Connect with us

    FILM

    ಕಿಚ್ಚನಿಗೆ ಮಾತೃ ವಿಯೋಗ; ಇಹಲೋಕ ತ್ಯಜಿಸಿದ ಸರೋಜಾ ಸಂಜೀವ್

    Published

    on

    ಮಂಗಳೂರು: ನಟ, ನಿರೂಪಕ ಕಿಚ್ಚ ಸುದೀಪ್‌ ಅವರ ತಾಯಿ ಸರೋಜಾ ಸಂಜೀವ್‌ ಅವರು ಅಸುನೀಗಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿದ್ದ ಸರೋಜಾ ಅವರು ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.

    ಸುದೀಪ್‌ ತಾಯಿಯ ಮೃತದೇಹವನ್ನು ಮಧ್ಯಾಹ್ನ 12 ಗಂಟೆಗೆ ಜೆಪಿ ನಗರದ ಸ್ವಗೃಹಕ್ಕೆ ಕರೆತರಲಾಗುವುದು, ಮತ್ತು ಅಲ್ಲಿಯೇ ಅಂತಿಮ ದರ್ಶನಕ್ಕೆ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ತಿಳಿದುಬಂದಿದೆ.

    ಜಯನಗರದ ಅಪೋಲೋ ಆಸ್ಪತ್ರೆಯಲ್ಲಿ ಸರೋಜಾ ಅವರನ್ನು ದಾಖಲು ಮಾಡಲಾಗಿತ್ತು. ಇಂದು (ಅ.20) ಬೆಳಿಗ್ಗೆ 7.04 ರ ಸುಮಾರಿಗೆ ಸುದೀಪ್‌ ತಾಯಿ ಮೃತ ಹೊಂದಿದ್ದಾರೆ. ತಾಯಿ ಅನಾರೋಗ್ಯವಿದ್ದ ಕಾರಣ ನಿನ್ನೆ ಬಿಗ್‌ಬಾಸ್‌ ಶೂಟಿಂಗ್‌ ಬೇಗನೇ ಮುಗಿಸಿ ಸುದೀಪ್‌ ಸೆಟ್‌ನಿಂದ ಹೋಗಿದ್ದರು ಎನ್ನಲಾಗಿದೆ.

    ಮೃತ ಸರೋಜಾ ಅವರು, ನಟ ಸುದೀಪ್ ಸೇರಿದಂತೆ ಮೂವರು ಮಕ್ಕಳನ್ನು ಅಗಲಿದ್ದಾರೆ. ಇಂದು ಸಂಜೆಯೇ ಅಂತ್ಯಕ್ರಿಯೆ ನೆರವೇರಲಿದೆ ಎಂದು ಕುಟುಂಬದ ಮೂಲಗಳು ಮಾಹಿತಿ ನೀಡಿವೆ. ಚಿತ್ರರಂಗದ ಕಲಾವಿದರು, ನಟ, ನಟಿಯರು ಸಂತಾಪ ವ್ಯಕ್ತಪಡಿಸಿದ್ದಾರೆ.

     

    FILM

    ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟ ಹೊಸ ಸದಸ್ಯ.. ಯಾರು ಗೊತ್ತಾ ?!

    Published

    on

    ಬೆಂಗಳೂರು: ಬಿಗ್ ಬಾಸ್ ಕನ್ನಡ ಮನೆಗೆ ಹೊಸ ಸದಸ್ಯನ ಆಗಮನವಾಗಿದೆ. ಈ ಸೀಸನ್ ನಲ್ಲಿ ಮೊದಲ ವೈಲ್ಡ್ ಕಾರ್ಡ್ ಎಂಟ್ರಿಯಾಗಿದ್ದು, ಪ್ರಸಿದ್ಧ ಜಾನಪದ ಗಾಯಕ ಅಗಮಿಸಿದ್ದಾನೆ.

     

     

    ಸರಿಗಮಪ ರಿಯಾಲಿಟಿ ಶೋ ಮೂಲಕ ಜನಮನ್ನಣೆ ಗಳಿಸಿದ ಕುರಿಗಾಹಿ ಹನುಮಂತ ಬಿಗ್ ಬಾಸ್ ಮನೆಗೆ ವೈಲ್ಡ್ ಕಾರ್ಡ್ ಎಂಟ್ರಿ ಆಗಿ ಪ್ರವೇಶ ಪಡೆದಿದ್ದಾರೆ.

     

    ಇದನ್ನೂ ಓದಿ : ಬಿಗ್‌ಬಾಸ್‌ನಲ್ಲಿ ಒಂದೇ ಬೆಡ್​ಶೀಟ್ ಹೊದ್ದು ಕುಳಿತ ಐಶ್ವರ್ಯಾ-ಶಿಶಿರ್

     

    ಬಿಗ್ ಬಾಸ್ ಹೊಸ ಅಧ್ಯಾಯದಲ್ಲಿ ‌ಮೊದಲ ವೈಲ್ಡ್ ಕಾರ್ಡ್ ಎಂಟ್ರಿ ಎಂದು ಹನುಮಂತ ಡ್ಯಾನ್ಸ್ ಮಾಡುತ್ತಲೇ ಬಿಗ್ ಬಾಸ್ ಮನೆಗೆ ಬಂದಿದ್ದಾರೆ.

    Continue Reading

    FILM

    ಮೃಣಾಲ್ ಠಾಕೂರ್ ಬಾತ್ ಟಬ್‌ ಫೋಟೋಸ್ ವೈರಲ್..! ಅಸಲಿಯತ್ತೇನು ಗೊತ್ತಾ.?

    Published

    on

    ಮಂಗಳೂರು/ಮುಂಬೈ : ಡೀಪ್ ಫೇಕ್‌ ಭೂತ ಬೆನ್ನು ಬಿಡದೆ ಸಿನಿಮಾ ನಟಿಯರನ್ನು ಕಾಡುತ್ತಲೇ ಇದೆ. ಪದೇ ಪದೆ ನಟಿಯರ ಡೀಪ್ ಫೇಕ್ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿ ಮಾಡುತ್ತಲೇ ಇರುತ್ತದೆ.

    ನಟಿ ರಶ್ಮಿಕಾ ಮಂದಣ್ಣ ಡೀಪ್ ಫೇಕ್ ಗೆ ತೀವ್ರವಾಗಿ ಗುರಿಯಾದದ್ದು ನಿಮಗೆಲ್ಲರಿಗೂ ಗೊತ್ತೇ ಇದೆ. ಇದೀಗ ಸೀತಾರಾಮಂ ಸಿನಿಮಾದ ನಟಿ ಮೃಣಾಲ್ ಠಾಕೂರ್ ಕೂಡ ಡೀಪ್ ಫೇಕ್‌ ಗೆ ಬ*ಲಿಯಾಗಿದ್ದಾರೆ. ಬಿಕಿನಿಯಲ್ಲಿ ಬಾತ್ ಟಬ್‌ನಲ್ಲಿ ಹಾಟ್ ಆಗಿ ಕಾಣಿಸಿಕೊಂಡಿರುವ ಫೋಟೊಗಳು ಹರಿದಾಡುತ್ತಿದೆ.

    ಸೀತಾರಾಮಂ ಸಿನಿಮಾದ ಮೂಲಕ ಸೌತ್‌ ಸಿನಿ ದುನಿಯಾಕ್ಕೆ ಕಾಲಿಟ್ಟ ನಟಿ ಸಾಲು ಸಾಲು ಸಿನಿಮಾಗಳ ಮೂಲಕ ತಮ್ಮ ಫ್ಯಾನ್ ಬೇಸ್ ಹೆಚ್ಚಿಸಿಕೊಂಡಿದ್ದಾರೆ. ಅದರಲ್ಲೂ ತಮ್ಮ ಸೀತಾರಾಮಂ ಚಿತ್ರದಲ್ಲಿ ದುಲ್ಕರ್ ಸಲ್ಮಾನ್ ಎದುರು ಸೀತೆಯ ಪಾತ್ರದಲ್ಲಿ ಮೃಣಾಲ್ ಠಾಕೂರ್ ನಟಿಸಿದ್ದು ಇವರ ಅಭಿಮಾನಿಗಳಲ್ಲಿ ಈ ಚಿತ್ರವೂ ಫೆವರೇಟ್ ಚಿತ್ರವಾಗಿ ಉಳಿದಿದೆ. ಸದ್ಯ ಮೃಣಾಲ್ ಹಲವು ಚಿತ್ರಗಳಲ್ಲಿ ಬ್ಯುಸಿಯಾಗಿದ್ದಾರೆ.

    ಇತ್ತೀಚೆಗೆ ಮೃಣಾಲ್ ಠಾಕೂರ್ ಬಾತ್ ಟಬ್‌ನಲ್ಲಿ ಕುಳಿತು ಫೋಟೋಸ್‌ ಪೋಸ್ ನೀಡಿರುವ ಫೋಟೋಗಳು ವೈರಲ್ ಆಗಿವೆ. ವೈರಲ್ ಫೋಟೋಗಳಲ್ಲಿ ಮೃಣಾಲ್ ತುಂಬಾ ಹಾಟ್ ಆಗಿದ್ದಾರೆ. ಬಾತ್ ರೂಂನ ಟಬ್ ನಲ್ಲಿ ಬಿಕಿನಿಯಲ್ಲಿ ಕುಳಿತು ರೊಮ್ಯಾಂಟಿಕ್ ಆಗಿ ಫೋಟೋಗಳಿಗೆ ಪೋಸ್ ನೀಡಿದ್ದಾರೆ.

    ಫೋಟೋಗಳ ಹಿಂದಿನ ಅಸಲಿಯತ್ತು ಏನು.?

    ಮೃಣಾಲ್ ಠಾಕೂರ್ ಬಾತ್ ಟಬ್‌ ಫೋಟೋಗಳು ವೈರಲ್ ಆಗುತಿದ್ದು ಆ ಚಿತ್ರಗಳು ಮೃಣಾಲ್ ಠಾಕೂರ್ ಅವರದ್ದಲ್ಲ ಬದಲಾಗಿ ಅವುಗಳನ್ನು ಡೀಪ್‌ ಫೇಕ್‌ ತಂತ್ರಜ್ಞಾನದ ಮೂಲಕ ಸೃಷ್ಟಿ ಮಾಡಲಾಗಿದೆ. ಈ ವಿಷಯ ಬಹಳಷ್ಟು ಚರ್ಚೆ ಸೃಷ್ಟಿ ಮಾಡಿದ್ದು ಡೀಪ್ ಫೇಕ್ ವಿಚಾರ ತಿಳಿದು ಮೃಣಾಲ್ ಅಭಿಮಾನಿಗಳು ನಿಟ್ಟುಸಿರು ಬಿಟ್ಟಿದ್ದಾರೆ. ಇಂತಹ ಚಿತ್ರಗಳನ್ನು ಹರಿಬಿಟ್ಟವರ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ನೆಟ್ಟಿಗರು ಆಕ್ರೋಶ ಹೊರಹಾಕಿದ್ದಾರೆ.

    Continue Reading

    BIG BOSS

    ಬಿಗ್‌ಬಾಸ್‌ನಲ್ಲಿ ಒಂದೇ ಬೆಡ್​ಶೀಟ್ ಹೊದ್ದು ಕುಳಿತ ಐಶ್ವರ್ಯಾ-ಶಿಶಿರ್

    Published

    on

    ಬಿಗ್ ಬಾಸ್ ಮನೆಯಲ್ಲಿ ಐಶ್ವರ್ಯಾ ಅವರು ಮೊದಲ ದಿನದಿಂದಲೂ ಎಲ್ಲರ ಗಮನ ಸೆಳೆಯುವ ಪ್ರಯತ್ನ ಮಾಡುತ್ತಲೇ ಇದ್ದಾರೆ. ಅವರು ಒಂದಲ್ಲಾ ಒಂದು ಕಾರಣಕ್ಕೆ ಸುದ್ದಿ ಆಗುತ್ತಿದ್ದಾರೆ. ಈಗ ಅವರ ರೊಮ್ಯಾನ್ಸ್ ವಿಚಾರ ಸಾಕಷ್ಟು ಚರ್ಚೆ ಆಗಿದೆ.

    ಐಶ್ವರ್ಯಾ ಹಾಗೂ ಶಿಶಿರ್ ಒಂದೇ ಬೆಡ್​ಶೀಟ್ ಹೊತ್ತು ಕುಳಿತಿದ್ದಾರೆ. ಐಶ್ವರ್ಯಾ ಅವರ ಕೈಯಲ್ಲಿ ಕಪ್ ಇತ್ತು. ಅದರಲ್ಲಿ ಇದ್ದ ಬಿಸಿ ಕಾಫಿಯನ್ನು ಒಬ್ಬರಾದ ಬಳಿಕ ಒಬ್ಬರು ಹೀರಿದ್ದಾರೆ. ಅಕ್ಟೋಬರ್ 18ರ ಎಪಿಸೋಡ್​ನಲ್ಲಿ ಈ ದೃಶ್ಯಗಳು ಹೈಲೈಟ್ ಆಗಿದೆ.

    ಐಶ್ವರ್ಯಾ ಅವರಿಗೆ ಶಿಶಿರ್ ಅಂತರ ಇಟ್ಟುಕೊಂಡು ಕಿಸ್ ಕೊಟ್ಟಿದ್ದಾರೆ. ಇದರಿಂದ ಇವರು ಕ್ಲೋಸ್ ಆದರೇ ಎನ್ನುವ ಪ್ರಶ್ನೆ ಮೂಡಿದೆ. ಇಬ್ಬರೂ ರಿಯಲ್ ಲೈಫ್​ನಲ್ಲಿ ಸಿಂಗಲ್ ಆಗಿದ್ದಾರೆ. ಹೀಗಾಗಿ, ಬಿಗ್ ಬಾಸ್​ನಲ್ಲಿ ಇವರ ಮಧ್ಯೆ ಪ್ರೀತಿ ಹುಟ್ಟಿಕೊಳ್ಳಲಿದೆಯೇ ಎನ್ನುವ ಪ್ರಶ್ನೆ ಮೂಡಿದೆ.

    ಐಶ್ವರ್ಯಾ ಅವರು ಬಿಗ್ ಬಾಸ್ ಮನೆ ಪ್ರವೇಶಿಸಿದಾಗ ಮೊದಲು ಧರ್ಮ ಜೊತೆ ಕ್ಲೋಸ್ ಆಗೋಕೆ ಬಯಿಸಿದ್ದರು. ಆದರೆ, ಇದಕ್ಕೆ ಅನುಷಾ ರೈ ಅವಕಾಶ ನೀಡಿರಲಿಲ್ಲ. ಹೀಗಿರುವಾಗಲೇ ಶಿಶಿರ್ ಹಾಗೂ ಐಶ್ವರ್ಯಾ ಕ್ಲೋಸ್ ಆಗಿದ್ದಾರೆ.

    ಹೈಲೈಟ್ ಆಗಬೇಕು ಎನ್ನುವ ಕಾರಣಕ್ಕೆ ಕೆಲವೊಮ್ಮೆ ಲವ್ ನಾಟಕ ಆಡೋದು ಇದೆ. ‘ಬಿಗ್ ಬಾಸ್ ಮನೆಯಲ್ಲಿ ಹುಟ್ಟಿಕೊಂಡಿರೋದು ಈಗ ಅಂಥದ್ದೇ ಪ್ರೀತಿಯೇ ಎನ್ನುವ ಪ್ರಶ್ನೆ ವೀಕ್ಷಕರನ್ನು ಕಾಡುತ್ತಿದೆ.

    Continue Reading

    LATEST NEWS

    Trending