Connect with us

LATEST NEWS

ಕಲಬುರ್ಗಿಯಲ್ಲಿ ಕಳ್ಳ- ಪೊಲೀಸ್ ಆಟ- ಪಿಎಸ್‌ಐ ಲೋಡೆಡ್ ರಿವಾಲ್ವರ್ ಕಸಿದು ಕಳ್ಳ ಪರಾರಿ..!

Published

on

ಖತರ್ನಾಕ್ ಕಳ್ಳನೊಬ್ಬನನ್ನು ಹಿಡಿಯಲು ಹೋದ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಅವರ ರಿವಾಲ್ವರ್ ನ್ನೇ ಕಿತ್ತುಕೊಂಡು ಕಳ್ಳ ಪರಾರಿಯಾಗಿರುವ ಘಟನೆ ಕಲಬುರ್ಗಿ ಜಿಲ್ಲೆಯ ಅಫಜಲಪುರದಲ್ಲಿ ನಡೆದಿದೆ.

ಕಲಬುರ್ಗಿ: ಖತರ್ನಾಕ್ ಕಳ್ಳನೊಬ್ಬನನ್ನು ಹಿಡಿಯಲು ಹೋದ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಅವರ ರಿವಾಲ್ವರ್ ನ್ನೇ ಕಿತ್ತುಕೊಂಡು ಕಳ್ಳ ಪರಾರಿಯಾಗಿರುವ ಘಟನೆ ಕಲಬುರ್ಗಿ ಜಿಲ್ಲೆಯ ಅಫಜಲಪುರದಲ್ಲಿ ನಡೆದಿದೆ.

ಬಳ್ಳೂರ್ಗಿ ಮೂಲದ ಖಾಜಾ ಎಂಬ ಕಳ್ಳನನ್ನು ಹಿಡಿಯಲು ಬೆಂಗಳೂರು ಸಿಸಿಬಿ ಪೊಲೀಸರು ಅಫಜಲಪುರಕ್ಕೆ ಆಗಮಿಸಿದ್ದು, ಕಳ್ಳನನ್ನು ಬಂಧಿಸುವ ವೇಳೆ ಪಿಎಸ್ ಐ ಭೀಮರಾವ್ ಬಂಕಲಿ ಅವರ ಸರ್ವಿಸ್ ರಿವಾಲ್ವರ್ ಕಸಿದುಕೊಂಡು ಎಸ್ಕೇಪ್ ಆಗಿದ್ದಾನೆ.

ಖಾಜಾ ಬೆಂಗಳೂರು, ಕಲಬುರ್ಗಿ, ಅಫಜಲಪುರ ಸೇರಿದಂತೆ ಹಲವೆಡೆ ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿದ್ದು 20ಕ್ಕೂ ಹೆಚ್ಚು ಪ್ರಕರಣಗಳಲ್ಲಿ ಪೊಲೀಸರು ಹುಡುಕಾಟ ನಡೆಸಿದ್ದರು.

ನಿನ್ನೆಯಿಂದ ಖಾಜಾನ ಬಂಧನಕ್ಕಾಗಿ ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ.

ಕಳ್ಳನನ್ನು ಹಿಡಿಯಲು ಹೋದಾಗ ಆತ ಕಾರಿನಲ್ಲಿ ಕುಳಿತಿದ್ದ ಪಿಎಸ್ ಐ ಸರ್ವಿಸ್ ರಿವಾಲ್ವರ್ ಹಿಡಿದು ಕಾರಿನ ಗಾಜು ಒಡೆಯಲು ಯತ್ನಿಸಿದ್ದರು. ಈ ವೇಳೆ ಪಿಎಸ್ ಐ ಕೈಯಲ್ಲಿದ್ದ ಲೋಡೆಡ್ ರಿವಾಲ್ವರ್ ಕಸಿದುಕೊಂಡು ಪರಾರಿಯಾಗಿದ್ದಲ್ಲದೇ ಮರವೇರಿ ಕುಳಿತಿದ್ದಾನೆ.

ಕೊನೆಗೆ ಎಂಟುವರೆ ಗಂಟೆಗಳ ಕಾಲ ನಡೆದ ಕಾರ್ಯಾಚರಣೆಯಲ್ಲಿ ಆರೋಪಿ ಶರಣಾಗಿದ್ದಾನೆ.

ಏನಿದು ಘಟನೆ ..?

ಸರಿಸುಮಾರು ಎಂಟುವರೆ ಗಂಟೆಗಳ ಕಾಲ ಕಳ್ಳಾಟವಾಡಿ ಪೊಲೀಸರಿಗೆ ಶರಣಾದ ಕಿಲಾಡಿ ಕಳ್ಳನ ಹೆಸರು ಖಾಜಪ್ಪಾ ಅಂತ.

ಮೂಲತ ಕಲಬುರಗಿ ಜಿಲ್ಲೆಯ ಅಫಜಲಪುರ ತಾಲೂಕಿನ ಬಳ್ಳೂರಗಿ ಗ್ರಾಮದ ನಿವಾಸಿ.

ಬಳ್ಳೂರಗಿ ಗ್ರಾಮದವನಾದರೂ ಕೂಡ ಈತ ಇರ್ತಿದ್ದು ಹೆಚ್ಚಾಗಿ ಮಹರಾಷ್ಟ್ರದ ಪುಣೆ, ಅಕ್ಕಲಕೋಟೆ ಸೇರಿದಂತೆ ಅನೇಕ ಬಾಗದಲ್ಲಿಯೇ.

ಈತನ ಮೇಲೆ ಕಲಬುರಗಿ, ಮಹರಾಷ್ಟ್ರ, ತೆಲೆಂಗಾಣದ ವಿವಿಧ ಪೊಲೀಸ್ ಠಾಣೆಗಳಲ್ಲಿ ಬರೋಬ್ಬರಿ 28 ಮನೆಗಳ್ಳತನ ಪ್ರಕರಣಗಳಿವೆ.

ಕಳೆದ ಕೆಲ ದಿನಗಳ ಹಿಂದೆ ಈತ ಮಹರಾಷ್ಟ್ರದ ಅಕ್ಕಲಕೋಟೆಯಲ್ಲಿ ಮನೆಕಳ್ಳತನ ಮಾಡಿದ್ದನಂತೆ.

ಹೀಗಾಗಿ ಖಾಜಪ್ಪನ ಚಲನವಲನದ ಬಗ್ಗೆ ಅಕ್ಕಲಕೋಟೆ ಪೊಲೀಸರು ಮಾಹಿತಿ ಸಂಗ್ರಹಿಸಿದ್ದರು.

ಆದರೆ ಕಳೆದ ರಾತ್ರಿ ಆತ ಅಫಜಲಪುರಕ್ಕೆ ಹೋಗ್ತಿರೋದು ಗೊತ್ತಾಗಿತ್ತು.

ಹೀಗಾಗಿ ಅಫಜಲಪುರ ಪೊಲೀಸರಿಗೆ ಅಕ್ಕಲಕೋಟೆ ಪೊಲೀಸರು ಮಾಹಿತಿ ನೀಡಿದ್ದರು.

ಇಂದು ನಸುಕಿನ ಜಾವ ಮೂರು ಗಂಟೆಯಿಂದ ಅಫಜಲಪುರ ಪೊಲೀಸರು, ಅಫಜಲಪುರ ಹೊರವಲಯದ ಸೊನ್ನ ಕ್ರಾಸ್ ಬಳಿ ಚೆಕ್ ಪೋಸ್ಟ್ ಹಾಕಿಕೊಂಡು ವಾಹನ ತಪಾಸಣೆ ಮಾಡ್ತಿದ್ದರು.

ಮೂರುವರೆ ಸಮಯದಲ್ಲಿ ಖಾಜಪ್ಪಾ ಕಾರ್​ನಲ್ಲಿ ಬಂದಿದ್ದ. ಆದರೆ ಪೊಲೀಸರನ್ನು ನೋಡುತ್ತಿದ್ದಂತೆ, ಕಾರ್​ನ್ನು ರಿಟರ್ನ್ ತೆಗದುಕೊಂಡು ಹೋಗಲು ಮುಂದಾಗಿದ್ದ.

ಕೂಡಲೇ ಅಫಜಲಪುರ ಪಿಎಸ್​ಐ ಭೀಮರಾಯ್ ಬಂಕಲಿ, ಕಾರ್ ನ ಗ್ಲಾಸ್​ನ್ನು ಒಡೆದು, ಆತನನ್ನು ಹಿಡಿಯುವ ಯತ್ನ ಮಾಡಿದ್ದರು.

ಆದರೆ ಪಿಎಸ್​ಐ ಕೈಯಲ್ಲಿದ್ದ ಲೋಡೆಡ್ ಸರ್ವಿಸ್ ಪಿಸ್ತೂಲ್ ಕೈಜಾರಿ ಕಾರ್​ನೊಳಗೆ ಬಿದಿತ್ತು.

ಕಳ್ಳ ಖಾಜಪ್ಪ ಕಾರ್​ನ್ನು ರಿಟರ್ನ್ ಮಾಡಿಕೊಂಡು ಪರಾರಿಯಾಗಿದ್ದ.

ಲೋಡೆಡೆ ಸರ್ವಿಸ್ ಪಿಸ್ತೂಲ್ ತಗೆದುಕೊಂಡು ಹೋಗಿದ್ದ ಪೊಲೀಸರ ತಲೆಬಿಸಿ ಹೆಚ್ಚಿಸಿತ್ತು.

ನಸುಕಿನ ಜಾವ ನಾಲ್ಕು ಗಂಟೆಯಿಂದ ಖಾಜಪ್ಪನಿಗಾಗಿ ಕಲಬುರಗಿ ಜಿಲ್ಲಾ ಪೊಲೀಸರು ಹುಡುಕಾಟ ನಡೆಸಿದ್ದರು.

ಆದ್ರೆ ಮುಂಜಾನೆ ಎಂಟು ಗಂಟೆಗೆ ಗೊತ್ತಾಗಿತ್ತು, ಆತ ಬಳ್ಳೂರಗಿ ಹೊರವಲಯದ ಮಹಾಲಕ್ಷ್ಮಿ ದೇವಸ್ಥಾನದ ಬಳಿಯಿದ್ದಾನೆ ಅಂತ.

ಅಲ್ಲಿಗೆ ಬರುವಷ್ಟರಲ್ಲಿ ಖಾಜಪ್ಪ ಮರವೇರಿ ಕೂತಿದ್ದ. ಮತ್ತೊಂದಡೆ ಆತನ ಸಹಚರರಾದ ಸಂಜು ಮತ್ತು ರವಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದರು.

ಮುಂಜಾನೆ ಎಂಟು ಗಂಟೆಯಿಂದ ಆತನನ್ನು ಮರದಿಂದ ಕೆಳಗಿಳಿಸೋ ಯತ್ನವನ್ನು ಪೊಲೀಸರು ಮಾಡಿದ್ದರು.

ಆದ್ರೆ ನನ್ನ ಸಮೀಪ ಬಂದ್ರೆ ನಾನೇ ಪೈರ್ ಮಾಡಿಕೊಂಡು ಸಾಯ್ತೇನೆ ಅಂತ ಬೆದರಿಕೆ ಹಾಕಿದ್ದನಂತೆ.

ಕೊನೆಗೆ ಆತನ ಕುಟುಂಬದವರನ್ನು ಕರೆಸಿ, ಆತನಿಗೆ ಏನು ಮಾಡೋದಿಲ್ಲಾ ಅಂತ ಹೇಳಿ, ಮನವೊಲಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಇಂದು ಮಧ್ಯಾಹ್ನ 12-45 ಕ್ಕೆ ಆರೋಪಿ ಖಾಜಪ್ಪ ಪೊಲೀಸರಿಗೆ ಶರಣಾಗಿದ್ದು, ತನ್ನ ಬಳಿಯಿದ್ದ ಸರ್ವಿಸ್ ಪಿಸ್ತೂಲ್​ನ್ನು ಪೊಲೀಸರಿಗೆ ನೀಡಿದ್ದಾನೆ.
ಯಾವುದೇ ತೊಂದರೆಯಿಲ್ಲದೆ ಕಾರ್ಯಾಚರಣೆ ಯಶಸ್ವಿಯಾಗಿದ್ದ ಹಿನ್ನೆಲೆ, ಮರವಿದ್ದ ದೇವಸ್ಥಾನದ ಕೆಳಗಿದ್ದ ಮಹಾಲಕ್ಷ್ಮಿ ದೇವಿಗೆ ಕಲಬುರಗಿ ಎಸ್ಪಿ ಇಶಾ ಪಂತ್ ಪೂಜೆ ಮಾಡಿ ನಿಟ್ಟುಸಿರು ಬಿಟ್ಟಿದ್ದಾರೆ.

ಸದ್ಯ ಖಾಜಪ್ಪನನ್ನು ವಶಕ್ಕೆ ಪಡೆದಿರೋ ಪೊಲೀಸರು ಆತನಿಗೆ ವೈದ್ಯಕೀಯ ಚಿಕಿತ್ಸೆ ಕೊಡಿಸಿ, ವಿಚಾರಣೆ ನಡೆಸಲು ಮುಂದಾಗಿದ್ದಾರೆ.

DAKSHINA KANNADA

ದ.ಕ.ಜಿಲ್ಲೆಯ 9 ಗ್ರಾಮಗಳು ಗಾಂಧಿ ಗ್ರಾಮ ಪುರಸ್ಕಾರಕ್ಕೆ ಆಯ್ಕೆ

Published

on

ಮಂಗಳೂರು: ದ.ಕ.ಜಿಲ್ಲೆಯ 9 ತಾಲೂಕಿನ 9 ಗ್ರಾಮಗಳು 2022-23ನೆ ಸಾಲಿನ ಗಾಂಧಿ ಗ್ರಾಮ ಪುರಸ್ಕಾರಕ್ಕೆ ಆಯ್ಕೆ ಯಾಗಿದೆ.

ಅಕ್ಟೋಬರ್ 2ರ ಗಾಂಧಿಜಯಂತಿ ದಿನದಂದು ರಾಜ್ಯ ವಿಧಾನಸೌಧದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಯನ್ನು ಪ್ರದಾನ ಮಾಡಲಾಗುತ್ತದೆ ಎಂದು ಪ್ರಕಟನೆ ತಿಳಿಸಿದೆ.

ಮಂಗಳೂರು ತಾಲೂಕಿನ ಉಳಾಯಿಬೆಟ್ಟು, ಉಳ್ಳಾಲ ತಾಲೂಕಿನ ಬೆಳ್ಮ, ಮುಲ್ಕಿ ತಾಲೂಕಿನ ಕೆಮ್ರಾಲ್, ಮೂಡುಬಿದಿರೆ ತಾಲೂಕಿನ ಪುತ್ತಿಗೆ, ಬಂಟ್ವಾಳ ತಾಲೂಕಿನ ಅಮ್ಮುಂಜೆ, ಪುತ್ತೂರು ತಾಲೂಕಿನ ಉಪ್ಪಿನಂಗಡಿ, ಕಡಬ ತಾಲೂಕಿನ ಸವಣೂರು, ಬೆಳ್ತಂಗಡಿ ತಾಲೂಕಿನ ಬಳಂಜ, ಸುಳ್ಯ ತಾಲೂಕಿನ ಮರ್ಕಂಜ ಗ್ರಾಮಗಳು ಗಾಂಧಿ ಗ್ರಾಮ ಪುರಸ್ಕಾರಕ್ಕೆ ಆಯ್ಕೆಯಾಗಿವೆ.

Continue Reading

LATEST NEWS

Baindoor: ರೈಲ್ವೆ ಸುರಂಗ ಮಾರ್ಗದಲ್ಲಿ ಕೋಮಾ ಸ್ಥಿತಿಯಲ್ಲಿದ್ದ ವ್ಯಕ್ತಿಯ ರಕ್ಷಣೆ..!

Published

on

ಬೈಂದೂರು: ಬೈಂದೂರು- ಶಿರೂರು ನೆರೆಗುದ್ದೆ ರೈಲ್ವೆ ಸುರಂಗ ಮಾರ್ಗದಲ್ಲಿ ಕೋಮಾ ಸ್ಥಿತಿಯಲ್ಲಿ ಬಿದ್ದುಕೊಂಡಿದ್ದ ಯುವಕನೊಬ್ಬನನ್ನು ಆರೋಗ್ಯ ಕವಚ 108 ಆ್ಯಂಬುಲೆನ್ಸ್ ಸಿಬಂದಿ ರಕ್ಷಿಸಿ ಪ್ರಾಣ ಉಳಿಸಿರುವ ಘಟನೆ ಮಂಗಳವಾರ ರಾತ್ರಿ ನಡೆದಿದೆ.

ಗಾಯಾಳು ವ್ಯಕ್ತಿಯನ್ನು ರಾಜೇಶ್  (25)ಎಂದು ಗುರುತಿಸಲಾಗಿದೆ.

ಮಂಗಳವಾರ ರಾತ್ರಿ 10 ಗಂಟೆಗೆ ರೈಲ್ವೆ ಇಲಾಖೆ ನೀಡಿದ ಮಾಹಿತಿಯ ಮೇರೆಗೆ ಆರೋಗ್ಯ ಕವಚ 108 ಸಿಬಂದಿ ಕಾರ್ಯಚರಣೆ ನಡೆಸಿದರು.

ರೈಲ್ವೇ ಸುರಂಗ ಮಾರ್ಗದೊಳಗೆ ಸುಮಾರು 3 ಕಿ.ಮೀ ನಡೆದು ಕೊಂಡು ಹೋಗಿ ಹಳಿಯ ಪಕ್ಕದಲ್ಲಿ ಮುಗುಚಿ ಬಿದ್ದಿದ್ದ ವ್ಯಕ್ತಿಯನ್ನು ಸ್ಟ್ರೆಚರ್ ನಲ್ಲಿ ಹಾಕಿ ಹೊತ್ತು ಹೊರತಂದು ಬೈಂದೂರು ಆಸ್ಪತ್ರೆಗೆ ದಾಖಲಿಸಿದರು.

ಅಲ್ಲಿ ಪ್ರಥಮ ಚಿಕಿತ್ಸೆ ನೀಡಿದ ಬಳಿಕ ಅಲ್ಲಿಂದ ಕುಂದಾಪುರ ಸರಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ‌.

ಆ್ಯಂಬುಲೆನ್ಸ್‌ನ ಪೈಲೆಟ್ ಶರಣ ಬಸವ ಮತ್ತು ಇ ಎಂ ಟಿ ಪ್ರತಿಭಾ ಅವರು ಅಸ್ವಸ್ಥ ವ್ಯಕ್ತಿಯನ್ನು ಆಸ್ಪತ್ರೆಗೆ ದಾಖಲು ಮಾಡಿ ಕರ್ತವ್ಯ ನಿಷ್ಠೆ ಮೆರೆದಿದ್ದಾರೆ.

Continue Reading

LATEST NEWS

ಕೊರಗಜ್ಜನ ಪವಾಡ- ವಾರವಿಡೀ ಕಾಡಿನಲ್ಲಿ ಸಿಲುಕಿದ ಯುವಕನ ರಕ್ಷಣೆ ಮಾಡಿದ ನಾಯಿಯ ಅದ್ದೂರಿ ಮೆರವಣಿಗೆ

Published

on

ಕುಂದಾಪುರ: ತುಳುನಾಡಿನಲ್ಲಿ ಕೊರಗಜ್ಜನ ದೈವದ ಕಾರ್ಣಿಕದ ಶಕ್ತಿ ಅಪಾರವಾದದ್ದು. ಹಾಗಾಗಿ ನಂಬುವ ಜನರಿಗೆ ಕೊರಗಜ್ಜ ಯಾವತ್ತೂ ಕೈ ಬಿಡುದಿಲ್ಲ ಎಂಬ ನಂಬಿಕೆ ಇದೆ.

ಆ ನಂಬಿಕೆಯಂತೆ ಉಡುಪಿ ಜಿಲ್ಲೆಯಲ್ಲೊಂದು ಅಚ್ಚರಿ ಘಟನೆ ನಡೆದಿದೆ.

ಕುಂದಾಪುರದ ಯುವಕನೋರ್ವ ಕಾಣೆಯಾಗಿದ್ದಾನೆ ಎಂದು ತಿಳಿದ ಮನೆಯವರು ದೈವದ ಮೊರೆ ಹೋದ ಬೆನ್ನಲೇ ಆತ ನಾಯಿಯೊಂದಿಗೆ ವಾಪಸು ಮನೆಗೆ ಮರಳಿದ್ದಾನೆ.

ಇದು ನಂಬಿದ ದೈವವೇ ಯುವಕನನ್ನು ಮರಳಿ ಮನೆಗೆ ಕರೆಸಿದೆ ಎಂದು ಗ್ರಾಮಸ್ಥರು ನಂಬಬಿದ್ದಾರೆ.

ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಮಚ್ಚೆಟ್ಟು ವ್ಯಾಪ್ತಿಯ ವಿವೇಕಾನಂದ ಎಂಬ ಯುವಕನು ಕಾಡಿಗೆ ಕಟ್ಟಿಗೆ ತರಲು ಎಂದು ಹೋದವನು 8 ದಿನವಾದರೂ ಮನೆಗೆ ವಾಪಸು ಬಂದಿರಲಿಲ್ಲ.

ಹಾಗಾಗಿ ಮನೆಯವರು ದೈವದ ಮೊರೆ ಹೋಗಿದ್ದಾರೆ.

ಈ ವೇಳೆ ಆತ ಜೀವಂತವಾಗಿರುವುದು ತಿಳಿದು ಬಂದ ಕೂಡಲೇ ದೈವದ ಭರವಸೆಯಂತೆ ಪೊಲೀಸರು, ಎಎನ್‌ಎಫ್‌ ಪಡೆಯೊಂದಿಗೆ ಗ್ರಾಮಸ್ಥರು ಹಗಲು ರಾತ್ರಿ ಇಡೀ ಆತನ ಪತ್ತೆಗೆ ಹುಡುಕಾಡಿದ್ದಾರೆ.

ಆದರೆ ಆತನ ಸುಳಿವು ಸಿಕ್ಕಿರದ ಕಾರಣ ಮನೆಯವರು ಮುಳ್ಳುಗುಡ್ಡೆ ಕೊರಗಜ್ಜ ಸನ್ನಿಧಾನಕ್ಕೆ ಬಂದು ಪ್ರಾರ್ಥನೆ ಸಲ್ಲಿಸಿದರು.

“ಆತ ಹಂದಿಯೊಂದನ್ನು ಓಡಿಸಿಕೊಂಡು ಹೋಗುವಾಗ ದಾರಿ ತಪ್ಪಿದ್ದಾನೆ.  ಹಕ್ಕಿಯೊಂದು ದಾರಿ ತೋರಿಸಿದೆ.

ಹಳದಿ ಬಣ್ಣದ ಅಂಗಿ ಹಾಕಿ ಕಾಡಿನಲ್ಲಿ ಅಡಗಿ ಕುಳಿತ್ತಿದ್ದಾನೆ.

5 ಜನ ಸೇರಿ ಅಲ್ಲಿ ಹೋಗಿ ಹುಡುಕಿ. ಆಗಲಿಲ್ಲವಾದರೆ ಇನ್ನು ಎರಡು ದಿನದ ಒಳಗೆ ಆತ ಮನೆಗೆ ಬರುತ್ತಾನೆ” ಎಂದು ಕ್ಷೇತ್ರದ ಧಮ೯ದಶಿ೯ ಪುನೀತ್ ಅವರು ಹೇಳಿದ್ದರು.

ಅದರಂತೆ ಮಗನ ಬರುವಿಕೆಗೆ ಮನೆಯವರು ಕಾಯುತ್ತಿದ್ದರು.

ಇದೀಗ ಮನೆಯವರಿಗೆ ಹಾಗೂ ಗ್ರಾಮಸ್ಥರಿಗೆ ಕೊರಗಜ್ಜನ ದೈವದ ಶಕ್ತಿ ಅಚ್ಚರಿಯನ್ನುಂಟು ಮಾಡಿದೆ.

ಕೊರಗಜ್ಜ ಕ್ಷೇತ್ರದ ಧರ್ಮದರ್ಶಿ ಪುನೀತ್ ಅವರ ನುಡಿಯಂತೆ ಎಂಟು ದಿನಗಳ ಬಳಿಕ ಆತ ನಾಯಿಯೊಂದಿಗೆ ಮರಳಿ ಬರುತ್ತಾನೆ.

ಆದರೆ ಆತನಿಗೆ ತಾನೂ ಎಲ್ಲಿ ಹೋಗಿದ್ದೆ ಎಂದು ಗೊತ್ತಿಲ್ಲ. ಕಾಡಿನಲ್ಲಿ ಸಿಲುಕಿದ ಕಾರಣ ಆಹಾರವಿಲ್ಲದೆ ವಿವೇಕಾನಂದನು ನಿತ್ರಾಣಗೊಂಡಿದ್ದ.

ಆತನ ಜೊತೆಗಿದ್ದದ್ದು ಮಾತ್ರ  ಮನೆಯ ಸಾಕು ನಾಯಿ, ಆತನ ಮರಳಿ ಬರುವಂತೆ ದಾರಿ ತೋರಿಸಿ ರಕ್ಷಿಸಿದೆ.

ಹಾಗಾಗಿ ಆತನ ಜೀವ ಉಳಿಸಿದ ನಾಯಿಯನ್ನು ಗ್ರಾಮಸ್ಥರು ಸೇರಿ ಅದ್ದೂರಿಯಾಗಿ  ತೆರೆದ ಪಿಕಪ್ ವಾಹನದಲ್ಲಿ ಕುಳ್ಳಿರಿಸಿ ಮೆರವಣಿಗೆ ನಡೆಸಿದರು.

50ಕ್ಕಿಂತ ಹೆಚ್ಚು ಬೈಕ್ ಟೆಂಪೋ ಆಟೋರಿಕ್ಷಾಗಳ ಜೊತೆಗೆ ತೆರೆದ ವಾಹನದಲ್ಲಿ ಚಿಂಟು ಮತ್ತು ವಿವೇಕಾನಂದ ಕುಟುಂಬಸ್ಥರು ಆಪ್ತರನ್ನು ಗೆಳೆಯರ ಬಳಗ ಮೆರವಣಿಗೆ ಮಾಡಿದೆ.

ನಂತರ ಮನೆಯಲ್ಲಿ ಕೇಕ್ ಕತ್ತರಿಸಿ ಹುಟ್ಟು ಹಬ್ಬದ ರೀತಿಯಲ್ಲೇ ವಿವೇಕಾನಂದ ವಾಪಾಸ್ ಬಂದ ಖುಷಿಯನ್ನು ಆಚರಿಸಿದರು.

ಸುತ್ತಮುತ್ತಲ ಮನೆಯವರಿಗೆ ಗೆಳೆಯರ ಬಳಗಕ್ಕೆ ಹುಡುಕಾಡಲು ಸಹಾಯ ಮಾಡಿದ ಎಲ್ಲರಿಗೆ ಶೀನಾ ನಾಯ್ಕ ಕುಟುಂಬ ಸಿಹಿಯೂಟ ಹಾಕಿಸಿದೆ.

Continue Reading

LATEST NEWS

Trending