Connect with us

    DAKSHINA KANNADA

    ಹಿರಿಯ ಐಪಿಎಸ್ ಅಧಿಕಾರಿ ಆರ್. ದಿಲೀಪ್ ಹೃದಯಾಘಾತದಿಂದ ನಿಧನ..!

    Published

    on

    ಹಿರಿಯ ಪೊಲೀಸ್ ಅಧಿಕಾರಿ ಆರ್ ದಿಲಿಪ್ ಅವರು ಹೃಹಯಘಾತದಿಂದ ನಿಧನರಾಗಿದ್ದಾರೆ. ರಾಜ್ಯದ ಹಿರಿಯ ಐಪಿಎಸ್ ಅಧಿಕಾರಿಯಾಗಿದ್ದ 53 ವರ್ಷದ ದಿಲೀಪ್ ಅನಾರೋಗ್ಯದಿಂದ ಬಳಲುತಿದ್ದರು.

    ಬೆಂಗಳೂರು: ಹಿರಿಯ ಪೊಲೀಸ್ ಅಧಿಕಾರಿ ಆರ್ ದಿಲಿಪ್ ಅವರು ಹೃಹಯಘಾತದಿಂದ ನಿಧನರಾಗಿದ್ದಾರೆ. ರಾಜ್ಯದ ಹಿರಿಯ ಐಪಿಎಸ್ ಅಧಿಕಾರಿಯಾಗಿದ್ದ 53 ವರ್ಷದ ದಿಲೀಪ್ ಅನಾರೋಗ್ಯದಿಂದ ಬಳಲುತಿದ್ದರು.

    ಬೆಂಗಳೂರು ನಗರದ ಬನ್ನೇರುಘಟ್ಟ ರಸ್ತೆಯ ಅಪೋಲೊ ಆಸ್ಪತ್ರೆಯಲ್ಲಿ ಇಂದು ಶುಕ್ರವಾರ ನಿಧನರಾದರು.

    ಸಿಐಡಿ ಆರ್ಥಿಕ ವಿಭಾಗದ ಡಿಐಜಿಪಿ ಆಗಿ ಕೆಲಸ ಮಾಡುತ್ತಿದ್ದ ಇವರು, ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದರು.

    ಇತ್ತೀಚೆಗೆ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆಯನ್ನೂ ಮಾಡಿಸಿಕೊಂಡಿದ್ದರು. ಬಿಇ ಪದವೀಧರರಾಗಿದ್ದ ದಿಲೀಪ್ ಅವರು 2005ರಲ್ಲಿ ಪೊಲೀಸ್ ಸೇವೆಗೆ ಸೇರಿದ್ದರು.

    ದಕ್ಷಿಣ ಕನ್ನಡ, ಧಾರವಾಡ, ಉತ್ತರ ಕನ್ನಡ ಸೇರಿದಂತೆ ಹಲವು ಜಿಲ್ಲೆಗಳ ಎಸ್ಪಿ ಆಗಿ ಕರ್ತವ್ಯ ನಿರ್ವಹಿಸಿದ್ದರು. ಹುಬ್ಬಳ್ಳಿ–ಧಾರವಾಡ ಕಮಿಷನರ್ ಆಗಿಯೂ ದಿಲೀಪ್ ಅವರು ಸೇವೆ ಸಲ್ಲಿಸಿದ್ದರು.

    DAKSHINA KANNADA

    ಮಂಗಳೂರು: ಅದ್ಧೂರಿಯಾಗಿ ನಡೆದ ಬರ್ಕೆ ಗುರ್ಜಿ ದೀಪೋತ್ಸವ

    Published

    on

    ಮಂಗಳೂರು: ಬರ್ಕೆ ಫ್ರೆಂಡ್ಸ್‌ ಇದರ ಗುರ್ಜಿ ದೀಪೋತ್ಸವ ಬಳ್ಳಾಲ್‌ಭಾಗ್‌ನಲ್ಲಿ ಅದ್ಧೂರಿಯಾಗಿ ನಡೆದಿದೆ. ಸಾವಿರಾರು ಜನರು ಈ ಗುರ್ಜಿ ದೀಪೋತ್ಸವದಲ್ಲಿ ಭಾಗವಹಿಸಿ ದೇವರ ಕೃಪೆಗೆ ಪಾತ್ರಾರಾಗಿದ್ದಾರೆ. ಹುಲಿ ವೇಷ ಮಾತ್ರವಲ್ಲದೆ ಹಲವಾರು ಸಮಾಜಸೇವಾ ಕಾರ್ಯದ ಮೂಲಕ ಜನರ ಕಷ್ಟಕ್ಕೆ ಸ್ಪಂಧಿಸುತ್ತಿರುವ ಬರ್ಕೆ ಫ್ರೆಂಡ್ಸ್‌ ಈ ಧಾರ್ಮಿಕ ಕಾರ್ಯಕ್ರಮವನ್ನು ಕೂಡಾ ಆಯೋಜಿಸುತ್ತಿದೆ. ಈ ಕಾರ್ಯಕ್ರಮದ ಮೂಲಕ ಜನರಿಗೆ ಭಕ್ತಿಯ ಪ್ರಸಾದ ನೀಡುವ ಜೊತೆಗೆ ಸಾಂಸ್ಕೃತಿಕ ಕಾರ್ಯಕ್ರಮದ ಮೂಲಕ ಮನರಂಜಿಸುವ ಕೆಲಸ ಹಾಗೂ ಸಾಧಕರನ್ನು ಗುರುತಿಸಿ ಸನ್ಮಾನಿಸುವ ಕಾರ್ಯ ನಡೆಸಲಾಗುತ್ತಿದೆ. ಬುಧವಾರ ಸಂಜೆ ಬಳ್ಳಾಲ್‌ ಭಾಗ್‌ನಲ್ಲಿ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಮೇಳೈಸುವುದರೊಂದಿಗೆ ಬರ್ಕೆ ಗುರ್ಜಿ ದೀಪೋತ್ಸವ ಸಂಪನ್ನಗೊಂಡಿದೆ.


    ಇದುವರೆಗೆ ನೂರಾರು ಸಾಧಕರನ್ನು ಗುರುತಿಸಿ ಗೌರವಿಸಿರುವ ಬರ್ಕೆ ಫ್ರೆಂಡ್ಸ್ ತಂಡ ಈ ಬಾರಿ ವಿಶೇಷವಾಗಿ ಇಬ್ಬರು ಹಿರಿಯರನ್ನು ಹಾಗೂ ಇಬ್ಬರು ಕಿರಿಯರನ್ನು ಸನ್ಮಾನಿಸಿದೆ. ಕಟೀಲು ಯಕ್ಷಗಾನ ಮೇಳದ ಹಿರಿಯ ಕಲಾವಿದ ಉಮೇಶ್ ಕಕ್ಕೆ ಪದವು ಅವರನ್ನು ಈ ವೇದಿಕೆಯಲ್ಲಿ ಸನ್ಮಾನಿಸಲಾಗಿದೆ. ಉಮೇಶ್ ಕಕ್ಕೆ ಪದವು ಅವರು ಕಟೀಲು ಯಕ್ಷಗಾನದಲ್ಲಿ ಮಹಿಷಾಸುರನ ಪಾತ್ರದ ಮೂಲಕ ಜನರ ಮನಸ್ಸು ಗೆದ್ದವರಾಗಿದ್ದಾರೆ. ಅಷ್ಟೇ ಅಲ್ಲದೆ ಒಬ್ಬ ಬಡ ಕೂಲಿಕಾರ್ಮಿಕನಾಗಿ ಹಗಲಿನಲ್ಲಿ ಕಲ್ಲಿನ ಕೋರೆಯಲ್ಲಿ ಕೆಲಸ ಮಾಡಿ ಸಂಜೆಯಾಗುತ್ತಿದ್ದಂತೆ ಯಕ್ಷಗಾನದಲ್ಲಿ ಬಣ್ಣ ಹಚ್ಚಿ ದೇವಿಯ ಸೇವೆ ಮಾಡುತ್ತಿದ್ದಾರೆ. ಇವರ ಈ ಸೇವಾ ಕಾರ್ಯವನ್ನು ಬರ್ಕೆ ಫ್ರೆಂಡ್ಸ್‌ ಗುರುತಿಸಿ ಗೌರವಿಸಿದೆ.


    ಜಾತಿ ಧರ್ಮದ ಎಲ್ಲೆ ಮೀರಿ ಪ್ರೀತಿ ವಿಶ್ವಾಸಕ್ಕೆ ಬೆಲೆ ನೀಡುವ ಬರ್ಕೆ ಫ್ರೆಂಡ್ಸ್‌ , ತಮ್ಮೆಲ್ಲಾ ಕಾರ್ಯಕ್ಕೆ ಹಲವಾರು ವರ್ಷಗಳಿಂದ ಕೈ ಜೋಡಿಸುವ ಸೆಂಟ್ರಲ್ ಮಾರ್ಕೆಟ್‌ನ ಹಣ್ಣಿನ ವ್ಯಾಪಾರಿ ಅಶ್ರಫ್ ಅವರನ್ನು ಸನ್ಮಾನಿಸಿದೆ. ಅಶ್ರಫ್ ಅವರ ಸಂಕಷ್ಟದ ಸಮಯದಲ್ಲಿ ಬರ್ಕೆ ಫ್ರೆಂಡ್ಸ್‌ ಸಹಾಯ ಮಾಡಿದ್ದನ್ನು ಮರೆಯದೆ ಕೃತಜ್ಞತೆಯನ್ನು ತೋರಿಸಿದ್ದಾರೆ. ಬರ್ಕೆ ಫ್ರೆಂಡ್ಸ್ ಮಾಡಿದ ಸಹಾಯಕ್ಕೆ ಪ್ರತಿಯಾಗಿ ಹಲವಾರು ವರ್ಷದಿಂದ ಗುರ್ಜಿ ಸೇರಿದಂತೆ ಎಲ್ಲಾ ಕಾರ್ಯಕ್ರಮದಲ್ಲೂ ಅಶ್ರಫ್ ಅವರು ಸಹಾಯ ಹಸ್ತ ನೀಡಿದ್ದಾರೆ. ಇದೇ ವೇಳೆ ಸ್ಕೇಟಿಂಗ್‌ನಲ್ಲಿ ಹಲವು ಪ್ರಶಸ್ತಿಗಳನ್ನು ಪಡೆದಿರುವ ಕೇಟ್ ಆರ್ವಿ ವಾಸ್ ಹಾಗೂ ತನ್ನ ಸುಂದರ ಹಸ್ತಾಕ್ಷರಕ್ಕಾಗಿ ರಾಷ್ಟ್ರ ಮಟ್ಟದಲ್ಲಿ ಗುರುತಿಸಿಕೊಂಡಿರುವ ಪ್ರಕೃತಿ ಬೋಳೂರು ಅವರನ್ನು ಸನ್ಮಾನಿಸಲಾಗಿದೆ.

     

    ಗುರ್ಜಿ ದೀಪೋತ್ಸವದ ಹಿನ್ನಲೆಯಲ್ಲಿ ನಡೆದಿದ್ದ ಧಾರ್ಮಿಕ ಕಾರ್ಯಕ್ರಮದ ಭಾಗವಾಗಿ ಮಹಿಳೆಯರಿಂದ ಭಜನಾ ಕಾರ್ಯಕ್ರಮ ನಡೆದಿತ್ತು. ಸಭಾ ಕಾರ್ಯಕ್ರಮದ ಬಳಿಕ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ವರ್ಣರಂಜಿತ ಬೆಳಕಿನಲ್ಲಿ ರಸಮಂಜರಿ ಹಾಗೂ ನೃತ್ಯಗಳ ಮೂಲಕ ಜನರನ್ನು ರಂಜಿಸಲಾಗಿತ್ತು. ಸಭಾ ಕಾರ್ಯಕ್ರಮ ಹಾಗೂ ಸನ್ಮಾನ ಕಾರ್ಯಕ್ರಮದಲ್ಲಿ ಮಂಗಳೂರು ಮೇಯರ್ ಮನೋಜ್ ಕೋಡಿಕಲ್, ಸರ್ವದಾ ಡಿಸ್ಟಿಲರ್ಸ್ ಇದರ ಮಾಲಕ ಮನುಕುಮಾರ್, ಮಾಯಾ ಕ್ಯಾಟರರ್ಸ್ ಮಾಲಕ ಮಾದವ ಕಾಮತ್, ಮಾಯ ಇಂಟರ್ನ್ಯಾಷನಲ್ ಇದರ ಮಾಲಕಾರದ ವಾಸುದೇವ ಕಾಮತ್, ಇನ್ ಆರ್ಟ್‌ದ ಮಾಲಕ ಯಶ್ ರಾಜ್‌, ಗುರ್ಜಿಯನ್ನು ಆರಂಭಿಸಿದ ಯಜ್ಞೇಶ್ ಬರ್ಕೇ, ಸುಚೀಂದ್ರ ಅಮೀನ್ , ಕಿಶನ್ ಬರ್ಕೆ, ಸಂತೋಷ್ ಶೆಟ್ಟಿ , ಉದ್ಯಮಿ ಅಜಿತ್ ಕಾಂಚನ್ , ನಮ್ಮ ಕುಡ್ಲ ನಿರ್ದೇಶಕ ಲೀಲಾಕ್ಷ ಬಿ ಕರ್ಕೇರಾ ಮೊದಲಾದವರು ಉಪಸ್ಥಿತರಿದ್ದರು.

    Continue Reading

    DAKSHINA KANNADA

    ಮಂಗಳೂರು : ಜನಪರ ಚಳುವಳಿ ನಡೆಸಿದ್ದಕ್ಕೆ ಪೊಲೀಸರಿಂದ FIR ಅಸ್ತ್ರ

    Published

    on

    ಮಂಗಳೂರು : ರಾಷ್ಟ್ರೀಯ ಹೆದ್ದಾರಿ ದುರಸ್ಥಿ ವಿಚಾರ ಮುಂದಿಟ್ಟು ಪ್ರತಿಭಟನೆ ನಡೆಸಿದಕ್ಕಾಗಿ ಟೋಲ್ ಗೇಟ್ ಹೋರಾಟ ಸಮಿತಿಯ ಸಂಚಾಲಕ ಮುನೀರ್ ಕಾಟಿಪಳ್ಳ ಅವರ ಮೇಲೆ FIR ಮಾತ್ರವಲ್ಲದೇ, ಪೊಲೀಸ್ ಇಲಾಖೆ ದಾಖಲಿಸಿರುವ ಎರಡನೇ ಸುಮೋಟೋ ಕೇಸ್ ಆಗಿದೆ.


    ಪೊಲೀಸ್ ಇಲಾಖೆಯ ಈ ನಡೆ ಹೋರಾಟಗಾರರ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಸಾರ್ವಜನಿಕ ಹಿತಾಸಕ್ತಿಯಲ್ಲಿ ಜನಪರವಾಗಿ ನಡೆದಿರುವ ಹೋರಾಟದಲ್ಲಿ ಯಾವ ರೀತಿಯ ಶಾಂತಿ ಭಂಗ ಆಗಿದೆ ಅಂತ ಹೋರಾಟಗಾರರು ಪ್ರಶ್ನೆ ಮಾಡಿದ್ದಾರೆ.


    “ಪೊಲೀಸರು FIR ದಾಖಲಿಸಿದ ಬಳಿಕ ಕಾನೂನು ಪ್ರಕಾರವಾಗಿ ಆರೋಪಿಯ ಬಂಧನವಾಗಬೇಕು. ತಾಕತ್ತಿದ್ದರೆ ಮುನೀರ್ ಕಾಟಿಪಳ್ಳ ಅವರನ್ನು ಬಂಧಿಸಿ ನೋಡಿ ಎಂದು ಪೊಲೀಸ್ ಇಲಾಖೆಗೆ ಸವಾಲೆಸೆಯಾಗಿದೆ. ಇದೇ ವಿಚಾರ ಮುಂದಿಟ್ಟು ಗುರುವಾರ ಸಂಜೆ ರಾವ್‌ ಅ್ಯಂಡ್ ರಾವ್ ವೃತ್ತದ ಬಳಿ ಪ್ರತಿಭಟನೆಗೂ ಕರೆ ನೀಡಲಾಗಿದೆ. ಇದೆಲ್ಲದರ ನಡುವೆ ಮುನೀರ್ ಕಾಟಿಪಳ್ಳ ಪೊಲೀಸ್ ಆಯುಕ್ತರಿಗೆ ಬಹಿರಂಗ ಪತ್ರ ಬರೆದು ತರಾಟೆಗೆ ತೆಗೆದುಕೊಂಡಿದ್ದಾರೆ. ಜನಪರ ಹೋರಾಟಕ್ಕೆ ಧ್ವನಿವರ್ಧಕ ಹಾಗೂ ಶಾಮಿಯಾನ ಹಾಕಲು ಅನುಮತಿ ನಿರಾಕರಿಸಿರುವುದೇ ಸಂವಿಧಾನ ವಿರೋಧಿ ದೋರಣೆಯಾಗಿದೆ. ಧ್ವನಿವರ್ಧಕ ಹಾಗೂ ಶಾಮಿಯಾನ ಇಲ್ಲದೆಯೇ ಸುಡು ಬಿಸಿಲಿನಲ್ಲಿ ಕುಳಿತು ಪ್ರತಿಭಟನೆ ನಡೆಸಿರುವುದು ಕಾನೂನು ಬಾಹಿರ ಹೇಗಾಗುತ್ತದೆ ಎಂದು ಪ್ರಶ್ನೆ ಮಾಡಿದ್ದಾರೆ. ಅಷ್ಟೇ ಅಲ್ಲದೆ ಹಲವಾರು ಪ್ರಶ್ನೆಗಳನ್ನು ಎತ್ತಿರುವ ಮುನೀರ್ ಕಾಟಿಪಳ್ಳ ಪೊಲೀಸ್ ಆಯುಕ್ತರು ಎಂಪಿ ಎಂಎಲ್‌ ಎ ಗಳ ಕೈಗೊಂಬೆಯಾಗಿದ್ದಾರೆ” ಎಂದು ಆರೋಪಿಸಿದ್ದಾರೆ.

    Continue Reading

    DAKSHINA KANNADA

    ಉಳ್ಳಾಲ: ಬಾವಿ, ಬೋರ್‌ವೆಲ್‌ನ ತೈಲಮಿಶ್ರಿತ ನೀರು; ಜನಜೀವನ ಅಸ್ಥವ್ಯಸ್ಥ

    Published

    on

    ಉಳ್ಳಾಲ: ಕುಡಿಯುವ ನೀರಿನಲ್ಲಿ ತೈಲಾಂಶ ಸೇರಿ ಗ್ರಾಮಸ್ಥರ ಪ್ರಾಣಕ್ಕೆ ಕುತ್ತಾಗಿದ್ದು, ಜೀವಜಲವೇ ವಿಷವಾಗಿ ಬದಲಾದ ಘಟನೆ ದ.ಕ ಜಿಲ್ಲೆಯ ಉಳ್ಳಾಲ ತಾಲೂಕಿನ ಪಜೀರು ಗ್ರಾಮದ ಸಂಬಾರ ತೋಟ ಬಳಿ ನಡೆದಿದೆ. ಆರು ತಿಂಗಳ ಹಿಂದೆ ಒಂದು ಕೊಳವೆ ಬಾವಿಯಲ್ಲಿ ತೈಲ ಮಿಶ್ರಿತ ನೀರು ಕಂಡುಬಂದಿತ್ತು. ಇದೀಗ ಹತ್ತಾರು ಬಾವಿ, ಕೊಳವೆ ಬಾವಿಗಳ ನೀರಿನಲ್ಲಿ ಭಾರೀ ಪ್ರಮಾಣದ ತೈಲಾಂಶ ಪತ್ತೆಯಾಗಿದೆ.

    ಅಷ್ಟೇ ಅಲ್ಲದೆ ಮುಡಿಪು ಪೇಟೆಯಿಂದ‌ ಸುಮಾರು 3 ಕಿ.ಮೀ ದೂರವಿರುವ ಸಂಬಾರ ತೋಟ ಪ್ರದೇಶ 100 ಮನೆಗಳಿದ್ದು, ಸುಮಾರು 10 ಕೊಳವೆ ಬಾವಿ ಹಾಗೂ ಕೆಲವು ಬಾವಿಗಳ ನೀರಿನಲ್ಲಿ ತೈಲ ಗೋಚರಿಸಿದೆ. ಡೀಸೆಲ್ ಮಾದರಿಯ ಭಾರೀ ಪ್ರಮಾಣದ ತೈಲದ ಅಂಶ ಪತ್ತೆಯಾಗಿದೆ. ತೈಲ ಮಿಶ್ರಿತ ನೀರು ಸೇವಿಸಿ ಹಲವು ಜನರಿಗೆ ಅರೋಗ್ಯ ಸಮಸ್ಯೆ ಉಂಟಾಗಿದೆ.

    ಈ ಬಗ್ಗೆ ಪಜೀರು ಪಂಚಾಯತಿ ಹಾಗೂ ಇನ್ನಿತರ ಇಲಾಖೆಗಳ ಗಮನಕ್ಕೆ ತರಲಾಗಿತ್ತು. ಇದೀಗ ಈ ಭಾಗದ‌ ಹೆಚ್ಚಿನ ಬಾವಿ ನೀರಲ್ಲೂ ತೈಲದ ವಾಸನೆ ಬರುತ್ತಿದೆ. ಸಂಬಾರತೋಟದ ಮುಖ್ಯ ರಸ್ತೆಗೆ ತಾಗಿಕೊಂಡೇ ಇರುವ ಪೆಟ್ರೋಲ್ ಪಂಪ್‌ ಮೇಲೆ ಅನುಮಾನ ಉಂಟಾಗಿದೆ. ಪೆಟ್ರೋಲ್ ಪಂಪ್ ನ ತಳ ಟ್ಯಾಂಕ್ ನಲ್ಲಿ ತೈಲ ಸೋರಿಕೆ ಅನುಮಾನ ಸೃಷ್ಟಿಯಾಗಿದ್ದು, ಸಮಸ್ಯೆ ಆರಂಭವಾದಾಗಿನಿಂದಲೇ ಸ್ಥಳೀಯರಿಂದಲೇ ಬಾವಿಯ ನೀರಿನ ಟೆಸ್ಟ್ ಮಾಡಲಾಗಿದೆ. ಕಾರ್ಬನ್ ಅನಾಲಿಸ್ಟಿಕ್ ಟೆಸ್ಟ್, ವಿಒಸಿ ಟೆಸ್ಟ್, ಮಂಗಳೂರು ಬಯೊಟೆಕ್ ಲ್ಯಾಬೊರೇಟರಿ ಸೇರಿದಂತೆ ಆರೋಗ್ಯ ಇಲಾಖೆಯಿಂದ ಪರೀಕ್ಷೆ ಮಾಡಲಾಗಿದೆ.

    Continue Reading

    LATEST NEWS

    Trending