LATEST NEWS
ಕಾರ್ಕಳ: ಈದು ಗ್ರಾಮದಲ್ಲಿ ಮತ್ತೆ ಕಾಣಿಸಿಕೊಂಡ ನಕ್ಸಲರು
ಕಾರ್ಕಳ : ಪಶ್ಚಿಮಘಟ್ಟದಲ್ಲಿ ಮತ್ತೆ ನಕ್ಸಲ್ ಚಟುವಟಿಕೆ ಚುರುಕುಗೊಂಡಿದೆ. ಕಾರ್ಕಳ ತಾಲೂಕಿನ ಈದು ಗ್ರಾಮದಲ್ಲಿ ನಕ್ಸಲರು ಮತ್ತೆ ಕಾಣಿಸಿಕೊಂಡಿದ್ದಾರೆ.
ನಾಲ್ವರು ಶಸ್ತ್ರಸಜ್ಜಿತ ಯುವಕರ ತಂಡವು ಈದು ಗ್ರಾಮದ ಮುಸ್ಲಿಂ ಕಾಲೋನಿಯ ಬಳಿಯಿರುವ ಬಂಡೆಕಲ್ಲು ಸಮೀಪ ಸೋಮವಾರ ಹಾಡುಹಗಲೇ ಕಾಣಿಸಿಕೊಂಡಿದ್ದು, ಕಾಡುತ್ಪತ್ತಿ ಸಂಗ್ರಹಿಸಲು ತೆರಳಿದ ಸ್ಥಳೀಯರು ಭಯಬೀತರಾಗಿದ್ದಾರೆ.
ಸುಮಾರು 30ರಿಂದ 40 ವರ್ಷ ವಯಸ್ಸಿನ ಯುವಕರು ತಂಡದಲ್ಲಿದ್ದು, ಹಾಡಹಗಲೇ ಕಾಣ ಸಿಕ್ಕಿದ್ದಾರೆ. ಹೀಗೊಂದು ಸುದ್ದಿ ಕಳೆದ ಮೂರು ದಿನಗಳಿಂದ ಹರಿದಾಡುತ್ತಿದೆ.ರಾಜ್ಯದ ಮೊದಲ ನಕ್ಸಲ್ ಎನ್‌ಕೌಂಟರ್ ನಡೆದ ಸ್ಥಳ ಈದು ಬೊಲ್ಲೊಟ್ಟುನಿಂದ ಸುಮಾರು 1 ಕಿ.ಮೀ.ದೂರದಲ್ಲಿಯೇ ಈ ಬಾರಿ ನಕ್ಸಲರು ಕಾಣಸಿಗುವ ಮೂಲಕ ಸುದ್ದಿಯಾಗಿದ್ದಾರೆ.
ಕೇರಳದಲ್ಲಿ ನಕ್ಸಲ್ ಎನ್‌ಕೌಂಟರ್ ನಡೆಯುತ್ತಿರುವ ಹಿನ್ನೆಲೆಯಲ್ಲಿ ಕರ್ನಾಟಕಕ್ಕೆ ನಕ್ಸಲ್ ವಲಸೆ ಆರಂಭಗೊಂಡಿದೆ ಎನ್ನುವ ಸಂದೇಹಗಳು ವ್ಯಕ್ತವಾಗಿದೆ.2002 ಪಶ್ಚಿಮಘಟ್ಟದ ನೆಮ್ಮಾರ್ ಕೊಗ್ರದ ಚೀರಾಮ್ಮ ಎಂಬಾಕೆಯ ಮನೆಯಲ್ಲಿ ಚಿಮ್ಮಿದ ಗುಂಡು ನಕ್ಸಲ್ ಇರುವಿಕೆ ಗೊತ್ತುಪಡಿಸಿತು. ನಕ್ಸಲ್ ಚಟುವಟಿಕೆ ತೀವ್ರಗೊಂಡ ಬೆನ್ನಲ್ಲೇ ೨೦೦೩ರಲ್ಲಿ ಕಾರ್ಕಳ ತಾಲೂಕಿನ ಈದು ಗ್ರಾಮದ ಬೊಲ್ಲೊಟ್ಟುನ ರಾಮಪ್ಪ ಪೂಜಾರಿ ಎಂಬವರ ಮನೆಯಲ್ಲಿ ಠಿಕಾಣಿ ಹೂಡಿದ ನಕ್ಸಲ್ ತಂಡ ಮೇಲೆ ಅಂದಿನ ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮುರುಗನ್ ಹಾಗೂ ಪೊಲೀಸ್ ಅಧಿಕಾರಿ ಅಶೋಕನ್ 2003 ನವಂಬರ್ 17ರಂದು ಎನ್ ಕೌಂಟರ್ ನಡೆಸಿದ ಪರಿಣಾಮ ಹಾಜಿಮಾ ಮತ್ತು ಪಾರ್ವತಿ ಬಲಿಯಾಗಿದ್ದರು. ಯಶೋಧ ಗಾಯಗೊಂಡಿದ್ದಳು. ದೇವೇಂದ್ರ ಯಾನೇ ವಿಷ್ಣು ಸಹಿತ ಇನ್ನುಳಿದವರು ಪರಾರಿಯಾಗಿದ್ದರು.
ಅಲ್ಲಿಂದ ಆರಂಭವಾದ ನಕ್ಸಲ್ ಚಟುವಟಿಕೆ ಮುಂದುವರೆದಿದ್ದು, 2010 ಮಾ.1ರಂದು ಮೈರೊಳ್ಳಿಯಲ್ಲಿ ನಕ್ಸಲ್ ವಸಂತ ಗೌಡನ ಎನ್‌ಕೌಂಟರ್ ಆಗಿದ್ದರೆ, ಪೊಲೀಸ್ ಮಾಹಿತಿದಾರ ಎಂಬ ಕಾರಣಕ್ಕಾಗಿ 20011ರ ಡಿಸೆಂಬರ್ ತಿಂಗಳಲ್ಲಿ ತಿಂಗಳೆ ತೆಂಗುಮಾರ್ ಎಂಬಲ್ಲಿ ಗುಂಡಿ ಸದಾಶಿವ ಗೌಡರನ್ನು ನಕ್ಸಲರು ಹತ್ಯೆಗೈದಿದ್ದರು. ಆ ಬಳಿಕದ ದಿನಗಳಲ್ಲಿ ತಣ್ಣಗಾಗುತ್ತಾ ಸಾಗಿದ ನಕ್ಸಲ್ ಚಟುವಟಿಕೆ, ಇದೀಗ ಮತ್ತೆ ಗರಿಗೆದರುತ್ತಿರುವ ಆತಂಕಕಾರಿ ಬೆಳವಣಿಗೆ ಪಶ್ಚಿಮಘಟ್ಟದ ತಪ್ಪಲಿನಲ್ಲಿ ಸುದ್ದಿಯಾಗುತ್ತಿದೆ.
ನಕ್ಸಲರ ಚಟುವಟಿಕೆಗಳು ಕಡಿಮೆಗೊಂಡಿದೆ ಎನ್ನುವ ಕಾರಣಕ್ಕೆ ನಕ್ಸಲ್ ನಿಗ್ರಹ ದಳ ಕೂಬಿಂಗ್ ಕಾರ್ಯಾಚರಣೆಯಲ್ಲೂ ಸಡಿಲಿಕೆ ಮಾಡಿದೆ.ಕಾರ್ಕಳದ ಪೇಟೆಯಲ್ಲಿ ಪ್ರತ್ಯೇಕವಾದ ಎಎನ್‌ಎಫ್ ಕೇಂದ್ರವಿದ್ದು, ಪಶ್ಚಿಮಘಟ್ಟದಲ್ಲಿ ಪ್ರತ್ಯೇಕ ತಂಡಗಳಲ್ಲಿ ಕಾರ್ಯಾಚರಣೆ ನಡೆಸುತ್ತಿತ್ತು. ಇದೀಗ ಹೆಚ್ಚಿನ ಅನುಭವಿ ಎಎನ್‌ಎಫ್ ಸಿಬ್ಬಂದಿಗಳನ್ನು ಮಾತೃ ಇಲಾಖೆಗೆ ವರ್ಗಾವಣೆಗೊಳಿಸಲಾಗಿದ್ದು, ಹೊಸ ಸಿಬ್ಬಂದಿಗಳು ಎಎನ್‌ಎಫ್‌ಗೆ ನೇಮಕಗೊಂಡಿದೆ.
ನಕ್ಸಲರ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯಕ್ರಮಗಳನ್ನು ಪೊಲೀಸ್ ಇಲಾಖೆಯಿಂದ ನಡೆಯುತ್ತಿತ್ತು. ನಕ್ಸಲರ ಮಾಹಿತಿಯುಳ್ಳ ಬಿತ್ತಿಪತ್ರ ಹಾಗೂ ಜಾಗೃತಿ ಪತ್ರಗಳು ಕೂಡಾ ನಕ್ಸಲ್‌ಪೀಡಿತ ಪ್ರದೇಶಗಳಲ್ಲಿ ಹಂಚುವ ಮೂಲಕ ಜಾಗೃತಿ ಮೂಡಿಸುತ್ತಿದ್ದರು. ಪ್ರಸ್ತುತ ಆ ಕಾರ್ಯಕ್ರಮಗಳು ಇಲಾಖೆಯಿಂದ ನಡೆಯುತ್ತಿಲ್ಲ ಎನ್ನುವ ಆರೋಪವಿದೆ.
FILM
ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ಟ ಕ್ರಿಕೆಟಿಗ ಕೆ.ಎಲ್.ರಾಹುಲ್
ಬಾಲಿವುಡ್ ನಟಿ ಅಥಿಯಾ ಶೆಟ್ಟಿ ಹಾಗೂ ಟೀಂ ಇಂಡಿಯಾ ಕ್ರಿಕೆಟಿಗ ಕೆಎಲ್ ರಾಹುಲ್ ದಂಪತಿ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಕೆಎಲ್ ರಾಹುಲ್ ಅಭಿಮಾನಿಗಳೊಂದಿಗೆ ಸಂತಸವನ್ನು ಹಂಚಿಕೊಂಡಿದ್ದಾರೆ.
ದಂಪತಿ Instagram ನಲ್ಲಿ ಜಂಟಿಯಾಗಿ ಪೋಸ್ಟ್ ಮಾಡಿದ್ದಾರೆ. ‘ದೇವರ ಸುಂದರ ಆಶೀರ್ವಾದ 2025ರಲ್ಲಿ ಬರಲಿದೆ’ ಎಂದು ಅಥಿಯಾ ದಂಪತಿ ಪೋಷಕರಾಗುತ್ತಿರುವ ಖುಷಿಯ ಸುದ್ದಿಯನ್ನು ತಿಳಿಸಿದ್ದಾರೆ. ಸೆಲೆಬ್ರಿಟಿಗಳು, ಅಭಿಮಾನಿಗಳು ದಂಪತಿಗೆ ಶುಭ ಹಾರೈಸುತ್ತಿದ್ದಾರೆ.
ಕಳೆದ ವರ್ಷ ಜನವರಿ 23ರಂದು ಕ್ರಿಕೆಟಿಗ ಕೆ.ಎಲ್ ರಾಹುಲ್ ಜೊತೆ ಅಥಿಯಾ ಹಲವು ವರ್ಷಗಳ ಪ್ರೀತಿಗೆ ವಿವಾಹದ ಬೆಸುಗೆ ಬೆಸೆದಿದ್ದರು.
ಇದನ್ನು ಓದಿ:ಇನ್ಮುಂದೆ ಮಹಿಳೆಯರ ಬಟ್ಟೆ ಅಳತೆ ಪುರುಷ ಟೈಲರ್ ತೆಗೆಯೋ ಹಾಗಿಲ್ಲ..!
DAKSHINA KANNADA
ನೆಲ್ಯಾಡಿ : ಜಾಗದ ವಿಷಯಕ್ಕೆ ಜಗಳ; ಕತ್ತಿಯಿಂದ ವ್ಯಕ್ತಿಯ ಕಡಿದು ಗಲಾಟೆ ಅಂತ್ಯ
ನೆಲ್ಯಾಡಿ : ಜಾಗದ ವಿಷಯಕ್ಕೆ ಉಂಟಾದ ಗಲಾಟೆ ವಿಕೋಪಕ್ಕೆ ತಿರುಗಿ ಕೃಷಿಕರೋರ್ವನ ಕೊಲೆಯಲ್ಲಿ ಅಂತ್ಯ ಕಂಡ ಘಟನೆ ದ.ಕ.ಜಿಲ್ಲೆ ನೆಲ್ಯಾಡಿ ಸಮೀಪ ಗೋಳಿತೊಟ್ಟುವಿನ ಆಲಂತಾಯ ಗ್ರಾಮದ ಪೆರ್ಲ ಎಂಬಲ್ಲಿ ನಡೆದಿದೆ.
ಪ್ರಗತಿಪರ ಕೃಷಿಕ ರಮೇಶ ಗೌಡ (51) ಮೃತ ವ್ಯಕ್ತಿ ಎಂದು ಗುರುತಿಸಲಾಗಿದೆ.
ರಮೇಶ್ ನ ಹತ್ತಿರದದ ಸಂಬಂಧಿ ಹರೀಶ್ ಆರೋಪಿಯಾಗಿದ್ದು, ಇಂದು (ನ.8) ಮುಸ್ಸಂಜೆ ಸರಿಸುಮಾರು 7 ಗಂಟೆ ವೇಳೆ ಕೃತ್ಯ ಎಸಗಿದ್ದಾನೆ.
ನೆಲ್ಯಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಘಟನಾ ಸ್ಥಳಕ್ಕೆ ಧಾವಿಸಿ ತನಿಖೆ ನಡೆಸುತ್ತಿದ್ದಾರೆ.
LATEST NEWS
ಎತ್ತಿನಹೊಳೆ ಕಾಮಗಾರಿ ನಾಲೆಯ ಗುಂಡಿಗೆ ಬಿದ್ದು ಇಬ್ಬರು ಬಾಲಕರು ಸಾ*ವು
ಮಂಗಳೂರು/ತಿಪಟೂರು : ಎತ್ತಿನಹೊಳೆ ನಾಲೆಯ ಕಾಮಗಾರಿ ಬಳಿ ತೆಗೆದಿದ್ದ ಗುಂ*ಡಿಗೆ ಬಿ*ದ್ದು ಇಬ್ಬರು ಬಾಲಕರು ಮೃತಪಟ್ಟಿರುವ ಘಟನೆ ತಿಪಟೂರಿನಲ್ಲಿ ನಡೆದಿದೆ. ಹುಚ್ಚನಹಟ್ಟಿ ಗ್ರಾಮದ ಯದುವೀರ್ (8) ಹಾಗೂ ಮನೋಹರ್ (10) ಮೃ*ತ ಬಾಲಕರು.
ಹುಚ್ಚನಹಟ್ಟಿ ಗ್ರಾಮದ ಬಳಿ ಎತ್ತಿನಹೊಳೆ ನೀರಾವರಿ ಯೋಜನೆ ಕಾಮಗಾರಿ ನಡೆಯುತ್ತಿದ್ದು, ಸ್ಥಳದಲ್ಲಿ ಯಾವುದೇ ಸುರಕ್ಷತಾ ಕ್ರಮಗಳನ್ನು ಕೈಗೊಂಡಿಲ್ಲ. ಸ್ಥಳಕ್ಕೆ ಹೋಗಿದ್ದ ಮಕ್ಕಳು ಆಕಸ್ಮಿಕವಾಗಿ ಬಿ*ದ್ದು ಸಾ*ವನ್ನಪ್ಪಿದ್ದಾರೆ ಎಂಬ ಹೇಳಲಾಗಿದೆ.
ಇದನ್ನೂ ಓದಿ : BBK11: ಬಿಗ್ಬಾಸ್ ಮನೆಯಲ್ಲಿ ಸಿಡಿದೆದ್ದ ಮಹಿಳಾ ಸ್ಪರ್ಧಿಗಳು.. ಗೋಲ್ಡ್ ಸುರೇಶ್ ಗೆ ಈ ವಾರದ ಕಳಪೆ
ಗುರುವಾರ(ನ.7) ಸಂಜೆ ಶಾಲೆ ಮುಗಿಸಿಕೊಂಡು ಮನೆಗೆ ಬಂದಿದ್ದ ಮಕ್ಕಳು, ನಂತರ ಹೊರ ಹೋಗಿದ್ದರು. ಸಂಜೆಯಾದರೂ ಮನೆಗೆ ಬಂದಿರಲಿಲ್ಲ. ಹೀಗಾಗಿ ಆತಂಕಗೊಂಡ ಪೋಷಕರು ತಿಪಟೂರು ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಶುಕ್ರವಾರ(ನ.8) ಬೆಳಿಗ್ಗೆ ಬಾಲಕರ ಶ*ವ ಪತ್ತೆಯಾಗಿದೆ.
- DAKSHINA KANNADA7 days ago
ಮಂಗಳೂರು: ನೇತ್ರಾವತಿ ಸೇತುವೆ ಬಳಿ ಭೀಕರ ಅ*ಪಘಾತ; ಓರ್ವ ಮೃ*ತ್ಯು, ಮತ್ತೋರ್ವ ಗಂಭೀರ
- LATEST NEWS3 days ago
ರೈಲ್ವೆ ನಿಲ್ದಾಣದಲ್ಲಿ ಸೂಟ್ಕೇಸ್ನಲ್ಲಿ ಮಹಿಳೆಯ ಶ*ವ ಪತ್ತೆ; ತನಿಖೆ ವೇಳೆ ಬಯಲಾಯ್ತು ಸತ್ಯ!
- FILM2 days ago
ಕೋರ್ಟ್ ಮೆಟ್ಟಿಲೇರಿದ ರಾಕಿಂಗ್ ಸ್ಟಾರ್ ಯಶ್ ಹಾಗೂ ರಾಧಿಕಾ ಪಂಡಿತ್
- LATEST NEWS4 days ago
ಮಹಿಳೆಯರಿಗೆ ಗುಡ್ ನ್ಯೂಸ್: ಇನ್ಮುಂದೆ ಸಿಗಲಿದೆ 450 ರೂ.ಗೆ ಗ್ಯಾಸ್ ಸಿಲಿಂಡರ್