BIG BOSS
ಧನರಾಜ್ ಮೇಲೆ ಮೋಕ್ಷಿತಾ ಫೈರ್; ಆ ಒಂದು ಮಾತಿಗೆ ಕಣ್ಣೀರಿಟ್ಟ ಧನು..!
Published
4 weeks agoon
By
NEWS DESK2ಬಿಗ್‌ಬಾಸ್ ಮನೆಯಲ್ಲಿ ಕ್ಯಾಪ್ಟನ್ಸಿ ವಿಚಾರಕ್ಕೆ ಸ್ಪರ್ಧಿಗಳ ನಡುವೆ ಹೊತ್ತಿ ಉರಿದಿದೆ. ಬಿಗ್‌ಬಾಸ್ ಕ್ಯಾಪ್ಟನ್ಸಿ ಗಲಾಟೆಯ ಪ್ರೊಮೋ ರಿಲೀಸ್ ಮಾಡಿದ್ದು, ಪ್ರತಿಸ್ಪರ್ಧಿಗಳ ಮಾತಿಗೆ ಧನರಾಜ್ ಕಣ್ಣೀರು ಇಟ್ಟಿದ್ದಾರೆ.
ಇಬ್ಬರು ಸ್ಪರ್ಧಿಗಳನ್ನು ಕ್ಯಾಪ್ಟನ್ಸಿ ರೇಸ್ನಿಂದ ಹೊರಗೆ ಇಡುವಂತೆ ಬಿಗ್‌ಬಾಸ್ ಸ್ಪರ್ಧಿಗಳಿಗೆ ಸೂಚಿಸುತ್ತಾರೆ. ಅಂತೆಯೇ ಧನರಾಜ್, ಅನುಷಾ ಮತ್ತು ತ್ರಿವಿಕ್ರಮ್ ಹೆಸರನ್ನು ತೆಗೆದುಕೊಳ್ಳುತ್ತಾರೆ. ಅದಕ್ಕೆ ಕಾರಣ ಕೂಡ ನೀಡುತ್ತಾರೆ. ಅನುಷಾಗೆ ಕ್ಯಾಪ್ಟನ್ಸಿ ಆಗುವ ಅರ್ಹತೆ ಇಲ್ಲ ಎಂಬ ಕಾರಣ ನೀಡಿದ್ದರು.
ಅದು ಅನುಷಾರ ಕೋಪಕ್ಕೆ ಕಾರಣವಾಗಿದೆ. ನಿಮಗಿಂತ ನನಗೆ ಅರ್ಹತೆ ಇದೆ. ಹೇಗೆ ನೀವು ನನ್ನನ್ನು ಕ್ಯಾಪ್ಟನ್ಸಿಯಿಂದ ಹೊರಗೆ ಇಡುತ್ತೀರಿ ಎಂದು ಪ್ರಶ್ನೆ ಮಾಡಿದ್ದಾರೆ. ಅಲ್ಲದೇ ಇದೇ ವೇಳೆ ಉಗ್ರಂ ಮಂಜು ಕೂಡ, ಧನರಾಜ್ ಅವರು ಮೆಚುರಿಟಿಯಿಂದ ಆಟವನ್ನು ಆಡಬೇಕು ಎಂದಿದ್ದಾರೆ. ಅದೇ ರೀತಿ ಗೌತಮಿ, ಮೋಕ್ಷಿತಾ ಕೂಡ ಗರಂ ಆಗಿದ್ದಾರೆ.
ನೆಟ್ಟಗೆ ಡಿಸಿಷನ್ ತೆಗೆದುಕೊಳ್ಳಲು ಬರಲ್ಲ. ತಲೆಯಲ್ಲಿ ಸೆನ್ಸ್ ಇದೆಯಾ. ಮತ್ತೆ ನೀನು ಕ್ಯಾಪ್ಟನ್, ನಿನ್ನಂತವರು ಕ್ಯಾಪ್ಟನ್ ಎಂದು ಧನರಾಜ್ ಮೇಲೆ ಮೋಕ್ಷಿತ ಮುಗಿ ಬಿದ್ದಿದ್ದಾರೆ. ಆಗ ಸಮರ್ಥಿಸಿಕೊಳ್ಳುವ ಧನರಾಜ್, ಹಿಂದಿನ ಧನರಾಜ್ ಈಗ ಇಲ್ಲ. ಧನರಾಜ್ ಜೋರಾಗಿದ್ದಾನೆ. ಭಯಪಟ್ಟುಕೊಳ್ಳುವ ಧನರಾಜ್ ನಿಮ್ಮ ಮುಂದೆ ಇಲ್ಲ ಎಂದಿದ್ದಾರೆ. ಕೊನೆಗೆ ಕಣ್ಣೀರು ಇಟ್ಟಿದ್ದಾರೆ.
BIG BOSS
ಬಿಗ್‌ಬಾಸ್ ಮನೆಯಿಂದ ದಿಢೀರ್ ಹೊರ ಬಂದ ಚೈತ್ರಾ ಕುಂದಾಪುರ
Published
14 hours agoon
03/12/2024By
NEWS DESK2ಬಿಗ್‌ಬಾಸ್ 11 ಮನೆಯೊಳಗೆ ಸಖತ್ ಸೌಂಡ್ ಮಾಡುತ್ತಿರುವ ಸ್ಪರ್ಧಿ ಚೈತ್ರಾ ಕುಂದಾಪುರ ಅವರು ಬಿಗ್‌ಬಾಸ್ ಮನೆಯಿಂದ ಹೊರಗೆ ಬಂದಿದ್ದಾರೆ. ಶಾಕಿಂಗ್ ಬೆಳವಣಿಗೆಯಲ್ಲಿ ಚೈತ್ರಾ ಕುಂದಾಪುರ ಅವರು ಬಿಗ್‌ಬಾಸ್ ಮನೆಯಿಂದ ಹೊರಗೆ ಬಂದಿರುವ ಘಟನೆ ನಡೆದಿದೆ. ನಟಿ ಶೋಭಾ ಶೆಟ್ಟಿ ಅವರು ದೊಡ್ಮನೆಯಿಂದ ಹೊರ ಬಂದ ಬೆನ್ನಲ್ಲೇ ಈ ಘಟನೆ ನಡೆದಿದೆ.
ಚೈತ್ರಾ ಕುಂದಾಪುರ ಅವರು ಕೇಸ್ ಸಂಬಂಧವಾಗಿ ವಿಚಾರಣೆಗೆ ಹಾಜರಾಗಲು ಬಿಗ್‌ಬಾಸ್ ಮನೆಯಿಂದ ಹೊರಗೆ ಬಂದಿದ್ದರು. ಈಗ ಚೈತ್ರಾ ಕುಂದಾಪುರ ಅವರ ಕೇಸ್ ವಿಚಾರಣೆಯನ್ನು ಜನವರಿ 13ಕ್ಕೆ ಮುಂದೂಡಲಾಗಿದ್ದು ಅವರು ಮತ್ತೆ ಬಿಗ್‌ಬಾಸ್ ಮನೆಗೆ ಹೋಗಲಿದ್ದಾರೆ ಎನ್ನಲಾಗಿದೆ.
BIG BOSS
ದೊಡ್ಮನೆಯಿಂದ ಹೊರಬಂದು ಸುದೀಪ್‌ಗೆ ಸುದೀರ್ಘ ಪತ್ರ ಬರೆದ ಶೋಭಾ ಶೆಟ್ಟಿ
Published
16 hours agoon
03/12/2024By
NEWS DESK2ಕನ್ನಡದ ನಟಿ ಶೋಭಾ ಶೆಟ್ಟಿ ಅವರು ‘ಬಿಗ್ ಬಾಸ್ ಕನ್ನಡ 11’ರ ಆಟಕ್ಕೆ ಫುಲ್ ಸ್ಟಾಪ್ ಇಟ್ಟಿದ್ದಾರೆ. ತಮ್ಮ ಸ್ವತಃ ನಿರ್ಧಾರದಿಂದ ದೊಡ್ಮನೆಯಿಂದ ನಟಿ ಹೊರಬಂದಿದ್ದಾರೆ. ಬಿಗ್ ಬಾಸ್‌ನಿಂದ ಹೊರಬಂದು ಸುದೀಪ್‌ಗೆ ನಟಿ ಸುದೀರ್ಘವಾಗಿ ಪತ್ರ ಬರೆದಿದ್ದಾರೆ. ಇದೀಗ ನಟಿಯ ಪೋಸ್ಟ್ ಸೋಶಿಯಲ್ ಮೀಡಿಯಾದಲ್ಲಿ ಭಾರೀ ಸದ್ದು ಮಾಡುತ್ತಿದೆ.
ನನ್ನ ಪ್ರೀತಿಯ ಕನ್ನಡಿಗರೇ, ನನ್ನ ಬಿಗ್ ಬಾಸ್ ಪಯಣ ಮುಗಿದಿದೆ. ಆಟದ ಮೇಲೆ ಗಮನ ಕೊಡಲು ಆರೋಗ್ಯ ಸಹಕರಿಸುತ್ತಿಲ್ಲ, ಮುನ್ನಡೆಯುವ ಇಚ್ಛೆಯಿದ್ದರೂ ದೇಹ ಮುಂದುವರಿಯಲು ಬಿಡುತ್ತಿಲ್ಲ. ಯಾರನ್ನೂ ಯಾವುದನ್ನೂ ನಾನು ಹಗುರವಾಗಿ ತೆಗೆದುಕೊಂಡಿಲ್ಲ, ಜೀವನದ ಜವಬ್ದಾರಿಗಳಿಗೆ ಆರೋಗ್ಯವನ್ನು ಕಾಪಾಡಿಕೊಂಡು ಮುನ್ನಡೆಯುವ ಸಲುವಾಗಿ ನನ್ನ ಈ ನಿರ್ಧಾರ. ಇದೆಲ್ಲದರ ಮಧ್ಯೆ ನೀವು ತೋರಿಸಿದ ಪ್ರೀತಿ ಮತ್ತು ಬೆಂಬಲಕ್ಕೆ ನಾನು ಅಭಾರಿಯಾಗಿದ್ದೀನಿ, ತಿಳಿದೋ ತಿಳಿಯದೆಯೋ ನನ್ನಿಂದ ಯಾರಿಗಾದರೂ ಬೇಸರವಾಗಿದ್ದರೆ ದಯವಿಟ್ಟು ಕ್ಷಮಿಸಿ ಎಂದಿದ್ದಾರೆ.
ನನ್ನ ಜನರಿಗೆ, ಕಲರ್ಸ್ ಕನ್ನಡ ತಂಡಕ್ಕೆ, ಹಾಗು ನನ್ನ ಪ್ರೀತಿಯ ಕಿಚ್ಚ ಸುದೀಪ್ ಸರ್ ನಿಮಗೆ ಧನ್ಯವಾದಗಳು. ಹೊಸ ಹುರುಪಿನೊಂದಿಗೆ ನಿಮ್ಮನ್ನು ರಂಜಿಸಲು, ನಿಮ್ಮ ಪ್ರೀತಿಯನ್ನು ಮತ್ತೆ ಪಡೆಯಲು ಮತ್ತೊಂದು ರೂಪದಲ್ಲಿ ಮತ್ತೆ ನಿಮ್ಮ ಮುಂದೆ ಖಂಡಿತಾ ನಾನು ಬರುವೆ. ಇಂತಿ ಪ್ರೀತಿಯ, ಶೋಭಾ ಶೆಟ್ಟಿ ಎಂದು ಸುದೀರ್ಘ ಪತ್ರ ಬರೆದಿದ್ದಾರೆ. ಇನ್ನೂ ಬಹುತೇಕ ಅಭಿಮಾನಿಗಳಿಗೆ ನಟಿ ನಿರ್ಧಾರ ನೋವುಂಟು ಮಾಡಿದೆ. ಬಿಗ್ ಬಾಸ್ ಬಿಟ್ಟು ಬರಬಾರದಿತ್ತು ಎಂದು ಅನೇಕರು ಕಾಮೆಂಟ್ ಮಾಡಿದ್ದಾರೆ.
ತೆಲುಗಿನ ಬಿಗ್‌ಬಾಸ್ ಸೀಸನ್ 7ರಲ್ಲಿ ಸಖತ್ ಸೌಂಡು ಮಾಡಿದ್ದ ಶೋಭಾ ಶೆಟ್ಟಿ ಕೊನೆಯವರೆಗೂ ಪ್ರೀತಿ ಗಳಿಸಿ ಉಳಿದುಕೊಂಡಿದ್ದರು. ಆದರೆ ಕನ್ನಡದಲ್ಲಿ ಅವರ ಆಟ ನಡೆಯಲೇ ಇಲ್ಲ. ತೆಲುಗಿನ ವೀಕ್ಷಕರ ಅಭಿರುಚಿ ಮತ್ತು ಕನ್ನಡ ವೀಕ್ಷಕರ ಅಭಿರುಚಿ ವಿಭಿನ್ನವಾಗಿದೆ ಎಂದು ಶೋಭಾ ಅವರ ಮನಸ್ಸಿಗೆ ಅನಿಸಿತೋ ಗೊತ್ತಿಲ್ಲ. ಆದರೆ ಅನಾರೋಗ್ಯದ ಕಾರಣವನ್ನು ನೀಡಿ, ಶೋಭಾ ಶೆಟ್ಟಿ ಅವರು ಬಿಗ್ ಬಾಸ್ ಮನೆಯಿಂದ ಹೊರಗೆ ಬಂದಿದ್ದಾರೆ.
BIG BOSS
BBK11: ಶೋಭಾ ಶೆಟ್ಟಿ ನಿರ್ಧಾರಕ್ಕೆ ಕಿಚ್ಚ ಗರಂ; ವೋಟ್ ಮಾಡಿದ ಜನರಿಗೆ ಕ್ಷಮೆ ಕೇಳಿದ ಸುದೀಪ್
Published
2 days agoon
02/12/2024By
NEWS DESK2ವೈಲ್ಡ್ ಕಾರ್ಡ್ ಮೂಲಕ ಬಿಗ್‌ಬಾಸ್ ಮನೆಗೆ ಎಂಟ್ರಿ ನೀಡಿದ್ದ ಶೋಭಾ ಶೆಟ್ಟಿ, ಶೋನಿಂದ ಕ್ವಿಟ್ ಮಾಡಿದ್ದಾರೆ. ಮುಂದಿನ ವಾರಕ್ಕೆ ಉಳಿದುಕೊಳ್ಳಲು ವೀಕ್ಷಕರಿಂದ ನೇರವಾಗಿ ಇಮ್ಯುನಿಟಿ ಪಡೆದರೂ ದಿಕ್ಕರಿಸಿ ಮನೆಯಿಂದ ಆಚೆ ಹೋಗುವ ನಿರ್ಧಾರ ಮಾಡಿದರು.
ಸುದೀಪ್, ಅವರನ್ನು ಬಿಗ್‌ಬಾಸ್ ಶೋನಲ್ಲಿ ಅವರನ್ನು ಉಳಿಸಿಕೊಳ್ಳುವ ಪ್ರಯತ್ನ ಮಾಡಿದರು. ಆದರೆ ಶೋಭಾ ಶೆಟ್ಟಿ ತಮ್ಮ ನಿರ್ಧಾರದಿಂದ ಹಿಂದೆ ಸರಿಯಲಿಲ್ಲ. ಇದರಿಂದ ಕಿಚ್ಚ ಸುದೀಪ್ ವೇದಿಕೆ ಮೇಲೆ ಬೇಸರ ವ್ಯಕ್ತಪಡಿಸಿದರು. ನನ್ನ ಜನಗಳಿಗೆ ಯಾರು ಮರ್ಯಾದೆ ಕೊಡಲ್ವೋ, ಅದರ ಸಿಂಪಥಿಯೇ ಬೇಡ. ಈ ರೀತಿ ಯಾವತ್ತೂ ನಡೆದಿಲ್ಲ. ನಿಮ್ಮ ಮಾತಿಗೆ ನಾನು ಬೆಲೆ ಕೊಡ್ತೀನಿ. ಶೋಭಾ ಅವರೇ ಇದನ್ನು ನೀವೇ ನಿಮ್ಮ ಮೇಲೆ ತಂದುಕೊಂಡಿದ್ದೀರಿ. ಜನರು ವೋಟ್ ಮಾಡಿದ್ದಾರೆ, ಜನರಿಗೆ ನೀವು ಏನು ಹೇಳಬೇಕೋ, ಅದನ್ನು ಹೇಳಿಕೊಳ್ಳಿ. ಇದು ತುಂಬಾ ಬೇಸರದ ವಿಚಾರ. ಗೊತ್ತೋ, ಗೊತ್ತಿಲ್ಲದೆಯೋ ನನ್ನ ಮಾತುಗಳಿಂದ ನಿಮಗೆ ನೋವಾಗಿದ್ದರೆ ಕ್ಷಮಿಸಿ. ನನಗೆ ಯಾರಿಗೂ ನೋವು ಕೊಡಲು ಇಷ್ಟವಿಲ್ಲ. ನಿಮ್ಮನ್ನು ಉಳಿಸಿಕೊಳ್ಳಲು ನನ್ನ ಪ್ರಯತ್ನವನ್ನು ನಾನು ಮಾಡಿದೆ.
ಯಾರೆಲ್ಲ ಶೋಭಾ ಪರವಾಗಿ ವೋಟ್ ಮಾಡಿದ್ದಿರೋ.. ಅವರಿಗೆಲ್ಲ ಬಿಗ್‌ಬಾಸ್ ತಂಡದ ಪರವಾಗಿ ನಾನು ಕ್ಷಮೆ ಕೇಳುತ್ತೇನೆ. ಇದು ಸರಿಯಾದ ಕ್ರಮವಲ್ಲ. ಅವರು ಹೋಗಬೇಕು ಎಂದು ಹಠ ಮಾಡಿದಾಗ ನಾವು ಕಳುಹಿಸಿ ಕೊಡುತ್ತಿದ್ದೇವೆ. ವೋಟ್ ಮಾಡಿದವರಿಗೆ ಕ್ಷಮೆ ಕೇಳುತ್ತೇವೆ. ಜೊತೆ ವೋಟ್ ಮಾಡಿದ್ದಕ್ಕಾಗಿ ಧನ್ಯವಾದ ಕೂಡ ಹೇಳುತ್ತಿದ್ದೇವೆ. ನೀವು ನೋಡಿ, ವೋಟ್ ಮಾಡಿ ಯಾವರೀತಿ ಪ್ರೋತ್ಸಾಹ ಕೊಡ್ತಿದ್ದೀರೋ, ಅದು ಒಂದೇ ಒಂದು ಕಾರಣಕ್ಕೆ ಬಿಗ್‌ಬಾಸ್ ಈ ಮಟ್ಟಕ್ಕೆ ಬಂದು ಬೆಳೆದು ನಿಂತಿದೆ ಎಂದರು.
LATEST NEWS
ಚುನಾವಣಾ ಬಾಂಡ್ ಅಕ್ರಮ : ನಿರ್ಮಲಾ ಸೀತಾರಾಮನ್, ನಳೀನ್ ಕುಮಾರ್ ಕಟೀಲ್ಗೆ ರಿಲೀಫ್
ನಿರ್ದೇಶಕ ಗುರುಪ್ರಸಾದ್ ಆತ್ಮಹತ್ಯೆ ರಹಸ್ಯ ಬಯಲು !
ದೇಶದ ಅತಿ ಕಿರಿಯ, ಕರ್ನಾಟಕ ಮೂಲದ ಈ ಪೈಲಟ್ ಯಾರು ಗೊತ್ತಾ ??
ಡಿ.7 ರಂದು ಕುಡುಪು ಕ್ಷೇತ್ರದಲ್ಲಿ ಷಷ್ಠಿ ಬ್ರಹ್ಮ ರಥೋತ್ಸವ
ಮಾಜಿ ಪ್ರಿಯಕರನ ಹ*ತ್ಯೆ ಆರೋಪ; ಬಾಲಿವುಡ್ನ ಖ್ಯಾತ ನಟಿಯ ತಂಗಿ ಅರೆಸ್ಟ್
ಸ್ಟೇಟಸ್ನಲ್ಲಿ ಫೋಟೋ ಹಾಕಿದ ಮಾಜಿ ಪ್ರಿಯಕರ; ಆ*ತ್ಮಹತ್ಯೆಗೆ ಶರಣಾದ ವಿವಾಹಿತೆ!
Trending
- BANTWAL5 days ago
ಅನಾರೋಗ್ಯದಿಂದ ಬಳಲುತ್ತಿದ್ದ ಯುವತಿ ಸಾವು
- FILM4 days ago
ಪುತ್ರಿಯೊಂದಿಗೆ ಶ್ರೀಕೃಷ್ಣ ಮಠಕ್ಕೆ ನಟಿ ಮಾಲಾಶ್ರೀ ಭೇಟಿ; ಕೋಟಿ ಗೀತಾ ಲೇಖನ ಯಜ್ಞ ದೀಕ್ಷೆ ಸ್ವೀಕಾರ
- Ancient Mangaluru6 days ago
ಮಂಗಳೂರಿನ ನರ್ಸಿಂಗ್ ಕಾಲೇಜಿನ ಮೂವರು ವಿದ್ಯಾರ್ಥಿಗಳು ನೀ*ರುಪಾಲು
- LATEST NEWS6 days ago
ನಾನ್ ವೆಜ್ ತಿನ್ನಬೇಡ ಎಂದ ಪ್ರಿಯತಮ: ಆ*ತ್ಮಹತ್ಯೆಗೆ ಶರಣಾದ ಏರ್ ಇಂಡಿಯಾ ಪೈಲಟ್ !