ ಬುಕ್ಕಿಂಗ್: ಹೆಲಿ ಟೂರಿಸಂಗೆ ಈಗಾಗಲೇ 120ಮಂದಿ ಬುಕ್ಕಿಂಗ್ ಮಾಡಿದ್ದು, ಅವರಿಗೆ ಸಮಯ ನಿಗದಿಪಡಿಸುವ ಅವಧಿಯಲ್ಲಿ ಹೆಲಿಕಾಪ್ಟರ್ ಪ್ರಯಾಣಕ್ಕೆ ಅವಕಾಶ ನೀಡಲಾಗಿದೆ.

  ಬೆಳಗ್ಗೆ 10ಗಂಟೆಯಿಂದ ಸಂಜೆ 6.00ಗಂಟೆಯವರೆಗೆ ಈ ಹೆಲಿಕಾಪ್ಟರ್ ನಗರ ಸಂಚಾರ ನಡೆಸಲಿದೆ.


  ಬೋಟಿಂಗ್, ಕಿಡ್‌ರೆನ್: ಹೆಲಿ ಟೂರಿಸಂ ಮಾತ್ರವಲ್ಲದೆ ನೇತ್ರಾವತಿಯಲ್ಲಿ ಬೋಟಿಂಗ್ ವ್ಯವಸ್ಥೆ, ಮಕ್ಕಳಿಗೆ ಆಟವಾಡಲು ಕಿಡ್‌ರೆನ್ ನಿರ್ಮಿಸಲಾಗಿದೆ. ಗೂಡುದೀಪ ಸ್ಪರ್ಧೆ, ಕಸದಿಂದ ರಸ,

  ಆಭರಣಗಳ ತಯಾರಿ, ಮೆಹಂದಿ, ಕ್ಲೇ ಮಾಡೆಲಿಂಗ್, ಹೂ ಅಲಂಕಾರ, ಕೇಶ ವಿನ್ಯಾಸ, ಡ್ರಾಯಿಂಗ್, ಕೊಲಾಜ್, ಜಿಎಸ್‌ಬಿ ಟ್ಯಾಲೆಂಟ್, ಅಡುಗೆ, ಪೋಸ್ಟರ್ ತಯಾರಿಕೆ,

  ಫ್ಯಾನ್ಸಿ ಡ್ರೆಸ್, ಟಗ್ ಆಫ್ ವಾರ್, ರಂಗೋಲಿ, ಮ್ಯೂಸಿಕ್ ವರ್ಕ್ ಶಾಪ್, ಹೌಸಿ ಹೌಸಿ ಸಹಿತ ಇನ್ನು ಹಲವು ಬಗೆಯ ಸ್ಪರ್ಧೆ ಆಯೋಜಿಸಲಾಗಿದೆ.

  ಜಿಪಿಎಲ್‌ನ ಆಕರ್ಷಣೆಗಳು (ಬಾಕ್ಸ್)
  * ಖಾದ್ಯಗಳನ್ನು ಉಣಬಡಿಸಲು ವಿಶಾಲವಾದ ಫುಡ್ ಕೋರ್ಟ್ ವ್ಯವಸ್ಥೆ ಮಾಡಲಾಗಿದ್ದು, 100ಕ್ಕೂ ಅಧಿಕ ಬಗೆಯ ತಿಂಡಿ-ತಿನಸುಗಳು, ಐಸ್ ಕ್ರೀಂಗಳು, ಹಣ್ಣುಹಂಪಲುಗಳ ಸಹಿತ ಮೊಕ್‌ಟೇಲ್ ರುಚಿ ಸವಿಯಬಹುದಾಗಿದೆ.


  * ಇನ್ನು ಕಲಾತ್ಮಕ ಮನಸ್ಸಿನ ಮಹಿಳೆಯರಿಗೆ ಮತ್ತು ಚಿಣ್ಣರಿಗಾಗಿ ಮತ್ತು ಪುರುಷರಿಗಾಗಿ ನಾನಾ ಸ್ಪರ್ಧೆಗಳು, ಮನರಂಜನಾ ಸ್ಪರ್ಧೆಗಳನ್ನು ಏರ್ಪಡಿಸಲಾಗಿದೆ.

  * ಗೋವಾ ಮತ್ತು ಕೊಚ್ಚಿ ಸಮುದ್ರ ತೀರಗಳಲ್ಲಿ ಮಾತ್ರ ಕಂಡು ಬರುವ ಫ್ಲೆ ಬೋರ್ಡನ್ನು ಈ ಬಾರಿ ಪರಿಚಯಿಸಲಾಗಿದೆ.
  * ತಜ್ಞರಿಂದ ಸಂವಾದ, ಶಾಪಿಂಗ್ ಮೇಳಾ, ಜಲಕ್ರೀಡೆ, ವೈವಾಹಿಕ (ಜ್ಯೋತಿಷ್ಯ ಸಹಿತ) ಸಂಬಂಧ, ಗೌಡ ಸಾರಸ್ವತ ಬ್ರಾಹ್ಮಣ ಸಮುದಾಯದ ಕಲೆ, ಸಂಸ್ಕೃತಿ ಪ್ರದರ್ಶನ ಕಾರ್ಯಕ್ರಮಗಳು.

  * ಜಿಎಸ್‌ಬಿ ಸಮುದಾಯದಲ್ಲಿ ಗೃಹ ಉತ್ಪನ್ನಗಳನ್ನು ತಯಾರಿಸಿ ಬದುಕು ಕಟ್ಟಿಕೊಂಡಿರುವ ಕಿರುವ್ಯಾಪಾರಿಗಳಿಗಾಗಿ ಪ್ರತ್ಯೇಕ ಸ್ಥಳ ನಿಗದಿಪಡಿಸಲಾಗಿದೆ.

  DAKSHINA KANNADA

  ಮಳೆಗಾಲದ ಸವಾಲು ಎದುರಿಸಲು ಮೆಸ್ಕಾಂನಿಂದ ವಿಶೇಷ ಕಾರ್ಯಪಡೆ; 800 ಸಿಬ್ಬಂದಿ, 53 ವಾಹನಗಳ ನಿಯೋಜನೆ

  Published

  on

  ಮ೦ಗಳೂರು: ವಿದ್ಯುತ್‌ ಪೂರೈಕೆಗೆ ಸ೦ಬ೦ಧಿಸಿದ೦ತೆ ಮಳೆಗಾಲದ ಸ೦ಭಾವ್ಯ ಸವಾಲುಗಳನ್ನು ಎದುರಿಸಲು ಮೆಸ್ಕಾ೦ ಸನ್ನದ್ದವಾಗಿದ್ದು, ಸುಗಮ ಮತ್ತು ಸುಲಲಿತ ಸೇವೆಗೆ ಅಗತ್ಯ ಎಲ್ಲಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಮಂಗಳೂರು ವಿದ್ಯಚ್ಛಕ್ತಿ ಸಬರಾಜು ಕಂಪನಿ (ಮೆಸ್ಕಾಂ) ವ್ಯವಸ್ಥಾಪಕ ನಿದೇ೯ಶಕರಾದ ಡಿ.ಪದ್ಮಾವತಿ ಅವರು ತಿಳಿಸಿದ್ದಾರೆ.

  ಈ ಕುರಿತು ಪತ್ರಿಕಾ ಪ್ರಕಟಣೆ ಹೊರಡಿಸಿ, ವಿಭಾಗವಾರು ತುರ್ತು ನಿರ್ವಹಣಾ ಕೆಲಸಗಳನ್ನು ನಿರ್ವಹಿಸಲು ಮೆಸ್ಕಾ೦ ವ್ಯಾಪ್ತಿಯ 4 ಜಿಲ್ಲೆಗಳಿಗೆ ಒಟ್ಟು 800 ಮ೦ದಿಯನ್ನೊಳಗೊಂಡ ವಿಶೇಷ ಕಾಯ೯ಪಡೆ ರಚಿಸಲಾಗಿದೆ. ತುರ್ತು ಸಂದರ್ಭದಲ್ಲಿ ಬಳಸಲು ಒಟ್ಟು 53 ವಾಹನಗಳನ್ನು ಹೆಚ್ಚುವರಿಯಾಗಿ ವ್ಯವಸ್ಥೆಗೊಳಿಸಲಾಗಿದೆ ಎಂದು ಹೇಳಿದ್ದಾರೆ.

  ವಿದ್ಯುತ್‌ ಸರಬರಾಜಿನಲ್ಲಿ ಯಾವುದೇ ವ್ಯತ್ಯಯ, ಸರಬರಾಜು ಮಾಗ೯ದಲ್ಲಿ ಅಪಾಯ, ಅವಘಡಗಳಾದಲ್ಲಿ ಸ೦ಪಕಿ೯ಸಬೇಕಾದ ದೂರವಾಣಿ ಸ೦ಖ್ಯೆಗಳನ್ನು ಈಗಾಗಲೇ ಪ್ರಕಟಿಸಲಾಗಿದೆ. ಇದಲ್ಲದೆ ಮೆಸ್ಕಾ೦ ಸಹಾಯವಾಣಿ 1912 ಅನ್ನು ಕೂಡಾ ಸ೦ಪಕಿ೯ಸಬಹುದಾಗಿದೆ ಎ೦ದು ತಿಳಿಸಿದ್ದಾರೆ.

  ವಿದ್ಯುತ್‌ ಸ೦ಪಕ೯ ಹಾಗೂ ಸರಬರಾಜು ವ್ಯವಸ್ಥೆ, ನಿರ್ವಹಣೆಯಲ್ಲಿರುವ ಲೋಪಗಳನ್ನು ಗುರುತಿಸಿ ತ್ವರಿತವಾಗಿ ದುರಸ್ತಿಗೊಳಿಸಲು ಕ್ರಮವಹಿಸುವ೦ತೆ ಮೆಸ್ಕಾ೦ ಎಲ್ಲಾ ಮುಖ್ಯ ಇಂಜಿನಿಯರ್‌ (ವಿ), ಅಧೀಕ್ಷಕ ಇಂಜಿನಿಯರ್‌ರವರುಗಳು, ಕಾರ್ಯನಿರ್ವಾಹಕ ಇಂಜಿನಿಯರ್‌ಗಳಿಗೆ ಸೂಚಿಸಲಾಗಿದೆ. ವಿದ್ಯುತ್‌ ಸರಬರಾಜು ವ್ಯವಸ್ಥೆಗೆ ಅಚಡಣೆಯಾಗುವ ಮತ್ತು ಅಪಾಯಕಾರಿಯಾಗಿರುವ ಮರ/ಕೊಂಬೆಗಳನ್ನು ಕತ್ತರಿಸುವ ಕೆಲಸ ಈಗಾಗಲೇ ಮಾಡಲಾಗಿದೆ.ಮಳೆಗಾಲದ ತುರ್ತು ನಿರ್ವಹಣಾ ಕೆಲಸಗಳನ್ನು ನಿರ್ವಹಿಸಲು ಅನುಕೂಲವಾಗುವಂತೆ ವಿದ್ಯುತ್‌ ಕ೦ಬಗಳು, ತ೦ತಿಗಳು, ಪರಿವತ೯ಕಗಳು ಸೇರಿದ೦ತೆ ಸಲಕರಣೆಗಳನ್ನು ಮೆಸ್ಕಾ೦ನ ಎಲ್ಲಾ ವಿಭಾಗಳಲ್ಲಿ ಸಾಕಷ್ಟು ಪ್ರಮಾಣದಲ್ಲಿ ದಾಸ್ತಾನು ಇರಿಸಲಾಗಿದೆ ಎ೦ದು ಅವರು ವಿವರಿಸಿದ್ದಾರೆ.

  ವಿಶೇಷ ಕಾರ್ಯಪಡೆ ಹಾಗೂ ವಾಹನಗಳು

  – ಮಂಗಳೂರು ಜಿಲ್ಲೆಗೆ ಸ೦ಬಂಧಿಸಿದಂತೆ, ಅತ್ತಾವರ- 40 ಮ೦ದಿಯ ಕಾಯ೯ಪಡೆ, 4 ವಾಹನಗಳು; ಕಾವೂರು- 71 ಮ೦ದಿಯ ಕಾರ್ಯಪಡೆ, 6 ವಾಹನಗಳು; ಪುತ್ತೂರು- 95 ಮ೦ದಿಯ ಕಾಯ೯ಪಡೆ,
  5 ವಾಹನಗಳು; ಬಂಟ್ವಾಳ- 113 ಮ೦ದಿಯ ಕಾಯ೯ಪಡೆ, 6 ವಾಹನಗಳು.
  – ಉಡುಪಿ ಜಿಲ್ಲೆಗೆ ಸ೦ಭವಿಸಿದ೦ತೆ ಉಡುಪಿ-65 ಮ೦ದಿಯ ಕಾಯ೯ಪಡೆ,  5 ವಾಹನಗಳು; ಕಾರ್ಕಳ-48 ಮ೦ದಿಯ ಕಾಯ೯ಪಡೆ, 4 ವಾಹನಗಳು; ಕುಂದಾಪುರ- 76 ಮ೦ದಿಯ ಕಾಯ೯ಪಡೆ, 2 ವಾಹನಗಳನ್ನು  ವ್ಯವಸ್ಥೆಗೊಳಿಸಲಾಗಿದೆ.
  – ಶಿವಮೊಗ್ಗಕ್ಕೆ ಜಿಲ್ಲೆಗೆ ಸ೦ಭವಿಸಿದ೦ತೆ, ಶಿವಮೊಗ್ಗ- 42 ಮ೦ದಿಯ ಕಾಯ೯ಪಡೆ, 2 ವಾಹನಗಳು; ಶಿಕಾರಿಪುರ- 21 ಮ೦ದಿಯ ಕಾಯ೯ಪಡೆ,  2 ವಾಹನಗಳು; ಭದ್ರಾವತಿ- 12ಮ೦ದಿಯ ಕಾಯ೯ಪಡೆ,  1  ವಾಹನ, ಸಾಗರ- 67 ಮ೦ದಿಯ ಕಾಯ೯ಪಡೆ,  6 ವಾಹನಗಳನ್ನು  ವ್ಯವಸ್ಥೆಗೊಳಿಸಲಾಗಿದೆ.
  – ಚಿಕ್ಕಮಗಳೂರು ಜಿಲ್ಲೆಗೆ ಸ೦ಭವಿಸಿದ೦ತೆ, ಚಿಕ್ಕಮಗಳೂರು- 80 ಮ೦ದಿಯ ಕಾಯ೯ಪಡೆ,  4 ವಾಹನಗಳು; ಕೊಪ್ಪ- 51 ಮ೦ದಿಯ ಕಾಯ೯ಪಡೆ, 3 ವಾಹನಗಳು; ಕಡೂರು 19 ಮ೦ದಿಯ ಕಾಯ೯ಪಡೆ, ಹಾಗೂ  3 ವಾಹನಗಳನ್ನು  ವ್ಯವಸ್ಥೆಗೊಳಿಸಲಾಗಿದೆ.

  ಮುಂಗಾರು ಪೂರ್ವದ ಗಾಳಿ ಮಳೆಗೆ ಈಗಾಗಲೇ ಮೆಸ್ಕಾ೦ ವ್ಯಾಪ್ತಿಯ ವಿವಿಧೆಡೆ ವಿದ್ಯುತ್‌ ಕ೦ಬಗಳು, ತ೦ತಿಗಳು, ಪರಿವತ೯ಕಗಳು ಸೇರಿದ೦ತೆ ಮೆಸ್ಕಾಂನ ಆಸ್ತಿಗಳಿಗೆ ಹಾನಿ ಸ೦ಭವಿಸಿದ್ದು, ಇವುಗಳನ್ನು ಸರಿಪಡಿಸುವ ಕಾಯ೯ ಸಮರೋಪಾದಿಯಲ್ಲಿ ನಡೆದಿದೆ. ಇದರ ಜತೆ ಜತೆಗೆ ಮುಂಗಾರು ಅವಧಿಯ ಸಂಭಾವ್ಯ ಸವಾಲುಗಳನ್ನು ಎದುರಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ.
  – ಡಿ.ಪದ್ಮಾವತಿ, ವ್ಯವಸ್ಥಾಪಕ ನಿರ್ದೇಶಕರು, ಮೆಸ್ಕಾಂ

  Continue Reading

  DAKSHINA KANNADA

  ಕುಟುಂಬ ರಾಜಕಾರಣದ ಬಗ್ಗೆ ಮತ್ತೆ ಕಿಡಿಕಾರಿದ ಕೆಎಸ್ ಈಶ್ವರಪ್ಪ

  Published

  on

  ಮಂಗಳೂರು: ಕರ್ನಾಟಕದಲ್ಲಿ ಅಪ್ಪ ಮಕ್ಕಳನ್ನು ಪಕ್ಷದಿಂದ ಮುಕ್ತ ಮಾಡಬೇಕು ಎಂಬ ನಿಟ್ಟಿನಲ್ಲಿ ನಾವು ಕೆಲಸ ಮಾಡುತ್ತಿದ್ದೇವೆ. ಬಿಜೆಪಿ ಪಕ್ಷದ ಶುದ್ಧೀಕರಣ ಆಗಬೇಕು. ಖಂಡಿತಾ ಆಗುತ್ತದೆ ಎಂದು ಮಾಜಿ ಸಚಿವ ಕೆ ಎಸ್ ಈಶ್ವರಪ್ಪ ಹೇಳಿದ್ದಾರೆ.

   

   

  ಮಂಗಳೂರಿನ ಪ್ರೆಸ್ ಕ್ಲಬ್‌ನಲ್ಲಿ ರಘುಪತಿ ಭಟ್ ಪರ ಅವರು ಮತಯಾಚಿಸಿ ಮಾತನಾಡಿದ ಅವರು, ಬಿಜೆಪಿ ದೇಶದಲ್ಲಿ ಒಂದು ಸಿದ್ದಾಂತವನ್ನು ಇಟ್ಟುಕೊಂಡು ಕೆಲಸ ಮಾಡುತ್ತಿದೆ. ಆದರೆ ಕರ್ನಾಟಕದಲ್ಲಿ ಇದಕ್ಕೆ ತಿಲಾಂಜಲಿ ಇಟ್ಟು ಬಿಜೆಪಿ ನಡೆದುಕೊಳ್ಳುತ್ತಿದೆ. ಕಾಂಗ್ರೆಸ್ ಸಂಸ್ಕೃತಿ ಕರ್ನಾಟಕ ಬಿಜೆಪಿಯಲ್ಲಿ ಬಂದಿರೋದು ನೋವು ತಂದಿದೆ ಎಂದರು.

  ಕರ್ನಾಟಕದಲ್ಲಿ ಹಿಂದುತ್ವ ಹಿಂದೆ ಸರಿದು ಜಾತೀಯತೆಗೆ ಸರಿಯುತ್ತಿರುವ ಸಂದರ್ಭ, ಪಕ್ಷ, ಹಿಂದುತ್ವ ಎಂದು ಬಯಸುವ ಎಲ್ಲ ಕಾರ್ಯಕರ್ತರು ರಘುಪತಿ ಭಟ್ ಪರ ಕೆಲಸ ಮಾಡಬೇಕು. ಬಿಜೆಪಿ ಶುದ್ಧೀಕರಣ ಆಗಬೇಕು. ರಘುಪತಿ ಗೆಲ್ಲುತ್ತಾರೆ. ಹಿಂದುತ್ವಕ್ಕೆ ಆಗುತ್ತಿರುವ ಅವಮಾನ, ರಘುಪತಿ ಭಟ್ ಹಾಗೂ ನನಗೆ ಆಗಿರುವ ಅನ್ಯಾಯ ಬಗ್ಗೆ ಎಲ್ಲರೂ ಗಮನಿಸುತ್ತಿದ್ದಾರೆ. ಕಾಂಗ್ರೆಸ್ ನಿಂದ ಬಂದ ಅಭ್ಯರ್ಥಿ ಗೆ ಟಿಕೆಟ್ ನೀಡಿರುವುದಕ್ಕೆ ಅರ್ಥವೇ ಇಲ್ಲ. ಹಿಂದುತ್ವದ ನೆಲೆ ಸ್ವಾರ್ಥಿಗಳ ಕೈ ಸೇರಿದೆ. ಇದನ್ನು ಮತ್ತೆ ಪಡೆಯಲು ಎಲ್ಲರೂ ಕೆಲಸ ಮಾಡಬೇಕು ಎಂದರು.

  ಇದು ವಿಶೇಷವಾದ ಚುನಾವಣೆ. ಬಿಜೆಪಿ ದೇಶದಲ್ಲಿ ಒಂದು ಸಿದ್ದಾಂತದಲ್ಲಿ ಕಾರ್ಯ ನಿರ್ವ ಹಿಸುತ್ತಿದ್ದರೆ ರಾಜ್ಯದಲ್ಲಿ ಅದಕ್ಕೆ ತಿಲಾಂಜಲಿ ಇಟ್ಟು ಕಾರ್ಯ ನಿರ್ವಹಿಸುತ್ತಿದೆ. ಜನತಾ ಪಕ್ಷ ಕಟ್ಟಿದ್ದು ಇತಿಹಾಸ. ವಿಶ್ವವನ್ನು ಒಂದು ಗೂಡಿ ಸುವ ನಿಟ್ಟಿನಲ್ಲಿ ಕಾಂಗ್ರೆಸ್ ನ ಕುಟುಂಬ ರಾಜಕೀಯದ ವಿರುದ್ಧ ಕೆಲಸ ಆಗುತ್ತಿದ್ದರೆ, ಕರ್ನಾಟಕದಲ್ಲಿ ಬಿಜೆಪಿ ಅಪ್ಪ ಮಕ್ಕಳ ಕೈಯಲ್ಲಿದೆ. ಇದರ ನೋವಲ್ಲಿ ಕಾರ್ಯಕರ್ತರಿದ್ದಾರೆ ಎಂದರು.

  ಬಿಜೆಪಿಯಲ್ಲಿ ಕುಟುಂಬ ರಾಜಕಾರಣ ಮಿತಿಮೀರಿದೆ. ವಿಧಾನಸಭಾ ಚುನಾವಣೆಯ ವೇಳೆಯೂ 45 ವರ್ಷಗಳಿಂದ ನನ್ನ ಜೊತೆ ಕೆಲಸ ಮಾಡಿದ ಉಡುಪಿಯ ರಘುಪತಿ ಭಟ್ ಗೆ ನೋವಾಗಿದೆ. ನನಗಾದರೂ ದೆಹಲಿಯಿಂದ ಕರೆ ಬಂದಿತ್ತು. ರಘುಪತಿ ಭಟ್ ಗೆ ಅದೂ ಬಂದಿಲ್ಲ. ಅವರು ಪಕ್ಷ ನಿಷ್ಠೆ ಬಿಟ್ಟಿಲ್ಲ. ಈ ಚುನಾವಣೆಯಲ್ಲಿ ಮತ್ತೆ ಅನ್ಯಾಯವಾಗಿದೆ ಎಂದರು.

  Continue Reading

  DAKSHINA KANNADA

  ವಾಟ್ಸ್​ಆ್ಯಪ್‌ನಲ್ಲಿ ವಿಡಿಯೋ ಸ್ಟೇಟಸ್ ಹಾಕುವವರಿಗೆ ಸಿಹಿ ಸುದ್ದಿ

  Published

  on

  ಮಂಗಳೂರು: ಜನಪ್ರಿಯ ಮೆಟಾ ಒಡೆತನದ ವಾಟ್ಸ್​ಆ್ಯಪ್‌ ತನ್ನ ಬಳಕೆದಾರರಿಗೆ ಸಿಹಿ ಸುದ್ದಿ ನೀಡಿದೆ. ಸ್ಟೇಟಸ್‌ ಅವಧಿಯನ್ನ ಇದೀಗ ಒಂದು ನಿಮಿಷಕ್ಕೆ ಏರಿಕೆ ಮಾಡಿದೆ.

  ವಿಶ್ವದಾದ್ಯಂತ ಬಹುಸಂಖ್ಯಾ ಬಳಕೆದಾರರನ್ನು ಹೊಂದಿರುವ ಎಲ್ಲರ ನೆಚ್ಚಿನ ಮೆಸೇಜಿಂಗ್ ಅಪ್ಲಿಕೇಷನ್ ವಾಟ್ಸ್​ಆ್ಯಪ್ ಹೊಸ ಹೊಸ ಫೀಚರ್ಸ್​​ ಪರಿಚಯಿಸುತ್ತಿದೆ​. ಅದರೀಗ ಬಳಕೆದಾರರನ್ನು ಗಮನದಲ್ಲಿಟ್ಟುಕೊಂಡು ವಾಟ್ಸ್​ಆ್ಯಪ್ ಸ್ಟೇಟಸ್‌ನಲ್ಲಿ ಪ್ರಮುಖ ಬದಲಾವಣೆ ತಂದಿದೆ. ಅದರಂತೆ ಸ್ಟೇಟಸ್​ ವಿಡಿಯೋ ಮಿತಿಯನ್ನು ಏರಿಕೆ ಮಾಡಿದೆ.

  ಹೌದು. ವಾಟ್ಸ್​ಆ್ಯಪ್​ ಬಳಸುವವರು ಇದೀಗ 1 ನಿಮಿಷ ಅವಧಿಯ ವಿಡಿಯೋಗಳನ್ನು ಸ್ಟೇಟಸ್‌ನಲ್ಲಿ ಅಪ್ಲೋಡ್​ ಮಾಡಬಹುದಾಗಿದೆ. ಆ ಮೂಲಕ ಧೀರ್ಘ ಅವಧಿಯ ವಿಡಿಯೋ ಹಂಚಿಕೊಳ್ಳಬಹುದಾಗಿದೆ.

  ಅಂದಹಾಗೆಯೇ ವಾಟ್ಸ್​ಆ್ಯಪ್​ನಲ್ಲಿ​ ಈ ಮೊದಲು 30 ಸೆಕೆಂಡ್‌ಗಳ ವಿಡಿಯೋವನ್ನು ಸ್ಟೇಟಸ್‌ ಹಾಕಿಕೊಳ್ಳಬಹುದಾಗಿತ್ತು. ಆದರೀಗ ಅವಧಿಯನ್ನು ಹೆಚ್ಚಿಸಿದೆ. ಆಂಡ್ರಾಯ್ಡ್ ಆವೃತ್ತಿ 2.24.7.6 ವರ್ಷನ್ ಅಪ್‌ಡೇಟ್‌ ಮಾಡುವ ಮೂಲಕ ನೂತನ ಫೀಚರ್ಸ್​ ಬಳಕೆಗೆ ಸಿಗಲಿದೆ. ಇನ್ನು ಐಫೋನ್ ಬಳಕೆದಾರರು iOS 24.10.10.74ಗೆ ಅಪ್‌ಡೇಟ್‌ ಮಾಡುವ ಮೂಲಕ ಹೊಸ ಫೀಚರ್‌ ಬಳಸಬಹುದಾಗಿದೆ.

  Continue Reading

  LATEST NEWS

  Trending