Connect with us

    LATEST NEWS

    ಕಾರ್ಕಳ : ಮನೆಗೆ ನುಗ್ಗಿ ಕಳವು ಪ್ರಕರಣ; ಆರೋಪಿಯ ಬಂಧನ

    Published

    on

    ಕಾರ್ಕಳ : ಮುಡಾರು ಗ್ರಾಮದ ಗುರ್ಗಾಲ್ ಗುಡ್ಡೆದ ಮನೆಯೊಂದಕ್ಕೆ  ನುಗ್ಗಿ ಬೆಡ್‌ ರೂಮ್‌ನಲ್ಲಿದ್ದ ಗೋದ್ರೇಜ್ ಲಾಕರ್‌ ಒಡೆದು ಚಿನ್ನಾಭರಣಗಳನ್ನು ದೋಚಿದ್ದ ಕಳ್ಳನನ್ನು ಕಾರ್ಕಳ ಪೊಲೀಸರು ಬಂಧಿಸಿದ್ದಾರೆ. ಕಾರ್ಕಳದ ಮಾಳ ಗ್ರಾಮದ ಸಂತೋಷ್.ಟಿ(32) ಬಂಧಿತ ಆರೋಪಿ.

    ಆ.30 ರಂದು ಮುಡಾರು ಗ್ರಾಮದ ಗುರ್ಗಾಲ್ ಗುಡ್ಡೆಯಲ್ಲಿರುವ ಮನೆಯೊಂದಕ್ಕೆ ನುಗ್ಗಿದ ಕಳ್ಳರು, ಸುಮಾರು 33 ಪವನ್ ತೂಕದ 10,05,000ರೂ. ಮೌಲ್ಯದ ಚಿನ್ನಾಭರಣಗಳನ್ನು ದೋಚಿ ಪರಾರಿಯಾಗಿದ್ದರು. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

    ಇದನ್ನೂ ಓದಿ : ಪ್ರೀತಿಸಲು ಹುಡುಗಿ ಸಿಗಲಿಲ್ಲ ಅಂತ ತುಂಗಾ ನದಿಗೆ ಹಾರಿ ಯುವಕ ಆತ್ಮ*ಹ*ತ್ಯೆ!

    ಕಳ್ಳರ ಜಾಡು ಹಿಡಿದು ಹೊರಟ ಪೊಲೀಸರು ಪ್ರಕರಣ ಭೇದಿಸಿದ್ದಾರೆ. ಆರೋಪಿಯಿಂದ ಕಳವು ಮಾಡಿದ 33 ಪವನ್ ತೂಕದ 10,05,000 ರೂಪಾಯಿ ಮೌಲ್ಯದ ಚಿನ್ನಾಭರಣ ಮತ್ತು ಕೃತ್ಯಕ್ಕೆ ಬಳಸಿದ್ದ ಮೋಟಾರ್ ಸೈಕಲನ್ನು ವಶಪಡಿಸಿಕೊಂಡಿದ್ದಾರೆ.

    LATEST NEWS

    ಬಾಲಕಿ ಮೇಲೆ ಲೈಂಗಿ*ಕ ದೌರ್ಜ*ನ್ಯ ಎಸಗಿ ಕೊ*ಲೆ ಮಾಡಿದ್ದ ಕಾಮುಕನಿಗೆ ಗಲ್ಲುಶಿಕ್ಷೆ ಪ್ರಕಟ

    Published

    on

    ಮಂಗಳೂರು/ಬೆಳಗಾವಿ : ಮೂರು ವರ್ಷದ  ಬಾಲಕಿಯ ಮೇಲೆ ಕ್ರೌ*ರ್ಯ ಮೆರೆದಿದ್ದ ಕಾಮುಕನಿಗೆ ಗ*ಲ್ಲುಶಿಕ್ಷೆ ವಿಧಿಸಲಾಗಿದೆ. ಬೆಳಗಾವಿಯ ಪೋಕ್ಸೋ ಹೆಚ್ಚುವರಿ ಜಿಲ್ಲಾ ಸತ್ರ ನ್ಯಾಯಾಲಯವು ಬಾಲಕಿಯ ಮೇಲೆ ದೌರ್ಜ*ನ್ಯ ಎಸಗಿದ್ದ ಕಾಮುಕನಿಗೆ ಗ*ಲ್ಲು ಶಿಕ್ಷೆ ಪ್ರಕಟಿಸಿ ಆದೇಶ ಹೊರಡಿಸಿದೆ.

    2017ರಲ್ಲಿ ಆರೋಪಿ ಉದ್ದಪ್ಪ ರಾಮಪ್ಪ ಗಾಣಿಗೇರ(32) ಎಂಬಾತ ಬಾಲಕಿಯ ಮೇಲೆರಗಿ ಹ*ತ್ಯೆ ಮಾಡಿದ್ದ. ಈ ಘಟನೆ ಬಗ್ಗೆ ಹಾರೂಗೇರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

    ಏನಿದು ಘಟನೆ?

    ಮನೆಯ ಮುಂದೆ ಆಟವಾಡ್ತಿದ್ದ  ಬಾಲಕಿಯನ್ನು ಚಾಕೊಲೇಟ್ ಕೊಡಿಸಿ ಆರೋಪಿ ಉದ್ದಪ್ಪ ಕಬ್ಬಿನ ಗದ್ದೆಗೆ ಕರೆದೊಯ್ದು ಲೈಂಗಿ*ಕ ದೌರ್ಜ*ನ್ಯ ಎಸಗಿದ್ದ. ನಂತರ ಬಾಲಕಿಯ ಕಣ್ಣು, ಮೂಗಿಗೆ ಮಣ್ಣು ಹಾಕಿ ಕೊ*ಲೆ ಮಾಡಿದ್ದ.

    ಇದನ್ನೂ ಓದಿ : ಅಕ್ರಮ ಮರಳುಗಾರಿಕೆಯ ವಿರುದ್ಧ ಸಿಡಿದೆದ್ದ ಮಂಗಳೂರಿಗರು..! ಬೃಹತ್ ಪ್ರತಿಭಟನೆ..!

    ಈ ಪ್ರಕರಣ ಸಂಬಂಧ ಕೂಲಂಕಷವಾಗಿ ವಿಚಾರಣೆ ನಡೆಸಿದ್ದ ನ್ಯಾಯಾಲಯ ಅಪರಾಧಿಗೆ ಗಲ್ಲು ಶಿಕ್ಷೆ ಮತ್ತು 45 ಸಾವಿರ ದಂಡ ವಿಧಿಸಿ ಆದೇಶ ಹೊರಡಿಸಿದೆ. ಜಿಲ್ಲಾ ಕಾನೂನು ಪ್ರಾಧಿಕಾರದಿಂದ ಬಾಲಕಿ ಪೋಷಕರಿಗೆ 3 ಲಕ್ಷ ಪರಿಹಾರ ನೀಡುವಂತೆ ನ್ಯಾಯಾಲಯ ಆದೇಶ ನೀಡಿದೆ.

    Continue Reading

    DAKSHINA KANNADA

    ಅಕ್ರಮ ಮರಳುಗಾರಿಕೆಯ ವಿರುದ್ಧ ಸಿಡಿದೆದ್ದ ಮಂಗಳೂರಿಗರು..! ಬೃಹತ್ ಪ್ರತಿಭಟನೆ..!

    Published

    on

    ಮಂಗಳೂರು :  ಅಕ್ರಮ ಮರಳು ದಂಧೆಯ ವಿರುದ್ಧ ಮಂಗಳೂರಿನ ಜನರ ಆಕ್ರೋಶ ಮುಗಿಲು ಮುಟ್ಟಿದೆ ಅನ್ನೋದಿಕ್ಕೆ ಮಂಗಳೂರಿನಲ್ಲಿ ನಡೆದ ಪ್ರತಿಭಟನೆ ಸಾಕ್ಷಿಯಾಗಿದೆ. ಪಾವೂರು ಉಳಿಯ, ಉಳ್ಳಾಲ ಪೊಯ್ಯೆ ಮೊದಲಾದ ದ್ವೀಪ ಪ್ರದೇಶಗಳಲ್ಲಿ ಎಗ್ಗಿಲ್ಲದೆ ನಡೆಯುತ್ತಿದ್ದ ಅಕ್ರಮ ಮರಳುಗಾರಿಕೆ ವಿರುದ್ಧ ಜನರು ತಿರುಗಿ ಬಿದ್ದಿದ್ದಾರೆ.

    ಮರಳು ಮಾಫಿಯಾದಿಂದ ದ್ವೀಪಗಳು ನಾಶವಾಗುತ್ತಿದೆ ಅಂತ ಹಲವಾರು ಬಾರಿ ಸಂಬಂಧಿಸಿದ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿತ್ತು. ಹಲವಾರು ಪ್ರತಿಭಟನೆಗಳನ್ನೂ ಕೂಡಾ ನಡೆಸಲಾಗಿತ್ತು. ಆದ್ರೆ ಇದ್ಯಾವುದಕ್ಕೂ ಜಗ್ಗದ ಅಕ್ರಮ ದಂಧೆಕೋರರು ಎಗ್ಗಿಲ್ಲದೆ ಅಕ್ರಮ ಮರಳುಗಾರಿಕೆ ನಡೆಸಿದ್ದರು. ಜಿಲ್ಲಾಡಳಿತ , ಗಣಿ ಇಲಾಖೆ ಕೂಡಾ ಇದಕ್ಕೂ ನಮಗೂ ಸಂಬಂಧವೇ ಇಲ್ಲ ಎಂಬ ರೀತಿ ವರ್ತಿಸಿತ್ತು. ಇದೀಗ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ತಕ್ಕ ಪಾಠ ಕಲಿಸಲು ಜನರೇ ಮುಂದಾಗಿದ್ದು, ಮಂಗಳೂರಿನ ಕ್ಲಾಕ್ ಟವರ್ ಬಳಿ ಪ್ರತಿಭಟನೆ ನಡೆಸಿದ್ದಾರೆ. ಸಾವಿರಾರು ಸಂಖ್ಯೆಯಲ್ಲಿ ಆಗಮಿಸಿದ ಜನರು ಅಕ್ರಮ ಮರಳುಗಾರಿಕೆಯ ವಿರುದ್ಧ ಸಿಡಿದೆದ್ದಿದ್ದಾರೆ.

    ಈ ಹೋರಾಟ ಕೇವಲ ದ್ವೀಪ ಪ್ರದೇಶಗಳಿಗೆ ಮಾತ್ರ ಸೀಮಿತವಾಗಿರಿಸದೆ ಜಿಲ್ಲೆಯ ಎಲ್ಲೆಡೆ ನಡೆಯುತ್ತಿರುವ ಅಕ್ರಮ ಮರಳುಗಾರಿಕೆಯ ವಿರುದ್ಧದ ಹೋರಾಟವಾಗಿದೆ. ಜಿಲ್ಲಾಡಳಿತ, ಹಾಗೂ ಜಿಲ್ಲೆಯ ಎರಡೂ ಪ್ರಭಲ ರಾಜಕೀಯ ಪಕ್ಷಗಳು ಈ ಅಕ್ರಮದಲ್ಲಿ ಭಾಗಿಯಾದವರನ್ನು ರಕ್ಷಣೆ ಮಾಡಬಾರದು ಎಂದು ಎಚ್ಚರಿಕೆ ನೀಡಲಾಗಿದೆ. ಇನ್ನೂ ಅಕ್ರಮ ಮರಳುಗಾರಿಕೆ ನಡೆದಲ್ಲಿ ಪೊಲೀಸ್ ಠಾಣೆಯ ಮುಂಬಾಗದಲ್ಲಿ ಪ್ರತಿಭಟನೆ ನಡೆಸುವ ಎಚ್ಚರಿಕೆಯನ್ನೂ ಪ್ರತಿಭಟನೆಯಲ್ಲಿ ನೀಡಲಾಗಿದೆ. ಮಂಗಳೂರು ಕ್ಯಾಥೋಲಿಕ್ ಸಭಾ, ಸಮಾನ ಮನಸ್ಕ ಸಂಘಟನೆ ಹಾಗೂ ಜಾತಿ, ಧರ್ಮ, ಪಕ್ಷಾತೀತ ನಿಲುವಿನ ಜನರ ಜೊತೆ ಸೇರಿ ಪ್ರತಿಭಟನೆಯನ್ನು ಹಮ್ಮಿಕೊಂಡಿತ್ತು.

    Continue Reading

    DAKSHINA KANNADA

    300 ಕೋಟಿ ವಂಚನೆ..!ಮಥುರಾ ಕೃಷ್ಣ ದೇವಸ್ಥಾನದಲ್ಲಿದ್ದ ಆರೋಪಿಯ ಬಂಧನ..!

    Published

    on

    ಮಂಗಳೂರು/ಮುಂಬೈ : ಮಥುರಾ ಕೃಷ್ಣ ಗೋಪಾಲ ದೇವಸ್ಥಾನದ ವೃಂದಾವನದ ಮಹಾಂತ ಎಂದು ಜನರನ್ನು ವಂಚಿಸಿ 300 ಕೋಟಿ ರೂಪಾಯಿ ಪಂಗನಾಮ ಹಾಕಿದ ಆರೋಪಿಯನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ. ಮಥುರಾ ಪೊಲೀಸರ ಜೊತೆ ಜಂಟಿ ಕಾರ್ಯಾಚರಣೆಯಲ್ಲಿ ಮಂಹಾಂತನ ಸೋಗಿನಲ್ಲಿದ್ದ ಆರೋಪಿ ವಿಶ್ವನಾಥ ಶಿಂಧೆಯನ್ನು ಬಂಧಿಸಲಾಗಿದೆ.

    ಮಹಾರಾಷ್ಟ್ರದ ಬೀಡ್ ಜಿಲ್ಲೆಯ ನಿವಾಸಿಯಾಗಿದ್ದ ವಿಶ್ವನಾಥ ಶಿಂಧೆ, ಜಿಜಾವು ಮಾಸಾಹೇಬ್‌ ಮಲ್ಟಿ ಸ್ಟೇಟ್ ಬ್ಯಾಂಕ್‌ ನ ಠೇವಣಿದಾರರಿಗೆ 300 ಕೋಟಿ ವಂಚಿಸಿ ತಲೆಮರೆಸಿಕೊಂಡಿದ್ದ. ಈ ನಕಲಿ ಮಹಾಂತ ಶಿಂಧೆಗಾಗಿ ಅನೇಖ ದಿನದಿಂದ ಬೀಡ್ ಪೊಲೀಸರು ಹುಡುಕಾಟ ನಡೆಸಿದ್ದರು. ಈ ವೇಳೆ ಉತ್ತರ ಪ್ರದೇಶದ ಮಥುರಾ ಕೃಷ್ಣ ಗೋಪಾಲ ದೇವಸ್ಥಾನದಲ್ಲಿ ಇದ್ದಾನೆ ಎಂಬ ಸುಳಿವು ಸಿಕ್ಕಿತ್ತು. ಮಥುರಾದ ಶಿವಾಜಿನಗರ ಪೊಲೀಸರ ಸಹಾಯ ಪಡೆದ ಬೀಡ್ ಪೊಲೀಸರು ದೇವಸ್ಥಾನಕ್ಕೆ ದಾಳಿ ನಡೆಸಿದ್ದು ಈ ವೇಳೆ ಕೊಠಡಿಯೊಂದರಲ್ಲಿ ವಿಶ್ವನಾಥ ಶಿಂಧೆ ಅಡಗಿ ಕುಳಿತಿದ್ದ. ಆತ ಬಂಧನದ ಬಳಿಕ ಮಥುರಾ ನ್ಯಾಯಾಲಯಕ್ಕೆ ಹಾಜರು ಪಡಿಸಿ ಬಳಿಕ ಟ್ರಾನ್ಸಿಟ್ ವಾರೆಂಟ್ ಪಡೆದುಕೊಂಡು ಆರೋಪಿಯನ್ನು ಮುಂಬೈಗೆ ಕರೆತರಲಾಗಿದೆ. ಆರೋಪಿಯು ಈ ಹಿಂದೆ ಕೂಡಾ ಅಪರಾಧ ಪ್ರಕರಣದಲ್ಲಿ ಆರೋಪಿಯಾಗಿದ್ದ ಎಂಬ ಮಾಹಿತಿ ಲಭ್ಯವಾಗಿದೆ.

    Continue Reading

    LATEST NEWS

    Trending