Friday, August 19, 2022

ಉಕ್ರೇನ್ ನಲ್ಲಿ ಸಿಲುಕಿರುವ ಮಂಗಳೂರು ಮೂಲದ ವಿದ್ಯಾರ್ಥಿಗಳ ರಕ್ಷಣೆಗೆ ಪೋಷಕರ ಮನವಿ..!

ಮಂಗಳೂರು : ಉಕ್ರೇನ್ ಮೇಲೆ ರಷ್ಯಾ ಸಮರ ಸಾರಿದ್ದು ಈಗಾಗಲೇ ಅಪಾರ ಸಾವು ನೋವುಗಳು ಸಂಭವಿಸಿವೆ.  ಈ ಮಧ್ಯೆ ಉಕ್ರೇನ್ ನಲ್ಲಿ ಮಂಗಳೂರು ಮೂಲದ ಇಬ್ಬರು ವೈದ್ಯಾಕೀಯ ವಿದ್ಯಾರ್ಥಿಗಳು ಸಿಲುಕಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ.

ನಗರದ ದೇರೆಬೈಲ್ ನ ಅನೈನಾ ಹಾಗು ಪಡೀಲ್ ನ ಕ್ಲಾಟನ್ ಡಿಸೋಜ ಅಪಾಯದ ಅಂಚಿನಲ್ಲಿ ಸಿಲುಕೊಂಡಿದ್ದ ವಿದ್ಯಾರ್ಥಿಗಳಾಗಿದ್ದಾರೆ.

ಈ ಕುರಿತು ಆ ವಿದ್ಯಾರ್ಥಿಯ ತಾಯಿ ಕ್ಲೇಟನ್ ನೋವು ತೋಡಿಕೊಂಡಿದ್ದಾರೆ. ಕ್ಲೇಟನ್ ಸದ್ಯ ಉಕ್ರೇನ್ ಕ್ಯಾಪಿಟಲ್ ಕೀವ್ ನಗರದಲ್ಲೇ ಇದ್ದಾನೆ.

ಬೆಳಗ್ಗೆ ಅವನು ಅಷ್ಟು ಪ್ಯಾನಿಕ್ ಆಗಿರಲಿಲ್ಲ, ಆದರೆ ಈಗ ಸ್ವಲ್ಪ ಭಯದಲ್ಲಿ ಇದ್ದಾನೆ. ಬೆಳಗ್ಗೆ 9 ಗಂಟೆಯಿಂದ ಪ್ರತಿ ಅರ್ಧ ಗಂಟೆಗೊಮ್ಮೆ ಅವನು ನಮ್ಮ ಜೊತೆ ಮಾತನಾಡ್ತಿದಾನೆ.

ಈಗ ಅವರ ಹತ್ತಿರದಲ್ಲಿ ಒಂದು ಏರ್ ಪೋರ್ಟ್ ನಲ್ಲಿ ದೊಡ್ಡ ಮಿಸೈಲ್ ದಾಳಿ ಆಗಿದೆ.  ಅವನು ಡಿಸೆಂಬರ್ ಮೊದಲ ವಾರದಲ್ಲಿ ಅಲ್ಲಿಗೆ ಹೋಗಿದ್ದ. ಇಲ್ಲಿನ ಮಾಧ್ಯಮಗಳಲ್ಲಿ ಯುದ್ದ ಪರಿಸ್ಥಿತಿ ಬಗ್ಗೆ ಬರ್ತಾ ಇತ್ತು. ಆದರೆ ಅವನು ಹಾಗೆ ಇಲ್ಲ ಅಂದಿದ್ದ.

ಈಗ ಮಿಸೈಲ್ ದಾಳಿ ಆದ ಜಾಗ 200 ಕಿ.ಮೀ ದೂರದಲ್ಲಿ ಇದೆ. ದಿನನಿತ್ಯ ಚಟುವಟಿಕೆ ಬಂದ್ ಆಗುತ್ತೆ ಅನ್ನೋ ಭಯದಲ್ಲಿ ಅವರು ಇದ್ದಾರೆ. ಭಾರತೀಯ ರಾಯಭಾರಿ ಕಚೇರಿ ಅವರ ಸಂಪರ್ಕದಲ್ಲಿ ಇದೆ.

ಆದಷ್ಟು ಶೀಘ್ರ ಬೇರೆ ಕಡೆ ಕರೆದುಕೊಂಡು ಹೋಗುವ ಭರವಸೆ ನೀಡಿದ್ದಾರೆ. ಸದ್ಯ ಅಷ್ಟು ಆತಂಕ ಇಲ್ಲವಾದ್ರೂ ಯಾವುದೇ ಕ್ಷಣದಲ್ಲಿ ಪರಿಸ್ಥಿತಿ ಕೈ ಮೀರಬಹುದು.

ಸರ್ಕಾರ ದಯವಿಟ್ಟು ಆದಷ್ಟು ಬೇಗ ನಮ್ಮ ಮಗನನ್ನ ಕರೆ ತರಲಿ. ಡಿಸಿಗೆ ಸಂಪರ್ಕ ಮಾಡಿದ್ದೇವೆ, ದಯವಿಟ್ಟು ಇಲ್ಲಿಗೆ ಕರೆದು ಕೊಂಡು ಬನ್ನಿ ಎಂದು  ಮನವಿ ಮಾಡಿದ್ದಾರೆ.

ಈ ಬಗ್ಗೆ ಪ್ರತಿಕ್ರೀಯಿಸಿರುವ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ.ಕೆ.ವಿ ರಾಜೇಂದ್ರ ಅವರು  ರಷ್ಯಾ ಹಾಗು ಉಕ್ರೇನ್ ಸಂಘರ್ಷವು ತಾರಕ್ಕೇರಿದ್ದು ಈ ನಡುವೆ ಮಂಗಳೂರು ಮೂಲದ ಇಬ್ಬರು ಎಂಬಿಬಿಎಸ್ ವಿದ್ಯಾರ್ಥಿಗಳು ಉಕ್ರೇನ್ ಸಿಲುಕಿಕೊಂಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಅವರ ಜೊತೆ ಸಂಪರ್ಕ ಮಾಡಲಾಗಿದ್ದು ಆ ಇಬ್ಬರು ವಿದ್ಯಾರ್ಥಿಗಳನ್ನು ಮರಳಿ ಸುರಕ್ಷಿತವಾಗಿ ತವರಿಗೆ ಕರೆತರುವ ಕೆಲಸವನ್ನು ಸರಕಾರ ಹಾಗು ಜಿಲ್ಲಾಡಳಿತದ ಮಾಡಲಿದೆ ಎಂದಿದ್ದಾರೆ.

ಇನ್ನು ದಕ್ಷಿಣ ಕನ್ನಡ ಜಿಲ್ಲೆಯ ಯಾರಾದರೂ ನಾಗರಿರು ಉಕ್ರೇನ್ ನಲ್ಲಿ ಸಿಲುಕಿಕೊಂಡಿದ್ರೆ ಅವರ ಕುರಿತು ಮಾಹಿತಿ ನೀಡಲು ಸಹಾಯವಾಣಿ ನಂಬರ್ 91 94808 02301ನ್ನು ಸಂಪರ್ಕ ಮಾಡುವಂತೆ ಮತ್ತು ದ.ಕ. ಜಿಲ್ಲಾಧಿಕಾರಿ ಕಚೇರಿಯ ಕಂಟ್ರೋಲ್ ರೂಂ ನಂ. 1077ಕ್ಕೆ ಕರೆ ಮಾಡಿ ಮಾಹಿತಿ ನೀಡಬಹುದು.

ಅದೇ ರೀತಿ ಹತ್ತಿರದ ತಹಶೀಲ್ದಾರರ ಕಚೇರಿ ಹಾಗೂ ಜಿಲ್ಲಾಧಿಕಾರಿ ಕಚೇರಿಗೂ ಮಾಹಿತಿ ನೀಡುವಂತೆ  ಜಿಲ್ಲಾಧಿಕಾರಿಗಳು ಮನವಿ ಮಾಡಿದ್ದಾರೆ.

LEAVE A REPLY

Please enter your comment!
Please enter your name here

Hot Topics

ಪುಂಡ ಕಾಂಗ್ರೆಸ್ಸಿಗರೇ ನಿಮಗೆ ಎಚ್ಚರಿಕೆ ಕೊಡ್ತೇನೆ ಎಂದ ಯಶ್ಪಾಲ್‌ ಸುವರ್ಣ

ಮಂಗಳೂರು: ಇವತ್ತಿನ ಪೀಳಿಗೆಗೆ ಸಾವರ್ಕರ್ ಅವರ ಆದರ್ಶ, ಕೊಡುಗೆಗಳನ್ನು ತಿಳಿಸುವ ನಿಟ್ಟಿನಲ್ಲಿ ನಾವು ಕೇವಲ ಆ ಭಾಗದಲ್ಲಿ ಫ್ಲೆಕ್ಸ್ ಮಾತ್ರವಲ್ಲ,ಪುತ್ಥಳಿ ನಿರ್ಮಾಣಕ್ಕೆ ಅನುಮತಿ ಕೋರಿ ಉಡುಪಿ ನಗರ ಸಭೆಗೆ ಪತ್ರವನ್ನು ಬರೆದಿದ್ದೇವೆ ಎಂದು...

ಕೆಎಂಎಫ್‌ನಲ್ಲಿ ಕೆಲಸ ಕೊಡಿಸುತ್ತೇನೆಂದು 3.50 ಕೋ.ರೂ ವಂಚಿಸಿದ ರಾಮ್‌ಪ್ರಸಾದ್‌ ಸೇರಿ ನಾಲ್ವರ ವಿರುದ್ಧ FIR

ಮಂಗಳೂರು: ಕೆಎಂಎಫ್‌ನಲ್ಲಿ ಕೆಲಸ ಕೊಡಿಸುತ್ತೇನೆಂದು 100ಕ್ಕೂ ಅಧಿಕ ಮಂದಿಗೆ ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಮ್‌ ಪ್ರಸಾದ್‌ ಸೇರಿ ಒಟ್ಟು ನಾಲ್ವರ ಮೇಲೆ ಮಂಗಳೂರು ನಗರ ಸೆನ್‌ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ರಾಮ್‌ ಪ್ರಸಾದ್‌...

E-Court ಸೇವೆಯಲ್ಲಿ ತಾಂತ್ರಿಕ ವ್ಯತ್ಯಯ: ಲೋಪ ಸರಿಪಡಿಸಲು ಮಂಗಳೂರು ವಕೀಲರ ಸಂಘ ಮನವಿ

ಮಂಗಳೂರು: ಕಳೆದ ಸುಮಾರು 3-4 ವಾರಗಳಿಂದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇ-ಕೋರ್ಟ್ ಸೇವೆ ವ್ಯತ್ಯಯ ಉಂಟಾಗಿದೆ. ಈ ಸಮಸ್ಯೆಯಿಂದ ಸಾವಿರಾರು ವಕೀಲರಿಗೆ ಹಾಗೂ ಕಕ್ಷಿದಾರರಿಗೆ ಅಗತ್ಯ ಮಾಹಿತಿಯನ್ನು ಪಡೆದುಕೊಳ್ಳಲು ಅಡ್ಡಿಯಾಗಿದೆ. ಆದ್ದರಿಂದ ಕೇಂದ್ರ...