ಹೊನ್ನಾವರ: ಅಂಗಡಿಗಳ ಸಮೀಪದಲ್ಲಿ ಏಕಾಏಕಿ ಬೆಂಕಿ ದುರಂತ ಸಂಭವಿಸಿ ತೀವ್ರ ನಷ್ಟ ಉಂಟಾದ ಘಟನೆ ಹೊನ್ನಾವರ ಹೈವೆ ಸರ್ಕಲ್ ಬಳಿ ನಸುಕಿನ ಜಾವ ನಡೆದಿದೆ.
ಸಂಭವಿಸಿದ ಬೆಂಕಿ ಅವಘಡದಿಂದಾಗಿ ಗಣಪತಿ ಸೋಮಯ್ಯ ನಾಯ್ಕ ಎಂಬವರ ಅಂಗಡಿ, ಗೋವಿಂದ ಶೆಟ್ಟಿ ತರಕಾರಿ ಅಂಗಡಿ ಹಾಗೂ ಮಹೇಶ್ ನಾಗಪ್ಪ ನಾಯ್ಕ ಅವರ ಹಣ್ಣಿನ ಅಂಗಡಿ, ಪಕ್ಕದಲ್ಲಿದ್ದ ಮತ್ತೊಂದು ಅಂಗಡಿ ಕೂಡಾ ಸಂಪೂರ್ಣ ಸುಟ್ಟು ಭಸ್ಮವಾಗಿದ್ದು ಮಾಲೀಕರು ನಷ್ಟ ಅನುಭವಿಸುವಂತಾಗಿದೆ.
ಮುಂಜಾನೆ ವೇಳೆ ಅಂಗಡಿಗಳು ಮುಚ್ಚಿದ್ದರಿಂದ ಸ್ಥಳದಲ್ಲಿ ಯಾರೂ ಇರಲಿಲ್ಲ. ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳ ಬೆಂಕಿಯ ತೀವ್ರತೆ ಹೆಚ್ಚಾಗದಂತೆ ತಡೆಯುವಲ್ಲಿ ಯಶಸ್ವಿಯಾಗಿದ್ದಾರೆ.
ಪಟ್ಟಣ ಪಂಚಾಯತ್ ಅಧ್ಯಕ್ಷ ಶಿವರಾಜ ಮೇಸ್ತ, ತಹಶೀಲ್ದಾರ್ ನಾಗರಾಜ ನಾಯ್ಕ್ ಹಾಗೂ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡಸುತ್ತಿದ್ದಾರೆ.