kerala
ಕೇರಳದ ಖ್ಯಾತ ವ್ಲಾಗರ್ ದಂಪತಿ ಅನುಮಾನಸ್ಪಾದ ಸಾ*ವು
Published
4 weeks agoon
ಮಂಗಳೂರುತಿರುವನಂತಪುರಂ: ಕೇರಳದ ಖ್ಯಾತ ವ್ಲಾಗರ್ ದಂಪತಿ ಅನುಮಾನಸ್ಪಾದ ರೀತಿಯಲ್ಲಿ ಮೃ*ತಪಟ್ಟಿರುವ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.
ತಿರುವನಂತಪುರಂ ನಗರದಿಂದ ಸುಮಾರು 40 ಕಿಮೀ ದೂರದಲ್ಲಿರುವ ಪರಸ್ಸಾಲದಲ್ಲಿರುವ ತಮ್ಮ ಮನೆಯಲ್ಲಿ ದಂಪತಿಗಳು ಶ*ವವಾಗಿ ಪತ್ತೆಯಾಗಿದ್ದಾರೆ.
ಸೆಲ್ವರಾಜ್ (45) ಮತ್ತು ಅವರ ಪತ್ನಿ ಪ್ರಿಯಾ (37) ತಮ್ಮ ಮನೆಯಲ್ಲಿ ಅನುಮಾನಸ್ಪಾದ ರೀತಿಯಲ್ಲಿ ಮೃ*ತಪಟ್ಟಿರುವ ಸ್ಥಿತಿಯಲ್ಲಿ ಭಾನುವಾರ (ಅ.27ರಂದು) ಮುಂಜಾನೆ ಪತ್ತೆಯಾಗಿದ್ದಾರೆ.
ಎರ್ನಾಕುಲಂನಲ್ಲಿ ಕೆಲಸ ಮಾಡುತ್ತಿರುವ ದಂಪತಿಯ ಪುತ್ರ ಮನೆಗೆ ಹಿಂದಿರುಗಿದಾಗ ತಂದೆ ನೇ*ಣುಬಿಗಿದ ಸ್ಥಿತಿಯಲ್ಲಿದ್ದು, ತಾಯಿ ಬೆಡ್‌ನಲ್ಲಿ ಜೀ*ವ ಇಲ್ಲದ ಸ್ಥಿತಿಯಲ್ಲಿ ಮಲಗಿರುವುದನ್ನು ನೋಡಿ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ.
ಮಂಗಳೂರು/ಕೇರಳ : ರೈಲು ಹಳಿ ದಾಟುವಾಗ ವಿದ್ಯಾರ್ಥಿನಿಯೊಬ್ಬಳಿಗೆ ರೈಲು ಡಿ*ಕ್ಕಿಯಾಗಿ ಮೃ*ತಪಟ್ಟ ದಾರುಣ ಘಟನೆ ಮಯನಾಡು ರೈಲು ನಿಲ್ದಾಣದಲ್ಲಿ ನಡೆದಿದೆ.
ಮೃ*ತಪಟ್ಟ ವಿದ್ಯಾರ್ಥಿನಿ ದೇವಾನಂದ (17) ಎಂದು ಗುರುತಿಸಲಾಗಿದೆ.
ಮಯನಾಡು ಹೈಯರ್ ಸೆಕೆಂಡರಿ ಶಾಲೆಯ ದ್ವಿತಿಯ ಪಿಯುಸಿ ವಿದ್ಯಾರ್ಥಿನಿ ದೇವಾನಂದ ಮಾಯನಾಡು ರೈಲು ನಿಲ್ದಾಣದಲ್ಲಿ ಹಳಿ ದಾಟಿ ಪ್ಲಾಟ್‌ಫಾರ್ಮ್ಗೆ ಹತ್ತಲು ಯತ್ನಿಸುತ್ತಿದ್ದಾಗ ಈ ದು*ರ್ಘಟನೆ ನಡೆದಿದೆ.
ಮಯನಾಡು ನಿಲ್ದಾಣದ ಮೊದಲ ಪ್ಲಾಟ್‌ಫಾರ್ಮ್ನಲ್ಲಿ ನಿಲುಗಡೆಗೊಂಡಿದ್ದ ನಾಗರ್‌ಕೋಯಿಲ್-ಕೊಟ್ಟಾಯಂ ಪ್ಯಾಸೆಂಜರ್ ರೈಲು ಅದರ ಮುಂಭಾಗದ ಹಳಿಯನ್ನು ದಾಟಿ ಎರಡನೇ ಪ್ಲಾಟ್‌ಫಾರ್ಮ್ಗೆ ಪ್ರವೇಶಿಸಿದಾಗ ನೇತ್ರಾವತಿ ಎಕ್ಸ್ಪ್ರೆಸ್ ಬಂದಿದೆ.
ದೇವಾನಂದ ತನ್ನ ಸಹಪಾಠಿಗಳೊಂದಿಗೆ ರೈಲ್ವೇ ಪ್ರವೇಶಿಸಿ ಜೊತೆಯಲ್ಲಿದ್ದ ಇತರ ವಿದ್ಯಾರ್ಥಿಗಳು ಪ್ಲಾಟ್‌ಫಾರ್ಮ್ಗೆ ಎಳೆದೊಯ್ದರು, ಆದರೆ ದೇವಾನಂದ ರೈಲಿಗೆ ಡಿ*ಕ್ಕಿ ಹೊಡೆದು ಜೀ*ವ ಕಳೆದುಕೊಂಡಿದ್ದಾರೆ. ಮಕ್ಕಳು ರೈಲಿನ ಮುಂದೆ ಇರುವುದನ್ನು ತಿಳಿದ ರೈಲಿನ ಲೊಕೊ ಪೈಲಟ್ ನಿಲ್ಲಿಸದೆ ಹಾರ್ನ್ ಮಾಡಿದರೂ ಪ್ರಯೋಜನವಾಗಲಿಲ್ಲ ಎಂದು ತಿಳಿದುಬಂದಿದೆ.
kerala
ದಾರಿ ತಪ್ಪಿಸಿದ ಗೂಗಲ್ ಮ್ಯಾಪ್ : ರಂಗ ಕಲಾವಿದರಿಬ್ಬರ ದಾ*ರುಣ ಸಾವು..!
Published
6 days agoon
16/11/2024ಕೇರಳ : ರಂಗಭೂಮಿ ಕಲಾವಿದರನ್ನು ಹೊತ್ತು ಸಾಗುತ್ತಿದ್ದ ಮಿನಿ ಬಸ್ವೊಂದು ಅ*ಪಘಾತಕ್ಕೆ ಒಳಗಾಗಿ, ಇಬ್ಬರು ದಾ*ರುಣವಾಗಿ ಸಾವನ್ನಪ್ಪಿದ ಘಟನೆ ಕಣ್ಣೂರಿನ ಸಮೀಪದ ಕೆಲಕಮ್ ಬಳಿ ನಿನ್ನೆ (ನ.15) ಬೆಳಿಗ್ಗೆ ಸಂಭವಿಸಿದೆ.
ರಂಗಭೂಮಿಯ ಪ್ರಮುಖ ನಟಿಯರಾಗಿ ಗುರುತಿಸಿಕೊಂಡಿದ್ದ ಕಾಯಂಕುಲಂನ ಅಂಜಲಿ ಮತ್ತು ಕರುನಾಗಪಲ್ಲಿಯ ಜೆಸ್ಸಿ ಮೋಹನ್ ಸಾ*ವನ್ನಪ್ಪಿರುವ ದು*ರ್ದೈವಿಗಳು.
ಮಿನಿ ಬಸ್ ಚಾಲಕ ಗೂಗಲ್ ಮ್ಯಾಪ್ ಸಹಾಯದಿಂದ ಬಸ್ ಚಲಾಯಿಸುತ್ತಿದ್ದರು. ರಸ್ತೆ ಮಾರ್ಗ ಕಡಿದಾಗಿದ್ದರಿಂದ ಅ*ನಾಹುತ ನಡೆದಿದೆ. ಘಟನೆಯಲ್ಲಿ 9 ಮಂದಿ ಗಾ*ಯಗೊಂಡಿದ್ದು, ಮತ್ತೋರ್ವರ ಸ್ಥಿತಿ ಗಂ*ಭೀರವಾಗಿದೆ. ಅ*ಪಘಾತದ ಶಬ್ಧ ಕೇಳಿದ ಕೂಡಲೇ ಸ್ಥಳೀಯರು ಸ್ಥಳಕ್ಕೆ ಧಾವಿಸಿದ್ದು, ರಕ್ಷಣಾ ಕಾರ್ಯದಲ್ಲಿ ತೊಡಗಿದ್ದರು.
‘ಕಯಂಕುಮಂ ದೇವ ಕಮ್ಯೂನಿಕೇಷ’ನ್ ರಂಗಭೂಮಿ ಗುಂಪು ಕಡನ್ನಪಲ್ಲಿಯಲ್ಲಿ ಕಾರ್ಯಕ್ರಮ ಮುಗಿಸಿಕೊಂಡು ಬಸ್ ವಯನಾಡ್‌ನ ಸುಲ್ತಾನ್ ಬಥೇರಿ ಕಡೆ ಸಾಗುತ್ತಿತ್ತು. ಪೆರಿಯಾ ಚೂರ್ಮದ ನೆಡುಂಪೊಲ್ಲಿ- ವಾಡಿ ರಸ್ತೆ ಬಂದ್ ಆಗಿದ್ದ ಕಾರಣ ಕೊಟ್ಟಿಯೂರು ಬಾಯ್ಸ್ ಟೌನ್ ರಸ್ತೆ ಮಾರ್ಗವಾಗಿ ಕೆಲಕಮ್ ಪರ್ಯಾಯ ಮಾರ್ಗವನ್ನು ಮ್ಯಾಪ್ ತೋರಿಸಿದೆ. ಮಲಯಂಪಡಿಯಲ್ಲಿ ಕಡಿದಾದ ಎಸ್ ತಿರುಗಳಿಂದಾಗಿ ಮಿನಿ ಬಸ್ ಅ*ಪಘಾತಕ್ಕೀಡಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಗಾ*ಯಗೊಂಡವರನ್ನು ಕಾಯಂಕುಲಂನ ಉನ್ನಿ, ಉಮೇಶ್, ಸುರೇಶ್ ಮತ್ತು ಶಿಬು, ಎರ್ನಾಕುಲಂನ ಬಿಂಧು, ಕಲ್ಲುವತುಕ್ಕಲ್ನ ಚೆಲ್ಲಪ್ಪನ್ ಮತ್ತು ಕೊಲ್ಲಂನ ಶ್ಯಾಮ್ ಹಾಗೂ ಅಥಿರುಂಗಲ್ನ ಸುಭಾಶ್ ಎಂದು ಗುರುತಿಸಲಾಗಿದ್ದು, ಕಣ್ಣೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
kerala
ವಿದ್ಯಾರ್ಥಿ ಖಾ*ಸಗಿ ಅಂಗಕ್ಕೆ ಮೆಣಸಿನ ಪುಡಿ ಹಾಕಿ, ಐರನ್ ಬಾಕ್ಸ್ ನಿಂದ ಬರೆ ; ಶಿಕ್ಷಕ ಅರೆಸ್ಟ್
Published
2 weeks agoon
10/11/2024ಮಂಗಳೂರು/ಕೇರಳ : ಶಿಕ್ಷಕನೊಬ್ಬ ವಿದ್ಯಾರ್ಥಿಯ ಖಾ*ಸಗಿ ಅಂಗಕ್ಕೆ ಮೆಣಸಿನ ಪುಡಿ ಹಾಕಿ, ಐರನ್ ಬಾಕ್ಸ್ ನಿಂದ ಬರೆ ಎಳೆದ ಅಪರೂಪದ ದುರ್ಘಟನೆ ಉತ್ತರ ಕೇರಳದಲ್ಲಿ ನಡೆದಿದೆ.
ಪೊಲೀಸರ ಪ್ರಕಾರ, ಮದರಸಾ ಮೂಲದ ಶಿಕ್ಷಕನು ಬಾಲಕನ ಖಾ*ಸಗಿ ಭಾ*ಗಕ್ಕೆ ಮೆಣಸಿನ ಪುಡಿ ಹಚ್ಚಿ ಬಳಿಕ . ಐರನ್ ಬಾಕ್ಸ್ ನಿಂದ ಬರೆ ಎಳೆದಿದ್ದಾನೆ ಎಂದಿದ್ದಾರೆ. ಆರೋಪಿ ಮಲಪ್ಪುರಂ ಜಿಲ್ಲೆಯ ತಾನೂರ್ ಮೂಲದ ಉಮೈರ್ ಅಶ್ರಫಿ ಎಂದು ಗುರುತಿಸಲಾಗಿದೆ.
ಈ ಘಟನೆಯ ಕುರಿತು ವಿದ್ಯಾರ್ಥಿಯು ಪೊಲೀಸರಿಗೆ ದೂರು ನೀಡಿದ್ದು, ತನಿಖೆಯ ವೇಳೆ ಅಶ್ರಫಿ ಕೇರಳ ರಾಜ್ಯದಿಂದ ಪರಾರಿಯಾಗಿರುವುದು ತಿಳಿಯಿತು. ಕರ್ನಾಟಕ ಮತ್ತು ತಮಿಳುನಾಡಿನ ವಿವಿಧ ಸ್ಥಳಗಳಲ್ಲಿ ಅಡಗಿಕೊಂಡಿದ್ದ ಆತನಿಗಾಗಿ ಪೊಲೀಸ್ ಅಧಿಕಾರಿಗಳು ಹುಡುಕಾಟ ನಡೆಸಿದ್ದರು. ತಮಿಳುನಾಡಿನ ಕೊಯಮತ್ತೂರಿನಿಂದ ಅಶ್ರಫಿ ತನ್ನ ತವರು ಜಿಲ್ಲೆಗೆ ಮರಳಲಿದ್ದಾನೆ ಎಂಬ ಸುಳಿವಿನ ಮೇರೆಗೆ ಪೊಲೀಸ್ ತಂಡ ಗುರುವಾರ (ನ.7) ತಾನೂರಿನಲ್ಲಿ ಬೀಡುಬಿಟ್ಟಿದ್ದು, ಶೋಧ ಕಾರ್ಯ ನಡೆಸಿದೆ. ಪೊಲೀಸರನ್ನು ಕಂಡು ಪರಾರಿಯಾಗಲು ಯತ್ನಿಸಿದ ಅಶ್ರಫಿಯನ್ನು ಕೊನೆಗೂ ಬಂಧಿಸಲಾಯಿತು.
ಇದನ್ನೂ ಓದಿ : ಪುಟ್ಟ ಮಗುವಿನ ಕೈ ಮುರಿದ ಕ್ರೂ*ರಿ ಟೀಚರ್ !!
ಶಿಕ್ಷಕನ ಬಂಧನದ ಬಳಿಕ, ಕನ್ನವಂ ಪೊಲೀಸರು ಆತನ ವಿರುದ್ಧ ಭಾರತೀಯ ನ್ಯಾಯ ಸಂಹಿತೆಯ (ಬಿಎನ್‌ಎಸ್) ಸಂಬಂಧಿತ ಸೆಕ್ಷನ್‌ಗಳ ಅಡಿಯಲ್ಲಿ ಆರೋಪ ಹೊರಿಸಿದ್ದಾರೆ. ಯಾಕಾಗಿ ಹಾಗೆ ಮಾಡಿದ? ಅವನ ಉದ್ದೇಶವೇನು? ಎಂಬುವುದು ತನಿಖೆಯ ಬಳಿಕ ತಿಳಿದು ಬರಬೇಕಷ್ಟೇ. ಆತನನ್ನು ಸ್ಥಳೀಯ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದ್ದು, ಶುಕ್ರವಾರ (ನ.8) ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
LATEST NEWS
‘ಓಲಾ ಎಲೆಕ್ಟ್ರಿಕ್ ಕಂಪನಿ’ಯಿಂದ 500 ಉದ್ಯೋಗಿಗಳು ವಜಾ
ಯಜಮಾನಿಯರಿಗೆ ಸ್ಟಾಪ್ ಆಗುತ್ತಾ ಗೃಹಲಕ್ಷ್ಮಿ ಹಣ ?
ನೀವು ಹೀಗೆ ಮಾಡಿದ್ರೆ ‘ಗೂಗಲ್ ಪೇ’ನಲ್ಲಿ ಸುಲಭವಾಗಿ 1,000 ರೂಪಾಯಿ ಪಡೆಯಬಹುದು
ತಾಯಂದಿರಿಂಲೇ ಮಕ್ಕಳ ಅ*ಪಹರಣ; ಉದ್ದೇಶ ಕೇಳಿದ್ರೆ ನೀವೆ ಶಾಕ್ ಆಗ್ತೀರ !!
ಯೂಟ್ಯೂಬ್ನಲ್ಲಿ ಸಿನಿಮಾ ವಿಮರ್ಶೆ ಮಾಡುವುದರ ಮೇಲೆ ಬಿತ್ತು ನಿಷೇಧ
ಎಕ್ಸ್ಪ್ರೆಸ್ ರೈಲು ಡಿ*ಕ್ಕಿ; ವಿದ್ಯಾರ್ಥಿನಿಯ ದು*ರಂತ ಅಂ*ತ್ಯ
Trending
- LATEST NEWS2 days ago
ಪ್ರತಿದಿನ ಈ ಹಣ್ಣನ್ನು ತಿಂದರೆ ತೂಕ ಕಡಿಮೆಯಾಗುತ್ತೆ!
- LATEST NEWS4 days ago
ಮನೆಯ ಈ ಜಾಗದಲ್ಲಿ ನವಿಲು ಗರಿ ಇಟ್ಟು ನೋಡಿ; ಹಣದ ಸಮಸ್ಯೆಯೇ ಬರುವುದಿಲ್ಲ..!
- BIG BOSS5 days ago
BBK11: ನೇರ ನಡೆ, ನುಡಿಯಿಂದ ಗಮನ ಸೆಳೆದಿದ್ದ ಈ ಸ್ಪರ್ಧಿ; ಮನೆಯಿಂದ ಹೊರಕ್ಕೆ?
- LATEST NEWS2 days ago
ಡೇಟಿಂಗ್ಗೆ 11,650 ರೂ. , ಫೋಟೋಗೆ 760 ರೂ. ಕ್ಯಾಶ್ ರಿವಾರ್ಡ್: ಟೆಕ್ ಕಂಪನಿ