Connect with us

    LATEST NEWS

    ಕೊಡಗು: ಗಾಳಿ-ಮಳೆಯಿಂದ ಅಪಾರ ಹಾನಿ, ಜನ ಜೀವನ ಅಸ್ತವ್ಯಸ್ತ; ಸ್ಥಳಾಂತರ

    Published

    on

    ಕೊಡಗು:  ಜಿಲ್ಲೆಯ ಹಲವು ಕಡೆ ಎಡೆಬಿಡದೆ ಸುರಿಯುತ್ತಿರುವ ಗಾಳಿ ಮಳೆಗೆ ವಿದ್ಯುತ್ ಕಂಬಗಳು ನೆಲಕ್ಕುರುಳಿದೆ.  ವಿದ್ಯುತ್ ತಂತಿ ತಗುಲಿ ಒಂದು ಗೋವು ಮೃತಪಟ್ಟಿದೆ.

    ಪ್ರವಾಸಿಗರು ಹಾಗೂ ಟ್ಯಾಕ್ಸಿ ಚಾಲಕರು ಸೋಮವಾರಪೇಟೆಯ ರೆಸ್ಟೋರೆಂಟ್ ಸಮೀಪ ಪಾರ್ಕ್ ಮಾಡಿದ್ದ ಕಾರುಗಳ ಮೇಲೆ ಮರ ಉರುಳಿ ಬಿದ್ದು ಸುಮಾರು ಆರು ಕಾರುಗಳು ಜಖಂ ಗೊಂಡಿದೆ. ಚೌಡ್ಲು ಎಂಬ ಗ್ರಾಮದಲ್ಲಿ ಸುರೇಶ್ ಎಂಬವರಿಗೆ ಸೇರಿದ 3 ತಿಂಗಳ ಗಬ್ಬದ ಹಸುವೊಂದು ಗಾಳಿಯ ರಭಸಕ್ಕೆ ಬಿದ್ದ ವಿದ್ಯುತ್ ಕಂಬದ ತಂತಿ ತಗುಲಿ ಮೃತಪಟ್ಟಿದೆ. ಇನ್ನು ಕುಶಾಲನಗರ ತಾಲೂಕಿನ ಗುಡ್ಡೆಹೊಸೂರು ಗ್ರಾ.ಪಂ ವ್ಯಾಪ್ತಿಯ ಅತ್ತೂರು ಗ್ರಾಮದಲ್ಲಿ ಜನಾರ್ದನ್ ಎಂಬವರ ಮನೆಯ ಗೋಡೆ ಕುಸಿದು ಬಿದ್ದಿದೆ. ಕುಶಾಲನಗರ ತಾಲೂಕು ತಹಶೀಲ್ದಾರ್ ಹಾಗೂ ಗುಡ್ಡೆಹೊಸೂರು ಗ್ರಾ.ಪಂ ಅಧಿಕಾರಿ, ಕಂದಾಯ ನಿರೀಕ್ಷಕ ಹಾಗೂ ಗ್ರಾಮ ಲೆಕ್ಕಾಧಿಕಾರಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

    ವಿದ್ಯುತ್ ತಂತಿಯಲ್ಲಿ ಜೀ*ವ ಕಳೆದುಕೊಂಡ ಹೆಬ್ಬಾವು..!

    ಸಂಪಾಜೆಯ ಹೋಬಳಿ ಗ್ರಾಮದ ಆಯಿಷಾ ಎಂಬವರ ಮನೆ ಕುಸಿತ ಗೊಂಡಿದೆ. ಅಪಾಯದ ಮುನ್ಸೂಚನೆ ಇರುವುದರಿಂದ ಅವರನ್ನು ಸ್ಥಳಾಂತರ ಮಾಡಲಾಗಿದೆ. ಜಿಲ್ಲೆಯ ಹಲವು ಗ್ರಾಮಗಳಲ್ಲಿ ಗಾಳಿ ಮಳೆಯಿಂದಾಗಿ ವಿದ್ಯುತ್ ಕಂಬಗಳು ಧರೆಗುರುಳಿದ್ದು, ಕೆಲವು ಕಡೆ ವಿದ್ಯುತ್ ಕೊರತೆ ಎದುರಾಗಿದೆ. ತಲಕಾವೇರಿ, ಭಾಗಮಂಡಲ, ನಾಪೊಕ್ಲು ವ್ಯಾಪ್ತಿಯಲ್ಲಿ ಧಾರಾಕಾರ ಮಳೆ ಸುರಿಯುತ್ತಿದೆ. ಆದರೆ ಯಾವುದೇ ಅಪಾಯ ಕಂಡುಬಂದಿಲ್ಲ.

    ಸ್ಥಳೀಯರಲ್ಲಿ ಎಚ್ಚರಿಕೆ ಮೂಡಿಸಿದ ಜಿಲ್ಲಾಡಳಿತ:
    ಜಿಲ್ಲೆಯ ಗುಡ್ಡ, ತಗ್ಗು ಪ್ರದೇಶ, ನದಿಯ ಆಸುಪಾಸಿಪಾಸಿನಲ್ಲಿ ವಾಸಿಸುತ್ತಿರುವ ಜನರು ಭಯಭೀತಗೊಂಡಿದ್ದಾರೆ. ಜಿಲ್ಲಾಡಳಿತ ಸ್ಥಳೀಯ ಜನರಿಗೆ ಎಚ್ಚರಿಕೆಯಿಂದ ಇರುವಂತೆ ಸೂಚನೆ ನೀಡಿದೆ. ಎನ್‌ಡಿಆರ್‌ಎಫ್, ಅಗ್ನಿ ಶಾಮಕ ದಳ, ಪೊಲೀಸ್ ಇಲಾಖೆ, ಕಂದಾಯ ಇಲಾಖೆಗಳು ಸೇರಿದಂತೆ ಅಧಿಕಾರಿಗಳು ಸನ್ನದ್ಧರಾಗಿರಬೇಕೆಂದು ಜಿಲ್ಲಾಧಿಕಾರಿಗಳು ಸೂಚನೆ ನೀಡಿದ್ದಾರೆ.

    FILM

    ನಟಿ ಅಮೂಲ್ಯ ಸಹೋದರ ದೀಪಕ್ ಅರಸ್ ನಿಧನ

    Published

    on

    ಬೆಂಗಳೂರು : ನಟಿ ಅಮೂಲ್ಯ ಅವರ ಸಹೋದರ ದೀಪಕ್ ಅರಸ್ ನಿಧನರಾಗಿದ್ದಾರೆ. ಅವರು ಅನಾರೋಗ್ಯದಿಂದ ಬಳಲುತ್ತಿದ್ದರು ಎಂದು ತಿಳಿದುಬಂದಿದೆ. ಅವರಿಗೆ 42 ವರ್ಷ ವಯಸ್ಸಾಗಿತ್ತು.

    ದೀಪಕ್ ಅರಸ್ ಅವರಿಗೆ ಕಿಡ್ನಿ ವೈಫಲ್ಯ ಆಗಿತ್ತು. ಅದಕ್ಕೆ ಅವರು ಡಯಾಲಿಸಿಸ್ ಮಾಡಿಸುತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿ ಆಗದೆ
    ಬೆಂಗಳೂರಿನ ಆರ್​ ಆರ್​ ನಗರದ ಖಾಸಗಿ ಆಸ್ಪತ್ರೆಯಲ್ಲಿ ದೀಪಕ್ ಸಾವನ್ನಪಿದ್ದಾರೆ.

    ‘ಮನಸಾಲಜಿ’, ‘ಶುಗರ್​ ಫ್ಯಾಕ್ಟರಿ’ ಸಿನಿಮಾಗಳಿಗೆ ದೀಪಕ್ ನಿರ್ದೇಶನ ಮಾಡಿದ್ದರು. ದೀಪಕ್ ಅರಸ್ ಅವರಿಗೆ ಮದುವೆ ಆಗಿ ಇಬ್ಬರು ಮಕ್ಕಳು ಇದ್ದಾರೆ.

    Continue Reading

    LATEST NEWS

    ಭಾರತದ ಮುಖ್ಯ ನ್ಯಾಯಮೂರ್ತಿಯಾಗಿ ಸಂಜೀವ್ ಖನ್ನಾ ಹೆಸರು ಶಿಫಾರಸು..!

    Published

    on

    ನವದೆಹಲಿ : ನವೆಂಬರ್ 8 ರಂದು ನಿವೃತ್ತಿಯಾಗಲಿರುವ ಭಾರತದ ಮುಖ್ಯ ನ್ಯಾಯಮೂರ್ತಿ ಜಸ್ಟಿಸ್‌ ಡಿವೈ ಚಂದ್ರಚೂಡ್‌ ಅವರು ತಮ್ಮ ಉತ್ತರಾಧಿಕಾರಿಯಾಗಿ ಹಿರಿಯ ನ್ಯಾಯಮೂರ್ತಿ ಸಂಜೀವ್ ಖನ್ನಾ ಅವರನ್ನು ನೇಮಮಿಸುವಂತೆ ಶಿಫಾರಸು ಮಾಡಿದ್ದಾರೆ. ಡಿವೈ ಚಂದ್ರಚೂಡ್ ಅವರ ನಿವೃತ್ತಿಯ ಹಿನ್ನೆಲೆಯಲ್ಲಿ ಮೆಮೊರಾಂಡಮ್ ಆಫ್‌ ಪ್ರೊಸೀಜರ್ ಪ್ರಕಾರ ಶಿಫಾರಸು ಕಳುಹಿಸುವಂತೆ ಸರ್ಕಾರ, ಮುಖ್ಯ ನ್ಯಾಯಮೂರ್ತಿಗಳಿಗೆ ಪತ್ರ ಬರೆದಿತ್ತು. ಡಿವೈ ಚಂದ್ರಚೂಡ್‌ ಅವರ ಶಿಫಾರಸನ್ನು ಸರ್ಕಾರ ಅನುಮೋದಿಸಿದ ಬಳಿಕ ನ್ಯಾಯಮೂರ್ತಿ ಸಂಜೀನ್ ಖನ್ನಾ ಅವರು ಭಾರತ 51 ನೇ ಮುಖ್ಯ ನ್ಯಾಯಮೂರ್ತಿಯಾಗಿ ನೇಮಕವಾಗಲಿದ್ದಾರೆ. ಖನ್ನಾ ಅವರಿಗೆ ನ್ಯಾಯಮೂರ್ತಿಯಾಗಿ ಸೇವೆ ಸಲ್ಲಿಸಲು ಕೇವಲ ಆರು ತಿಂಗಳ ಅವಕಾಶ ಮಾತ್ರ ದೊರೆತಿದ್ದು ಅವರು 2025 ಮೇ 13 ರಂದು ನಿವೃತ್ತಿಯಾಗಲಿದ್ದಾರೆ.


    ಸಂಜೀವ್ ಖನ್ನಾ ಅವರ ವೃತ್ತಿ ಜೀವನ :

    1983 ರಲ್ಲಿ ದೆಹಲಿಯ ಬಾರ್ ಕೌನ್ಸಿಲ್‌ ಮೂಲಕ ವಕೀಲ ವೃತ್ತಿ ಆರಂಭಿಸಿದ್ದ ಖನ್ನಾ ಬಳಿಕ ತೀಸ್ ಹಜಾರಿ ಜಿಲ್ಲಾ ನ್ಯಾಯಾಲಯಗಳಲ್ಲಿ ತಮ್ಮ ವಕೀಲ ವೃತ್ತಿಯನ್ನು ಮುಂದುವರೆಸಿದ್ದಾರೆ. ಬಳಿಕ ದೆಹಲಿ ಹೈಕೋರ್ಟ್‌ನಲ್ಲಿ ವಿವಿಧ ನ್ಯಾಯಮಂಡಳಿಗಳಲ್ಲಿ ಅವರು ತಮ್ಮ ಸೇವೆಯನ್ನು ನೀಡಿದ್ದಾರೆ.

    2005 ರಲ್ಲಿ ದೆಯಲಿ ಹೈಕೋರ್ಟ್‌ನಲ್ಲಿ ಹೆಚ್ಚುವರಿ ನ್ಯಾಯಾಧೀಶರಾಗಿ ಸೇವೆ ಸಲ್ಲಿಸಿ ಬಳಿಕ ಖಾಯಂ ನ್ಯಾಯಾಧೀಶರಾಗಿದ್ದರು. ತಮ್ಮ ಅಧಿಕಾರವಧಿಯಲ್ಲಿ ದೆಹಲಿ ನ್ಯಾಯಾಂಗ ಅಕಾಡೆಮಿ,,ದೆಹಲಿ ಇಂಟರ್ನ್ಯಾಷನಲ್ ಆರ್ಬಿಟ್ರೇಶನ್ ಸೆಂಟರ್ ಮತ್ತು ಜಿಲ್ಲಾ ನ್ಯಾಯಾಲಯದ ಮಧ್ಯಸ್ಥಿಕೆ ಕೇಂದ್ರಗಳು ಸೇರಿದಂತೆ ಹಲವು ಪ್ರಮುಖ ಸಂಸ್ಥೆಗಳ ಅಧ್ಯಕ್ಷ ಮತ್ತು ನ್ಯಾಯಾಧೀಶರಾಗಿ ಸೇವೆಯನ್ನು ಸಲ್ಲಿಸಿದ್ದಾರೆ. ಜನವರಿ 18, 2019 ರಂದು ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿಯಾಗಿ ಖನ್ನಾ ಅವರು ಅಧಿಕಾರ ವಹಿಸಿಕೊಂಡಿದ್ದರು.

    ನ್ಯಾಯಮೂರ್ತಿಯಾಗಿ ನೀಡಿದ ಪ್ರಮುಖ ತೀರ್ಪುಗಳು :

    * ನ್ಯಾಯಮೂರ್ತಿ ಸಂಜೀವ್ ಖನ್ನಾ ಅವರು ಇತ್ತೀಚೆಗೆ ಚುನಾವಣಾ ಬಾಂಡ್ ಅಸಂವಿಧಾನಿಕ ಎಂದು ಘೋಷಣೆ ಮಾಡಿದ ಪಂಚಪೀಠದ ಭಾಗವಾಗಿದ್ದರು. ಅನಾಮಧೇಯ ದೇಣಿಗೆಗಳು ಸಾರ್ವಜನಿಕರ ಮಾಹಿತಿಯ ಹಕ್ಕನ್ನು ಉಲ್ಲಂಘಿಸುತ್ತದೆ ಎಂದು ಈ ಪೀಠ ಅಭಿಪ್ರಾಯಪಟ್ಟಿತ್ತು.

    * ಜಮ್ಮು ಕಾಶ್ಮೀರಕ್ಕೆ ನೀಡಿದ್ದ ಆರ್ಟಿಕಲ್ 370ರ ರದ್ಧತಿಯನ್ನು ಎತ್ತಿಹಿಡಿದ ಖನ್ನಾ ಅದು ಜಮ್ಮು ಮತ್ತು ಕಾಶ್ಮೀರಕ್ಕೆ ಸಾರ್ವಭೌಮತ್ವನ್ನು ನೀಡುವುದಿಲ್ಲ ಎಂದು ಹೇಳಿದ್ದರು.

     

    Continue Reading

    LATEST NEWS

    ‘ಐ ಲವ್ ಯು’ ಹೇಳುವ ಬದಲು ಜಸ್ಟ್ ಹೀಗೆ ಮಾಡಿ ಸಾಕು …. ಸಂಗಾತಿ ಫುಲ್ ಫಿದಾ !!

    Published

    on

    ಮಂಗಳೂರು : ಈಗಿನ ಕಾಲದಲ್ಲಿ ಟೈಮ್ ಪಾಸ್‌ಗಾಗಿಯೇ ಲವ್ ಮಾಡುವವರ ಸಂಖ್ಯೆ ಹೆಚ್ಚಾಗುತ್ತಿದೆ. ಅದರಲ್ಲಿ ಎಲ್ಲರ ಮುಂದೆ ಐ ಲವ್ ಯು ಹೇಳಿದರೆ ಅಥವಾ ದಿನಕ್ಕೆ ನೂರಾರು ಸಲ ಐ ಲವ್ ಯು ಎಂದು ಹೇಳಿದರೆ ಪ್ರೀತಿಯಿದೆ ಎಂದು ಸಾಬಿತಾಗುವಂತೆ ಮಾಡುತ್ತಾರೆ.ಪ್ರೀತಿ ಹೇಳಿ ಕೇಳಿ ಹುಟ್ಟಲ್ಲ, ನಿಜವಾದ ಪ್ರೀತಿಗೆ ಕೊನೆಯಿಲ್ಲ. ಪದೇ ಪದೆ ಪ್ರೇಮಿಗೆ ಅಥವಾ ಸಂಗಾತಿಗೆ ಐ ಲವ್ ಯು ಎಂದು ಹೇಳಲು ಸಂಕೋಚವಾಗುತ್ತಿದ್ದರೆ ಈ ರೀತಿಯಾಗಿ ಪ್ರೀತಿ ವ್ಯಕ್ತಪಡಿಸಿ ಸಂಬಂಧವನ್ನು ಗಟ್ಟಿಗೊಳಿಸಿಕೊಳ್ಳಿ.


    ಪ್ರೀತಿ ಎಂಬುವುದು ಮಧುರವಾದ ಭಾವನೆ. ಆದರೆ ಈಗಿನ ಕಾಲದಲ್ಲಿ ಪರಿಶುದ್ಧವಾಗಿ ಪ್ರೀತಿಸೋರು ಸಿಗೋದು ಕಷ್ಟ. ಪ್ರೀತಿಗೆ ಗ್ಯಾರಂಟಿಯೇ ಇರುವುದಿಲ್ಲ. ಪ್ರೀತಿಸುತ್ತೇನೆ ಎಂದು ಹೇಳುವ ಬದಲು ಈ ಟ್ರಿಕ್ಸ್ ಬಳಸಿ ಪ್ರೀತಿ ವ್ಯಕ್ತಪಡಿಸಬಹುದು.

    ಸಂಗಾತಿಯ ಪುಟ್ಟ ಪುಟ್ಟ ವಿಷಯಕ್ಕೂ ಆಧ್ಯತೆ ನೀಡಿ :
    ಪ್ರೇಮ ಸಂಬಂಧದಲ್ಲಿ ಅಥವಾ ದಾಂಪತ್ಯ ಜೀವನದಲ್ಲಿ ಮಾಡುವ ದೊಡ್ಡ ತಪ್ಪುಗಳಲ್ಲಿ ಇದು ಒಂದು. ನಮ್ಮವರು ಎನ್ನಿಸಿಕೊಂಡವರ ಸಣ್ಣ ಪುಟ್ಟ ವಿಷಯಗಳನ್ನು ನಿರ್ಲಕ್ಷಿಸುವುದು. ಆದರೆ ಪ್ರಾರಂಭದಲ್ಲಿ ಇದೇನು ಇಷ್ಟು ಸಣ್ಣ ವಿಷಯವೆಂದೆನಿಸಬಹುದು. ಆದರೆ ಈ ಸಣ್ಣಸಣ್ಣ ವಿಷಯಗಳೇ ಇಬ್ಬರೂ ವ್ಯಕ್ತಿಗಳ ನಡುವಿನ ಬಾಂಧವ್ಯವನ್ನು ಗಟ್ಟಿಗೊಳಿಸುತ್ತದೆ. ಹೀಗಾಗಿ ಸಂಗಾತಿಯ ಸಣ್ಣ ಪುಟ್ಟ ವಿಷಯಗಳತ್ತ ಹೆಚ್ಚು ಗಮನ ಕೊಡುವ ಮೂಲಕ ಪ್ರೀತಿಯನ್ನು ವ್ಯಕ್ತಪಡಿಸಬಹುದು.

    ಸದಾ ಪ್ರೀತಿಯ ಅಪ್ಪುಗೆಯಿರಲಿ :
    ಸಂಗಾತಿಗಳಿಬ್ಬರೂ ಐಲವ್ ಯು ಎಂದು ಹೇಳಲೇ ಬೇಕೆಂದೇನಿಲ್ಲ. ಆದರೆ ದೀರ್ಘವಾದ ಅಪ್ಪುಗೆಯು ಕೂಡ ಪ್ರೀತಿಯಿದೆ ಎನ್ನುವುದನ್ನು ವ್ಯಕ್ತಪಡಿಸುತ್ತದೆ. ಸಂಗಾತಿಯ ಮಾತು ಕೇಳುವಾಗ ಅಪ್ಪುಗೆಯನ್ನು ನೀಡಿ ಸಂಬಂಧವನ್ನು ಗಟ್ಟಿಗೊಳಿಸಿಕೊಳ್ಳಿ.

    ಸಂಗಾತಿಗಾಗಿ ಸಮಯ ಮೀಸಲಿಡಿ :
    ಯಾವುದೇ ಸಂಬಂಧವಿರಲಿ ಸಮಯಕ್ಕಿಂತ ಮತ್ತೊಂದು ಅಮೂಲ್ಯವಾದ ವಸ್ತುವಿಲ್ಲ. ನಮ್ಮ ಪ್ರೀತಿಯನ್ನು ವ್ಯಕ್ತಪಡಿಸುವ ವಿಧಾನಗಳಲ್ಲಿ ಸಮಯ ನೀಡುವುದು ಕೂಡ ಒಂದು. ಇಬ್ಬರೂ ಜೊತೆಯಾಗಿ ಕಾಲ ಕಳೆಯಬೇಕು. ಸಂಗಾತಿಯ ಬೇಕು ಬೇಡಗಳ ಬಗ್ಗೆ ಸ್ಪಷ್ಟತೆಯಿರಬೇಕು.

    ಮಚ್ಚುಗೆ ವ್ಯಕ್ತಪಡಿಸುತ್ತಿರಿ :
    ಸಂಗಾತಿಗಳಿಬ್ಬರೂ ಐಲವ್ ಯು ಹೇಳದೇನೇ ಮೆಚ್ಚುಗೆಯ ಮಾತುಗಳಿಂದ ಒಬ್ಬರು ಇನ್ನೊಬ್ಬರ ಮನಸ್ಸನ್ನು ಗೆಲ್ಲಬಹುದು. ನಿಮ್ಮವರು ಯಾವುದೇ ಕೆಲಸವು ನನ್ನ ಕೈಯಲ್ಲಿ ಆಗುವುದಲ್ಲ ಎಂದು ಕುಳಿತಿದ್ದಾಗ ಅವರಿಗೆ ಧೈರ್ಯ ತುಂಬಿ ಆ ಕೆಲಸದಲ್ಲಿ ತೊಡಗಿ ಕೊಳ್ಳುತ್ತವೆ. ನಮ್ಮ ಮಾತು ನಮ್ಮವರ ಮೇಲೆ ಎಷ್ಟು ಪ್ರೀತಿಯಿದೆ ಎನ್ನುವುದನ್ನು ಅರ್ಥ ಮಾಡಿಸುತ್ತದೆ.

    Continue Reading

    LATEST NEWS

    Trending