Connect with us

    LATEST NEWS

    ಉಡುಪಿ: ಕೋಟ ಶ್ರೀನಿವಾಸ ಪೂಜಾರಿ ಅವರ ಆಶೀರ್ವಾದ ಪಡೆದ ಬಿಜೆಪಿ ಮುಖಂಡ ಕಿಶೋರ್ ಕುಮಾರ್

    Published

    on

    ಉಡುಪಿ: ಕೋಟ ಶ್ರೀನಿವಾಸ ಪೂಜಾರಿ ಅವರಿಂದ ತೆರವಾಗಿರುವ ವಿಧಾನ ಪರಿಷತ್ ಸ್ಥಾನಕ್ಕೆ ಉಪಚುನಾವಣೆ ಬೆಪಿ ಅಭ್ಯರ್ಥಿಯಾಗಿ ಘೋಷಿತರಾದ ಬಿಜೆಪಿ ಮುಖಂಡ ಕಿಶೋರ್ ಕುಮಾರ್ ರವರು ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಸಂಸದರಾದ ಕೋಟ ಶ್ರೀನಿವಾಸ ಪೂಜಾರಿ ಅವರನ್ನು ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಭೇಟಿಯಾಗಿ ಆಶೀರ್ವಾದ ಪಡೆದರು.

    ಈ ಸಂದರ್ಭದಲ್ಲಿ ಕಿಶೋರ್ ಕುಮಾರ್ ರವರನ್ನು ಶಾಲು ಹೊದಿಸಿ ಅಭಿನಂದಿಸಿದ ಸಂಸದ ಕೋಟ ಗೆಲುವಿಗಾಗಿ ಶುಭ ಹಾರೈಸಿ ತಮ್ಮ ಪರವಾಗಿ ನಿರಂತರ ಕೆಲಸ ಮಾಡಿ ಗೆಲ್ಲಿಸುವ ಭರವಸೆಯನ್ನು ನೀಡಿದರು.

    ಈ ಸಂದರ್ಭದಲ್ಲಿ ಉಡುಪಿ ಶಾಸಕರಾದ ಯಶ್‌ಪಾಲ್ ಸುವರ್ಣ, ಉಡುಪಿ ನಗರ ಬಿಜೆಪಿ ಅಧ್ಯಕ್ಷರಾದ ದಿನೇಶ್ ಅಮೀನ್, ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ಸಹ ಪ್ರಭಾರಿ ರಾಜೇಶ್ ಕಾವೇರಿ, ದಕ್ಷಿಣ ಕನ್ನಡ ಯುವ ಮೋರ್ಚಾ ಉಪಾಧ್ಯಕ್ಷರಾದ ಆಶ್ರಿತ್ ನೋಂಡ ಹಾಗೂ ಇತರೆ ಪ್ರಮುಖರು ಉಪಸ್ಥಿತರಿದ್ದರು.

    LATEST NEWS

    ಮತ್ತೆ ವಿವಾದ ಸುಳಿಯಲ್ಲಿ ಸಂಸದೆ ಕಂಗನಾ..!

    Published

    on

    ನವದೆಹಲಿ : ಇತ್ತೀಚೆಗಷ್ಟೇ ರೈತರ ವಿಚಾರವಾಗಿ ವಿವಾದಾತ್ಮಕ ಹೇಳಿಕೆ ನೀಡಿದ್ದ ಮಂಡಿ ಕ್ಷೇತ್ರ ಬಿಜೆಪಿ ಸಂಸದೆ ನಟಿ ಕಂಗಾನ ರಾನೌತ್ ಈಗ ಮತ್ತೊಂದು ವಿವಾದ ಸೃಷ್ಟಿಸಿದ್ದಾರೆ. ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ರಾಷ್ಟ್ರಪಿತ ಗಾಂಧಿ ಅವರ ಕುರಿತಾಗಿ ಹಾಕಿದ ಪೋಸ್ಟ್ ಈಗ ವಿವಾದಕ್ಕೆ ಕಾರಣವಾಗಿದೆ.


    “ದೇಶ್‌ ಕೆ ಪಿತಾ ನಹೀ. ದೇಶ್‌ ಕೆ ತೋ ಲಾಲ್‌ ಹೋತೇ ಹೈ. ಧನ್ಯ ಹೇ ಭಾರತ್ ಮಾಕೆ ಲಾಲ್‌”( ದೇಶಕ್ಕೆ ತಂದೆಯಿಲ್ಲ .ಅದಕ್ಕೆ ಮಕ್ಕಳಿದ್ದಾರೆ. ಭಾರತಮಾತೆಯ ಮಕ್ಕಳು ಧನ್ಯರು) ಎಂದು ಕಂಗನಾ ಪೋಸ್ಟ್ ಮಾಡಿದ್ದಾರೆ. ಲಾಲ್‌ ಬಹುದ್ದೂರು ಶಾಸ್ತ್ರಿ ಅವರನ್ನು ಗಾಂಧೀಜಿಗೆ ಹೋಲಿಕೆ ಮಾಡಿದ್ದು ಅಲ್ಲದೆ ಗಾಂಧೀಜಿಯ ಕುರಿತಾಗಿ ಕೀಳು ಮಟ್ಟದ ಪೋಸ್ಟ್ ಮಾಡಿದ್ದಾರೆ.

    ಇದಕ್ಕೆ ಪ್ರತಿಕ್ರಿಯೆ ನೀಡಿರುವ ಕಾಂಗ್ರೆಸ್‌ ನಾಯಕಿ ಸುಪ್ರಿಯಾ ಶ್ರಿನಾಥೆ ಅವರು ಇದು “ಬಿಜೆಪಿಯ ಹೊಸ ಗೋಡ್ಸೆ ಭಕ್ತೆ” ಎಂದು ಆರೋಪಿಸಿದ್ದಾರೆ. “ಸಂಸದೆ ಕಂಗನಾ ಈ ಹೇಳಿಕೆಗೆ ನರೇಂದ್ರ ಮೋದಿ ಅವರು ಪಕ್ಷದ ಈ ಹೊಸ ಗೋಡ್ಸೆ ಭಕ್ತೆಯನ್ನು ಮನಃಪೂರ್ವಕವಾಗಿ ಕ್ಷಮಿಸುವರೇ? ರಾಷ್ಟ್ರಪಿತ ಇದ್ದಾರೆ, ಪುತ್ರರಿದ್ದಾರೆ ಮತ್ತು ಹುತಾತ್ಮರು ಇದ್ದಾರೆ” ಎಂದು ಸುಪ್ರಿಯಾ ಶ್ರಿನಾಥೆ ಹೇಳಿದ್ದಾರೆ.

    ಇಷ್ಟೇ ಅಲ್ಲದೆ ಬಿಜೆಪಿಯ ನಾಯಕ ಮನೋರಂಜನ್ ಕಾಲಿಯ ಕೂಡಾ ಈ ಬಗ್ಗೆ ಟೀಕಿಸಿದ್ದು, ಮಂಡಿ ಸಂಸದರು ಇಂತಹ ವಿವಾದಾತ್ಮ ಹೇಳಿಕೆ ನೀಡುವುದನ್ನು ಅಭ್ಯಾಸ ಮಾಡಿಕೊಂಡಿದ್ದಾರೆ. ಇದು ಪಕ್ಷಕ್ಕೆ ತೊಂದರೆ ಉಂಟು ಮಾಡುತ್ತಿದೆ. ಅವರೊಬ್ಬ ರಾಜಕಾರಣಿ ಅಲ್ಲವಾಗಿದ್ದು ರಾಜಕಾರಣಿಯಾಗಿ ಗಂಭೀರ ವಿಚಾರ ಮಾತನಾಡುವ ಮೊದಲು ಆಲೋಚಿಸಬೇಕು ಎಂದು ಹೇಳಿದ್ದಾರೆ.

    ಮೂರು ಕೃಷಿ ಕಾನೂನುಗಳ ವಿರುದ್ಧ ರೈತರ ಪ್ರತಿಭಟನೆಯು ದೇಶದಲ್ಲಿ ಬಾಂಗ್ಲಾದೇಶದಂತಹ ಪರಿಸ್ಥಿತಿಯನ್ನು ಸೃಷ್ಟಿಸುತ್ತಿದೆ ಎಂದು ಅವರು ಈ ಹಿಂದೆ ಹೇಳಿದ್ದರು. ರೈತರ ಪ್ರತಿಭಟನಾ ಸ್ಥಳಗಳಲ್ಲಿ ಅತ್ಯಾಚಾರಗಳು ನಡೆಯುತ್ತಿವೆ ಎಂದು ಹೇಳಿದ್ದರು. ಬಳಿಕ ಈ ಮೂರು ಕೃಷಿ ಕಾನೂನು ಕುರಿತಾಗಿ ಪ್ರಧಾನಿ ಮತ್ತೊಮ್ಮೆ ಚಿಂತಿಸಬೇಕು ಎಂದು ಹೇಳಿಕೆ ನೀಡಿದ್ದರು.

    Continue Reading

    BIG BOSS

    ಬಿಗ್ ಬಾಸ್ ಮನೆಯೊಳಗಿರುವ ಲಾಯರ್ ಜಗದೀಶನ ವಕೀಲಿಕೆ ಲೈಸೆನ್ಸ್ ಕ್ಯಾನ್ಸಲ್!

    Published

    on

    ಬೆಂಗಳೂರು: ಬಿಗ್ ಬಾಸ್ ಮನೆಯೊಳಗೆ ಹೋಗಿರುವ ಹಾಗೂ ನಾನು ಸಿಂಹ ಎಂದೇ ಹೇಳಿಕೊಳ್ಳುತ್ತಿರುವ ವಕೀಲ ಜಗದೀಶ್ ಅವರು ಪಡೆದಿದ್ದ ಲಾಯರ್ ಲೈಸೆನ್ಸ್ ಅನ್ನು ದೆಹಲಿ ಬಾರ್ ಕೌನ್ಸಿಲ್ ರದ್ದುಗೊಳಿಸಿದೆ. ಇವರು ಫೇಕ್  ಮಾರ್ಕ್ಸ್ ಕಾರ್ಡ್‌ ಕೊಟ್ಟು ಪದವಿ ಹಾಗೂ ಎಲ್‌ಎಲ್‌ಬಿ ಪದವಿ ಮಾಡಿ ಬಾರ್ ಕೌನ್ಸಿಲ್ ಅನುಮತಿ ಪಡೆದಿದ್ದರು. ಇದೀಗ ನಕಲಿ ಮಾರ್ಕ್ಸ್‌ ಕಾರ್ಡ್ ಎಂಬುದು ದೃಢಪಟ್ಟ ಹಿನ್ನೆಲೆಯಲ್ಲಿ ಅವರ ವಕೀಲಿಕೆ ಸನ್ನದು (ಅಡ್ವೋಕೇಟ್ ಬಾರ್ ಕೌನ್ಸಿಲ್ ನೀಡಿದ್ದ ಲೈಸೆನ್ಸ್) ಅನ್ನು ರದ್ದುಗೊಳಿಸಿ ದೆಹಲಿ ಬಾರ್ ಕೌನ್ಸಿಲ್ ಆದೇಶ ಹೊರಡಿಸಿದೆ.

    ನಕಲಿ ಮಾರ್ಕ್ಸ್ ಕಾರ್ಡ್ ಮೇಲೆ ಪದವಿ:

    ಈಗಾಗಲೇ ಸುಮಾರು 40ಕ್ಕೂ ಅಧಿಕ ವರ್ಷ ವಯಸ್ಸಾಗಿದ್ದರೂ ಕೇವಲ 10 ವರ್ಷ ವಕೀಲಿಕೆ ಸೇವೆ ಮಾಡಿದ್ದಾಗಿ ಹೇಳಿಕೊಂಡಿರುವ ಲಾಯರ್ ಜಗದೀಶ್ ಮೇಲೆ ಸ್ವಲ್ಪ ಅನುಮಾನ ವ್ಯಕ್ತವಾಗಿತ್ತು. ಆದರೆ, ಇದೀಗ ಅವರು ಪಿಯುಸಿಯನ್ನೇ ಓದದೇ ನಕಲಿ ಮಾರ್ಕ್ಸ್ ಕಾರ್ಡ್ ಸೃಷ್ಟಿಸಿ, ಅದನ್ನು ಪದವಿ ಕಾಲೇಜಿಗೆ ಕೊಟ್ಟು ಡಿಗ್ರಿ ಮಾಡಿದ್ದಾರೆ. ನಂತರ, ಪದವಿ ಮೇಲೆ ಎಲ್‌ಎಲ್‌ಬಿ ಮಾಡಿದ್ದಾರೆ. ಬೆಂಗಳೂರಿನ ಬದಲು ದೆಹಲಿಗೆ ಹೋಗಿ ದೆಹಲಿ ಬಾರ್ ಕೌನ್ಸಿಲ್‌ನಲ್ಲಿ ಎಲ್‌ಎಲ್‌ಬಿ ಮೇಲೆ ಬಾರ್ ಕೌನ್ಸಿಲ್‌ನಿಂದ ವಕೀಲಿಕೆ ಸನ್ನದು ಪಡೆದಿದ್ದಾರೆ. ಇವರದ್ದು ನಕಲಿ ಸರ್ಟಿಫಿಕೇಟ್ ಎಂದು ಬಾರ್ ಕೌನ್ಸಿಲ್ ಲೈಸೆನ್ಸ್ ರದ್ದತಿಗೆ ಕೋರಿ ಹಿಮಾಂಶು ಭಾಟಿ ಎನ್ನುವವರು ಕೌನ್ಸಿಲ್‌ಗೆ ಅರ್ಜಿ ಸಲ್ಲಿಕೆ ಮಾಡಿದ್ದರು.

    ಇದನ್ನು ಪರಿಗಣಿಸಿದ ದೆಹಲಿ ಬಾರ್ ಕೌನ್ಸಿಲ್ ಸಮಿಯು ವಕೀಲ ಜಗದೀಶ್ ಅವರಿಗೆ ನೀಡದಲಾಗಿದ್ದ ಅನುಮತಿಯನ್ನು ತಾತ್ಕಾಲಿಕವಾಗಿ ತಡೆ ಹಿಡಿದು ಎಲ್ಲ ದಾಖಲಾತಿಗಳನ್ನು ಪರಿಶೀಲನೆ ಮಾಡಿದೆ. ಇದಾದ ನಂತರ 2024ರ ಏಪ್ರಿಲ್‌ನಲ್ಲಿ ನಡೆದ ಬಾರ್ ಕೌನ್ಸಿಲ್ ಸಭೆಯಲ್ಲಿ ಕೆ.ಎನ್. ಜಗದೀಶ್ ಕುಮಾರ್ ಅವರು ಸಲ್ಲಿಕೆ ಮಾಡಿದ ಪಿಯುಸಿ ಅಂಕಪಟ್ಟಿ ನಕಲಿ ಆಗಿದ್ದು, ಇದರ ಆಧಾರದಲ್ಲಿ ಮಾಡಲಾದ ಪದವಿ ಹಾಗೂ ಎಲ್‌ಎಲ್‌ಬಿ ಸೇರಿ ಎಲ್ಲವೂ ಅಮಾನ್ಯವಾಗಿರುತ್ತವೆ. ಆದ್ದರಿಂದ ಕೆ.ಎನ್ ಜಗದೀಶ್ ಕುಮಾರ್ (ಡಿ/2091/2017) ಅವರ ವಕೀಲಿಕೆ ಸನ್ನದು ಅನ್ನು ರದ್ದುಗೊಳಿಸಲಾಗಿದೆ ಎಂದು ಅಧಿಸೂಚನೆ ಹೊರಡಿಸಿದೆ.

    Continue Reading

    LATEST NEWS

    ಶಿರೂರು ಭೂ ಕುಸಿತ ದುರಂತ – ಡ್ರಜ್ಜಿಂಗ್ ಕಾರ್ಯಾಚರಣೆ ಸ್ಥಗಿತ

    Published

    on

    ಕಾರವಾರ: ಶಿರೂರು ಭೂ ಕುಸಿತ ದುರಂತದ ಹಿನ್ನೆಲೆ ನಡೆಯುತ್ತಿದ್ದ ಮೂರನೇ ಹಂತದ ಡ್ರಜ್ಜಿಂಗ್ ಕಾರ್ಯಾಚರಣೆಯನ್ನು ಸ್ಥಗಿತಮಾಡಲಾಗಿದೆ.

    ಉತ್ತರ ಕನ್ನಡ ಜಿಲ್ಲೆಯ ಅಂಕೋಲದ ಶಿರೂರು ಭೂ ಕುಸಿತದ ಹಿನ್ನೆಲೆ ಮೂರನೇ ಹಂತದ ಕಾರ್ಯಾಚರಣೆಯು ನಡೆಯುತ್ತಿತ್ತು. 13 ದಿನ ಪೂರೈಸಿದ ಡ್ರಜ್ಜಿಂಗ್ ಬೋಟ್ ಮೂಲಕ ನಡೆಯುತ್ತಿದ್ದ ಕಾರ್ಯಾಚರಣೆಯನ್ನು ಇಂದು ಸ್ಥಗಿತಮಾಡಲಾಗಿದೆ.

    ಕಳೆದ 13 ದಿನದಿಂದ ಅಂಕೋಲದ ಗಂಗಾವಳಿ ನದಿಯಲ್ಲಿ ಓಷಿಯನ್ ಕಂಪನಿ ನಿರಂತರ ಕಾರ್ಯಾಚರಣೆಯಲ್ಲಿ ತೊಡಗಿತ್ತು. 90 ಲಕ್ಷದ ಮೊತ್ತದಲ್ಲಿ 13 ದಿನ ಕಾರ್ಯಾಚರಣೆ ಪೂರ್ಣಗೊಂಡಿದೆ. 13 ದಿನದ ಕಾರ್ಯಾಚರಣೆಯಲ್ಲಿ ಕೇರಳ ಮೂಲದ ಅರ್ಜುನ್ ಶವ ಹಾಗೂ ಲಾರಿ ಹೊರತೆಗೆದಿದ್ದು, ನಂತರ ಮನುಷ್ಯನ ಮೂಳೆಗಳು ಹಾಗೂ ಕೆಲವು ವಸ್ತುಗಳನ್ನು ಸಹ ಹೊರತೆಗೆಯಲಾಗಿದೆ.

    ಇದಾದ ಬಳಿಕ ಗಂಗಾವಳಿ ನದಿಯಲ್ಲಿ ಬಿದ್ದಿದ್ದ ಬೃಹತ್ ಆಲದ ಮರ ಹೊರತೆಗೆಯಲಾಗಿತ್ತು. ಆದರೆ ಇದೀಗ ಡ್ರಜ್ಜಿಂಗ್ ಕಾರ್ಯಾಚರಣೆ ಸ್ಥಗಿತ ಮಾಡಲು ನಿರ್ಧರಿಸಿದ್ದಾರೆ. ಇದರ ಬದಲಿಗೆ ಇಂದಿನಿಂದ ಇಬ್ಬರು ಮುಳುಗು ತಜ್ಞರು ಹಾಗೂ ಪೋಕ್ ಲೈನ್ ಮೂಲಕ ಹೋಟೆಲ್ ಕುಸಿದುಹೋದ ಸ್ಥಳದಲ್ಲಿ ನಿಗದಿ ಮಾಡಿದ ಎರಡನೇ ಪಾಯಂಟ್‌ನಲ್ಲಿ ಕಾರ್ಯಾಚರಣೆ ನಡೆಸಲಾಗುತ್ತಿದೆ.

    ಭೂಕುಸಿತ ದುರಂತದಲ್ಲಿ ಸತತ 77 ದಿನದ ದೀರ್ಘ ಕಾರ್ಯಾಚರಣೆ ಇದಾಗಿದ್ದು, ಒಟ್ಟು ಮೂರು ಹಂತದಲ್ಲಿ ಶೋಧ ಕಾರ್ಯಾಚರಣೆ ನಡೆಸಲಾಗಿದೆ. ಸದ್ಯ ಸಿಕ್ಕ ಮೂಳೆಗಳ ಡಿ.ಎನ್.ಎ ವರದಿ ಬರಬೇಕಿದ್ದು, ಕಾಣೆಯಾದ ಜಗನ್ನಾಥ್, ಲೋಕೇಶ್ ಶವ ಶೋಧ ನಡೆಯಬೇಕಿದೆ.

    Continue Reading

    LATEST NEWS

    Trending