Connect with us

    bangalore

    ದೈವದ ರೀಲ್ಸ್ ಮಾಡಬೇಡಿ ಎಂದು ರಿಕ್ವೆಸ್ಟ್ ಮಾಡಿದ ಕಾಂತಾರ ರಿಷಬ್ ಶೆಟ್ಟಿ..!!

    Published

    on

    ಇತ್ತೀಚಿನ ದಿನಗಳಲ್ಲಿ ದೈವದ ಬಗ್ಗೆ ರೀಲ್ಸ್ ಮಾಡೋದು ಹೆಚ್ಚಾಗುತ್ತಿದೆ. ಅಲ್ಲದೆ ವೇದಿಕೆಗಳಲ್ಲೂ ದೈವದ ವೇಷ ಹಾಕಿ ನೃತ್ಯ ಮಾಡುತ್ತಿದ್ದಾರೆ. ಇಂತಹ ವೇಷಗಳು, ನೃತ್ಯಗಳು ಹಾಗೂ ರೀಲ್ಸ್ ಗಳನ್ನು ಮಾಡೋದರಿಂದ ದೈವಾರಾಧಕರಿಗೆ, ದೈವ ನರ್ತಕರಿಗೆ ಬೇಸರ ಆಗ್ತಾ ಇದೆ. ಇದರ ಬಗ್ಗೆ ಕಾಂತಾರ ಖ್ಯಾತಿಯ ರಿಷಬ್ ಶೆಟ್ಟಿ ಬೇಸರ ವ್ಯಕ್ತಪಡಿಸಿದ್ದಾರೆ.

    ನಂದಿ ಅವಾರ್ಡ್ ಫಂಕ್ಷನ್ ನಲ್ಲಿ ಮಾತನಾಡಿದ ರಿಷಬ್ ಶೆಟ್ಟಿ, ‘ಕಾಂತಾರ ಚಿತ್ರ ಬಂದ್ಮೇಲೆ ಒಂದಷ್ಟು ಬೇಸರದ ಸಂಗತಿಗಳೂ ನಡೆದವು. ದೈವದ ರೀಲ್ಸ್ ಮಾಡೋರು ಹೆಚ್ಚಾಗಿದ್ದಾರೆ. ಅದರಿಂದ ದೈವವನ್ನ ನಂಬೋ ಜನರಿಗೆ, ದೈವವನ್ನ ಆರಾಧಿಸೋ ನರ್ತಕರಿಗೆ ಬೇಸರ ಕೂಡ ಆಗಿದೆ. ನನಗೆ ಇವರೆಲ್ಲ ಈ ಒಂದು ಸತ್ಯದ ಬಗ್ಗೆ ಹೇಳ್ತಾನೇ ಇದ್ದಾರೆ. ಹಾಗಾಗಿಯೇ ಈ ಒಂದು ವಿಚಾರವನ್ನು ಮಾಧ್ಯಮದ ಮೂಲಕ ತಿಳಿಸೋಕೆ ಇಷ್ಟಪಡುತ್ತೇನೆ. ಇದರಿಂದ ಇದು ಎಲ್ಲೋ ಒಂದು ಕಡೆಗೆ ಇಡೀ ಕಾಂತಾರ ಚಿತ್ರ ಉದ್ದೇಶಕ್ಕೆ ಕಪ್ಪು ಚುಕ್ಕಿ ಆಗುತ್ತಿದೆ ಅನಿಸುತ್ತಿದೆ. ಇದನ್ನ ಯಾರೂ ಮಾಡ್ಬೇಡಿ. ಇದರಿಂದ ಎಲ್ಲರಿಗೂ ಹರ್ಟ್ ಆಗುತ್ತದೆ’ ಎಂದು ರಿಷಬ್ ಶೆಟ್ಟಿ ಹೇಳಿಕೊಂಡಿದ್ದಾರೆ.

    ರೀಲ್ಸ್ ಅನ್ನೋದು ಸದ್ಯದ ಅತಿ ದೊಡ್ಡ ಕಿಚ್ಚಾಗಿದೆ. ಇದರಿಂದ ಒಳ್ಳೆಯ ಎಂಜಾಯ್ ಮೆಂಟ್ ಸಿಗುತ್ತಿದೆ. ಆದರೆ ಇದರ ಎಫೆಕ್ಟ್ ಬೇರೆನೆ ಆಗ್ತಾ ಇದೆ. ಕಾಂತಾರ ದೈವದ ರೀಲ್ಸ್ ಮಾಡೋದರಿಂದಲೇ ತುಳುನಾಡ ದೈವಾರಾಧಕರಿಗೆ, ದೈವ ನರ್ತಕರಿಗೆ, ಬೇಸರ ಆಗುತ್ತದೆ. ನಾನು ಒಬ್ಬ ದೈವ ಭಕ್ತನೇ ಆಗಿದ್ದೇನೆ. ಇದು ನನಗೂ ಬೇಸರ ತರಿಸುತ್ತಿದೆ. ಚಿತ್ರದ ಮೂಲ ಉದ್ದೇಶ ದೈವದ ಶಕ್ತಿ ಮತ್ತು ಸಂಸ್ಕೃತಿಯನ್ನ ಎಲ್ಲೆಡೆ ಹೇಳೋದೇ ಆಗಿದೆ. ಆದರೆ ರೀಲ್ಸ್ ಅನ್ನೋದು ಎಲ್ಲೋ ಒಂದು ಕಡೆಗೆ ಕಪ್ಪು ಚುಕ್ಕೆ ಆಗುತ್ತದೆ ಎಂದು ನೊಂದು ಕೊಂಡು ಹೇಳಿದ್ದಾರೆ. ಕಾಂತಾರ ಚಿತ್ರದಲ್ಲಿ ದೈವಾರಾಧನೆ ಇದೆ. ಇದನ್ನ ಅಷ್ಟೆ ಗೌರವದಿಂದಲೇ ಮಾಡಿದ್ದೇವೆ. ದೈವ ನರ್ತಕರನ್ನ ಸಲಹೆ-ಸೂಚನೆಯಂತೆ ಚಿತ್ರೀರಿಸಿದ್ದೇವೆ. ಇಲ್ಲಿ ದೈವಕ್ಕೆ ಮಾಡಬೇಕಿರೋ ಎಲ್ಲ ಪಾವಿತ್ರ್ಯತೆಯನ್ನು ಅಚ್ಚುಕಟ್ಟಾಗಿಯೆ ಮಾಡಿದ್ದೇವೆ. ಎಲ್ಲವನ್ನು ಗಮನದಲ್ಲಿಟ್ಟುಕೊಂಡು ಕಾಂತಾರ ಚಿತ್ರ ಮಾಡಿದ್ದೇವೆ ಎಂದಿದ್ದಾರೆ. ಚಿತ್ರಕ್ಕೆ ಬಂದ ಪ್ರಶಸ್ತಿಯನ್ನ ದೈವ ನರ್ತಕರಿಗೆ, ಕನ್ನಡಿಗರಿಗೆ, ಪವರ್ ಸ್ಟಾರ್ ಪುನೀತ್ ಅವರಿಗೆ ಅರ್ಪಿಸಿದ್ದಾರೆ ಎಂದರು. ಜೊತೆಗೆ ದೈವದ ರೀಲ್ಸ್ ಮಾಡ್ಬೇಡಿ ಅಂತಲೂ ರಿಕ್ವೆಸ್ಟ್ ಮಾಡಿದ್ದಾರೆ.

     

    bangalore

    ಯಜಮಾನಿಯರಿಗೆ ಸ್ಟಾಪ್ ಆಗುತ್ತಾ ಗೃಹಲಕ್ಷ್ಮಿ ಹಣ ?

    Published

    on

    ಮಂಗಳೂರು/ಬೆಂಗಳೂರು: ಕಾಂಗ್ರೇಸ್ ಸರ್ಕಾರದ ಮಹತ್ವಕಾಂಕ್ಷೆ ಯೋಜನೆಗಳಲ್ಲಿ ಒಂದಾದ ಗೃಹಲಕ್ಷ್ಮಿ ಯೋಜನೆ ಹಣ ಸ್ಟಾಪ್ ಆಗುತ್ತಾ ಅನ್ನುವಂತಹ ಭಯ ಯಜಮಾನಿಯರಲ್ಲಿ ಕಾಡುತ್ತಿದೆ. ಇದಕ್ಕೆ ಕಾರಣ ಇತ್ತೀಚೆಗೆ, ರಾಜ್ಯದಲ್ಲಿ ಕೆಲವು ದಿನಗಳಿಂದ ಚರ್ಚೆಯಲ್ಲಿರುವ ಅಕ್ರಮ ಬಿಪಿಎಲ್ ಕಾರ್ಡ್ ರದ್ದತಿ ವಿಚಾರ.


    ರಾಜ್ಯದಲ್ಲಿ ಅಕ್ರಮ ಬಿಪಿಎಲ್ ಕಾರ್ಡ್ ರದ್ದತಿ ವಿಚಾರ ಬಾರಿ ಸದ್ದು ಮಾಡುತ್ತಿದೆ. ಇದರ ನಡುವೆ ಮಹಿಳೆಯರಿಗೆ ಬಿಪಿಎಲ್ ಕಾರ್ಡ್ ರದ್ದಾದರೆ ಅಥವಾ ಬಿಪಿಎಲ್ ಕಾರ್ಡ್ ನಿಂದ ಎಪಿಎಲ್ ಗೆ ವರ್ಗಾವಣೆಯಾದರೆ 2000 ರೂ. ಬರುತ್ತೋ, ಇಲ್ಲವೋ ಎಂಬುವುದು ರಾಜ್ಯದ ಮಹಿಳೆಯರ ತಲೆನೋವಿಗೆ ಕಾರಣವಾಗಿದೆ.

    ಇದನ್ನು ಓದಿ :ನಾಯಕನಾಗಿ ಕಾಣಿಸಿಕೊಳ್ಳಲಿರುವ ರಜತ್ ಪಾಟಿದಾರ್

    ಈ ಬಗ್ಗೆ ಸ್ಪಷ್ಟನೆ ನೀಡಿರುವ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಸಚಿವೆ ಲಕ್ಮೀ ಹೆಬ್ಬಾಳ್ಕರ್, ರಾಜ್ಯದಲ್ಲಿ ಬಿಪಿಎಲ್ ಗೆ ಅರ್ಹವಲ್ಲದ ಸುಮಾರು 80,000 ಕಾರ್ಡುಗಳನ್ನು ಎಪಿಎಲ್ ಗೆ ವರ್ಗಾವಣೆ ಮಾಡಲಾಗಿದೆ. ಇದರಿಂದಾಗಿ ಮಹಿಳೆಯರು ಯಾವುದೇ ರೀತಿಯ ಗೊಂದಲ ಪಡುವುದು ಬೇಡ. ಅಕ್ರಮ ಬಿಪಿಎಲ್ ಕಾರ್ಡ್ ರದ್ದಾದ ಕೂಡಲೇ ಗೃಹಲಕ್ಷ್ಮಿಯರ ಖಾತೆಗೆ 2000 ರೂ. ಹಣ ಜಮೆ ಆಗುವುದು. ತೆರಿಗೆ ಪಾವತಿಸುವವರಿಗೆ ಮಾತ್ರ 2000 ರೂ. ಹಣ ಬರುವುದಿಲ್ಲ. ಬಿಪಿಎಲ್ ಕಾರ್ಡ್ ಎಪಿಎಲ್ ಆಗಿ ಬದಲಾದರೂ ಹಣ ಬರುತ್ತದೆ, ಆದರೆ ಅಂತವರು ತೆರಿಗೆ ಪಾವತಿಸದಿದ್ದರೆ ಮಾತ್ರ ಬರುವುದು ಎಂದು ಹೇಳಿದ್ದಾರೆ.

    Continue Reading

    bangalore

    ಮಂಜುಮ್ಮೆಲ್ ಬಾಯ್ಸ್ ಸಿನಿಮಾ ರೀತಿಯ ಘಟನೆ; ಸೆಲ್ಫಿ ಹುಚ್ಚಿಗೆ ಬಲಿಯಾಗಬೇಕಿದ್ದ ಯುವತಿ ರೋಚಕ ಪಾರು !

    Published

    on

    ತುಮಕೂರು: ಮೈದಾಳ ಕೆರೆ ಕೋಡಿಯಲ್ಲಿ ಸೆಲ್ಫಿ ತೆಗೆದುಕೊಳ್ಳಲು ಹೋದ ವಿದ್ಯಾರ್ಥಿನಿ ಕೆಳಕ್ಕೆ ಬಿದ್ದು ಪೊಟರೆಗೆ ಸಿಲುಕಿಕೊಂಡ ಘಟನೆ ತುಮಕೂರು ತಾಲೂಕಿನ ಮಂದಾರಗಿರಿ ಬೆಟ್ಟದ ತಪ್ಪಲಿನಲ್ಲಿ ಭಾನುವಾರ (ಅ.27) ನಡೆದಿದ್ದು, ರಕ್ಷಣಾ ಕಾರ್ಯಾಚರಣೆ ಮುಂದುವರಿಸಿದ ಸಿಬ್ಬಂದಿ, ಇಂದು (ಅ.28) ಆಕೆಯನ್ನು ಕಾಪಾಡುವಲ್ಲಿ ಯಶಸ್ವಿಯಾಗಿದ್ದಾರೆ. 12 ಗಂಟೆಗಳ ಕಾರ್ಯಾಚರಣೆ ಬಳಿಕ ಯುವತಿ ಬದುಕಿ ಬಂದಿದ್ದಾರೆ.

    ಕೊಚ್ಚಿಯಿಂದ ಹತ್ತು ಜನ ಸ್ನೇಹಿತರು ಕೊಡೈಕೆನಾಲ್‌ಗೆ ಹೋಗುತ್ತಾರೆ. ಕಮಲ್ ಹಾಸನ್ ಅಭಿನಯದ ಗುಣ ಚಿತ್ರದಲ್ಲಿನ ಗುಹೆಗಳನ್ನು ನೋಡಲೆಂದು ತೆರಳುತ್ತಾರೆ. ನಿರ್ಬಂಧಿತ ಪ್ರದೇಶ ಎಂದು ಗೊತ್ತಿದ್ದರೂ ಆಳವಾದ ಗುಹೆಗಳನ್ನು ಪ್ರವೇಶಿಸುತ್ತಾರೆ. ಆದರೆ, ಸ್ನೇಹಿತನೊಬ್ಬ ಆಕಸ್ಮಿಕವಾಗಿ ಆಳವಾದ ಕಣಿವೆಯಲ್ಲಿ ಬೀಳುತ್ತಾನೆ. ಉಳಿದ ಸ್ನೇಹಿತರು ಅವನನ್ನು ಹೇಗೆ ಹೊರಗೆ ಕರೆತಂದರು ಎಂಬುದೇ ಮಂಜುಮ್ಮೆಲ್ ಬಾಯ್ಸ್​ ಸಿನಿಮಾದ ಕತೆ.

    ನಿನ್ನೆ (ಅ.27) ತುಮಕೂರು ನಗರದ ಸಮೀಪದ ಮಂದಾರಗಿರಿ ಬೆಟ್ಟದ ತಪ್ಪಲಿನಲ್ಲಿರುವ ಮೈದಾಳ ಕೆರೆ ಕೋಡಿಯಲ್ಲಿ ಸೆಲ್ಫಿ ತೆಗೆದುಕೊಳ್ಳಲು ಹೋದ ವಿದ್ಯಾರ್ಥಿನಿ ಹಂಸ (20) ಕೆಳಕ್ಕೆ ಬಿದ್ದು ಕಾಣೆಯಾಗಿದ್ದಳು. ಸಂಜೆಯಾದರೂ ಪತ್ತೆಯಾಗದ ಹಿನ್ನೆಲೆಯಲ್ಲಿ ಅಪಾಯಕ್ಕೆ ಸಿಲುಕಿರುವ ಸಾಧ್ಯತೆಯಿದೆ ಎನ್ನಲಾಗಿತ್ತು. ಅಲ್ಲದೆ, ಒಂದು ಹಂತದಲ್ಲಿ ಹಂಸ ಸತ್ತೇ ಹೋಗಿದ್ದಾಳೆ ಎಂದು ಭಾವಿಸಲಾಗಿತ್ತು. ಆದರೆ, ಅದೃಷ್ಟವಶಾತ್​ ಹಂಸ ಬದುಕಿದ್ದಾಳೆ. ಪೊಟರೆಯಲ್ಲಿ ಸಿಲುಕಿಕೊಂಡಿದ್ದ ಆಕೆಯನ್ನು ಇದೀಗ ರಕ್ಷಣೆ ಮಾಡಲಾಗಿದೆ.

    ಗುಬ್ಬಿ ತಾಲೂಕಿನ ಶಿವಪುರದ ಸೋಮನಾಥ್ ಎಂಬುವವರ ಪುತ್ರಿ ಹಂಸ ಸ್ನೇಹಿತರೊಂದಿಗೆ ಮೈದಾಳ ಕೆರೆ ನೋಡಲು ತೆರಳಿದ್ದರು. ಈ ವೇಳೆ ಕೋಡಿಯಲ್ಲಿ ಸೆಲ್ಫಿ ಕ್ಲಿಕ್ಕಿಸಿಕೊಳ್ಳುವಾಗ ಕಾಲು ಜಾರಿ ಬಿದ್ದಿದ್ದರು. ನೀರಿನಲ್ಲಿ ಜಾರಿ ಕಲ್ಲಿನ ಪೊಟರೆಯಲ್ಲಿ ಸಿಲುಕಿದ್ದರು.

    Continue Reading

    bangalore

    ಅತ್ತಿಗೆ ಮೇಲೆ ಸ್ನೇಹಿತನ ಕಣ್ಣು ; ವಾರ್ನ್ ಮಾಡಿದ್ದಕ್ಕೆ ಬರ್ಬರ ಹ*ತ್ಯೆ

    Published

    on

    ಮಂಗಳೂರು/ಬೆಂಗಳುರು : ನಿನ್ನೆ (ಅ.26) ತಡರಾತ್ರಿ ಸುಲ್ತಾನ್​ ತಿಪ್ಪಸಂದ್ರದ ಅಮ್ಜಾದ್ ಎಂಬಾತ ರೋಹಿದ್​ ಅಲಿಯಾಸ್ ಅರ್ಬಾಜ್​ನನ್ನು ಕೊ*ಲೆ‌ ಮಾಡಿರುವ ಘಟನೆ ಜಮಾಲ್ ಷಾ ನಗರದಲ್ಲಿ ನಡೆದಿದೆ.

    ರೋಹಿದ್​ ಅಲಿಯಾಸ್ ಅರ್ಬಾಜ್(26) ಮೃ*ತ ವ್ಯಕ್ತಿ.

    ಘಟನೆ ಹಿನ್ನಲೆ :

    ರೋಹಿದ್​ ಮತ್ತು ಅಮ್ಜಾದ್ ದೂರದ ಸಂಬಂಧಿಗಳು ಮತ್ತು ಸ್ನೇಹಿತರಾಗಿದ್ದರು. ಹೀಗಿರುವಾಗ‌ ಅಮ್ಜಾದ್ ಆಗಾಗ ರೋಹಿದ್​ ಮನೆಗೆ ಬರುತ್ತಿದ್ದ. ಈ ವೇಳೆ ರೋಹಿದ್​ ಅಣ್ಣನ ಹೆಂಡತಿ ಅಂದರೆ ಅತ್ತಿಗೆ‌ ಮೇಲೆ‌ ಕಣ್ಣು‌ ಹಾಕಿದ್ದಾನೆ. ರೋಹಿದ್‌ಗೆ ತಿಳಿಯದಂತೆ ತನ್ನ ಅತ್ತಿಗೆ ಮೊಬೈಲ್ ನಂಬರ್​ ಪಡೆದುಕೊಂಡು ಆಗ್ಗಾಗ ಫೋನ್​  ಹಾಗೂ ವಿಡಿಯೋ ಕಾಲ್​ ಮಾಡಿ‌‌‌ ರೋಹಿದ್​ ಅತ್ತಿಗೆಗೆ ಪಿಡಿಸುತ್ತಿದ್ದ ವಿಷಯ ತಿಳಿದ ರೋಹಿದ್​ ಮತ್ತು ಸಂಬಂಧಿಕರು ಕಳೆದ ಎರಡು ತಿಂಗಳ‌ ಹಿಂದೆ ಅಮ್ಜಾದ್‌ ಮನೆ ಬಳಿ ಹೋಗಿ‌ ಗಲಾಟೆ ಮಾಡಿ ಎಚ್ಚರಿಕೆ ಕೊಟ್ಟು ಬಂದಿದ್ದರು.

    ನಿನ್ನೆ (ಅ.26) ಬೆಂಗಳೂರಿಗೆ ಕೆಲಸದ ಮೇಲೆ ಹೋಗಿದ್ದ ರೋಹಿದ್​ ರಾತ್ರಿ ವಾಸಪ್ ಬರುತ್ತಿದ್ದಂತೆ ‘ನಿನ್ನ ಜೊತೆಗೆ ಮಾತನಾಡಬೇಕು ಬಾ’ ಎಂದು ಅಮ್ಜಾದ್​ ಜಮಾಲ್​ ಷಾ ನಗರದ ಹೊರಗೆ ಕರೆದಿದ್ದಾನೆ. ಅಮ್ಜಾದ್ ಕರೆದ ಜಾಗಕ್ಕೆ ರೋಹಿದ್ ಹೋಗಿದ್ದಾನೆ. ಈ ವೇಳೆ ಜಗಳ ತೆಗೆದು ರೋಹಿದ್​​ ಎದೆಗೆ ಚಾಕು*ವಿನಿಂದ ಇ*ರಿದು ಅಲ್ಲಿಂದ ಅಮ್ಜಾದ್ ಪರಾರಿಯಾಗಿದ್ದಾನೆ.

    ಆರೋಪಿ ಬಂಧನ :

    ಇನ್ನು ವಿಷಯ ತಿಳಿಯುತ್ತಿದ್ದಂತೆ ಕೋಲಾರ ನಗರ ಠಾಣಾ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಜೊತೆಗೆ ಕ್ಷಿಪ್ರಕಾರ್ಯಾಚರಣೆ ನಡೆಸಿ ಕೊ*ಲೆ ಮಾಡಿ ತಲೆಮರೆಸಿಕೊಂಡಿದ್ದ ಆರೋಪಿ ಅಮ್ಜದ್​ನನ್ನು ಬಂಧಿಸಿದ್ದಾರೆ. ಹೆಚ್ಚಿನ ಮಾಹಿತಿಯನ್ನು ಕಲೆ*ಹಾಕುತ್ತಿದ್ದಾರೆ. ಇತ್ತ ಮಾಡಿದ ತಪ್ಪನ್ನು ಪ್ರಶ್ನೆ ಮಾಡಿದ್ದಕ್ಕೆ ರೋಹಿದ್​ ಕುಟುಂಬ ಇವತ್ತು ಅನಾಥವಾಗಿ ಕಣ್ಣೀಕು ಹಾಕುವಂತಾಗಿದೆ.

    Continue Reading

    LATEST NEWS

    Trending