ಸೋಂಕಿತರಿಗೆ ಪ್ಲಾಸ್ಮಾ ದಾನ ಮಾಡಿದರೆ ಸರ್ಕಾರದಿಂದ 5,000 ರೂ ಪ್ರೋತ್ಸಾಹ ಧನ..!
ಸೋಂಕಿತರಿಗೆ ಪ್ಲಾಸ್ಮಾ ದಾನ ಮಾಡಿದರೆ ಸರ್ಕಾರದಿಂದ 5,000 ರೂ ಪ್ರೋತ್ಸಾಹ ಧನ..!
ಬೆಂಗಳೂರು : ಕೋವಿಡ್ ಸೋಂಕಿನಿಂದ ಗುಣಮುಖರಾಗಿರುವವರು, ಇತರ ಸೋಂಕಿತರಿಗೆ ತಮ್ಮ ಪ್ಲಾಸ್ಮಾ ದಾನ ಮಾಡಿದರೆ 5,000 ರೂ. ಪ್ರೋತ್ಸಾಹ ಧನ ನೀಡಲಾಗುವುದು ರಾಜ್ಯ ಸರ್ಕಾರ ಘೋಷಣೆ ಮಾಡಿದೆ.
ಈ ಬಗ್ಗೆ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಮಾಹಿತಿ ನೀಡಿದ್ದಾರೆ. ಬೆಂಗಳೂರಿನಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ರಾಜ್ಯದಲ್ಲಿ ಕೋವಿಡ್ ಸೋಂಕಿನಿಂದ ಬಳಲುತ್ತಿದ್ದ 18,466 ಜನ ಈಗಾಗಲೇ ಗುಣಮುಖರಾಗಿದ್ದಾರೆ. ಐಸಿಯುನಲ್ಲಿ 597 ಜನ ಚಿಕಿತ್ಸೆ ಪಡೆಯುತ್ತಿದ್ದಾರೆ.
ಇಂತಹವರ ಚಿಕಿತ್ಸೆಗೆ ಗುಣಮುಖರಾದವರ ಪ್ಲಾಸ್ಮಾ ಅತ್ಯಂತ ಪರಿಣಾಮಕಾರಿಯಾಗಿದ್ದು, ಪ್ಲಾಸ್ಮಾ ದಾನ ಮಾಡುವಂತೆ ಮನವಿ ಮಾಡಿದರು. ಬೆಂಗಳೂರಿನ ಎಲ್ಲ ವಲಯಗಳ ಬೂತ್ ಕಾರ್ಯಪಡೆಯ ನೋಡಲ್ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಲಾಗಿದ್ದು, 2 ದಿನಗಳಲ್ಲಿ ಕಾರ್ಯಪಡೆ ರಚಿಸಲು ನಿರ್ದೇಶನ ನೀಡಲಾಗಿದೆ.
ಸದಸ್ಯರ ಕರ್ತವ್ಯ ಮತ್ತು ನಿರ್ವಹಿಸಬೇಕಾದ ಕೆಲಸಗಳ ಕುರಿತು ಮಾರ್ಗಸೂಚಿಯನ್ನು ನೀಡಲಾಗಿದೆ ಎಂದು ಅವರು ಹೇಳಿದರು. ಲಾಕ್ಡೌನ್ ಅವಧಿಯಲ್ಲಿ ಮನೆಮನೆ ಸಮೀಕ್ಷೆ ನಡೆಸಿ 60 ವರ್ಷ ಮೇಲ್ಪಟ್ಟವರಿಗೆ ರಿವರ್ಸ್ ಐಸೋಲೇಶನ್ ಮಾಡಲು ಸೂಚನೆ ನೀಡಲಾಗಿದೆ. ಹಾಸಿಗೆ ವ್ಯವಸ್ಥೆ, ಆಂಬುಲೆನ್ಸ್ ಒದಗಿಸುವುದು ಮುಂತಾದ ನಿರ್ಧಾರಗಳನ್ನು ಕಾರ್ಯಪಡೆ ತೆಗೆದುಕೊಳ್ಳಲಿದೆ ಎಂದು ಸುಧಾಕರ್ ತಿಳಿಸಿದರು.
ಕೋವಿಡ್ ನಿರ್ವಹಣೆ ಮತ್ತು ನಿಗ್ರಹಕ್ಕೆ ಸರಕಾರದ ಜೊತೆ ಕೈಜೋಡಿಸುವಂತೆ ನಾಗರಿಕರಲ್ಲಿ ಮನವಿ ಮಾಡಿದ ಅವರು, ಈ ಮಹತ್ವದ ಕಾರ್ಯಕ್ಕೆ ಸಹಕಾರ ನೀಡುತ್ತಿರುವ ಸಂಘ ಸಂಸ್ಥೆಗಳಿಗೆ ಕೃತಜ್ಞತೆ ಸಲ್ಲಿಸಿದರು.
ಇನ್ನು ರಾಜ್ಯದಲ್ಲಿ ಕೋವಿಡ್ ಪರೀಕ್ಷೆ ನಡೆಸುವ ನಿಟ್ಟಿನಲ್ಲಿ ಮಹತ್ವದ ಮೈಲಿಗಲ್ಲು ಸಾಧಿಸಲಾಗಿದ್ದು, ಇಂದಿಗೆ 9 ಲಕ್ಷ ಕೋವಿಡ್ ಟೆಸ್ಟ್ ಗಳು ಪೂರ್ಣವಾಗಿವೆ. ಇವತ್ತು ಒಂದೇ ದಿನ 22,204 ಪರೀಕ್ಷೆ ನಡೆಸಲಾಗಿದೆ. ರಾಜ್ಯದಲ್ಲಿ ಇಂದು 3,000ಕ್ಕೂ ಅಧಿಕ ಸೋಂಕಿತರು ದೃಢಪಟ್ಟಿದ್ದು, ರಾಜಧಾನಿ ಬೆಂಗಳೂರಿನಲ್ಲಿ ಈ ಪೈಕಿ 1975 ಸೋಂಕಿತರು ಗುರುತಿಸಲ್ಪಟ್ಟಿದ್ದಾರೆ ಎಂದು ಅವರು ಹೇಳಿದರು.
LATEST NEWS
WATCH : ಭೂಮಿ ಕುಸಿದು ಗುಂಡಿಯೊಳಗೆ ಬಿದ್ದ ಟ್ರಕ್; ಭಯಾನಕ ವೀಡಿಯೋ ವೈರಲ್
ಮಂಗಳೂರು/ ಮಹಾರಾಷ್ಟ್ರ: ಪೋಸ್ಟ್ ಆಫೀಸ್ ಕಾಂಪ್ಲೆಕ್ಸ್ನ ನೆಲ ಏಕಾ ಏಕಿ ಕುಸಿದು ಬಿದ್ದ ಕಾರಣ ಮುನ್ಸಿಪಲ್ ಕಾರ್ಪೋರೇಷನ್ಗೆ ಸೇರಿದ್ದ ಟ್ರಕ್ ಒಂದು ಗುಂಡಿಗೆ ಬಿದ್ದ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ. ಮಹಾರಾಷ್ಟ್ರದ ಪುಣೆ ನಗರದ ಅಂಚೆ ಕಚೇರಿ ಆವರಣದಲ್ಲಿ ಈ ಘಟನೆ ನಡೆದಿದೆ.
ಟ್ರಕ್ ಪುಣೆ ಮುನ್ಸಿಪಲ್ ಕಾರ್ಪೋರೆಷನ್ಗೆ ಸೇರಿದ್ದಾಗಿದ್ದು, ಚರಂಡಿ ಸ್ವಚ್ಚಗೊಳಿಸುವ ಕೆಲಸಕ್ಕೆ ಪೋಸ್ಟ್ ಆಫೀಸ್ ಬಳಿ ಬಂದಿತ್ತು. ಈ ವೇಳೆ ಟ್ರಕ್ ನಿಲ್ಲಿಸಿದ್ದ ಜಾಗದಲ್ಲೇ ಭೂಮಿ ಕುಸಿದು ಟ್ರಕ್ ಭೂಮಿಯ ಒಡಲಿಗೆ ಜಾರಿದೆ. ಈ ವೇಳೆ ಟ್ರಕ್ನಲ್ಲಿದ್ದ ಚಾಲಕ ಹಾರಿ ತಪ್ಪಿಸಿಕೊಂಡ ಕಾರಣ ಪ್ರಾ*ಣಾಪಾಯದಿಂದ ಪಾರಾಗಿದ್ದಾನೆ. ಭೂಮಿ ಕುಸಿದ ಕಾರಣ ಸುಮಾರು 40ರಿಂದ50 ಅಡಿ ಆಳದ ಗುಂಡಿ ನಿರ್ಮಾಣವಾಗಿದ್ದು, ಟ್ರಕ್ ಇದರಲ್ಲಿ ಸಿಲುಕಿಕೊಂಡಿದೆ.
ಇದನ್ನೂ ಓದಿ : ವ್ಯಾಟ್ಸಾಪ್ ಸ್ಟೇಟಸ್ ಹಾಕಿ ಆತ್ಮಹ*ತ್ಯೆ ಮಾಡಿಕೊಂಡ ವ್ಯಕ್ತಿ
ಅನಿರೀಕ್ಷಿತವಾಗಿ ಸಂಭವಿಸಿದ ಈ ಘಟನೆಯ ಬಗ್ಗೆ ಜನರು ಅಚ್ಚರಿ ವ್ಯಕ್ತಪಡಿಸಿದ್ದಾರೆ. ಪೋಸ್ಟ್ ಆಫೀಸ್ ಮುಂಬಾಗದಲ್ಲಿ ಈ ರೀತಿ ಕುಸಿತ ಆಗಲು ಕಾರಣ ಏನು ಅನ್ನೋ ಬಗ್ಗೆ ಚರ್ಚೆಗಳು ಆರಂಭವಾಗಿವೆ. ಕ್ರೇನ್ ಹಾಗೂ ಜೆಸಿಬಿ ಸಹಾಯದಿಂದ ಟ್ರಕ್ ಮೇಲೆತ್ತಲಾಗಿದೆ.
DAKSHINA KANNADA
ಕನ್ನಡದಲ್ಲಿ ಔಷಧ ಚೀಟಿ ಬರೆದು ಗಮನ ಸೆಳೆದ ಕಾಸರಗೋಡು ಜಿಲ್ಲೆಯ ದಂತ ವೈದ್ಯ..!
ಮಂಜೇಶ್ವರ/ಮಂಗಳೂರು: ಈ ಹಿಂದೆ ವೈದ್ಯರೊಬ್ಬರು ಕನ್ನಡದಲ್ಲಿ ಔಷಧ ಚೀಟಿಯನ್ನು ಬರೆಯುವ ಮೂಲಕ ಎಲ್ಲರ ಗಮನ ಸೆಳೆದಿದ್ದರು. ಬಳಿಕ ಕರ್ನಾಟಕದಲ್ಲಿ ವೈದ್ಯರು ಕನ್ನಡದಲ್ಲೇ ಔಷಧ ಚೀಟಿಯನ್ನು ಬರೆಯುವಂತೆ ಕನ್ನಡ ಪ್ರಾಧಿಕಾರ ಸೂಚನೆ ಕೂಡಾ ನೀಡಿತ್ತು. ಆದರೆ ಕರ್ನಾಟಕದಲ್ಲಿ ಈ ಸೂಚನೆ ಕಟ್ಟುನಿಟ್ಟಾಗಿ ಜಾರಿಯಾಗುವ ಮೊದಲೇ ಕೇರಳದ ಕಾಸರಗೋಡಿನಲ್ಲಿ ವೈದ್ಯರೊಬ್ಬರು ಕನ್ನಡದಲ್ಲಿ ಔಷಧ ಚೀಟಿ ಬರೆದು ಎಲ್ಲರ ಗಮನ ಸೆಳೆದಿದ್ದಾರೆ.
ಹೌದು, ಕಾಸರಗೋಡಿನ ಮಂಜೇಶ್ವರದಲ್ಲಿರುವ ಸುರಕ್ಷಾ ದಂತ ಚಿಕಿತ್ಸಾಲಯದ ಡಾ.ಮುರಳೀ ಮೋಹನ ಚೂಂತೂರು ರವರು ಕನ್ನಡ ಪ್ರೇಮ ಮೆರೆದಿದ್ದಾರೆ. ಕನ್ನಡ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಪುರುಷೋತ್ತಮ ಬಿಳಿನೆಲೆ ಅವರು ಇತ್ತೀಚೆಗೆ ಮಂಗಳೂರು ಭೇಟಿ ನೀಡಿದ ವೇಳೆ ವೈದ್ಯರು ಕೂಡಾ ಕನ್ನಡದಲ್ಲಿ ಔಷಧ ಚೀಟಿಯನ್ನು ಜನರಿಗೆ ಅರ್ಥವಾಗುವಂತೆ ಬರೆಯಬೇಕು ಎಂದು ಸೂಚನೆ ನೀಡಲಾಗಿದೆ ಎಂದು ಹೇಳಿದ್ದರು.
ಹಾಗಾಗಿ ರಾಜ್ಯದಲ್ಲಿ ಒಬ್ಬ ವೈದ್ಯರು ಕನ್ನಡದಲ್ಲಿ ಔಷಧ ಚೀಟಿ ಬರೆಯುವ ಮೂಲಕ ಮೊದಲ ಸ್ಪಂದನ ನೀಡಿದ್ದರು. ಇದೀಗ ಕೇರಳ ರಾಜ್ಯದಲ್ಲಿ ವೈದ್ಯರೊಬ್ಬರು ಕನ್ನಡದಲ್ಲಿ ಔಷಧ ಚೀಟಿ ಬರೆಯುವ ಮೂಲಕ ತನ್ನ ಕನ್ನಡ ಪ್ರೇಮವನ್ನು ತೋರಿಸಿದ್ದಾರೆ.
ಸರ್ಕಾರಿ ವೈದ್ಯರು ಕನ್ನಡದಲ್ಲೇ ಔಷಧ ಚೀಟಿ ಬರೆಯಲು ಆದೇಶಿಸುವಂತೆ ಸಚಿವರಿಗೆ ಪ್ರಾಧಿಕಾರ ಪತ್ರ
ಅದಾದ ಬಳಿಕ ಆರೋಗ್ಯ ಸಚಿವರು ಪತ್ರಿಕಾ ಹೇಳಿಕೆ ಹೊರಡಿಸಿ, ಈ ಬಗ್ಗೆ ಸಾರ್ವಜನಿಕವಾಗಿ ಚರ್ಚಿಸಿ, ಮುಖ್ಯಮಂತ್ರಿಗಳೊಂದಿಗೂ ಚರ್ಚೆ ನಡೆಸಿ ಬಳಿಕ ಸಾಧಕ ಬಾಧಕ ನೋಡಿಕೊಂಡು ಅನುಷ್ಠಾನಕ್ಕೆ ತರವಲಾಗುವುದು ಎಂದಿದ್ದರು. ಈಗ ಗಡಿನಾಡಿನ ಕನ್ನಡಿಗ ವೈದ್ಯರು ಔಷಧ ಚೀಟಿಯನ್ನು ಕನ್ನಡದಲ್ಲಿ ಬರೆಯುವ ಮೂಲಕ ಇತರರಿಗೆ ಮಾರ್ಗದರ್ಶಿಯಾಗಿರುವುದನ್ನು ಪ್ರಾಧಿಕಾರ ಅಧ್ಯಕ್ಷ ಪುರುಷೋತ್ತಮ ಬಿಳಿಮಲೆ ಅವರು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿ ಸಂತಸ ವ್ಯಕ್ತಪಡಿಸಿ ಅಭಿನಂದಿಸಿದ್ದಾರೆ.
LATEST NEWS
ಲೋ ಬಿಪಿಯಿಂದ ಕುಸಿದು ಬಿದ್ದು 5ನೇ ತರಗತಿ ವಿದ್ಯಾರ್ಥಿ ಸಾ*ವು
ಬೆಂಗಳೂರು : ತರಗತಿಯಲ್ಲೇ ಏಕಾಏಕಿ ಲೋ ಬಿಪಿಯಿಂದ ಕುಸಿದು ಬಿದ್ದು ವಿದ್ಯಾರ್ಥಿ ಸಾ*ವನಪ್ಪಿದ ಘಟನೆ ರಾಯಚೂರು ಜಿಲ್ಲೆ ದೇವದುರ್ಗ ಗಬ್ಯೂರು ಗ್ರಾಮದಲ್ಲಿ ನಡೆದಿದೆ.
5ನೇ ತರಗತಿ ವಿದ್ಯಾರ್ಥಿ ಶಿವಪ್ರಸಾದ್ ಮೃ*ತ ಬಾಲಕ. ಗಬ್ಯೂರ್ನಲ್ಲಿ ಸೈನಿಕ, ನವೋದಯ ಕೋಚಿಂಗ್ ಪಡೆಯುತ್ತಿದ್ದ. ಇನ್ನು ಕೋಚಿಂಗ್ ಸೆಂಟರ್ನಲ್ಲೇ ಏಕಾಏಕಿ ಲೋ ಬಿಪಿಯಾಗಿ ಬಾಲಕ ಶಿವಪ್ರಸಾದ್ ಸಾವನಪ್ಪಿದ್ದು, ಗಬೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.