Saturday, August 20, 2022

ಬಸ್ಸಿನಲ್ಲಿ ಕಳೆದುಕೊಂಡಿದ್ದ ಚಿನ್ನದ ಸರ ಹಿಂತಿರುಗಿಸಿದ ಕಂಡಕ್ಟರ್‌

ಕಾಸರಗೋಡು: ಯುವತಿಯೋರ್ವಳು ಬಸ್ಸಿನಲ್ಲಿ ಕಳೆದುಕೊಂಡಿದ್ದ ಚಿನ್ನದ ಸರವನ್ನು ಬಸ್ ಕಂಡಕ್ಟರ್ ಮತ್ತೆ ಅವರಿಗೆ ಹಿಂತಿರುಗಿಸಿದ ಘಟನೆ ಕಾಸರಗೋಡಿನಲ್ಲಿ ನಡೆದಿದೆ.


ಜೂನ್ 4ರಂದು ಕಾಸರಗೋಡಿನಿಂದ ಮಂಗಳೂರಿಗೆ ಬರುವ ಸರ್ಕಾರಿ ಬಸ್ಸಿನಲ್ಲಿ ಒಂದು ಹುಡುಗಿಯ ಚಿನ್ನದಸರ ಕಳೆದುಹೋಗಿತ್ತು.

ಎಷ್ಟೋ ಹೊತ್ತಿನ ನಂತರ ಮನೆಗೆ ಬಂದು ಚಿನ್ನದ ಸರ ಕಳೆದು ಹೋಗಿರುವ ಬಗ್ಗೆ ಗೋಚರವಾಗಿ ತಕ್ಷಣ ಮನೆಯಲ್ಲಿ ಇರುವವರ ಗಮನಕ್ಕೆ ತಂದಿದ್ದರು.

ಆ ಬಸ್ಸಿನ ಬಗ್ಗೆ ಡಿಪೋದ ಮೇಲ್ವಿಚಾರಕರಲ್ಲಿ ವಿಚಾರಿಸಿದಾಗ ಬಸ್ಸಿನ ನಿರ್ವಾಹಕನಾದ ಮಂಜು ಇವರ ದೂರವಾಣಿ ಸಂಖ್ಯೆಯನ್ನು ನೀಡಿದ್ದರು.

ಇವರಿಗೆ ಕರೆ ಮಾಡಿ ಚಿನ್ನದ ಸರ ಕಳೆದು ಹೋಗಿರುವ ಬಗ್ಗೆ ಅವರಲ್ಲಿ ವಿಚಾರಿಸಿದಾಗ ತನ್ನ ಬಳಿ ಇದೆ ಎಂದು ಹೇಳಿ ತಾನು ಇರುವ ಮನೆಯ ವಿಳಾಸವನ್ನು ತಿಳಿಸಿದ್ದರು.

ಅಲ್ಲದೆ ಇವರು ಚಿನ್ನದ ಸರವನ್ನು ಸಂಬಂಧಪಟ್ಟವರಿಗೆ ನೀಡಿದ್ದು ಇಂತಹ ಒಂದು ಪ್ರಶಂಸನೀಯ ಪ್ರಾಮಾಣಿಕತೆ ಕಂಡಕ್ಟರ್ ಇರುವುದು ನಮಗೆಲ್ಲರಿಗೂ ಹೆಮ್ಮೆ ಎಂದು ಸ್ಥಳೀಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

LEAVE A REPLY

Please enter your comment!
Please enter your name here

Hot Topics